ಹಾವು ಏಣಿ ಆಟ ಚಲನಚಿತ್ರದ ಹಾಡುಗಳು
- ಈ ಯೌವ್ವನ ರೋಮಾಂಚನ
- ಸಂಗತಿ ನಿನಗಾಗಿ ಬಳಿ ಬಾರಾ
- ಕದಡಿದೆ ಒಲವಿನ ಭಾವನೆ
- ಕೈಗೇ ಸಿಕ್ಕರೂ ಬಾಯಿಗೇ ಇಲ್ಲಾ
ಸಂಗೀತ : ವಿಜಯಭಾಸ್ಕರ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಈ ಯೌವ್ವನ ರೋಮಾಂಚನ..
ಈ ಯೌವ್ವನ ಕ್ಷಣ ಕ್ಷಣ ರೋಮಾಂಚನ ಅನುದಿನ ಸಂಮೋಹ ನನಜೀವನ
ಹೆಣ್ಣು : ರಂಗಾಗಿದೇ.. ಮಿಂಚಾಗಿದೇ..
ರಂಗಾಗಿದೇ ತನುಮನ ಮಿಂಚಾಗಿದೇ ಕಣಕಣ ಹೂವಂಥ ಈ ಚೇತನ..
ಗಂಡು : ಈ ಯೌವ್ವನ ಕ್ಷಣ ಕ್ಷಣ ರೋಮಾಂಚನ ಅನುದಿನ ಸಂಮೋಹ ನನಜೀವನ
ಹೆಣ್ಣು : ರಂಗಾಗಿದೇ ತನುಮನ ಮಿಂಚಾಗಿದೇ ಕಣಕಣ ಹೂವಂಥ ಈ ಚೇತನ..
ಹೆಣ್ಣು : ಸ್ನೇಹ ಗಂಗೇ ಸುರಿ ಮಹಡಿಯಲೀ ಮೋಹ ಗಂಧ ಸವಿಸವಿ ನಗಲೀ ಮಾನಸ ಸೌಧ ಕಂಡೇ
ಗಂಡು : ಜೀವ ಭಾವ ನಲಿನಲಿಯುತಲೀ .. ಪ್ರೀತಿ ಗಾಳಿ ಬಳಿ ಸುಳಿಯುತಲೀ.. ಮೋಹದ ರಾಗ ಮಿಂದೇ
ಹೆಣ್ಣು : ನಾನೇ ಭೊಮಿ .. ನೀನೇ ಬಾನೂ ..
ನಾನೇ ಭೊಮಿ .. ನೀನೇ ಬಾನೂ ..
ಗಂಡು : ಒಲುಮೆಯೇ ಸಿಹಿ ಜೇನೂ
ಹೆಣ್ಣು : ಈ ಯೌವ್ವನ ಕ್ಷಣ ಕ್ಷಣ ರೋಮಾಂಚನ ಅನುದಿನ ಸಂಮೋಹ ನನಜೀವನ
ಗಂಡು : ರಂಗಾಗಿದೇ ತನುಮನ ಮಿಂಚಾಗಿದೇ ಕಣಕಣ ಹೂವಂಥ ಈ ಚೇತನ..
ಗಂಡು : ಮಾತು ಮೀರಿ ನಗೆ ಅರಳುತಿದೇ .. ಪ್ರೇಮಾ ಕೋರಿ ಬಗೆ ಕೇರಳುತಿದೆ ತೀರದ ಆಸೇ ಬಂದೇ
ಹೆಣ್ಣು : ಮಾಲಾ ಆಗಿ ಎಲೆ ತಿಳಿಯುತಿದೆ ಪ್ರೀತಿ ದೀಪ ಸೆಳೆಸೆಳೆಯುತಿದೇ ಆಸರೇ ಬೇಡಿ ಇಂದೂ
ಗಂಡು : ನಾನೇ ತಾನ ನೀನೇ ಗಾನ...
ನಾನೇ ತಾನ ನೀನೇ ಗಾನ
ಹೆಣ್ಣು : ಅರಿತರೇ ಸುಖ ಸ್ನಾನ
ಗಂಡು : ಈ ಯೌವ್ವನ ಕ್ಷಣ ಕ್ಷಣ ರೋಮಾಂಚನ ಅನುದಿನ ಸಂಮೋಹ ನನಜೀವನ
ಹೆಣ್ಣು : ರಂಗಾಗಿದೇ ತನುಮನ ಮಿಂಚಾಗಿದೇ ಕಣಕಣ ಹೂವಂಥ ಈ ಚೇತನ..
