1285. ಜಾಕಿ (೧೯೮೯)


ಜಾಕಿ ಕನ್ನಡ ಚಲನಚಿತ್ರದ ಹಾಡುಗಳು 
  1. ಆಕಾಶ ನಮಗಾಗಿಯೇ ಓ ನನ್ನ ಜಾಣ 
  2. ಬದುಕು ಬೆರೆತೂ ಹೊಸ ರಾಗ ಹಾಡೋ 
  3. ಕರೆಯುವೆನು ನನ್ನಾ ಚೆನ್ನ 
  4. ನನ್ನಾ ನಿನ್ನಾ ಮನಸು ಸೇರಿ ಇಂದು ಬೆರೆತು 
  5. ಚಿನ್ನ ನನ್ನ ಮೊಗ ನೋಡು ನೋಡು 
ಜಾಕಿ (೧೯೮೯) - ಆಕಾಶ ನಮಗಾಗಿಯೇ ಓ ನನ್ನ ಜಾಣ 
ಸಂಗೀತ : ಎಸ್.ಪಿ.ಬಿ  ಸಾಹಿತ್ಯ : ಚಿ.ಉದಯಶಂಕರ  ಗಾಯನ :ಎಸ್.ಪಿ.ಬಿ, ಎಸ.ಪಿ. ಶೈಲಜಾ 

ಹೆಣ್ಣು : ಆಕಾಶ ನಮಗಾಗಿಯೇ ಓ ನನ್ನ ಜಾಣ
          ಜಲದಿಂದ ಹೂ ಮಾಡಿ ಒಳ್ಳೆ ತಂಪನ್ನೂ ಚೆಲ್ಲಾಡಿ
          ಬಟ್ಟೆಯನ್ನು ನೀರಿಂದ ಒದ್ದೆ ಮಾಡಿ ಹೋದಾಗ
          ಕಾಣದಂಥ ಮೈಯಂದ ನೋಡು ನೋಡು ಎಂದಾಗ ಓಡಿ ಬಂದು ಸೇರಿದಾಗ
          ಝುಮ್ಮರೇ ಝುಮ್ಮಾ ಅರೇ ಝುಮ್ಮರೇ ಝುಮ್ಮಾ
ಗಂಡು : ಆಕಾಶ ನಮಗಾಗಿಯೇ ಓ ನನ್ನ ಜಾಣೆ
           ಜಲದಿಂದ ಹೂ ಮಾಡಿ ಒಳ್ಳೆ ತಂಪನ್ನೂ ಚೆಲ್ಲಾಡಿ
           ಬಟ್ಟೆಯನ್ನು ನೀರಿಂದ ಒದ್ದೆ ಮಾಡಿ ಹೋದಾಗ
           ಬೆಚ್ಚಗಾಗಬೇಕೆಂದು ಚಳಿಯೂ ತುಂಬಿಕೊಂಡಾಗ ಓಡಿ ಬಂದು ಸೇರಿದಾಗ
           ಝುಮ್ಮರೇ ಝುಮ್ಮಾ ಅರೇ ಝುಮ್ಮರೇ ಝುಮ್ಮಾ

ಗಂಡು : ಭೂಮಿ ಏನು ಬಾನು ಏನು ಉಲ್ಲಾಸ ಚೆಲ್ಲಾಡಿದೆ 
            ಹೆಣ್ಣು ಗಂಡು ಸೇರಿವಂತೇ ನಮ್ಮನ್ನು ನೂಕಾಡಿದೆ 
            ನೀರು ಬಿದ್ದು ನೀರು ಬಿಡದು ಮೊಗದಾಗಬೇಕೆಂದಿದೆ 
            ದೂರ ಇದ್ದೂ ದೂರ ಇದ್ದೂ ಸಾಕಾಯ್ತು ಬಾ ಎಂದಿದೇ .. 
            ಹನಿ ಹನಿ ಸುರಿಯುವ ತಂಪನು ಸುರಿಸುವ 
ಹೆಣ್ಣು : ಹೊಸತನ ಬೆರಸಲು ಯೌವ್ವನ ಕೆಣಕಲು ಸಂಕೋಚ ನೂಕಲೂ ಓಡಿ ಬಂದು ಸೇರಿದಾಗ
          ಝುಮ್ಮರೇ ಝುಮ್ಮಾ ಅರೇ ಝುಮ್ಮರೇ ಝುಮ್ಮಾ
ಗಂಡು : ಆಕಾಶ ನಮಗಾಗಿಯೇ ಓ ನನ್ನ ಜಾಣೆ
           ಜಲದಿಂದ ಹೂ ಮಾಡಿ ಒಳ್ಳೆ ತಂಪನ್ನೂ ಚೆಲ್ಲಾಡಿ
           ಬಟ್ಟೆಯನ್ನು ನೀರಿಂದ ಒದ್ದೆ ಮಾಡಿ ಹೋದಾಗ
           ಬೆಚ್ಚಗಾಗಬೇಕೆಂದು ಚಳಿಯೂ ತುಂಬಿಕೊಂಡಾಗ ಓಡಿ ಬಂದು ಸೇರಿದಾಗ
           ಝುಮ್ಮರೇ ಝುಮ್ಮಾ ಅರೇ ಝುಮ್ಮರೇ ಝುಮ್ಮಾ

