1085. ಗೌರಿ ಗಣೇಶ (೧೯೯೧)


ಗೌರಿ ಗಣೇಶ ಚಿತ್ರದ ಹಾಡುಗಳು 
  1. ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ 
  2. ಒಂದು ಊರಲ್ಲಿ ಒಬ್ಬ ಚೆಲುವೆಯು 
  3. ನಿಮ್ಮ ಮಗುವು ನಗುತಿರುವ 
  4. ಡ್ಯಾಡಿ ಡ್ಯಾಡಿ ಡ್ಯಾಡಿ 
ಗೌರಿ ಗಣೇಶ (೧೯೯೧) - ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ರಾಜೇಶ ಕೃಷ್ಣನ 

ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ

ಮೋಡಿ ಹಾಕಿ ಬದುಕಬಲ್ಲೆ ಬಿತ್ತಿ ಊಟ ಗಿಟ್ಟಿಸಬಲ್ಲೆ
ಸುಳ್ಳಿಗೆ ಸಂಚಿಗೆ ತಕ್ಕ ಕಾಲ ಕಂತ್ರಿ ಜನರ ಬುದ್ದಿ ಬಲ್ಲೆ
ಮಂಕಬೂದಿ ಎರಚಬಲ್ಲೆ ಮಡ್ಡಿಗೆ  ಒಡ್ದುವೆ ನನ್ನ ಗಾಳ
ಮೋಸವು ದ್ವೇಷಕ್ಕೆ ದ್ವೇಷವು ನಿಮ್ಮಾಣೆ ನಾ ಸತ್ಯ ಹೇಳುವೇ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ

ಮೋಸವೊಂದೇ ಧ್ಯೇಯವಲ್ಲ ಬಿಟ್ಟಿ ಸಿಕ್ಕರೇ ನಾ ಬಿಡೋದಿಲ್ಲ 
ಬಿಟ್ಟರೆ ಸಿಕ್ಕಾನು ಇಂಥ ಜಾಣ ಲೋಕಕೆಲ್ಲ ಒಬ್ಬನೇ ಧೀರ 
ಬುದ್ದಿವಂತ ಲಂಬೋಧರ ಶೆಟ್ಟಿಗೆ ಬಿಟ್ಟಲೇ ಪಟ್ಟಣ 
ಛಾನ್ಸಗೇ ಕಾಯುವೇ ಬಾಣವ ಹೂಡುವೇ ಸಿಕ್ಕಾಗ ಸಿಕ್ಕಷ್ಟು ನೀಡುವೇ 
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
--------------------------------------------------------------------------------------------------------------------------

ಗೌರಿ ಗಣೇಶ (೧೯೯೧) - ಒಂದು ಊರಲ್ಲಿ ಒಬ್ಬ ಚೆಲುವೆಯು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಸು.ರುದ್ರಮೂರ್ತಿ ಶಾಸ್ತ್ರಿ ಗಾಯನ : ಅತ್ರಿ 

ಒಂದು ಊರಲ್ಲಿ ಒಬ್ಬ ಚೆಲುವೆಯು ಆ ಚೆಲುವೇ ಹೆಸರು ಗೌರಿ
ತಾಯಿ ಇಲ್ಲದೆ ಮಲತಾಯಿ ಸೆರೆಯಲಿ ಬೆಳೆಯುತ್ತಿದ್ದಾಳಾ ನಾರಿ

ಪಾಪದ ಹುಡುಗಿಗೆ ರೂಪವಾಯಿತು ಶಾಪ ಹೂವಿಗೆ ತಟ್ಟಿತು ಬೇಸಿಗೆಯ ತಾಪ
ಅಪ್ಪನ ಮುತ್ತಿತು ಬಂದು ಮೃತ್ಯು ಕೂಪ ತೋರಿದಳು ಮಲತಾಯಿ ರಾಕ್ಷಸಿ ರೂಪ
ಗೌರಿ ಪ್ರಾಯ ದುಷ್ಟ ತಾಯ್ ಕಣ್ಣ್ ಕುಕ್ಕಲೂ ಅವಳ ಶೀಲ ಮಾರುವಂಥ ಸಂಚು ನಡೆಯಲು
ಗೌರಿ ಪ್ರಾಯ ದುಷ್ಟ ತಾಯ್ ಕಣ್ಣ್ ಕುಕ್ಕಲೂ ಅವಳ ಶೀಲ ಮಾರುವಂಥ ಸಂಚು ನಡೆಯಲು
ನೀತಿ ತಪ್ಪದ ಹೆಣ್ಣು ಅವಳು ಅನ್ಯಾಯ ತಾಳದೆ ನೊಂದಳು
ಶೀಲವತಿಯ ತನ್ನ ಮನೆಯ ತೊರೆದಳು ಗೂಡು ಸಿಕ್ಕದಂತ ಹಕ್ಕಿಯಾದಳು

