1324. ಹಸಿದ ಹೆಬ್ಬುಲಿ (೧೯೮೩)

 

ಹಸಿದ ಹೆಬ್ಬುಲಿ ಚಲನಚಿತ್ರದ ಹಾಡುಗಳು
  1. ಈ ರಾತ್ರಿ ನಮಗಾಗಿ
  2. ಎಲ್ಲೋ ಆ ದೊಡ್ಡೋರು ಸಿಡಿದೆದ್ದು
  3. ಪ್ರಾಯಾ ಮತ್ತೇರಿದೇ
  4. ಸವಿನೆನಪು ಈ ಮನದೇ
ಹಸಿದ ಹೆಬ್ಬುಲಿ  (೧೯೮೩) - ಈ ರಾತ್ರಿ ನಮಗಾಗಿ
ಸಂಗೀತ: ಸತ್ಯಂ,‌ ಸಾಹಿತ್ಯ: ಚಿ.ಉದಯಶಂಕರ, ಗಾಯನ: ಸುಂದರ, ಎಸ್.ಜಾನಕೀ

ಗಂಡು: ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
       ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
       ಈ ಚೆಂದಿರ ಈ ಚಂದ್ರಿಕೆ ನಾನು ನೀನೂ ಇಂದೂ ಸೇರಲೂ
ಹೆಣ್ಣು:  ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
       ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
       ಈ ಚೆಂದಿರ ಈ ಚಂದ್ರಿಕೆ ನಾನು ನೀನೂ ಇಂದೂ ಸೇರಲೂ
ಗಂಡು: ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ

ಗಂಡು: ಒಲವಿಂದ ದಿನವೆಲ್ಲಾ ಸವಿಮಾತ ನೀನಾಡೂ
           ಬೇರೇನೂ ಬೇಕಿಲ್ಲ ಚೂರು ತೋಳಿಂದ ಮೈಯನ್ನು
           ಹಿತವಾಗಿ ಬಳಸೋಮ್ಮೆ ಇನ್ನೇನೂ ಕೇಳಲ್ಲ ಎಲ್ಲಾ...
ಹೆಣ್ಣು: ಕಣ್ಣಿನ ಭಾಷೆಯಾ ನೀ ತಿಳಿದಾಗ ಚೆಂದುಟಿಯಾಸೆಯೇ
           ನೀ ಅರಿತಾಗ ಬೇರೆ ಎನೂ ಬೇಕು ‌ಮೋಹನ...
ಗಂಡು: ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
ಹೆಣ್ಣು: ಈ ಚೆಂದಿರ ಈ ಚಂದ್ರಿಕೆ ನಾನು ನೀನು ಇಂದೂ ಸೇರಲು
ಗಂಡು: ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ

ಹೆಣ್ಣು: ಯುಗವೊಂದು ದಿನದಂತೆ ದಿನವೊಂದು ಕ್ಷಣದಂತೆ
           ಬಯಲಲ್ಲಿ ನಿಂತಾಗ ನೀನೂ ಹಗಲೆಲ್ಲಾ ಇರುಳಂತೇ
           ನುಡಿಯೆಲ್ಲಾ ಹಾಡಂತೇ ಬಾಯೆಲ್ಲಾ ಸವಿಯಾದ ಜೇನು
ಗಂಡು: ನಲ್ಮೆಯ ಪ್ರೇಮದ ಹೂ ಬಿರಿದಾಗ ಮಲ್ಲಿಗೆ ಪರಿಮಳ
            ಮನಸೆಳೆದಾಗ ಎಂಥಾ ಚೆನ್ನಾ ಹೇಳೂ ಮೋಹಿನಿ
ಹೆಣ್ಣು:  ಈ ರಾತ್ರಿ ನಮಗಾಗಿ ನಾ ‌ಬಂದೆ ನಿನಗಾಗಿ
ಗಂಡು: ಈ ಚೆಂದಿರ ಈ ಚಂದ್ರಿಕೆ ನಾನು ನೀನು ಇಂದು ಸೇರಲೂ
ಇಬ್ಬರು: ಈ ರಾತ್ರಿ ನಮಗಾಗಿ ನಾ ‌ಬಂದೆ ನಿಮಗಾಗಿ
---------------------------------------------------------------------

ಹಸಿದ ಹೆಬ್ಬುಲಿ  (೧೯೮೩) - ಎಲ್ಲೋ ಆ ದೊಡ್ಡೋರು 
ಸಂಗೀತ: ಸತ್ಯಂ,‌ ಸಾಹಿತ್ಯ: ಚಿ.ಉದಯಶಂಕರ, ಗಾಯನ: ಎಸ್.ಪಿ. ಬಿ, ಕೋರಸ್

