ಫ್ರೆಂಡ್ಸ್ ಚಲನಚಿತ್ರದ ಹಾಡುಗಳು
- ದೇವರು ವರವನು ಕೊಟ್ರೇ.
- ಸಿಕ್ಸಟೀನ್ ಇಯರ್ಸ್ ಊರ್ವಶಿ
- ತಕಧಿಮಿ ತಕಧಿಮಿ
- ಸ್ಟೈಲಾ ಮಾಡೆಲ್
- ತಿರುಪತಿ ತಿರುಮಲ ವೆಂಕಟೇಶ
- ಸಾವಿರ ಕನಸಿನ
ಫ್ರೆಂಡ್ಸ್ (೨೦೦೨) - ದೇವರು ವರವನು ಕೊಟ್ರೇ.
ಸಂಗೀತ : ಜಿ.ಕ್ರಷ್ಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕುಮಾರಸಾನು
ದೇವರು ವರವನು ಕೊಟ್ರೇ. ನಾ ನಿನ್ನೇ ಕೋರುವೆ ಚೆಲುವೆ...
ಹಾ. ನಿದಿರೆಯ ಒಳಗೂ ನಿನ್ನ. ನೆರಳನ್ನೇ ಸೇರುವೆ ಚೆಲುವೆ...
ಓ. ದೇವರು ವರವನು ಕೊಟ್ರೇ. ನಾ ನಿನ್ನೇ ಕೋರುವೆ ಚೆಲುವೆ...
ಹಾ. ನಿದಿರೆಯ ಒಳಗೂ ನಿನ್ನ ನೆರಳನ್ನೇ ಸೇರುವೆ ಚೆಲುವೆ...
ಓ. ತಿಂಗಳಿಗೆ ಕಂಗಳ ಬರೆದು ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು ಬರೆದು ಮುಸ್ಸಂಜೆಗೆ ಲಜ್ಜೆಯ ಬರೆದು
ಪ್ರಕೃತಿಯಲಿ ಕಂಡೆ ನಿನ್ನನ್ನೇ...
ಓ. ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ...
ಮನಸು ನಿನ್ನ ಕಂಡೊಡನೆ ತನ್ನ ಮೈಯ ಮರೆತೋಯ್ತು
ಒಂದು ಮಾತು ಕೇಳದೆಲೇ ನಿನ್ನ ಜೀವ ಸೇರೋಯ್ತು
ಹಾ. ನಿನ್ನ ಒಂದು ನಗೆಯೊಳಗೆ ನನ್ನತನವೇ ಬೆಳಕಾಯ್ತು
ಯಾವ ಸ್ಪರ್ಶ ಇಲ್ಲದೆಲೇ ಹೃದಯ ಅದಲು ಬದಲಾಯ್ತು
ನೀ ಮೇಘಗಳ ಹನಿಯೊಳಗೆ ಅವಿತಿದ್ದರೂ
ಮಿಂಚುಗಳ ಏರಿ ಮಳೆಬಿಲ್ಲ ಮೈಗುಡಿಸುವೆ
ಭೂಮಿ ಆಕಾಶದ ಆಚೆಗೂ ನಿನ್ನ ನೆನಪಲ್ಲೇ ನಾ ಬದುಕುವೆ...
ದೇವರು ವರವನು ಕೊಟ್ರೇ. ನಾ ನಿನ್ನೇ ಕೋರುವೆ ಚೆಲುವೆ...
ಹಾ. ನಿದಿರೆಯ ಒಳಗೂ ನಿನ್ನ ನೆರಳನ್ನೇ ಸೇರುವೆ ಚೆಲುವೆ...
ಏಳು ಹೆಜ್ಜೆ ಇಡುವೆ ಎಂದು ಏಳು ಜನ್ಮ ಕಾಯುವೆನು
ಮೂರು ಗಂಟು ಬೆಸೆಯುವೆ ಎಂದು ನೂರು ಕಾಲ ಬೇಡುವೆನು
ಹಾ. ಎಲ್ಲ ಋತುಗೂ ಮನವಿ ಬರೆದು ಗಟ್ಟಿಮೇಳ ನುಡಿಸುವೆನು
ಸೂರ್ಯ ಚಂದ್ರ ಚುಕ್ಕಿಯ ಕರೆದು ಮಂತ್ರ ಘೋಷ ಹರಿಸುವೆನು
ನನ್ನ ಕನಸೆಲ್ಲ ನಿನ್ನ ಕಂಗಳು ನೋಡಲು ನಿನ್ನ ರೆಪ್ಪೆಯಲೇ
ಬಾಯ್ತೆರೆದು ಕಾದಿರುವೆ ನಾ
ಈ ಜಗದಲ್ಲೇ ನೀ ವಿಸ್ಮಯ ಹೇಯ್ ಬಾ ಒಪ್ಪಿಕೊ ಪ್ರೀತಿಯ...
ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ...
ಓ. ನಿದಿರೆಯ ಒಳಗೂ ನಿನ್ನ ನೆರಳನ್ನೇ ಸೇರುವೆ ಚೆಲುವೆ...
ಓ. ತಿಂಗಳಿಗೆ ಕಂಗಳ ಬರೆದು ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು ಬರೆದು ಮುಸ್ಸಂಜೆಗೆ ಲಜ್ಜೆಯ ಬರೆದು
ಪ್ರಕೃತಿಯಲಿ ಕಂಡೆ ನಿನ್ನನ್ನೇ
ಓ... ದೇವರು ವರವನು ಕೊಟ್ರೇ ನಾ ನಿನ್ನೇ ಕೋರುವೆ ಚೆಲುವೆ

---------------------------------------------------------------------------
ಫ್ರೆಂಡ್ಸ್ (೨೦೦೨) - ಸಿಕ್ಸಟೀನ್ ಇಯರ್ಸ್ ಊರ್ವಶಿ
ಸಂಗೀತ : ಜಿ.ಕೃಷ್ಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಸುರೇಶ ಪೀಟರ್ಸ್
ಗಂಡು : ಸಿಕ್ಸಟೀನ್ ಸೆವೆನಟೀನ್ ಎಟೀನ್ ನೈಟೀನ್ ಹೈಟು ವೇಟು ಸೈಟು ವೈಟು
ಜೀನ್ಸ್ ಸ್ಕರ್ಟು ಗಾರ್ಗಾ ಚೋಲಿ ಚೂಡಿದಾರ್ ಮಿಡಿ ಹ್ಹಾ.. ಯೂ
ಹ್ಹಾ.. ಮೇಲ್ನೋವ್ ಕೊಟ್ಟ ಬ್ಯೂಟಿನೇಲ್ಲಾ ಎಂಜಾಯ್... ಎಂಜಾಯ್... ಎಂಜಾಯ್...
ಸಿಕ್ಸಟೀನ್ ಇಯರ್ ಊರ್ವಶಿ ಕಂಡ ಕೂಡಲೇ ದಿಲ್ ಖುಷೀ
ಆದ್ರೂ ಜಂಭದ ಕೋಳಿಯ ಜಂಭ ಹೇಯ್ ಬಾ...
ಸೂಪರ್ ನೋವಾದ ಕಿನ್ನರಿ ಎಂಥಾ ಮಾಡಲ್ ಸುಂದರೀ
ಬಿಂಕ ಒಂದೇ ಇವಳ ಮೈತುಂಬ ಹೇಯ್ ಬಾ... ಬಾ...
ಹೇಯ್ ಸ್ಟೈಲನ್ ಎಸೆದು ಬಿಟ್ಟಾಳೋ ಮಾ ರಾಣಿ ರಾಣಿ ನಿದ್ದೇನ ದೋಚಿ ಬಿಟ್ಟಾಳೋ
ಸಿಕ್ಸಟೀನ್ ಇಯರ್ ಊರ್ವಶಿ ಕಂಡ ಕೂಡಲೇ ದಿಲ್ ಖುಷೀ
ಆದ್ರೂ ಜಂಭದ ಕೋಳಿಯ ಜಂಭ ಹೇಯ್ ಬಾ...
