- ವನದೇವಿ ಹೂ ಮುಡಿದು ನಲಿ ನಲಿದಾಡಲು
- ಮನ್ಮಥ ಬಳಿಯಲಿ ನಿಶಾ ಸುಂದರಿ
- ಮಮತೆಯ ಬನದಲಿ ಅರಳಿದ ಮಲ್ಲಿಗೆ
- ಈ ರೂಪ ರೂಪನ ಈ ನೋಟ ಮಧುವನ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಕೋರಸ್
ವನದೇವಿ ಹೂ ಮುಡಿದು ನಲಿ ನಲಿದಾಡಲು ವಸಂತ ಕಾಲ ಬಂದಾಗ
ಬಾನಾಡಿ ಆದಿ ಬಾನೇರಿ ಹಾಡಿ ಆನಂದ ಆನಂದ ಎನಬೇಕು ಆನಂದ ಆನಂದ ಎನಬೇಕು
ಎಳೆಯ ಮಾಮರವೆಲ್ಲ ಚಿಗುರಿಂದ ತುಂಬಿ ಗಾಳಿಗೆ ಓಲಾಡಿ ನಲಿವಾಗ
ಎಲೆಗೂ ಮರೆಯಲ್ಲಿ ಕೋಗಿಲೆ ಮರಗಳು ಸಂಗೀತ ಕೇಳಿ ಬಂದಾಗ ಸಂಗೀತ ಕೇಳಿ ಬಂದಾಗ
ಹೂವಿಂದ ಹಾರಿ ಹೂವನ್ನು ಸೇರಲು ದುಂಬಿಗಳ ಚೆಲ್ಲಾಟ ಕಣ್ಣಿಗೆ ಆನಂದ ತರುವ ಸವಿನೋಟ ಓಓಓಓ
ಸಂಜೆಯ ನಸುಗೆಂಪು ತಂಗಾಳಿಯ ತಂಪು ಹಕ್ಕಿಯ ಹಾಡಿನ ಇಂಪು ಕಿವಿಯಲಿ
ನೀಲಿಯ ಬಾನಲಿ ನೂರಾರು ಚಿತ್ತಾರ ಕಣ್ಗಳ ತುಂಬಿ ನಿಂತಾಗ
ಆಸೆಯ ಕಡಲಲ್ಲಿ ಮನಸು ಮೀನಂತಾಗಿ ತೇಲಾಡಿ ಓಲಾಡಿ ಬರುವಾಗ
ಬಾಳೆಲ್ಲ ಎಂಥಾ ಸೊಗಸಾದ ಓಹೋ ಹಾ ಹಾ ಹೇ ಹೇ ಓಹೊಹೋಹೊಹೋ
-------------------------------------------------------------------------------------------------------------------------
ಹೆಣ್ಣು ಹುಲಿ (೧೯೮೨) - ಮನ್ಮಥ ಬಳಿಯಲಿ ನಿಶಾ ಸುಂದರಿ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಆದಿನಾರಾಯಣ,ಎಸ್.ಜಾನಕೀ
ಗಂಡು : ಹೂ.. ಹೂಂಹೂಹೂಹೂಂ (ಆ)
ಮನ್ಮಥ ಬಳಿಯಲಿ (ಲಲಲಾ ) ನಿಶಾ.. ಸುಂದರಿ (ಲಲಲಾ )
ಬಳಿಗೆ ಬಾರದೆ ಓಡುವೇಯಾ (ಆ.. ಆ.. ಆ.. )
ಮದನನ ಬಾಣವ ಎಸೆಯುದೇ ಎದೆಗೆ ಮನಸಾ ಕಾಡದೆ ಬಳಿಗೆ
ಹೂ.. ಹೂಂಹೂಹೂಹೂಂ (ಆ.. ಆ ) ಹೂ.. ಹೂಂಹೂಹೂಹೂಂ
ಮನ್ಮಥ ಬಳಿಯಲಿ (ಲಲಲಾ ) ನಿಶಾ.. ಸುಂದರಿ (ಲಲಲಾ )
ಗಂಡು : (ಆಂ) ವಿರಹಾ ಈ ವಿರಹ
ಹೆಣ್ಣು : ವಿರಹ ತಾಳೆ ಈ ವಿರಹಾ