ಸ್ನೇಹಿತೆ ಒಬ್ಬಳು ತೋರಿಸಿ ಅಕ್ಕರೆ ಗೌರಿಗೆ ಕೊಟ್ಟಳು ಸ್ನೇಹದ ಆಸರೆ
ಸ್ನೇಹಿತೆ ತೋರಿದ ಕರುಣೆಯಿಂದಲೇ ಸಿಕ್ಕಿತು ಒಂದೆಡೆ ನೌಕರಿ ನೆಲೆ
ಏನು ಹೇಳಲಿ ಅವಳಿದ್ದ ಜಾಗದಿ ಯಜಮಾನನೊಬ್ಬ ಕಾಮಣ್ಣನು
ದಾಹ ಕಂಗಳ ಆನಂದರಾಯನು ಈ ಹಕ್ಕಿ ಕಂಡು ಗಿಡುಗನಾದನು
ಮಾಯೆಯ ದಾಸ ಆನಂದರಾಯ ಮೂಢ ಇರುಳಲಿ ನಡೆದುದು ಎಲ್ಲವೂ ನಿಗೂಢ
ಮಾಯೆಯ ದಾಸ ಆನಂದರಾಯ ಮೂಢ ಇರುಳಲಿ ನಡೆದುದು ಎಲ್ಲವೂ ನಿಗೂಢ

ಕಾಮ ಬಾಣದ ಆ ಗುರಿಯು ತಪ್ಪಿತು ಈ ಹಕ್ಕಿ ದಕ್ಕಲಿಲ್ಲ ಕೊನೆಗೂ
ಯಾರು ತಿಳಿಯದ ಈ ರಹಸ್ಯವೂ ಈ ಡೈರಿಯೊಳಗೆ ದಾಖಾಲಾಯಿತು
ಈ ಕಥೆಗೆ ಒಂದು ಸ್ಫೂರ್ತಿಯಾಯಿತು

ಇಲ್ಲಿಗೂ ಮುಗಿಯಲಿಲ್ಲ ಗೌರಿಯ ಕಥೆ ವಿಧಿಯ ಕೈ ಬರೆಯಿತು ಮುಂದಿನ ವ್ಯಥೆ
ರೋಗದ ರೂಪದಿ ಬಂದಿತು ವಿಧಿ ಸೋತಿತು ಗೌರಿಯ ಹೃದಯದ ಸ್ಥಿತಿ
ಪ್ರಾಣ ಸ್ನೇಹಿತೆ ಪ್ರಾಣ ಉಳಿಸಲು ಸ್ನೇಹಿತೆಯರು ಪಾಡುಪಟ್ಟರು
ಹಣವು ಇಲ್ಲದೇ ಎಲ್ಲ ದಿಕ್ಕಲೂ ಸಹಾಯ ಬೇಡಿ ಪತ್ರ ಬರೆದರು

ತಾಳಿ ಕಟ್ಟದೇ ಸಪ್ತಪದಿಯ ತುಳಿಯದೇ ಗೌರಿ ಜನರ ಮುಂದೆ ವಧುವು ಆದಳು
ಮದುವೆ ಎನ್ನುವ ಕಪಟ ನಾಟಕದಲ್ಲಿ ಗೌರಿ ಒಬ್ಬ ಪಾತ್ರಧಾರಿಯಾದಳು
ಏನೋ ಮಾಡಲೆಂದು ಹೋಗಿ ಏನೋ ಆಯಿತೇ ನಿಂತಿತಲ್ಲೇ ಸುಳ್ಳು ಮದುವೆ ಆರತಕ್ಷತೆ
ತಂದೆಯನ್ನು  ಕಾಣಲೆಂದು ಚಂದ್ರಮೌಳಿಯು ದುಃಖದಿ ವಿಮಾನದಲ್ಲಿ ಪಯಣ ಹೊರಟನು
ಕಾದು ಎರಗಿತೋ ಘೋರ ಧುರ್ವಿಧಿ  ಪಾಶ ಬೀಸಿ ಸಾವ ತಂದು ಸೆಳೆಯಿತವನನು
ಇಲ್ಲಿಯೂ ನಡೆಯಿತು ಒಂದು ವಿಚಿತ್ರ ವಿಧಿಯು ಕೈ ಬರೆಯಿತು ಮೂರನೇ ಪಾತ್ರ

