10. ಇಬ್ಬನಿ ಕರಗಿತು (1983)


ಇಬ್ಬನಿ ಕರಗಿತು ಚಲನ ಚಿತ್ರದ ಹಾಡುಗಳು 
  1. ಚಲುವೇ ಓ ಚಲುವೇ ನಿಜವಾ ನಾ ನುಡಿವೇ
  2. ತನು ನಿನ್ನದು ಈ ಮನ ನಿನ್ನದು ನನಗಾಗಿ ಇನ್ನೇನಿದೆ
  3.  ತಂಗಿ ಹೇಳಮ್ಮ, ನಾಚಿಕೆ ಏಕಮ್ಮಾ,  ಸಂಕೋಚದಿಂದ ಲಾಭ ಇಲ್ಲ, 
  4. ನನ್ನ ಕಣ್ಣಲಿ ನಿನ್ನ ಬಿಂಬವೇ 
  5. ಹಬ್ಬ ಹಬ್ಬ 
ಇಬ್ಬನಿ ಕರಗಿತು (1983) - ಚಲುವೇ ಓ ಚಲುವೇ ನಿಜವಾ ನಾ ನುಡಿವೇ 
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ, ಎಸ್.ಜಾನಕಿ 

ಚಲುವೇ ಓ ಚಲುವೇ ನಿಜವಾ ನಾ ನುಡಿವೇ
ಒಲವೂ ಮೂಡಿದಾಗಾ ಹೃದಯಾ ಹಾಡಿದಾಗ
ದಿನವೂ ಉಲ್ಲಾಸವೇನೇ ಬದುಕು ಆನಂದ ತಾನೇ..
ಚಲುವಾ ಓ ಚಲುವಾ ನುಡಿವೇ ನಾ ನಿಜವಾ
ಒಲವೂ ಮೂಡಿದಾಗ ಹೃದಯಾ ಹಾಡಿದಾಗ
ದಿನವೂ ಉಲ್ಲಾಸವೇನೇ ಬದುಕೂ ಆನಂದ ತಾನೇ...
ಚಲುವೇ ಓ ಚಲುವೇ ನಿಜವಾ ನಾ ನುಡಿವೇ
ಮನವಾ ಸೇರಿ ಹೋದೇ ಸುಖದಾ ಸಂಗೀತವಾದೆ…

ಬೆಳಗಿನ ಮಂಜಲ್ಲಿ ಬಂದಾಗ ಹೆದರುತ ನಾ ಬೆಚ್ಚಿ ನಿಂದೇ
ಕಣ್ಣೂ ಕಾಣದೆ ಹೋದೇ ನೀನೂ ಕಣ್ಣಾಗಿ ಬಂದೇ
ನುಡಿಯುವ ಮಾತೆಲ್ಲಾ ಮುತ್ತಂತೇ ಗುಣದಲಿ ನೀ ಚಿನ್ನವಂತೇ
ನಿನ್ನಾ ಸೇರಿದ ಮೇಲೇ ಇನ್ನು ನನಗಿಲ್ಲ ಚಿಂತೇ
ನನ್ನಾಣೆ ಜೀವ ನೀನೇ ಜಾಣೇ....ಚಲುವೇ ಓ ಚಲುವೇ....

ಬಯಸದೇ ಓ ನಲ್ಲ ನೀನಾಗೀ ಸಡಗರ ಬಾಳಲ್ಲಿ ತಂದೇ
ನಿನ್ನಾ ಮಾತಿಗೆ ಸೋತೇ ನಾನೇ ಸೆರೆಯಾಗಿ ಹೋದೇ
ಬದುಕಲಿ ಸೋಲೆಂಬ ಮಾತಿಲ್ಲಾ ನನ್ನನು ನೀ ಸೇರಿದಾಗ
ಗೆಲುವೇ ಕಾಣುವೆ ಎಂದೂ ನಂಬು ನೀ ನನ್ನ ಇಂದೂ
ನನ್ನಲ್ಲಿ ಪ್ರಾಣ ನೀನೇ ಜಾಣಾ....ಚಲುವಾ ಓ ಚಲುವಾ....
----------------------------------------------------------------------

ಇಬ್ಬನಿ ಕರಗಿತು (೧೯೮೩)....ತನು ನಿನ್ನದು ಈ ಮನ ನಿನ್ನದು

ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್ - ನಾಗೇಂದ್ರ  ಗಾಯನ : ಎಸ್.ಜಾನಕಿ