ಗಂಡು : ಸಿಟಿ ಬಸ್ಸಲಿ ಬ್ಯೂಟೀ ನಕ್ಕಳು ವೆಸ್ಟನ್ ಮನ್ಮಥ
ಪಾರ್ಕು ಬೀಚಲಿ ಪದ್ಯ ಬರೆದರೂ ಬೀಳುವೆ ಜಾರುತ
ಸೀನಸಿಯರಾಗಿ ಹಾರ್ಟು ಬಯಸಿದರು ನರಳುವುದು ಶಾಸ್ವತ
ಲಚ್ಚರಿಯಲ್ಲೇ ಲವ್ ಟ್ರ್ಯಾಕಲೂ ಮಿಂಚುವುದು ಮಿಂಚುತ ಪ್ರೀತಿ ಅಂದ್ರೆ ಗೋಲ್ಡನ್ ಮಾಡು
ಈ ಮಿಲೇನಿಯಂ ಪ್ರಾಯ ಮಾಡು ಪ್ರೇಮಾತುರಾಣಂ ಹಚ್ಚು ರಾಕೆಟ್ಟು
ಅವಕಾಶ ಸಿಕ್ಕರೆ ಹಾಕು ಬ್ರಾ ಕೆಟ್ಟು ಒಂದೊಂದು ಸ್ಟೆಪ್ಪಿಗೂ ಚೇಂಜ್ ಮಾಡು ರೂಟು
ಗ್ರೀನ್ ಸಿಗ್ನಲ್ ಕೊಟ್ರೇ ನೀನೇನೇ ಗೆಟ್ಟು
ಸಿಕ್ಸಟೀನ್ ಇಯರ್ ಊರ್ವಶಿ ಕಂಡ ಕೂಡಲೇ ದಿಲ್ ಖುಷೀ
ಆದ್ರೂ ಜಂಭದ ಕೋಳಿಯ ಜಂಭ ಹೇಯ್ ಬಾ...
ಗಂಡು : ವಯಸ್ಸು ವಯಸ್ಸಂತೆ ಟೈಟು ಜೀನ್ಸಲ್ಲೇ ನೈಸು ಮಾಡೋ ಗುರು
ಚಾನ್ಸ್ ಸಿಕ್ಕಾಗ ನೈಟ್ ಡೇ ಎನದೆ ಸಾಂಗ್ಸು ಹಾಡೋ ಗುರು
ಲೈಫೂ ಬುಕ್ಕಲಿ ಲವ್ವು ಪೇಜನ್ನೇ ಬರೆಯಲು ಇದು ಗುರು
ಲಾರಾದತ್ತ ಪ್ರಿಯಾಂಕಾ ಅಲಿಗೆ ಕಾಲಿಂಗ್ ಬೆಲ್ ಹೊಡಿ ಗುರು
ಬ್ಯೂಟೀ ಅಂದ್ರೇ ಗಾಡು ಗಿಫ್ಟ್ ಲಿಪ್ಪಿನಿಂದಲೇ ಸ್ವರ್ಗಕ್ಕೆ ಲಿಪ್ಪು
ಎಂಟಿವಿಲ್ ಆಡೋ ಮಾಡಲಗಳ ಜೊತೆಗೆ ಮಿಡನೈಟ್ ಮಸಾಲಾ
ನೋಡೋ ಅಡಿ ಅಡಿಗೆ ಸೈಬರ್ ರೋಮಾನ್ಸಿಯೇ ಈ ಕಾಲದಡಿಗೆ
ಅಡ್ಜೆಸ್ಟ್ ಮಾಡೋವ್ನಗೆ ಮೃಷ್ಟಾನ್ನಗಳಿಗೆ
ಸಿಕ್ಸಟೀನ್ ಇಯರ್ ಊರ್ವಶಿ ಕಂಡ ಕೂಡಲೇ ದಿಲ್ ಖುಷೀ
ಆದ್ರೂ ಜಂಭದ ಕೋಳಿಯ ಜಂಭ ಹೇಯ್ ಬಾ...
ಸೂಪರ್ ನೋವಾದ ಕಿನ್ನರಿ ಎಂಥಾ ಮಾಡಲ್ ಸುಂದರೀ
ಬಿಂಕ ಒಂದೇ ಇವಳ ಮೈತುಂಬ ಹೇಯ್ ಬಾ... ಬಾ...
