03. ಚಂದವಳ್ಳಿಯ ತೋಟ (೧೯೬೪)


ಚಂದವಳ್ಳಿಯ ತೋಟ ಚಿತ್ರದ ಹಾಡುಗಳು
  1. ಓ ನನ್ನ ಭಾಂದವರೇ
  2. ಒಂದಾಗುವಾ ಮುಂದಾಗುವಾ
  3. ಬಳ್ಳಿ ಹಂಗೆ ಬಳುಕುತಲಿ
  4. ಸುಮಾ ಬಾಲೆಯೇ ಪ್ರೇಮದ ಸಿರಿಯೇ
  5. ನಮ್ಮ ಮನೆಯೇ ನಂದನ
  6. ಈ ನೀತಿ ಈ ನ್ಯಾಯ 
ಚಂದವಳ್ಳಿಯ ತೋಟ (1964) - ಓ.. ನನ್ನ ಭಾಂಧವರೇ. ಕನ್ನಡ ಕುಲ ಪುತ್ರರೇ
ಸಂಗೀತ: ಟಿ.ಜಿ.ಲಿಂಗಪ್ಪ, ಸಾಹಿತ್ಯ: ತ.ರಾ.ಸು, ಗಾಯನ : ಪಿ.ನಾಗೇಶ್ವರರಾವ

ಓ.. ನನ್ನ ಭಾಂಧವರೇ. ಕನ್ನಡ ಕುಲ ಪುತ್ರರೇ ಕಣ್ತೆರೆದು ನೋಡಿರೋ... ಈ ಬಾಳ ಕಥೆಯಾ
ಒಂದು ಮನೆಯದಲ್ಲ ಒಂದು ಊರಿನದಲ್ಲ ಭಾರತಾಂಬೆಯೆ ಕರೆದ ಕಣ್ಣೀರ ಹೊಳೆಯಾ....

ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ .... ಓಓಓಓಓ
ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ
ಸೋದರ ದ್ವೇಷ ಹೆಣ್ಣಿನ ರೋಷ ಆದೀತೋ ದೇಶಕೆ ಯಮ ಪಾಶ
ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ

ದಾನವನಾಗದೇ ಮಾನವನಾಗು ಕಾಣದ ದೈವಕೆ ತಲೆಬಾಗು
ದಾನವನಾಗದೇ ಮಾನವನಾಗು ಕಾಣದ ದೈವಕೆ ತಲೆಬಾಗು
ಸಕಲಕಪ ಸುಂದರ ಶಾಂತಿಯ ಸೊಬಗು ಪ್ರೇಮಕೆ ನೀನೇ ಶರಣಾಗು
ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ

ಸುಖದಲ್ಲಿ ಬಾಳಿರೋ ಸ್ವಾರ್ಥವ ಮೆರೆತು ಸೋದರ ಭಾವದೆ ನೀ ಬೆರೆತು
ಸುಖದಲ್ಲಿ ಬಾಳಿರೋ ಸ್ವಾರ್ಥವ ಮೆರೆತು ಸೋದರ ಭಾವದೆ ನೀ ಬೆರೆತು
ನಶ್ವರ ಜೀವನ ನೀನಿದ ತಿಳಿಯೋ ಶಾಶ್ವತ ಒಂದೇ ಮಾನವತೆ
ಸತ್ಯದ ನುಡಿಯ ಲಾಲಿಸಿರೋ ಪಾಲಿಸಿರೋ...ಓಓಓಓಓ
ಓ.. ನನ್ನ ಭಾಂಧವರೇ. ಕನ್ನಡ ಕುಲ ಪುತ್ರರೇ
-----------------------------------------------------------------------------------------------------

ಚಂದವಳ್ಳಿಯ ತೋಟ (1964) - ಒಂದಾಗುವಾ ಮುಂದಾಗುವಾ ನೆರವಾಗುವ
ಸಂಗೀತ: ಟಿ.ಜಿ.ಲಿಂಗಪ್ಪ, ಸಾಹಿತ್ಯ: ಆರ್.ಏನ್.ಜಯಗೋಪಾಲ್, ಗಾಯನ : ಕೆ.ಜೆ.ಏಸುದಾಸ್, ಎಲ್.ಆರ್.ಈಶ್ವರಿ

