1206. ಜಮೀನ್ದಾರ್ರು (೨೦೦೨)

ಜಮೀನ್ದಾರ್ರು ಚಲನಚಿತ್ರದ ಹಾಡುಗಳು 
  1. ಸುಂದರಿ ಸುಂದರಿ ಮೇಘ ಸುಂದರಿ 
  2. ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ 
  3. ಕಲ್ಲೆಂದು ಕರಗೋದಿಲ್ಲ ಕಹಿ ಎಂದು ರುಚಿಸೋದಿಲ್ಲ 
  4. ಹುಡುಗಿ ಹುಡುಗಿ ಮಲೆನಾಡ ಹುಡುಗಿ 
  5. ಬೆಟ್ಟದಂತ ಮನಸು ಕರಗಿತೋ 
  6. ಕಂಡೆ ನಾ ಕಂಡೆ ಪ್ರೇಮದರಮನೆ ದೊರೆಯ 
  7. ಬೆಟ್ಟಪ್ಪ ಬೆಟ್ಟಪ್ಪ 
  8. ವೀಣಾ (ಸ್ವರಾಲಾಪನೇ) 
ಜಮೀನ್ದಾರ್ರು (೨೦೦೨) - ಸುಂದರಿ ಸುಂದರಿ ಮೇಘ ಸುಂದರಿ
ಸಂಗೀತ : ಎಂ.ಎಂ.ಕೀರವಾಣಿ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಎಸ್.ಪಿ.ಬಿ, ಚಿತ್ರಾ

ಗಂಡು : ಸುಂದರಿ... ಸುಂದರಿ.. ಮೇಘ ಸುಂದರಿ .. ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ
            ಮೆಚ್ಚಿದೆನು ನಾ ನಿನ್ನಂದವಾ ಮುತ್ತಲ್ಲಿ ಮೂಡಿ ಸೌಂದರ್ಯದ ಬೊಂಬೆಯೇ
            ನವಿಲೂರ ಶಿಲ್ಪಕನಸು ನೀನು
            ಸುಂದರಿ... ಸುಂದರಿ.. ಮೇಘ ಸುಂದರಿ .. ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ

ಹೆಣ್ಣು :   ಓ.. ಸಾವಿರ ಕಣ್ಣು ಧರೆಯಲಿ ಓ.. ಸಾಗರದಂತೆ ಧರೆಯಲಿ
            ಯಾವ ಹಣ್ಣು ರುಚಿಸಲಿಲ್ಲ ನೀನು ಇರುವೆಡೆ ಜೇನಿನಲ್ಲಿ ಸಿಹಿಯು ಇಲ್ಲ ಕಬ್ಬಿನಲ್ಲಿ ಸವಿಯು ಇಲ್ಲ
            ನಿನ್ನಧರವ ಕಿರು ದಡದಲಿ ತುಂಬಿದೆ ಕಾರಂಜಿ ಅಂದದ ಅಪರಂಜಿಯೇ
            ಸುಂದರಿ... ಸುಂದರಿ.. ಮೇಘ ಸುಂದರಿ .. ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ

ಹೆಣ್ಣು : ತನನ ತನನ ತನನ ತನನ ತನನ ತನನ ಆಆಆಅ... ಆಆಆ.... ಆಆಆ...
ಗಂಡು : ಓ.. ಸಾವಿರ ಸುಮವು ಅರಳಲಿ ಆ ಚಂದ್ರನು ಜೊತೆಗೆ ಬೇರೆಯಲಿ
           ಯಾವ ಹೂವು ಘಮಿಸಲಿಲ್ಲ ನೀನು ಇರುವೆಡೆ
           ತಾರೆ ಇಲ್ಲಿ ಹೊಳೆಯಲಿಲ್ಲ ಗಂಧ ನಾಡಿ ಸೋಕಿತಲ್ಲ
           ನಿನ್ನಂದವೇ ಸೌಗಂಧವು ಮೆಚ್ಚಿದೆ ಒಪ್ಪಿದೆ ನನ್ನಾಸೆ ಅಪರಂಜಿಯೇ
           ಸುಂದರಿ... ಸುಂದರಿ.. ಮೇಘ ಸುಂದರಿ .. ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ
           ಮೆಚ್ಚಿದೆನು ನಾ ನಿನ್ನಂದವಾ ಮುತ್ತಲ್ಲಿ ಮೂಡಿ ಸೌಂದರ್ಯದ ಬೊಂಬೆಯೇ
           ನವಿಲೂರ ಶಿಲ್ಪಕನಸು ನೀನು
           ಸುಂದರಿ... ಸುಂದರಿ.. ಮೇಘ ಸುಂದರಿ .. ಸುಂದರಿ .. ಸುಂದರಿ.. ಕಲ್ಯಾಣ ಸುಂದರಿ
-------------------------------------------------------------------------------------------------------------------------

