ಘರ್ಜನೆ ಚಲನಚಿತ್ರದ ಹಾಡುಗಳು
- ಬಂದೆಯ ಬಂದೆಯ ನೀ ಈ ಕಡೆಗೇ
- ಹಿತವಾಗಿದೇ ಸುಖವಾಗಿದೇ ಹಾಯಾಗಿದೇ ನನಗೀಗ
- ಕಣ್ಣ ಮಿಂಚಿಂದ ಬರದೇ ಹೋಯ್ ನನ್ನ ಎದೆಯಲ್ಲಿ ಕವಿತೇ ..
- ನಡೆವಾಗ ನೀ ನಡೆವಾಗ ಆ ಲತೆಯಂತೇ ನಡುವೂ ಕುಣಿವಾಗ
- ನನ್ನ ರೂಪ ಸೊಗಸೂ ನನ್ನ ಮಾತೂ ಸೊಗಸೂ
ಘರ್ಜನೆ (೧೯೮೧) - ಬಂದೆಯ ಬಂದೆಯ ನೀ ಈ ಕಡೆಗೇ
ಸಂಗೀತ : ಇಳಯರಾಜ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಹೆಣ್ಣು : ಲಲಲಲಾ ಲಾಲಲಲಲಾ ಲಲಲಾ
ಬಂದೆಯ ಬಂದೆಯ ನೀ ಈ ಕಡೆಗೇ .. ಬಂದೆಯ ಸಿಂಹದ ಈ ಗುಹೆಗೇ
ಊರೆಲ್ಲಾ.. ಹುಡಾಕಾಡಿ ಎಲ್ಲೆಲ್ಲೂ ಅಲೆದಾಡಿ...
ಹಸಿವಿಂದೂ ಪರದಾಡಿ.. ನೀ ಬಂದೇ ಇಲ್ನೋಡೀ ...
ಕೋರಸ್ : ಇನ್ನಾಯ್ತು ನಿನ್ನ ಕಥೆಯೂ
ಎಲ್ಲರು : ತಂದನ ತಂದನ ತಂದನನನ ಹೆಣ್ಣು : ಜಾರುತ ಬಿದ್ದನೂ ಈ ತರುಣ
ಎಲ್ಲರು : ತಂದನ ತಂದನ ತಂದನನನ ಹೆಣ್ಣು : ಜಾರುತ ಬಿದ್ದನೂ ಈ ತರುಣ
ಹೆಣ್ಣು : ಮೋಹವಿದೇ ದಾಹವಿದೆ ಕಂಗಳಲೇ ಕಾಣುತಿದೇ
ದೂರದಿರೇ ಕಾಡುತಿಹ ಆಸೆಗಳೂ ತಿರುವುದೇ..
ನಾಳೇ ನೀನೂ ಕಾಣಲಾರೇ .. (ಕಾಣಲಾರೇ .. )
ಈ ಸಮಯ ಜಾರಿದರೇ ಕಾಲವನೂ ದೂಡಿದರೇ
ಸುಖದಾ ಮಾತೂ ಇಲ್ಲ ನಾಳೇ ನೀನೇ ಇಲ್ಲ..
ಎಲ್ಲರು : ತಂದನ ತಂದನ ತಂದನನನ ಜಾರುತ ಬಿದ್ದನೂ ಈ ತರುಣ
ಎಲ್ಲರು : ತಂದನ ತಂದನ ತಂದನನನ ಜಾರುತ ಬಿದ್ದನೂ ಈ ತರುಣ
ಗಂಡು : ನಾಳೆಯನು ಹೇಳುವರು ಯಾರಿಹರೂ ಎಲ್ಲಿಹರೂ
ಪಕ್ಕದಲೇ ಸಾವಿರಲೂ ಕಾಣದೇನೇ ಹಾಡುವರೂ
ಮುಂದೆಯೇನೋ ಬಲ್ಲೇ ನಾನೂ ಬಲ್ಲೇ ನಾನೂ...
