1274. ಹೆಂಡ್ತಿಗ್ಹೇಳ್ತಿನಿ (೧೯೯೮)

ಹೆಂಡ್ತಿಗ್ಹೇಳ್ತಿನಿ ಚಿತ್ರದ ಹಾಡುಗಳು 
  1. ಚಿನ್ನಾರಿ ಚಿನ್ನಾರಿ ಚಿನ್ನದ ಕಂದ 
  2. ಅಪ್ಸರಾ... ಅಪ್ಸರಾ.. ಪ್ರೀತಿಗೆ ಉತ್ತರಾ 
  3. ಚೆಲುವು ಚೆಲುವೇ ಚೆಲುವು ಚೆಲುವೇ ಈ ಹೆಣ್ಣೂ .. 
  4.  ಸುವ್ವಾಲೇ ಸುವ್ವಾಲೆ ಸುವ್ವಾಲೇ  ಮಡಿಲಾ ಕನಸೇ ಸುವ್ವಾಲೇ 
  5. ಮುಂಜಾನೆ ಮಂಜಲ್ಲಿ ಒಂದಾಗಿ ಬನ್ನಿ 
  6. ಚಿನ್ನಾರಿ ಚಿನ್ನಾರಿ ಚಿನ್ನದ ಈ ಕಂದ (ಚಿತ್ರಾ) 
ಹೆಂಡ್ತಿಗ್ಹೇಳ್ತಿನಿ (೧೯೯೮) - ಚಿನ್ನಾರಿ ಚಿನ್ನಾರಿ ಚಿನ್ನದ ಕಂದ
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಮಧು

ಚಿನ್ನಾರಿ ಚಿನ್ನಾರಿ ಚಿನ್ನದ ಈ ಕಂದ ನೈದಾ ರೇಶಿಮೆಯೋ
ಛೀ.. ಕಳ್ಳ ಛೀ.. ಕಳ್ಳ ಈ ಕಣ್ಣು ಕಪ್ಪಲ್ಲ ತುಂಬಿದ ಹುಣ್ಣಿಮೆಯೋ

ಬಂದನಮ್ಮ ಬಂದಾನಮ್ಮ ಬಾನಿನಿಂದ ತಂದನಮ್ಮ ಪಾಯಾಸದೂಟ ತುಟಿಗಳಿಂದ
ಕಣ್ಣಲ್ಲಿ ಸುಳಿ ಕೆನ್ನೇಲಿ ಗುಳಿ ಗಲ್ಲದಲೆಲ್ಲಾ ಕೆಂಪಿನೋಕುಳಿ ಮಡಿಲೇ ಸ್ವರ್ಗವಾಯಿತೋ
ಚಿನ್ನಾರಿ ಚಿನ್ನಾರಿ ಚಿನ್ನದ ಈ ಕಂದ ನೈದಾ ರೇಶಿಮೆಯೋ
ಛೀ.. ಕಳ್ಳ ಛೀ.. ಕಳ್ಳ ಈ ಕಣ್ಣು ಕಪ್ಪಲ್ಲ ತುಂಬಿದ ಹುಣ್ಣಿಮೆಯೋ

ಎಲ್ಲಾ ಹೂವ ನಡುವಲ್ಲೂ ಗಂಧವು ಈ ಕಂದಾ ಎಲ್ಲಾ ರತ್ನದ ನಡವಲ್ಲೂ ಹೊಳಪು ಈ ಕಂದಾ
ಈ ಕಂದಾ ನಕ್ಕರೆ ಕೋಗಿಲೆ ಸೋಲುವುದೂ ಎಂದಾದರೂ ಅತ್ತರೆ ಮೋಡವೇ ಓಡುವುದೂ
ಕಾಲು ಗೆಜ್ಜೆಯ ದನಿ ಹರುಷ ಹರಸುವೇನು ನೂರು ವರುಷ ಮಡಿಲೇ ಸ್ವರ್ಗವಾಯಿತೋ ..
ಚಿನ್ನಾರಿ ಚಿನ್ನಾರಿ ಚಿನ್ನದ ಈ ಕಂದ ನೈದಾ ರೇಶಿಮೆಯೋ
ಛೀ.. ಕಳ್ಳ ಛೀ.. ಕಳ್ಳ ಈ ಕಣ್ಣು ಕಪ್ಪಲ್ಲ ತುಂಬಿದ ಹುಣ್ಣಿಮೆಯೋ

