699. ಆಸೆಗೊಬ್ಬ ಮೀಸೆಗೊಬ್ಬ (೧೯೯೦)


ಆಸೆಗೊಬ್ಬ ಮೀಸೆಗೊಬ್ಬ ಚಿತ್ರದ ಹಾಡುಗಳು 
  1. ಕೆಣಕುತಿದೆ ನಿನ್ನ ಕಣ್ಣೋಟ ...
  2. ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
  3. ತಾನನ ತಂದಾನ ಕುಣಿಸಿದೆ ಯೌವ್ವನ
  4. ಬಾ ಕುಣಿವ ಥೈ ಥೈ  ಥೈ ಥೈ ಸೋಕಿಸುತ ಮೈ ಕೈ
  5. ಬೊಂಬಾಟೋ ಬೊಂಬಾಟೋ ನಿನ್ನಾ ಆಟ ಬೊಂಬಾಟೋ 

ಆಸೆಗೊಬ್ಬ ಮೀಸೆಗೊಬ್ಬ (೧೯೯೦) - ಕೆಣಕುತಿದೆ ನಿನ್ನ ಕಣ್ಣೋಟ ...
ಸಂಗೀತ : ಉಪೇಂದ್ರ ಕುಮಾರ  ಸಾಹಿತ್ಯ : ಚಿ. ಉದಯಶಂಕರ  ಹಾಡಿದವರು: ಎಸ್ಪಿ.ಬಾಲು

ಆಆಆ... ಆಆಆ... ಆ... ಆ.. ಓ.. ಓ.. ಓ.. ಹೂಂ ಹೂಂ ಹೂಂ 
ಕೆಣಕುತಿದೆ ನಿನ್ನ ಕಣ್ಣೋಟ ...ಕುಣಿಸುತಿದೇ ನಿನ್ನ ಕಣ್ಣಾಟ
ಸೆಳೆಯಲು ನಿನ್ನ ತನುವಿನ ಮಾಟ ಕಲಿಯಲು ಆಸೆ ಪ್ರಣಯದ ಪಾಠ ಮಾಡುವುದೆನಿಗಾ.... ಆಆ ... 
ಕೆಣಕುತಿದೆ ನಿನ್ನ ಕಣ್ಣೋಟ ...

ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲಿ
ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲಿ
ನೀ ನುಡಿದರು ಸೊಗಸು ಮೌನವು ಸೊಗಸು ಎಲ್ಲ ಸಂಗೀತವೇ ...
ಕೆಣಕುತಿದೆ ನಿನ್ನ ಕಣ್ಣೋಟ ಸೆಳೆಯಲು ನಿನ್ನ ತನುವಿನ ಮಾಟ
ಕಲಿಯಲು ಆಸೆ ಪ್ರಣಯದ ಪಾಠ ಮಾಡುವುದೆನಿಗಾ...ಆಆಆ
ಕೆಣಕುತಿದೆ ನಿನ್ನ ಕಣ್ಣೋಟ ...

ಎಂದು ಕಂಡ ಅಂದ ಅಂದ ನಿನ್ನದು ನಲ್ಲೆ ಎಂದೋ ಕಂಡ ಸ್ನೇಹ ಪ್ರೇಮ ನಮ್ಮದು
ಎಂದು ಕಂಡ ಅಂದ ಅಂದ ನಿನ್ನದು ನಲ್ಲೆ ಎಂದೋ ಕಂಡ ಸ್ನೇಹ ಪ್ರೇಮ ನಮ್ಮದು
ಇದು ಸಾವಿರ ಜನುಮ ಜೊತೆಯಲಿ ನಾವು ಕಂಡ ಆನಂದವೂ ...
ಕೆಣಕುತಿದೆ ನಿನ್ನ ಕಣ್ಣೋಟ ...  ಕುಣಿಸುತಿದೇ ನಿನ್ನ ಕಣ್ಣಾಟ
ಸೆಳೆಯಲು ನಿನ್ನ ತನುವಿನ ಮಾಟ ಕಲಿಯಲು ಆಸೆ ಪ್ರಣಯದ ಪಾಠ ಮಾಡುವುದೆನಿಗಾ...ಆಆಆ
ಕೆಣಕುತಿದೆ ನಿನ್ನ ಕಣ್ಣೋಟ ...
----------------------------------------------------------------------------------------------------------------------

