1196. ಹದ್ದಿನ ಕಣ್ಣು (೧೯೮೦)

ಹದ್ದಿನ ಕಣ್ಣು ಚಲನಚಿತ್ರದ ಹಾಡುಗಳು 
  1. ಈ ಚೆಲುವಿನ ಒಲವಿನ ಮಿಲನದ ಸಂಭ್ರಮ 
  2. ಕಣ್ಣಾಗೆ ಆಸೆಯ ಗಾಳ
  3.  ಸುಮ್ನಲ್ಲ... ಸಿಕ್ಕೋದು ಸುಂದ್ರಿಯ ಸಾವಾಸಾ 
  4. ಹೇ ಜೀವನವೆಂಬ ರಹಸ್ಯ ಬೀಗಕ್ಕೆ 
  5. ಈ ದಾಹ ಬಹಳ ಊರೆಲ್ಲಾ ಓಡಾಡಿ 
ಹದ್ದಿನ ಕಣ್ಣು (೧೯೮೦) - ಈ ಚೆಲುವಿನ ಒಲವಿನ ಮಿಲನದ ಸಂಭ್ರಮ
ಸಂಗೀತ : ಸತ್ಯಂ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ,.ಬಿ, ಪಿ.ಸುಶೀಲಾ 

ಗಂಡು : ಈ ಚೆಲುವಿನ ಒಲವಿನ ಮಿಲನದ ಸಂಭ್ರಮ ಸ್ನೇಹ ನೀನೇ ಸುಮಾ ಯಾರೇ ನಿನ್ನ ಸಮ
ಹೆಣ್ಣು : ಈ ಚೆಲುವಿನ ಒಲವಿನ ಮಿಲನದ ಸಂಭ್ರಮ ನೀನೇ ನನ್ನ ಸಿರಿ ಸ್ನೇಹ ನನ್ನ ಗುರಿ

ಹೆಣ್ಣು : ಎದೆಯಲ್ಲಿ ನೂರು ಆಸೆ ಅಲೆಯಾಗಿ ಕಣ್ತುಂಬ ನಿನ್ನ ಬಿಂಬ ಎಲ್ಲೆಲ್ಲೂ ಕಾಣುವಾಗ
          ಕನಸಿದೋ ನನಸಿದೋ ಸಂದೇಹ ಮೈ ತಾಳಿದಾಗ
ಗಂಡು : ಈ ಚೆಲುವಿನ ಒಲವಿನ ಮಿಲನದ ಸಂಭ್ರಮ ಸ್ನೇಹ ನೀನೇ ಸುಮಾ ಯಾರೇ ನಿನ್ನ ಸಮ

ಗಂಡು : ಕತೆಯಾಗಿ ಕಂಡುದೆಲ್ಲಾ ನಿಜರೂಪ ತಾಳುವಾಗ
           ಬಾನಾಡಿಯಾಗಿ ಹಾರಿ ಬಾನಂಚಿ ಸೇರುವಾಗ
           ನಗುವಿನ ನಲಿವಿನ ಏನಿಂಥ ವೈಭೋಗ ಯೋಗ
ಹೆಣ್ಣು : ಈ ಚೆಲುವಿನ                    ಗಂಡು : ಒಲವಿನ
ಹೆಣ್ಣು : ಮಿಲನವ                        ಗಂಡು :   ಸಂಭ್ರಮ
ಹೆಣ್ಣು : ಯಾರೇ ನಿನ್ನ ಸಮ ...       ಗಂಡು : ಸ್ನೇಹ ನೀನೇ ಸಮ ... ಲಾಲಾಲಾಲಾಲಾಲಾ
-------------------------------------------------------------------------------------------------------------------------

ಹದ್ದಿನ ಕಣ್ಣು (೧೯೮೦) - ಕಣ್ಣಾಗೆ ಆಸೆಯ ಗಾಳ
ಸಂಗೀತ : ಸತ್ಯಂ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ,.ಬಿ, ಎಸ್.ಜಾನಕೀ