ಹೆಣ್ಣು : ಪ್ರಿತಿಯಂತೇ ಪ್ರೇಮವಂತೇ ಆ ಮಾತು ನಮಗೇತಕೆ
           ರಾಗವಂತೆ ತಾಳವಂತೆ ಆ ಚಿಂತೆ ಇನ್ನೇತಕೆ
ಗಂಡು : ಗಾಳಿ ಕೂಡ ತೂರದಂತೇ ಒಂದಾಗಿ ನಿಂತಾಗಲೇ
            ಮಾತಿಗಿಲ್ಲಿ ಜಾಗವಿಲ್ಲ ಆನಂದ ನಮಗಾಗಲೇ
ಹೆಣ್ಣು : ಹೊಸತನ ಚಿಗುರುತ ಬಯಕೆಯ ಬೆರೆಸುತ ಬೇಕಿನ್ನೂ ಎಂಬಾಸೆಯೂ ..
ಗಂಡು : ಹೋಯ್ .. ಬದುಕಲಿ ಸಿಹಿ ಸಿಹಿ ಅನುಭವದ ಸವಿ ಸವಿ ಬಾಳೆಲ್ಲ ಹೀಗಾದರೇ ..
            ಓಡಿ ಬಂದು ಸೇರಿದಾಗ ಝುಮ್ಮರೇ ಝುಮ್ಮಾ ಅರೇ ಝುಮ್ಮರೇ ಝುಮ್ಮಾ
ಹೆಣ್ಣು : ಆಕಾಶ ನಮಗಾಗಿಯೇ ಓ ನನ್ನ ಜಾಣ
          ಜಲದಿಂದ ಹೂ ಮಾಡಿ ಒಳ್ಳೆ ತಂಪನ್ನೂ ಚೆಲ್ಲಾಡಿ
          ಬಟ್ಟೆಯನ್ನು ನೀರಿಂದ ಒದ್ದೆ ಮಾಡಿ ಹೋದಾಗ
          ಕಾಣದಂಥ ಮೈಯಂದ ನೋಡು ನೋಡು ಎಂದಾಗ ಓಡಿ ಬಂದು ಸೇರಿದಾಗ
          ಝುಮ್ಮರೇ ಝುಮ್ಮಾ ಅರೇ ಝುಮ್ಮರೇ ಝುಮ್ಮಾ
--------------------------------------------------------------------------------------------------

ಜಾಕಿ (೧೯೮೯) - ಬದುಕು ಬೆರೆತೂ ಹೊಸ ರಾಗ ಹಾಡೋ
ಸಂಗೀತ : ಎಸ್.ಪಿ.ಬಿ  ಸಾಹಿತ್ಯ : ಚಿ.ಉದಯಶಂಕರ  ಗಾಯನ :ಎಸ್.ಪಿ.ಬಿ, ವಾಣಿಜಯರಾಮ

ಹೆಣ್ಣು  : ಬದುಕು ಬೆರೆತು ಹೊಸ ರಾಗ ಹಾಡೋ ಈ ವೇಳೆ ಈ ದಿನ ಏನೇನೋ ಆಸೇ ಈ ರಾತ್ರೀಲಿ
             ನಾ ಬೆರೆದೆನಲ್ಲಾ ಕಣ್ಣಿರಲೀ..
ಗಂಡು  : ಬದುಕು ಬೆರೆತು ಹೊಸ ರಾಗ ಹಾಡೋ ಈ ವೇಳೆ ಈ ದಿನ ಏನೇನೋ ಆಸೇ ಈ ರಾತ್ರೀಲಿ
             ನಾ ಬೆರೆದೆನಲ್ಲಾ ಕಣ್ಣಿರಲೀ..