ಕೋರಸ್: ಆಹಾಹ..ಆಆಆಆಆಆ.. ಆಹಾಹ..ಆಆಆಅ
ಗಂಡು: ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರೂ...
          ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರೂ...
           ದುಡ್ಡಿಂದ ಜಗವನ್ನು ಜನರನ್ನು ಕೊಳ್ಳೋರೂ....
          ಗಂಡಾದರೇ ಬನ್ನೀ ಎದುರಲ್ಲಿ ಆಹ್ ಧಮ್ ಇದ್ದರೇ
           ನಿಲ್ಲಿ ಎದುರಲ್ಲಿ
           ಆಹ್ಹಾ.. ಗಂಡಾದರೇ ಬನ್ನೀ ಎದುರಲ್ಲಿ ಆಹ್
           ಧಮ್ ಇದ್ದರೇ ನಿಲ್ಲಿ ಎದುರಲ್ಲಿ
ಕೋರಸ್: ಆಹಾಹ..ಆಆಆಆಆಆ.. ಆಹಾಹ..ಆಆಆಅ

ಗಂಡು: ಮದುವೆಯಾ ಮಾಡಲೂ ನೀನಾರೋ... ನಾ ಯಾರೋ
           ಬ್ರಹ್ಮನ ಬರಹವ ಅಳಿಸೋರು ಯಾರೂ...
           ಮದುವೆಯಾ ಮಾಡಲೂ ನೀನಾರೋ... ನಾ ಯಾರೋ
           ಬ್ರಹ್ಮನ ಬರಹವ ಅಳಿಸೋರು ಯಾರೂ...
           ಯಾರಿಗೇ ಯಾರೆಂದೂ ದೇವರೇ ಬಲ್ಲೋನೂ
           ಹುಟ್ಟುವುದುಂಟೇನೂ ಆತನ ಮೀರೋದೂ
           ಬಿರುಗಾಳಿ  ಒಡನಾಟ ಸರಿಯೇನೂ ಹೇಳೂ
           ಗಂಡಾದರೇ ಬನ್ನೀ ಎದುರಲ್ಲಿ ಆಹ್ ಧಮ್ ಇದ್ದರೇ
           ನಿಲ್ಲಿ ಎದುರಲ್ಲಿ
           ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರೂ...
           ದುಡ್ಡಿಂದ ಜಗವನ್ನು ಜನರನ್ನು ಕೊಳ್ಳೋರೂ....
           ಗಂಡಾದರೇ ಬನ್ನೀ ಎದುರಲ್ಲಿ ಆಹ್ ಧಮ್ ಇದ್ದರೇ
           ನಿಲ್ಲಿ ಎದುರಲ್ಲಿ
ಕೋರಸ್: ಆಹಾಹ..ಆಆಆಆಆಆ.. ಆಹಾಹ..ಆಆಆಅ

ಗಂಡು: ಒಳ್ಳೆಯ ಗುಣಕ್ಕೆಂದೂ ನಾ ತಲೆ ಬಾಗುವೇ
            ದ್ವೇಷವ ಕಂಡಾಗ ನಾ ‌ಮೆಟ್ಟಿ ನಿಲ್ಲುವೇ..
            ಒಳ್ಳೆಯ ಗುಣಕ್ಕೆಂದೂ ನಾ ತಲೆ ಬಾಗುವೇ
            ದ್ವೇಷವ ಕಂಡಾಗ ನಾ ‌ಮೆಟ್ಟಿ ನಿಲ್ಲುವೇ..
            ಕಾಲದ ಬಿರುಗಾಳಿ ರಾಮನ ಅಂಬಂತೇ
            ಎದುರಿಸಿ ನಿಂತರೇ ಆ ಕ್ಷಣ ಸತ್ತಂತೇ
            ಈ‌ ಸತ್ಯ ನೀನೇಕೆ ಅರಿತಿಲ್ಲಾ ಇನ್ನೂ...
           ಗಂಡಾದರೇ ಬನ್ನೀ ಎದುರಲ್ಲಿ ಆಹ್ ಧಮ್ ಇದ್ದರೇ
           ನಿಲ್ಲಿ ಎದುರಲ್ಲಿ
           ಎಲ್ಲೋ ಆ ದೊಡ್ಡೋರು ಸಿಡಿದೆದ್ದು ನಿಂತೋರೂ...
           ದುಡ್ಡಿಂದ ಜಗವನ್ನು ಜನರನ್ನು ಕೊಳ್ಳೋರೂ....
           ಗಂಡಾದರೇ ಬನ್ನೀ ಎದುರಲ್ಲಿ ಆಹ್ ಧಮ್ ಇದ್ದರೇ
           ನಿಲ್ಲಿ ಎದುರಲ್ಲಿ
-------------------------------------------------------------------