ಹೇಯ್ ಸ್ಟೈಲನ್ ಎಸೆದು ಬಿಟ್ಟಾಳೋ ಮಾ ರಾಣಿ ರಾಣಿ ನಿದ್ದೇನ ದೋಚಿ ಬಿಟ್ಟಾಳೋ
--------------------------------------------------------------------------
ಫ್ರೆಂಡ್ಸ್ (೨೦೦೨) - ತಕಧಿಮಿ ತಕಧಿಮಿ
ಸಂಗೀತ : ಜಿ.ಕೃಷ್ಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಉದಿತ ನಾರಾಯಣ
ತಕಧಿಮಿ ತಕಧಿಮಿ ದಂತದ ಗೊಂಬೆ ಸೌಂದರ್ಯದಲ್ಲಿ ರಂಭೆಗೂ ರಂಭೆ
ಮಿರ ಮಿರ ಮಿನುಗುವ ಮಾವಿನ ಕೊಂಬೆ ರಸಿಕರ ಪಾಲಿಗೆ ರಸದ ಲಿಂಬೆ
ಮಿರ ಮಿರ ಮಿನುಗುವ ಮಾವಿನ ಕೊಂಬೆ ರಸಿಕರ ಪಾಲಿಗೆ ರಸದ ಲಿಂಬೆ
ರಾಜಕುಮಾರಿಯೇ ಚಮ್ ಚಮ್ ಚಕೋರಿಯೇ ಕೋಮಲಾಂಗಿಯೇ ಕೋಲ್ಮಿಂಚು ರಾಣಿಯೇ
ನೀ ನಮಗೆ ಇಷ್ಟ ಕಣಮ್ಮಿ ನಮ ಮನ್ಸೂ ನಿಂದೆ ಕಣಮ್ಮಿ
ನೀ ನಮಗೆ ಇಷ್ಟ ಕಣಮ್ಮಿ ನಮ ಮನ್ಸೂ ನಿಂದೆ ಕಣಮ್ಮಿ
ತಕಧಿಮಿ ತಕಧಿಮಿ ದಂತದ ಗೊಂಬೆ ಸೌಂದರ್ಯದಲ್ಲಿ ರಂಭೆಗೂ ರಂಭೆ
ಕಂಡ ಒಡನೆ ಶುರುವಾಯಿತು ಕಲರವ ಪ್ರತಿ ನೆನಪಿನಲ್ಲಿ ಕೂಡ ಜೊತೆಯಲ್ಲಿ ಕೂವ ಕೂವ
ನಾನೆಲ್ಲಿ ನೋಡಲಲ್ಲಿ ಪ್ರತಿಬಿಂಬ ನಿನ್ನದೇ ಯಾವ ಮಾತು ಕೇಳಿ ಬರಲಿ ಪ್ರತಿಧ್ವನಿಯು ನಿನ್ನದೇ
ಅದು ಯಾವುದಮ್ಮಾ ಚೆನ್ನ ನಿನ್ನ ಶುಭಧಿನ
ನೀ ನಮಗೆ ಇಷ್ಟ ಕಣಮ್ಮಿ ನಮ ಮನ್ಸೂ ನಿಂದೆ ಕಣಮ್ಮಿ
ತಕಧಿಮಿ ತಕಧಿಮಿ ದಂತದ ಗೊಂಬೆ ಸೌಂದರ್ಯದಲ್ಲಿ ರಂಭೆಗೂ ರಂಭೆ
ಶಕುಂತಲೆಗೂ ಚೆಂದ ನಿನ್ನ ನಗುವಿನಂದವು ಆ ಬೇಂದ್ರೆ ಕಾವ್ಯಕೆಲ್ಲ ನೀನಂತೆ ಸ್ಫೂರ್ತಿಯೂ
ಈ ಜಗದ ಸೃಷ್ಠಿ ಎಲ್ಲ ನಿನ್ನ ರೆಪ್ಪೆಯೊಳಗಿದೆ ಅದು ಎಷ್ಟು ಯುಗವೇ ಬರಲಿ ಮತ್ತೆ ಹುಟ್ಟಿ ಬರುವೆ ನಾ
ನೀ ನಮಗೆ ಇಷ್ಟ ಕಣಮ್ಮಿ ನಮ ಮನ್ಸೂ ನಿಂದೆ ಕಣಮ್ಮಿ
ತಕಧಿಮಿ ತಕಧಿಮಿ ದಂತದ ಗೊಂಬೆ ಸೌಂದರ್ಯದಲ್ಲಿ ರಂಭೆಗೂ ರಂಭೆ
ಮಿರ ಮಿರ ಮಿನುಗುವ ಮಾವಿನ ಕೊಂಬೆ ರಸಿಕರ ಪಾಲಿಗೆ ರಸದ ಲಿಂಬೆ
