ಶ್ರೀ ರಾಮ ಚಲನ ಚಿತ್ರದ ಹಾಡುಗಳು
- ಎಲ್ಲಾ ನೀನೇ ತಾಯೇ ಎಲ್ಲೆಲ್ಲೂ ನಿನ್ನ ಮಾಯೇ
- ಸುಮಾ ಸುಮಾನಾ ಘಮಾ ಘಾಮಾನಾ ಹೇಗಿದೆ ಈ ಜಾದು ಆಹಾ...
- ನಾನೊಬ್ಬ ದಂಡನಾಯಕ ಎಂದೆಂದೂ ನಿಮ್ಮೂರ ಸೇವಕ
- ಪ್ರೇಮ ಬಾಣ ಹೂಡು ಜಾಣ ಅಂತೂ ಪ್ರಾಣ ತಂತು ಹೂನಗೆ
- ಬಾರೋ ಮಾವಯ್ಯ ನಿನ್ನಾ ದಮ್ಮಯ್ಯಾ
ಸಂಗೀತ: ಗುರುಕಿರಣ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ, ಗಾಯನ : ಶಂಕರ ಮಹದೇವನ್
ಗಂಡು : ಎಲ್ಲಾ ನೀನೇ ತಾಯೇ ಎಲ್ಲೆಲ್ಲೂ ನಿನ್ನ ಮಾಯೇ
ಕೋರಸ್ : ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ..
ಗಂಡು : ಎಲ್ಲಾ ನಿನ್ನ ಮಾಯೆ ನಮೆಲ್ಲರನ್ನೂ ಕಾಯೇ ..

ಗಂಡು : ಡೊಳ್ಳಿನ ನಾದ ತಾಯೆ ನಿಂಗೆ ಲಾಲಿ ಹಾಡು
ಕೊಳ್ಳದಾ ತಾಯಿ ಜೀವಗಂಗೆ ಓ ಚಂಡಿ ಚಾಮುಂಡಿಯೇ
ಕೋರಸ್ : ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ..
ಗಂಡು : ಮಾ ಭರವನ್ನ ಕಾಯೋ ಭವತಾರಿಣಿ ಮಾ.. ತ್ರೈಲೋಕ ಮಾತೇ ಬಾ ತ್ರಿಪುರಾಂಗಿನಿ
ಕೋರಸ್ : ಅಮ್ಮಾ.. ಅಮ್ಮಾ..
ಗಂಡು : ಬಾ ಸಿಹಿಯಾಗಿ ಬಾರೆ ನೀ ಪ್ರತಿ ಹಣ್ಣಿಗೇ .. ಬಾ ಸಿಂಧೂರವಾಗಿ ನೀ ಪ್ರತಿ ಹೆಣ್ಣಿಗೇ
ಜೋಗಿಗೆ ಜ್ಞಾನದ ತಾಯಿ ಆದಿಯ ಅಂತ್ಯವೇ
ಕೋರಸ್ : ಶ್ರೀ ರೇಣುಕಾದೇವಿಯೇ ...
ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ..

ಕೋರಸ್ : ಎಲ್ಲಮ್ಮ.. ಪರಶುರಾಮ .. ಜೋಗುಳವಾಗಿ ಸತ್ಯವ್ವ ನಿನ್ನಾ ಕೂಗು
ಗಂಡು : ಪರಶುರಾಮನಾ ತಾಯೇ ಓ.. ಪರಮೇಶ್ವರೀ ಬಯಲು ಸೀಮೆಯ ಕಾಯೋ ಓ ಭಾಗೇಶ್ವರೀ
ಬಾ ವರವಾಗಿ ಬಾರೇ ನೀ ಪ್ರತಿ ಮುಕ್ತಿಗೇ .. ಬಾ ಗುರುವಾಗಿ ಬಾರೇ ನೀ ಪ್ರತಿ ಸತಿ ಶಕ್ತಿಗೇ
ವೇದದಾ ರೂಪಿಣಿ ನಾದ ಸಂಚಾರಿಣಿ ರಾಗದಾ ವಾಹಿನಿ ನೀ ಭೂಮಿಯಾ ದಾಮಿನಿ
ಕೋರಸ್ : ಅಮ್ಮಾ.. ಎಲ್ಲಮ್ಮಾ... ಅಮ್ಮಾ.. ಎಲ್ಲಮ್ಮಾ...
