1121. ಗರುಡ ಧ್ವಜ (೧೯೯೧)

ಗರುಡ ಧ್ವಜ ಚಿತ್ರದ ಹಾಡುಗಳು 
  1. ರಂಪಂಪಾ ರಂಪಂಪಾ ಪ್ರೀತಿಸು ಯಾರಿಲ್ಲಾ ರಂಪಂಪ 
  2. ಓ ಚೆಲುವೇ  ನಗುತಾ ಇರು ನೀ ಸೋದರಿಯೇ ಸುಖವಾಗಿರು ನೀ 
  3. ಓ.. ಜೀವಾ ಓ..ಜೀವಾ ಬಾ ಈಚೆ ಬಡಜೀವಾ 
  4. ಜುಮ್ಮಾ ಜುಮ್ಮಾ ಜುಮ್ಮಾ ಸ್ವಾತಿ ಮಳೆ ನಮ್ಮ 
ಗರುಡ ಧ್ವಜ (೧೯೯೧) - ರಂಪಂಪ ರಂಪಂಪ ಪ್ರೀತಿಸು ಯಾರಿಲ್ಲಾ 
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಮಂಜುಳಾಗುರುರಾಜ 

ಹೆಣ್ಣು : ರಂಪಂಪಾ ರಂಪಂಪಾ ಪ್ರೀತಿಸು ಯಾರಿಲ್ಲ ರಂಪಂಪಾ
ಗಂಡು : ರಂಪಂಪಾ ರಂಪಂಪಾ ಪ್ರೀತಿಗೇ ಹೊತ್ತಿಲ್ಲ ರಂಪಂಪಾ
ಹೆಣ್ಣು : ರಂಪಂಪಾ ರಂಪಂಪಾ ಪ್ರೀತಿಸು ಯಾರಿಲ್ಲ ರಂಪಂಪಾ
ಗಂಡು : ರಂಪಂಪಾ ರಂಪಂಪಾ ಪ್ರೀತಿಗೇ ಹೊತ್ತಿಲ್ಲ ರಂಪಂಪಾ
ಹೆಣ್ಣು : ಹೊತ್ತು ಹುಟ್ಟೋದು ಎಲ್ಲಾ ಚಿಂತೆ ಹೊತ್ತುಕೊಂಡು
          ಕಾಲ ಕಳೆಯೋಣ ಸ್ವಲ ಪ್ರೀತಿ ಮೆತ್ತಿಕೊಂಡು
ಗಂಡು : ರಂಪಂಪಾ ರಂಪಂಪಾ ಪ್ರೀತಿಗೇ ಹೊತ್ತಿಲ್ಲ ರಂಪಂಪಾ
ಹೆಣ್ಣು : ರಂಪಂಪಾ ರಂಪಂಪಾ ಪ್ರೀತಿಸು ಯಾರಿಲ್ಲ ರಂಪಂಪಾ

ಗಂಡು : ನೋಡು ಗಡಿಯಾರದಲ್ಲಿ ಎಷ್ಟು ಅಂಕಿ ಇದೆ ಇಲ್ಲಿ ಪ್ರೀತಿ ಒಂದೇ ಸಂಖ್ಯೆ ಜಾರಿಲ್ಲಿದೆ
            ನೋಡು ಗಡಿಯಾರದಲ್ಲಿ ಎಷ್ಟು ಅಂಕಿ ಇದೇ ಇಲ್ಲಿ ಪ್ರೀತಿ ಒಂದೇ ಸಂಖ್ಯೆ ಜಾರಿಲ್ಲಿದೆ
ಹೆಣ್ಣು : ಹಾರೋ ಹಕ್ಕಿಗಳ ನೋಟ ನೋಡಿದರೆ ನಾನು ನೀನು ಹಾಗೆ ಹಾರುವ ಆಸೇ
          ಜೋಡಿ ಮೀನುಗಳ ಸರಸ ನೋಡಿದರೇ ನೀರಿನಲ್ಲಿ ಹಾಗೇ ಈಜುವ ಆಸೇ
ಗಂಡು : ಹೇಳುವೇ ಆಣೆ ಇಟ್ಟು  ಆಣೆಕಟ್ಟು ಕಟ್ಟಿದ ಹುಡುಗನು ನಾ ಕೈಯಲಿ ಕೈಯನಿಟ್ಟು
            ಹೇಳುವೇ ಕೇಳು ಗುಟ್ಟು ನೀ ನನ್ನ ಪ್ರಾಣವೆಂದೇ
ಹೆಣ್ಣು : ರಂಪಂಪಾ ರಂಪಂಪಾ ಪ್ರೀತಿಸು ಯಾರಿಲ್ಲ ರಂಪಂಪಾ
ಗಂಡು : ರಂಪಂಪಾ ರಂಪಂಪಾ ಪ್ರೀತಿಗೇ ಹೊತ್ತಿಲ್ಲ ರಂಪಂಪಾ