ಮಿರ ಮಿರ ಮಿನುಗುವ ಮಾವಿನ ಕೊಂಬೆ ರಸಿಕರ ಪಾಲಿಗೆ ರಸದ ಲಿಂಬೆ
--------------------------------------------------------------------------
ಫ್ರೆಂಡ್ಸ್ (೨೦೦೨) - ಸ್ಟೈಲಾ ಮಾಡೆಲ್
ಸಂಗೀತ : ಜಿ.ಕೃಷ್ಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಹೇಮಂತ
(ಹೇಹೇಹೇ ... ಹೇಹೇಹೇಹೇ ... ಹೇಹೇಹೇ ... ಹೇಹೇಹೇಹೇ ... )
ಸ್ಟೈಲಾ ಮಾಡಲ್ ಸೆಕ್ಸಿ ಪೋಕಸ್
ಸ್ಟೈಲಾ ಮಾಡಲ್ ಸೆಕ್ಸಿ ಪೋಕಸ್ ಸ್ವಿಮಿಂಗ್ ಸೂಟಿನ ವಯ್ಯಾರಿ
ಮಾರ್ಟಿನ ಸ್ಟ್ರಕ್ಚರ್ ಮೇದೋನ ಪಿಕ್ಚರ್ ಟೀನೇಜಗೊಬ್ಬಳೇ ಮದನಾರಿ
ಮಾರ್ಟಿನ ಸ್ಟ್ರಕ್ಚರ್ ಮೇದೋನ ಪಿಕ್ಚರ್ ಟೀನೇಜಗೊಬ್ಬಳೇ ಮದನಾರಿ
ಅಮ್ಮಾ ಜುಮ್ಮಾ ಹಮ್ಮಾ ಬಾಮ್ಮಾ
ಅಮ್ಮಾ ಜುಮ್ಮಾ ಹಮ್ಮಾ ಬಾಮ್ಮಾ
ಮಿಸ್ ವರ್ಲ್ಡೂ ಸ್ಪರ್ಧೆಗ ಹೋದ್ರೇ ಜಡ್ಜಿಗೆ ಜ್ವರ ಗ್ಯಾರಂಟಿ
ಟೈಟಾನಿಕ್ ಹೀರೊ ಕಂಡ್ರೂ ಪೇಶೆಂಟಾಗೋದ ಗ್ಯಾರಂಟೀ
ಮಿಸ್ ವರ್ಲ್ಡೂ ಸ್ಪರ್ಧೆಗ ಹೋದ್ರೇ ಜಡ್ಜಿಗೆ ಜ್ವರ ಗ್ಯಾರಂಟಿ
ಟೈಟಾನಿಕ್ ಹೀರೊ ಕಂಡ್ರೂ ಪೇಶೆಂಟಾಗೋದ ಗ್ಯಾರಂಟೀ
ಸ್ವಿಮ್ ಸೂಟು ರತಿಯು ಇವಳು ಡೈ ಫ್ರೂಟು ಟೇಸ್ಟಿನವಳು
ತೆಂಡೋಲ್ಕರ ಸಿಕ್ಸರಿಗಿಂತ ಟೆನ್ ಪರ್ಸೆಂಟ್ ಸೆಕ್ಸಿನವಳು
ಓಡೋಡಾಕ ಇವಳು ಹೋದ್ರೆ ಒಲಪಿಂಕ್ಸೆ ಇವಳ ಹಿಂದೇ
ನಾರಿ ಚೋರಿ ಯಾರೀ ಪ್ಯಾರೀ... ನಾರಿ ಚೋರಿ ಯಾರೀ ಪ್ಯಾರೀ...
ರಾಕೆಟನ್ ಸೊಂಟವ ತಾಕಲು ಬ್ರಹ್ಮನೇ ಹುಟ್ಟುವನು ಮತ್ತೇ
ನಿನ್ನಂಥ ಲೇಡಿ ಲಾಡನ್ ಸೀಕ್ರೇ ಮೈಯ್ಯ ಜುಮ್ ಅನ್ನುತ್ತೇ
ರಾಕೆಟನ್ ಸೊಂಟವ ತಾಕಲು ಬ್ರಹ್ಮನೇ ಹುಟ್ಟುವನು ಮತ್ತೇ
ನಿನ್ನಂಥ ಲೇಡಿ ಲಾಡನ್ ಸೀಕ್ರೇ ಮೈಯ್ಯ ಜುಮ್ ಅನ್ನುತ್ತೇ
ಎಂಟಿವಿ ಮಾಡೆಲ್ಸ್ ಆದ್ರೂ ನೀನ್ ಮುಂದೆ ನೋಡಲ್ಲೇ
ಕಿಂಗ್ಡಮ್ ಬರಕೊಡ್ತೀನಿ ಕ್ಲೀನಾಗಿನೀ ಪ್ರೀತ್ಸೇ
ನಿನ್ ಹಿಂದೆ ಬರಬಹುದೇನೋ ಹಾಡು...ಡು ವಾರು..
