ಗಾಯತ್ರಿ ಮದುವೆ ಚಿತ್ರದ ಹಾಡುಗಳು
- ನನ್ನ ದೈವ ಕಣ್ಣ ಮುಂದಿರೇ
- ನಿನ್ನ ಜಾತಕ ನನ್ನ ಕೈಲಿದೆ ನಿನ್ನ ನಾಟಕ ಗೊತ್ತಾಗಿದೆ
- ಹೇ.. ಪ್ರೀತಿಯ ಮಾತಿಗೆ ಹೋ.. ಏತಕೆ ನಾಚಿಕೆ
- ಇನ್ನೂ ಯಾಕ ಬರಲಿಲ್ಲ ಅಂದಗಾರ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ
ಆಆಆ... ಆಆಆ... ಆಆಆ....
ಸಸಸ ನಿನಿನಿ ಮಮಮ ದಿದಿದಿ ಗಗ ನಿ ಸದಮ ಪನಿದಪ
ನನ್ನ ದೈವ ಕಣ್ಣ ಮುಂದಿದೆ ಮೌನ ಜೀವ ಮಾತನಾಡಿದೆ
ಒಲವನು ತೋರಿ ಬೆಳಕನು ಬೀರಿ ನನ್ನ ಎದೆ ಮೀಟಿದೆ..
ನನ್ನ ದೈವ ಕಣ್ಣ ಮುಂದಿದೆ ಮೌನ ಜೀವ ಮಾತನಾಡಿದೆ .... ಆಆಆ
ಶಿಲೆಯಲಿ ಕಲೆ ಮಾಡಿ ಜೀವದ ಕಳೆ ನೀಡಿ ನನ್ನ ಉಸಿರಾದೆ ನೀನು
ನಿನ್ನ ನೆರಳಾದೆ ನಾನು ... ಆಆಆ ಆಆಆ ಆ ಆಆ
ಆಸೆಯ ಲತೆಗಿಂದು ಆಸರೆ ನೀ ತಂದು ಬಾಳ ಸಂಗಾತಿಯಾದೆ
ಭಾಗ್ಯನಿಧಿಯಾಗಿ ಬಂದೇ
ಮನವು ಹಾಡಲು ತನುವು ಆಡಲು ನಿನ್ನ ಸೇರಲು ಬಯಕೆ ಚಿಗುರಿ ನಲಿದೇ
ನನ್ನ ದೈವ ಕಣ್ಣ ಮುಂದಿದೆ ಮೌನ ಜೀವ ಮಾತನಾಡಿದೆ
ಒಲವನು ತೋರಿ ಬೆಳಕನು ಬೀರಿ ನನ್ನ ಎದೆ ಮೀಟಿದೆ..ಓಓಓ
ನನ್ನ ದೈವ ಕಣ್ಣ ಮುಂದಿದೆ ಮೌನ ಜೀವ ಮಾತನಾಡಿದೆ .... ಆಆಆ
ತರಿಕಿಟತೊಂ ತರಿಕಿಟತೊಂ ತಝಮ್ ತಝಮ್ ತಝಮ್ ತಝಮ್
ಧಿಗಿ ಧಿಗಿ ತನ ಧೀಮ್ ತೋನಾ ತರತರಿಕಿಟತೊಂ
ಕಂಗಳ ಜೊತೆ ದೀಪ ಬೆಳಗುವೆ ನಿನಗೆಂದು ಬಾಳಗುಡಿಯಲಿ ನಿಂದು
ಪೂಜೆ ಸ್ವೀಕರಿಸು ಬಂದು
ನಗುವಿನ ಹೂಮಾಲೆ ತಂದೆನು ನಾನಿಂದು ನಿನ್ನ ಸಿಂಗರಿಸಲೆಂದು
ನೋಡಿ ಮನತಣಿಯಲೆಂದು
ನಿನ್ನ ದಾರಿಗೆ ಹೂವ ಹಾಸಿಗೆ ಹಾಸಿ ನಿಲ್ಲುವೆ ಸೇವೆ ಮಾಡೇ ಎಂದು
ನನ್ನ ದೈವ ಕಣ್ಣ ಮುಂದಿದೆ ಮೌನ ಜೀವ ಮಾತನಾಡಿದೆ
ಒಲವನು ತೋರಿ ಬೆಳಕನು ಬೀರಿ ನನ್ನ ಮೀಟಿದೆ..
