1194. ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ (೧೯೮೦)

ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ ಚಲನಚಿತ್ರದ ಹಾಡುಗಳು
  1. ನಂಬಿದೆ ನಿನ್ನ ಪಾದಾರವಿಂದ
  2. ಊರೆಲ್ಲ ಬೆಳಕಾಗೊ ದೀಪಾವಳಿ
  3. ನೋಡೋರ ಕಣ್ಣಿಗೆಲ್ಲ ಗುಲಾಬಿ
  4. ಓ ಗುರುವೇ ಪರಮ ಗುರುವೇ ಶರಣಾಗತರ
  5. ಜಯಜಯಹೇ ಗುರು ಸಾರ್ವಭೌಮ
  6. ಊರೆಲ್ಲ ಬೆಳಕಾಗೊ ದೀಪವಾಳಿ 
ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ (೧೯೮೦) - ನಂಬಿದೆ ನಿನ್ನ ಪಾದಾರವಿಂದ
ಸಂಗೀತ : ಎಂ.ರಂಗರಾವ ಸಾಹಿತ್ಯ : ಹುಣುಸೂರಕೃಷ್ಣಮೂರ್ತಿ ಗಾಯನ : ಎಸ್.ಜಾನಕೀ

ನಂಬಿದೆ ನಿನ್ನ ಪಾದಾರವಿಂದ ಬೆಂಬಿಡದಿರು ಶ್ರೀ ರಾಘವೇಂದ್ರ

ಪ್ರಲ್ಹಾದ ಬಾಲ್ಹಿಕ ವ್ಯಾಸರೇನಿಸಿ ಪರಿಪರಿಯಿಂದಲಿ ಹರಿಯ ಸೇವಿಸಿ
ಅಗಣಿತ ಪುಣ್ಯವ ಗಳಿಸಿರುವೇ ಜಗದೊಳು ಹಂಚಲು ಅವತರಿಸಿರುವೆ
ನಂಬಿದೆ ನಿನ್ನ ಪಾದಾರವಿಂದ ಬೆಂಬಿಡದಿರು ಶ್ರೀ ರಾಘವೇಂದ್ರ

ನೊಂದವರ ಭವ ಬಂಧನ ಕಳೆಯಲು ಬೃಂದಾವನದಿ ನೆಲೆಸಿರುವೆ
ಸಂಧಿಸೋ ಭಕುತರ ಕಾಮಧೇನು ಎಂದೆನಿಸಿಹ ಮಹಿಮಾನಮಯನು
ನಂಬಿದೆ ನಿನ್ನ ಪಾದಾರವಿಂದ ಬೆಂಬಿಡದಿರು ಶ್ರೀ ರಾಘವೇಂದ್ರ
--------------------------------------------------------------------------------------------------------------------------

ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ (೧೯೮೦) - ಊರೆಲ್ಲ ಬೆಳಕಾಗೊ ದೀಪಾವಳಿ
ಸಂಗೀತ : ಎಂ.ರಂಗರಾವ ಸಾಹಿತ್ಯ : ಹುಣುಸೂರಕೃಷ್ಣಮೂರ್ತಿ ಗಾಯನ : ಪಿ.ಸುಶೀಲಾ, ಬೆಂಗಳೂರ ಲತಾ

ಊರೆಲ್ಲ ಬೆಳಕಾಗೋ ದೀಪಾವಳಿ ಉಲ್ಲಾಸ ತರುವಂಥ ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ ಲಕುಮಿ ಪೂಜೆ ಪ್ರಭಾವಳಿ

ಬಲಿಯ ಭೂಮಿಗೆ ತುಳಿದ ವಾಮನನ ಪಾದಾರವಿಂದಕೆ ದೀಪಾವಳಿ
ಬೆಳಗಿ ಪುಣ್ಯಗೊಳಿಸುವಂಥ ಲಕುಮಿ ಪೂಜೆ ಪ್ರಭಾವಳಿ
ಊರೆಲ್ಲ ಬೆಳಕಾಗೋ ದೀಪಾವಳಿ ಉಲ್ಲಾಸ ತರುವಂಥ ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ ಲಕುಮಿ ಪೂಜೆ ಪ್ರಭಾವಳಿ