ಗಂಡು : ಬೆವರು ಹಣೆಯಲಿ ನಡುಕ ತುಟಿಯಲಿ ಕಣ್ಣಿನಲಿ ಮಾತ್ರ ಏನದೋ ಮಾತು 
           ಉಗುರು ಕಡಿಯುವ ಬಳುಕಿ ನಡೆಯುವ ನಡೆಸೇ ಏನು ಅರ್ಥ ಹೇಳಲೇ ಸೋತು 
ಹೆಣ್ಣು : ಬಾಯಲ್ಲಿ ಹೇಳೋದಲ್ಲ ತಾನಾಗೇ ಕೇಳೋದಲ್ಲ ಪ್ರೀತಿಯ ಒಗ್ಗಟ್ಟು ಇದು 
          ಹೂವಿನ ಹಾಗೆ ನಾನು ಬಣ್ಣಿಸು ತುಂಟಾಟ ಓಡೋದು ಇದು 
ಗಂಡು : ರಂಪಂಪಾ ರಂಪಂಪಾ ಪ್ರೀತಿಗೇ ಹೊತ್ತಿಲ್ಲ ರಂಪಂಪಾ
ಹೆಣ್ಣು : ರಂಪಂಪಾ ರಂಪಂಪಾ ಪ್ರೀತಿಸು ಯಾರಿಲ್ಲ ರಂಪಂಪಾ
ಗಂಡು : ಹೊತ್ತು ಹುಟ್ಟೋದು ಎಲ್ಲಾ ಚಿಂತೆ ಹೊತ್ತುಕೊಂಡು
ಹೆಣ್ಣು :  ಕಾಲ ಕಳೆಯೋಣ ಸ್ವಲ ಪ್ರೀತಿ ಮೆತ್ತಿಕೊಂಡು
ಗಂಡು : ರಂಪಂಪಾ ರಂಪಂಪಾ ಪ್ರೀತಿಗೇ ಹೊತ್ತಿಲ್ಲ ರಂಪಂಪಾ
ಹೆಣ್ಣು : ರಂಪಂಪಾ ರಂಪಂಪಾ ಪ್ರೀತಿಸು ಯಾರಿಲ್ಲ ರಂಪಂಪಾ
--------------------------------------------------------------------------------------------------------------------------

ಗರುಡ ಧ್ವಜ (೧೯೯೧) - ಓ.. ಚೆಲುವೇ ನಗುತಾ ಇರು ನೀ ಸೋದರಿಯೇ 
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. 

ಓ ಚೆಲುವೇ ನಗುತಾ ಇರು ನೀ ಸೋದರಿಯೇ ಸುಖವಾಗಿರೂ ನೀ
ಈ ವರನೇ ನಿನಗೇ ಬಹುಮಾನ ಈ ಹರಕೆ ನಿನಗೆ ಬಾಗಿನಾ
ಓ ಚೆಲುವೇ ನಗುತಾ ಇರು ನೀ ಸೋದರಿಯೇ ಸುಖವಾಗಿರೂ ನೀ
ಈ ವರನೇ ನಿನಗೇ ಬಹುಮಾನ ಈ ಹರಕೆ ನಿನಗೆ ಬಾಗಿನಾ

ನಿತ್ಯ ನೂತನ ನಿತ್ಯ ಪಾವನ ಒಂದೇ ಬಳ್ಳಿಯ ಈ ಅಣ್ಣ ತಂಗಿಯ ಅನುರಾಗ ಬಂಧನ
ನಿತ್ಯ ನಿರ್ಮಲ ನಿತ್ಯ ಕೋಮಲ ತಂಗಿ ಎನ್ನುವ ಮಾತಲಿ ಚಿಮ್ಮುವ ಅಪರೂಪದ ಭಾವನ
ಚಂದಮಾಮನ ಬಣ್ಣ ಆ ಬಣ್ಣದ ತಂಗಿಯ ಅಣ್ಣ ನಾನಿರುವೇ ನಾನಿರುವೇ ಕಾವಲಿಗೇ
ಓ ಚೆಲುವೇ ನಗುತಾ ಇರು ನೀ ಸೋದರಿಯೇ ಸುಖವಾಗಿರೂ ನೀ
ಈ ವರನೇ ನಿನಗೇ ಬಹುಮಾನ ಈ ಹರಕೆ ನಿನಗೆ ಬಾಗಿನಾ

