ಜಾಲ ಚಲನಚಿತ್ರದ ಹಾಡುಗಳು
- ಈ ಬಾಳ ತೆರೆಯ ಮೇಲೆ
- ರೆಕ್ಕೆ ಬೀಸಿ ಹಕ್ಕಿ ಹಾಗೇ ಸೊಕ್ಕಿನಲ್ಲಿ ಬಾನಲ್ಲಿ ಹಾರಾಡುವಾ
ಸಂಗೀತ : ಮೈಸೂರು ಅನಂತಸ್ವಾಮಿ, ಸಾಹಿತ್ಯ : ಸಿ.ಆರ್.ಗೋಪಾಲಕೃಷ್ಣ, ಗಾಯನ : ಸುಲೋಚನಾ
ಈ ಬಾಳ ತೆರೆಯ ಮೇಲೆ ವಿಧಿಗಾಲ ಹಣೆದ ಭಾರ
ಈ ಬಾಳ ತೆರೆಯ ಮೇಲೆ ವಿಧಿಗಾಲ ಹಣೆದ ಭಾರ
ಕಡಲ ಅಲೆಯ ಲೀಲೆ ದೂರ ಕರೆದ ತೀರ
ಈ ಬಾಳ ತೆರೆಯ ಮೇಲೆ ವಿಧಿಗಾಲ ಹಣೆದ ಭಾರ .. ಈ ಬಾಳ
ಕೊನೆಯಿಲ್ಲದೇ ನೆನಪೂ ಕಳೆದಿಹುವೂ ಹಗಲು ಇರುಳೂ
ಕೊನೆಯಿಲ್ಲದೇ ನೆನಪೂ ಕಳೆದಿಹುವೂ ಹಗಲು ಇರುಳೂ
ಎರಡೂ ದಡದ ನಡುವೇ
ಎರಡೂ ದಡದ ನಡುವೇ ಅವನು ಕಡೆದ ಸೇತುವೇ
ಈ ಬಾಳ ತೆರೆಯ ಮೇಲೆ ವಿಧಿಗಾಲ ಹಣೆದ ಭಾರ .. ಈ ಬಾಳ
--------------------------------------------------------------------------------------------------------------------------
ಜಾಲ (೧೯೮೧) - ರೆಕ್ಕೆ ಬೀಸಿ ಹಕ್ಕಿ ಹಾಗೇ ಸೊಕ್ಕಿನಿಂದ ಬಾನಲ್ಲಿ ಹಾರಾಡುವಾ
ಸಂಗೀತ : ಮೈಸೂರು ಅನಂತಸ್ವಾಮಿ, ಸಾಹಿತ್ಯ : ಸಿ.ಆರ್.ಗೋಪಾಲಕೃಷ್ಣ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ,
ಹೆಣ್ಣು : ರೆಕ್ಕೆ ಬೀಸಿ ಹಕ್ಕಿ ಹಾಗೇ ಸೊಕ್ಕಿನಿಂದ ಬಾನಲ್ಲಿ ಹಾರಾಡುವಾ
ಗಂಡು : ಮೋಡ ಹರಿದು ಗಾಳಿ ಸೀಳಿ ಮತ್ತನಿಂದ ಬಯಲಲ್ಲಿ ಒಂದಾಗುವಾ
ಹೆಣ್ಣು : ನಲಿದಾಡುವಾ ಕುಣಿದಾಡುವಾ ಓಲಾಡುವಾ ತೇಲಾಡುವಾ
ಬದುಕೆಲ್ಲ ಹೊಂಗನಸ ಕಾಣುವಾ
ಗಂಡು : ನಲಿದಾಡುವಾ ಕುಣಿದಾಡುವಾ ಓಲಾಡುವಾ ತೇಲಾಡುವಾ
ಕನಸೆಲ್ಲಾ ನನಸಾಗಿ ಬಾಳುವಾ .. ಆಹ್ಹಾ..
ಹೆಣ್ಣು : ರೆಕ್ಕೆ ಬೀಸಿ ಹಕ್ಕಿ ಹಾಗೇ ಸೊಕ್ಕಿನಿಂದ ಬಾನಲ್ಲಿ ಹಾರಾಡುವಾ
ಗಂಡು : ಮೋಡ ಹರಿದು ಗಾಳಿ ಸೀಳಿ ಮತ್ತನಿಂದ ಬಯಲಲ್ಲಿ ಒಂದಾಗುವಾ....
ಹೆಣ್ಣು : ಸೂರ್ಯನ ಹಿಡಿದು ಕಿರಣದ ಗೊಂಚಲ ಹೂವಂತೇ ನಾ ಮುಡಿಯುವೇ
ಸೂರ್ಯನ ಹಿಡಿದು ಕಿರಣದ ಗೊಂಚಲ ಹೂವಂತೇ ನಾ ಮುಡಿಯುವೇ
ಗಂಡು : ಆ ಹೂವಿನಲ್ಲಿ ದುಂಬಿಯ ಹಿಂಡೂ ನಾನಾಗೀ ಮೈಮರೆಯುವೇ ...
