ಗಣೇಶನ ಮದುವೇ ಚಲನಚಿತ್ರದ ಹಾಡುಗಳು
- ಬೆಂಗಳೂರ ಸಿಟಿ ಒಳಗೇ
- ಅನುರಾಗದ ತೋಟದಲ್ಲಿ
- ಶ್ರೀದೇವಿ ಮಾಧವಿ ಕಣ್ಣೋಟ ಬೇಡಾ
- ಸೌಂದರ್ಯ ನೋಡು ನಲ್ಲ
- ಪ್ರೇಮದ ಶ್ರುತಿ ಮೀಟಿದೆ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಗೀತಪ್ರಿಯ ಗಾಯನ : ಮುಖ್ಯಮಂತ್ರಿ ಚಂದ್ರು, ನಾಗೇಂದ್ರಪ್ಪ, ರತ್ನಾಕರ, ಸತ್ಯಭಾಮ, ಬಿ.ಕೆ.ಶಂಕರ, ಉಮೇಶ
ನಾಗೇಂದ್ರ : ಬೆಂಗಳೂರ ಸಿಟಿಯ ಒಳಗೇ ಗ್ಯೂಗಲ್ ರಾಕಿನಾ ಸ್ವಲ್ಪ ಕೆಳಗೇ
ರಂಗರಾವೂ ರಸ್ತೆಯೊಳಗೇ ಇರುವುದೊಂದೂ ವಠಾರವೂ
ರಮಣಮೂರ್ತಿಯೇ ಅದರ ಓನರ್ ಕನಕಲಕ್ಷ್ಮಿಯೇ ಅವರ ಲೈಫೂ ಪಾರ್ಟನರ್
ಆದಿಲಕ್ಷ್ಮೀ ಅವರ ಡಾಟರ್ ಇದುವೇ ಅವರ ಪರಿವಾರವೂ
ಗಣೇಶನೆಂಬುವ ಜಗಳಗಂಟ ಶಾಸ್ತ್ರೀ ಎನುವಾ ಅವನ ಭಂಟ
ಶತ ಧೀಶ ಅಭಿಲಾಷಾ ಇವರೇ ಪ್ರಮುಖ ಬಾಡಿಗೆದಾರರೂ
ಎಲ್ಲ ಮನೆಗೂ ಒಂದೇ ಮೀಟರ್ ಎಲ್ಲರಿಗೊಂದೇ ನಲ್ಲಿ ವಾಟರ್
ಎಲ್ಲ ರಗಳೆಗೆ ಇದುವೇ ಸೆಂಟರ್ ಇದುವೇ ಘೋರ್ ಸಮಸೈಯೂ
ಉಮೇಶ : ನಮ್ಮ ಓನರ್ ಶುದ್ಧ ಲೋಫರ್
ಶಂಕರ : ಕಚಡಾ ಬುದ್ದಿಯ ಹಲ್ಕಾ ಸೂವ್ವರ್
ರತ್ನಾಕರ: ಕಾಸಿನಾಸೆಯ ಕಂಜೂಸ್ ಮಾಸ್ಟರ್
ನಾಗೇಂದ್ರ : ಎಂದೂ ಎಲ್ಲರೂ ಬೈಯ್ಯುವರೂ
ಚಂದ್ರು : ಬಾಡಿಗಿಗೇ ಇರುವ ಭೂತಗಳಿರಾ ನಮ್ಮ ಪಾಲಿನ ಪ್ರೇತಗಳಿರಾ
ಸತ್ಯಭಾಮ : ಬೇತಾಳ ಬುದ್ದಿಯ ಪೀಡೆಗಳಿರಾ
ನಾಗೇಂದ್ರ : ಎಂದು ಓನರ್ ಬಾಡಿಗೆದಾರರ ಬಾಯಿ ಬಂದಂತೇ ಬೈಯ್ಯುವರೂ
ಇಂಥ ವಿವಿಧ ಜನರೂ ಇರುವ ರಂಗು ರಂಗಿನ ಕಥೆಯೂ ನಡೆವ
ಜೀವಸಾರವೇ ನಡೆವ ಒಂದೂ ಪ್ರೇಮ ಕಥೆಯ ಪೇಳ್ವೆನೂ
--------------------------------------------------------------------------------------------------------------------------
ಗಣೇಶನ ಮದುವೇ (೧೯೯೦) - ಅನುರಾಗದ ತೋಟದಲ್ಲಿ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಜಾನಕೀ
ಆಆಆ... ಆಆಆ....