ನನ್ನ ದೈವ ಕಣ್ಣ ಮುಂದಿದೆ ಮೌನ ಜೀವ ಮಾತನಾಡಿದೆ .... ಆಆಆ
--------------------------------------------------------------------------------------------------------------------------
ಗಾಯತ್ರಿ ಮದುವೆ (೧೯೮೩) - ನಿನ್ನ ಜಾತಕ ನನ್ನ ಕೈಲಿದೇ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಹೆಣ್ಣು : ನಿನ್ನ ಜಾತಕ ನನ್ನ ಕೈಲಿದೆ ನಿನ್ನ ನಾಟಕ ಗೊತ್ತಾಗಿದೆ
ಈಗೇನು ಮಾಡುವೇ ಇನ್ನೇನು ಹೇಳುವೇ
ಗಂಡು : ಚಿನ್ನ ನಿನ್ನ ಕೋಪವ ಚಾಡಿ ಹೇಳೋ ಕಾಗದ
ಕೊಡು ಕೊಡು ಬೇಡುವೇ .. ಹ್ಹಾಂ ...
ಹೆಣ್ಣು : ನಿನ್ನ ಜಾತಕ ನನ್ನ ಕೈಲಿದೆ ನಿನ್ನ ನಾಟಕ ಗೊತ್ತಾಗಿದೆ
ಹೆಣ್ಣು : ನಿನ್ನ ಮುದ್ದು ಮಾತಿಗಿನ್ನೂ ಎಂದು ಸೋಲೇನು
ನಿನ್ನ ಪ್ರೇಮ ಜಾಲದಲ್ಲಿ ಜಾರಿ ಬೀಳೇನು
ಚೆಲ್ಲಾಟಕೆ ಬೆರಗಾದೆನು ನನಗಿನ್ನೂ ನೀ ಹೆದರಬೇಕು
ಗಂಡು : ನನ್ನ ಮೇಲೆ ಹೀಗೇಕೋ ರೋಷ ಕಾಣೆನು
ನಿನ್ನ ಪ್ರೀತಿ ಏನಾಯ್ತು ಅವನೇ ಬಲ್ಲನು
ಓ ಸುಂದರೀ.. ಶರಣಾದೇನು ಆ.. ಓಲೆ ಹರಿದು ಹಾಕು
ಹೆಣ್ಣು : ಆಡುವುದೇ ಒಂದು ಮಾಡುವುದೇ ಒಂದು ನಿನ್ನ ನಾ ನಂಬೆನೂ
ಗಂಡು : ಹೇಯ್.. ನಿನ್ನ ಜಾತಕ ನೋಡಿಲ್ಲಿದೆ
ನಿನ್ನ ಆಟಕೆ ಬ್ರೇಕ್ ಹಾಕಿದೆ ಈಗೇನು ಮಾಡುವೇ ಹ್ಹಹ್ಹಾಹ್ಹ.. ಇನ್ನೆಲ್ಲಿ ಓಡುವೇ
ಹೆಣ್ಣು : ಎಂಥ ಒಳ್ಳೇ ಕಾಗದ ನಿನ್ನಾ ಪ್ರೀತಿ ಪ್ರೇಮದ ಕಥೆಗಳೇ ಇಲ್ಲಿದೇ
ಗಂಡು : ಅರೆರೇ.. ನಿನ್ನ ಜಾತಕ ನೋಡಿಲ್ಲಿದೆ ನಿನ್ನ ಆಟಕೆ ಬ್ರೇಕ್ ಹಾಕಿದೆ.. ...
ಗಂಡು : ನನ್ನ ಕೈಯಲಿ ಹುಡುಗಾಟ ಆಡೋ ಆಸೆಯೇ..
ನನ್ನ ಮೇಲೆ ದೂರ ಇನ್ನೂ ಹೇಳು ಚಪಲವೇ
ಈ ಬುದ್ಧಿಯೂ ... ಸರಿಯಲ್ಲವೇ.. ಕಲಹ ನಮಗಲ್ಲ ಚೆಲುವೇ...