ಗಂಡು : ಓಹೋ .. ಓಯ್ ಓಹೋ .. ಓಯ್
ಹೆಣ್ಣು : ಆಆಆ.. ಆಆಆ... ಹೊಯ್
         ಒಂದಾಗುವಾ (ಹೊಯ್) ಮುಂದಾಗುವಾ (ಹೊಯ್ ಹೊಯ್ )
ಹೆಣ್ಣು : ಒಂದಾಗುವಾ ಮುಂದಾಗುವಾ ನೆರವಾಗುವ ಎಲ್ಲರೂ ಸೇರಿ
ಗಂಡು : ಕೈ ನೀಡುವ ಸೈ ಎನ್ನುವ
           ಕೈ ನೀಡುವ ಸೈ ಎನ್ನುವ ನಮಗೊಂದೇ ಗುರಿ 
ಇಬ್ಬರು : ಒಂದಾಗುವಾ ಮುಂದಾಗುವಾ ನೆರವಾಗುವ ಎಲ್ಲರೂ ಸೇರಿ

ಹೆಣ್ಣು : ಕರೆದಾಳೆ ಆ ತಾಯಿ ನಮ್ಮವ್ವ ಭೂದೇವಿ ಅದಕೇಳಿ ನೀಗುವ ಇದೇ ಈ ಬೇಧವಾ
ಗಂಡು : ಆ... ದುಡಿಯೋಣ ನಾವೆಲ್ಲಾ ಮರೆಯೋಣ ನೋವೆಲ್ಲಾ
           ಇದರಿಂದ ತಾಯಿಗೆ ತರುವಾ ತಾ ಮೋದವಾ
ಹೆಣ್ಣು : ಬರಿಮಾತು ಸಾಕು
ಗಂಡು : ಗುರಿ ಸೇರಬೇಕು
ಇಬ್ಬರು : ಆನಂದಿದೆ ಉಲ್ಲಾಸದೆ ಈ ದಾರಿ ಸೇರಿ ಸಾಗುವಾ
             ಒಂದಾಗುವಾ ಮುಂದಾಗುವಾ ನೆರವಾಗುವ ಎಲ್ಲರೂ ಸೇರಿ

ಗಂಡು : ಬರಡಾದ ಈ ಭೂಮಿ ಬಂಗಾರ ತಾನಾಗೇ ಬದುಕೆಲ್ಲಾ ಎಂದೆಂದೂ ಸಂತೋಷವು
ಹೆಣ್ಣು : ಆಆಆ... ಹೊಸಬಾಳ ಕಾಣೋಣ ಹೊಸ ಹಾಡ ಹಾಡೋಣ
         ಎಲ್ಲೆಲ್ಲೂ ಕೇಳಲಿ ತಾಯ್ ಸಂದೇಶವು
ಗಂಡು : ಆಆಆ... ಬಲಬೇಕು ಮುಂದೆ
ಹೆಣ್ಣು : ಛಲಬೇಕು ಹಿಂದೆ
ಗಂಡು : ಈ ತೋಟದ
ಹೆಣ್ಣು : ಹೊಸ ನೋಟವ
ಇಬ್ಬರು : ಕೊಂಡಾಡಿ ಒಂದುಗೂಡುವಾ
            ಒಂದಾಗುವಾ ಮುಂದಾಗುವಾ ನೆರವಾಗುವ ಎಲ್ಲರೂ ಸೇರಿ
            ಕೈ ನೀಡುವ ಸೈ ಎನ್ನುವ ಕೈ.... 
           ನೀಡುವ ಸೈ ಎನ್ನುವ ನಮಗೊಂದೇ ಗುರಿ
          ಒಂದಾಗುವಾ ಮುಂದಾಗುವಾ ನೆರವಾಗುವ ಎಲ್ಲರೂ ಸೇರಿ
         ಒಂದಾಗುವಾ ಮುಂದಾಗುವಾ ನೆರವಾಗುವ ಎಲ್ಲರೂ ಸೇರಿ
        ಒಂದಾಗುವಾ ಮುಂದಾಗುವಾ ನೆರವಾಗುವ ಎಲ್ಲರೂ ಸೇರಿ
ಗಂಡು : ಓಓಓಓಓಓಓಓಓ ... ಹೆಣ್ಣು : ಆಆಆಆ ಆಆಆ
ಗಂಡು : ಓಓಓಓಓಓಓಓಓ ... ಹೆಣ್ಣು : ಆಆಆಆ ಆಆಆ
ಗಂಡು : ಓಓಓಓಓಓಓಓಓ ... ಹೆಣ್ಣು : ಆಆಆಆ ಆಆಆ
-------------------------------------------------------------------------------------------------------------------------