ಹೊತ್ತು ಹೆತ್ತವರಾ ಪುಣ್ಯ ಇರಲಿ ಹೀಗೇನೆ ಇಂಥಾ ಆನಂದವೂ ನಮ್ಮ ಪೂರ್ವದ ಪುಣ್ಯಾನೇ
ಈ ಕಂದ ಕೈ ಬೀಸದ್ದಿದರೇ ಹಗಲಿಲ್ಲ ಈ ಕಂದ ಕಾಲ್ ಚಾಚದಿದ್ದರೇ ಇರುಳಿಲ್ಲಾ ..
ಬೆಣ್ಣೆ ಕದ್ದನು ಗೋಪಾಲ ಕಂದ ನನ್ನೇ ಕದ್ದನು ಈ ಬಾಲ ಕಂದ
ಮಡಿಲೇ ಸ್ವರ್ಗವಾಯಿತೋ..
ಚಿನ್ನಾರಿ ಚಿನ್ನಾರಿ ಚಿನ್ನದ ಈ ಕಂದ ನೈದಾ ರೇಶಿಮೆಯೋ
ಛೀ.. ಕಳ್ಳ ಛೀ.. ಕಳ್ಳ ಈ ಕಣ್ಣು ಕಪ್ಪಲ್ಲ ತುಂಬಿದ ಹುಣ್ಣಿಮೆಯೋ
--------------------------------------------------------------------------------------------------------

ಹೆಂಡ್ತಿಗ್ಹೇಳ್ತಿನಿ (೧೯೯೮) - ಅಪ್ಸರಾ... ಅಪ್ಸರಾ.. ಪ್ರೀತಿಗೆ ಉತ್ತರಾ
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಚಿತ್ರಾ

ಅಪ್ಸರಾ...  ಅಪ್ಸರಾ... ಪ್ರೀತಿಗೇ ಉತ್ತರಾ
ಮನಸಾ ಕೇಳು ಆಸೆ ಹೇಳಿ ನಡಿ ಸರಸರ ಸರಸರಾ......
ಅಪ್ಸರಾ...  ಅಪ್ಸರಾ... ಪ್ರೀತಿಗೇ ಉತ್ತರಾ
ಮನಸಾ ಕೇಳು ಆಸೆ ಹೇಳಿ ನಡಿ ಸರಸರ ಸರಸರಾ......

ಎಲ್ಲಾ ಆಸೆಗಳ ಒಳಗೂ ಚಿಗುರೋ ಕನಸೇನೇ ಎಲ್ಲ್ಲಾ ಕನಸಿನ ಒಳಗೂ ಪ್ರೀತಿ ಹೊಳಪೇನೇ  
ಎಲ್ಲಾ ಪ್ರೀತಿಯ ಒಳಗೂ ಬೆಸೆಯೋ ಕೈಯಿದೇ
ಕೈಯ್ಯ ಮೇಲೆ ಕೈಯ್ಯ ಇತ್ತು ಹೊಸ ದಾರಿ ನೀ ನಡೆವ ಆತುರಾ
ಅಪ್ಸರಾ...  ಅಪ್ಸರಾ... ಪ್ರೀತಿಗೇ ಹತ್ತಿರಾ
ಮನಸಾ ಕೇಳು ಆಸೆ ಹೇಳಿ ನಡಿ ಸರಸರ ಸರಸರಾ......

ಎಲ್ಲಾ ತವಕದ ಒಳಗೂ ಪುಳಕಾ ತುಂಬಿದೆ ಎಲ್ಲಾ ಪುಳುಕದ ಒಳಗೂ ಹೊಸತೂ ಹುರುಪಿದೇ
ಎಲ್ಲಾ ಹುರುಪಿನಾ ಒಳಗೂ ಚಿಮ್ಮೋ ಹಾಡಿದೇ ಎಲ್ಲಾ ಹಾಡಿನ ಒಳಗೂ ಪ್ರೀತಿ ಪದವಿದೆ
ಇಂಥಾ ಪ್ರೀತಿ ಹೊಸ ರೀತಿ ಸೇರಿ ಹುಡುಕಿ ತರುವ ತರತರಾ
ಅಪ್ಸರಾ...  ಅಪ್ಸರಾ... ಪ್ರೀತಿಗೇ ಉತ್ತರಾ
ಮನಸಾ ಕೇಳು ಆಸೆ ಹೇಳಿ ನಡಿ ಸರಸರ ಸರಸರಾ......
-------------------------------------------------------------------------------------------------------