ಅನುರಾಗ ತೋಟದಲ್ಲಿ ಹೂವಂತೇ ನಾನೂ ಆ ಹೂವ ಕಾಣ ಬಯಸೀ ಕಾದಿರುವ ದುಂಬಿ ನೀನೂ
ಹೃದಯಾಂತರಾಳದ ಭಾವನೆಯೂ ಮೂಡಲೂ ಇಂದೇನೋ ರಾಗೋಲ್ಲಾಸ ನಾ ಕಂಡೇ ಸಿರಿ ಸಂತೋಷ
ಅನುರಾಗ ತೋಟದಲ್ಲಿ ಹೂವಂತೇ ನಾನೂ ಆ ಹೂವ ಕಾಣ ಬಯಸೀ ಕಾದಿರುವ ದುಂಬಿ ನೀನೂ
ಸೂರ್ಯ ಮೂಡಲೂ ನಲಿವ ತಾವರೇ ಕಂಡೂ ಮೋಹ ಮರೆಯುತ ಪ್ರೀತಿ ಪರವಶಳಾದೆ
ಚೈತ್ರ ಸುಳಿಯಲೂ ಕುಣಿವ ಕೋಗಿಲೇ ಕಂಡೂ ಆಸೇ ಮೂಡುತಾ ಪ್ರೇಮ ರಂಜಿತಳಾದೇ
ರೋಮಾಂಚ ತರುವ ಶೃಂಗಾರ ಭಾವ ಎಲ್ಲಾ ನೆನಪಾಗಿ ನಾ ಹಾಡಿದೇ
ಅನುರಾಗ ತೋಟದಲ್ಲಿ ಹೂವಂತೇ ನಾನೂ ಆ ಹೂವ ಕಾಣ ಬಯಸೀ ಕಾದಿರುವ ದುಂಬಿ ನೀನೂ
ಜೋಡಿ ಹಕ್ಕಿಯ ರಮ್ಯ ಪ್ರಣಯವ ನೋಡೀ ನಾಳೇ ಬಾಳಿನ ನಲ್ಮೆ ಕನಸನೂ ಕಂಡೇ
ಬಳ್ಳಿ ಮರವನೂ ತಬ್ಬಿ ಬೆಳೆವುದನೂ ನೋಡೀ ಬಾಹು ಬಂಧನ ಬಯಸೀ ಮೋಹಿತಳಾದೇ
ಶುಭಯೋಗ ಬರಲೂ ಸಂಬಂಧ ತರಲೂ ನಿನ್ನ ಸಂಗಾತೀ ನಾನಾಗುವೇ
ಅನುರಾಗ ತೋಟದಲ್ಲಿ ಹೂವಂತೇ ನಾನೂ ಆ ಹೂವ ಕಾಣ ಬಯಸೀ ಕಾದಿರುವ ದುಂಬಿ ನೀನೂ
ಹೃದಯಾಂತರಾಳದ ಭಾವನೆಯೂ ಮೂಡಲೂ ಇಂದೇನೋ ರಾಗೋಲ್ಲಾಸ ನಾ ಕಂಡೇ ಸಿರಿ ಸಂತೋಷ
ಅನುರಾಗ ತೋಟದಲ್ಲಿ ಹೂವಂತೇ ನಾನೂ ಆ ಹೂವ ಕಾಣ ಬಯಸೀ ಕಾದಿರುವ ದುಂಬಿ ನೀನೂ
------------------------------------------------------------------------------------------------------------------------
ಗಣೇಶನ ಮದುವೇ (೧೯೯೦) - ಶ್ರೀದೇವಿ ಮಾಧವಿ ಕಣ್ಣೋಟ ಬೇಡಾ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಜಯಚಂದ್ರನ್, ಎಸ್.ಜಾನಕೀ
ಗಂಡು : ಶ್ರೀದೇವಿ ಮಾಧವಿ ಕಣ್ಣೋಟ ಬೇಡಾ ಮಾಲಾಶ್ರೀ ಮಾಧುರೀ ಮೈಮಾಟ ಬೇಡಾ
ರೇಖಾಳ ನಗೆಯೂ ಬೇಡ.. ಖುಷ್ಬೂಳ ನಡೆಯೂ ಬೇಡ
ಸುಮಲತಾಳ ಬೆಡಗೂ ಬೇಡಾ.. ಸುಹಾಸನೀಯ ಸೊಬಗೂ ಬೇಡಾ
ಬೇಡವೇ ಬೇಡ ನನಗೇ ಜಯಪ್ರದಳಾ ಸೊಂಟವೂ ಸಾಕೂ ಒಂದೇ ನಿನ್ನಾ ಇಂಪಾದ ಕಂಠವೂ
ಬೇಡವೇ ಬೇಡ ನನಗೇ ಜಯಪ್ರದಳಾ ಸೊಂಟವೂ ಸಾಕೂ ಒಂದೇ ನಿನ್ನಾ ಇಂಪಾದ ಕಂಠವೂ
ಇಂಪಾದ ಕಂಠವೂ ...