ಸ್ಟೈಲಾ ಮಾಡಲ್ ಸೆಕ್ಸಿ ಪೋಕಸ್
ಸ್ಟೈಲಾ ಮಾಡಲ್ ಸೆಕ್ಸಿ ಪೋಕಸ್ ಸ್ವಿಮಿಂಗ್ ಸೂಟಿನ ವಯ್ಯಾರಿ
ಮಾರ್ಟಿನ ಸ್ಟ್ರಕ್ಚರ್ ಮೇದೋನ ಪಿಕ್ಚರ್ ಟೀನೇಜಗೊಬ್ಬಳೇ ಮದನಾರಿ
ಮಾರ್ಟಿನ ಸ್ಟ್ರಕ್ಚರ್ ಮೇದೋನ ಪಿಕ್ಚರ್ ಟೀನೇಜಗೊಬ್ಬಳೇ ಮದನಾರಿ
ಅಮ್ಮಾ ಜುಮ್ಮಾ ಹಮ್ಮಾ ಬಾಮ್ಮಾ
ಅಮ್ಮಾ ಜುಮ್ಮಾ ಹಮ್ಮಾ ಬಾಮ್ಮಾ
---------------------------------------------------------------------------
ಫ್ರೆಂಡ್ಸ್ (೨೦೦೨) - ತಿರುಪತಿ ತಿರುಮಲ ವೆಂಕಟೇಶ
ಸಂಗೀತ : ಜಿ.ಕೃಷ್ಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಅಶೋಕ ಶರ್ಮ
ತಿರುಪತಿ ತಿರುಮಲ ವೆಂಕಟೇಶ ಸ್ವಲ್ಪ ಕಿವಿ ಕೊಟ್ಟು ಕೇಳೋ ಇಲ್ಲ ಒಂದು ನಿಮಿಷ
ಒದ್ದೋನು ನೀನಲ್ಲ ದುಡಿಯೋನು ನೀನಲ್ಲ ದುಡ್ಡ್ ಮಾತ್ರ್ ಹೆಂಗ್ ಮಾಡ್ತೀಯೋ ಗೋವಿಂದ್ ...
ತಿರುಪತಿ ತಿರುಮಲ ವೆಂಕಟೇಶ ಅದು ಎಷ್ಟು ವರ್ಷದಿಂದ ನಿನ್ನ ಈ ವೇಷ
ಗುಂಡ್ ಹಾಕೋದ್ ಬಿಡ್ತಿವಿ ಗುಂಡು ಹೊಡ್ಸಿ ಕೊಳ್ತೀವಿ ಹುಂಡಿನ್ ಪಾರ್ಸಲ್ ಮಾಡಯ್ಯ ಗೋವಿಂದ
ತಿರುಪತಿ ತಿರುಮಲ ವೆಂಕಟೇಶ ಸ್ವಲ್ಪ ಕಿವಿ ಕೊಟ್ಟು ಕೇಳೋ ಇಲ್ಲ ಒಂದು ನಿಮಿಷ
ಸಿನಿಮಾಗ ಹೋದ್ರು ಬ್ಲಾಕ್ ಟಿಕೇಟು ಬಿಜನೆಸ್ ಅಂದ್ರೂ ಬ್ಲಾಕ್ ಮಾರ್ಕೆಟ್
ರೇಸಿಗೆ ಹೋದ್ರೆ ತಲೆ ಕಟ್ಟು ಅಲ್ಲೂ ಬ್ಲಾಕ್ ಮನಿ ಒನ್ ಬೈಟೂ
ಶಿಷ್ಯ ಶಿಷ್ಯ ಇನ್ನೇನೋ ವಿಷ್ಯ ಶಿಷ್ಯ ಶಿಷ್ಯ ಏನೋ ವಿಷ್ಯ
ಹಿಂಗೇ ಹೋದ್ರೆ ಹೆಂಗೋ ಭವಿಷ್ಯ ಗಣಪತಿಗ್ ಅಪ್ಲಿಕೇಶನ್ ಹಾಕಪ್ಪ
ದುಂಡು ಹೊಟ್ಟೆ ಡೊಳ್ಳು ಹೊಟ್ಟೆ ಗಣನಾಯ್ಕ ಸ್ವಲ್ಪ ನಂಗೂ ಕಲಿಸಯ್ಯ ನಿನ್ನ ಕಾಯ್ಕ
ದುಂಡು ಹೊಟ್ಟೆ ಡೊಳ್ಳು ಹೊಟ್ಟೆ ಗಣನಾಯ್ಕ ಸ್ವಲ್ಪ ನಂಗೂ ಕಲಿಸಯ್ಯ ನಿನ್ನ ಕಾಯ್ಕ
ಸೂಪರ್ ಸ್ಟಾರ್ ನಾವಾದ್ರೇ ಟಾಕೀಸ್ ತುಂಬ ನಿನ್ನ ಸ್ಟ್ಯಾಚು
ಫೈನಾನ್ಸ್ ಮಿನಿಸ್ಟರ್ ನಾವಾದ್ರೇ ನೋಟಲೆಲ್ಲ ನಿನ್ನ ಫೋಟೋ
ಗಣಪ ಗಣಪ ಒಂದು ಡೀಲು ಗಣಪ ಗಣಪ ಗಣಪ ಡೀಲು ಗಣಪ
ಕೈಲಾಸದಲ್ಲಿ ಪಾರ್ಟಿ ಸಿಕ್ಸಟೀ ಕೊಡ್ಸಪ್ಪಾ ಪಾರ್ಟಿನ ಕೊಡಸ್ತೀನಪ್ಪ
ತಿರುಪತಿ ತಿರುಮಲ ವೆಂಕಟೇಶ ಸ್ವಲ್ಪ ಗಣತೀಗ ಹೋಗಿ ಹೇಳು ಒಂದು ನಿಮಿಷ
ನಿಮ್ಮಿಂದಲೇ ನಾವು ನಮ್ಮಿಂದಲೇ ನೀವು ಹಂಗಾದ್ರೂ ಡವ್ ಯಾಕ್ರಯ್ಯ ಗೋವಿಂದ..