ಹೆಣ್ಣು : ತಾರೇ ಏರುವಾ ಏರಿ ಜಾರುವಾ
ಗಂಡು : ಜೇನ ಹೀರುವಾ ಮಧುವ ಸವಿಯುವ
ಇಬ್ಬರು :ಹೊಂಬಣ್ಣ ಹೊಳೆಯಲ್ಲಿ ಈಜಾಡುವಾ...
ಹೆಣ್ಣು : ರೆಕ್ಕೆ ಬೀಸಿ ಹಕ್ಕಿ ಹಾಗೇ ಸೊಕ್ಕಿನಿಂದ ಬಾನಲ್ಲಿ ಹಾರಾಡುವಾ
ಗಂಡು : ಆ... ಮೋಡ ಹರಿದು ಗಾಳಿ ಸೀಳಿ ಮತ್ತನಿಂದ ಬಯಲಲ್ಲಿ ಒಂದಾಗುವಾ .. ಆಆಆ...
ಪ್ರೀತಿಯ ಕಲರವ ಅನುರಾಗ ಕಾವ್ಯಕೇ ಪ್ರೇಮದ ಹಾಡಾಗುವೇ ...
ಹೆಣ್ಣು : ಆದಾದ ಚಿಂತೆಗೇ ಮೈಮನ ಮರೆತೂ ನಿನ್ನಲ್ಲೀ ಲಯವಾಗುವೇ ..
ಗಂಡು : ಆ... ರಾಗ ತಾಳಕೇ ಧಾಟಿಯಾಗುವಾ
ಹೆಣ್ಣು : ಚೆಲುವ ಚೆಂದುಟಿಗೇ ಭಾವ ಮೀಟುವಾ
ಇಬ್ಬರು : ನೀಲಿಯ ಬಾನಲ್ಲಿ ತೇಲಾಡುವಾ...
ಹೆಣ್ಣು : ರೆಕ್ಕೆ ಬೀಸಿ ಹಕ್ಕಿ ಹಾಗೇ ಸೊಕ್ಕಿನಿಂದ ಬಾನಲ್ಲಿ ಹಾರಾಡುವಾ
ಗಂಡು : ಆ... ಮೋಡ ಹರಿದು ಗಾಳಿ ಸೀಳಿ ಮತ್ತನಿಂದ ಬಯಲಲ್ಲಿ ಒಂದಾಗುವಾ .. ಆಆಆ...
ಇಬ್ಬರು : ಲಾಲಲಲಲ ಲಾಲಲಲಲ ಆಹಾಹಾಹಾಹಾ ಆಹಾಹಾಹಾಹಾ
--------------------------------------------------------------------------------------------------------------------------ಜಾಲ (೧೯೮೧) - ರೆಕ್ಕೆ ಬೀಸಿ ಹಕ್ಕಿ ಹಾಗೇ ಸೊಕ್ಕಿನಿಂದ ಬಾನಲ್ಲಿ ಹಾರಾಡುವಾ
ಸಂಗೀತ : ಮೈಸೂರು ಅನಂತಸ್ವಾಮಿ, ಸಾಹಿತ್ಯ : ಸಿ.ಆರ್.ಗೋಪಾಲಕೃಷ್ಣ, ಗಾಯನ :ಸುಲೋಚನಾ
ಗಗನ ಸೆಳೆವ ಸಾಗರ ಹೊರಳಿ ಬರುವ ಸಡಗರ
ಗಗನ ಸೆಳೆವ ಸಾಗರ ಹೊರಳಿ ಬರುವ ಸಡಗರ
ಬಿಳಿಯ ನೀರ ರಾಶೀ ನೋರೇ
ಬಿಳಿಯ ನೀರ ರಾಶೀ ನೋರೇ ಬಲೆಯ ಗೂಡ ಆಸರೇ ...
ಈ ಬಾಳ ತೆರೆಯ ಮೇಲೆ ವಿಧಿಗಾಲ ಹಣೆದ ಭಾರ... ಈ ಬಾಳ
ಆಸೇ ತೀರದ ಬಯಕೇ ಕರುಳ ಮೋಹವೇತಕೇ
ಆಸೇ ತೀರದ ಬಯಕೇ ಕರುಳ ಮೋಹವೇತಕೇ
ಯಾವ ಸುಖದ ಕಲ್ಪನೇ..
ಯಾವ ಸುಖದ ಕಲ್ಪನೇ ತುಂಬಿ ಕಡಲ ವೇದನೇ ..
ಈ ಬಾಳ ತೆರೆಯ ಮೇಲೆ ವಿಧಿಗಾಲ ಹಣೆದ ಭಾರ... ಈ ಬಾಳ
--------------------------------------------------------------------------------------------------------------------------
No comments:
Post a Comment