ಹೆಣ್ಣು : ಅನುರಾಗವೇನೂ ಜೊತೆ ಎಂದರೇನು ಈ ಮೊದಲ ರಾತ್ರಿಯ ಅನುಬಂಧವೇನೂ
          ಸಂಗಾತಿ ಏನು ಸಂಸಾರವೇನೂ ಸವಿಯಾದ ಮಾತ ಹಿತವೆಂದರೇನೂ
           ನಿನ್ನಿಂದ ಎಲ್ಲ ಅರಿತಾಯ್ತಲ್ಲ ನನ್ನಾಣೆ ಬೇರೆ ನನಗಾಸೆ ಇಲ್ಲ
ಗಂಡು : ವೈರಾಗ್ಯವೇನು ನಾ ಕಾಣೆನಲ್ಲ ಆಳಲೆಂದು ಆಸೆ ಕೈಲಾಗಲಿಲ್ಲ
           ಸುಖ ಶಾಂತಿ ಇನ್ನೆಲ್ಲಿದೇ ..
ಹೆಣ್ಣು  : ಬದುಕು ಬೆರೆತು ಹೊಸ ರಾಗ ಹಾಡೋ ಈ ವೇಳೆ ಈ ದಿನ ಏನೇನೋ ಆಸೇ ಈ ರಾತ್ರೀಲಿ
             ನಾ ಬೆರೆದೆನಲ್ಲಾ ಕಣ್ಣಿರಲೀ..

ಗಂಡು : ಬರುವಂಥ ನಾಳೆ ಕನಸಾಗಿ ಮೂಡಿ ಕಾಣೋದು ಒಂದೇ ನಿಜವೆಂದು ಹೇಳಿ
            ಸಾವೆಂಬುದನ್ನ ಮರೆಯಾಗಿ ಹಾಡಿ ಸಂತೋಷದಿಂದ ನಲಿವಂತೆ ಮಾಡಿ
            ನಮ್ಮನ್ನು ಏಕೆ ಯಮನೇದುರು ತಂದೆ ಹೊಸ ಬಾಳ ನಾಂದಿ ನಮಗಿಂದು ಎಂದೇ ..
ಹೆಣ್ಣು : ಬಾಳಲ್ಲಿ ಇಂದು ಬೆಳಕಾದ ಮೇಲೆ ತಂಪಾದ ಚಂದ್ರ ಮರೆಯಾದ ಮೇಲೆ
          ಈ ರಾಗವು ಕೊನೆಯಾಗಿದೆ
ಗಂಡು  : ಬದುಕು ಬೆರೆತು ಹೊಸ ರಾಗ ಹಾಡೋ ಈ ವೇಳೆ ಈ ದಿನ ಏನೇನೋ ಆಸೇ ಈ ರಾತ್ರೀಲಿ
             ನಾ ಬೆರೆದೆನಲ್ಲಾ ಕಣ್ಣಿರಲೀ..
---------------------------------------------------------------------------------------------------

ಜಾಕಿ (೧೯೮೯) - ಕರೆಯುವೆನು ನನ್ನಾ ಚೆನ್ನ
ಸಂಗೀತ : ಎಸ್.ಪಿ.ಬಿ  ಸಾಹಿತ್ಯ : ಚಿ.ಉದಯಶಂಕರ  ಗಾಯನ :ಎಸ್.ಪಿ. ಶೈಲಜಾ

ಕರೆಯುವೆನು ನನ್ನ ಚೆನ್ನ  ಹೆರೆವೆಯ ನುಡಿ ನನ್ನಾ
ಅನುಭವದಾ ಸುಖ ನಿನ್ನ ಕುಣಿಸುವ ದಿನಾ ಚೆನ್ನ
ಬಾರೋ ನನ್ನ ರಾಜ ಏಕೆ ದೂರ ರಾಜಾ

