1129. ಸವ್ವಾಲಿಗೇ ಸವ್ವಾಲ್ (೧೯೭೮)

ಸವ್ವಾಲಿಗೇ ಸವ್ವಾಲ್ ಚಲನ ಚಿತ್ರದ ಹಾಡುಗಳು 
  1. ಎಂಥ ನೋಟ ಎಂಥ ಮಾತ 
  2. ನಾವು ಕೂಡಿ ನಾವೂ ಹಾಡಿ 
  3. ಸೇರಿಗೇ ಸೇರೂ ಸವ್ವಾಸೇರೂ 
ಸವ್ವಾಲಿಗೇ ಸವ್ವಾಲ್ (೧೯೭೮) - ಎಂಥ ನೋಟ ಎಂಥ ಮಾತ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಎಸ್.ಪಿ.ಬಿ., ವಿದ್ಯಾರಾಣಿ 

ಈ ಹಾಡಿನ ಸಾಹಿತ್ಯ ಲಭ್ಯವಿಲ್ಲ, ಕ್ಷಮಿಸಿ 

------------------------------------------------------------------------------------------------------------------------- 

ಸವ್ವಾಲಿಗೇ ಸವ್ವಾಲ್ (೧೯೭೮) - ನಾವೂ ಕೂಡಿ ನಾವು ಹಾಡಿ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಹೂ.ಕೃ.ಮೂರ್ತಿ ಗಾಯನ : ಎಸ್.ಪಿ.ಬಿ., ವಿದ್ಯಾರಾಣಿ, ಎಸ್.ಜಾನಕೀ  

ಹೆಣ್ಣು : ಲಲ್ಲಾ... ಲಲ್ಲಾ .. ಲಲ್ಲಾ  ಲಲ್ಲಾ... ಲಲ್ಲಾ .. ಲಲ್ಲಾ  
ಗಂಡು : ನಾವೂ ಕೂಡಿ             ಹೆಣ್ಣು : ನಾವೂ ಹಾಡೀ ... 
ಗಂಡು : ನಾವೂ ಕೂಡಿ             ಹೆಣ್ಣು : ನಾವೂ ಹಾಡೀ ... 
ಗಂಡು : ಎಲ್ಲಾ ಒಂದಾಗಿ ನಕ್ಕೂ ನಲಿಯುವಾಗ 
ಹೆಣ್ಣು : ನಾವೂ ಒಂದಾಗಿ ಹಿಗ್ಗಿ ನಡೆಯುವಾಗ 
ಎಲ್ಲರು : ಎಲ್ಲಾ ಒಂದಾಗಿ ನಕ್ಕು ನಲಿಯುವಾಗ ನಾವೂ ಒಂದಾಗಿ ಹಿಗ್ಗಿ ನಡೆಯುವಾಗ 
ಗಂಡು : ಬಲು ಬೇಸರ ತರುವಾ ಮನಸ್ಸು ಒಪ್ಪದೇ ಇರುವಾ 
            ಬಲು ಬೇಸರ ತರುವಾ ಮನಸ್ಸು ಒಪ್ಪದೇ ಇರುವಾ 
ಹೆಣ್ಣು : ಈ ಹುಟ್ಟು ಸಾವೂ ಆಟದಲ್ಲ ಈಗೇತಕೆ             
ಎಲ್ಲರು : ನಾವೂ ಕೂಡಿ ನಾವೂ ಹಾಡೀ ... ಕ್ಕೂಕ್ಕುರೇ.. ಕ್ಕೂ 

ಹೆಣ್ಣು : ಅಂದ ಚಂದ ಊರಿನಿಂದ ರಮ್ಯ ಬಾಳಿದು ಈ ...  
ಎಲ್ಲರು : ಆಹಾ ಆಹಾ ಅಹ್ಹಹ್ಹಾ.. ಲಲ್ಲಲಾ ಲಲ್ಲಲಾ ಲಲ್ಲಲ್ಲಾ.. 
ಗಂಡು : ಕಣ್ಣು ತುಂಬಿ ಅರಳಿ ನಿಂತ ಹೂವಿನಂತೇ ನಗುತಿರುವಾ 
ಹೆಣ್ಣು :  ತುಂಬಿ ನಿಂತ ದೇಹದಲ್ಲಿ ಆಸೆ ಎಷ್ಟು ತುಂಬಿದೇ 
ಗಂಡು : ರಾಗಕ್ಕೊಂದು ತಾಳ ತಾಳಕ್ಕೊಂದು ಮೇಳ ... ಆಹಾಹಾ.. 
ಎಲ್ಲರು : ರಾಗಕ್ಕೊಂದು ತಾಳ (ಆಹಾಹಾ.) ತಾಳಕ್ಕೊಂದು ಮೇಳ 
            ಸಂತಸದ ಕಡಲು ಉಕ್ಕಿ ಮೈಯ್ಯ್ ತುಂಬಿದೇ 
ಗಂಡು :  ನಾವೂ ಕೂಡಿ                                    ಹೆಣ್ಣು : ನಾವೂ ಹಾಡೀ ... 
ಗಂಡು : ಎಲ್ಲಾ ಒಂದಾಗಿ ನಕ್ಕು ನಲಿಯುವಾಗ       ಹೆಣ್ಣು : ನಾವೂ ಒಂದಾಗಿ ಹಿಗ್ಗಿ ನಡೆಯುವಾಗ 
ಎಲ್ಲರು : ನಾವೂ ಕೂಡಿ ನಾವೂ ಹಾಡೀ ... ಕ್ಕೂಕ್ಕುರೇ.. ಕ್ಕೂ 