ಹಸಿದ ಹೆಬ್ಬುಲಿ  (೧೯೮೩) - ಪ್ರಾಯಾ ಮತ್ತೇರಿದೇ
ಸಂಗೀತ: ಸತ್ಯಂ,‌ ಸಾಹಿತ್ಯ: ಆರ್.ಎನ್.ಜಯಗೋಪಾಲ, ಗಾಯನ: ಎಸ್.ಪಿ. ಬಿ, ಎಸ್.ಜಾನಕೇ

ಹೆಣ್ಣು: ಪ್ರಾಯಾ.. ಮತ್ತೇರಿದೇ... ಪ್ರೀತಿ ಹುಚ್ಚಾಗಿದೇ...
           ಪ್ರಾಯಾ ಮತ್ತೇರಿದೇ... ಪ್ರೀತಿ ಹುಚ್ಚಾಗಿದೇ...
           ಮೈಯಲ್ಲಾ ಬೆಂಕಿ ಕಣ್ಣಲ್ಲಿ ಆಸೇ ಲಜ್ಜೇ ತಡೀ ಎಂದಿದೇ..
           ದೂರ ನಡಿ ಎಂದಿದೇ...
ಗಂಡು: ಅರೇ...ಪ್ರಾಯಾ.. ಮತ್ತೇರಿದೇ... ಪ್ರೀತಿ ಹುಚ್ಚಾಗಿದೇ...
           ಹ್ಹಾ.. ಪ್ರಾಯಾ ಮತ್ತೇರಿದೇ... ಪ್ರೀತಿ ಹುಚ್ಚಾಗಿದೇ...
           ಹೆಣ್ಣಲ್ಲಿ ಬಿಂಕ ಕಣ್ಣಲ್ಲಿ ಆಸೇ ದೇಹ ಚಳಿ ಎಂದಿದೆ
           ಬಾರೇ ಬಳಿ ಎಂದಿದೇ...

ಹೆಣ್ಣು: ರಾತ್ರಿ ಹೊತ್ತಲ್ಲಿ ಹೋರಳಾಡಿ ಮಿಸುಕಾಡಿ ಕಣ್ಣೆಲ್ಲಾ
           ಕೆಂಪಾಯಿತೂ
            ರಾತ್ರಿ ಹೊತ್ತಲ್ಲಿ ಹೋರಳಾಡಿ ಮಿಸುಕಾಡಿ ಕಣ್ಣೆಲ್ಲಾ
           ಕೆಂಪಾಯಿತೂ
ಗಂಡು: ನಿನ್ನ ನೆನಪಲ್ಲೇ ತಲೆದಿಂಬೂ ನಾ ಅಪ್ಫಿ ಮಲಗಿದ್ದೆ
            ಬೆಳಗಾಯಿತು..
ಹೆಣ್ಣು: ಸೋತೇ ನಾ ನೀನಿಲ್ಲದೇ..
ಗಂಡು: ತಾಳೇ ನಾ ಮುತ್ತಿಲ್ಲದೇ‌....
ಹೆಣ್ಣು: ಅಬ್ಬಾ ಇನ್ನೂ ಸಾಲದೇ....(ಅಹ್ಹಹಾಹಹ ಅಹ್ಹಹಾ)
           ಅಬ್ಬಾ ಇನ್ನೂ ಸಾಲದೇ....
ಗಂಡು: ಅರೇ..ಪ್ರಾಯಾ.. ಮತ್ತೇರಿದೇ...
ಹೆಣ್ಣು:  ಪ್ರೀತಿ ಹುಚ್ಚಾಗಿದೇ....
ಗಂಡು: ಹೆಣ್ಣಲ್ಲಿ ಬಿಂಕ
ಹೆಣ್ಣು: ಕಣ್ಣಲ್ಲಿ ಆಸೇ
ಗಂಡು: ದೇಹ ಚಳಿ ಎಂದಿದೇ...
ಹೆಣ್ಣು: ದೂರ ನಡಿ ಎಂದಿದೇ