ಸೆಳೆಯುವೆ ಈಗ ನಿನ್ನಾ ಇಲ್ಲೇ ಕ್ಷಣದಲಿ ನಿನ್ನ ನೀ ಮರೆವೇ
ಒಲವದು ಬೇಡೋ ರೀತಿಯಲ್ಲೂ ಚರಣದ ಮೇಲೆ ಹೂವಾಗುವೇ
ಯುವತಿಯೇ ನನ್ನ ನೂಕಬೇಡ ಅಂದಕೆ ದಾಸ ನಾನೆನ್ನುವೇ
ರಂಭೆಯ ಸೇವೆ ಮಾಡಲೆಂದೇ ಜನಿಸಿದೆ ಚಿನ್ನ ಬಾ ಎನ್ನವೇ ..
ನಾನು ಮುಂದೆ ಹೋದಂತೆ ನೀನು ನನ್ನ ನೆರಳಂತೇ
ಇನ್ನು ಮಾಯ ನಿನ್ನ ಚಿಂತೆ ನೀನು ನಾನು ನುಡಿದಂತೆ
ಕಲಿಸಿದರೇ ಮಾತಾಡುವೆ ಕೈಲಿರುವ ಗಿಣಿಯಾಗುವೆ
ಚಪಲ ಪಡುವ ಸುಖದಿ ಜಗವ ಮರೆತು ಆನಂದವಾ ಹೊಂದುವೇ..
ಕರೆಯುವೆನು ನನ್ನ ಚೆನ್ನ  ಹೆರೆವೆಯ ನುಡಿ ನನ್ನಾ
ಅನುಭವದಾ ಸುಖ ನಿನ್ನ ಕುಣಿಸುವ ದಿನಾ ಚೆನ್ನ
ಬಾರೋ ನನ್ನ ರಾಜ ಏಕೆ ದೂರ ರಾಜಾ

ಅರಳಿದ ಮಲ್ಲೆ ಹೂವಿನಲ್ಲಿ ಮೆತ್ತೆಯನೊಂದ ನಾ ಹಾಸುವೆ
ಬಿರಿದ ಕೆಂಪು ಮೊಗ್ಗಿನಲ್ಲಿ ದಿಂಬನು ಮಾಡಿ ಬಾ ಎನ್ನುವೆ
ಪರಿಮಳಕ್ಕಾಗಿ ಹಾರಿ ಬಂದ ದುಂಬಿಯ ಗುಂಪನ್ನು ನೋಡೆನ್ನವೇ
ಮದನನ ಕೂಗಿ ಹೂವ ಬಾಣ ಮಲಗಲು ತಂದೆ ಬಾ ಎನ್ನುವೆ
ನಾನು ನಿನಗಿನ್ನೇನು ಆ ರಾತ್ರಿ ಹಗಲು ನಮಗೇನು ಆಟ ಒಂದೇ ಬೇರೇನೂ
ನಮಗೆ ಯಾರ ಹಂಗೇನೂ ಒಡಲನು ನಾ ನೋಡಲು ಸುಮಗಳನು ನೀ ನೋಡಲು
ಜಗವು ಕಳೆದು ಋತು ಬರಲಿ ರಸಿಕ ಬೇಕಿನ್ನು ಬಾ ಎನ್ನುವೆ..
ಕರೆಯುವೆನು ನನ್ನ ಚೆನ್ನ  ಹೆರೆವೆಯ ನುಡಿ ನನ್ನಾ
ಅನುಭವದಾ ಸುಖ ನಿನ್ನ ಕುಣಿಸುವ ದಿನಾ ಚೆನ್ನ
ಬಾರೋ ನನ್ನ ರಾಜ ಏಕೆ ದೂರ ರಾಜಾ
---------------------------------------------------------------------------------------------------

ಜಾಕಿ (೧೯೮೯) - ನನ್ನಾ ನಿನ್ನಾ ಮನಸು ಸೇರಿ ಇಂದು ಬೆರೆತು
ಸಂಗೀತ : ಎಸ್.ಪಿ.ಬಿ  ಸಾಹಿತ್ಯ : ಚಿ.ಉದಯಶಂಕರ  ಗಾಯನ :ಎಸ್.ಪಿ.ಬಿ, ವಾಣಿಜಯರಾಂ

ಗಂಡು : ನನ್ನಾ ನಿನ್ನ ಮನಸು ಸೇರಿ ಇಂದು ಬೆರೆತು ಪ್ರೀತಿ ರೀತಿ ಅರಿತು ನಮ್ಮ ನಾವೇ ಮರೆತು
ಹೆಣ್ಣು : ಹೂವು ಗಂಧ ಕೂಡಿದ ಹಾಗೆ ಒಲಿದ ಮೇಲೆ ಇನ್ನೇನೂ
ಗಂಡು : ಹೂವ ಮತ್ತೇಲ್ಲಿ ನನ್ನ ಜೊತೆಯಾಗಿ ಆಡು ಉಯ್ಯಾಲೆ ನೀನಿಂದೂ
ಹೆಣ್ಣು : ಕಾಣದಾನಂದ ಕಂಡು ನೀ ನಲ್ಲ ಹಾಡು ಒಲವಿಂದ ಈ ಸಂಗೀತ