ಹೆಣ್ಣು : ಬಿಡಲಾರೇ ನಿನ್ನನ್ನೂ ಎಲ್ಲೇ ಹೋದರೂ
ಕೊಡಲಾರೇ ಈ ಓಲೆ ಏನೇ ಆದರೂ ನಿಮ್ಮೂರನೂ ಇದು ಸೇರಲಿ
ನಿಮ್ಮೋರು ಓಡೋಡಿ ಬರಲೀ
ಗಂಡು : ತಂಟೆಗೆ ನಾ ಬರೇನು ಕಣ್ಣಿಗೇ ಕಾಣಿಸೇನು ನಿನ್ನಂತೇ ನಡೆವೇನೂ
ಹೆಣ್ಣು : ನಿನ್ನ ಜಾತಕ ನನ್ನ ಕೈಲಿದೆ (ಹ್ಹಾಂ ) ನಿನ್ನ ನಾಟಕ ಗೊತ್ತಾಗಿದೆ (ಹ್ಹಾಂ )
ಈಗೇನು ಮಾಡುವೇ ಇನ್ನೇನು ಆಡುವೇ
ಗಂಡು : ಚಿನ್ನ ನಿನ್ನ ಕೋಪವ ಚಾಡಿ ಹೇಳೋ ಕಾಗದ ಕೊಡು ಕೊಡು ಬೇಡುವೇ .. ಹ್ಹಾಂ ...
ಹೆಣ್ಣು : ನಿನ್ನ ಜಾತಕ ನನ್ನ ಕೈಲಿದೆ (ಹ್ಹಾಂ ) ನಿನ್ನ ನಾಟಕ ಗೊತ್ತಾಗಿದೆ (ಹ್ಹಾಂ )
ಗಂಡು : ನನ್ನ ಕೈಯಲಿ ಹುಡುಗಾಟ ಆಡೋ ಆಸೆಯೇ..
ನನ್ನ ಮೇಲೆ ದೂರ ಇನ್ನೂ ಹೇಳು ಚಪಲವೇ
ಈ ಬುದ್ಧಿಯೂ ... ಸರಿಯಲ್ಲವೇ.. ಕಲಹ ನಮಗಲ್ಲ ಚೆಲುವೇ...
ಹೆಣ್ಣು : ಬಿಡಲಾರೇ ನಿನ್ನನ್ನೂ ಎಲ್ಲೇ ಹೋದರೂ
ಕೊಡಲಾರೇ ಈ ಓಲೆ ಏನೇ ಆದರೂ ನಿಮ್ಮೂರನೂ ಇದು ಸೇರಲಿ
ನಿಮ್ಮೋರು ಓಡೋಡಿ ಬರಲೀ
ಗಂಡು : ತಂಟೆಗೆ ನಾ ಬರೇನು ಕಣ್ಣಿಗೇ ಕಾಣಿಸೇನು ನಿನ್ನಂತೇ ನಡೆವೇನೂ
ಹೆಣ್ಣು : ನಿನ್ನ ಜಾತಕ ನನ್ನ ಕೈಲಿದೆ (ಹ್ಹಾಂ ) ನಿನ್ನ ನಾಟಕ ಗೊತ್ತಾಗಿದೆ (ಹ್ಹಾಂ )
ಈಗೇನು ಮಾಡುವೇ ಇನ್ನೇನು ಆಡುವೇ
ಗಂಡು : ಚಿನ್ನ ನಿನ್ನ ಕೋಪವ ಚಾಡಿ ಹೇಳೋ ಕಾಗದ ಕೊಡು ಕೊಡು ಬೇಡುವೇ .. ಹ್ಹಾಂ ...
ಹೆಣ್ಣು : ನಿನ್ನ ಜಾತಕ ನನ್ನ ಕೈಲಿದೆ (ಹ್ಹಾಂ ) ನಿನ್ನ ನಾಟಕ ಗೊತ್ತಾಗಿದೆ (ಹ್ಹಾಂ )
--------------------------------------------------------------------------------------------------------------------------
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ.
ಗಂಡು : ಹೇ.. ಪ್ರೀತಿಯ ಮಾತಿಗೇ .. ಓ.. ಏತಕೆ ನಾಚಿಕೆ ಆಆಆ...
ಮೊದಲನೆಯ ಶುಭ ರಾತ್ರಿಯ ಮಧುರ ಮಿಲನಕೆ
ಹೆಣ್ಣು : ಓ.. ನೋಟದ ಬಾಣವೂ.. ಓ..ಸೋತಿದೆ ನನ್ನೆದೇ...
ಆಆಆ.. ಹೇಳಲಾರದೇ .. ತಾಳಲಾರದೇ ಮತ್ತಲಿ ತೇಲಿದೆ
ಗಂಡು : ಹೇ.. ಪ್ರೀತಿಯ ಮಾತಿಗೇ .. ಓ.. ಏತಕೆ ನಾಚಿಕೆ
ಗಂಡು : ನನ್ನ ಚೆಲುವೇ ಯಾರು ಇಲ್ಲವೇ ಒಂದೇ ಒಂದು ಮಾತು ಆಆ...