ಚಂದವಳ್ಳಿಯ ತೋಟ (೧೯೬೪) - ಬಳ್ಳಿ ಹಂಗೆ ಬಳಕುತಲಿ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ : ಡಾ.ಪಿ.ಬಿ.ಶ್ರೀ ಮತ್ತು ಎಸ್.ಜಾನಕಿ

ಗಂಡು : ಓಓಓಓಓ... ಹೆಣ್ಣು : ಓಓಓಓಓಓಓ
ಗಂಡು : ಬಳ್ಳಿ ಹಂಗೆ ಬಳಕುತಲಿ ಮಳ್ಳಿ ಹಂಗೆ ನೋಡುತಲಿ
           ಬಾರೆ ನೀ ಬಾರೆ ಈ ಹಳ್ಳಿಗೆಲ್ಲ ಚೆಲುವೆ ನೀನೇ ಓ ನೀರೆ ನೀ ಬಾ ಬಾರೆ
ಹೆಣ್ಣು : ಚಿಗುರು ಮೀಸೆ ತೀಡುತಲಿ ಹುರುಪು ಮಾತನಾಡುತಲಿ ಬಾರಾ ನೀ ಬಾರಾ
         ಈ ಊರಿಗೆಲ್ಲ ಹುಲಿಯು ನೀನೇ ಓ ಧೀರ ನೀ ಬಾ ಬಾರಾ

ಗಂಡು : ಚೆoದುಟಿಯ ಅಂಚಿನಲಿ ಕಿರುನಗೆ ಬೀರಿ
           ನಿನ್ನ ಚೆoದುಟಿಯ ಅಂಚಿನಲಿ ಕಿರುನಗೆ ಬೀರಿ, ಬಾರೆ ಎನ್ನ ಸಿಂಗಾರಿ
ಹೆಣ್ಣು : ನಾ ಬಂದಿದೆ ನೀ ತಂದಿದೆ ನೀ ರೆಕ್ಕೆ ಕಟ್ಟಿ ಬಾ ಬಳಿ ಸಾರಿ
ಗಂಡು : ಬಳ್ಳಿ ಹಂಗೆ ಬಳಕುತಲಿ ಮಳ್ಳಿ ಹಂಗೆ ನೋಡುತಲಿ ಬಾರೆ ನೀ ಬಾರೆ
ಹೆಣ್ಣು : ಈ ಊರಿಗೆಲ್ಲ ಹುಲಿಯು ನೀನೇ ಓ ಧೀರ ನೀ ಬಾ ಬಾರಾ