-------------------------------------------------------------------------------------------------------
ಹಾವು ಏಣಿ ಆಟ (೧೯೮೫) - ಸಂಗತಿ ನೀನಾಗಿ ಬಳಿ ಬಾರಾ
ಸಂಗೀತ : ವಿಜಯಭಾಸ್ಕರ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ವಾಣಿಜಯರಾಂ
ಹೆಣ್ಣು : ಆ ಆಆ.. ಆ ಆಆ... ಆ ಆಆ...
ಸಂಗಾತಿ ನೀನಾಗಿ ಬಳಿ ಬಾರಾ ಒಂದಾಗಿ ಸಿಂಗಾರ ಸುಖ ತೋರೋ
ಈ ಜೀವ ಕುದಿಯುತಿದೆ.. ಈ ಭಾವ ಮಿಡಿಯುತಿದೇ..
ಮನಸಿನಲಿ.. ಕನಸಿನಲಿ.. ಬಯಕೆಯಲಿ ...
ಸಂಗಾತಿ ನೀನಾಗಿ ಬಳಿ ಬಾರಾ ಒಂದಾಗಿ ಸಿಂಗಾರ ಸುಖ ತೋರೋ
ಹೆಣ್ಣು : ಬಾನೆಲ್ಲಾ ಮೀಟುತಾ.. ಮಳೆಬಿಲ್ಲ ಜೀಕುತಾ .. ಸಂಚಾರ ಸಾಗಿರಲೂ .. ಆಆಆ..
ಬಾನೆಲ್ಲಾ ಮೀಟುತಾ.. ಮಳೆಬಿಲ್ಲ ಜೀಕುತಾ .. ಸಂಚಾರ ಸಾಗಿರಲೂ .. ಆಆಆ..
ಎಲ್ಲೆಲ್ಲೋ ಕಾದಿ.. ಮೈ ದಾಹ ಕೂಗಿ.. ನಿನ್ನನ್ನೇ ಹುಡುಕುತಿದೆ ಬಾ.. ಬಾ ...
ಸಂಗಾತಿ ನೀನಾಗಿ ಬಳಿ ಬಾರಾ ಒಂದಾಗಿ ಸಿಂಗಾರ ಸುಖ ತೋರೋ .. ಆಹಾ..
ಹೆಣ್ಣು : ತಂಗಾಳೀ ತೀಡಲೂ.. ಕಾಲ್ಗಜ್ಜೇ ಹಾಡಲೂ .. ಸಂಮೋಹ ಕಾಡಿದೆಯೋ... ಓಓಓ
ತಂಗಾಳೀ ತೀಡಲೂ.. ಕಾಲ್ಗಜ್ಜೇ ಹಾಡಲೂ .. ಸಂಮೋಹ ಕಾಡಿದೆಯೋ... ಓಓಓ
ಕಣ್ಣಲ್ಲೇ ಭಾವ.. ನಿನ್ನಲ್ಲೇ ಸಂಗ .. ಬೇಕೆಂದೂ ಬಯಸುತಿದೆ ಬಾ.. ಬಾ..
ಸಂಗಾತಿ ನೀನಾಗಿ ಬಳಿ ಬಾರಾ.. ಆಆಆ.. ಒಂದಾಗಿ ಸಿಂಗಾರ ಸುಖ ತೋರೋ... ಓಓಓ
ಹೆಣ್ಣು : ಶೃಂಗಾರ ಬಾಳಿಗೇ... ಒಲವಿಂದೂ ದೀವಿಗೇ ..ನೂರಾಸೇ ಮೂಡಿದೆಯಾ... ಆಆಆ
ಮಾದಕ ಜಿಂಕೇ .. ದೇಹವ ಸೋಕಿ.. ಆರತೀ ಉರಿದಿದೆಯೋ.. ಬಾ.. ಬಾ..
ಸಂಗಾತಿ ನೀನಾಗಿ ಬಳಿ ಬಾರಾ.. ಆಆಆ..ಅಹ್ಹಹ್ಹ ಒಂದಾಗಿ ಸಿಂಗಾರ ಸುಖ ತೋರೋ... ಓಓಓ
ಈ ಜೀವ ಕುದಿಯುತಿದೆ.. ಈ ಭಾವ ಮಿಡಿಯುತಿದೇ..