ಹೆಣ್ಣು : ಕಣ್ಣಾಗೆ ಆಸೆಯ ಗಾಳ ಮನಸ್ಸಾಗೆ ಪ್ರೀತಿಯ ಮೇಳ
          ಮೈಯ್ಯೆಲ್ಲಾ ಕಾದು ಮಾತೆಲ್ಲಾ ಹೂವು ನಿಂತಲ್ಲೇ ನಿಲ್ಲಲಾರೆನೋ..
ಗಂಡು : ಆಹಾ.. ನಮ್ಮೂರ ಚೆಂದದ ಹುಡುಗಿ ಕನಸ್ನಾಗೆ ಕಾಡುವ ಬೆಡಗಿ
            ಹಗಲೆಲ್ಲ ಕಾದು ಇರುಳೆಲ್ಲ ಬೆಂದು ನಿನಗಾಗಿ ಸೋತೆನೋ ನಿನಗಾಗಿ ನಾ ಸೋತೆನೋ..

ಹೆಣ್ಣು : ಕೊರಳ್ನಾಗೆ ನೂರೆಂಟೂ ರಾಗ ನನ್ನ ಒಡಲಿಗೆ ಬೇಕೀಗ ಸಂಗ
          ಒಂದಾಗಿ ಕೂಡಿ ಚೆಂದಾಗಿ ಹಾಡಿ ನಾವಿಂದು ಸುಖ ಪಡೆಯುವ ಬಾ.. ಬಾ..
ಗಂಡು : ನಮ್ಮೂರ ಚಂದದ ಹುಡುಗಿ ಕನಸ್ನಾಗೆ ಕಾಡುವ ಬೆಡಗಿ
ಹೆಣ್ಣು : ಕಣ್ಣಾಗೆ ಆಸೆಯ ಗಾಳ ಮನಸ್ಸಾಗೆ ಪ್ರೀತಿಯ ಮೇಳ
          ಮೈಯ್ಯೆಲ್ಲಾ ಕಾದು ಮಾತೆಲ್ಲಾ ಹೂವು ನಿಂತಲ್ಲೇ ನಿಲ್ಲಲಾರೆನೋ..

ಗಂಡು : ಹರಡೈತೆ ಹರೆಯಾದ ಕಂಪು ನಿನ್ನಾ ಜೊತೆಯಾಗಿ ಕಂಡೈತೇ ತಂಪು
            ಸೊಂಪಾದ ದಾರಿ ವೈನಾಗಿ ಸೇರಿ ಎಂದೆಂದೂ ನಕ್ಕು ನಲಿಯುವ ಬಾ ಬಾ ಬಾ   
ಹೆಣ್ಣು : ಕಣ್ಣಾಗೆ ಆಸೆಯ ಗಾಳ ಮನಸ್ಸಾಗೆ ಪ್ರೀತಿಯ ಮೇಳ
          ಮೈಯ್ಯೆಲ್ಲಾ ಕಾದು ಮಾತೆಲ್ಲಾ ಹೂವು ನಿಂತಲ್ಲೇ ನಿಲ್ಲಲಾರೆನೋ..

ಹೆಣ್ಣು : ಮಿನುಗೈತೆ ಹಂಬಲದ ನೋಟ ನಿನ್ನ ಬಗಲಾಗೆ ಕರೆದೈತೆ ಕೂಟ 
ಗಂಡು : ರಂಗಾದ ಗೀಳು ಸೊಂಪಾದ ಬಾಳು ಹಾಲ್ಜೇನು ಇಲ್ಲೇ ಸವಿಯುವ ಬಾ.. ಬಾ.. ಬಾ.. 
ಹೆಣ್ಣು : ಕಣ್ಣಾಗೆ ಆಸೆಯ ಗಾಳ ಮನಸ್ಸಾಗೆ ಪ್ರೀತಿಯ ಮೇಳ
ಗಂಡು :  ಹಗಲೆಲ್ಲ ಕಾದು ಇರುಳೆಲ್ಲ ಬೆಂದು ನಿನಗಾಗಿ ಸೋತೆನೋ ನಿನಗಾಗಿ ನಾ ಸೋತೆನೋ..
ಹೆಣ್ಣು : ಓ.. ನಿಂತಲ್ಲೇ ನಿಲ್ಲಲಾರೆನೋ...
-------------------------------------------------------------------------------------------------------------------------