ಜಮೀನ್ದಾರ್ರು (೨೦೦೨) - ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ
ಸಂಗೀತ : ಎಂ.ಎಂ.ಕೀರವಾಣಿ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಎಂ.ಕೀರವಾಣಿ

ಕೋರಸ್ : ಆಆಆ... ಆಆಆ...ಆಆಆ
ಗಂಡು : ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ
            ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ
           ಪ್ರಶ್ನೆ ಮೇಲೆ ಪ್ರಶ್ನೆ ಇರಲಿ ಸಾವಿರ ಈ ತಾಯಿ ಮಗುವಿಗಿಲ್ಲ ಅಂತರ .. ಓಓಓಓಓ
           ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ

ಕೋರಸ್ : ಓಓಓಓ ... ಓಓಓಓ
ಗಂಡು : ಕಾಸಿದ್ದರೇ ಕಟ್ಟಬಹುದು ರಾಜ್ಯವನ್ನೇ ಇದ್ದಲ್ಲಿಯೇ ಕೊಳ್ಳಬಹುದು ಲೋಕವನ್ನೇ 
           ತಾಯಿ ಎದೆಯ ಹನಿಯು ಸಿಗುವುದೇನಮ್ಮಾ ಕೋಟಿ ಕೊಟ್ಟರೂ ಅದನು ತರುವರಾರಮ್ಮ 
           ಅವಳ ಮಡಿಲ ಸುಖ ದೊರೆತರೆ ಕೊನೆತನಕ ಎಂಥಾ ಭಾಗ್ಯ ಕಂದ ಈ ನಿನ್ನ ಬಾಳಿಗೆ 
           ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ

ಕೋರಸ್ : ಓಓಓಓ ... ಓಓಓಓ
ಗಂಡು : ಮಮತೆಯೇ ಅವಳಿಗೆ ಸಿರಿತನ ಕರುಣೆಯೇ ಕರುಳಿನ ಗೆಳೆತನ 
           ದೇವರಿಗೂ ಅವಳೇ ತಾನೇ ದೇವರು ಅವಳ ಸರಿಸಮ ಯಾರು ಬಾಳರು 
          ಅವಳ ಪ್ರೀತಿಯಲ್ಲಿ ಜಗವೇ ಬೆಳಗುವುದು ಅಮ್ಮ ನಿನಗೂ ಮೊದಲು ಜಗದಲ್ಲಿ ಯಾರಮ್ಮ 
          ಹೆತ್ತವಳು ಯಾರಮ್ಮ ಹೊತ್ತವಳು ಯಾರಮ್ಮ ಅವಳೆದೆ ಅಮೃತದಿ ಉತ್ತರವೂ ಇದೆಯಮ್ಮ
-------------------------------------------------------------------------------------------------------------------------

ಜಮೀನ್ದಾರ್ರು (೨೦೦೨) - ಕಲ್ಲೆಂದು ಕರಗೋದಿಲ್ಲ ಕಹಿ ಎಂದು ರುಚಿಸೋದಿಲ್ಲ
ಸಂಗೀತ : ಎಂ.ಎಂ.ಕೀರವಾಣಿ, ಸಾಹಿತ್ಯ : ಎಸ್.ನಾರಾಯಣ, ಗಾಯನ : ರಾಜೇಶ, ಮಂಜುಳಾಗುರುರಾಜ

ಹೆಣ್ಣು : ಗಂಗಾ... ಗಂಗಾ... ಗಂಗಾ.. ಆಆಆ... ಗಂಗಾ... ಓಓಓಓಓಓ
          ಕಲ್ಲೆಂದು ಕರಗೋದಿಲ್ಲ ಕಹಿ ಎಂದು ರುಚಿಸೋದಿಲ್ಲ
          ಹಾಲೆಂದು ಮುಪ್ಪಾಗಲ್ಲ ಬೆಳಕೆಂದು ಇರುಳಾಗೋಲ್ಲ
          ಗಂಗೆಯ ಪಾದದೇ ಪಾಪವೇ ಇಲ್ಲ ಎಂದೂ ಪಾಪವು ಇಲ್ಲ
          ಗಂಗಾ... ಗಂಗಾ... ಗಂಗಾ.. ಆಆಆ... ಗಂಗಾ... ಓಓಓಓಓಓ