ಕೋಟೆಯನು ಏರಿದವ ಬೇಟೆಯನು ಆಡದಲೇ
ಬೆದರಿ ಹೋಗೋನಲ್ಲ ನಿನ್ನ ಉಳಿಸೋನಲ್ಲಾ
ಬಂದೇನೂ ಬಂದೇನೂ ನಾ ಆ ಕಡೆಗೇ ಬಂದೇನೂ ಸಿಂಹದ ಈ ಗುಹೆಗೇ
ಊರೆಲ್ಲಾ.. ಹುಡಾಕಾಡಿ (ತನನನನನನನ) ನಾ ಬಂದೇ ಇಲ್ನೋಡೀ ...(ಆಆಆ)
ಇನ್ನಾಯ್ತು ನಿನ್ನ ಕಥೆಯೂ
ತಂದನ ತಂದನ ತಂದನನನ ಎಂದಿಗೂ ಬೀಳನು ಈ ತರುಣ
ತಂದನ ತಂದನ ತಂದನನನ ತಂದನ ತಂದನ ತಂದನನನ
-----------------------------------------------------------------------------------------------------
ಘರ್ಜನೆ (೧೯೮೧) - ಹಿತವಾಗಿದೇ ಸುಖವಾಗಿದೇ ಹಾಯಾಗಿದೇ ನನಗೀಗ
ಸಂಗೀತ : ಇಳಯರಾಜ ಸಾಹಿತ್ಯ : ಚಿ.ಉದಯಶಂಕರ ಗಾಯನ : ಜಯಚಂದ್ರನ್, ಎಸ್.ಜಾನಕೀ
ಗಂಡು : ಹಿತವಾಗಿದೇ .. ಸುಖವಾಗಿದೇ.. ಹಾಯಾಗಿದೇ .. ನನಗೀಗ
ಹೆಣ್ಣು : ಹಿತವಾಗಿದೇ .. ಸುಖವಾಗಿದೇ.. ಹಾಯಾಗಿದೇ .. ನನಗೀಗ
ಗಂಡು : ನಿನ್ನಲ್ಲಿ ನಾನಗೀ ಕನಸೆಲ್ಲ ನನಸಾಗಿ ಸವಿಜೇನ ಕಡಲಲ್ಲಿ ತೇಲಾಡಲೂ ..
ಹೆಣ್ಣು : ಹಿತವಾಗಿದೇ .. ಸುಖವಾಗಿದೇ.. ಹಾಯಾಗಿದೇ .. ನನಗೀಗ
ಹೆಣ್ಣು : ಹೂವಿನಲಿ ಕಂಪೂ ಗಾಳಿಯಲೀ ತಂಪೂ ರಾಗದ ಇಂಪಿಗೇ ಸೋತೇನೂ ನಾನೂ
ಗಂಡು : ಹೂವಿನಲಿ ಕಂಪೂ ಗಾಳಿಯಲೀ ತಂಪೂ ರಾಗದ ಇಂಪಿಗೇ ಸೋತೇನೂ ನಾನೂ
ಹೆಣ್ಣು : ಒಲವಾ ತೋರು ಸನಿಹ ಸೇರೂ..
ಗಂಡು : ಒಲವಾ ತೋರು ಸನಿಹ ಸೇರೂ..
ಹೆಣ್ಣು : ಕಣ್ಣಲ್ಲಿ ಕಣ್ಣನ್ನೂ ಬೆರೆಸು ತುಂಬಲೂ ಕಾಣದ ಸೊಗಸೂ
ಗಂಡು : ಕಾಮನ ಬಿಲ್ಲನೂ ಏರುವ ಜಾರುವ ಅನುಭವ ಹೊಂದುವೇ ಬಾ..
ಹಿತವಾಗಿದೇ .. ಸುಖವಾಗಿದೇ.. ಹಾಯಾಗಿದೇ .. ನನಗೀಗ
ಹೆಣ್ಣು : ನಿನ್ನಲ್ಲಿ ನಾನಗೀ ಕನಸೆಲ್ಲ ನನಸಾಗಿ ಸವಿಜೇನ ಕಡಲಲ್ಲಿ ತೇಲಾಡಲೂ ..