ಹೆಂಡ್ತಿಗ್ಹೇಳ್ತಿನಿ (೧೯೯೮) - ಚೆಲುವು ಚೆಲುವೇ ಚೆಲುವು ಚೆಲುವೇ ಈ ಹೆಣ್ಣೂ ..
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ರಾಜೇಶ ಕೃಷ್ಣನ್

ಕೌಸಲ್ಯಾ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವ ಮಾಹ್ನಿಕಂ
ಕೌಸಲ್ಯಾ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವ ಮಾಹ್ನಿಕಂ

ಚೆಲುವು ಚೆಲುವೇ ಚೆಲುವು ಈ ಹೆಣ್ಣೂ .. ಓಓಓ ... ಒಲವು ಗೆಲುವು ಛಲವೂ ಈ ಹೆಣ್ಣೂ ..
ಮನಸನು ಸುರಿಸುವಾ ಕನಸನು ಸುರಿಸುವಾ
ಹೃದಯವಾ ಬೆಳೆಸುವಾ ವಯಸ್ಸನ್ನೂ ಇಳಿಸುವಾ
ಚೆಲುವು ಚೆಲುವೇ ಚೆಲುವು ಈ ಹೆಣ್ಣೂ .. ಓಓಓ ... ನಿಂತೇ ನಡಿಯೋ ನವಿಲೂ ಈ ಹೆಣ್ಣೂ .. ಓ..

ತುಸು ಲಾಸ್ಯವ ಹಾಸ್ಯವ ಬೆರೆಸುತಿರೋ ಈ ಹೆಣ್ಣಿನ ನಗುವೇ ಅಮೃತವೂ
ಹಸಿ ಒಡವೆಯ ಮೈಯ್ಯಲ್ಲಿ ಬಿಸಿ ಹೆಣ್ಣು ಈ ಹೆಣ್ಣಿನ ಅಂದಕೆ ನಿಜದೊಡವೇ ..
ತಸು ಮಾತಿಗೇ ಮೌನವ ಲೇಪಿಸಿರೋ ಈ ಹೆಣ್ಣಿನ ಹೆಸರಿದು ಇಂಚರವೇ
ಆಹ್ ಶೋಕಿಯ ಸೋಕಿಸದೆ ಕಂಪಿಸಿರೋ ಈ ಹೆಣ್ಣಿನ ಸ್ಪರ್ಶ ಆಗೋಚರವೇ
ಓ.. ಲತೆಯೋ ಸ್ಮಿತ ಕಥೆಯೋ ವ್ಯಥೆಯೋ ಈ ಹೆಣ್ಣೂ ತವಕ ಪುಳಕ ಕನಕ ಈ ಹೆಣ್ಣು
ಉಸಿರನೂ ಬಿಗಿಸುವ ಹೊಸತನ ತೆಗೆಸುವ ಎದೆಯ ಕೋರಿಕೆ ಮುಗಿಸುವ
ಲತೆಯೋ ಸ್ಮಿತ ಕಥೆಯೋ ವ್ಯಥೆಯೋ ಈ ಹೆಣ್ಣೂ ಕುಳಿತೇ ಹಾರೋ ಗಿಳಿಯೋ ಈ ಹೆಣ್ಣು
ಬಂಗಾರ ಬಣ್ಣದಾ ಹೆಣ್ಣಾ ಕಣ್ಣಾ ಒಳಗೆ ಝುಮ್ ಝುಮ್ ಮಂದಾರ 
ಹೂವಿನ ಹೆಣ್ಣಾ ಮನಸ ತುಂಬಾ ಘಮ ಘಮ 
--------------------------------------------------------------------------------------------------------

ಹೆಂಡ್ತಿಗ್ಹೇಳ್ತಿನಿ (೧೯೯೮) -  ಸುವ್ವಾಲೇ ಸುವ್ವಾಲೆ ಸುವ್ವಾಲೇ  ಮಡಿಲಾ ಕನಸೇ ಸುವ್ವಾಲೇ
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ರಾಜೇಶ ಕೃಷ್ಣನ್  ಚಿತ್ರಾ