ಹೆಣ್ಣು :  ಒಂದೇ ಬಳ್ಳಿಯ ಹೂವುಗಳಲ್ಲ ಒಂದು ಹೃದಯ ಸೇರಿದೆವಲ್ಲ
           ಒಂದೇ ಬಳ್ಳಿಯ ಹೂವುಗಳಲ್ಲ ಒಂದು ಹೃದಯ ಸೇರಿದೆವಲ್ಲ
           ನೀನು ನೊಂದು ಬಾಡಿದರಿಲ್ಲಿ ಆ ಹೃದಯ ಸಹಿಸೋದಿಲ್ಲ
           ಗಂಗೆ ಅಗಲಿದಾಕ್ಷಣವೇ...  
           ಗಂಗೆ ಅಗಲಿದಾಕ್ಷಣವೇ ಶಿವನ ಜೀವ ಉಳಿಯಲ್ಲ
          ಇಬ್ಬರಿಲ್ಲದಾಗ ಗೌರಿ ತಾನು ಎಂದೂ ಬದುಕಲ್ಲಾ
          ಗಂಗಾ... ಗಂಗಾ... ಗಂಗಾ.. ಆಆಆ... ಗಂಗಾ... ಓಓಓಓಓಓ

ಗಂಡು : ಬೆಟ್ಟದಂತ ರೂಪ ಇವನದು ಬೆಣ್ಣೆಯಂತ ಮನಸು ಆತನದು
           ಬೇರೆಯವರ ದುಃಖ ಸಹಿಸನೋ ಇವನು ತನ್ನ ದುಃಖ ಹೊರಗೆ ತೋರನು
           ರಕ್ತ ಸಂಬಂಧಕ್ಕೆಂದು ಬೇಲಿ ಹಾಕೋರು ಇಲ್ಲ
           ಪ್ರೀತಿ ವಾತ್ಸಲ್ಯವನ್ನು ಕಿತ್ತು ಕೊಳ್ಳೋರು ಇಲ್ಲ ನಿನ್ನ ಅರಿತವರು ಊರಲ್ಲಿ ಯಾರು ಇಲ್ಲ
           ಬೆಟ್ಟಪ್ಪ... ಬೆಟ್ಟಪ್ಪ... ಬೆಟ್ಟಪ್ಪ... ಬೆಟ್ಟಪ್ಪ... ಬೆಟ್ಟಪ್ಪ... ಬೆಟ್ಟಪ್ಪ...
-------------------------------------------------------------------------------------------------------------------------

ಜಮೀನ್ದಾರ್ರು (೨೦೦೨) - ಹುಡುಗಿ ಹುಡುಗಿ ಮಲೆನಾಡ ಹುಡುಗಿ
ಸಂಗೀತ : ಎಂ.ಎಂ.ಕೀರವಾಣಿ, ಸಾಹಿತ್ಯ : ಎಸ್.ನಾರಾಯಣ, ಗಾಯನ :ಎಂ.ಕೀರವಾಣಿ, ಮನು, ಚಿತ್ರಾ

