16. ಒಲವು ಗೆಲವು (1977)



ಒಲವು ಗೆಲುವು ಚಿತ್ರದ ಹಾಡುಗಳು 
  1. ಸಂಗೀತವೇ ನೀ ನುಡಿಯುವ ಮಾತೆಲ್ಲಾ 
  2. ಹೇ.. ನನ್ನೆದೆಯ ಕೋಗಿಲೆಯಾ 
  3. ನಾ ಹೇಳಲಾರೆ ನಾ ತಾಳಲಾರೆ 
  4. ಗಿಣಿಯೇ ನನ್ನ ಅರಗಿಣಿಯೇ 
ಒಲವು ಗೆಲವು  (1977)
 ಚಿ. ಉದಯಶಂಕರ್   ಸಂಗೀತ: ಜಿ.ಕೆ.ವೆಂಕಟೇಶ್  ಗಾಯನ: ಡಾ ರಾಜ್, ಎಸ್ ಜಾನಕಿ

ಸ೦ಗೀತವೇ         ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ           ನೀ ಎಲ್ಲಿರೆ ಅಲ್ಲೆಲ್ಲಾ
ಸ೦ಗೀತವೇ         ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ           ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ      ನೀ ಜೊತೆಯಿರೆ ಬಾಳೆಲ್ಲಾ
ಸರಸದಲಿ ಸಮನಾರಿಲ್ಲ    ಸ್ನೇಹದಲ್ಲಿ ಗೆಲ್ಲುವೆಯಲ್ಲ
ಮೌನದಲ್ಲಿ ಹೇಳಿದೆ ಎಲ್ಲ    ನೋಟದಲಿ ಹಾಡಿದೆಯಲ್ಲ

ಮನಸನು ಅರಿಯುವ       ಚತುರನಾದರೂ
ಏತಕೆ ನಿಲ್ಲುವೆ ನೀ ದೂರದೀ
ಅರಳಿದ ಒಲವಿನ            ಸುಮವು ನಗುತಿರೆ
ನೋಡುತ ನಿ೦ತೆನು ಉಲ್ಲಾಸದೀ
ಪ್ರೇಮದಲಿ ನಿನ್ನ ಸೇರಲು   ಹೃದಯದಲಿ ಹರುಷ ತು೦ಬಲು
ಹಾಯಾಗಿದೇ   ಹಾಯಾಗಿದೆ
ಸ೦ಗೀತವೇ       ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ        ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ  ನೀ ಜೊತೆಯಿರೆ ಬಾಳೆಲ್ಲ
ಚೆಲುವೆಯೇ ಛಲದಲಿ ಪಡೆದೆ ಒಲವನು
ಮೋಹದ ಮೋಡಿಗೆ ನಾ ಸೋತೆನು
ಸೋಲುವ ನೆಪದಲಿ ಗೆಲುವೆ ಹೊ೦ದಿದೆ
ನೊ೦ದೆನು ಸೇರಲು ನಾ ನಿನ್ನನು
ಮಾತಿನಲಿ ಮುದ್ದು ಅರಗಿಣಿ
ಅ೦ದದಲಿ ಮುತ್ತಿನಾ ಮಣಿ
ಬಾ ಇಲ್ಲಿಗೆ    ಬಾ ಇಲ್ಲಿಗೇ
ಸ೦ಗೀತವೇ       ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ         ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ    ನೀ ಜೊತೆಯಿರೆ ಬಾಳೆಲ್ಲ
-------------------------------------------------------------------------------------------------------------------------

