1288. ಇನ್ಸ್ ಪೆಕ್ಟರ್ ಕ್ರಾಂತಿಕುಮಾರ (೧೯೮೭)

ಇನ್ಸ್ ಪೆಕ್ಟರ್ ಕ್ರಾಂತಿಕುಮಾರ ಚಲನಚಿತ್ರದ ಹಾಡುಗಳು 
  1. ಕರೆದಾಗ ನೀ ಬಂದಾಗ ಬಂದಾಗ ನನಗೊಂದು 
  2. ಕೇಳಮ್ಮ ಅತ್ತಿಗೆಮ್ಮ ಅಣ್ಣನ ವಿಷಯ ಹೇಳುವೆನಮ್ಮ 
  3. ನಾ ಸಾಕಿ ಬೆಳೆಸಿದ ಈ ತಂಗಿಗೆ ನಾನಿಂದು ಸೀಮಂತ ಮಾಡುವೇ 
  4. ಬಾ ರಸಿಕ  ಹೊಸ ಆಟ ಇಲ್ಲಿದೇ 
ಇನ್ಸ್ ಪೆಕ್ಟರ್ ಕ್ರಾಂತಿಕುಮಾರ (೧೯೮೭) - ಕರೆದಾಗ ನೀ ಬಂದಾಗ ಬಂದಾಗ ನನಗೊಂದು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ

ಹೆಣ್ಣು : ಕರೆದಾಗ ನೀ ಬಂದಾಗ ಬಂದಾಗ ನನಗೊಂದು ಹೂಂ ಹೂಂ ಕೊಟ್ಟರೇ ಸಾಕೂ
          ನನ್ನನ್ನ ಇಟ್ಟರೇ ಸಾಕು ಪ್ರೇಮದಿ ಮದ್ದು ಕೊಟ್ಟರೆ ಸಾಕು
          ನನ್ನಲೇ ಮನಸು ಇಟ್ಟರೆ ಸಾಕು ಕರೆದಾಗ ಬರಬೇಕು ಜೊತೆಯಲ್ಲೇ ಇರಬೇಕು

ಗಂಡು : ನನ್ನಲೇನೋ ಕಾತರ ನಿನ್ನ ನೋಡಿ ಆತುರ ಹಿಗೇಕೋ ನಾ ಕಾಣೆನು
            ನಿನ್ ಸೌಂದರ್ಯಕೆ ನಿನ್ ವ್ಯಾಮೋಹಕೆ ನನ್ನಾಣೆ ನಾ ಸೋತೆನು
ಹೆಣ್ಣು : ಮಾತಲ್ಲೇಕೆ ಹೇಳುವೆ ಕಣ್ಣಲೇಕೆ ಕಾಡುವೆ ನಿನ್ನಾಟ ನಾ ಬಲ್ಲೆನು
          ಎಂದೆಂದಿಗೂ ನಿನ್ ಜೊತೆಯಾಗಿಯೇ ನನ್ನಾಣೆ ನಾ ಬಾಳುವೇ
          ಕರೆದಾಗ ನೀ ಬಂದಾಗ ಬಂದಾಗ ನನಗೊಂದು ಹೂಂ ಹೂಂ ಕೊಟ್ಟರೇ ಸಾಕೂ
          ನನ್ನನ್ನ ಇಟ್ಟರೇ ಸಾಕು ಪ್ರೇಮದಿ ಮದ್ದು ಕೊಟ್ಟರೆ ಸಾಕು
          ನನ್ನಲೇ ಮನಸು ಇಟ್ಟರೆ ಸಾಕು ಕರೆದಾಗ ಬರಬೇಕು ಜೊತೆಯಲ್ಲೇ ಇರಬೇಕು