ಹೆಣ್ಣು : ಲಾಲಾಲಾ ಲಾಲಾಲಾ ಲಾಲಾಲಾ ಗಂಡು : ಲಾಲಾಲಾಲಾ ಹುಂಹೂಂಹುಂಹುಮ್
ಹೆಣ್ಣು : ಕಾಗದದಿ ಅನುರಾಗ ನೀನೂ ತಂದೇ ಬಾಳಿನಲ್ಲಿ ಹೀತವಾದ ಸುಖವ ತಂದೇ
ಕಾಲ ಖಗಗಳಲ್ಲಿ ತೇಲಿ ಹೋದೇ.. ಏನೇನೋ ಕನಸಲ್ಲಿ ಲೀನಳಾದೇ ...
ಪತ್ರ ಬರೆದೂ ನೀ ನನ್ನ ಪ್ರಾಣವಾದೇ...
ಗಂಡು : ಕಾಡುತಿದೆ ಅನುಗಾಲ ಕೇಳುವಾಸೇ ಗಾಯಕಿಯ ಮೊಗವನ್ನೂ ನೋಡುವಾ ಆಸೇ
ಆ ನಿನ್ನ ಕೊರಳಲ್ಲಿ ಸೇರುವಾ ಆಸೇ ಸಂಗೀತ ಸುಧೆಯೆಲ್ಲಾ ಕೇಳುವಾ ಆಸೇ
ನಿನ್ನ ಕಂಠ ನನ್ನದೆಂದೂ ನೀಡು ಬಾಷೇ ..
ಶ್ರೀದೇವಿ ಮಾಧವಿ ಕಣ್ಣೋಟ ಬೇಡಾ ಮಾಲಾಶ್ರೀ ಮಾಧುರೀ ಮೈಮಾಟ ಬೇಡಾ
ರೇಖಾಳ ನಗೆಯೂ ಬೇಡ.. ಖುಷ್ಬೂಳ ನಡೆಯೂ ಬೇಡ
ಸುಮಲತಾಳ ಬೆಡಗೂ ಬೇಡಾ.. ಸುಹಾಸನೀಯ ಸೊಬಗೂ ಬೇಡಾ
ಬೇಡವೇ ಬೇಡ ನನಗೇ ಜಯಪ್ರದಳಾ ಸೊಂಟವೂ ಹ್ಹಾ ಸಾಕೂ ಒಂದೇ ನಿನ್ನಾ ಇಂಪಾದ ಕಂಠವೂ
ಬೇಡವೇ ಬೇಡ ನನಗೇ ಜಯಪ್ರದಳಾ ಸೊಂಟವೂ ಸಾಕೂ ಒಂದೇ ನಿನ್ನಾ ಇಂಪಾದ ಕಂಠವೂ
ಇಂಪಾದ ಕಂಠವೂ ...