ಗಂಡು : ಸ್ವಪ್ನ ಸುಂದರಿ ಬಂದು ಎದೆಯ ಗುಡಿಯಲೀ ನಿಂದು
ಗಂಡು : ಸ್ವಪ್ನ ಸುಂದರಿ ಬಂದು ಎದೆಯ ಗುಡಿಯಲೀ ನಿಂದು
ನೂರು ಬಯಕೆಯ ತಂದು ಮನಸು ಪುಷ್ಪಲತೆಯಂತಾಯ್ತು
ಉಲ್ಲಾಸ ಸಂತೋಷ ತುಂಬಿ (ಆ.. ಆ.. ಆ.. )
ಈಗ ಕಣ್ಣಲ್ಲಿ ಏನೇನೋ ಕನಸು
ಮನ್ಮಥ ಬಳಿಯಲಿ (ಲಲಲಾ ) ನಿಶಾ.. ಸುಂದರಿ (ಲಲಲಾ )
ಗಂಡು : ಬಾರೇ ನೀ ಬಾರೇ
ಹೆಣ್ಣು : ಬಂದೆ ಒಲವ ತೋರೋ
ಹೆಣ್ಣು : ಬಂದೆ ಒಲವ ತೋರೋ
ಗಂಡು : ನಿತ್ಯ ಸುಖ ಶಾಂತಿ ತರಲೂ.. ಬಾಳಲೀ ಆನಂದ ಕೊಡಲೂ
ನಿತ್ಯ ಸುಖ ಶಾಂತಿ ತರಲೂ. ಮುತ್ತಿನ ಮಳೆಯಲಿ ನೆನೆಯುತ ಇಣುಕೂ
ಹರ್ಷದ ಉಯ್ಯಾಲೆಯಲ್ಲಿ (ಆಹ್ ಆಹ್ ಆಹ್ ) ನಿತ್ಯ ಹಾಡಿ ತೂರಾಡುತಿರಲು
ಮನ್ಮಥ ಬಳಿಯಲಿ (ಲಲಲಾ ) ನಿಶಾ.. ಸುಂದರಿ (ಲಲಲಾ )
ಹೂ.. ಹೂಂಹೂಹೂಹೂಂ (ಆ.. ಆ ) ಹೂ.. ಹೂಂಹೂಹೂಹೂಂ (ಆ.. ಆ )
ಹೂ.. ಹೂಂಹೂಹೂಹೂಂ (ಆ.. ಆ ) ಹೂ.. ಹೂಂಹೂಹೂಹೂಂ (ಆ.. ಆ )
ಹೂ.. ಹೂಂಹೂಹೂಹೂಂ (ಆ.. ಆ ) ಹೂ.. ಹೂಂಹೂಹೂಹೂಂ (ಆ.. ಆ )
------------------------------------------------------------------------------------------------------------------------
ಹೆಣ್ಣು ಹುಲಿ (೧೯೮೨) - ಮಮತೆಯ ಬನದಲಿ ಅರಳಿದ ಮಲ್ಲಿಗೆ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಕೋರಸ್
ಹೆಣ್ಣು : ಆ... ಆಆಆ.. ಆಆಆ.. ಆಆಆಅ.... (ಲಲಲಲ್ಲಲ್ಲಾ ಲಲಲಲಾ ಲಲಲಲ್ಲಲ್ಲಾ ಲಲಲಲಾ )
ಮಮತೆಯ ಬನದಲಿ ಅರಳಿದ ಮಲ್ಲಿಗೆ ಹೂವೆ
ಮಾತೆಯ ಮನದ ಮಂದಿರದಲ್ಲಿ ಬೆಳಗುವ ದೀಪವೇ... ಬೆಳಗುವ ದೀಪವೇ
ಮಮತೆಯ ಬನದಲಿ ಅರಳಿದ ಮಲ್ಲಿಗೆ ಹೂವೆ
ಮಮತೆಯ ಬನದಲಿ ಅರಳಿದ ಮಲ್ಲಿಗೆ ಹೂವೆ
ಮಾತೆಯ ಮನದ ಮಂದಿರದಲ್ಲಿ ಬೆಳಗುವ ದೀಪವೇ.. ಬೆಳಗುವ ದೀಪವೇ
(ಲಲಲಲ್ಲಲ್ಲಾ ಲಲಲಲಾ ಲಲಲಲ್ಲಲ್ಲಾ ಲಲಲಲಾ )
(ಲಲಲಲ್ಲಲ್ಲಾ ಲಲಲಲಾ ಲಲಲಲ್ಲಲ್ಲಾ ಲಲಲಲಾ )