ಹೆಣ್ಣು : ಚೆಲುವಿನ ಚೆನ್ನಿಗನೆ ಕನ್ನಡದ ಕುಲಮಗನೆ,
ನಿನ್ನ ನನ್ನ ಪ್ರೀತಿಯ ಸಮ ಕಾಣೆ
ಗಂಡು : ಅರಳಿದ ಮಲ್ಲಿಗೆಯೇ ಸೊಬಗಿನ ಸಂಪಿಗೆಯೇ,
           ನೀನೇ ನನ್ನ ಪ್ರಾಣವು ಜಾಣೆ
ಹೆಣ್ಣು : ಮನಸೋತೇ ರಾಯನ ಆಣೆ
ಗಂಡು : ನಿನ್ನ ಮೆಚ್ಚಿ ಬಂದೆನಾನೇ
ಹೆಣ್ಣು : ಮನಸೋತೇ ರಾಯನ ಆಣೆ
ಗಂಡು : ನಿನ್ನ ಮೆಚ್ಚಿ ಬಂದೆನಾನೇ
ಇಬ್ಬರೂ : ಎಂದೆಂದೂ ಆನಂದ ನಮಗೆಂದೆ ಕಾದಿದೆ
ಗಂಡು : ಬಳ್ಳಿ ಹಂಗೆ ಬಳಕುತಲಿ ಮಳ್ಳಿ ಹಂಗೆ ನೋಡುತಲಿ ಬಾರೆ ನೀ ಬಾರೆ
           ಈ ಹಳ್ಳಿಗೆಲ್ಲ ಚೆಲುವೆ ನೀನೇ ಓ ನೀರೆ ನೀ ಬಾ ಬಾರೆ
ಹೆಣ್ಣು : ಚಿಗುರು ಮೀಸೆ ತೀಡುತಲಿ ಹುರುಪು ಮಾತನಾಡತಲಿ ಬಾರಾ ನೀ ಬಾರಾ
          ಈ ಊರಿಗೆಲ್ಲ ಹುಲಿಯು ನೀನೇ ಓ ಧೀರ ನೀ ಬಾ ಬಾರಾ
-------------------------------------------------------------------------------------------------------------------------

ಚಂದವಳ್ಳಿಯ ತೋಟ (1964) - ಸುಮಬಾಲೆಯ ಪ್ರೇಮದ ಸಿರಿಯೇ
ಸಂಗೀತ: ಟಿ.ಜಿ.ಲಿಂಗಪ್ಪ , ಸಾಹಿತ್ಯ:ಆರ್.ಏನ್.ಜಯಗೋಪಾಲ್, ಗಾಯನ: ಎಲ್.ಆರ್.ಈಶ್ವರಿ

ಹೂಂ... ಹೊಯ್ ಓಓಓಓಓ... ಒಹೋ...ಓಓಓ ಓಓಓ ಹೊಯ್
ಓಓಓ ಓಓಓ ಹೊಯ್ ಓಓಓ ಓಓಓ ಓಓಓ ಹೊಯ್
ಸುಮಬಾಲೆಯ ಪ್ರೇಮದ ಸಿರಿಯೇ ಇದೇನು ಕೋಪ ಅರಿಯೇ
ಸದಾ ವಿನೋದ ಸರಿಯೇ ನಾನೆಂದು ನಿನ್ನ ಮರೆಯೇ
ಸುಮಬಾಲೆಯ ಪ್ರೇಮದ ಸಿರಿಯೇ ಇದೇನು ಕೋಪ ಅರಿಯೇ
ಸದಾ ವಿನೋದ ಸರಿಯೇ ನಾನೆಂದು ನಿನ್ನ ಮರೆಯೇ
ಸುಮಬಾಲೆಯ ಪ್ರೇಮದ ಸಿರಿಯೇ

ಕಣ್ಣಿಗೆ ಕಾಣದೆ ಮರೆನಿಂತು ಹೆಣ್ಣನು ಕಾಡುವುದೇಕಿಂತು ಆಹಾ... ಆ..ಆ..ಆ...
ಕಣ್ಣಿಗೆ ಕಾಣದೆ ಮರೆನಿಂತು ಹೆಣ್ಣನು ಕಾಡುವುದೇಕಿಂತು
ಬಳಿ ಸಾರಿ ಬೇಗನೆ ಬಾರಾ ನಲವಿಂದ ಮೊಗವ ನೀ ತೋರಾ
ಬಳಿ ಸಾರಿ ಬೇಗನೆ ಬಾರಾ ನಲವಿಂದ ಮೊಗವ ನೀ ತೋರಾ
ನಾ ಕಾದಿಹೆ ನಿನಗಾಗಿಯೇ ಬಾರೆನ್ನ ಚಲುವ ಮರಿಯೇ
ಸುಮಬಾಲೆಯ ಪ್ರೇಮದ ಸಿರಿಯೇ ಇದೇನು ಕೋಪ ಅರಿಯೇ
ಸದಾ ವಿನೋದ ಸರಿಯೇ ನಾನೆಂದು ನಿನ್ನ ಮರೆಯೇ
ಸುಮಬಾಲೆಯ ಪ್ರೇಮದ ಸಿರಿಯೇ