ಹೆಣ್ಣು : ನಿನ್ನೆ ರಾತ್ರಿ ಕೂಗಿದೆ ನಲ್ಲ ನಾನು ಬೆವರಿದೆ ಹೀಗೇಕೆ ನೀ ಮಾಡಿದೆ
          ನಿನ್ ಸಿಂಗಾರದ ಹೊಸ ಚೆಲ್ಲಾಟಕೆ ಏನನ್ನು ನಾ ನೀಡಲಿ
ಗಂಡು : ಮಾತಲ್ಲೇಕೆ ಕೇಳಲಿ ಕಣ್ಣು ಕಣ್ಣು ಸೇರಲಿ ಕ್ಷಣದಲ್ಲಿ ನೀ ಅರಿಯುವೇ
            ನನ್ ಸಂಗೀತಕೆ ನೀ ಕುಣಿಯುವೇ ನನ್ನಲ್ಲಿ ಒಂದಾಗುವೇ
ಹೆಣ್ಣು : ಕರೆದಾಗ ನೀ ಬಂದಾಗ ಬಂದಾಗ ನನಗೊಂದು ಹೂಂ ಹೂಂ ಕೊಟ್ಟರೇ ಸಾಕೂ
          ನನ್ನನ್ನ ಇಟ್ಟರೇ ಸಾಕು ಪ್ರೇಮದಿ ಮದ್ದು ಕೊಟ್ಟರೆ ಸಾಕು
          ನನ್ನಲೇ ಮನಸು ಇಟ್ಟರೆ ಸಾಕು ಕರೆದಾಗ ಬರಬೇಕು ಜೊತೆಯಲ್ಲೇ ಇರಬೇಕು
 ----------------------------------------------------------------------------------------------------------

ಇನ್ಸ್ ಪೆಕ್ಟರ್ ಕ್ರಾಂತಿಕುಮಾರ (೧೯೮೭) - ಕೇಳಮ್ಮ ಅತ್ತಿಗೆಮ್ಮ ಅಣ್ಣನ ವಿಷಯ ಹೇಳುವೆನಮ್ಮ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ, ವಾಣಿಜಯರಾಂ

ಹೆಣ್ಣು : ಕೇಳಮ್ಮ ಅತ್ತಿಗೆಮ್ಮ ಅಣ್ಣನ ವಿಷಯ ಹೇಳುವೆನಮ್ಮ
          ಹಗಲೆಲ್ಲ ಊದುವನು ಸೀಟಿ ಇರುಳೆಲ್ಲ ಬಡಿಯುವನು ಲಾಠಿ
          ಮನೆಯು ಬೇಕಿಲ್ಲ ಮಡದಿ ಬೇಕಿಲ್ಲ ನೀ ಸಂಸಾರ ಮಾಡಬಲ್ಲೆಯ
          ಮಗುವನ್ನು ನೋಡ ಬಲ್ಲೆಯಾ..
          ಕೇಳಮ್ಮ ಅತ್ತಿಗೆಮ್ಮ ಅಣ್ಣನ ವಿಷಯ ಹೇಳುವೆನಮ್ಮ

ಹೆಣ್ಣು : ಮನೆಯಲ್ಲೇ ಪಾರ್ಕು ಮನೆಯಲ್ಲಿ ಸಿನಿಮಾ ತಾಳಿ ಕಟ್ಟಿದರೂ ಒಂಟಿ ಜೀವನವೇ..
          ನಿನ್ನಾ ಗತಿ ಏನು ಮತ್ತೇ .. ರಾತ್ರಿ ಇದ್ದಕ್ಕಿದ್ದ ಹಾಗೆ ಏಳ್ತಾನೇ
          ಒಂದು ಬೇಕು ಅಂತಾನೇ ಒಂದು ಸಿಗರೇಟು ಕೇಳ್ತಾನೆ ಅಬ್ಬಾ ಸೇದಿ ಮಲಕ್ಕೋತಾನೆ
          ಅನುಮಾನವೇನು ಅನುರಾಗವೇನು ಏನು ಅರಿತಿಲ್ಲವಮ್ಮಾ
          ಯಾರೇ ಓಡಿದರೂ ಹಿಂದೆ ಓಡುವನು ಕಳ್ಳ ನಿಲ್ಲೆಂದು ಕೂಗುವ
          ಮನಸು ಕೆಡಿಸಿ ಹೊರಗೆ ಕಳಿಸಿ ವಿರಹ ತರುವ ಬಯಕೆನೆಲ್ಲವ ಬಲ್ಲೆ ಎಲ್ಲ ಹೋಗೆ
ಗಂಡು : ಕೇಳೆನ್ನ ನನ್ನ ಗೆಳತೀ ತಂಗಿಯ ವಿಷಯ ಹೇಳುವೆನಮ್ಮಾ
            ಹಾಕುವಳು ಪರದೇಶಿ ಸೆಂಟು ಬಾಳಿನಲಿ ಎಲ್ಲ ಅರ್ಜೆಂಟು
            ಬಾಯಿ ಬೊಂಬಾಯಿ ಹೇಳು ಸಿಪಾಯಿ
            ಹೂವಂತೆ ಹೃದಯ ಮೆತ್ತಗೆ ಜೇನಂತೆ ಮನಸು ಇವಳಿಗೇ ..