ಚಟಪಟ ಚಟಪಟ ಚಟಪಟ ಪಟಾಕಿ ಹಚ್ಚೋಣ
ಸುರುಸುರು ಸುರುಸುರು ಸುರುಸುರು ಸುರುಬತ್ತಿ ಉರಿಸೋಣ
ಹಚ್ಚೋಣ ದೀಪ ಹಚ್ಚೋಣ ಹಚ್ಚೋಣ ದೀಪ ಹಚ್ಚೋಣ
ಸುಮ್ಮಾನದಿಂದ ಸಂತೋಷದಿಂದ ಹಬ್ಬ ಮಾಡಿ ನಲಿಯೋಣ
ಊರೆಲ್ಲ ಬೆಳಕಾಗೋ ದೀಪಾವಳಿ ಉಲ್ಲಾಸ ತರುವಂಥ ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ ಲಕುಮಿ ಪೂಜೆ ಪ್ರಭಾವಳಿ
ಆಆಆ... ಆಆಆ... ಹಾ.. ಹಾ..
-------------------------------------------------------------------------------------------------------------------------

ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ (೧೯೮೦) - ನೋಡೋರ ಕಣ್ಣಿಗೆಲ್ಲ ಗುಲಾಬಿ
ಸಂಗೀತ : ಎಂ.ರಂಗರಾವ ಸಾಹಿತ್ಯ : ಹುಣುಸೂರಕೃಷ್ಣಮೂರ್ತಿ ಗಾಯನ : ಎಸ್.ಜಾನಕೀ

ನೋಡೋರ ಕಣ್ಣಿಗೆಲ್ಲ ಗುಲಾಬಿ ರಸಹೀರುವ ದುಂಬಿಗೆ ಶರಾಬಿ

ಆಡೋಳು ಹಾಡೋಳು ನವರಸಮಯ ಜಿಲೇಬಿ
ಕೇಳೋರ್ಗೆ .. ಕೂಡೋರ್ಗೆ ರಸಮಯ ನನ್ನ ಹಾಬಿ
ಆಆಆ... ಆಆಆ... ಹಾ.. ಹಾ.. ಆಆಆ... ಆಆಆ... ಹಾ.. ಹಾ..

ಕಣ್ಣೊಳಗಡಗಿದೆ ಕಲೆಗಳ ನೋಟ ಮೈಯೊಳಡಗಿದೆ ಲಾಸ್ಯವ ಮಾಟ
ರಸಗಂಗೆಯಲಿ ಮುಳಿಗಿಸೋ ಆಟ ರಸಿಕರ ಭಾವಕೆ ರಸದೌತಣದ ಊಟ
ನೋಡೋರ ಕಣ್ಣಿಗೆಲ್ಲ ಗುಲಾಬಿ ರಸಹೀರುವ ದುಂಬಿಗೆ ಶರಾಬಿ
ನೋಡೋರ ಕಣ್ಣಿಗೆಲ್ಲ ಗುಲಾಬಿ ರಸಹೀರುವ ದುಂಬಿಗೆ ಶರಾಬಿ
ನೋಡೋರ ಕಣ್ಣಿಗೆಲ್ಲ ಗುಲಾಬಿ ರಸಹೀರುವ ದುಂಬಿಗೆ ಶರಾಬಿ
ಆಡೋಳು ಹಾಡೋಳು ನವರಸಮಯ ಜಿಲೇಬಿ
ಕೇಳೋರ್ಗೆ .. ಕೂಡೋರ್ಗೆ ರಸಮಯ ನನ್ನ ಹಾಬಿ
ಆಆಆ... ಆಆಆ... ಹಾ.. ಹಾ.. ಆಆಆ... ಆಆಆ... ಹಾ.. ಹಾ..
--------------------------------------------------------------------------------------------------------------------------

ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ (೧೯೮೦) - ಓ ಗುರುವೇ ಪರಮ ಗುರುವೇ ಶರಣಾಗತರ
ಸಂಗೀತ : ಎಂ.ರಂಗರಾವ ಸಾಹಿತ್ಯ : ಹುಣುಸೂರಕೃಷ್ಣಮೂರ್ತಿ ಗಾಯನ : ಎಸ್.ಜಾನಕೀ

ಓ ಗುರುವೇ ಪರಮ ಗುರುವೇ ಶರಣಾಗತರ ಕೈ ಬಿಡುವುದು ತರವೇ ...

ಜಪತಪಾದಿಗಳ ವೇಳೆಯಿದೆನೋ ಈ ಪರಿತಾಪವ ಕೇಳೇ ಏನೋ
ಮೂಲ ರಾಮನ ಧಾನ್ಯದಲಿ ಲೋಲನಾಗಿ ಕುಳಿತಿಹೆ ಏನೋ
ಆಲಿಸೆನ್ನ ಮೋರೆ ಪಾಲಿಸೆನ್ನ ದೊರೆ ಪಾರುಗಾಣಿಸೋ ಗುರುವೇ
ದೀನಪಾಲವರ ಗಾನಲೋಲ ಗುರು ಸಾನುರಾಗದಲಿ ಸಲಹೋ ..
ಓ ಗುರುವೇ ಪರಮ ಗುರುವೇ ಶರಣಾಗತರ ಕೈ ಬಿಡುವುದು ತರವೇ ...