ಮೆಲ್ಲನೆ ಹೆಜ್ಜೆಯ ನೀ ಹಾಕಿ ಗಲ್ಲಕೆ ಮುತ್ತನು ನೀ ಸೋಕೇ ಆಆಆ... ಓಓಓ ...ಆಆಆ...
ಮೆಲ್ಲನೆ ಹೆಜ್ಜೆಯ ನೀ ಹಾಕಿ ಗಲ್ಲಕೆ ಮುತ್ತನು ನೀ ಸೋಕೇ
ಉಲ್ಲಾಸದಿಂದ ನಾ ಕುಣಿಯುವೇ ಸಂತೋಷದಿಂದ ನೀ ತಣಿವೆ
ಉಲ್ಲಾಸದಿಂದ ನಾ ಕುಣಿಯುವೇ ಸಂತೋಷದಿಂದ ನೀ ತಣಿವೆ
ಮನಸೋತಿಹೆ ಮೈ ಮರೆತಿಹೆ ಬಾರೆನ್ನ ಕುರಿಯ ಮರಿಯೇ
ಸುಮಬಾಲೆಯ ಪ್ರೇಮದ ಸಿರಿಯೇ ಇದೇನು ಕೋಪ ಅರಿಯೇ
ಸದಾ ವಿನೋದ ಸರಿಯೇ ನಾನೆಂದು ನಿನ್ನ ಮರೆಯೇ
ಸುಮಬಾಲೆಯ ಪ್ರೇಮದ ಸಿರಿಯೇ ಹೂಂ... 
ಹೊಯ್ ಓಓಓಓಓ... ಒಹೋ...ಓಓಓ ಓಓಓ ಹೊಯ್
ಓಓಓ ಓಓಓ ಹೊಯ್ ಓಓಓ ಓಓಓ ಓಓಓ ಹೊಯ್
-------------------------------------------------------------------------------------------------------------------------

ಚಂದವಳ್ಳಿಯ ತೋಟ (1964) - ನಮ್ಮ ಮನೆಯೆ ನಂದನ ಇದುವೇ ಬೃಂದಾವನ
ಸಂಗೀತ: ಟಿ.ಜಿ.ಲಿಂಗಪ್ಪ, ಸಾಹಿತ್ಯ: ತ.ರಾ.ಸು, ಗಾಯನ : ಎಸ್.ಜಾನಕಿ

ನಮ್ಮ ಮನೆಯೆ ನಂದನ ಇದುವೇ ಬೃಂದಾವನ
ನಿನ್ನ ದನಿಯೆ ಗಾಯನ ವೇಣು ಗಾನ ದೇವನ
ನಿನ್ನ ದನಿಯೆ ಗಾಯನ ವೇಣು ಗಾನ ದೇವನ
ನಮ್ಮ ಮನೆಯೆ ನಂದನ ಇದುವೇ ಬೃಂದಾವನ
ನಿನ್ನ ದನಿಯೆ ಗಾಯನ ವೇಣು ಗಾನ ದೇವನ
ನಿನ್ನ ದನಿಯೆ ಗಾಯನ ವೇಣು ಗಾನ ದೇವನ

ಆಡಿ ಪಾಡು ಮೋಹನ ನಮ್ಮ ಭಾಗ್ಯ ಸಾಧನ..ಆಆಆ
ಆಡಿ ಪಾಡು ಮೋಹನ ನಮ್ಮ ಭಾಗ್ಯ ಸಾಧನ
ನಿನ್ನ ಆಟ ಪಾಠದೊಡನೆ ನಲಿವುದೆಮ್ಮ ಜೀವನ
ನಿನ್ನ ಆಟ ಪಾಠದೊಡನೆ ನಲಿವುದೆಮ್ಮ ಜೀವನ
ನಮ್ಮ ಮನೆಯೆ ನಂದನ ಇದುವೇ ಬೃಂದಾವನ
ನಿನ್ನ ದನಿಯೆ ಗಾಯನ ವೇಣು ಗಾನ ದೇವನ
ನಿನ್ನ ದನಿಯೆ ಗಾಯನ ವೇಣು ಗಾನ ದೇವನ