ಗಂಡು : ಎಲ್ಲಾ ನೀನೇ ತಾಯೇ ಎಲ್ಲೆಲ್ಲೂ ನಿನ್ನ ಮಾಯೇ
ಕೋರಸ್ : ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ..
ಗಂಡು : ಎಲ್ಲಾ ನಿನ್ನ ಮಾಯೆ ನಮೆಲ್ಲರನ್ನೂ ಕಾಯೇ ..
ಕೋರಸ್ : ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ..
ಕೋರಸ್ : ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ..
ಗಂಡು : ಎಲ್ಲಾ ನಿನ್ನ ಮಾಯೆ ನಮೆಲ್ಲರನ್ನೂ ಕಾಯೇ ..
ಕೋರಸ್ : ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ..
ಗಂಡು : ಡೊಳ್ಳಿನ ನಾದ ತಾಯೆ ನಿಂಗೆ ಲಾಲಿ ಹಾಡು
ಕೊಳ್ಳದಾ ತಾಯಿ ಜೀವಗಂಗೆ ಓ ಚಂಡಿ ಚಾಮುಂಡಿಯೇ
ಕೋರಸ್ : ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ.. ಅಮ್ಮಾ ಎಲ್ಲಮ್ಮಾ..
--------------------------------------------------------------------------------------------------------------------------

ಶ್ರೀ ರಾಮ್ (೨೦೦೩) - ಸುಮಾ ಸುಮಾನಾ ಘಮಾ ಘಾಮಾನಾ ಹೇಗಿದೆ ಈ ಜಾದು ಆಹಾ...
ಸಂಗೀತ: ಗುರುಕಿರಣ, ಸಾಹಿತ್ಯ : ವಿ.ಮನೋಹರ , ಗಾಯನ : ಉದಿತ್ ನಾರಾಯಣ್ ಸೌಮ್ಯ
ಗಂಡು : ಸುಮಾ ಸುಮಾನಾ ಘಮಾ ಘಾಮಾನಾ ಹೇಗಿದೆ ಈ ಜಾದೂ ... ಆಹಾ..
ಹೆಣ್ಣು : ಅದು ಇದೇನಾ ಇದು ಅದೇನಾ ಏನಿದು ಇರಬಹುದು ಆಹಾ...

ಗಂಡು : ಒಂದು ರಾತ್ರಿ ನಿಂಗಾಗಿ ಚಂದ್ರನ ತಂದೇ ನಾ ನಿನ್ನಾ ಮುಂದೆ ಅವನೆಲ್ಲೇ ಮರೆತೇ ಚಂದ್ರನಾ
ಹೆಣ್ಣು : ಒಲವಿಗೆ ಅದರದೇ ಬೆಳಕಿದೆ ಸದಾ ಚೆಲುವಿಗೆ ನವಿರಿದೇ ಹಲವು ವಿಧ
ಗಂಡು : ನೂರು ಬೆಳದಿಂಗಳಿನ ಬೆಳಕಿನ ಸುಧೆ ನಿನ್ನ ಮುಂದೆ ತಾರೆಗಳು ಮಿನುಗುವುದೇ
ಹೆಣ್ಣು : ತಂಗಾಳಿಲು ಕಂಡೆ ನಾ ನಿನ್ನಾ ಬಿಂಬಾನಾ ಎಲ್ಲ ವೇಳೆ ನೀ ತಂದೆ ಕಂಪ ಬಾಗೀನಾ
ಗಂಡು : ಕಂಪೆನೆಲ್ಲಾ ನಾ ಹಿರಿ ಸವಿದೆ ಸಿಂಚನಾ ಈಗ ನೀನು ನನ್ನಲ್ಲೇ ಬೆರೆತಾ ಚಂದನ
ಸುಮಾ ಸುಮಾನಾ ಘಮಾ ಘಾಮಾನಾ ಹೇಗಿದೆ ಈ ಜಾದೂ ... ವಾಹ್ ವಾ .
ಹೆಣ್ಣು : ಅದು ಇದೇನಾ ಇದು ಅದೇನಾ ಏನಿದು ಇರಬಹುದು ಆಹಾ...