ಹದ್ದಿನ ಕಣ್ಣು (೧೯೮೦) - ಸುಮ್ನಲ್ಲ... ಸಿಕ್ಕೋದು ಸುಂದ್ರಿಯ ಸಾವಾಸಾ
ಸಂಗೀತ : ಸತ್ಯಂ, ಸಾಹಿತ್ಯ : ದೊಡ್ಡರಂಗೇಗೌಡ , ಗಾಯನ : ಎಸ್.ಜಾನಕೀ

ಸುಮ್ನಲ್ಲ ಸಿಕ್ಕೋದು ಸುಂದ್ರಿಯ ಸಾವಾಸಾ ಅಯ್ಯೋ.. ಅಯ್ಯೋ.. ಝಂ ಚಾಕ ನಕ ನಕ
ಸುಮ್ನಲ್ಲ ಸಿಕ್ಕೋದು ಸುಂದ್ರಿಯ ಸಾವಾಸಾ ಅಯ್ಯೋ.. ಅಯ್ಯೋ.. ಝಂ ಚಾಕ ನಕ ನಕ

ಕಣ್ಣಲ್ಲಿ ಕೂಡು ನನ್ನಲ್ಲಿ ನೋಡೂ ಅಂದವು ಚೆಂದವೂ ಚೆಲ್ಲುವ ಹರೆಯವಾ
ಮನ್ಮಥ ನೀನು ಅಪ್ಸರೆ ನಾನು ಒಲವು ನಲಿವು ನಮಗೆ ಎನ್ನುವಾ
ಚೆಂದದ ಚುಕ್ಕಿ ಚಂದಿರನಂತೆ ಅಂದದ ನಮ್ಮಿ ಹೊಂದಿಕೆ ಚೆನ್ನೂ ಆಹಾ.. ಝಂ ಚಕ ನಕ
ಸುಮ್ನಲ್ಲ ಸಿಕ್ಕೋದು ಸಕ್ಕರೆ ಗೊಂಬೆ ನಕ್ಕರೆ ರಂಭೆ ಚಿನ್ನದ ಬಣ್ಣದ ಜಿಂಕೆಯ ಹಿಡಿದೆಯಾ

ಮುತ್ತಿನ ಮಾಲೆ ಮಟ್ಟಿನ ಲೀಲೆ ನಿನಗೆ ನನಗೆ ದಿನವೂ ಬಲ್ಲೆಯಾ
ಸನ್ನೆಯ ಮಾಡಿ ಸಂಗತಿ ಹೇಳಿ ಸಂದಿಸುವಂತ ಸುಂದರಿ ನಾನು ಆಹಾ.. ಝಂ ಚಕ ನಕ
ಸುಮ್ನಲ್ಲ ಸಿಕ್ಕೋದು ಸುಂದ್ರಿಯ ಸಾವಾಸಾ ಅಯ್ಯೋ.. ಅಯ್ಯೋ.. ಝಂ ಚಾಕ ನಕ ನಕ
-------------------------------------------------------------------------------------------------------------------------

ಹದ್ದಿನ ಕಣ್ಣು (೧೯೮೦) - ಹೇ ಜೀವನವೆಂಬ ರಹಸ್ಯ ಬೀಗಕ್ಕೆ
ಸಂಗೀತ : ಸತ್ಯಂ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ,.ಬಿ, ಎಸ್.ಜಾನಕೀ