ಹೆಣ್ಣು : ಅನುರಾಗದಿಂದ ಬರಿ ನೋಟದಿಂದ ಪತಿಯನ್ನು ನಾ ಆಳ ಬಲ್ಲೆ
          ನನ್ನಾ ನಾದಿನಿಯೇ ನಿನ್ನಾ ಸೋದರನ ಚಿಂತೆ ಇನ್ನೇಕೆ ಹೇಳು
           ಹಗಲು ಹೊತ್ತಲ್ಲಿ ರೂಮಿಗೇ ಎಳ್ಕೊಂಡ್ ಹೋಗಿ ಬಾಗಿಲು ಹಾಕ್ಕೋತಾನೇ ..
           ಹಾಂ.. ಯಾರನ್ನ
           ಪಕ್ಕದ ಮನೆ ಮಗುನ ಮಕ್ಕಳು ಅಂದ್ರೆ ಪಂಚಪ್ರಾಣ
ಗಂಡು : ಮದುವೆಯಾಗಿಲ್ಲ ಮಾಂಗಲ್ಯವಿಲ್ಲ ಯಜಮಾನಿ ನೀನಾಗಲಿಲ್ಲ
            ತಂಗಿಯ ಅತ್ತಿಗೆ ಅವಳ ನಾದನಿಯೆ ಸರಸ ಸಾಕಿನ್ನು ಸಾಕು
ಹೆಣ್ಣು : ಹಗಲು ಇರುಳು ಸರಸವಿರುವ ನಗುತಲಿರುವ ಮನೆಯೇ ಸ್ವರ್ಗ ಅಣ್ಣ ಬಲ್ಲೆ ಏನೂ ..
          ಕೇಳಮ್ಮ ನನ್ನ ನಾದಿನಿ ನನ್ನಯ ವಿಷಯ ಹೇಳುವೆನಮ್ಮ
           ಸಿಟಿಯ ಊದಿದರೆ ಏನು ಲಾಠಿಯ ತಟ್ಟಿದರೇ ಏನು
           ಹೊರಗೆ ಸರದಾರ ನನಗೆ ಜೊತೆಗಾರ ಸಂಸಾರ ಮಾಡಬಲ್ಲೆನು
           ವರುಷದಲೇ ಲಾಲಿಯ ಹಾಡ ಬಲ್ಲೆನು
           ಜೋ ಜೋ ಜೋ ಲಾಲಿ ಲಾಲಿ ಕಂದ ಲಾಲಿ ಆನಂದ ಲಾಲಿ
           ಜೋ ಜೋ ಜೋ ಲಾಲಿ ಲಾಲಿ ಕಂದ ಲಾಲಿ ಆನಂದ ಲಾಲಿ
----------------------------------------------------------------------------------------------------------

ಇನ್ಸ್ ಪೆಕ್ಟರ್ ಕ್ರಾಂತಿಕುಮಾರ (೧೯೮೭) - ನಾ ಸಾಕಿ ಬೆಳೆಸಿದ ಈ ತಂಗಿಗೆ ನಾನಿಂದು ಸೀಮಂತ ಮಾಡುವೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಕೆ.ಜೆ.ಏಸುದಾಸ, ಎಸ್.ಜಾನಕೀ