ಹಿತವಾಗಿದೇ .. ಸುಖವಾಗಿದೇ.. ಹಾಯಾಗಿದೇ .. ನನಗೀಗ
ಗಂಡು : ಸ್ನೇಹದಲೀ ಬಂದೇ.. ಆಸೆಯೇನೂ ತಂದೇ.. ಪ್ರೀತಿಯ ಆನಂದ ತೋರುವೇ ಎಂದೇ
ಹೆಣ್ಣು : ಸ್ನೇಹದಲೀ ಬಂದೇ.. ಆಸೆಯೇನೂ ತಂದೇ.. ಪ್ರೀತಿಯ ಆನಂದ ತೋರುವೇ ಎಂದೇ
ಗಂಡು : ಗೆಳತೀ ನಿನ್ನಾ ನುಡಿಯೇ ಚೆನ್ನಾ..
ಹೆಣ್ಣು : ಗೆಳೆಯಾ ನಿನ್ನಾ ನುಡಿಯೇ ಚೆನ್ನಾ..
ಗಂಡು : ಎದುರಲೀ ನೀನಿರೇ ಚೆನ್ನಾ (ಅಹ್ಹಹ್ಹ) ನಗುತಿರೇ ಇನ್ನೂ ಚೆನ್ನಾ
ಹೆಣ್ಣು : ನಲ್ಲೆಯ ಮಾತಲಿ ನಲ್ಲೆಯೂ ಸೇರಲೂ ನುಡಿಯುತ ಬಾ ಜಾಣ
ಹಿತವಾಗಿದೇ .. (ಸುಖವಾಗಿದೇ).. ಹಾಯಾಗಿದೇ .. ನನಗೀಗ
ಗಂಡು : ನಿನ್ನಲ್ಲಿ ನಾನಗೀ ಕನಸೆಲ್ಲ ನನಸಾಗಿ
ಹೆಣ್ಣು : ಸವಿಜೇನ ಕಡಲಲ್ಲಿ ತೇಲಾಡಲೂ ..
ಗಂಡು : ಹಿತವಾಗಿದೇ .. (ಸುಖವಾಗಿದೇ)
ಇಬ್ಬರು : ಹಾಯಾಗಿದೇ .. ನನಗೀಗ
-----------------------------------------------------------------------------------------------------
ಸಂಗೀತ : ಇಳಯರಾಜ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಕೋರಸ್ : ಲಲಲಲಲಲಲಾ ಲರಲರಲರಲರಲರಲಾ
ಹೆಣ್ಣು : ಲಲಲಲಲ್ಲಲ್ಲಲಲಲಾ ಹೋಯ್ ಲಲಲಲಲ್ಲಲ್ಲಲಲಲಾ
ಗಂಡು : ಲಲಲಲರರಲಾರಾ ಲಾಲಲಲಲರರರಾ
ಹೆಣ್ಣು : ಕಣ್ಣ ಮಿಂಚಿಂದ ಬರದೇ ಹೋಯ್ ನನ್ನ ಎದೆಯಲ್ಲಿ ಕವಿತೇ ..
ಗಂಡು : ಕಣ್ಣ ಮಿಂಚಿಂದ ಬರದೇ ಹೋಯ್ ನನ್ನ ಎದೆಯಲ್ಲಿ ಕವಿತೇ ..
ಹೆಣ್ಣು : ಮುದ್ದಾದ ಮಾತಿಂದ ಹಿತವಾಗಿ ಒಲವಿಂದ
ಗಂಡು : ಮುದ್ದಾದ ಮಾತಿಂದ ಹಿತವಾಗಿ ಒಲವಿಂದ
ಕಣ್ಣ ಮಿಂಚಿಂದ ಬರದೇ ಹೋಯ್ ನನ್ನ ಎದೆಯಲ್ಲಿ ಕವಿತೇ ..
ಕೋರಸ್ : ಲಲಲಲಲಲಲಾ ಲರಲರಲರಲರಲರಲಾ ಲಾ ಲಾ ಲಾ
ಗಂಡು : ಪ್ರೀತಿಯ ನುಡಿಯಲಿ ಜೇನಿನ ಸವಿಯ ಕಂಡೂ ಬೆರಗಾದೇ ..