ಆಸೆಗೊಬ್ಬ ಮೀಸೆಗೊಬ್ಬ (೧೯೯೦) - ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
ಸಂಗೀತ : ಉಪೇಂದ್ರ ಕುಮಾರ  ಸಾಹಿತ್ಯ : ಚಿ. ಉದಯಶಂಕರ  ಹಾಡಿದವರು: ಕೋರಸ್, ಡಾ||ರಾಜ್ 

ಕೋರಸ್ : ಲಾಲಾಲಾ ಲಾಲಾಲಾ ಲಾಲಾಲಾ
ಗಂಡು : ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ
            ಸಂಸಾರಿಯಾದರೇನು ಸನ್ಯಾಸಿಯಾದರೇನು
            ಅಧಿಕಾರಿಯಾದರೇನು ಅಲೆಮಾರಿಯಾದರೇನು
           ಸಮಯಕ್ಕೆ ತಕ್ಕ ಹಾಗೆ ಬಿಟ್ಟೆ ಬಿಡುತ್ತಾರ್ ಎಲ್ಲರು ಬುರುಡೆ
          ಸತ್ಯವಂತ ನಾನು ಎಂದು ಹೇಳೋಣ ಬಾಯಿಗೆ ಹಾಕು ಬಿರಡೆ 
ಕೋರಸ್ :  ಹಾ... ಕು..  ಬಿರಡೆ
ಗಂಡು :  ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ

ಕೋರಸ್ : ಲಲ್ಲಲ್ಲಲ್ಲಲಾ ಲಲ್ಲಲ್ಲಲ್ಲಲಾ ಲಲ್ಲಲ್ಲಲ್ಲಲಾ
ಗಂಡು : ಅಪ್ಪ ಅನ್ನೋದು ಬುರುಡೆ (ರಪ್ಪಪ್ಪ ರಪ್ಪಪ್ಪ)  ಅಮ್ಮ ಅನ್ನೋದು (ಬುರುಡೆ ರಪ್ಪಪ್ಪ ರಪ್ಪಪ್ಪ)
            ಅಪ್ಪ ಅನ್ನೋದು ಬುರುಡೆ (ರಪ್ಪಪ್ಪ ರಪ್ಪಪ್ಪ ) ಅಮ್ಮ ಅನ್ನೋದು (ಬುರುಡೆ ರಪ್ಪಪ್ಪ ರಪ್ಪಪ್ಪ)
           ಬಾಳಲಿ ನಾವು ದಿನವೂ ನೋಡೋ ಅನುಬಂಧಗಳು ಒಂದೇ ಎರಡೇ...
ಕೋರಸ್ :  ಲಾಲಲಾ  ಲಾಲಾ ಲಲಲಲ ಲಾಲಾ   ಲಾಲಲಾ  ಲಾಲಾ ಲಲಲಲ ಲಾಲಾ
ಗಂಡು : ಜೀವನವೊಂದು ನಾಟಕದಂತೆ ಅನುದಿನ ನಮಗೆ ಸಾವಿರ ಚಿಂತೆ
           ಕಂತೆ ಒಗೆದ ಮೇಲೆ ನಿನಗೆ ಸಿಗುವುದು ನಿಶ್ಚಿಂತೆ ....
ಕೋರಸ್ :  ತರತರಪಂಪಂ  ತರತರಪಂಪಂ 
ಗಂಡು :  ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ  ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ 