ಕೀರವಾಣಿ : ಬಿತ್ತಾನೇ ಇಲ್ಲದೇನೆ ತೆನೆಯೊಂದು ಕಂಡಿತಲ್ಲಾ ಮೋಡಾನೂ ಇಲ್ಲದೇನೆ ಮಳೆ ಯಾಕೋ ಬಂದಿತಲ್ಲ
            ಬತ್ತಾದ ಒಳಗೆ ಯಾಕೋ ಮುತ್ತಿನ ಅರಳೈತಲ್ಲ... ಆಆಆ...
ಮನು: ಹುಡುಗಿ ಹುಡುಗಿ ಮಲೆನಾಡ ಹುಡುಗಿ ನೀನ್ ಮೈಯೆಲ್ಲ ರಂಗಾಯ್ತು ಯಾಕೇ ಬೆಡಗಿ
          ಹುಡುಗಿ ಹುಡುಗಿ ಮಲೆನಾಡ ಹುಡುಗಿ ನೀನ್ ಮೈಯೆಲ್ಲ ರಂಗಾಯ್ತು ಯಾಕೇ ಬೆಡಗಿ
          ನೀನುಟ್ಟ ಸೀರೆ ನಡುವಲ್ಲೇ ನಿಂತಿಲ್ಲ ನಾ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ
          ಯಾಕೇ ಹಿಂಗಾಯ್ತು ಹೇಳೇ ಹುಡುಗಿ ಹೇಹೇ .. ಹಾಂಹಾಂ .. ಅರೇ ಹೊಯ್
ಹೆಣ್ಣು : ಹುಡುಗ ಹುಡುಗ ಮೈಸೂರ ಹುಡುಗ ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ
          ಹುಡುಗ ಹುಡುಗ ಮೈಸೂರ ಹುಡುಗ ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ
          ನಾನುಟ್ಟ ಸೀರೆ ನಡುವಲ್ಲಿ ನಿಂತಿಲ್ಲ ನೀ ಕೊಟ್ಟ ಮಲ್ಲಿಗೆ ಮುಡಿಯಲ್ಲೇ ಕುಂತಿಲ್ಲ
          ಯಾಕೇ ಹಿಂಗಾಯ್ತು ಅಂತ ಗೊತ್ತೇ ಇಲ್ಲ ಹೇಹೇ .. ಹೋಹೋ .. ಅರೇ ಹೊಯ್
ಗಂಡು : ಹುಡುಗಿ ಹುಡುಗಿ ಮಲೆನಾಡ ಹುಡುಗಿ ನೀನ್ ಮೈ ಎಲ್ಲ ರಂಗಾಯ್ತು ಯಾಕೇ ಬೆಡಗಿ
ಹೆಣ್ಣು : ಹುಡುಗ ಹುಡುಗ ಮೈಸೂರ ಹುಡುಗ ನನ್ ಮೈಯೆಲ್ಲ ರಂಗಾಯ್ತು ಯಾಕೆ ಹುಡುಗ

ಗಂಡು : ಕುಡಿ ಮೀಸೆ ಮ್ಯಾಲೈತೆ ನೂರಾರು ಆಸೇ .. ಹೇಹೇಹೇಹೇ ..
            ಕಣ್ ನೋಡಿದ್ರೆ ಬಿಳಿ ಅಲ್ವ್ ಒಳ ಮನ್ಸಿನ್ ಬಾಸೇ ... ಹೇಹೇಹೇ ..
ಹೆಣ್ಣು : ಪಾನಕನ ಕೂಡುದ್ರೂನು ಬಾಯಾರಿಕೆ ಯಾಕೇ ... ಹೊಯ್ ಹೊಯ್ ಹೋಯ್
          ಮಜ್ಜಿಗೆ ಮಗ್ಲಲ ಇದ್ರೂ ನನ್ ನೋಡ್ತಿ ಯಾಕೇ ಹೇಯ್ .. ಹೇಯ್ ... ಹೇಯ್ .. ಹೇಯ್ ..
ಗಂಡು : ಪಾನಕಕ್ಕೆ ಬೆಲ್ಲ ಕಮ್ಮಿ ಮಜ್ಜಿಗೆಗೆ ಉಪ್ಪು ಕಮ್ಮಿ....
            ಪಾನಕಕ್ಕೆ ಬೆಲ್ಲ ಕಮ್ಮಿ ಮಜ್ಜಿಗೆಗೆ ಉಪ್ಪು ಕಮ್ಮಿ ಪ್ರೀತಿಲಿ ನೀನಿಲ್ದಿದ್ರೇ ರುಚಿನೇ ಇಲ್ಲ ಕಣಮ್ಮಿ
            ಹೇಹೇ .. ಆಹಾ.. ಹಹಹ್ಹೋ
           ಹುಡುಗಿ ಹುಡುಗಿ ಮಲೆನಾಡ ಹುಡುಗಿ...   ಹುಡುಗಿ
ಹೆಣ್ಣು : ಹೇಹೇಹೇಹೇಹೇ .. ಹೇಹೇಹೇಹೇಹೇ 