ಮಿತಿಯ ಮೀರುತ ಮಿತ್ರ ಮಧುವು ಕುಡಿದನು ತನ್ನ ಕೋಣೆ ದಾರಿ ಹುಡುಕುತ್ತಿದ್ದನು
ಮದಿರೆ ಅಮಲಿನಲಿ ನವದಂಪತಿ ಗೃಹಕೆ ನುಗ್ಗಿ ಕಂಡನಲ್ಲಿ ಒಂದು ಹೆಣ್ಣನ್ನೂ
ಮದಿರೆಯ ದಾಸ ಮಧುವು ಕೂಡ ಮೂಢ ಇಲ್ಲಿಯೂ ನಡೆದುದು ಎಲ್ಲವೂ ನಿಗೂಢ
ಗಿಣಿಯು ಕಚ್ಚದಂತ ಹೆಣ್ಣು ಗೌರಿ ಆದರೂ ಅದೇ ಹಣ್ಣ ತಿಂದವೆಂದು ಕೊಂಡರೆಲ್ಲರೂ
ಕೆಸರು ಸೋಕದ ಆ ಮುದ್ದು ತಾವರೇ ಗೌರಿ ಕನ್ಯೆಯಾಗಿಯೇ ಉಳಿದಳು
ಕೊನೆಗೂ ಕನ್ಯೆಯಾಗಿಯೇ ಅಳಿದಳು
--------------------------------------------------------------------------------------------------------------------------

ಗೌರಿ ಗಣೇಶ (೧೯೯೧) - ನಿಮ್ಮ ಮಗುವು ನಗುತಿರುವ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಎಂ.ಏನ್.ವ್ಯಾಸರಾವ ಗಾಯನ : ನರಸಿಂಹ ನಾಯಕ್

ನಿಮ್ಮ ಮಗುವು ನಗುತಿರುವ ತೊಟ್ಟಿಲಲ್ಲಿ ಆಡುತಿರುವಾ
ನಿಮ್ಮ ಮಗುವು ನಗುತಿರುವ ತೊಟ್ಟಿಲಲ್ಲಿ ಆಡುತಿರುವಾ
ಗಣೇಶನೆಂಬ ಹೆಸರಿಂದ ಭೂಮಿಗೆ ಬಂದ ಗೌರಿಯ ಕಂದ 
ನಿಮ್ಮ ಮಗುವು ನಗುತಿರುವ ತೊಟ್ಟಿಲಲ್ಲಿ ಆಡುತಿರುವಾ 

ಗೋಪಿಯ ಕಂದ ಕೃಷ್ಣನ ಹಾಗೇ ಈತನ ರೂಪವು ಬಲು ಚೆಂದ 
ಕುಲದ ದೈವಗಳ ಕೃಪೆಯಿಂದ ಬೆಸೆದ ಕರುಳ ಸಂಬಂಧ 
ಮೂರನೇ ತಿಂಗಳು ಟ್ರಿಪಲ್ ಆಂಟಿಜನ್ ಚುಚ್ಚಿಸಿದೇ 
(ಪಾಪ ಎಷ್ಟು ನೋವಾಯಿತೋ ಏನೋ )
ಜೊತೆಯಲ್ಲೇ ಪೋಲಿಯೋ ಡ್ರಾಪನೂ ಕೂಡ ಹಾಕಿಸಿದೇ 
(ಮಗು ರಾತ್ರಿ ಎಲ್ಲಾ ಅಳುತ್ತಾ ಇತ್ತೋ ಏನೋ )
ಸ್ನಾನವ ನಾನೇ ಮಾಡಿಸುವೇ ಜೋಗುಳ ಹಾಡಿ ಮಲಗಿಸುವೇ 
ನಿಮ್ಮಯ ಮುದ್ದಿನ ಕಂದನ ಬೆಳೆಸಲು ಬದುಕನೇ ಮೀಸಲು ಇಟ್ಟಿರುವೇ 
(ನೀನು ಮನುಷ್ಯ ಅಲ್ಲಪ್ಪಾ...  ದೇವರು )
ನಿಮ್ಮ ಮಗುವು ನಗುತಿರುವ ಅಂಬೆಗಾಲನು ಇಡುತಿರುವಾ
ಗಣೇಶನೆಂಬ ಹೆಸರಿಂದ ಭೂಮಿಗೆ ಬಂದ ಗೌರಿಯ ಕಂದ 
ನಿಮ್ಮ ಮಗುವು ನಗುತಿರುವ ಅಂಬೆಗಾಲನು ಇಡುತಿರುವಾ 