ಗಂಡು : ಶಾರದೆಯ ಸುರವೀಣೆ ಮೀಟಿದಂತೇ ಕೋಗಿಲೆಯೂ ಪಂಚಮದಿ ಹಾಡಿದಂತೇ ...
ಕೊಳಲಿಂದ ಹೊರಬಂದ ನಾದದಂತೇ ಹಕ್ಕಿಗಳ ಇಂಚರದ ಮೇಳದಂತೇ
ಗೆಳತೀ ನಿನ್ನ ಮಾತೂ ಕೂಡಾ ಗಾನವಂತೇ
ಹೆಣ್ಣು : ಹೂವಿನಲ್ಲಿ ಅಡಗಿರುವ ಹಣ್ಣಿನಂತೇ ಪತ್ರವಿದು ಮೃದು ಮಧುರಾ ಪ್ರೇಮವಂತೇ
ಚಿತ್ತವೆಲ್ಲಾ ನಿನಗೇನೇ ಚಿತ್ರವಂತೇ ಶ್ರುತಿಯಾಗಿ ಎದೆಯಲ್ಲಿ ಸೇರುವಾ ಆಸೇ
ಸತಿಯಾಗಿ ಜೊತೆಯಲ್ಲೇ ಬಾಳುವಾ ಆಸೇ
ಗಂಡು : ಶ್ರೀದೇವಿ ಮಾಧವಿ ಕಣ್ಣೋಟ ಬೇಡಾ ಮಾಲಾಶ್ರೀ ಮಾಧುರೀ ಮೈಮಾಟ ಬೇಡಾ
ರೇಖಾಳ ನಗೆಯೂ ಬೇಡ.. ಖುಷ್ಬೂಳ ನಡೆಯೂ ಬೇಡ
ಸುಮಲತಾಳ ಬೆಡಗೂ ಬೇಡಾ.. ಸುಹಾಸನೀಯ ಸೊಬಗೂ ಬೇಡಾ
ಬೇಕೇ ಬೇಕು ನಿನ್ನ ಪತ್ರವಾದ ಕಂಠವೂ ಸಾಕು ಒಂದೇ ನಿನ್ನಾ ಇಂಪಾದ ಕಂಠವೂ
ಬೇಕೇ ಬೇಕು ನಿನ್ನ ಮಧುರವಾದ ಕಂಠವೂ ಸಾಕು ಒಂದೇ ನಿನ್ನಾ ಇಂಪಾದ ಕಂಠವೂ
ಇಂಪಾದ ಕಂಠವೂ ...
------------------------------------------------------------------------------------------------------------------------
ಗಣೇಶನ ಮದುವೇ (೧೯೯೦) - ಸೌಂದರ್ಯ ನೋಡು ನಲ್ಲ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಸು.ರುಧ್ರಮೂರ್ತಿ ಶಾಸ್ತ್ರಿ ಗಾಯನ : ಎಸ್.ಜಾನಕೀ
ಹೇ... ಆ.. ಅಹ್ಹಹ್ಹ.. ಸೌಂದರ್ಯ ನೋಡು ನನ್ನ ತಾರುಣ್ಯ ನಿನಗೇನೇ ಎಲ್ಲಾ
ನೀ ನೀಡು ಆಲಿಂಗನಾ ಈ ತಾಪ ತಾಳೇ ನಾ ವಿರಹ ವಿರಹ ವಿರಹ ವಿರಹ
ಸೌಂದರ್ಯ ನೋಡು ನನ್ನ ತಾರುಣ್ಯ ನಿನಗೇನೇ ಎಲ್ಲಾ
ಆಸೇ ಹಕ್ಕಿ ಮೋಹ ಉಕ್ಕಿ ಜೋಡಿ ಬೇಡಿದೆ ರೆಕ್ಕೆ ಬಿಚ್ಚಿ ಹಾರಿ ಬಾರೋ
ಅತ್ತ ಇತ್ತ ಸುತ್ತ ಮುತ್ತ ಏಕೇ ನೋಡುವೇ ಪ್ರೀತಿಯಿಂದ ಸೇರು ಬಾರೋ
ಮೆತ್ತ ಮೆತ್ತಗೇ ಸಿಕ್ಕಿಕೊಳ್ಳುವೇ ಸವಿಯ ಹೀರೂ ಬಾರೋ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡು ನನ್ನನ್ನೂ ಪ್ರೇಮವನ್ನೂ ಬೇಡಿ ಬಂದೇ