ನಿಮ್ಮಿಂದಲೇ ನಾವು ನಮ್ಮಿಂದಲೇ ನೀವು ಹಂಗಾದ್ರೂ ಡವ್ ಯಾಕ್ರಯ್ಯ ಗೋವಿಂದ..
---------------------------------------------------------------------------
ಫ್ರೆಂಡ್ಸ್ (೨೦೦೨) - ಸಾವಿರ ಕನಸಿನ
ಸಂಗೀತ : ಜಿ.ಕೃಷ್ಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಉದಿತನಾರಾಯಣ, ಮಂಜುಳಾ ಗುರುರಾಜ
ಹೆಣ್ಣು : ಓ... ಗಂಡು : ಓಹೋಹೋ
ಹೆಣ್ಣು : ಓ... ಗಂಡು : ಲಲ್ಲರ ಲಾಲಾ ಲಲ್ಲರ ಲಾಲಾ ಹೋ ..
ಹೆಣ್ಣು : ಓಹೋಹೋ.... ಗಂಡು : ಓ...
ಹೆಣ್ಣು : ತಂದರ್ ನಾನಾ ತಂದರ್ ನಾನಾ
ಗಂಡು : ಸಾವಿರ ಕನಸಿನ ಸುಂದರ ಪದಗಳ ಹಾಡುವ ಸಮಯವಿದು
ಮೆಚ್ಚಿದ ಮನಸಿನ ಪ್ರೀತಿಯ ಕದಗಳ ತೆರೆಯೋ ಹೃದಯವಿದು
ನಾಳೆ ನಮದು ಎಂಬುದೇ ಕಾಲ ಹಾಡೋ ರೇಡಿಯೋ
ಕೈಯ್ಯ ಹಿಡಿಯೋ ಪ್ರೀತಿಯ ನಮ್ಮ ಆನಂದಾಡಿಯೋ
ಒಲವೇ ಜಗದಾ ಬೆಳ್ಳಿಯ ಹಬ್ಬ
ಸಾವಿರ ಕನಸಿನ ಸುಂದರ ಪದಗಳ ಹಾಡುವ ಸಮಯವಿದು
ಮೆಚ್ಚಿದ ಮನಸಿನ ಪ್ರೀತಿಯ ಕದಗಳ ತೆರೆಯೋ ಹೃದಯವಿದು
ಕೋರಸ್ : ಗಮದಾದ ಪಾ ಮಪದ ಗಮದಾದಪ ಗಮದಾದ ಪಾ ಪಾಪಮಗರಿ ರಿಗರಿಸ
ಗಮದಾದ ಪಾ ಮಪದ ಗಮದಾದಪ ಗಮದಾದ ಪಾ ಪಾಪಮಗರಿ ರಿಗರಿಸ
ಹೆಣ್ಣು : ಲೋಕದಲ್ಲಿ ಪ್ರೇಮಿಗಳೆಲ್ಲ ಗಂಡು : ಹೂವಿನಂಥೋರು
ಹೆಣ್ಣು : ಹೂವಿನಂಥ ಪ್ರೀತಿಗೆ ಎಂದೂ ಗಂಡು : ಉಸಿರಲೇ ತವರು
ಹೆಣ್ಣು : ಉಸಿರು ಹಾಡೋ ಮಾತುಗಳೆಲ್ಲ ಗಂಡು : ಹೇ.. ಯಾರು ಬಲ್ಲೋರು
ಹೆಣ್ಣು : ಯಾರಿಗಾಗಿ ಪ್ರೀತಿಸುತಿವೋ ಗಂಡು : ಅವರೇ ನಮ್ಮೋರು
ಹೆಣ್ಣು : ಅನುರಾಗ ಒಂದು ಹಾಲು ಬೆಳದಿಂಗಳು ಗಂಡು : ಅಂತರಂಗ ಒಂದು ಅಮೃತ ಮಹಲು