ಗಂಡು : ಅಣ್ಣಾ ಅನ್ನೋದು (ರಪ್ಪಪ್ಪ ರಪ್ಪಪ್ಪ) ತಮ್ಮ ಅನ್ನೋದು (ರಪ್ಪಪ್ಪ ರಪ್ಪಪ್ಪ)
           ಅಣ್ಣಾ ಅನ್ನೋದು ರಪ್ಪಪ್ಪ ರಪ್ಪಪ್ಪ ತಮ್ಮ ಅನ್ನೋದು ರಪ್ಪಪ್ಪ ರಪ್ಪಪ್ಪ
           ಮಂಕನು ಇಲ್ಲಿ ಬದುಕೋದಿಲ್ಲ ಮಾತಿನ ಮಲ್ಲ ಸಾಯೋದಿಲ್ಲಾ 
ಕೋರಸ್ :  ಲಾಲಲಾ  ಲಾಲಾ ಲಲಲಲ ಲಾಲಾ   ಲಾಲಲಾ  ಲಾಲಾ ಲಲಲಲ ಲಾಲಾ
ಗಂಡು : ಸುಳ್ಳೋ ಮಳ್ಳೊ ನಿನಗೇನಂತೆ ಸಾಧಿಸಿ ಕೆಲಸ ನೀ ಬಿಡದಂತೆ 
ನಗುತ ನಗುತ ಬಾಳು ಆಗ ಜೀವನ ಜೇನಂತೆ...  ತರತರ 
ಕೋರಸ್ :  ತರತರಪಂಪಂ  ತರತರಪಂಪಂ 
ಗಂಡು :   ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ  ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ 
             ಸಂಸಾರಿಯಾದರೇನು ಸನ್ಯಾಸಿಯಾದರೇನು
            ಅಧಿಕಾರಿಯಾದರೇನು ಅಲೆಮಾರಿಯಾದರೇನು
           ಸಮಯಕ್ಕೆ ತಕ್ಕ ಹಾಗೆ ಬಿಟ್ಟೆ ಬಿಡುತ್ತಾರ್ ಎಲ್ಲರು ಬುರುಡೆ
          ಸತ್ಯವಂತ ನಾನು ಎಂದು ಹೇಳೋಣ ಬಾಯಿಗೆ ಹಾಕು ಬಿರಡೆ 
ಕೋರಸ್: ಹಾ... ಕು..  ಬಿರಡೆ
ಗಂಡು :ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ ಎಲ್ಲಾ ಬುರುಡೆ ಇಲ್ಲಿ ಎಲ್ಲಾ ಬುರುಡೆ 
------------------------------------------------------------------------------------------------------------------------

ಆಸೆಗೊಬ್ಬ ಮೀಸೆಗೊಬ್ಬ (೧೯೯೦) - ತಾನನ ತಂದಾನ ಕುಣಿಸಿದೆ ಯೌವ್ವನ
ಸಂಗೀತ : ಉಪೇಂದ್ರ ಕುಮಾರ  ಸಾಹಿತ್ಯ : ಚಿ. ಉದಯಶಂಕರ  ಹಾಡಿದವರು: ಶಿವರಾಜಕುಮಾರ ಮಂಜುಳಾ ಗುರುರಾಜ 


ತಾನನ ತಂದಾನ ಕುಣಿಸಿದೆ ಯೌವ್ವನ
ತಾನನ ತಂದಾನ ಕುಣಿಸಿದೆ ಯೌವ್ವನ ನವ ತುರುಣಿ ಈ ದಿನ ಬಿಡು ಬಿಡು ಬಿನ್ನಾಣ
ಧೀನ್ ತಕ್ ಧೀನ್ ತಕ್ ಧೀನ್ ತಕ್
ತಾನನ ತಂದಾನ ಕುಣಿಸಿದೆ ಯೌವ್ವನ 
ತಾನನ ತಂದಾನ ಕುಣಿಸಿದೆ ಯೌವ್ವನ  ನವ ತುರುಣಿ ಈ ದಿನ ಬಿಡು ಬಿಡು ಬಿನ್ನಾಣ 
ಧೀನ್ ತಕ್ ಧೀನ್ ತಕ್ ಧೀನ್ ತಕ್