ತಾಳಿ ಬಾಳಮ್ಮ ತಾಳಿಯೊಂದಿಗೆ ಮುಕವಾಗಮ್ಮ ಈ ಲೋಕದೊಂದಿಗೇ ತೌರೂರಿನ ಗೌರಿ ನೀ
ತಾಯಿಯಾಗಮ್ಮ ಲಾಲಿ ಹಾಡಮ್ಮ ಗಂಡನೊಂದಿಗೇ ಆ ಬಂಧು ಮಿತ್ರರ ವಾತ್ಸಲ್ಯದಿ ನೋಡಮ್ಮ
ಏನು ನೀಡದ ಅಣ್ಣ ಎಂದೂ ಬೈಯದಿರೇನ ಈ ಉಸಿರ ನೀಡಿರುವೇ ಉಡುಗರೆಗೆ
ಓ ಚೆಲುವೇ ನಗುತಾ ಇರು ನೀ ಸೋದರಿಯೇ ಸುಖವಾಗಿರೂ ನೀ
ಈ ವರನೇ ನಿನಗೇ ಬಹುಮಾನ ಈ ಹರಕೆ ನಿನಗೆ ಬಾಗಿನಾ
--------------------------------------------------------------------------------------------------------------------------

ಗರುಡ ಧ್ವಜ (೧೯೯೧) - ಓ.. ಜೀವಾ .. ಓ.. ಜೀವಾ... ಬಾ ಈಚೆ ಬಡಜೀವ 
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. 

ಓ..  ಜೀವಾ ಓ.. ಜೀವಾ ಬಾ ಈಚೆ ಬಡಜೀವ ಓ..ಜೀವಾ ಓ...ಜೀವಾ ತಾ ಈಚೆ ಒಳನೋವ
ಭಾರತದ ಮಹಾಭಾರತ ಕೇಳೋ ಓ.. ಜೀವಾ ನ್ಯಾಯ ಧರ್ಮ ನೀತಿಗೆ ನೆಲಯಿಲ್ಲ
ಖಾಕಿ ಖಾದಿ ಕಾವಿಗೆ ಬೆಲೆಯಿಲ್ಲ
ಓ..  ಜೀವಾ ಓ.. ಜೀವಾ ಬಾ ಈಚೆ ಬಡಜೀವ ಓ..ಜೀವಾ ಓ...ಜೀವಾ ತಾ ಈಚೆ ಒಳನೋವ

ಹಲವರಿಗಂಜಿ ಗರಿಗರಿಗಂಜಿ ಸಮವಸ್ತ್ರವ ಹಾಕಿ ಗಂಜಿಗೆ ಕಡುವ ಮಾಡುವ ಜನವ ಸೆರೆಮನೆಯಲ್ಲಿ ನೂಕಿ 
ವೇಶ್ಯವಿಟರ ನಡುವೆ ಡ್ಯೂಟಿಲಿದೆ ಖಾಕಿ ದೇಶ ಸುಲಿಯುವ ಜನಕೆ ಶಿಕ್ಷೆ ಇದೇ ಬಾಕಿ 
ಲಂಚ ಕೊಟ್ಟರೆ ತಾಯಿ ತಂದೆ ದೇಶವ ಮಾರುವರು ಯಾರೋ ಯಾರವರೂ ಎಲ್ಲಾ ನಮ್ಮವರೂ 
ಓ..  ಜೀವಾ ಓ.. ಜೀವಾ ಬಾ ಈಚೆ ಬಡಜೀವ ಓ..ಜೀವಾ ಓ...ಜೀವಾ ತಾ ಈಚೆ ಒಳನೋವ

ಜನಗಳ ಕಾಡಿ ಕೊಲೆಗಳ ಮಾಡೋ ಕಳ್ಳರು ಗೊತ್ತೇನು 
ನ್ಯಾಯದ ಕಣ್ಣ ವಂಚಿಸಿ ಕಟ್ಟೋ ಬಣ್ಣವೂ ಗೊತ್ತೇನು 
ನಾಲಿಗೆಯೊಳಗೇ ಚೂರಿ ಮೈಮೇಲೆ ಖಾದಿ ಜನಗಳ ಕಣ್ಣಿಗೇ ಬೂದಿ ಯಾಮರಿಸಿ ಊದಿ 
ಅಕ್ಕಿ ರಾಗಿ ಹಂಚಲು ಇವರು ಆಗಸ ತೋರುವರೂ ಯಾರೋ ಯಾರವರೂ ಎಲ್ಲಾ ನಮ್ಮವರೂ 
ಓ..  ಜೀವಾ ಓ.. ಜೀವಾ ಬಾ ಈಚೆ ಬಡಜೀವ ಓ..ಜೀವಾ ಓ...ಜೀವಾ ತಾ ಈಚೆ ಒಳನೋವ