ಗಂಡು : ನಗುತ ನಗುತ ಸವರಿ ತನುವ ಸುಖವ ತರುವ ಇನ್ನೇನೂ
ಹೆಣ್ಣು : ತುಟಿಗೆ ತುಟಿಯ ಬೆಸೆದು ಸಿಹಿಯ ಹರುಷ ಕೊಡುವೆ ಸಾಕೇನೂ
ಗಂಡು : ಬೇರೆ ಏನು ಬೇಕು ಇನ್ನೂ ನನ್ನ ಬಂಗಾರಿ ನೀ ಹೇಳೂ ...
            ನನ್ನಾ ನಿನ್ನ ಮನಸು ಸೇರಿ ಇಂದು ಬೆರೆತು ಪ್ರೀತಿ ರೀತಿ ಅರಿತು ನಮ್ಮ ನಾವೇ ಮರೆತು

ಹೆಣ್ಣು : ಮೋಹ ಬಂದಾಗ ನಲ್ಲ ಇಂಪಾಗಿ ನಾನು ಹಾಡೋದೇ ಮೋಹನವೂ
ಗಂಡು : ನಿನ್ನ ರಾಗಕೆ ನಾನು ಶ್ರುತಿಯಾಗಿ ಸೇರಲೆಂದೇನೇ ಬಂದಿಹುದು
ಹೆಣ್ಣು : ಮೋಹ ಬಂದಾಗ ನಲ್ಲ ಇಂಪಾಗಿ ನಾನು ಹಾಡೋದೇ ಮೋಹನವೂ
ಗಂಡು : ನಿನ್ನ ರಾಗಕೆ ನಾನು ಶ್ರುತಿಯಾಗಿ ಸೇರಲೆಂದೇನೇ ಬಂದಿಹುದು
ಹೆಣ್ಣು : ಒಲಿದ ಗೆಳೆಯ ಮೈಯ್ಯ ಬಳಸಿ ನುಡಿವ ನುಡಿಯು ಸಂಗೀತ
ಗಂಡು : ಅರಿತು ಬೆರೆತು ಒಲಿದು ನಲಿವ ನಮ್ಮ ಬಾಳೆ ಸಂಗೀತ
ಹೆಣ್ಣು : ನೀನೇ ನನ್ನ ಜೀವ ಎಂದು ನನ್ನ ಬಿಟ್ಟಿನ್ನು ನಾನಿಲ್ಲ
ಗಂಡು : ನನ್ನಾ ನಿನ್ನ ಮನಸು ಸೇರಿ ಇಂದು ಬೆರೆತು ಪ್ರೀತಿ ರೀತಿ ಅರಿತು ನಮ್ಮ ನಾವೇ ಮರೆತು
ಹೆಣ್ಣು : ಹೂವು ಗಂಧ ಕೂಡಿದ ಹಾಗೆ ಒಲಿದ ಮೇಲೆ ಇನ್ನೇನೂ
ಗಂಡು : ಹೂವ ಮತ್ತೇಲ್ಲಿ ನನ್ನ ಜೊತೆಯಾಗಿ ಆಡು ಉಯ್ಯಾಲೆ ನೀನಿಂದೂ
ಹೆಣ್ಣು : ಕಾಣದಾನಂದ ಕಂಡು ನೀ ನಲ್ಲ ಹಾಡು ಒಲವಿಂದ ಈ ಸಂಗೀತ
---------------------------------------------------------------------------------------------------

ಜಾಕಿ (೧೯೮೯) - ಚಿನ್ನ ನನ್ನ ಮೊಗ ನೋಡು ನೋಡು
ಸಂಗೀತ : ಎಸ್.ಪಿ.ಬಿ  ಸಾಹಿತ್ಯ : ಚಿ.ಉದಯಶಂಕರ  ಗಾಯನ : (ಮನು) ನಾಗುರಬಾಬು, ವಾಣಿಜಯರಾಂ