ತನು ನಿನ್ನದು ಈ ಮನ ನಿನ್ನದು ನನಗಾಗಿ ಇನ್ನೇನಿದೆ
ಈ ಜೀವ ಎಂದೆಂದೂ ನಿನಗಾಗಿಯೇ
ತನು ನಿನ್ನದು ಈ ಮನ ನಿನ್ನದು  ತನು ನಿನ್ನದು ಈ ಮನ ನಿನ್ನದು

ಹೃದಯ ವೀಣೆಯ ವೈಣಿಕ ತಾನೇ   ತಂತಿಯ ಮೀಟುವುದು ಸ್ವರಗಳ ನುಡಿಸುವುದು
ಹೃದಯ ವೀಣೆಯ ವೈಣಿಕ ತಾನೇ   ತಂತಿಯ ಮೀಟುವುದು ಸ್ವರಗಳ ನುಡಿಸುವುದು
ಬಯಸಿದ ರಾಗ ನುಡಿಸುವ ವೇಗ
ಬಯಸಿದ ರಾಗ ನುಡಿಸುವ ವೇಗ  ನಿನ್ನನ್ನೇ ಸೇರಿದೆ ನಿನಗಾಗಿ ಬಾಳೆಲ್ಲ ನಾ ಹಾದುವೆ
ತನು ನಿನ್ನದು ಈ ಮನ ನಿನ್ನದು  ನನಗಾಗಿ ಇನ್ನೇನಿದೆ
ಈ ಜೀವ ಎಂದೆಂದೂ ನಿನಗಾಗಿಯೇ
ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು

ಒಲಿದರೂ ನೀನೇ ಮುನಿದರೂ ನೀನೇ ಕಾಣೆನು ಬೇರೇನೂ ಚಿoತೆಯು ಇನ್ನೇನೂ
ಒಲಿದರೂ ನೀನೇ ಮುನಿದರೂ ನೀನೇ  ಕಾಣೆನು ಬೇರೇನೂ ಚಿoತೆಯು ಇನ್ನೇನೂ
ಆಮೃತವ ನೀಡು ವಿಷವನೇ ನೀಡು
ಆಮೃತವ ನೀಡು ವಿಷವನೇ ನೀಡು ಏನೂ ಮಾತಾಡೆನು ನಿನ್ನಿಂದ ದೂರಾಗಿ ನಾ ಬಾಳೆನು
ತನು ನಿನ್ನದು ಈ ಮನ ನಿನ್ನದು ನನಗಾಗಿ ಇನ್ನೇನಿದೆ
ಈ ಜೀವ ಎಂದೆಂದೂ ನಿನಗಾಗಿಯೇ
ತನು ನಿನ್ನದು ಈ ಮನ ನಿನ್ನದು
ತನು ನಿನ್ನದು ಈ ಮನ ನಿನ್ನದು
-------------------------------------------------------------------

ಇಬ್ಬನಿ ಕರಗಿತು (೧೯೮೩)....ತನು ನಿನ್ನದು ಈ ಮನ ನಿನ್ನದು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್ - ನಾಗೇಂದ್ರ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ


ತಂಗಿ ಹೇಳಮ್ಮ, ನಾಚಿಕೆ ಏಕಮ್ಮಾ,
ತಂಗಿ ಹೇಳಮ್ಮ, ನಾಚಿಕೆ ಏಕಮ್ಮಾ,  ಸಂಕೋಚದಿಂದ ಲಾಭ ಇಲ್ಲ,
ನಿನ್ನಣ್ಣ ಎಲ್ಲವನ್ನು ಬಲ್ಲಮುತ್ತಿನಂಥ ಗಂಡನನ್ನು ನೀನೆ ಹುಡುಕಿದೆಯಾ
ಮುತ್ತಿನಿಂದ ಮಾರು ಹೋಗಿ ಮದುವೆ ಆಗುವೆಯಾ.. ।। ಪ ।।