ನಿನ್ನ ಸೇರೋ ಆಸೆಯಿಂದ ನಾನು ಕೊರಗಿದೆ
ಬೆಂಕಿ ಮುಂದೆ ಬೆಣ್ಣೆಯಂತೆ ನಾನು ಕರಗಿದೆ
ನಿನ್ನ ಸೇರೋ ಆಸೆಯಿಂದ ನಾನು ಕೊರಗಿದೆ
ಬೆಂಕಿ ಮುಂದೆ ಬೆಣ್ಣೆಯಂತೆ ನಾನು ಕರಗಿದೆ
ನಲ್ಲ ನಿನ್ನ ಚಿಂತೆ ಇಂದ ನಾನು ನಡುಗಿದೆ 
ಬಿಸಿಲು ಕಂಡ ಮಂಜಿನಂತೆ ನಾನು ಕರಗಿದೆ 
ಇನ್ನೂ ವಿರಹ ತುಂಬದಿರು ನಲ್ಲೇ ಸಂತೋಷ ಕೋಡು 
ಇನ್ನೂ ದೂರ ನಿಲ್ಲದಿರೂ ಬಂದು ಆನಂದ ಕೋಡು 
ಹಾಂ... ಬಳಸಿದೆನು ತೊಳಲಿ ಏಕೆ ಇನ್ನೂ ನಿಧಾನ 
ಧೀನ್ ತಕ್ ಧೀನ್ ತಕ್ ಧೀನ್ ತಕ್ 
ತಾನನ ತಂದಾನ ಕುಣಿಸಿದೆ ಯೌವ್ವನ 
ತಾನನ ತಂದಾನ ಕುಣಿಸಿದೆ ಯೌವ್ವನ 
ನವ ತುರುಣಿ ಈ ದಿನ ಬಿಡು ಬಿಡು ಬಿನ್ನಾಣ 
ಧೀನ್ ತಕ್ ಧೀನ್ ತಕ್ ಧೀನ್ ತಕ್ 
ತಾನನ ತಂದಾನ ಕುಣಿಸಿದೆ ಯೌವ್ವನ 
ತಾನನ ತಂದಾನ ಕುಣಿಸಿದೆ ಯೌವ್ವನ 
ನವ ತುರುಣಿ ಈ ದಿನ ಬಿಡು ಬಿಡು ಬಿನ್ನಾಣ 
ಧೀನ್ ತಕ್ ಧೀನ್ ತಕ್ ಧೀನ್ ತಕ್ 

ಹೂವ ಕಂಡ ದುಂಬಿಯಂತೆ ಬಾರೋ ಇಲ್ಲಿಗೆ
ಜೇನಾಟ ಆಡೋಣ ನಾವು ಮೆಲ್ಲಗೆ
ಹೂವ ಕಂಡ ದುಂಬಿಯಂತೆ ಬಾರೋ ಇಲ್ಲಿಗೆ
ಜೇನಾಟ ಆಡೋಣ ನಾವು ಮೆಲ್ಲಗೆ
ಮಿಂಚು ಕೈಲಿ ಮುಟ್ಟಿದಂತೆ ಆಯಿತು ಮುತ್ತಿಗೆ 
ಮುದ್ದು ಹೆಣ್ಣೇ ಮತ್ತೊಂದು ಇನ್ನೂ ಮೆತ್ತೆಗೆ 
ನನ್ನ ಮನಸ ಕುಣಿಸದಿರು ಮತ್ತೇ ಬೇಕೆನ್ನದಿರೂ
ನನ್ನ ಕೆಣಕಿ ಕೊಲ್ಲದಿರು ನಲ್ಲೇ ದೂರ ಹೋಗದಿರು
ಒಹೋ.. ಬಯಕೆಯನು ಮುಗಿಸಿದೆ ಇನ್ನೂ ಆಸೆ ಇದೇನೂ
ಧೀನ್ ತಕ್ ಧೀನ್ ತಕ್ ಧೀನ್ ತಕ್ 
ತಾನನ ತಂದಾನ ಕುಣಿಸಿದೆ ಯೌವ್ವನ 
ತಾನನ ತಂದಾನ ಕುಣಿಸಿದೆ ಯೌವ್ವನ 
ನವ ತುರುಣಿ ಈ ದಿನ ಬಿಡು ಬಿಡು ಬಿನ್ನಾಣ 
ಧೀನ್ ತಕ್ ಧೀನ್ ತಕ್ ಧೀನ್ ತಕ್ 
ತಾನನ ತಂದಾನ ಕುಣಿಸಿದೆ ಯೌವ್ವನ 
ತಾನನ ತಂದಾನ ಕುಣಿಸಿದೆ ಯೌವ್ವನ 
ನವ ತುರುಣಿ ಈ ದಿನ ಬಿಡು ಬಿಡು ಬಿನ್ನಾಣ 
ಧೀನ್ ತಕ್ ಧೀನ್ ತಕ್ ಧೀನ್ ತಕ್