ಹೆಣ್ಣು : ಅಲ್ಲಿ ಬಂದರೇ ಒಂದು ತೊಂದರೆ ಎಲ್ಲಾ ನನಗೆ ಗೊತ್ತು
ಗಂಡು : ಏನು ಗೊತ್ತಿರುವುದೂ
ಹೆಣ್ಣು : ಮಾತು ಅಂತೀರಾ.. ( ಹಹ್ಹ ) ಆಮೇಲೆ ಮುತ್ತು ಅಂತೀರಾ
ಗಂಡು : ಮುತ್ತಲ್ವೇ ಬೇರೆ ಬೇರೆ ಬಾರೇ .. ಆಂ..ಆಂ..ಆಂ..
ಈ ಚಳಿ ಗಾಳಿಗೆ ಮೈ ಬಿಸಿ ಏರಿದೇ ಪ್ರೇಯಿಸಿ .ಆಂ..ಆಂ..
ಹೆಣ್ಣು : ಹಾಲಿದೆ ಹಣ್ಣಿದೇ.. ಎಲ್ಲವು ನಿನ್ನದೇ...ಆಆಆ...
ಕೈಯ್ ಸೋಕದೆ ಮೇಯ್ ಮುಟ್ಟದೇ ನನ್ನಾ ಕಾಡದೆ
ಗಂಡು : ಆಹ್ಹಾಂ ... ಪ್ರೇಮದ ಕಾಣಿಕೆ ..ಆಆಆ... ಕೊಡುವೆ ಬಾ ಸನಿಹಕೆ
ಹೆಣ್ಣು : ನಿದ್ದೆ ಬಂದಿದೆ ಕಣ್ಣ ತುಂಬಿದೆ ನಾಳೆ ನಾನೇ ಬರುವೇ
ಗಂಡು : ಇಂಥ ಮಾತಲಿ ಏಕೆ ಕೊಲ್ಲುವೆ ಇಂದೇ ಬೇಕು ಚೆಲುವೇ
ಹೆಣ್ಣು : ನಂಗೆ ಯಾಕೋ ಭಯ ಗಂಡು : ಹ್ಹಾಂ .. ಜೊತೇಲಿ ನಾನಿಲ್ಲವೇ
ಹೆಣ್ಣು : ಅದಕ್ಕೆ ಭಯ
ಗಂಡು : ಆ.. ಹ್ಹಹ್ಹ.. ಇದೆಲ್ಲ ನಾಟಕ ನನಗೊತ್ತು ಬಾರೆ ಅಂದ್ರೇ ಬಾರೆ
ಹೆಣ್ಣು : ಈ ಹೊಸ ಬಾಳಿಗೆ ಮೈ ಝಂ ಎಂದಿದೆ ಹ್ಹಹ್ಹಹ್ಹಾ...ಹ್ಹಹ್ಹಹ್ಹಾ...
ಗಂಡು : ಹೇ.. ದೀಪವು ಆರಿದೇ ಹ್ಹಹ್ಹಹ್ಹಾ...ಬಾಗಿಲು ಹಾಕಿದೇ ಆಆಆ...
ದೂರ ದೂರಕೆ ಹೋಗುವೆ ಏಕೆ ಸಮಯ ಕಳೆಯದೆ
ಹೆಣ್ಣು : ಈ ಕಂಗಳ ಬೆಳಕಿದೆ ಆಸೆಯೂ ತುಂಬಿದೆ..ಓಓಓಓಓ
ದೀಪವೇತಕೆ ಕೋಪವೇತಕೆ ನೀನು ಬಳಿಯಿರೆ... ಓಓಓ ...
ಇಬ್ಬರು : ಲಾಲ್ಲಲಾಲ್ಲ .... ಹೂಂಹೂಂಹೂಂಹೂಂ..
--------------------------------------------------------------------------------------------------------------------------
ಗಾಯತ್ರಿ ಮದುವೆ (೧೯೮೩) - ಇನ್ನೂ ಯಾಕೆ ಬರಲಿಲ್ಲ ಅಂದಗಾರ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ
ಇನ್ನು ಯಾಕೆ ಬರಲಿಲ್ಲ ಅಂದಗಾರ ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ ಸರಸಗಾರ
ಇನ್ನು ಯಾಕೆ ಬರಲಿಲ್ಲ ಅಂದಗಾರ ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ ಸರಸಗಾರ
ಆಟಗಾರ ಒಳ್ಳೆ ಬೇಟೆಗಾರ ಮಾತುಗಾರ ಭಲೇ ಸಂಚುಗಾರ .. ಹ್ಹ..