ಮನೆ ಮನೆಯೊಳಗೇ ಜಾತಿಯ ಮಡಿಗೆ ಮನ ಮೌಢ್ಯದ ಬಾವಿ 
ಮನಸಿಗೆ ರೋಗ ಬುದ್ದಿಗೆ ಬೀಗ ಕಿಲುಬಿಡಿದಿದೆ ಚಾವಿ 
ಧರ್ಮ ಕರ್ಮದ ಮರ್ಮ ಬಿಡಿಸೆಳೋ ಕಾವಿ ದೇಶ ಕಾಯಲು ಬರೆದೆ ತಾನು ಆಗಿದೆ ಆವಿ 
ದರ್ಪ ಕೊಟ್ಟರೇ ಸರ್ಪದ ಹಾಗೇ ಕೈಯನೇ ಕಡಿಯುವರು ಯಾರೋ ಯಾರವರೂ ಎಲ್ಲಾ ನಮ್ಮವರೂ 
ಓ..  ಜೀವಾ ಓ.. ಜೀವಾ ಬಾ ಈಚೆ ಬಡಜೀವ ಓ..ಜೀವಾ ಓ...ಜೀವಾ ತಾ ಈಚೆ ಒಳನೋವ
ಭಾರತದ ಮಹಾಭಾರತ ಕೇಳೋ ಓ.. ಜೀವಾ ನ್ಯಾಯ ಧರ್ಮ ನೀತಿಗೆ ನೆಲಯಿಲ್ಲ
ಖಾಕಿ ಖಾದಿ ಕಾವಿಗೆ ಬೆಲೆಯಿಲ್ಲ
ಓ..  ಜೀವಾ ಓ.. ಜೀವಾ ಬಾ ಈಚೆ ಬಡಜೀವ ಓ..ಜೀವಾ ಓ...ಜೀವಾ ತಾ ಈಚೆ ಒಳನೋವ
--------------------------------------------------------------------------------------------------------------------------

ಗರುಡ ಧ್ವಜ (೧೯೯೧) - ಜುಮ್ಮಾ.. ಜುಮ್ಮಾ.. ಜುಮ್ಮಾ.. ಸ್ವಾತಿ ಮಳೆ ನಮ್ಮ 
ಸಂಗೀತ ಸಾಹಿತ್ಯ : ಹಂಸಲೇಖ ಗಾಯನ : ಎಸ್.ಪಿ.ಬಿ. ಮಂಜುಳಾಗುರುರಾಜ 

ಗಂಡು : ಜುಮ್ಮಾ ಜುಮ್ಮಾ ಜುಮ್ಮಾ ಸ್ವಾತಿ ಮಳೆ ನಮ್ಮ
            ಜುಮ್ಮಾ ಜುಮ್ಮಾ ಜುಮ್ಮಾ ಅಂದ ನೆನೆವುದಮ್ಮ
            ನಿಲ್ಲೋದಿಲ್ಲ ಮಳೆ ನಿಲ್ಲೋದಿಲ್ಲ ಮರೆಯಿದೆ ಅಲ್ಲಿ ಬಾ ಬಾ ಬಾ
ಹೆಣ್ಣು : ಜುಮ್ಮಾ ಜುಮ್ಮಾ ಜುಮ್ಮಾ ಮಳೆ ಪ್ರಾಯಕೆ ಅಮ್ಮ
          ಜುಮ್ಮಾ ಜುಮ್ಮಾ ಜುಮ್ಮಾ ಬಾರೋ ಕಾಮನ ತಮ್ಮ
          ಬಿಡೋದಿಲ್ಲ ನಿನ್ನ ಬಿಡೋದಿಲ್ಲ ಕುಣಿ ಕುಣಿ ಇಲ್ಲಿ ಬಾ ಬಾ