-------------------------------------------------------------------------------------------------------------------------

ಆಸೆಗೊಬ್ಬ ಮೀಸೆಗೊಬ್ಬ (೧೯೯೦) - ಬಾ ಕುಣಿವ ಥೈ ಥೈ  ಥೈ ಥೈ ಸೋಕಿಸುತ ಮೈ ಕೈ
ಸಂಗೀತ : ಉಪೇಂದ್ರ ಕುಮಾರ  ಸಾಹಿತ್ಯ : ಚಿ. ಉದಯಶಂಕರ  ಹಾಡಿದವರು: ಎಸ್ಪಿ.ಬಿ. ಮಂಜುಳಾ ಗುರುರಾಜ

ಬಾ ಕುಣಿವ ಥೈ ಥೈ  ಥೈ ಥೈ ಸೋಕಿಸುತ ಮೈ ಕೈ
ಬಾ ಕುಣಿವ ಥೈ ಥೈ  ಥೈ ಥೈ ಸೋಕಿಸುತ ಮೈ ಕೈ
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ
ಬಾ ಕುಣಿವ ಥೈ ಥೈ  ಥೈ ಥೈ ಸೋಕಿಸುತ ಮೈ ಕೈ
ಬಾ ಕುಣಿವ ಥೈ ಥೈ  ಥೈ ಥೈ ಸೋಕಿಸುತ ಮೈ ಕೈ
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ

ಹಣ್ಣನು ಕಂಡ ಅಹ.. ಅರಗಿಳಿಗಳ ಹಾಗೇ ಓ.. ಹೋ ..
ಕರಿ ಮುಗಿಲನು ಕಂಡ ಗಿರಿ ನವಿಲಿನ ಹಾಗೇ
ಹೂವನು ಕಂಡ ಮರಿ ದುಂಬಿಯ ಹಾಗೆ
ಕೆಂದಾವರೆ ರವಿಯ ಮೊಗ ನೋಡಿದ ಹಾಗೆ
ಹೊಸ ಸಂಭ್ರಮದಿಂದ ಬಲು ಸಂತಸದಿಂದ
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ 
ಬಾ ಕುಣಿವ ಥೈ ಥೈ  ಥೈ ಥೈ ಸೋಕಿಸುತ ಮೈ ಕೈ 
ಬಾ ಕುಣಿವ ಥೈ ಥೈ  ಥೈ ಥೈ ಸೋಕಿಸುತ ಮೈ ಕೈ 