ಗಂಡು : ನಾ ಸಾಕಿ ಬೆಳೆಸಿದ ಈ ತಂಗಿಗೆ ನಾನಿಂದು ಸೀಮಂತ ಮಾಡುವೆ
            ಕಣ್ಣೀರ ಒರೆಸಿ ಹೂವನ್ನು ಮೂಡಿಸಿ ಕಣ್ತುಂಬ ನಾ ನೋಡುವೆ ಓಓಓ ..
             ನಾ ಸಾಕಿ ಬೆಳೆಸಿದ ಈ ತಂಗಿಗೆ ನಾನಿಂದು ಸೀಮಂತ ಮಾಡುವೆ
            ಕಣ್ಣೀರ ಒರೆಸಿ ಹೂವನ್ನು ಮೂಡಿಸಿ ಕಣ್ತುಂಬ ನಾ ನೋಡುವೆ ಓಓಓ ..

ಹೆಣ್ಣು : ಬಂಗಾರದಂಥ ಸಿಂಗಾರಿ ನಿನಗೆ ಜರಿ ಸೀರೆ ಉಡಿಸಿ ಬಳೆಯನ್ನು ತೊಡಿಸಿ
          ಸಿಂಧೂರ ಇರಿಸಿ ಸಿಂಗಾರ ಗೈವೇ .. ನಲಿವಿಂದ ನಗುವೇ..
          ಮಡಿಲಕ್ಕಿಯಿಂದ ಮಡಿಲನ್ನು ತುಂಬಿ ನಸು ನಾಚಿ ನೀನು ಕೆಂಪಾಗೆ ಕೆನ್ನೆ
          ಪನ್ನೀರ ಚೆಲ್ಲಿ ಕರಿ ಬೊಟ್ಟ ನೀಡುವೆ ಗುಟ್ಟೊಂದ ನುಡಿವೇ ..
ಗಂಡು : ಈ ಸೆರೆಮನೆಯೇ ಇಂದು ತವರುಮನೆ ತಂಗಿ ನಿನಗೆ
            ಈ ಅಣ್ಣನಾ ಕಣ್ಣೀರು ಮಮತೆಯಾ ಕೊಡುಗೇ ..
            ನಾ ಸಾಕಿ ಬೆಳೆಸಿದ ಈ ತಂಗಿಗೆ ನಾನಿಂದು ಸೀಮಂತ ಮಾಡುವೆ
            ಕಣ್ಣೀರ ಒರೆಸಿ ಹೂವನ್ನು ಮೂಡಿಸಿ ಕಣ್ತುಂಬ ನಾ ನೋಡುವೆ ಓಓಓ ..

ಹೆಣ್ಣು : ಬರುತ್ತಾನೆ ನಾಳೆ ಬಲು ತುಂಟ ಪೋರ ಮಾವನ ನಿಜರೂಪ ಈ ವಂಶ ದೀಪ
           ಜೇನಂತೆ ನುಡಿವ ಮಿಂಚಂತೇ ನುಡಿವ ಹೊಸ ಬೆಳಕು ತರುವ
           ಅವನಾಡೋ ಆಟ ಆವ ನೋಡೋ ನೋಟ ಈ ತಾಯಿ ಮನಕೆ ನಲಿವೆಂಬ ತೋಟ
           ಆ ದೇವ ನಮ್ಮ ವರವಾಗಿ   ಬಂದ ಆನಂದ ಕಂದ
ಗಂಡು : ಆ ಕಂದನ ನನ್ನ ಕರುಳ ಕುಡಿಯಂತೆ ಕಾಪಾಡಿ ವಾತ್ಸಲ್ಯದಲೆಯಲ್ಲಿ ನಾನಿಂದು ತೇಲಾಡುವೇ ..
             ನಾ ಸಾಕಿ ಬೆಳೆಸಿದ ಈ ತಂಗಿಗೆ ನಾನಿಂದು ಸೀಮಂತ ಮಾಡುವೆ
            ಕಣ್ಣೀರ ಒರೆಸಿ ಹೂವನ್ನು ಮೂಡಿಸಿ ಕಣ್ತುಂಬ ನಾ ನೋಡುವೆ ಓಓಓ ..
----------------------------------------------------------------------------------------------------------