ಹೆಣ್ಣು : ಮುಂಭಾರ ಹೆಚ್ಚಾಗಿ ಬಿಗಿದಂತೆ ರವಿಕೆ ಹೋಯ್ ಹೋಯ್ ಹೋಯ್ ಹೋಯ್
          ಬೆಳದಿಂಗಳು ಬಿಸಿಯಾಗಿ ಹೇಳೈತೆ ಬಯಕೆ ಹೋಯ್ ಹೋಯ್ ಹೋಯ್ ಹೋಯ್
ಗಂಡು : ಬಯಕೆಗೆ ಬೇಕಂತೆ ಹುಳಿ ಮಾವಿನಕಾಯಿ ಹೇಹೇಹೇಹೇ ...
            ಮದ್ವೆನೇ ಮುಗಿದಿಲ್ಲ ತೇಗಿಬ್ಯಾಡ ಬಾಯಿ  ಹೇಹೇಹೇಹೇ ...
ಹೆಣ್ಣು : ಮದ್ವೇಗೆ ಮಂತ್ರ ಇಲ್ಲ (ಹೊಯ್ ಹೊಯ್ ಹೊಯ್ ) ಸೋಬನಕ್ಕೆ ಸುಂಕ ಇಲ್ಲ (ಹೊಯ್ ಹೊಯ್ ಹೊಯ್ )
          ಮದ್ವೇಗೆ ಮಂತ್ರ ಇಲ್ಲ ಸೋಬನಕ್ಕೆ ಸುಂಕ ಇಲ್ಲ
          ಪ್ರೀತಿಲಿ ನೀನೇ ಬಿದ್ರೆ ರುಚಿನೇ ಇಲ್ಲ ಕಣಯ್ಯ ಯಯ್ಯ  ಯಾಯಯ್ಯ  ಯಯಯಯ್ಯ
          ಹುಡುಗ ಹುಡುಗ ಮೈಸೂರ ಹುಡುಗ ನನ್ ಮೈ ಎಲ್ಲ ರಂಗಾಯ್ತು ಯಾಕೆ ಹುಡುಗ
          ಹುಡುಗ ಹುಡುಗ ಮೈಸೂರ ಹುಡುಗ ನನ್ ಮೈ ಎಲ್ಲ ರಂಗಾಯ್ತು ಯಾಕೆ ಹುಡುಗ.
ಗಂಡು : ನೀನುಟ್ಟ ಸೀರೆ ನಡುವಲ್ಲೇ ನಿಂತಿಲ್ಲ ನಾ ಕೊಟ್ಟ ಮಲ್ಲಿಗೆ ಮುಡಿಯಲ್ಲಿ ಕುಂತಿಲ್ಲ
           ಯಾಕೇ ಹಿಂಗಾಯ್ತು ಹೇಳೇ ಹುಡುಗಿ...  ಹುಡುಗಿ...  ಹುಡುಗಿ...
           ಹುಡುಗಿ ಹುಡುಗಿ (ಹೊಯ್ ಹೊಯ್ ಹೊಯ್ )
           ಹುಡುಗಿ ಹುಡುಗಿ (ಹೊಯ್ ಹೊಯ್ ಹೊಯ್ )
           ಹುಡುಗಿ ಹುಡುಗಿ (ಹೊಯ್ ಹೊಯ್ ಹೊಯ್ )
-------------------------------------------------------------------------------------------------------------------------

ಜಮೀನ್ದಾರ್ರು (೨೦೦೨) - ಬೆಟ್ಟದಂತ ಮನಸು ಕರಗಿತೋ 
ಸಂಗೀತ : ಎಂ.ಎಂ.ಕೀರವಾಣಿ, ಸಾಹಿತ್ಯ : ಎಸ್.ನಾರಾಯಣ, ಗಾಯನ:  ಎಂ.ಕೀರವಾಣಿ,

ಆಆಆ... ಆಆಆ... ಆಆಆ... ಆಆಆ...
ಬೆಟ್ಟದಂತ ಮನಸು ಕರಗಿತೋ ಬೆಂಕಿಯಂತ ಕಣ್ಣು ನೆನೆಯಿತೋ
ಕಲ್ಲಿನಂತ ದೇಹ ಕುಗ್ಗಿತೋ... ಕಲ್ಪವೃಕ್ಷ ಒಣಗಿ ಹೋಯಿತೋ
ಕಂದನೇ ಬಾ ಎಂದೂ ಕರೆಯೋರೋ ಇಲ್ಲಾ..
ಕಂದನೇ ಬಾ ಎಂದೂ ಕರೆಯೋರೋ ಇಲ್ಲಾ..
ದುಃಖಿಸಿ ನೀ ಅಳಲೂ ಮಡಿಲೊಂದು ಇಲ್ಲಾ.... ಆಆಆ.. ಆಆಆ....
ಬೆಟ್ಟಪ್ಪಾ ... ಬೆಟ್ಟಪ್ಪಾ ...