ಗೆಜ್ಜೆಯ ಚಿಂತೆ ನಮಗೇತಕೆ ಬೇಕು ಆಅಹ್..
ನಿನ್ನ ಲಜ್ಜೆಯ ಬಿಟ್ಟು ನಲ್ಲೆ ಹೆಜ್ಜೆಯ ಹಾಕು ಲಾಲಲಲ
ರಾಗದ ಚಿಂತೆ ನಿನಗೇತಕೆ ಬೇಕು
ಅನುರಾಗವೇ ನಮಗೆ ನನ್ನ ನಲ್ಲನೆ ಸಾಕು
ತನು ಬಳ್ಳಿಯ ಹಾಗೆ ಬಳುಕಾಡಲಿ ಈಗ
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ 
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ 
ಬಾ ಕುಣಿವ ಥೈ ಥೈ  ಥೈ ಥೈ ಸೋಕಿಸುತ ಮೈ ಕೈ 
ಬಾ ಕುಣಿವ ಥೈ ಥೈ  ಥೈ ಥೈ ಸೋಕಿಸುತ ಮೈ ಕೈ 
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ 
ಜಗ ಮರೆತು ಬೆರೆತು ನಲಿವ ನಾವು ಬಾ ಈಗಲೇ 
-------------------------------------------------------------------------------------------------------------------------

ಆಸೆಗೊಬ್ಬ ಮೀಸೆಗೊಬ್ಬ (೧೯೯೦) - ಬೊಂಬಾಟೋ ಬೊಂಬಾಟೋ ನಿನ್ನಾ ಆಟ ಬೊಂಬಾಟೋ
ಸಂಗೀತ : ಉಪೇಂದ್ರ ಕುಮಾರ  ಸಾಹಿತ್ಯ : ಶ್ರೀರಂಗ ಹಾಡಿದವರು: ರಾಘವೇಂದ್ರ ಹಾಗು ಶಿವರಾಜ ಕುಮಾರ 

ಕೊಕ್ಕರೆ ಕೊಕ್ಕೋಊ ಕೊಕ್ಕರೆ ಕೊಕ್ಕೋಊ
ಬೊಂಬಾಟೋ ಬೊಂಬಾಟೋ ನಿನ್ನಾ ಆಟ ಬೊಂಬಾಟೋ 
ಗುಂಡೇಟು ಗುಂಡೇಟು ನಿನ್ನ ಮಾತು ಗುಂಡೇಟು 
ಈ ನಮ್ಮ ನಾಡಿಗೆಲ್ಲಾ ನೀನೆ ಕಿಲಾಡಿ 
ಈ ನಮ್ಮ ನಾಡಿಗೆಲ್ಲಾ ನೀನೆ ಕಿಲಾಡಿ 
ಒಳ್ಳೆ ಲಾಜಿಕ ನೋಡಿ ಹೊಸ ಮ್ಯಾಜಿಕ್ ಮಾಡಿ 
ಕೆಲಸವ ಗಿಟ್ಟಿಸಿದೆ ನಾಟಕ ಆಡಿ 
ಹೋಯ್ ಪಿರಿ ಪಿರಿ ಪಿರಿ ಪಿರಿ ಪಿಪಿಪಿರಿ ಪಿ  ಪಿ ಪಿ 

ಸಿನೆಮಾ ತಾರೆಯಾಗಿ ಮಾಡುವೆ ನೋಡಿ
ಸಿನೆಮಾ ತಾರೆಯಾಗಿ ಮಾಡುವೆ ನೋಡಿ
ಒಳ್ಳೆ ಹಾಡನು ಹಾಡಿ ಮನರಂಜನೆ ನೀಡಿ
ಜನರನು ಮೆಚ್ಚಿಸುವೆ ನಟನೆಯ ಮಾಡಿ
ಹೋಯ್ ಪಿರಿ ಪಿರಿ ಪಿರಿ ಪಿರಿ ಪಿಪಿಪಿರಿ ಪಿ  ಪಿ ಪಿ