ಮನಸಿನಲಿ.. ಕನಸಿನಲಿ.. ಬಯಕೆಯಲಿ ...
-------------------------------------------------------------------------------------------------------
ಹಾವು ಏಣಿ ಆಟ (೧೯೮೫) - ಕದಡಿದೆ ಒಲವಿನ ಭಾವನೆ
ಸಂಗೀತ : ವಿಜಯಭಾಸ್ಕರ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಕದಡಿದೆ ಒಲವಿನ ಭಾವನೆ ಕಲಕಿದೆ ಮನಸಿನ ಯೋಚನೆ
ಹುಸಿಯನು ನಂಬೀ.. ಮುನಿಯುವೇ ಏಕೇ
ಮರಿಯದೇ ನೀನೂ ಸರಿಯುವೇ ಏಕೆ
ಹೆಣ್ಣು : ಕದಡಿದೆ ಒಲವಿನ ಭಾವನೆ ಕಲಕಿದೆ ಮನಸಿನ ಯೋಚನೆ
ಹೃದಯದ ಬೇಗೆ ಮರೆವುದೆ ಹೀಗೆ ನಿಂದನೆ ಕೇಳಿ ನಗುವುದು ಹೀಗೆ
ಗಂಡು : ಕದಡಿದೆ ಒಲವಿನ ಭಾವನೆ
ಹೆಣ್ಣು : ಕಲಕಿದೆ ಮನಸಿನ ಯೋಚನೆ
ಹೆಣ್ಣು : ಪಾತಕಿ ಎಂದೂ ಅವರೂ ಇವರೂ ಬರದೇ ದೂರು ಒರೆಸುವರೇನೂ
ಗಂಡು : ಮೋಡವೂ ಮುಸುಕಿ ನೆರಳು ಕವಿಯೇ ಸೂರ್ಯನ ಬೆಳಕೇ ಸಂದೇಹವೇನೋ
ಹೆಣ್ಣು : ಏನಾದರೇನು ನೊಂದೆನೂ ನಾನು ನಂಬಿಕೆ ತೊರೆದಿಹೆನು
ಗಂಡು : ಕದಡಿದೆ ಒಲವಿನ ಭಾವನೆ
ಹೆಣ್ಣು : ಕಲಕಿದೆ ಮನಸಿನ ಯೋಚನೆ
ಗಂಡು : ಕಾತುಕ ಜನರೂ ಸಂಚನೂ ಮಾಡಿ ಸಾವಿರ ತಪ್ಪನೂ ಎಣಿಸದೆರೇನೂ
ಹೆಣ್ಣು : ನಿಂದನೆ ನಂಜೂ ಇಳಿವುದೂ ಎಂದೂ ಹಿಂದಿನ ಹಾಗೇ ನಗುವುದು ಎಂದೂ ..
ಗಂಡು : ನನ್ನದೆ ನಿಜವಾ ಅರಿತರೇ ನೀನೂ ಆ ದಿನ ಬರದೇನೂ
ಹೆಣ್ಣು : ಕದಡಿದೆ ಒಲವಿನ ಭಾವನೆ ಕಲಕಿದೆ ಮನಸಿನ ಯೋಚನೆ
ಗಂಡು : ಕದಡಿದೆ ಒಲವಿನ ಭಾವನೆ ಕಲಕಿದೆ ಮನಸಿನ ಯೋಚನೆ
-------------------------------------------------------------------------------------------------------
ಹಾವು ಏಣಿ ಆಟ (೧೯೮೫) - ಕೈಗೇ ಸಿಕ್ಕರೂ ಬಾಯಿಗೇ ಇಲ್ಲಾ
ಸಂಗೀತ : ವಿಜಯಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಕೈಗೇ ಸಿಕ್ಕರೂ ಬಾಯಿಗೇ ಇಲ್ಲಾ ಜನರ ಬುದ್ದಿ ಹೀಗೆಯಲ್ಲಾ
ತಾವೂ ಸುಖ ಪಡೋದಿಲ್ಲಾ ಬೇರೆಯವರೂ ಸುಖಪಡಕ ಬಿಡೋದಿಲ್ಲಾ ಆಹ್ಹಾ..