ಗಂಡು : ಪ್ರೇಮಕ್ಕೊಂದು ಸಂಕೇತ ಭವ್ಯ ತಾಜ್ ಮಹಲ್ ನಿನ್ನಾ ಮುಂದೆ ವಾಹ್ ವಾಯ್ತು ಕೇಳೇ ನನ್ನ ಘಜಲ್
ಹೆಣ್ಣು : ಗೆಳೆಯನೇ ಒಲವಿನ ಸವಿ ನುಡಿ ಮುತ್ತು ಜಗವನೇ ಹುಡುಕಿದರೂ ಸಿಗದು
ಗಂಡು : ಮುತ್ತುಗಳ ಮರೆಸಿತು ಕಂಗಳಿವು ನಿನ್ನ ಇನ್ನು ನೀನು ಎದೆ ಏನು ರನ್ನ
ಹೆಣ್ಣು : ಓ.. ನವಿಲು ಗರಿಯ ಬಣ್ಣಾನ ತಂದೆ ಕನಸಿಗೆ ಮಳೆಯ ಬಿಲ್ಲ ಕಾಂತಿನಾ ತಮದೇ ನೆನಪಿಗೇ
ಗಂಡು : ನಾನಾ ಬಣ್ಣ ಚಿತ್ತಾರ ಒಲವಾ ಅಂಕುರ
ಹೆಣ್ಣು : ಮನಸಾ ಹಬ್ಬಿ ಹೂವಾದ ಪ್ರೇಮವೇ ಸುಂದರ
ಗಂಡು : ಸುಮಾ ಸುಮಾನಾ ಘಮಾ ಘಾಮಾನಾ ಹೇಗಿದೆ ಈ ಜಾದೂ ... ಆಹಾ..
ಹೆಣ್ಣು : ಅದು ಇದೇನಾ ಇದು ಅದೇನಾ ಏನಿದು ಇರಬಹುದು ಆಹಾ...
ಗಂಡು : ಸುಮಾ ಸುಮಾನಾ ಘಮಾ ಘಾಮಾನಾ ಹೇಗಿದೆ ಈ ಜಾದೂ ... ಆಹಾ..
ಹೆಣ್ಣು : ಅದು ಇದೇನಾ ಇದು ಅದೇನಾ ಏನಿದು ಇರಬಹುದು ಆಹಾ...
--------------------------------------------------------------------------------------------------------------------------
ಶ್ರೀ ರಾಮ್ (೨೦೦೩) - ನಾನೊಬ್ಬ ದಂಡನಾಯಕ ಎಂದೆಂದೂ ನಿಮ್ಮೂರ ಸೇವಕ
ಸಂಗೀತ: ಗುರುಕಿರಣ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ, ಗಾಯನ : ಮನು, ನಂದಿತಾ
ಗಂಡು : ನಾನೊಬ್ಬ ದಂಡನಾಯಕ ಎಂದೆಂದೂ ನಿಮ್ಮೂರ ಸೇವಕ
ಗೆದ್ದೇ ಗೆಲ್ಲುವ ಸೈನಿಕ ನಿಮ್ಮ ಕಾಯೋದೇ ನನ್ನ ಕಾಯಕ
ಮಣ್ಣಲ್ಲಿ ಸೇರಿ ಹೋದರೂ ಮತ್ತೇ ಹಣ್ಣಾಗಿ ಹುಟ್ಟಿ ಬರುವ ಈ ರಾಮ್
ನಾನೊಬ್ಬ ದಂಡನಾಯಕ ಎಂದೆಂದೂ ನಿಮ್ಮೂರ ಸೇವಕ
ಕೋರಸ್ : ಶ್ರೀ ರಾಮ್ ಶ್ರೀ ರಾಮ್ ಶ್ರೀ ರಾಮ್
ಗಂಡು : ಮಾತಲ್ಲಿ ನಾ ಒರಟ ನನ್ನ ಮನಸಲಿಲ್ಲ ಕಪಟ