ದೇವ ನಿನ್ನ ಕಂದನ ಕಾಯೋ ಪರಮ ಪಾವನ... ಆಆಆ
ದೇವ ನಿನ್ನ ಕಂದನ ಕಾಯೋ ಪರಮ ಪಾವನ
ನೂರು ಕಾಲ ಬಾಳಲೆಂದು ಹರಸು ನಮ್ಮ ರಾಜನ
ನೂರು ಕಾಲ ಬಾಳಲೆಂದು ಹರಸು ನಮ್ಮ ರಾಜನ
ನಮ್ಮ ಮನೆಯೆ ನಂದನ ಇದುವೇ ಬೃಂದಾವನ
ನಿನ್ನ ದನಿಯೆ ಗಾಯನ ವೇಣು ಗಾನ ದೇವನ
ನಿನ್ನ ದನಿಯೆ ಗಾಯನ ವೇಣು ಗಾನ ದೇವನ
--------------------------------------------------------------------------------------------------------------------------

ಚಂದವಳ್ಳಿಯ ತೋಟ (1964) - ಈ ನೀತಿ ಈ ನ್ಯಾಯ ಏನೆಂದೇ ತಂದೇ
ಸಂಗೀತ: ಟಿ.ಜಿ.ಲಿಂಗಪ್ಪ, ಸಾಹಿತ್ಯ: ಆರ್.ಎನ್.ಜಯಗೋಪಾಲ್, ಗಾಯನ :ಪಿ.ಬಿ.ಶ್ರೀನಿವಾಸ

ಈ ನೀತಿ ಈ ನ್ಯಾಯ ಏನೆಂದೇ ತಂದೇ
ಈ ನೀತಿ ಈ ನ್ಯಾಯ ಏನೆಂದೇ ತಂದೇ
ನಾ ನೊಂದೆ ಈ ಜಗದ ಅನ್ಯಾಯದಿಂದೇ
ಈ ನೀತಿ ಈ ನ್ಯಾಯ ಏನೆಂದೇ ತಂದೇ

ತನುವೆರೆಡು ಉಸಿರೊಂದು ಬಾಳಿದೆವು ಅಂದು
ತನುವೆರೆಡು ಉಸಿರೊಂದು ಬಾಳಿದೆವು ಅಂದು
ಸೋದರನೇ ಕಳಿಸಿದನೇ ಸೆರೆಗೆನ್ನ ಇಂದು ಓಓಓಓಓ....
ಸೋದರನೇ ಕಳಿಸಿದನೇ ಸೆರೆಗೆನ್ನ ಇಂದು
ಮಿತಿಯಿಲ್ಲ ಮಾನವನ ಮೆರೆದಾಟಕ್ಕಿಂದು
ನಿಂದಿರುವೇ ನೊಂದು
ಈ ನೀತಿ ಈ ನ್ಯಾಯ ಏನೆಂದೇ ತಂದೇ

ಬರಿದಾಯ್ತು ಪ್ರೇಮನಿಧಿ ತಾಯವಳ ಬಯಕೆ
ಬರಿದಾಯ್ತು ಪ್ರೇಮನಿಧಿ ತಾಯವಳ ಬಯಕೆ
ಕೊಡಲಿಯ ಕಾವುದಯೇ ಸಾವಾಯ್ತೆ ಕುಲಕೇ
ಮರೆಯಾಯಿತು ಶಾಂತಿಯದು ಸುಖವಿಲ್ಲ ಮನಕೆ
ಬೇಸರವೂ ಬದುಕೇ
ಈ ನೀತಿ ಈ ನ್ಯಾಯ ಏನೆಂದೇ ತಂದೇ
ನಾ ನೊಂದೆ ಈ ಜಗದ ಅನ್ಯಾಯದಿಂದೇ
ಈ ನೀತಿ ಈ ನ್ಯಾಯ ಏನೆಂದೇ ತಂದೇ
---------------------------------------------------------------------------------------------------------

No comments:

Post a Comment