ಕೈಗೇ ಸಿಕ್ಕರೂ ಬಾಯಿಗೇ ಇಲ್ಲಾ ಜನರ ಬುದ್ದಿ ಹೀಗೆಯಲ್ಲಾ
ತಾವೂ ಸುಖ ಪಡೋದಿಲ್ಲಾ ಬೇರೆಯವರೂ ಸುಖಪಡಕ ಬಿಡೋದಿಲ್ಲಾ.. ಶೇಮ್ ಶೇಮ್
ಕುರುಡನ ಕೈಗೇ ದೀಪ ಕೊಟ್ಟಂಗೇ .. ಕೋತಿ ಕೈಗೇ ರತ್ನ ಕೊಟ್ಟಂಗೇ ..
ಗುಂಡೂ ಬೇಕೆಂದೂ ಬಂಗಾರ ಬಿಟ್ಟಂಗೇ .. ಆಗಿದೇ ಕಾಗದ ನನ್ನ ಕೈಯಾನಾಗೇ ..
ಪ್ರೀತಿ ಮಾತೂ ನಾಕೇ ಅಕ್ಷರ ಓದಿ ಹೇಳೋ ಪಾಪಿ ಇಲ್ಲಾ ...
ಪ್ರೀತಿ ಮಾತೂ ನಾಕೇ ಅಕ್ಷರ ಓದಿ ಹೇಳೋ ಪಾಪಿ ಇಲ್ಲಾ ಇದು ಏನೋ ಪ್ರಪಂಚವಯ್ಯಾ..
ವಾಟ್ ಎ ಯೂಸ್ಲೆಸ್ ವರ್ಲ್ಡ್ ಮ್ಯಾನ್.. ಯ್ಯಾ..
ಕೈಗೇ ಸಿಕ್ಕರೂ ಬಾಯಿಗೇ ಇಲ್ಲಾ ಜನರ ಬುದ್ದಿ ಹೀಗೆಯಲ್ಲಾ
ತಾವೂ ಸುಖ ಪಡೋದಿಲ್ಲಾ ಬೇರೆಯವರೂ ಸುಖಪಡಕ ಬಿಡೋದಿಲ್ಲಾ ಆಹ್ಹಾ.. ಹೂಂಹುಂ
ಲೈಫೇ ನೋಡೂ ಅವಸರೆವೆಲ್ಲಾ ಉಸಿರಾಡೋದೂ ಪುರುಸುತ್ತ ಇಲ್ಲಾ..
ಗಾಡೇ ಬಂದೂ ವರ ಕೊಟ್ಟರೂನು ದಕ್ಕೋಳೋಕೂ ಪೇಶನ್ಸ್ ಇಲ್ಲಾ
ಇಂಥ ಜನರ ಮಧ್ಯ ಇರುವ ನಮ್ಮಂಥವರಿಗೇ ಬುದ್ದಿಯಿಲ್ಲಾ ...
ಇಂಥ ಜನರ ಮಧ್ಯ ಇರುವ ನಮ್ಮಂಥವರಿಗೇ ಬುದ್ದಿಯಿಲ್ಲಾ ಇದು ಎಂಥಾ ಪ್ರಪಂಚನಯ್ಯಾ ...
ರಾಂಗ್ ನೋಟ್ ಫಾರ್ ರಾಂಗ್ ವರ್ಡ್ ಮ್ಯಾನ್ ಯಾ..
ಕೈಗೇ ಸಿಕ್ಕರೂ ಬಾಯಿಗೇ ಇಲ್ಲಾ ಜನರ ಬುದ್ದಿ ಹೀಗೆಯಲ್ಲಾ
ತಾವೂ ಸುಖ ಪಡೋದಿಲ್ಲಾ ಬೇರೆಯವರೂ ಸುಖಪಡಕ ಬಿಡೋದಿಲ್ಲಾ ಆಹ್ಹಹ್ಹಾ..
ತಾವೂ ಸುಖ ಪಡೋದಿಲ್ಲಾ ಬೇರೆಯವರೂ ಸುಖಪಡಕ ಬಿಡೋದಿಲ್ಲಾ.. ಹೂಂಹೂಂಹುಂ
-------------------------------------------------------------------------------------------------------
No comments:
Post a Comment