ಕೋರಸ್ : ಕತ್ತಿಯನ್ನು ಎತ್ತ್ತದೆ ಯುಕ್ತಿಯಿಂದ ಗೆಲ್ಲುವಾ ಸತ್ಯಕ್ಕಾಗಿ ಮಾಡುವನು ಹೋರಾಟ
ಗಂಡು : ಅನ್ಯಾಯವಾ ತಡೆವೆ ಹೊಸ ಅಧ್ಯಾಯವಾ ಬರೆವೆ
ಕೋರಸ್ : ಅಚ್ಚುಮೆಚ್ಚು ಗೆಳೆಯ ಅಚ್ಚು ಬೆಲ್ಲ ಹೃದಯ ಶ್ರೀ ರಕ್ಷೆ ನೀಡುತಾನೇ ಶ್ರೀ ರಾಮ್
ಗಂಡು : ನಾನೊಬ್ಬ ದಂಡನಾಯಕ ಎಂದೆಂದೂ ನಿಮ್ಮೂರ ಸೇವಕ
ಗಂಡು : ನಾ ಕಣ್ಣಿಟ್ಟರೇ ಪ್ರಣಯ ಈ ಕಣ್ ಬಿಟ್ಟರೇ ಪ್ರಳಯ
ಕೋರಸ್ : ಬಾನಿಗೊಬ್ಬ ಸೂರ್ಯನು ಭೂಮಿಗೊಬ್ಬ ಚಂದ್ರನು ಸೂರ್ಯ ಚಂದ್ರರಂತೇ ಈ ಒಡೆಯ
ಗಂಡು : ಒಗ್ಗಟ್ಟಿಗೆ ವಿಜಯ ನಾನು ಬಿಕ್ಕಟ್ಟಿಗೇ ಗೆಳೆಯ
ಕೋರಸ್ : ದುಷ್ಟರನ್ನೂ ಕೊಲ್ಲಲೂ ಶಿಷ್ಟರನ್ನೂ ಕಾಯಲೂ ಮೆತ್ತೆ ಇಲ್ಲಿ ಹುಟ್ಟಿ ಬಂದನು ಶ್ರೀ ರಾಮ್
ಗಂಡು : ನಾನೊಬ್ಬ ದಂಡನಾಯಕ ಎಂದೆಂದೂ ನಿಮ್ಮೂರ ಸೇವಕ
ಗೆದ್ದೇ ಗೆಲ್ಲುವ ಸೈನಿಕ ನಿಮ್ಮ ಕಾಯೋದೇ ನನ್ನ ಕಾಯಕ
ಮಣ್ಣಲ್ಲಿ ಸೇರಿ ಹೋದರೂ ಮತ್ತೇ ಹಣ್ಣಾಗಿ ಹುಟ್ಟಿ ಬರುವ ಈ ರಾಮ್
ನಾನೊಬ್ಬ ದಂಡನಾಯಕ ಎಂದೆಂದೂ ನಿಮ್ಮೂರ ಸೇವಕ
-------------------------------------------------------------------------------------------------------------------------
ಶ್ರೀ ರಾಮ್ (೨೦೦೩) - ಪ್ರೇಮ ಬಾಣ ಹೂಡು ಜಾಣ ಅಂತೂ ಪ್ರಾಣ ತಂತು ಹೂನಗೆ
ಸಂಗೀತ: ಗುರುಕಿರಣ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ, ಗಾಯನ : ಸುರೇಶ ವಾಡೇಕರ್, ಕವಿತಾಕೃಷ್ಣಮೂರ್ತಿ
ಹೆಣ್ಣು : ಪ್ರೇಮಬಾಣ ಹೂಡು ಬಾಣ ಅಂತೂ ಪ್ರಾಣ ತಂತು ಹೂ ನಗೆ
ಗಂಡು : ಹೂ ದುಂಬಿಗೇ ರವಿ ಭೂಮಿಗೆ ನೀನೆಂದಿಗೂ ನನ ಪಾಲಿಗೇ
ಹೆಣ್ಣು : ಹೂ ದುಂಬಿಗೇ ರವಿ ಭೂಮಿಗೆ ನೀನೆಂದಿಗೂ ನನ ಪಾಲಿಗೇ
ಗಂಡು : ಹೂ ದುಂಬಿಗೇ ...