ಕಾತುರದಿಂದ ಕಾದಿಹನೆಯ್ಯಾ ಆತುರದಿಂದ ಆಲಿಸು ಜೀಯಾ ಜನ್ಮ ಜನ್ಮಗಳ ಪಾಪ ಕಳೆದು
ಧನ್ಯಳೇನಿಸೋ ಕರುಣಾ ಸಿಂಧೂ ನಿನ್ನ ನಾಮ ಜಪದಲ್ಲಿ ನಿನ್ನ ಪಾದ ಜಲದಲ್ಲಿ
ತುಂಬಿ ತುಳುಕುವ ದಿವ್ಯ ಮಹಿಮೆಯ ಬೆಳಗಿಸೋ ಭರದಲ್ಲಿ
ಓ ಗುರುವೇ ಪರಮ ಗುರುವೇ ಶರಣಾಗತರ ಕೈ ಬಿಡುವುದು ತರವೇ ...

ನಿಷ್ಠೆಯಿಂದ ಸೇವಿಸೋ ಜನಗಳ ಕಷ್ಟ ಕೋಟಿಗಳ ಸುಟ್ಟು
ಅಷ್ಟು ಭೋಗಗಳ ನೀಡಿ ನಲಿಸುವಾ ಶ್ರೇಷ್ಟನೇ ಕಾಯೋ ಕಣ್ಬಿಟ್ಟು
ಮಂಕನಾದ ವೆಂಕಣ್ಣನ ನೀ ಮಂತ್ರಿಯ ಮಾಡಿದ ಗುರುವೇ
ಕೈ ಮಣ್ಣನ್ನಿತ್ತು ಕಡುಬಡವನಾ ಶ್ರೀಮಂತನ ಮಾಡಿದೆ ಪ್ರಭುವೇ
ಅಸುವ ನಿಗಿ ದೇಸಾಯಿಯ ಮಗನು ಮಲಗಿರಲವನಿಗೆ ಅಸುವಿತ್ತೇ
ಓ.. ಯೋಗಿವರೇಣ್ಯ ದೀನ ಶರಣ್ಯ ನನಗೇಕಿಲ್ಲವೋ ಆ ಪುಣ್ಯ
ಮಂಗಳ ತಿಲಕವ ಭಂಗಗೊಳಿಸಿದೆ ಮಾಂಗಲ್ಯವನುಳಿಸೋ ಗುರುದೇವಾ... ಗುರುದೇವಾ..
ಓಂ.. ಶ್ರೀ ರಾಘವೇಂದ್ರಾಯ ನಮಃ ಓಂ.. ಶ್ರೀ ರಾಘವೇಂದ್ರಾಯ ನಮಃ
ಓಂ.. ಶ್ರೀ ರಾಘವೇಂದ್ರಾಯ ನಮಃ
--------------------------------------------------------------------------------------------------------------------------

ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ (೧೯೮೦) - ಶ್ಲೋಕ
ಸಂಗೀತ : ಎಂ.ರಂಗರಾವ ಸಾಹಿತ್ಯ : ಹುಣುಸೂರಕೃಷ್ಣಮೂರ್ತಿ ಗಾಯನ : ಪಿ.ಬಿ.ಎಸ್.

ಆಂಧ್ಹೋಪಿ ದಿವ್ಯ ದೃಷ್ಟಿಷ್ಯ ದೇಡ ಮುಕೋಪಿ ವಾಕಪತಿಹಿ ಪೂರ್ಣಯು ಪೂರ್ಣ
ಸಂಪತ್ತಿಹೀ.. ಸ್ತೋತ್ರಸ್ಯಸ ಜಪಾದ್ಭಾವೇ ಜಪಾದ್ಭಾವೇ
--------------------------------------------------------------------------------------------------------------------------

ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ (೧೯೮೦) - ಜಯಜಯಹೇ ಗುರು ಸಾರ್ವಭೌಮ
ಸಂಗೀತ : ಎಂ.ರಂಗರಾವ ಸಾಹಿತ್ಯ : ಹುಣುಸೂರಕೃಷ್ಣಮೂರ್ತಿ ಗಾಯನ : ಪಿ.ಬಿ.ಎಸ್.