ಆತುರ ತಳಮಳ ಕಾಡಲೂ ನನ್ನಾ ಸೋತೂ ಹಣ್ಣಾದೆ
ಪ್ರೀತಿಯ ನುಡಿಯಲೀ ಜೇನಿನ ಸವಿಯ ಕಂಡೂ ಬೆರಗಾದೇ
ಆತುರ ತಳಮಳ ಕಾಡಲೂ ನನ್ನಾ ಸೋತೂ ಹಣ್ಣಾದೆ
ಹೆಣ್ಣು : ಕೂಗುತಿದೇ ಹೊಸ ಆಸೆಗಳೂ ಕೂಡುತಿವೇ ಹೊಸ ರೋಮಗಳೂ
ಸ್ನೇಹ ಮೋಹ ಸೇರಿ ಇಂದೂ ತಂದೇ ನಾನೂ ಆನಂದ.. ತಂದೇ ನಾನೂ ಆನಂದ..
ಗಂಡು : ಕಣ್ಣ ಮಿಂಚಿಂದ ಬರದೇ ಹೋಯ್ ನನ್ನ ಎದೆಯಲ್ಲಿ ಕವಿತೇ ..
ಹೆಣ್ಣು : ಲಲಲಲಲ್ಲಲ್ಲಲಲಲಾ ಹೋಯ್ ಲಲಲಲಲ್ಲಲ್ಲಲಲಲಾ
ಕೋರಸ್ : ಆ ಆ ಆ ಆ ಆ .. ಆ ಆ ಆ ಆ ಆ .. ಆ ಆ ಆ ಆ ಆ ..
ಹೆಣ್ಣು : ಪ್ರೇಮದ ಸಂಜೆಯ ಮೀನುಗಳಾಗಿ ಸೇರಿ ಈಜೋಣ
ಪ್ರೀತಿಯ ಗಗನದಿ ಹಕ್ಕಿಗಳಾಗಿ ಕೂಡಿ ಹಾರೋಣ
ಪ್ರೇಮದ ಸಂಜೆಯ ಮೀನುಗಳಾಗಿ ಸೇರಿ ಈಜೋಣ
ಪ್ರೀತಿಯ ಗಗನದಿ ಹಕ್ಕಿಗಳಾಗಿ ಕೂಡಿ ಹಾರೋಣ
ಗಂಡು : ನೋಡುವ ಬಾ ಹೊಸ ಲೋಕವನೂ ಕಾಣುವೇ ಬಾ ಹೊಸ ಸ್ವರ್ಗವನೂ
ಹಗಲೋ ಇರುಳೋ ಬಿಸಿಲೋ ನೆರಳೋ ಎಲ್ಲಾ ಒಂದೇ ನಮಗೀಗಾ.. ಎಲ್ಲಾ ಒಂದೇ ನಮಗೀಗಾ..
ಹೆಣ್ಣು : ಕಣ್ಣ ಮಿಂಚಿಂದ ಬರದೇ ಹೋಯ್ ನನ್ನ ಎದೆಯಲ್ಲಿ ಕವಿತೇ ..
ಗಂಡು : ಮುದ್ದಾದ ಮಾತಿಂದ ಹಿತವಾಗಿ ಒಲವಿಂದ
ಹೆಣ್ಣು : ಮುದ್ದಾದ ಮಾತಿಂದ ಹಿತವಾಗಿ ಒಲವಿಂದ
ಇಬ್ಬರು : ಲಲಲಲಲ್ಲಲ್ಲಲಲಲಾ ಹೋಯ್ ಲಲಲಲಲ್ಲಲ್ಲಲಲಲಾ
ಲಲಲಲಲ್ಲಲ್ಲಲಲಲಾ ಹೋಯ್ ಲಲಲಲಲ್ಲಲ್ಲಲಲಲಾ
-----------------------------------------------------------------------------------------------------
ಸಂಗೀತ : ಇಳಯರಾಜ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಕೋರಸ್
ಕೋರಸ್ : ಆಆಆಅ ತರರರೂರೂ ತರರರೂರೂ ತರರರೂರೂ ತರರರೂರೂ
ಗಂಡು : ನಡೆವಾಗ ನೀ ನಡೆವಾಗ ಆ ಲತೆಯಂತೇ ನಡುವೂ ಕುಣಿವಾಗ
ನಡೆವಾಗ ನೀ ನಡೆವಾಗ ಆ ಲತೆಯಂತೇ ನಡುವೂ ಕುಣಿವಾಗ
ಹಿತವಾಗಿ ನಗುವಾಗ.. ಹಿತವಾಗಿ ನಗುವಾಗ.. ಹೋಯ್ ನೋಡೋಕೇ ಎಂಥಾ ಸೊಗಸಾಗ