ಇನ್ಸ್ ಪೆಕ್ಟರ್ ಕ್ರಾಂತಿಕುಮಾರ (೧೯೮೭) - ಬಾ ರಸಿಕ  ಹೊಸ ಆಟ ಇಲ್ಲಿದೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ :ವಾಣಿಜಯರಾಂ

ಹೇ.. ಬಾ ರಸಿಕ ಹೊಸ ಆಟ ಇಲ್ಲಿದೇ ಈ ಸವಿಯಾ ರಸದೂಟ ಕಾದಿದೆ
ಹರೆಯ ಕರೆಯೇ ಬೆರೆಯೋಣ ಅರಿತು ಕಲೆತು ಕುಣಿಯೋಣ
ಹೇ.. ಬಾ ರಸಿಕ ಹೊಸ ಆಟ ಇಲ್ಲಿದೇ ಈ ಸವಿಯಾ ರಸದೂಟ ಕಾದಿದೆ
ಹರೆಯ ಕರೆಯೇ ಬೆರೆಯೋಣ ಅರಿತು ಕಲೆತು ಕುಣಿಯೋಣ

ನೋಡೋ ಕಣ್ಣು ಸನ್ನೆ ಮಾಡಿ ಅಂದ ಹೀರಿತೋ
ನೋಟದಲ್ಲೇ ನಗ್ನಮಾಡಿ ನನ್ನ ಕಾಡಿತೋ ಅಮ್ಮಮ್ಮ ನಾ ತಾಳೆ
ನೋಡೋ ಕಣ್ಣು ಸನ್ನೆ ಮಾಡಿ ಅಂದ ಹೀರಿತೋ
ನೋಟದಲ್ಲೇ ನಗ್ನಮಾಡಿ ನನ್ನ ಕಾಡಿತೋ ಅಮ್ಮಮ್ಮ ನಾ ತಾಳೆ
ಮೈಯ್ಯ ಬೆಂಕಿ ಕಾದು ಕಾದು ಹೂವು ಬಾಡಿತೋ
ಅಪ್ಪಿಕೊಳ್ಳೋ ತೊಳಿಗಾಗಿ ಆಸೆ ಮುಡಿತೋ ಬಾ ಬೇಗ ಈ ವೇಳೆ ಈ ಸಂಜೆ ರಂಗಲ್ಲೇ ನನ್ನಲ್ಲೇ
ಹೇ.. ಬಾ ರಸಿಕ ಹೊಸ ಆಟ ಇಲ್ಲಿದೇ ಈ ಸವಿಯಾ ರಸದೂಟ ಕಾದಿದೆ
ಹರೆಯ ಕರೆಯೇ ಬೆರೆಯೋಣ ಅರಿತು ಕಲೆತು ಕುಣಿಯೋಣ

ನಾನು ಕೊಟ್ಟ ಮುತ್ತಿನಲ್ಲೇ ಮಾಲೆ ಮಾಡಿಕೊ ಸಂಗಾ ಕಂಡ ಮತ್ತಿನಲ್ಲಿ ತೇಲಿ ಆಡಿಕೋ
ಅಮ್ಮಮ್ಮ ಸಾಕೇನೂ
ಮುತ್ತು ಜಾರಿ ಹೋಗೋ ಮುನ್ನ ಬಂದು ಕೂಡಿಕೋ ಪ್ರಾಯ ತಂಡ ಆಸೆಯನ್ನು ಪೂರ್ತಿ ಮಾಡಿಕೋ
ಆ ಪಾಠ ಬೇಕೇನು ಆ ಸ್ವರ್ಗ ನಿನಗಾಗಿ ತರಲೇನು
ಹೇ.. ಬಾ ರಸಿಕ ಹೊಸ ಆಟ ಇಲ್ಲಿದೇ ಈ ಸವಿಯಾ ರಸದೂಟ ಕಾದಿದೆ
ಹರೆಯ ಕರೆಯೇ ಬೆರೆಯೋಣ ಅರಿತು ಕಲೆತು ಕುಣಿಯೋಣ
----------------------------------------------------------------------------------------------------------

No comments:

Post a Comment