ಗಂಡು : ಸುವ್ವಾಲೇ ಸುವ್ವಾಲೆ ಸುವ್ವಾಲೆ ಮಡಿಲಾ ಕನಸೇ ಸುವ್ವಾಲೇ
            ಸುವ್ವಾಲೇ ಸುವ್ವಾಲೆ ಕರುಳ ಕನಸೇ ಸುವ್ವಾಲೆ
            ಲಾಲಿ ಹಾಡುವ ಕನಸಾ ಕೂಡಿ ಕನವರಿಸೋಳೋ ನಮ್ಮ ಕನಸೇ ನಮಗೆ ಮಗುವಮ್ಮಾ

ಹೆಣ್ಣು : ಬಯಸೋದೆಲ್ಲಾ ಬಳಿ ಬರದು ನಡೆವುದಕ್ಕೆಂದೂ ಸುಳಿವಿರದೂ
            ಒಲವ ಅಂಗದೋಳಗೆ ಹೃದಯ ಮಗುವ ತರಹ
ಗಂಡು : ಹೃದಯ ಅರಳೋ ಘಳಿಗೆ ಜಗವೇ ಮಗುವ ತರಹ ನಮ್ಮ ನಗೆಯೇ ನಮ್ಮ ಮಗುವಮ್ಮಾ
            ಸುವ್ವಾಲೇ ಸುವ್ವಾಲೆ ಸುವ್ವಾಲೆ ಮಡಿಲಾ ಕನಸೇ ಸುವ್ವಾಲೇ
            ಸುವ್ವಾಲೇ ಸುವ್ವಾಲೆ ಕರುಳ ಕನಸೇ ಸುವ್ವಾಲೆ
            ಲಾಲಿ ಹಾಡುವ ಕನಸಾ ಕೂಡಿ ಕನವರಿಸೋಳೋ ನಮ್ಮ ಕನಸೇ ನಮಗೆ ಮಗುವಮ್ಮಾ

ಹೆಣ್ಣು : ನಿಮ್ಮ ಅನುರಾಗವೇ ಸೌಭಾಗ್ಯ ನಿಮ್ಮ ಒಡನಾಟವೇ ಐಶ್ವರ್ಯ
          ಪ್ರೀತಿ ಬರೆದ ಹಾಗೇ ಹಾಡೋ ಕೆಲಸ
          ನಮಗೂ ದೈವ ಬರೆವ ಹಾಗೆ ಬಾಳೋ ಕೆಲಸ ನಮದು
          ನಿಮ್ಮ ಪ್ರೀತಿ ನನಗೆ ಮಗುವಂತೇ ..
ಇಬ್ಬರು : ಸುವ್ವಾಲೇ ಸುವ್ವಾಲೆ ಸುವ್ವಾಲೆ ಸುವ್ವಾಲೇ ಸುವ್ವಾಲೆ ಸುವ್ವಾಲೆ
              ನೀ ನನಗೇ ಮಗುವಂತೆ ನಾನೇ ನಿನಗೆ ಮಗುವಂಗೆ
              ಕೈಗೇ ಸಿಗದಿರೋ ಮಗುವೂ ಯಾಕಮ್ಮ
             ಸುವ್ವಾಲೇ ಸುವ್ವಾಲೇ ಸುವ್ವಾಲೆ ಮಡಿಲ ಕನಸೇ ಸುವ್ವಾಲೆ
             ಸುವ್ವಾಲೇ ಸುವ್ವಾಲೇ ಸುವ್ವಾಲೇ ಕರುಳಾ ಕನಸೆಲ್ಲಾ ಸುವ್ವಾಲೇ
--------------------------------------------------------------------------------------------------------

ಹೆಂಡ್ತಿಗ್ಹೇಳ್ತಿನಿ (೧೯೯೮) - ಮುಂಜಾನೆ ಮಂಜಲ್ಲಿ ಒಂದಾಗಿ ಬನ್ನಿ
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ರಮೇಶಚಂದ್ರ ಸುರೇಖ

ಗಂಡು : ಮುಂಜಾನೆ ಮಂಜಲ್ಲಿ ಒಂದಾಗಿ ಬನ್ನಿ ಎಲ್ಲ ಕೂಡಿ ನಲಿಯೋಣ
            ಹೊಂಬಾಳೆ ಕಂಪಲ್ಲಿ ಇಂಪಾಗಿ ಎಲ್ಲ ಸೇರಿ ಹಾಡಿ ಕುಣಿಯೋಣ
            ರಾಗಕ್ಕೆ ತಾಳ ಎಲ್ಲ ಹಾಕೋಣ ತಾಳಕ್ಕೆ ತಕ್ಕಥೈ  ಕುಣಿಯೋಣ.. ಹೇಹೇಹೇ ಹೇಹೇ ..    