ಗಂಡು : ಈ ಕಂಗಳೇ ನೀನಾದರೇ ರಂಗಾದ ನೂರು ಕನಸೇತಕೆ
ಹೆಣ್ಣು : ಸ್ವೀಕರಿಸದೇ ನೀನಾದರೇ ಸುಖ ಸಂಸಾರ ನೀಡೋ ಜಗವೇತಕೆ
ಗಂಡು : ನೀ ಬಂದರೇ ಹೂಂ ಅಂದರೇ ಪ್ರೇಮೋತ್ಸವ ಬಾಳ ದಾರಿಗೆ
ಹೆಣ್ಣು : ಚೆಂದಕ್ಕಿಂತ ಚಂದದಂತ ಪ್ರೇಮ ಗ್ರಂಥ ತಂದೆ ಬಾಳಿಗೇ
ಪ್ರೇಮಬಾಣ ಹೂಡು ಬಾಣ ಅಂತೂ ಪ್ರಾಣ ತಂತು ಹೂ ನಗೆ
ಗಂಡು : ಹೂ ದುಂಬಿಗೇ ರವಿ ಭೂಮಿಗೆ ನೀನೆಂದಿಗೂ ನನ ಪಾಲಿಗೇ
ಗಂಡು : ಎಳೇ ಸ್ವರ ಈ ಹಾಡಿಗೆ ನೂರಾರು ರಾಗ ಈ ಪ್ರೀತಿಗೇ
ಹೆಣ್ಣು : ನೂರಾಸೆಯ ನನ್ನಾಸೆಯೂ ಈ ಜೀವದಾ ಜೀವ ನೀನಾದೇ
ಗಂಡು : ಪ್ರೇಮಗೀತೆ ಕೇಳಿ ಸೋತೆ ಮೌನಿಯಂತೇ ಮಾತು ಮಾತಿಗೇ
ಹೆಣ್ಣು : ಹೂ ದುಂಬಿಗೇ ರವಿ ಭೂಮಿಗೆ ನೀನೆಂದಿಗೂ ನನ ಪಾಲಿಗೇ
ಪ್ರೇಮಬಾಣ ಹೂಡು ಬಾಣ ಅಂತೂ ಪ್ರಾಣ ತಂತು ಹೂ ನಗೆ
ಗಂಡು : ಹೂ ದುಂಬಿಗೇ ರವಿ ಭೂಮಿಗೆ ನೀನೆಂದಿಗೂ ನನ ಪಾಲಿಗೇ
ಗಂಡು : ಹೂ ದುಂಬಿಗೇ ...
-------------------------------------------------------------------------------------------------------------------------
ಶ್ರೀ ರಾಮ್ (೨೦೦೩) - ಬಾರೋ ಮಾವಯ್ಯ ನಿನ್ನಾ ದಮ್ಮಯ್ಯಾ
ಸಂಗೀತ: ಗುರುಕಿರಣ, ಸಾಹಿತ್ಯ : ಭಂಗಿರಂಗ ಗಾಯನ : ಉದಿತ್ ನಾರಾಯಣ್, ಅನುರಾಧ ಶ್ರೀರಾಮ್
ಹೆಣ್ಣು : ಬಾರೋ ಮಾವಯ್ಯ ನಿನ್ನಾ ದಮ್ಮಯ್ಯ ರಾಮ ಅಯ್ಯೋ ರಾಮ ..