ಮಾತು ಗಿಣಿಯಂತೆ ಅವನ ಬಣ್ಣ ಕೆಂಪಂತೆ
ಅಂಥ ಅಂದ ಅಂಥ ಚೆಂದ ಕಂಡೆ ಇಲ್ಲ...ಅಹ್ಹಹ್ಹಹ್...
ಮುದ್ದು ಬರುವಂತೆ  ಅವನ ಮಾತು ಜೇನಂತೆ
ನಿನ್ನ  ಬಿಟ್ಟು ಎಂದು ಎಲ್ಲೂ ಹೋಗೋದಿಲ್ಲ...
ಸೆರಗು ಹಿಡಿದೇನೆ ಇರುವಾ... ನಿನ್ನ  ಹಿಂದೆನೇ ಅಲೆವ... 
ಮೆಳ್ಳಗಣ್ಣು ಕೈಕಾಲ್ ಸಣ್ಣಾ ಹೊಟ್ಟೇ  ಡುಬ್ಬಣ್ಣ..
ಎಲ್ಲೋ ನೋಟ ಎಲ್ಲೋ ಮಾತು ಪೋಲಿ ಸುಬ್ಬಣ್ಣಾ.... 
ಸರಿಯೇ ಹೇಳಮ್ಮಾ...  ।। ೧ ।।

ನವಿಲಂತೆ ಹೆಜ್ಜೆ ಹಾಕುವ... ಅರೆಅರೆಅರೆರೇ... 
ಜಿಂಕೆಯಂತೆ ಚಿಮ್ಮುತ ಬರುವ..ಅರೆಅರೆಅರೆರೇ
ನವಿಲಂತೆ ಹೆಜ್ಜೆ ಹಾಕುವ ಜಿಂಕೆಯಂತೆ ಚಿಮ್ಮುತ ಬರುವ
ನಡೆಯಲ್ಲಿ ನಟರಾಜನೂ.....
ನೋಡೋಕೆ ಕಣ್ಣೆರಡೂ  ಸಾಲದು..
ಹೊಗಳೋಕೆ ಮಾತುಗಳು  ಬಾರದು..
ಒಂದು ಕಾಲು ಉದ್ದ ಇನ್ನೊಂದು ಚೊಟ್ಟುದ್ದ
ಕುಟುಕು ಕುಟುಕು ಕಾಲನಿಟ್ಟು ಕುಂಟಿಕೊಂಡು ಕುಣಿದು ತಣಿವ
ಮುತ್ತಿನಂಥ ಗಂಡನನ್ನು ನೀನೆ ಹುಡುಕಿದೆಯಾ
ಮುತ್ತಿನಿಂದ ಮಾರು ಹೋಗಿ ಮದುವೆ ಆಗುವೆಯಾ.. ।। ೨ ।।

ಮಮಮ ಮಾವನ ಮಗಳೇ... ಮ್ಮಮ್ಮಮ್ಮ ಮಲ್ಲಿಗೆ ಹರಳೇ
ಅಆಆ ಅತ್ತೆಯ ಮಗಳೇ ಮುತ್ತಿನ ಚಂಡೆ 
ನಿನಗಾಗಿಯೇ ಭೂಲೋಕಕೆ
ಪೆಪೆಪೆ ಪ್ರೀತಿಯ ಮಮಮ ಮಾಡಲು
ಪೆಪೆಪೆ ಪ್ರೀತಿಯ ಮಮಮ ಮಾಡಲು
ಇಲ್ಲಿಗೆ ಬಂದನು ಬಂದಾಗ ಕಂಡೆನು 
ಕಂಡಾಗ ಸೋತನು ಸೋತು ನಿಂತನು...
ತಂಗಿ ಹೇಳಮ್ಮ, ನಾಚಿಕೆ ಏಕಮ್ಮಾ,
ತಂಗಿ ಹೇಳಮ್ಮ, ನಾಚಿಕೆ ಏಕಮ್ಮಾ,  ಸಂಕೋಚದಿಂದ ಲಾಭ ಇಲ್ಲ,
ನಿನ್ನಣ್ಣ ಎಲ್ಲವನ್ನು ಬಲ್ಲಮುತ್ತಿನಂಥ ಗಂಡನನ್ನು ನೀನೆ ಹುಡುಕಿದೆಯಾ
ಮುತ್ತಿನಿಂದ ಮಾರು ಹೋಗಿ ಮದುವೆ ಆಗುವೆಯಾ.. 
-----------------------------------------------------------------------