ಗಂಡು : ಕಣ್ಣು ಕಂಡ ತಾಣದಲ್ಲಿ ಸ್ನೇಹ ಹಾಡಿಹುದೂ ...  
ಎಲ್ಲರು : ಆಹಾ ಆಹಾ ಅಹ್ಹಹ್ಹಾ.. ಲಲ್ಲಲಾ ಲಲ್ಲಲಾ ಲಲ್ಲಲ್ಲಾ.. 
ಹೆಣ್ಣು : ಪ್ರೀತಿಯಿಂದ ಶಕ್ತಿಯಲ್ಲಿ ಲೋಕ ಮರೆತಿಹುದೂ .. 
ಗಂಡು : ನೂರು ಚಿಂತೆ ಇದ್ದರೇನೂ ಬಾಳೂ ತುಂಬಾ ದೊಡ್ಡದೂ .. 
ಹೆಣ್ಣು : ಭೂಮಿಗೊಂದು ಹೂವೂ  ಹೆಜ್ಜೆಗೊಂದು ಹಿಗ್ಗೂ .. (ಲಲ್ಲಲ್ಲಾ .. )
          ಭೂಮಿಗೊಂದು ಹೂವೂ  (ಲಲ್ಲಲ್ಲಾ .. ) ಹೆಜ್ಜೆಗೊಂದು ಹಿಗ್ಗೂ .. 
         ಮಿಂಚಿನಂತೇ ಬೆಳಕೊಂದು ಕಣ್ಣ ಮಿಂಚಿದೇ 
ಗಂಡು :  ನಾವೂ ಕೂಡಿ                                    ಹೆಣ್ಣು : ನಾವೂ ಹಾಡೀ ... 
ಎಲ್ಲರು : ಎಲ್ಲಾ ಒಂದಾಗಿ ನಕ್ಕು ನಲಿಯುವಾಗ  ನಾವೂ ಒಂದಾಗಿ ಹಿಗ್ಗಿ ನಡೆಯುವಾಗ 
            ನಾವೂ ಕೂಡಿ (ಲಾಲಾಲ) ನಾವೂ ಹಾಡೀ ...( ತಾರಾರೀ )

            ನಾವೂ ಕೂಡಿ (ಲಾಲಾಲ) ನಾವೂ ಹಾಡೀ ...( ತಾರಾರೀ )
            ನಾವೂ ಕೂಡಿ (ಲಾಲಾಲ) ನಾವೂ ಹಾಡೀ ...( ತಾರಾರೀ )
------------------------------------------------------------------------------------------------------------------------- 

ಸವ್ವಾಲಿಗೇ ಸವ್ವಾಲ್ (೧೯೭೮) - ಸೇರಿಗೇ ಸೇರೂ ಸವ್ವಾಸೇರೂ  
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಸಿ.ವಿ.ಶಿವಶಂಕರ  ಗಾಯನ : ಎಸ್.ಜಾನಕೀ 

ಹೆಣ್ಣು : ಸೇರಿಗೇ ಸೇರು ಸವ್ವಾ ಸೇರೂ 
          ಹೊಯ್ ಸೇರಿಗೇ ಸೇರು ಸವ್ವಾ ಸೇರೂ ಅನ್ನೋ ಹೆಣ್ಣಿನ ಹೆಸರೂ 
          ಸಡ್ಡು ಹೊಡೆದೂ ಸವ್ವಾಲೂ ಹಾಕಿ ಗೆಲ್ಲೋ ಧೀರ ಯಾರೋ... ಗೆಲ್ಲೋ ಧೀರ ಯಾರೂ ... 
          ಹೊಯ್ ಸೇರಿಗೇ ಸೇರು ಸವ್ವಾ ಸೇರೂ ಅನ್ನೋ ಹೆಣ್ಣಿನ ಹೆಸರೂ 