ಗಂಡು : ಹೇ.. ಜೀವನವೆಂಬ ರಹಸ್ಯ ಬೀಗಕೆ ನಗೆಯೇ ಬೀಗದ ಕೈಯ್ಯಿ
ಹೆಣ್ಣು : ಹೇ... ಗಂಡು ಹೆಣ್ಣಿನ ಗೆಲುವಿನ ರಾಗಕೆ ಹೊಂದ್ಕೋಬೇಕು ಮೈಯ್ಯಿ
ಗಂಡು : ಹೇ.. ಜೀವನವೆಂಬ ರಹಸ್ಯ ಬೀಗಕೆ ನಗೆಯೇ ಬೀಗದ ಕೈಯ್ಯಿ
ಹೆಣ್ಣು : ಹೇ... ಗಂಡು ಹೆಣ್ಣಿನ ಗೆಲುವಿನ ರಾಗಕೆ ಹೊಂದ್ಕೋಬೇಕು ಮೈಯ್ಯಿ
ಗಂಡು : ಅಯ್ಯಯ್ಯೋ ಕೀರ್ತಿಯ ಕಲಶ ಮೆರೆಸೋದಕ್ಕೆ ಬಿಡ್ತಾರೆ ಬಾಯಿ ಬಾಯಿ
ಹೆಣ್ಣು : ದರ್ಪದ ಪುಕ್ಕ ಪಡೆಯೋದಕ್ಕೆ ಆಗ್ತಾರೇ ಕಂತ್ರಿ ನಾಯಿ
ಗಂಡು : ಹೇ.. ಜೀವನವೆಂಬ ರಹಸ್ಯ ಬೀಗಕೆ ನಗೆಯೇ ಬೀಗದ ಕೈಯ್ಯಿ
ಹೆಣ್ಣು : ಹೇ... ಗಂಡು ಹೆಣ್ಣಿನ ಗೆಲುವಿನ ರಾಗಕೆ ಹೊಂದ್ಕೋಬೇಕು ಮೈಯ್ಯಿ

ಗಂಡು : ಸ್ವಂತಕೆ ಲಾಭವ ಮಾಡಿಕೊಳ್ಳಲು ತಿರುಗ್ತಾರೆ ಊರಿನ ಬೀದಿ
            ಎಲ್ಲರ ಮುಂದೆ ದೊಡ್ಡವರಾಗಲು ಹೆಣಗ್ತಾರೆ ಚಿಲ್ರೇ ಮಂದಿ
ಹೆಣ್ಣು : ಒಹೋ.. ಊಸರವಳ್ಳಿ ವಿದ್ಯೆ ಕಲಿತು ಹುಡುಕ್ತಾರೆ ಸಂದಿ ಗೊಂದಿ
          ತಮಗೆ ತಾವೇ ವಂಚಿಸಿಕೊಂಡು ಸಾಗ್ತಾರೆ ಬಾಳಿನ ಹಾದಿ
ಗಂಡು : ಹೇ.. ಜೀವನವೆಂಬ ರಹಸ್ಯ ಬೀಗಕೆ ನಗೆಯೇ ಬೀಗದ ಕೈಯ್ಯಿ
ಹೆಣ್ಣು : ಹೇ... ಗಂಡು ಹೆಣ್ಣಿನ ಗೆಲುವಿನ ರಾಗಕೆ ಹೊಂದ್ಕೋಬೇಕು ಮೈಯ್ಯಿ