ಬೆಳ್ಳಿ ತಾರೆಯಲ್ಲಿ ಮಿಂಚುವ ಕಲೆಗಾರನು ನೀನು
ಬಲು ಕ್ರೇಜಿ ಹೀರೊ ಕಣೋ
ಅರೇ ಹೌದು ಗುರು ಬಲು ಕ್ರೇಜಿ ಹೀರೊ ಕಣೋ
ಒಳ್ಳೆ ಸೊಗಸಾದ ನಾಟಕ ಆಡಿದ ನಿನ್ನ ಮುಂದೆ ನಾವೆಲ್ಲಾ ಜೀರೋ ಕಣೋ
ಅರೇ ಹೌದು ಗುರು ನಾವೆಲ್ಲಾ ಜೀರೋ ಕಣೋ
ಅಂಗಿ ನಿನದು ಬರಿ ಆಕ್ಟಿಂಗು ನನದು
ಅಂಗಿ ನಿನದು ಬರಿ ಆಕ್ಟಿಂಗು ನನದು
ಸೂಪೇರ್ರು ಸ್ಟಾರುಗಳ ಭರ್ಜರಿ ಜೋಡಿ
ಕೆಲಸವ ಗಿಟ್ಟಿಸಿದೆ ನಾಟಕ ಆಡಿ 
ಜನರನು ಮೆಚ್ಚಿಸುವೆ ನಟನೆಯ ಮಾಡಿ 
ಬೊಂಬಾಟೋ ಬೊಂಬಾಟೋ ನಿನ್ನಾ ಆಟ ಬೊಂಬಾಟೋ 
ಗುಂಡೇಟು ಗುಂಡೇಟು ನಿನ್ನ ಮಾತು ಗುಂಡೇಟು 
ಸಿನೆಮಾ ತಾರೆಯಾಗಿ ಮಾಡುವೆ ನೋಡಿ
ಹೋಯ್ ಪಿರಿ ಪಿರಿ ಪಿರಿ ಪಿರಿ ಪಿಪಿಪಿರಿ ಪಿ  ಪಿ ಪಿ 

ಇಲ್ಲಿ ದುಡಿಮೆಯ ಬಾಳಿಗೂ ಪಡೆಯುವ ಕೂಲಿಗೂ ಹೋರಾಟ ಮಾಡಬೇಕು
ಅರೇ ಹೌದು ಗುರು ಹೋರಾಟ ಮಾಡಬೇಕು
ಇಲ್ಲಿ ಅನುಕ್ಷಣ ಬದುಕಲು ದಿನವೂ ಸಿನೆಮಾದಲು ವೇಷವನು ಹಾಕಬೇಕು 
ಅರೇ ಹೌದು ಗುರು ವೇಷವನು ಹಾಕಬೇಕು 
ಇದು ಎಲ್ಲರು ಕಲಿಯ ಬೇಕಾದ ಪಾಠವು 
ಇದು ಎಲ್ಲರು ಕಲಿಯ ಬೇಕಾದ ಪಾಠವು 
ಕಲಿಯದೇ ಹೋದಾಗ ಅವನೇ ಅನಾಡಿ 
ಈ ನಮ್ಮ ನಾಡಿಗೆಲ್ಲಾ ನೀನೆ ಕಿಲಾಡಿ
ಸಿನೆಮಾ ತಾರೆಯಾಗಿ ಮಾಡುವೆ ನೋಡಿ
ಬೊಂಬಾಟೋ ಬೊಂಬಾಟೋ ನಿನ್ನಾ ಆಟ ಬೊಂಬಾಟೋ 
ಗುಂಡೇಟು ಗುಂಡೇಟು ನಿನ್ನ ಮಾತು ಗುಂಡೇಟು 
ಈ ನಮ್ಮ ನಾಡಿಗೆಲ್ಲಾ ನೀನೆ ಕಿಲಾಡಿ 
ಸಿನೆಮಾ ತಾರೆಯಾಗಿ ಮಾಡುವೆ ನೋಡಿ 
ಒಳ್ಳೆ ಲಾಜಿಕ ನೋಡಿ ಹೊಸ ಮ್ಯಾಜಿಕ್ ಮಾಡಿ 
ಒಳ್ಳೆ ಹಾಡನು ಹಾಡಿ ಮನರಂಜನೆ ನೀಡಿ
ಜನರನು ಮೆಚ್ಚಿಸುವೆ ನಟನೆಯ ಮಾಡಿ
ಕೆಲಸವ ಗಿಟ್ಟಿಸಿದೆ ನಾಟಕ ಆಡಿ
--------------------------------------------------------------------------------------------------------------------------

No comments:

Post a Comment