ಗಂಡು : ಭೂಮಿಗೂ ಮಳೆಯ ನೀರಿಗೂ ನೀರಿಗೂ ಕರೆವ ಕಡಲಿಗೂ ಮೋಹವಂತೆ ಮೋಹದಲ್ಲಿ ಪ್ರೇಮವಂತೇ
ಹೆಣ್ಣು : ಮನಸಿಗೂ ಬೆಳೆವ ವಯಸ್ಸಿಗೂ ವಯಸ್ಸಿಗೂ  ಕನಸಿಗೂ ಸ್ವಾರ್ಥವಂತೇ ಸ್ವಾರ್ಥದಲ್ಲೂ ಅರ್ಥವಂತೇ
ಗಂಡು : ಮಳೆಯಲಿ ಚಿಗುರು ಅರಳುವಂತೆ ಮನದಲಿ ಬಯಕೆ ಚಿಗುರಿತಂತೇ
            ಮಧುವಲಿ ದುಂಬಿ ಕೂರುವಂತೇ ತುಟಿಯಲಿ ತುಟಿಯು ಸೇರಲು
            ನಂದು ನಿಂದು ಇಂದು ಒಂದೇ ಚಿಂತೆ ಮುತ್ತು ಚಿಂತೆಗೆ ಕೊನೆಯಂತೆ
ಹೆಣ್ಣು : ಜುಮ್ಮಾ ಜುಮ್ಮಾ ಜುಮ್ಮಾ ಮಳೆ ಪ್ರಾಯಕೆ ಅಮ್ಮ
          ಜುಮ್ಮಾ ಜುಮ್ಮಾ ಜುಮ್ಮಾ ಬಾರೋ ಕಾಮನ ತಮ್ಮ
          ಬಿಡೋದಿಲ್ಲ ನಿನ್ನ ಬಿಡೋದಿಲ್ಲ ಕುಣಿ ಕುಣಿ ಇಲ್ಲಿ ಬಾ ಬಾ

ಹೆಣ್ಣು : ಪ್ರೇಮಕೆ ನೀನು ಅಮೃತ ಪ್ರಣಯಕೇ ನೀನೇ ಮನ್ಮಥ ನಿನ್ನ ಸನಿಹ ಬೇಕು ಪುನಃ ಹೇಳು ಬದಲು 
ಗಂಡು : ಕುಡಿಯಲು ನೀನು ಮಧುರಸ ಸವಿಯಲು ನೀನು ನವರಸ 
            ನನ್ನ ಒಡಲು ಚೆಲುವ ಕಡಲು ಹೇಳು ಬದಲು 
ಹೆಣ್ಣು : ಧರಣಿಗೆ ಭರಣಿ ಮಳೆಯ ಚಿಂತೆ ತರುಣಿಗೆ ಇನಿಯ ಬರುವ ಚಿಂತೇ 
          ಹೆಗಲಿಗೆ ಏಕೆ ನೂರು ಚಿಂತೆ ಗಳಿಗೆಗೆ ಏಕೆ ನೂರು ಮುತ್ತಿಡೋ ಪ್ರಿಯ ಪ್ರಿಯಾ 
          ನೀನು ತುಂಬ ಪ್ರಿಯಾ ಇಡೀ ಬಾಯಿಗೆ ಮುತ್ತಿನ ಕಂತೆ 
ಗಂಡು : ಜುಮ್ಮಾ ಜುಮ್ಮಾ ಜುಮ್ಮಾ ಸ್ವಾತಿ ಮಳೆ ನಮ್ಮ
            ಜುಮ್ಮಾ ಜುಮ್ಮಾ ಜುಮ್ಮಾ ಅಂದ ನೆನೆವುದಮ್ಮ
            ನಿಲ್ಲೋದಿಲ್ಲ ಮಳೆ ನಿಲ್ಲೋದಿಲ್ಲ ಮರೆಯಿದೆ ಅಲ್ಲಿ ಬಾ ಬಾ ಬಾ
ಹೆಣ್ಣು : ಜುಮ್ಮಾ ಜುಮ್ಮಾ ಜುಮ್ಮಾ ಮಳೆ ಪ್ರಾಯಕೆ ಅಮ್ಮ
          ಜುಮ್ಮಾ ಜುಮ್ಮಾ ಜುಮ್ಮಾ ಬಾರೋ ಕಾಮನ ತಮ್ಮ
          ಬಿಡೋದಿಲ್ಲ ನಿನ್ನ ಬಿಡೋದಿಲ್ಲ ಕುಣಿ ಕುಣಿ ಇಲ್ಲಿ ಬಾ ಬಾ 
--------------------------------------------------------------------------------------------------------------------------

No comments:

Post a Comment