ಹೆಣ್ಣು; ನಿನ್ನಾ ಪುಂಡಾಟ ಕಂಡೋರು ಕಂಡಾಗ
           ಊರೆಲ್ಲಾ ಗುಲ್ಲೋ ಗುಲ್ಲೂ...
           ನಿನ್ನಾ ಪುಂಡಾಟ ಕಂಡೋರು ಕಂಡಾಗ
           ಊರೆಲ್ಲಾ ಗುಲ್ಲೋ ಗುಲ್ಲೂ...
ಗಂಡು: ಸುತ್ತಾ ಯಾರಿಲ್ಲಾ ನಾವೇನೇ ಇಲ್ಲೇಲ್ಲಾ
            ಅಂಜಿಕೆ ಬೇಡ ನಿಲ್ಲೂ...
ಹೆಣ್ಣು: ತೋಳಿಗೇ ಎಂಥಾ ಬಲ
ಗಂಡು: ಯೌವ್ವನ ತಂದಾ ಬಲ
ಹೆಣ್ಣು: ಅಬ್ಬಾ ಬೀಡು ಬೇಡುವೇ...  ಅಬ್ಬಾ ಬೀಡು ಬೇಡುವೇ...
           ಪ್ರಾಯಾ.. ಮತ್ತೇರಿದೇ...
ಗಂಡು:  ಪ್ರೀತಿ ಹುಚ್ಚಾಗಿದೇ.
ಹೆಣ್ಣು: ಮೈಯಲ್ಲಾ ಬೆಂಕಿ
ಗಂಡು: ಕಣ್ಣಲ್ಲಿ ಆಸೇ
ಹೆಣ್ಣು: ಲಜ್ಜೇ ತಡೀ ಎಂದಿದೇ
ಗಂಡು: ಬಾರೇ ಬಳಿ ಎಂದಿದೇ..
ಇಬ್ಬರು: ಲಲಲಾಲಲಾ ಲಲಲಲಾ ಲಲಲಾಲಲಾ ಲಲಲಲಾ
-------------------------------------------------------------------

ಹಸಿದ ಹೆಬ್ಬುಲಿ  (೧೯೮೩) - ಸವಿನೆನಪು ಈ ಮನದೇ
ಸಂಗೀತ: ಸತ್ಯಂ,‌ ಸಾಹಿತ್ಯ: ಆರ್.ಎನ್.ಜಯಗೋಪಾಲ, , ಗಾಯನ: ಎಸ್.ಪಿ. ಬಿ, ಎಸ್.ಜಾನಕೀ

ಗಂಡು : ಸವಿ ನೆನಪೂ ಈ ಮನದೇ ಹೊಮ್ಮಿ ಚಿಮ್ಮಿ ಹಾಡುತಿದೆ..
ಹೆಣ್ಣು: ಸವಿ ನೆನಪೂ ಈ ಮನದೇ ಹೊಮ್ಮಿ ಚಿಮ್ಮಿ ಹಾಡುತಿದೇ..
ಗಂಡು: ಆಸೆಗಳು ಮೂಡುತಿದೆ ಕೈ ಜಾರುತಾ ಓಡುತಿದೇ...
ಹೆಣ್ಣು: ಸವಿ ನೆನಪೂ ಈ ಮನದೇ ಹೊಮ್ಮಿ ಚಿಮ್ಮಿ ಆಡುತಿದೇ..

ಹೆಣ್ಣು: ನನ್ನಾ ನಿನ್ನಾ ಈ ಬಂಧನಾ ಎಳೆತನ ಗೆಳೆತನ
            ಅನುಬಂಧನಾ
ಗಂಡು: ಮನದೇ ಏಕೋ ಈ ಕಾತುರ ಬಯಕೆ ತಂದೆ ಹೊಸ
            ಆತುರ
ಹೆಣ್ಣು: ಪ್ರಶ್ನೆಗಳೂ.. ಎಳೂತಿದೇ...
ಗಂಡು: ಉತ್ತರವೂ ಬಯಸುತಿದೇ...
ಹೆಣ್ಣು: ಸವಿ ನೆನಪೂ ಈ ಮನದೇ ಹೊಮ್ಮಿ ಚಿಮ್ಮಿ ಹಾಡುತಿದೇ

ಗಂಡು: ನನ್ನ ಬಾಳ ಉಸಿರಾದೇ ನೀ ...
        ‌‌‌   ಇರುಳಾ ಕಳೆವಾ ಬೆಳಕಾದೇ ನೀ..
ಹೆಣ್ಣು: ಇಂದೂ ನಿನ್ನಾ ಸಹಚಾರಿಣಿ
           ನೋವಾ ನಲಿವಾ ಸಮಭಾಗಿನಿ
ಗಂಡು: ನೀ ನಗಲೂ.. ನಾ ನಗುವೇ...
ಹೆಣ್ಣು: ನನ್ನೋಳಗೆ ನೀನಿರುವೇ....
ಗಂಡು : ಸವಿ ನೆನಪೂ ಈ ಮನದೇ ಹೊಮ್ಮಿ ಚಿಮ್ಮಿ ಹಾಡುತಿದೆ.
ಹೆಣ್ಣು: ಆಸೆಗಳು ಮೂಡುತಿದೆ ಕೈ ಜಾರುತಾ ಓಡುತಿದೇ...
ಇಬ್ಬರು: ಆಸೆಗಳು ಮೂಡುತಿದೆ ಕೈ ಜಾರುತಾ ಓಡುತಿದೇ...
-------------------------------------------------------------------

No comments:

Post a Comment