ಒಂಟಿ ಬಾಳು ತಂಟೇ ಮಾಡೀ ಕಾಡಿದಾಗಲೇ ನಿನ್ನ ಬಯಸೀ ಓಡಿ ಬಂದೇ
ಒಪ್ಪಿಕೊಂಡರೇ ಅಪ್ಪಿಕೊಳ್ಳುವೇ ಬಳಸೀ ತಾಳಲಾರೇ ವಿರಹ ವಿರಹ ವಿರಹ ವಿರಹ
ಸೌಂದರ್ಯ ನೋಡು ನನ್ನ ತಾರುಣ್ಯ ನಿನಗೇನೇ ಎಲ್ಲಾ
ಆಆಆ... ಲಲಲಲಲಾ ಆಹಾಹಾಹಾ ಲಲಲಲಲಾ
ಬೀದಿಯಿಂದ ಬೆಂದ ಭೂಮಿ ನೀರೂ ಬೇಡಿದೆ ಧಾರೇಯಾಗಿ ಬಾರೋ ನೀನೂ
ದಾಹದಿಂದ ನೊಂದ ಜೀವ ತಂಪೂ ಕೇಳಿದೇ ಜಯಮಣಿಯ ತಾರೋ ನೀನೂ
ಚಿತ್ತ ಮೋಹನ ನಿತ್ಯ ಔತಣ ಬಯಕೇ ಕಂಡೇ ನಾನೂ
ನನಗೂ ಕೊಟ್ಟು ಆಸೆ ಗುಟ್ಟೂ ರಟ್ಟು ಮಾಡಿದೇ ಸ್ನೇಹ ದೋಣಿ ಮೋಡಿ ಮಾಡೂ
ಭೀತಿ ಬಿಟ್ಟೂ ಸಲಿಗೆ ಕೊಟ್ಟೂ ಕಟ್ಟು ನನ್ನನ್ನೂ ಆಗ ಸ್ವರ್ಗ ಇಲ್ಲಿ ನೋಡೋ
ಮೆಲ್ಲ ಮೆಲ್ಲನೇ ನಲ್ಲ ತಲ್ಲಣ ಮರೆಸು ಹೇಳಲಾರೇ ವಿರಹ ವಿರಹ ವಿರಹ ವಿರಹ
ಸೌಂದರ್ಯ ನೋಡು ನನ್ನ ತಾರುಣ್ಯ ನಿನಗೇನೇ ಎಲ್ಲಾ
ನೀ ನೀಡು ಆಲಿಂಗನಾ ಈ ತಾಪ ತಾಳೇ ನಾ ವಿರಹ ವಿರಹ ವಿರಹ ವಿರಹ
ಸೌಂದರ್ಯ ನೋಡು ನನ್ನ ತಾರುಣ್ಯ ನಿನಗೇನೇ ಎಲ್ಲಾ
------------------------------------------------------------------------------------------------------------------------
ಗಣೇಶನ ಮದುವೇ (೧೯೯೦) - ಪ್ರೇಮದ ಶ್ರುತಿ ಮೀಟಿದೆ
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಜಯಚಂದ್ರನ್, ಎಸ್.ಜಾನಕೀ
ಹೆಣ್ಣು : ಪ್ರೇಮದ ಶ್ರುತಿ ಮೀಟಿದೆ ಭಾವದ ಅಲೇ ತೇಲಿದೆ
ಹೃದಯ ಹೃದಯ ಬೆರೆತಿದೇ ಹಳೆಯ ವಿರಸ ಮರೆಸಿದೇ
ಮನವೂ ತುಂಬಿ ಕವಿತೆ ಹಾಡಿದೇ... ಆಆಆ..
ಗಂಡು : ಪ್ರೇಮದ ಶ್ರುತಿ ಮೀಟಿದೆ ಭಾವದ ಅಲೇ ತೇಲಿದೆ
ಹೃದಯ ಹೃದಯ ಬೆರೆತಿದೇ ಹಳೆಯ ವಿರಸ ಮರೆಸಿದೇ
ಮನವೂ ತುಂಬಿ ಕವಿತೆ ಹಾಡಿದೇ... ಆಆಆ..