ಇಬ್ಬನಿ ಕರಗಿತು (೧೯೮೩)....ನನ್ನ ಕಣ್ಣಲ್ಲಿ ನಿನ್ನ ಬಿಂಬವೇ ಸಂಗೀತ : ರಾಜನ್ - ನಾಗೇಂದ್ರ  ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಜಾನಕೀ

ನನ್ನ ಕಣ್ಣಲ್ಲಿ ನಿನ್ನ ಬಿಂಬವೇ... ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ
ನಿನ್ನ ಪ್ರೇಮವಾ... ವಾತ್ಸಲ್ಯವಾ..
ಮರೆಯೋಕೆ ಸಾಧ್ಯವೇ ನನ್ನ ದೈವವೇ..
ನನ್ನ ಕಣ್ಣಲ್ಲಿ ನಿನ್ನ ಬಿಂಬವೇ... ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ

ಆ ಸೂರ್ಯ ಆಕಾಶ ಮರೆಯೋದುಂಟೇ...
ಆ ಚಂದ್ರ ಬಾನನ್ನೂ ತೋರೆಯೋದುಂಟೇ...
ನೈದಿಲೆಯೂ ನೀರೀರದೇ ಬದಕೋದುಂಟೇ..
ಲತೆಗೊಂದು ಆಧಾರ ಮರವಾದರೇ..
ಮರವನ್ನು ಬಳಸುತ್ತಾ ಹೂ ಬಿಟ್ಟರೇ...
ನೆಲವನ್ನೂ ಅಗಲೋಕೆ ಅದು ಸಾಧ್ಯವೇ
ನೀ ನನಗೆ ನೆರಳಂತೇ ಇರುವೇ..
ನಿನ್ನನ್ನೂ ನಾ ಹೇಗೆ ಮರೆಯುವೇ..
ನನ್ನ ಕಣ್ಣಲ್ಲಿ ನಿನ್ನ ಬಿಂಬವೇ... ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ
ನಿನ್ನ ಪ್ರೇಮವಾ... ವಾತ್ಸಲ್ಯವಾ..
ಮರೆಯೋಕೆ ಸಾಧ್ಯವೇ ನನ್ನ ದೈವವೇ..
ನನ್ನ ಕಣ್ಣಲ್ಲಿ ನಿನ್ನ ಬಿಂಬವೇ... ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ

ತಾಯಂತೇ ಆರೈಕೆ ನೀ ಮಾಡಿದೇ...
ನೀ ತಂದೆಯಾ ಹಾಗೇ ನನ ಸಾಕಿದೇ...
ಗುರುವಂತೇ ಅರಿವನ್ನೂ ನೀ ನೀಡಿದೆ
ಈ ತಂಗಿ ಸುಖಕ್ಕಾಗಿ ನೀ ಬಾಳಿದೆ
ಈ ಹೆಣ್ಣ ಹೀತಕ್ಕಾಗಿ ನೀ ಹಾಡಿದೆ
ಬದುಕೆಲ್ಲಾ ಸಂತೋಷ ನೀ ತುಂಬಿದೆ
ನಿನಗಿಂತ ಪರದೈವ ಇಲ್ಲಾ.. ನೀನಿರದೇ ಈ ತಂಗಿ ಇಲ್ಲಾ...
ನನ್ನ ಕಣ್ಣಲ್ಲಿ ನಿನ್ನ ಬಿಂಬವೇ... ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ
ನಿನ್ನ ಪ್ರೇಮವಾ... ವಾತ್ಸಲ್ಯವಾ..
ಮರೆಯೋಕೆ ಸಾಧ್ಯವೇ ನನ್ನ ದೈವವೇ..
ನನ್ನ ಕಣ್ಣಲ್ಲಿ ನಿನ್ನ ಬಿಂಬವೇ... ನನ್ನ ಮನಸಲ್ಲಿ ನಿನ್ನ ರೂಪವೇ
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ...
ಅಣ್ಣಯ್ಯ.. ಎಲ್ಲೆಲ್ಲೂ ನಿನ್ನೇ ಕಾಣುವೇ
-----------------------------------------------------------------

ಇಬ್ಬನಿ ಕರಗಿತು (೧೯೮೩)....ಹಬ್ಬ ಹಬ್ಬ ಸಂಗೀತ : ರಾಜನ್ - ನಾಗೇಂದ್ರ  ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಶೈಲಜಾ, ಕೋರಸ್   