ನಡೆವಾಗ ನೀ ನಡೆವಾಗ ಆ ಲತೆಯಂತೇ ನಡುವೂ ಕುಣಿವಾಗ
ಕೋರಸ್ : ಆಆಆಅ ಆಆಆಅ ಆಆಆಅ ಆಆಆಅ ಆಆಆಅ ಆಆಆಅ
ಗಂಡು : ಎದುರಲ್ಲಿ ನೀ ಕುಳಿತಾಗ ಆ ಕಣ್ಣಲ್ಲೇ ನನ್ನ ಕೊಲ್ಲುವಾಗ
ಎದುರಲ್ಲಿ ನೀ ಕುಳಿತಾಗ ಆ ಕಣ್ಣಲ್ಲೇ ನನ್ನ ಕೊಲ್ಲುವಾಗ
ಹಿತವಾದ ನೋವಾ ಕಂಡೆನ್ನ ಜೀವಾ ಆನಂದವೆಂದಾಗ
ತನುವಲ್ಲಿ ಮಿಂಚಾಗ ಮನದಲ್ಲಿ ಅನುರಾಗ
ಎದೆಯಲ್ಲಿ ವೀಣೆ ಮಿಡಿದಂತೇ ಭಾವನೇ ಹಿತವಾದ ಮೋಹನ ರಾಗ
ನಡೆವಾಗ ನೀ ನಡೆವಾಗ ಆ ಲತೆಯಂತೇ ನಡುವೂ ಕುಣಿವಾಗ
ಮೆದುವಾಗಿ ನಗುವಾಗ .. ಮೆದುವಾಗಿ ನಗುವಾಗ.. ಹೋಯ್ ನೋಡೋಕೇ ಎಂಥಾ ಸೊಗಸಾಗ
ನಡೆವಾಗ ನೀ ನಡೆವಾಗ ಆ ಲತೆಯಂತೇ ನಡುವೂ ಕುಣಿವಾಗ
ಕೋರಸ್ : ಆಆಆಅ ತಾನಂ ತಾನಂ ತಾನಂ ತಾನಂ ತಾನಂ ತಾನಂ ತಾನಂ
ಗಂಡು : ಹಾಲ್ಗಡಲ ಹೊನ್ನಾವರೆಯೂ ಈ ಭೂಮಿಗೇ ಇಳಿದಾ ಊರ್ವಶಿಯೋ
ಹಾಲ್ಗಡಲ ಹೊನ್ನಾವರೆಯೂ ಈ ಭೂಮಿಗೇ ಇಳಿದಾ ಊರ್ವಶಿಯೋ
ಸೌಂದರ್ಯವೆಲ್ಲಾ ಒಂದಾಗಿ ಸೇರಿ ಹೆಣ್ಣಾಗಿ ನಿಂತಿದೆಯೋ
ಹೇಳೋಕೇ ಮಾತಿಲ್ಲಾ... ನಾನೇನೋ ಕವಿ ಅಲ್ಲಾ...
ನಿನ್ನಿಂದ ಇನ್ನೂ ದೂರಾಗಿ ಇರಲೂ ಸನ್ಯಾಸೀ ನಾನೇನಲ್ಲಾ.. ಹೋಯ್
ನಡೆವಾಗ ನೀ ನಡೆವಾಗ ಆ ಲತೆಯಂತೇ ನಡುವೂ ಕುಣಿವಾಗ
ಮೆದುವಾಗಿ ನಗುವಾಗ .. ಹ್ಹಾ ಮೆದುವಾಗಿ ನಗುವಾಗ.. ಹೋಯ್ ನೋಡೋಕೇ ಎಂಥಾ ಸೊಗಸಾಗ
ನಡೆವಾಗ ನೀ ನಡೆವಾಗ ಆ ಲತೆಯಂತೇ ನಡುವೂ ಕುಣಿವಾಗ
-----------------------------------------------------------------------------------------------------
ಘರ್ಜನೆ (೧೯೮೧) - ನನ್ನ ರೂಪ ಸೊಗಸೂ ನನ್ನ ಮಾತು ಸೊಗಸೂ
ಸಂಗೀತ : ಇಳಯರಾಜ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಂ
ನನ್ನ ರೂಪ ಸೊಗಸೂ ನನ್ನ ಮಾತೂ ಸೊಗಸೂ
ನನ್ನ ರೂಪ ಸೊಗಸೂ ಆ.. ನನ್ನ ಮಾತೂ ಸೊಗಸೂ
ಆ.. ಹೊಳೆವ ಮಿಂಚೂ ಕಣ್ಣಲೀ ಈ
ಸೆಳೆವ ಕೆಂಪೂ ತುಟಿಯಲಿ ಹೊನ್ನ ಮೈಯ್ಯ ಬಣ್ಣ ನೋಡೂ ಎಂಥಾ ಚೆನ್ನಾ ..