ದೀಪವ ಕಂಡು ಮುಟ್ಟಲು ಹೋಗಿ ಈ ದಿನ ಕೈಯನು ಸುಟ್ಟುಕೊಂಡ 
ನಿತ್ಯ ನೀರಿನಲಿ ಇವನಾಟ ಮಣ್ಣು ಕಂಡರೇ ಉರುಳಾಟ 
ಕೂಸುಮರಿ ಬೇಕೇ ಕೂಸುಮರಿ ಎಂದು ಆಡಿಸುವೇ 
(ಅಯ್ಯೋ ನನಗೆ ಆ ಭಾಗ್ಯ ಇಲ್ಲವೇ )
ಅಪ್ಪ ಅಂದರೆ ಸಾಕು ನಿಮ್ಮ ಫೋಟೋ ತೋರಿಸುವೇ 
(ಕರೆಕ್ಟ್ ನಾನ ತಾನೇ ಅವರಪ್ಪ )
ತಿರುಪತಿ ಹರಕೆ ತೀರಿಸಿದೇ ಚೌಲವ ಅಲ್ಲೇ ಮಾಡಿಸಿದೇ 
ಸುತ್ತಮುತ್ತಲ ಮುತ್ತೈದೆಯರ ಕರೆಸಿ ಆರತಿ ಎತ್ತಿಸಿದೇ 
(ಎಷ್ಟು ಶಾಸ್ತ್ರೋಕ್ತವಾಗಿ ಮಾಡಿಸಿದ್ದಾನೆ )
ನಿಮ್ಮ ಮಗುವು ನಗುತಿರುವ ತಪ್ಪು ಹೆಜ್ಜೆ ಇಡುತಿರುವಾ
ಗಣೇಶನೆಂಬ ಹೆಸರಿಂದ ಭೂಮಿಗೆ ಬಂದ ಗೌರಿಯ ಕಂದ 
ನಿಮ್ಮ ಮಗುವು ನಗುತಿರುವ ತಪ್ಪು ಹೆಜ್ಜೆ ಇಡುತಿರುವಾ  

ಸ್ಲೇಟನು ಹಿಡಿದು ಬಳಪವ ಮುರಿದು ಗೀಚುತಾ ಗುನುಗುನು ಅಂತಾನೇ 
ಚಂದಮಾಮನನು ಬರೀತಾನೇ ತಿದ್ದಿ ತೀಡಿ ಕೊಡುತಾನೇ 
ಎ  ಬಿ ಸಿ ಡಿ ಕಲಿಸಲು ಹೋದರೇ ಅಳುತಾನೇ 
(ಅಯ್ಯೋ ಹಾಗಂತ ಆ ಮಗುನ ಹೊಡೆದುಬಿಡಬೇಡಪ್ಪಾ )
ಅ ಆ ಇ ಈ ಅಂದರೇ ಸಾಕು ನಗುತಾನೇ 
(ಭೇಷ್ ! ನನ್ನ ತರನೇ ಕನ್ನಡ ಮೀಡಿಯಂ )
ಕನ್ನಡ ಪ್ರೇಮಿ ಈ ತುಂಟ ಕನ್ನಡ ಮಗ್ಗಿ ಕಂಠಪಾಠ 
ಕೊಟ್ಟರೇ ಕೈಗೇ ಕನ್ನಡ ಬಾವುಟ ಹಾಡಿ ಕುಣಿವ ಕನ್ನಡ ಭಂಟ 
(ಕನ್ನಡ ಚಳುವಳಿಗಾರನೇ ಆಗೋದು )
ನಿಮ್ಮ ಮಗುವು ನಗುತಿರುವ ಎತ್ತಿಕೊಂಡರೇ ಮುತ್ತುಕೊಡುವಾ
ಗಣೇಶನೆಂಬ ಹೆಸರಿಂದ ಭೂಮಿಗೆ ಬಂದ ಗೌರಿಯ ಕಂದ 
ನಿಮ್ಮ ಮಗುವು ನಗುತಿರುವ ಎತ್ತಿಕೊಂಡರೇ ಮುತ್ತುಕೊಡುವಾ 
--------------------------------------------------------------------------------------------------------------------------