ಹೆಣ್ಣು : ಗಂಗಾ ಯಮುನಾ ಲಹರಿಯ ಹಾಗೆ ನಿನ್ನಯ ಹೂನಗೆ ಅಂದ
ಮಂಜುಳಾ ವೀಣಾ ನಾದ ತರಂಗ ಮುದ್ದಿನ ಮಾತಿನ ಚೆಂದ
ಸಾವಿರ ಹುಣ್ಣಿಮೆ ಬಾಳಲೇ ಕಂದ ಹರುಸುವೆ ನಿನ್ನ ಸಂತಸದಿಂದ
ನೀನೇ ನನ್ನ ಜೀವನ ಸ್ಪಂದ
ಮಮತೆಯ ಬನದಲಿ ಅರಳಿದ ಮಲ್ಲಿಗೆ ಹೂವೆ
ಮಾತೆಯ ಮನದ ಮಂದಿರದಲ್ಲಿ ಬೆಳಗುವ ದೀಪವೇ.. ಬೆಳಗುವ ದೀಪವೇ
(ಲಲಲಲ್ಲಲ್ಲಾ ಲಲಲಲಾ ಲಲಲಲ್ಲಲ್ಲಾ ಲಲಲಲಾ )
(ಲಲಲಲ್ಲಲ್ಲಾ ಲಲಲಲಾ ಲಲಲಲ್ಲಲ್ಲಾ ಲಲಲಲಾ )
ಹೆಣ್ಣು : ಆಗಿರಲೆಂದು ನಿನ್ನೀ ಹೃದಯ ನಿರ್ಮಲ ಪ್ರೇಮದಾನಿಲಯ
ಬರೆದಿರು ನೀನು ನಾಳೆಯ ಪುಟದೆ ಬಾಳಿನ ನೂತನ ಕಥೆಯ
ಕನಸಿನ ಗೋಪುರ ಕಟ್ಟಿಹೆ ನಾನು ಅದರಲಿ ಮೆರೆದು ಆಳುವೇ ನೀನು
ದೈವ ತಂದ ಭಾಗ್ಯವೇ ನೀನು
ಮಮತೆಯ ಬನದಲಿ ಅರಳಿದ ಮಲ್ಲಿಗೆ ಹೂವೆ
ಮಾತೆಯ ಮನದ ಮಂದಿರದಲ್ಲಿ ಬೆಳಗುವ ದೀಪವೇ.. (ಬೆಳಗುವ ದೀಪವೇ )
-------------------------------------------------------------------------------------------------------------------------
ಹೆಣ್ಣು ಹುಲಿ (೧೯೮೨) - ಈ ರೂಪ ಹೂಬನ ಈ ನೋಟ ಮಧುವನ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ಎಸ್.ಪಿ.ಬಿ
ಗಂಡು : ಈ ರೂಪ ಹೂಬನ ಈ ನೋಟ ಮಧುವನ
ಈ ಅಂದ ಚೆಂದ ಹೆಣ್ಣಿಗಿಟ್ಟೂ ಗಂಡಿಗಾಸೇ ಕೊಟ್ಟೇ .. ಹ್ಹಾ
ಬ್ರಹ್ಮಗಂಟು ಹಾಕಿಬಿಟ್ಟ ಅಹ್.. ಅಹ್ ಅಹ್ ಅಹ್
ಹೆಣ್ಣು : ನೀ ಕಂಡೇ ದರುಶನ ನಾ ತಂದೇ ತನುಮನ
ಈ ಹೆಣ್ಣಿನಲ್ಲಿ ಪ್ರೀತಿಯಿಟ್ಟ ಗಂಡಿಗಾಸೇ ಕೊಟ್ಟ
ಈ ಜೋಡಿ ಮಾಡಿ ಬಿಟ್ಟೂ ಬಿಟ್ಟ ಅಹ್ ಅಹ್ ಅಹ್
ನೀ ಕಂಡೇ ದರುಶನ
ಗಂಡು : ಈ ನೋಟ ಮಧುವನ
ಹೆಣ್ಣು : ಆಹ್ ಹಾ ಹಾಹಾಹಾ ಲಲಲ ಲಲಲ ಲಾ
ಗಂಡು : ಆಹ್ ಅಹಹಾ. ಹಾಹಾಹಾ ಲಾಲಲಲಾ ಲಾಲಲಲಾ ಲರಲರಲಲಾ
ಗಂಡು : ಈ ಮೀರುಗುವ ತುಟಿಯೊಳಗೇ.. ಮಧುರಸವನೂ ತುಂಬಿದನೂ..