ಗಂಡು : ಏನಿದು ನಡಿಗೆ ಏನಿದು ಉಡುಗೆ ಏನಿದು ಚಂಚಲೇ
            ಉಡುಗೆಗೆ ನಿನ್ನ ನಡಿಗೆಗೇ ನಾನು ಸೋತೇ ಕೋಮಲೇ..
ಹೆಣ್ಣು : ಬೇಡವೋ ಇನಿಯ ಹೊಗಳಿಕೆ ನಿನಗೆ ಬೇಡವೋ ಓ ದೊರೇ
          ನಿನ್ನಲ್ಲಿ ಬೆರೆತು ಜೊತೆಯಲಿ ಕಲೆತು ಮರೆತಿಹೆ ಈ ಧರೆ
ಇಬ್ಬರು : ಕನಸು ಚಿಗುರಿತಿಲ್ಲಿ ಮನಸು ಬಿರಿಯಿತಿಲ್ಲಿ ಹೊಸದು ಎಲ್ಲದಿಲ್ಲಿ ಬದುಕು ಬಣ್ಣವಿಲ್ಲಿ
ಗಂಡು : ಓ.. ಮೋನಿಕಾ.. ಓ.. ಮೋನಿಕಾ...   ಓ.. ಮೋನಿಕಾ.. ಓ.. ಮೋನಿಕಾ...
            ಮುಂಜಾನೆ ಮಂಜಲ್ಲಿ ಒಂದಾಗಿ ಬನ್ನಿ ಎಲ್ಲ ಕೂಡಿ ನಲಿಯೋಣ
            ಹೊಂಬಾಳೆ ಕಂಪಲ್ಲಿ ಇಂಪಾಗಿ ಎಲ್ಲ ಸೇರಿ ಹಾಡಿ ಕುಣಿಯೋಣ
            ರಾಗಕ್ಕೆ ತಾಳ ಎಲ್ಲ ಹಾಕೋಣ ತಾಳಕ್ಕೆ ತಕ್ಕಥೈ  ಕುಣಿಯೋಣ.. ಹೇಹೇಹೇ ಹೇಹೇ ..    

ಗಂಡು : ಭಾಮಿನಿ ಎನ್ನ ಕಾಮಿನಿ ಸನಿಹ ಬಾರೆಯಾ ರಾಗಿಣಿ
            ರೂಪಿಣಿ ಎನ್ನ ಅರಗಿಣಿ ನಿನ್ನ ಬಳಸಲೇ ಧರ್ಮಿಣಿ
ಹೆಣ್ಣು : ಬಯಲಲಿ ಅರಸ ಏನಿದು ಸರಸ ಕಸಿವಿಸಿ ಮನದಲಿ
          ಬಯಸಿದ ಕೊಡುಗೆ ಕೊಡುವೇನೂ ಉಡಿಗೆ ಹರುಷದಿ ಮನೆಯಲೀ
ಗಂಡು : ಎಂಥಾ ಸೊಬಗ ಸಿರಿಯೋ ಪ್ರಕೃತಿ ಮಡಿಲ ಸರಿಯೋ
ಇಬ್ಬರು : ಲೋಕಾದಿ ಎಲ್ಲಿದೇ ಸಂತಸ ನೆಮ್ಮದಿ
ಗಂಡು : ಓ.. ಮೋನಿಕಾ.. ಓ.. ಮೋನಿಕಾ...   ಓ.. ಮೋನಿಕಾ.. ಓ.. ಮೋನಿಕಾ...
            ಮುಂಜಾನೆ ಮಂಜಲ್ಲಿ ಒಂದಾಗಿ ಬನ್ನಿ ಎಲ್ಲ ಕೂಡಿ ನಲಿಯೋಣ
            ಹೊಂಬಾಳೆ ಕಂಪಲ್ಲಿ ಇಂಪಾಗಿ ಎಲ್ಲ ಸೇರಿ ಹಾಡಿ ಕುಣಿಯೋಣ
            ರಾಗಕ್ಕೆ ತಾಳ ಎಲ್ಲ ಹಾಕೋಣ ತಾಳಕ್ಕೆ ತಕ್ಕಥೈ  ಕುಣಿಯೋಣ.. ಹೇಹೇಹೇ ಹೇಹೇ ..    
--------------------------------------------------------------------------------------------------------