ಹೆಣ್ಣು : ಕಣ್ಣು ಹೊಡೆದು ಹಿಂದೆ ಮುಂದೇ ಬಂದರೆಷ್ಟು ಭಂಡರೂ 
         ಚಿನ್ನ ನಿನಗೇ ಚಿನ್ನ ಬೇಕೇ ಎಂದರೆಷ್ಟು ಕಳ್ಳರೂ 
         ಸೆರಗು ಹಿಡಿದೂ ಸೈ ಅಂತಾ  ನಿಂತರೆಷ್ಟು ಪುಂಡರೂ 
         ಸೆರಗು ಹಿಡಿದೂ ಸೈ ಅಂತಾ  ನಿಂತರೆಷ್ಟು ಪುಂಡರೂ 
        ನನ್ನ ಕೆಣಕಿ ಬೆನ್ನಿಗೇ ಏಟು ತಿಂದರೂ ಎಷ್ಟೂ ಪುಂಡರೂ 
       ಸೇರಿಗೇ ಸೇರು ಸವ್ವಾ ಸೇರೂ ಅನ್ನೋ ಹೆಣ್ಣಿನ ಹೆಸರೂ 
       ಸಡ್ಡು ಹೊಡೆದೂ ಸವ್ವಾಲೂ ಹಾಕಿ ಗೆಲ್ಲೋ ಧೀರ ಯಾರೋ... ಗೆಲ್ಲೋ ಧೀರ ಯಾರೂ ... 
       ಹೊಯ್ ಸೇರಿಗೇ ಸೇರು ಸವ್ವಾ ಸೇರೂ ಅನ್ನೋ ಹೆಣ್ಣಿನ ಹೆಸರೂ 

ಗಂಡು : ಆಮೇಲೆ ಯಾರೂ ಸವ್ವಾಲ ಹಾಕಿಲ್ವಾ... 
ಹೆಣ್ಣು : ಹಾಕದರೂ.. ಹಾಕ್ದರೂ .. 
ಗಂಡು : ಅದು ಯಾರೂ .. 
ಹೆಣ್ಣು : ಹೂಂ ... ಹೇಳ್ತಿನೀ 
         ಮಸ್ತಿನಿಂದ ಬಂದ ಒಬ್ಬ ಗರಡಿ ಮನೆ ಉಸ್ತಾದ.. (ಹ್ಹಾ... ) ಹ್ಹಾ... 
         ಕುಸ್ತಿ ಮಾಡಿ ಗೆಲ್ಲಲಾರದೇ ಬಾಲ ಮುದರಿ ಸುಸ್ತಾದ (ಅಯ್ಯೋ) ಅಹ್ಹಹ್ಹಹ್ಹ... 
         ಮಸ್ತಿನಿಂದ ಬಂದ  ಒಬ್ಬ ಗರಡಿ ಮನೆ ಉಸ್ತಾದ ಕುಸ್ತಿ ಮಾಡಿ ಗೆಲ್ಲಲಾರದೇ ಬಾಲ ಮುದರಿ ಸುಸ್ತಾದ  
         ಮೀಸೆ ತಿರುವೀ ಬಂದೋರೆಲ್ಲಾ ಮಣ್ಣು ಮುಕ್ಕಿ ಹೋದರೂ 
         ಮೀಸೆ ತಿರುವೀ ಬಂದೋರೆಲ್ಲಾ ಮಣ್ಣು ಮುಕ್ಕಿ ಹೋದರೂ 
         ತಣ್ಣಗಾಗಿ ಕೂತು ನನ್ನ ಕಾಲು ಹಿಡಿದು ಕೊಂಡರೂ 
         ನೀನೇ ಧೀರ.. ನೀನೇ ಶೂರ ...   
         ಹೇ.. ನೀನೇ ಧೀರ.. ನೀನೇ ಶೂರ ಕೆಣಕಿ ನನ್ನ ಅಂದ ಚಂದ ಶೃಂಗಾರ 
         ಸೇರಿಗೇ ಸೇರು ಸವ್ವಾ ಸೇರೂ ಅನ್ನೋ ಹೆಣ್ಣಿನ ಹೆಸರೂ 
          ಸಡ್ಡು ಹೊಡೆದೂ ಸವ್ವಾಲೂ ಹಾಕಿ ಗೆಲ್ಲೋ ಧೀರ ಯಾರೋ... ಗೆಲ್ಲೋ ಧೀರ ಯಾರೂ ... 
         ಹೊಯ್ ಸೇರಿಗೇ ಸೇರು ಸವ್ವಾ ಸೇರೂ 
------------------------------------------------------------------------------------------------------------------------- 

No comments:

Post a Comment