ಗಂಡು : ಚಿನ್ನ ನನ್ನ ಮೊಗ ನೋಡು ನೋಡು ಜಿಂಗಿ ಚಕ್ಕ ಆಟ ಆಡು ಆಡು
ಹೆಣ್ಣು : ಚಿನ್ನ ನನ್ನಾ ಈ ಕಣ್ಣ ನೋಡು ಜಿಂಗಿ ಚಕ್ಕ ಆಟ ಆಡು ಆಡು
ಗಂಡು : ಎಂಥಾ ಹಿತವಾಗಿದೇ ..          ಹೆಣ್ಣು : ಎಂಥಾ ಹಾಯಾಗಿದೇ ..
ಗಂಡು : ತನುವು ಝಂಮೆಂದೀಗ ಇನ್ನೂ ಹೀಗೆ ಆತ ಆಡೋ ಆಸೇ ಬಂತೇ ..
ಗಂಡು : ಚಿನ್ನ ನನ್ನ ಮೊಗ ನೋಡು ನೋಡು ಜಿಂಗಿ ಚಕ್ಕ ಆಟ ಆಡು ಆಡು
ಹೆಣ್ಣು : ಚಿನ್ನ ನನ್ನಾ ಈ ಕಣ್ಣ ನೋಡು ಜಿಂಗಿ ಚಕ್ಕ ಆಟ ಆಡು ಆಡು

ಗಂಡು : ಅಂದು ಹೀಗೆ ನಿನ್ನ ತೋಳಿಂದ ಅಪ್ಪಿ ನನ್ನ  ಸುಖ ತಂದೆ 
ಹೆಣ್ಣು : ಕೆನ್ನೆ ಮೇಲೆ ಕೆನ್ನೆ ಇಟ್ಟಾಗ ಕಣ್ಣ ಮುಚ್ಚಿ ಹಾಯೆಂದೇ 
ಗಂಡು : ಹೂವಿನಾ ಮೇತ್ತೇಲಿ ಹಾಯಾಗಿ 
ಹೆಣ್ಣು : ಆನಂದ ಹೊಂದುತ ಹಾಯಾಗಿ 
ಗಂಡು : ಓ... ಪ್ರೇಮ ಕಲಹ ಹಾಡುವಾಗ ಮಂಚ ಆಡಿ ಹಿತವಾಗಿ 
ಹೆಣ್ಣು : ಇನ್ನೂ ಇನ್ನೂ ಬೇಕು ಎಂಬ ಬಯಕೆ ದನಿಗೆ ಶ್ರುತಿಯಾಗಿ 
ಗಂಡು : ಹಾಡಿತು ಆಡಿತು ನಮ್ಮನೂ ಸೇರಿಸಿ 
ಹೆಣ್ಣು : ಇಂದು ಆ ಸುಖ ನೋಡೋ ಆಸೇ .. 
ಗಂಡು : ಜಿಂಗಿ ಚಕ್ಕ ಆಟ ಆಡೋ ಆಸೇ 

ಹೆಣ್ಣು : ಯಾರು ಇಲ್ಲ ನಲ್ಲ ನೋಡಿಲ್ಲಿ ನಾನು ನೀನೇ ದೂರವೇಕೆ 
ಗಂಡು : ನಿನ್ನ ಸೇರೆ ಇಲ್ಲಿ ಬಂದಾಗ ದೂರ ಎಂಬ ಮಾತು ಏಕೇ 
ಹೆಣ್ಣು : ನಿನ್ನಾಸೆ ಏನೆಂದು ನಾ ಬಲ್ಲೆ 
ಗಂಡು : ಆನಂದಾ ಹೊಂದೋಣ ನಾವಿಲ್ಲಿ 
ಹೆಣ್ಣು : ಹೂವು ದುಂಬಿಯಂತೇ ಈಗ ಜೇನಾಟ ಆಡೋಣ 
ಗಂಡು : ಜೋಡಿ ಹಕ್ಕಿ ಕೂಡುವಂತೇ ಸರಸದಿಂದ ಕೂಡೋಣ 
ಹೆಣ್ಣು : ಮಾತಿಗೆ ಮೀರಿದ ಮೋಹದಿ ಸೇರುವ 
ಗಂಡು : ಚಿನ್ನ ನನ್ನ ಮೊಗ ನೋಡು ನೋಡು 
ಹೆಣ್ಣು :  ಜಿಂಗಿ ಚಕ್ಕ ಆಟ ಆಡು ಆಡೂ  
ಗಂಡು : ಎಂಥಾ ಹಿತವಾಗಿದೆ 
ಹೆಣ್ಣು : ಎಂಥಾ ಹಾಯಾಗಿದೆ 
ಗಂಡು : ತನುವು ಝಂ ಎಂದೀಗ ಇನ್ನೂ ಹೀಗೆ ಆಟ ಆಡೋ ಆಸೆ ಬಂತೇ .. 
--------------------------------------------------------------------------------------------------

No comments:

Post a Comment