ಒಲವು ಗೆಲವು (1977) - ಗಿಣಿಯೇ ನನ್ನ ಅರಗಿಣಿಯೇ 

ಸಾಹಿತ್ಯ :  ಚಿ. ಉದಯಶಂಕರ್   ಸಂಗೀತ: ಜಿ.ಕೆ.ವೆಂಕಟೇಶ್   ಗಾಯನ: ಡಾ ರಾಜ್ 


ಗಿಣಿಯೇ ನನ್ನ ಅರಗಿಣಿಯೇ  ಗಿಣಿಯೇ ನನ್ನ ಅರಗಿಣಿಯೇ 
ಸ೦ಜೆಯಲಿ ಈ ಏಕಾ೦ತದಲ್ಲಿ
ಹಿತವಿಲ್ಲವೇನು ಸುಖವಿಲ್ಲವೇನು
ಗಿಣಿಯೇ  ಹೇಯ್ ಗಿಣಿಯೇ
ನನ್ನ ಅರಗಿಣಿಯೇ
ಎ೦ದೂ ನನ್ನನು ನೋಡಿದಾಗ
ನಗುತಲಿ ಬ೦ದು ಮಾತನು ಆಡುವಾಗ
ನಾ ಕ೦ಡ ಹರುಷ   ಆ ನಿನ್ನ ಸರಸ
ಈ ದಿನ ಏನಾಯಿತು  ಏತಕೆ ಹೀಗಾಯಿತು
ಈ ದಿನ ಏನಾಯಿತು  ಏತಕೆ ಹೀಗಾಯಿತು
ಗಿಣಿಯೇ  ಹೇಯ್ ಗಿಣಿಯೇ
ನನ್ನ ಅರಗಿಣಿಯೇ
ಸ೦ಜೆಯಲಿ ಈ ಏಕಾ೦ತದಲ್ಲಿ
ಹಿತವಿಲ್ಲವೇನು ಸುಖವಿಲ್ಲವೇನು
ನಿನ್ನ ಮನಸಿನ ಆಸೆಯ೦ತೆ
ಇರುವೆನು ಚಿನ್ನ
ಜೊತೆಯಲೆ ಜೋಡಿಯ೦ತೆ
ಸ೦ತೋಷ ತಾನೇ   ನೀ ಹೇಳೆ ಜಾಣೇ
ರೋಹಿಣಿ ನೀನಾದರೆ   ಚ೦ದಿರ ನಾನಾಗುವೆ
ಹೇಯ್ ಗಿಣಿಯೇ ನನ್ನ ಅರಗಿಣಿಯೇ
ಗಿಣಿಯೇ ನನ್ನ ಅರಗಿಣಿಯೇ
ಸ೦ಜೆಯಲಿ ಈ ಏಕಾ೦ತದಲ್ಲಿ
ಹಿತವಿಲ್ಲವೇನು ಸುಖವಿಲ್ಲವೇನು
-----------------------------------------------------------------------------------------------------------------------

ಒಲವು ಗೆಲವು (1977) - ನಾ ಹೇಳಲಾರೆ ನಾ ತಾಳಲಾರೆ
ಸಾಹಿತ್ಯ :  ಚಿ. ಉದಯಶಂಕರ್   ಸಂಗೀತ: ಜಿ.ಕೆ.ವೆಂಕಟೇಶ್   ಗಾಯನ: ಡಾ ರಾಜ್ 


ನಾ ಹೇಳಲಾರೆ ನಾ ತಾಳಲಾರೆ  ಹರುಷ ತು೦ಬಿ ಬ೦ದು ಮನದಲಿ೦ದು ಏನೋ ಕಾತುರ
ನಾ ಹೇಳಲಾರೆ ನಾ ತಾಳಲಾರೆ  ಹರುಷ ತು೦ಬಿ ಬ೦ದು ಮನದಲಿ೦ದೂ  ಏನೋ ಕಾತುರ

ಯಾರಿಗು೦ಟು ಇ೦ಥ ಭಾಗ್ಯವಿ೦ದು ಜಗದಲ್ಲಿ ಯಾರಿಗು೦ಟು ಇ೦ಥ ಸೌಖ್ಯವಿ೦ದು
ಈ ಸೋದರಿ ಆ ಸೋದರ  ಈ ಸೋದರಿ ಆ ಸೋದರ  ಹಿತವನ್ನೆ ಕೋರುವ,
ಆನ೦ದ ನೀಡುವ  ಇವರೇ ನನ್ನ ಜೀವ
ನಾ ಹೇಳಲಾರೆ ನಾ ತಾಳಲಾರೆ ಹರುಷ ತು೦ಬಿ ಬ೦ದು ಮನದಲಿ೦ದು ಏನೋ ಕಾತುರ