ಈ ಮೀರುಗುವ ತುಟಿಯೊಳಗೇ.. ಮಧುರಸವನೂ ತುಂಬಿದನೂ..
ಈ ಹರೆಯದ ಕಲಶದಲೀ.. ನವರಸಗಳ ಇರಿಸಿದನೂ
ಹೆಣ್ಣು : ನಮ್ಮನ್ನೂ ಬೆರೆಸಿ ಪ್ರೀತಿಯ ಹರಿಸಿ
ನಮ್ಮನ್ನೂ ಬೆರೆಸಿ ಪ್ರೀತಿಯ ಹರಿಸಿ ಬಾಳಿಗೇ ಅರ್ಥವ ಕೊಟ್ಟ...
ಗಂಡು : ಈ ರೂಪ ಹೂಬನ ಈ ನೋಟ ಮಧುವನ
ಹೆಣ್ಣು : ಈ ಹೆಣ್ಣಿನಲ್ಲಿ ಪ್ರೀತಿಯಿಟ್ಟ ಗಂಡಿಗಾಸೇ ಕೊಟ್ಟ
ಈ ಜೋಡಿ ಮಾಡಿ ಬಿಟ್ಟೂ ಬಿಟ್ಟ ಅಹ್ ಅಹ್ ಅಹ್
ನೀ ಕಂಡೇ ದರುಶನ
ಗಂಡು : ಈ ನೋಟ ಮಧುವನ
ಹೆಣ್ಣು : ಈ ಪ್ರೇಮದ ಪಲ್ಲವಿಗೇ... ತಾರುಣ್ಯವೇ ಹೊಸ ಸೊಗಡ ..
ಈ ಪ್ರೇಮದ ಪಲ್ಲವಿಗೇ... ತಾರುಣ್ಯವೇ ಹೊಸ ಸೊಗಡ ..
ನೀ ನೀಡಿದ ಕಾಣಿಕೆಯಾ .. ಸವಿ ಅನುಭವ ಈ ನಿಲಯ
ಗಂಡು : ನನ್ನ ಎದೆ ಹಕ್ಕಿ ಹಾರಿ ನಿನ್ನ ಎದೆ ಗೂಡೂ ಸೇರಿ
ನನ್ನ ಎದೆ ಹಕ್ಕಿ ಹಾರಿ ನಿನ್ನ ಎದೆ ಗೂಡೂ ಸೇರಿ ಹಾಡಿದೇ ದನಿ ಕೂಡಿ..
ಹೆಣ್ಣು : ನೀ ಕಂಡೇ ದರುಶನ ನಾ ತಂದೇ ತನುಮನ
ಗಂಡು : ಈ ಅಂದ ಚೆಂದ ಹೆಣ್ಣಿಗಿಟ್ಟೂ ಗಂಡಿಗಾಸೇ ಕೊಟ್ಟೇ .. ಹ್ಹಾ
ಬ್ರಹ್ಮಗಂಟು ಹಾಕಿಬಿಟ್ಟ ಅಹ್.. ಅಹ್ ಅಹ್ ಅಹ್
ಈ ರೂಪ ಹೂಬನ
ಹೆಣ್ಣು : ಈ ನೋಟ ನಗುವನ
-------------------------------------------------------------------------------------------------------------------------
No comments:
Post a Comment