ಜಯ ಜಯಹೇ ಗುರು ಸಾರ್ವಭೌಮ ಜಯ ಜಯ ಸದ್ಗುಣ ಧಾಮ
ಆಶ್ರಿತಾ ಜನಗಳ ಕರುಣಾಸಿಂಧು ರಾಘವೇಂದ್ರ ನೀ ಭಕ್ತರ ಬಂಧು

ರಾಘವೇಂದ್ರ ಯತಿಸಾರ್ವಭೌಮ ದೂರಿತೌಘ ದೂರತೇ ನಮೋ ನಮೋ
ಮಘದರಿಪು ಮತಸಾಗರಮೀನ ಮಹಾಘವಿನಾಶ ನಮೋ ನಮೋ
ಶ್ಲಾಘಿತಗುಣಗುಣ ಸೂರಿಪ್ರಸಂಗ ಸದ್ದಾಮಗ್ನತೆ ನಮೋ ನಮೋ
ಮೇಘ ಶ್ಯಾಮಲ ರಾಮಧಾರಕ ಮೋಘಭೋಧತೆ ನಮೋ ನಮೋ
ಕೋವಿದ ಮಸ್ತಕ ಶೋಭಿತಾಮಣಿ ಸಂಭಾವಿತ ಮಹಿಮಪಾಲಯಾಮಂ
ಸೇವಾಸದ ಸರ್ವಾರ್ಥಪ್ರದ ಬೃಂದಾವನ ಮಂದಿರ ಪಾಲಯಮಾಂ
ಭಾವಜಾಮಾರ್ಗುಣ ಭುಜಗವಿನಾಯಕ ಭಾವಜ್ಞಾಪ್ರಿಯ ಪಲಾಯಮಾಂ
ಕೇವಲನತಜನ ಪಾವನರೂಪ ಸದಾವಿನೋದಿಹೆ ಪಾಲಯಮಾಂ
ಶ್ರೀ ಸುಧೀಂದ್ರ ಕರಜಾತ ನಮೋ ನಮೋ ನಮೋ ನಮೋ
ಭೂಸುರ ವಿನುತೆ ವಿಖ್ಯಾತ ನಮೋ ನಮೋ ಕ್ಲೇಷಿತವರ ಸಂಸೇವ್ಯ ನಮೋ ನಮೋ
ದೋಷದಿ ವರ್ಜಿತಕಾವ್ಯ ನಮೋ ನಮೋ ಕ್ಲೇಷಿತ ಜನ ಪರಿಪಾಲ ನಮೋ ನಮೋ
ಭೂಷಿತ ಕರುಣಾಶೀಲಾ ನಮೋ ನಮೋ ವ್ಯಾಸರಾಯ ಪದಭಕ್ತ ನಮೋ ನಮೋ
ಶಾಸ್ವತ ಧರ್ಮಾಸಕ್ತ ನಮೋ ನಮೋ
ಜಯ ಜಯಹೇ ಗುರು ಸಾರ್ವಭೌಮ ಜಯ ಜಯ ಸದ್ಗುಣ ಧಾಮ
ಆಶ್ರಿತಾ ಜನಗಳ ಕರುಣಾಸಿಂಧು ರಾಘವೇಂದ್ರ ನೀ ಭಕ್ತರ ಬಂಧು
ಜಯ ಜಯಹೇ ಗುರು ಸಾರ್ವಭೌಮ ಜಯ ಜಯ ಸದ್ಗುಣ ಧಾಮ
ಆಶ್ರಿತಾ ಜನಗಳ ಕರುಣಾಸಿಂಧು ರಾಘವೇಂದ್ರ ನೀ ಭಕ್ತರ ಬಂಧು
ಓಂ ಶ್ರೀ ರಾಘವೇಂದ್ರಾಯ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ
ಓಂ ಶ್ರೀ ರಾಘವೇಂದ್ರಾಯ ನಮಃ
ಮುಕೋಪಿ ಯತ್ ಪ್ರಸಾದೇನ ಮುಕುಂದ ಶಯನಾಯತೇ
ರಾಜರಾಜಾಯತೇ ರಿಕ್ತಹ ರಾಘವೇಂದ್ರ ತ್ವಮಾಶ್ರಯೇ..
--------------------------------------------------------------------------------------------------------------------------

ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ (೧೯೮೦) - ಊರೆಲ್ಲ ಬೆಳಕಾಗೊ ದೀಪವಾಳಿ
ಸಂಗೀತ : ಎಂ.ರಂಗರಾವ ಸಾಹಿತ್ಯ : ಹುಣುಸೂರಕೃಷ್ಣಮೂರ್ತಿ ಗಾಯನ : ಎಸ್.ಜಾನಕೀ

--------------------------------------------------------------------------------------------------------------------------

No comments:

Post a Comment