ಹೆಣ್ಣು: ಆಆಆ...ಲಾ..ಲಲಲ..ಲಾ.ಲಲಲ..ಲಾ.ಲಲಲ
          ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
          ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ
          ಇಬ್ಬನಿಯು ಕರಗುತಿದೆ ಹೊಂಬಿಸಿಲು ಮೂಡಿಸಿದೆ
     ದುಂಡು ಮಲ್ಲಿಗೆ ಹೂವಾಗಿದೆ ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ
      ಓಓಓ..ಓಓಓ..ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ
ಕೋರಸ್: ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
               ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ

ಕೋರಸ್:  ಲಾ..ಲಲಲ..ಲಾ.ಲಲಲ..ಲಾ.ಲಲಲ
                ಲಾ..ಲಲಲ..ಲಾ.ಲಲಲ..ಲಾ.ಲಲಲ..ಹೋಯ್
                 ರರರರಾರರ..ವೈಯ್...
ಹೆಣ್ಣು: ಬಾನಲ್ಲಿ ಕೆಂಬಣ್ಣ ಬಂದಾಯ್ತು
           ಬಾನಾಡಿ ಸಂಗೀತ ಕೇಳಾಯ್ತು
           ಹೊಸ ಜೀವ ಹೊಸ ಭಾವ ತುಂಬಿ ತುಳುಕುತಿದೆ
           ತಂಗಾಳಿ ಹೀತವಾಗಿ ಬೀಸಾಯ್ತು
           ರಂಗೇರಿ ಹೊಸ ಆಸೆ ತಂದಾಯಿತು
           ಸೌಂದರ್ಯ ಎಲ್ಲೆಂದೂ ಕಣ್ಣು ಕಂಡಾಯಿತು
           ಎಂದೆಂದೂ ಕಾಣದ ಹಿಂದೆದೂ ಕೇಳದ ಆನಂದವಾ
           ಹೊಂದುವಾ....
ಕೋರಸ್: ಹಬ್ಬ.. ಹಬ್ಬ..
ಹೆಣ್ಣು: ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
          ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ
          ಇಬ್ಬನಿಯು ಕರಗುತಿದೆ ಹೊಂಬಿಸಿಲು ಮೂಡಿಸಿದೆ
     ದುಂಡು ಮಲ್ಲಿಗೆ ಹೂವಾಗಿದೆ ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ
      ಓಓಓ..ಓಓಓ..ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ
ಕೋರಸ್: ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
               ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ

ಹೆಣ್ಣು: ಸೊಗಸಾದ ಹೂದೊಟ ನೋಡಿಲ್ಲಿ
           ಸವಿಯಾದ ಜೇನೂಂಟು ಬಾ ಇಲ್ಲಿ
           ಮರಿ ದುಂಬಿ ಬಂದಾಗ ಮೈಯ್ಯ ಮರೆಸುವುದೂ...
           ದಿನವೊಂದು ಬಗೆಯಾದ ಸಂತೋಷ
           ಕ್ಷಣಕೊಂದು ಬಗೆಯಾದ ಉಲ್ಲಾಸ
           ಹೊಸದಾದ ಹೊಸ ಜಾಗ ಕಣ್ಣ ತಣಿಸುವುದು
           ಇನ್ನೇಕೇ ಮೌನವೂ ಆನಂದವಾ ಹೊಂದುವಾ....
ಕೋರಸ್: ಹಬ್ಬ.. ಹಬ್ಬ..
ಹೆಣ್ಣು: ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
          ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ
          ಇಬ್ಬನಿಯು ಕರಗುತಿದೆ ಹೊಂಬಿಸಿಲು ಮೂಡಿಸಿದೆ
     ದುಂಡು ಮಲ್ಲಿಗೆ ಹೂವಾಗಿದೆ ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ
      ಓಓಓ..ಓಓಓ..ಕಂಪನ್ನು ಚೆಲ್ಲಿ ಚೆಲ್ಲಿ ಕೂಗಿದೆ
ಕೋರಸ್: ಹಬ್ಬ ಹಬ್ಬ ಹಬ್ಬ ಹಬ್ಬ ಎಲ್ಲೆಲ್ಲೂ
               ಹಬ್ಬ ಹಬ್ಬ ಕಣ್ಣಿಗೆ ಹಬ್ಬ ಎಲ್ಲೆಲ್ಲೂ         
---------------------------------------------------------------------

No comments:

Post a Comment