ಹೆಣ್ಣು : ಗದ್ದುಗೆ ಏರಲು ಸದ್ದನು ಮಾಡದೇ ತಿರುಗ್ತಾರೆ ದಿನವೂ ಬಹಳ
          ಬೆಚ್ಚಗೆ ಮಲಗಿ ಹೆಚ್ಚಿಗೆ ಪಡೆಯಲು ಒದರ್ತಾರೆ ಸಾವಿರ ಸುಳ್ಳ
ಗಂಡು : ದೇಹ ನೊಂದರು ಜೀವ ಬೆಂದರು ಕಾಣ್ತಾರೆ ಕನಸಿನ ಮಹಲ
            ಒಬ್ಬರಿಗೊಬ್ಬರು ಮೋಸಮಾಡಿ ಹಾಕ್ತಾರೆ ಬೆನ್ನಿಗೆ ಶೂಲ
ಹೆಣ್ಣು : ಹೇ.. ಜೀವನವೆಂಬ ರಹಸ್ಯ ಬೀಗಕೆ ನಗೆಯೇ ಬೀಗದ ಕೈಯ್ಯಿ
ಗಂಡು : ಹೇ... ಗಂಡು ಹೆಣ್ಣಿನ ಗೆಲುವಿನ ರಾಗಕೆ ಹೊಂದ್ಕೋಬೇಕು ಮೈಯ್ಯಿ
ಇಬ್ಬರು : ಹೊಂದ್ಕೋಬೇಕು ಮೈಯ್ಯಿ
-------------------------------------------------------------------------------------------------------------------------

ಹದ್ದಿನ ಕಣ್ಣು (೧೯೮೦) - ಈ ದಾಹ ಬಹಳ ಊರೆಲ್ಲಾ ಓಡಾಡಿ
ಸಂಗೀತ : ಸತ್ಯಂ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಜಾನಕೀ

ಈ ದಾಹ ಬಹಳ ಊರೆಲ್ಲಾ ಓಡಾಡಿ ಮೋಜಲ್ಲಿ ಓಲಾಡಿ ಜೀವಕೇ ...
ಹೋದಲ್ಲಿ ಬಂದಲ್ಲಿ ಕಂಡಲ್ಲಿ ಉಂಡಲ್ಲಿ ಆನಂದ ... ಈ ದಾಹ ಬಹಳ..

ಹೊತ್ತು ಮೂಡಿ ಸಂಪತ್ತು ಕೂಡಿ ಈ ಹೊನ್ನ ರಂಗು ಸಿರಿ ಬಾಳಲೇ
ಹುತ್ತ ನೋಡಿ ಸಂದೇಹ ಕಾಡಿ ಈ ನಿನ್ನ ಬಣ್ಣ ನಾ ನಂಬಲೇ
ಎಡಕ್ಕೆ ಬಲಕ್ಕೆ ಒಳಕ್ಕೆ ಹೊರಕ್ಕೆ ಮನಕ್ಕೆ ಆವೇಶವೋ... ಈ ದಾಹ ಬಹಳ

ನಿನ್ನ ಚೂಟಿ ನೋಟಕ್ಕೆ ಚಾಟಿ ನಾ ಇಲ್ಲೇ ಒಮ್ಮೆ ಬಲೆ ಬೀಸಲೇ
ನಿನ್ನ ವೇಷ ಏನೆಲ್ಲಾ ದೋಷ ನಾ ಬಲ್ಲೆ ಎಲ್ಲಾ ನಿಜ ಹೇಳಲೇ
ಹಣಕ್ಕೆ ಕಣಕ್ಕೆ ಹೊಲಕ್ಕೆ ನೆಲಕ್ಕೆ ಸುಖಕ್ಕೆ ಆವೇಗವೋ ... ಈ ದಾಹ ಬಹಳ
ಈ ದಾಹ ಬಹಳ ಊರೆಲ್ಲಾ ಓಡಾಡಿ ಮೋಜಲ್ಲಿ ಓಲಾಡಿ ಜೀವಕೇ ...
ಹೋದಲ್ಲಿ ಬಂದಲ್ಲಿ ಕಂಡಲ್ಲಿ ಉಂಡಲ್ಲಿ ಆನಂದ ... ಈ ದಾಹ ಬಹಳ..
--------------------------------------------------------------------------------------------------------------------------

No comments:

Post a Comment