ಗೌರಿ ಗಣೇಶ (೧೯೯೧) - ಡ್ಯಾಡಿ ಡ್ಯಾಡಿ ಡ್ಯಾಡಿ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ವಿ.ಮನೋಹರ ಗಾಯನ : ಕುಸುಮಾ

ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು ನನ್ನ ಮುದ್ದು ಡ್ಯಾಡಿ ಐ ಲೈಕ್ ಯು

ಅಜ್ಜ ನಿನ್ನ ಬೆನ್ನ ಮೇಲೆ ಆನೆ ಅಂಬಾರಿ ಮೈಸೂರು ರಾಜ ನಾನೇ ನೀ ನನ್ನ ಸವಾರಿ 
ಅಜ್ಜ ನಿನ್ನ ಬೆನ್ನ ಮೇಲೆ ಆನೆ ಅಂಬಾರಿ ಮೈಸೂರು ರಾಜ ನಾನೇ ನೀ ನನ್ನ ಸವಾರಿ 
ದಸರ ನಡೆಸೋಣ ದರ್ಬಾರು ಮಾಡೋಣ ಜಂಬೂ ಸವಾರಿ ಮೆರವಣಿಗೆ ಹೋಗೋಣ 

ಚುಕುಬುಕು ಚುಕುಬುಕು ರೈಲು ಬಂತು ಹತ್ತಿಕೊಳ್ಳೋಣ 
ಬೊಂಬಾಯಿ ನ್ಯೂಡೆಲ್ಲಿ ನೋಡಿ ಬರೋಣ 
ಸ್ಟುಡಿಯೋಗೆ ಹೋಗೋಣ ಫೋಟೋ ತಗಿಸೋಣ 
ಪಾರ್ಕಿಗೆ ಹೋಗೋಣ ಜೂಜಾಟ ಆಡೋಣ 
ತೋಟದಲಿ ಆಡುತಲಿ ಕಾಲ ಕಳೆಯೋಣ 
ಅಜ್ಜಿ ಅಜ್ಜಿ ಅಜ್ಜಿ ಬಾಳೆಕಾಯಿ ಬಜ್ಜಿ ಕೆನ್ನೆಗೆ ಕೆನ್ನೆ ಉಜ್ಜಿ ಐ ಲವ್ ಯೂ 
ತಾತ ತಾತ ತಾತ ಅಯ್ಯೋ ತಿಂಡಿ ಪೋತ ತಿನ್ನು ಚೌಚೌ ಭಾತ್ ಐ ಲವ್ ಯೂ
ನನ್ನ ಮುದ್ದು ತಾತ ಐ ಲೈಕ್ ಯೂ 

ಮೈ ಡ್ಯಾಡಿ ಬಾ ನಿಂತುಕೋ ಕಣ್ಣನು ನೀ ಕಟ್ಟಿಕೊ
ನಾನು ಎಲ್ಲಿ ಎಂದು ಈಗ ಪತ್ತೆ ಮಾಡು 
(ಡ್ಯಾಡಿ ಅಲ್ಲಲ್ಲ ಈ ಕಡೆ ಬನ್ನಿ ಈ ಕಡೆ )
ಜ್ಯಾಲಿಗೆ ಟೈಮಪಾಸೀಗೆ ಐಸ್ ಪೈಸ್ ನಾವು ಆಡುವಾ 
ಒಂದು ಎರಡು ಮೂರೂ ಎಣಿಸು ನೀನು ನೂರು
ಅವಿತುಕೊಳ್ಳುವೇ ನಾನು ಲೆಕ್ಕ ಮುಗಿದು ನೀನು ನನ್ನ ಹುಡುಕು ಡ್ಯಾಡಿ ಜ್ಯುಟ್...  
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ ನನ್ನ ಮುದ್ದು ಡ್ಯಾಡಿ ಐ ಲೈಕ್ ಯು
ನನ್ನ ಮುದ್ದು ಡ್ಯಾಡಿ ಐ ಲೈಕ್ ಯು
--------------------------------------------------------------------------------------------------------------------------

No comments:

Post a Comment