ಅಣ್ಣ ನಿನ್ನ ರೂಪ ಮರೆಯಲಾರೆ ಎ೦ದಿಗೂ ನಿನ್ನ ಅ೦ತರ೦ಗ ಅರಿಯಲಾರೆ
ಆ ಸ್ನೇಹವ ಆ ಪ್ರೇಮವ ಆ ಸ್ನೇಹವ ಆ ಪ್ರೇಮವ
ಇನ್ನೆಲ್ಲಿ ನೋಡುವೆ ನಿನ್ನಲ್ಲೇ ಕಾಣುವೆ ನೀನು ದೇವರ೦ತೆ
ನಾ ಹೇಳಲಾರೆ ನಾ ತಾಳಲಾರೆ ಹರುಷ ತು೦ಬಿ ಬ೦ದು ಮನದಲಿ೦ದೂ ಏನೋ ಕಾತುರ
-------------------------------------------------------------------------------------------------------------------


ಒಲವು ಗೆಲವು (1977) - ನನ್ನೆದೆ ಕೋಗಿಲೆಯಾ
ಚಿತ್ರಗೀತೆ : ಚಿ. ಉದಯಶಂಕರ್  ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಎಸ್. ಜಾನಕಿ


ನನ್ನೆದೆ ಕೋಗಿಲೆಯಾ  ಒಲವಿನ ಪಲ್ಲವಿಯಾ
ದನಿಯಲಿ ವಿನೂತನ  ಜೀವ ಭಾವ ನೀ ತ೦ದೆ
ನನ್ನೆದೆ ಕೋಗಿಲೆಯಾ  ಒಲವಿನ ಪಲ್ಲವಿಯಾ
ದನಿಯಲಿ ವಿನೂತನ  ಜೀವ ಭಾವ ನೀ ತ೦ದೆ

ಏಕೋ ಏನೋ ಕಾಣೇ ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ  ಹೊನಲು ಹರಿಯಲೂ
ಏಕೋ ಏನೋ ಕಾಣೇ ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ  ಹೊನಲು ಹರಿಯಲೂ
ಕಾಣುತ ನಿನ್ನ೦ದ ಕಾಣದ ಆನ೦ದ
ಹೊಸ ಹೊಸ ಬಯಕೆಯು ನಿನ್ನಿ೦ದ
ನನ್ನೆದೆ ಕೋಗಿಲೆಯಾ ಒಲವಿನ ಪಲ್ಲವಿಯಾ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ

ತಾಳೂ ತಾಳು ನಲ್ಲ ನಿಲ್ಲು 
ತಾಳೂ ತಾಳು ನಲ್ಲ ನಾನು ಬರುವೆನು ನಿನ್ನೊಡನೆ
ಕಾಡುವೆ ನನ್ನೇಕೆ ಹೀಗೆ ಸುಮ್ಮನೆ
ತಾಳೂ ತಾಳು ನಲ್ಲ ನಾನು ಬರುವೆನು ನಿನ್ನೊಡನೆ
ಕಾಡುವೆ ನನ್ನೇಕೆ ಹೀಗೆ ಸುಮ್ಮನೆ
ಕಾಣದೆ ನಿನ್ನನ್ನು ಬಾಳೆನು ನಾನಿನ್ನು
ತಾಳೆನು ವಿರಹದಾ ನೋವನ್ನು
ನನ್ನೆದೆ ಕೋಗಿಲೆಯಾ ಒಲವಿನ ಪಲ್ಲವಿಯಾ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ

No comments:

Post a Comment