ರಾಮ ಅಯ್ಯೋ ರಾಮ .. ನೀ ಬಾರಯ್ಯ ನಮ್ಮೂರ ಹಾದಿಯಲಿ
ನೀರಿಗೆ ನಾ ಹೋಗೋ ಬೀದಿಯಲಿ ಪ್ರೀತಿ ಮಾಡೋಣ
ಗಂಡು : ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ ಭಾಮ ನನ್ನ ಭಾಮ ಭಾಮಾ ಮುದ್ದು ಭಾಮ
ನನ್ನ ತೋಳಲ್ಲಿ ನಾ ಓಲೈಸುವೇ ಮುತ್ತಂಥ ಮಾತಿನ ಗುಟ್ಟ್ ಹೇಳುವೆ ಬಾರೇ ಓ ಜಾಣೆ

ಹೆಣ್ಣು : ಹೂವು ತಂದ ಚೆಲುವೆ ಪ್ರೀತಿ ಸಂಕೇತವೂ
ಗಂಡು : ದುಂಬಿ ಪ್ರೀತಿ ತುಂಬಿ ಹಾಡೋ ಸಂಗೀತವೂ
ಹೆಣ್ಣು : ಮೋಡ ಮಳೆಯಲ್ಲಿಯೂ ಓಡೋ ನದಿಯಲ್ಲಿಯೂ
ಗಂಡು : ಸದಾ ನಿತ್ಯತ್ಯೋತ್ಸವ ಇದೇ ಪ್ರೇಮೋತ್ಸವ
ಹೆಣ್ಣು : ಲೋಕ ಸಿಂಗಾರವೋ
ಗಂಡು : ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ ಭಾಮ ನನ್ನ ಭಾಮ ಭಾಮಾ ಮುದ್ದು ಭಾಮ
ಹೆಣ್ಣು : ರಾಮ ಅಯ್ಯೋ ರಾಮ ..
ಗಂಡು : ನನ್ನ ತೋಳಲ್ಲಿ ನಾ ಓಲೈಸುವೇ ಮುತ್ತಂಥ ಮಾತಿನ ಗುಟ್ಟ್ ಹೇಳುವೆ ಬಾರೇ ಓ ಜಾಣೆ
ಹೆಣ್ಣು : ಬಾರೋ ಮಾವಯ್ಯ ನಿನ್ನಾ ದಮ್ಮಯ್ಯ ರಾಮ ಅಯ್ಯೋ ರಾಮ ..
ಹೆಣ್ಣು : ಬಾರೋ ಮಾವಯ್ಯ ನಿನ್ನಾ ದಮ್ಮಯ್ಯ ರಾಮ ಅಯ್ಯೋ ರಾಮ ..
ಗಂಡು : ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ ಭಾಮ ನನ್ನ ಭಾಮ ಭಾಮಾ ಮುದ್ದು ಭಾಮ
ಹೆಣ್ಣು : ನನ್ನಾ ನೂರು ಆಸೆ ಇಂದೇ ಕೈಗೂಡಿದೇ
ಗಂಡು : ಭೂಮಿ ಆಕಾಶವೂ ತಿಳಿ ತಂಗಾಳಿಯೂ
ಹೆಣ್ಣು : ಹೂವ ಮಳೆಯಾಗಲೂ ಶುಭ ಹಾರೈಸಲೂ
ಗಂಡು : ನಮ್ಮಾ ಕಲ್ಯಾಣವೋ ..
ಹೆಣ್ಣು : ಬಾರೋ ಮಾವಯ್ಯ ನಿನ್ನಾ ದಮ್ಮಯ್ಯ ರಾಮ ಅಯ್ಯೋ ರಾಮ ..
ರಾಮ ಅಯ್ಯೋ ರಾಮ .. ನೀ ಬಾರಯ್ಯ ನಮ್ಮೂರ ಹಾದಿಯಲಿ
ನೀರಿಗೆ ನಾ ಹೋಗೋ ಬೀದಿಯಲಿ ಪ್ರೀತಿ ಮಾಡೋಣ
ಗಂಡು : ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ ಭಾಮ ನನ್ನ ಭಾಮ ಭಾಮಾ ಮುದ್ದು ಭಾಮ
ನನ್ನ ತೋಳಲ್ಲಿ ನಾ ಓಲೈಸುವೇ ಮುತ್ತಂಥ ಮಾತಿನ ಗುಟ್ಟ್ ಹೇಳುವೆ ಬಾರೇ ಓ ಜಾಣೆ
ಹೆಣ್ಣು : ಬಾರೋ ಮಾವಯ್ಯ ನಿನ್ನಾ ದಮ್ಮಯ್ಯ ರಾಮ ಅಯ್ಯೋ ರಾಮ ..
ಗಂಡು : ಬಾರೆ ಅಮ್ಮಯ್ಯ ಕುಲುಕಿ ನಿನ್ ಮೈಯ್ಯ ಭಾಮ ನನ್ನ ಭಾಮ ಭಾಮಾ ಮುದ್ದು ಭಾಮ
-------------------------------------------------------------------------------------------------------------------------
No comments:
Post a Comment