ಹೆಂಡ್ತಿಗ್ಹೇಳ್ತಿನಿ (೧೯೯೮) - ಚಿನ್ನಾರಿ ಚಿನ್ನಾರಿ ಚಿನ್ನದ ಈ ಕಂದ
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಚಿತ್ರಾ

ಚಿನ್ನಾರಿ ಚಿನ್ನಾರಿ ಚಿನ್ನದ ಈ ಕಂದ ನೈದಾ ರೇಶಿಮೆಯೋ
ಛೀ.. ಕಳ್ಳ ಛೀ.. ಕಳ್ಳ ಈ ಕಣ್ಣು ಕಪ್ಪಲ್ಲ ತುಂಬಿದ ಹುಣ್ಣಿಮೆಯೋ

ಬಂದನಮ್ಮ ಬಂದಾನಮ್ಮ ಬಾನಿನಿಂದ ತಂದನಮ್ಮ ಪಾಯಾಸದೂಟ ತುಟಿಗಳಿಂದ
ಕಣ್ಣಲ್ಲಿ ಸುಳಿ ಕೆನ್ನೇಲಿ ಗುಳಿ ಗಲ್ಲದಲೆಲ್ಲಾ ಕೆಂಪಿನೋಕುಳಿ ಮಡಿಲೇ ಸ್ವರ್ಗವಾಯಿತೋ
ಚಿನ್ನಾರಿ ಚಿನ್ನಾರಿ ಚಿನ್ನದ ಈ ಕಂದ ನೈದಾ ರೇಶಿಮೆಯೋ
ಛೀ.. ಕಳ್ಳ ಛೀ.. ಕಳ್ಳ ಈ ಕಣ್ಣು ಕಪ್ಪಲ್ಲ ತುಂಬಿದ ಹುಣ್ಣಿಮೆಯೋ

ಎಲ್ಲಾ ಹೂವ ನಡುವಲ್ಲೂ ಗಂಧವು ಈ ಕಂದಾ ಎಲ್ಲಾ ರತ್ನದ ನಡವಲ್ಲೂ ಹೊಳಪು ಈ ಕಂದಾ
ಈ ಕಂದಾ ನಕ್ಕರೆ ಕೋಗಿಲೆ ಸೋಲುವುದೂ ಎಂದಾದರೂ ಅತ್ತರೆ ಮೋಡವೇ ಓಡುವುದೂ
ಕಾಲು ಗೆಜ್ಜೆಯ ದನಿ ಹರುಷ ಹರಸುವೇನು ನೂರು ವರುಷ ಮಡಿಲೇ ಸ್ವರ್ಗವಾಯಿತೋ ..
ಚಿನ್ನಾರಿ ಚಿನ್ನಾರಿ ಚಿನ್ನದ ಈ ಕಂದ ನೈದಾ ರೇಶಿಮೆಯೋ
ಛೀ.. ಕಳ್ಳ ಛೀ.. ಕಳ್ಳ ಈ ಕಣ್ಣು ಕಪ್ಪಲ್ಲ ತುಂಬಿದ ಹುಣ್ಣಿಮೆಯೋ

ನಿನ್ನ ಹೆತ್ತವಳಾ ಪುಣ್ಯ ಇರಲಿ ಹೀಗೇನೆ ಅಂಥಾ ಪುಣ್ಯವತಿ ಸ್ಥಾನ ನಾನು ಕಾಣೇನೇ
ಈ ಕಂದ ಕೈ ಬೀಸದ್ದಿದರೇ ಹಗಲಿಲ್ಲ ಈ ಕಂದ ಕಾಲ್ ಚಾಚದಿದ್ದರೇ ಇರುಳಿಲ್ಲಾ ..
ಬೆಣ್ಣೆ ಕದ್ದನು ಗೋಪಾಲ ಕಂದ ನನ್ನೇ ಕದ್ದನು ಈ ಬಾಲ ಕಂದ
ಮಡಿಲೇ ಸ್ವರ್ಗವಾಯಿತೋ..
ಚಿನ್ನಾರಿ ಚಿನ್ನಾರಿ ಚಿನ್ನದ ಈ ಕಂದ ನೈದಾ ರೇಶಿಮೆಯೋ
ಛೀ.. ಕಳ್ಳ ಛೀ.. ಕಳ್ಳ ಈ ಕಣ್ಣು ಕಪ್ಪಲ್ಲ ತುಂಬಿದ ಹುಣ್ಣಿಮೆಯೋ
--------------------------------------------------------------------------------------------------------

No comments:

Post a Comment