ಹೆಣ್ಣು : ಒಂದು ಸ್ಪರ್ಶದಲ್ಲೇ ಇರುಳು ಕೂಡ ಹಗಲು ಗಂಡು : ಇದೆ ಪ್ರೇಮಿಗಳ ಜೀವನದ ತಿರುಳು
ಹೆಣ್ಣು : ಒಂದು ಕೋಟಿ ಜನ್ಮ ಬಂದರೂನು ನಾನೆ ನಿಂಗೆ ಅಂಕಿತ
ಗಂಡು : ಸಾವಿರ ಕನಸಿನ ಸುಂದರ ಪದಗಳ ಹಾಡುವ ಸಮಯವಿದು
ಹೆಣ್ಣು : ಮೆಚ್ಚಿದ ಮನಸಿನ ಪ್ರೀತಿಯ ಕದಗಳ ತೆರೆಯೋ ಹೃದಯವಿದು
ಗಂಡು : ನೆನಪು ಒಂದು ಕನ್ನಡಿಯಂತೆ ಹೆಣ್ಣು : ಕನಸು ಕಣ್ಣಗಳಿಗೆ
ಗಂಡು : ಕನಸು ಒಂದು ಮುನ್ನುಡಿಯಂತೆ ಹೆಣ್ಣು : ಬದುಕು ಒಂದು ಮನಗಳಿಗೆ
ಗಂಡು : ಬದುಕು ಒಂದು ಬಣ್ಣದ ಕವಿತೆ ಹೆಣ್ಣು : ಬರೆವ ಕೈಗಳಿಗೆ
ಗಂಡು : ಓ.. ಬೆರೆವ ಭಾಗ್ಯದ ಭಾಗ್ಯಕೆ ಸೋತೆ ಹೆಣ್ಣು : ನಾನು ನಿನ್ನೊಳಗೆ
ಗಂಡು : ಒಂದು ಬೊಗಸೆ ಪ್ರೀತಿಯಿಂದ ಜೀವನ ಹೆಣ್ಣು : ಒಂದು ಜೀವನವೇ ಪ್ರೀತಿ ಎಂಬ ಗಾಯನ
ಗಂಡು : ಪ್ರತಿ ಪ್ರೇಮಿಗಳ ಹೃದಯದ ಕಂಪನ ಹೆಣ್ಣು : ಪ್ರತಿ ಪ್ರೇಮಿಗಳ ಹೃದಯದ ಔತಣ
ಗಂಡು : ಒಂದು ಕೋಟಿ ತಾಜಮಹಲಿವೇ ಒಂದು ಆಣೆ ಮಾತಲಿ
ಸಾವಿರ ಕನಸಿನ ಸುಂದರ ಪದಗಳ ಹಾಡುವ ಸಮಯವಿದು
ಹೆಣ್ಣು : ಮೆಚ್ಚಿದ ಮನಸಿನ ಪ್ರೀತಿಯ ಕದಗಳ ತೆರೆಯೋ ಹೃದಯವಿದು
ಗಂಡು : ನಾಳೆ ನಮದು ಎಂಬುದೇ ಕಾಲ ಹಾಡೋ ರೇಡಿಯೋ
ಹೆಣ್ಣು : ಕೈಯ್ಯ ಹಿಡಿಯೋ ಪ್ರೀತಿಯ ನಮ್ಮ ಆನಂದಾಡಿಯೋ
ಗಂಡು : ಒಲವೇ ಜಗದಾ ಬೆಳ್ಳಿಯ ಹಬ್ಬ
ಹೆಣ್ಣು : ಸಾವಿರ ಕನಸಿನ ಸುಂದರ ಪದಗಳ ಹಾಡುವ ಸಮಯವಿದು
ಗಂಡು : ಮೆಚ್ಚಿದ ಮನಸಿನ ಪ್ರೀತಿಯ ಕದಗಳ ತೆರೆಯೋ ಹೃದಯವಿದು
--------------------------------------------------------------------------
No comments:
Post a Comment