ಆಟಗಾರ ಒಳ್ಳೆ ಬೇಟೆಗಾರ ಮಾತುಗಾರ ಭಲೇ ಸಂಚುಗಾರ
ನಿನ್ನೆ ನೀ ಬಂದಾಗ ಕತ್ತಲು ಕವಿದಾಗ ಏನೇನೋ ನೀ ಹೇಳಿದೆ
ಪ್ರೀತಿ ಚೆಲ್ಲಿ ಬಳಿ ಬಾಗಿದೆ
ಕೆನ್ನೆಯು ಕೆಂಪಾಗಿ ಮೈಯಲ್ಲಿ ಬಿಸಿಯಾಗಿ ಮೊಗ್ಗಾಗಿ ಓಡಿದೆ
ನನ್ನ ನೀನು ಹುಡುಕಾಡಿದೆ ನಿನ್ನ ನೋಡದೆ ಇರಲಾರದೇ ನಾ ಕೂಗಿದೆ
ಕೆನ್ನೆಯು ಕೆಂಪಾಗಿ ಮೈಯಲ್ಲಿ ಬಿಸಿಯಾಗಿ ಮೊಗ್ಗಾಗಿ ಓಡಿದೆ
ನನ್ನ ನೀನು ಹುಡುಕಾಡಿದೆ ನಿನ್ನ ನೋಡದೆ ಇರಲಾರದೇ ನಾ ಕೂಗಿದೆ
ನಗುನಗುತಲಿ ಮನ ಸೆಳೆಯುವ ತನು ಬಳಸುವ ಆ ಚಂದಿರ ಆಆಅಅಅ ...
ಇನ್ನು ಯಾಕೆ ಬರಲಿಲ್ಲ ಅಂದಗಾರ ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ ಸರಸಗಾರ
ಸೊಗಸುಗಾರ ಸರಸಗಾರ
ಆಟಗಾರ ಒಳ್ಳೆ ಬೇಟೆಗಾರ ಮಾತುಗಾರ ಭಲೇ ಸಂಚುಗಾರ .. ಹ್ಹ.ಹ್ಹೋ .
ಆಟಗಾರ ಒಳ್ಳೆ ಬೇಟೆಗಾರ ಮಾತುಗಾರ ಭಲೇ ಸಂಚುಗಾರ
ಈ ದಿನ ಹೀಗೇಕೆ ಬಾರದೆ ನೀ ಹೋದೆ ಏನಾಯ್ತೋ ನಾ ಕಾಣೆನು
ನಿನ್ನಾ ವಿರಹ ನಾ ತಾಳೆನು
ತಣ್ಣನೆ ಗಾಳೀಲಿ ನಡುಗಿದೆ ನೋಡಲ್ಲಿ ನಾನಿನ್ನೂ ನಿಲ್ಲಲಾರೆನು
ಕಾದು ಕಾದು ನಾ ಸೋತೆನು
ಬರಲಾರೆಯ ಜೊತೆ ಸೇರೆಯಾ ಸುಖ ನೀಡೇಯ
ಪ್ರತಿ ನಿಮಿಷವೂ ಹೊಸ ಹರುಷವು ನಾ ತರುವೆನು ಬಾ ಸುಂದರ ... ಹ್ಹಹ್ಹಹ್ಹಹ್ಹ
ಇನ್ನು ಯಾಕೆ ಬರಲಿಲ್ಲ ಅಂದಗಾರ ಎಲ್ಲಿ ಹೋದ ನನ್ನ ಮುದ್ದು ಮಾರಸೊಗಸುಗಾರ ಸರಸಗಾರ
ಇನ್ನು ಯಾಕೆ ಬರಲಿಲ್ಲ ಅಂದಗಾರ ಎಲ್ಲಿ ಹೋದ ನನ್ನ ಮುದ್ದು ಮಾರ
ಸೊಗಸುಗಾರ ಸರಸಗಾರ
ಆಟಗಾರ ಒಳ್ಳೆ ಬೇಟೆಗಾರ ಮಾತುಗಾರ ಭಲೇ ಸಂಚುಗಾರ .. ಹ್ಹ.ಹ್ಹ .
ಸೊಗಸುಗಾರ ಸರಸಗಾರ
ಆಟಗಾರ ಒಳ್ಳೆ ಬೇಟೆಗಾರ ಮಾತುಗಾರ ಭಲೇ ಸಂಚುಗಾರ
No comments:
Post a Comment