ನನ್ನ ರೂಪ ಸೊಗಸೂ ಆ.. ನನ್ನ ಮಾತೂ ಸೊಗಸೂ...
(ಅಹ್ಹಹ್ಹಾ.. ಹ್ಹೀಹ್ಹೀಹ್ಹೀಹ್ಹೀಹ್ಹಾ .. ಅಹ್ಹಹ್ಹಹ್ಹಾ ಹ್ಹೀಹ್ಹೀಹ್ಹೀಹ್ಹೀಹ್ಹಾ .. )
ನಿಧಾನವೂ ಕುಣೀಪತೇ ನೋಡಲ್ಲಿ ಆಟವಾ
ಸಂತೋಷವೂ ಬೇಕಾದರೇ ನೋಡೂ ಈ ಮೈಯ್ಯ ಮಾಟವ
ಸವಿನುಡಿ ಕೇಳದೇನೋ.. ಸವಿನುಡಿ ಕೇಳದೇನೋ ಹೊಸತನ ಬೇಡವೇನೋ
ಮನಸಿನ ಆಸೆಯ ಗೆಳೆಯನೇ ಹೇಳೆಯಾ ಚಿಂತೆ ಬಿಟ್ಟೂ ಇನ್ನೂ ಸೇರೂ ನನ್ನ ನೀನೂ
ನನ್ನ ರೂಪ ಸೊಗಸೂ ಆ.. ನನ್ನ ಮಾತೂ ಸೊಗಸೂ...
(ಅಹ್ಹಹ್ಹಾ.. ಹ್ಹೀಹ್ಹೀಹ್ಹೀಹ್ಹೀಹ್ಹಾ .. ಹ್ಹೀಹ್ಹೀಹ್ಹೀಹ್ಹೀಹ್ಹಾ .. )
ನಿನ್ನಾ ಮುಂದೇ ಸಾವೂನಂಟೂ ಬಾ ಎಂದೂ ಕೂಗಿದೇ
ಅಲ್ಲಿ ಇಲ್ಲೀ .. ನೊಡೋದೇನೋ ನೀ ಸಮಯ ನೂಕದೇ
ಸರಸರದೇ ಸೇರೋ ನನ್ನ.. ಆ ..ಆ .. ಆ .. ಆ ..
ಸರಸರದೇ ಸೇರೋ ನನ್ನ ಸಲಿಗೆಯ ಕೂಡು ಚಿನ್ನ
ಮರಣದ ವೇದನೇ ಮರೆಸುವೇ ಜಾಣನೇ
ಇಂಥಾ ಹೆಣ್ಣೂ ಬಿಟ್ಟೂ ಹೋಗಾಗೇ ಏ ಕೆಟ್ಟೂ
ನನ್ನ ರೂಪ ಸೊಗಸೂ ಆ.. ನನ್ನ ಮಾತೂ ಸೊಗಸೂ
ಆ.. ಹೊಳೆವ ಮಿಂಚೂ ಕಣ್ಣಲೀ ಈ
ಸೆಳೆವ ಕೆಂಪೂ ತುಟಿಯಲಿ ಹೊನ್ನ ಮೈಯ್ಯ ಬಣ್ಣ ನೋಡೂ ಎಂಥಾ ಚೆನ್ನಾ ..
ನನ್ನ ರೂಪ ಸೊಗಸೂ ಆ.. ನನ್ನ ಮಾತೂ ಸೊಗಸೂ...
----------------------------------------------------------------------------------------------------
No comments:
Post a Comment