ಹೆಣ್ಣು : ಪ್ರೇಮದ ಶ್ರುತಿ ಮೀಟಿದೆ
ಗಂಡು : ಭಾವದ ಅಲೇ ತೇಲಿದೆ
ಗಂಡು : ಅನುದಿನ ಬಯಸಿದ ಕನಸಿನ ಕನ್ಯೆಯ ಅಂದು ಕಾಣದೇ ಇಂದೂ ನೋಡಿದೇ ನನ್ನ ಜೀವ ಹೂವಾಗಿದೇ
ಹೆಣ್ಣು : ಒಲವಿನ ಬರಹದ ಮನವನು ತೆರೆಸಿದ ಇಂದೂ ನೋಡದ ನನ್ನ ಪ್ರೇಮಿಯಾ ಕಂಡು ಮೋಹ ಮೈಯ್ಯಿ ತುಂಬಿದೇ
ಗಂಡು : ಆಆಆ.. ಪ್ರೇಮದ ಶ್ರುತಿ ಮೀಟಿದೆ ಭಾವದ ಅಲೇ ತೇಲಿದೆ
ಹೆಣ್ಣು : ಹೃದಯ ಹೃದಯ ಬೆರೆತಿದೇ ಹಳೆಯ ವಿರಸ ಮರೆಸಿದೇ
ಗಂಡು : ಮನವೂ ತುಂಬಿ ಕವಿತೆ ಹಾಡಿದೇ... ಆಆಆ..
ಗಂಡು : ಮನವೂ ತುಂಬಿ ಕವಿತೆ ಹಾಡಿದೇ... ಆಆಆ..
ಹೆಣ್ಣು : ಪ್ರೇಮದ ಶ್ರುತಿ ಮೀಟಿದೆ ಭಾವದ ಅಲೇ ತೇಲಿದೆ
ಗಂಡು : ಮೌನ ರಾಗದಲ್ಲಿ ಅನುರಾಗ ನೀನೂ ತಂದೇ ಎದೆಯ ಮಿಡಿಸಿ ಮಧುರಗೀತೆ ಒಲಿದೇ
ನೂರು ಆಸೇ ತಂದೇ ಕಂಪೂ ಬೀರಿ ನಿಂತೇ ಬಾಳ ಹಾದಿ ನಿನಗೇ ಕಾದಿದೇ...
ಹೆಣ್ಣು : ಬಾಳ ಬಾನಿನಲ್ಲಿ ಶಶಿಯಂತೇ ಮೂಡಿ ಬಂದೇ ಬೆಳಕು ಹರಡಿ ಬದುಕಿನಲ್ಲಿ ಸುಳಿದೇ
ಪ್ರಣಯದಾಸೇ ಏನೂ ಮಿಲನವಾಗದೇನೂ ಜೋಡಿಯಾಗಿ ಸೇರಿ ಸಾಗುವಾ
ಗಂಡು : ಎಂದೆಂದೂ ಒಂದಾಗುವಾ..
ಹೆಣ್ಣು : ಆಆಆ.. ಪ್ರೇಮದ ಗಂಡು : ಶ್ರುತಿ ಮೀಟಿದೆ
ಗಂಡು : ಭಾವದ ಹೆಣ್ಣು : ಅಲೇ ತೇಲಿದೆ
ಗಂಡು : ಹೃದಯ ಹೃದಯ ಬೆರೆತಿದೇಹೆಣ್ಣು : ಹಳೆಯ ವಿರಸ ಮರೆಸಿದೇ
ಇಬ್ಬರು: ಮನವೂ ತುಂಬಿ ಕವಿತೆ ಹಾಡಿದೇ... ಆಆಆ.. ಆಆಆ..
ಪ್ರೇಮದ ಶ್ರುತಿ ಮೀಟಿದೆ ಭಾವದ ಅಲೇ ತೇಲಿದೆ...
------------------------------------------------------------------------------------------------------------------------
No comments:
Post a Comment