ನೀ ಕುಡಿದ ಹಾಲಿನ್ನೂ ಒಣಗಿಲ್ಲಾ.. ಹಾಲ್ಮನಸು ಒಣಗಿ ಹೋಯಿತಲ್ಲಾ..
ಅಮ್ಮಾ ಎಂದೂ ನೀನೂ .. ಕೂಗಲೇ ಇಲ್ಲಾ.. ಕೂಗಲೂ ತೆಗೆದ ತುಟಿ ಮುಚ್ಚಿಲ್ಲಾ..
ತಬ್ಬಲಿ ದೊರೆ ನೀನೂ ರಾಜ್ಯವಿಲ್ಲಿ ಇಲ್ಲಾ..
ತಬ್ಬಲಿ ದೊರೆ ನೀನೂ ರಾಜ್ಯವಿಲ್ಲಿ ಇಲ್ಲಾ.. ನಿನ್ನುಸಿರ ದುಃಖವನೂ ಅಳೆದೋರು ಇಲ್ಲಾ... ಆಆಆ... ಆಆಆ....
ಬೆಟ್ಟಪ್ಪಾ ... ಬೆಟ್ಟಪ್ಪಾ ...
-------------------------------------------------------------------------------------------------------------------------

ಜಮೀನ್ದಾರ್ರು (೨೦೦೨) - ಕಂಡೆ ನಾ ಕಂಡೆ ಪ್ರೇಮದರಮನೆ ದೊರೆಯ 
ಸಂಗೀತ : ಎಂ.ಎಂ.ಕೀರವಾಣಿ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಚಿತ್ರಾ

ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ  ಸಿರಿಯಾ
ಮಾತಿನಲ್ಲಿ ಹೇಳದಂತ ಮಮಕಾರವೇ ಆ ಅನುರಾಗ ಕಡಲಲ್ಲಿ ನಲಿದಾಡಿದೇ ನಾ  ..
ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ  ಸಿರಿಯಾ

ಆನಂದದ ಮನೆಯಂಗಳ ಅಪರೂಪದ ಬೆಳದಿಂಗಳಾ..
ಶ್ರೀದೇವಿಯೂ ಶ್ರೀ ಗಂಗೆಯೂ ಜೊತೆಯಲ್ಲಿಯೇ ಮಾಹೇಶ್ವರಾ...
ಚಂದ್ರನೂ ಸೋಲುವ ಇಂದ್ರನಿಗೇ ಹೋಲುವ ವೀರ ಶೂರ ಧೀರ ವರ್ಧನಾ ..
ಆ ಧರೆಯಲ್ಲಿ  ಪಂಚಮವೇದ ಆಲಿಸೆದನು ನಾ ಪ್ರೇಮದ ನಾದ
ಆ ಅನುರಾಗ ಕಡಲಲ್ಲಿ ನಲಿದಾಡಿದೇ ನಾ  ..
ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ  ಸಿರಿಯಾ

ಆ ವಂಶದ ಹಿರಿ ಸಿಂಹವೂ ಮರಿಯಲ್ಲಿಯೇ ದೂರಾಯಿತು..
ವಾತ್ಸಲ್ಯವೂ ಒಳಗಿದ್ದರೂ ಹಠಮಾಡುತ ಮೆರೆದಾಡಿತೂ
ಕರುಳಿನ ಕೊಂಡಿಯ ಕರಗಿಸಲಾಗದು ಪ್ರಿತಿಬಂಧ ಬಿಡಿಸಲಾಗದು
ಕಂದನ ನೆನೆದು ಕೊರಗಿದ ದೊರೆಯೂ ದೊರೆಯನು ಸರಿದೂ ಮರುಗಿದ ಮಗನೂ
ಆ ಅನುಬಂಧ ತೊಳಲಾಟ ನಾನೀಗ ಕಂಡೇ ..
ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ  ಸಿರಿಯಾ
ಮಾತಿನಲ್ಲಿ ಹೇಳದಂತ ಮಮಕಾರವೂ ಆ ಅನುರಾಗ ಕಡಲಲ್ಲಿ ನಲಿದಾಡಿದೇ ನಾ  ..
ಕಂಡೇ ನಾ ಕಂಡೇ ನಾ ಪ್ರೇಮದರಮನೆ ದೊರೆಯ
ಕಂಡೇ ನಾ ಕಂಡೇ ನಾ ಅವನ ಹೃದಯದ ಸಿರಿಯಾ
-------------------------------------------------------------------------------------------------------------------------

ಜಮೀನ್ದಾರ್ರು (೨೦೦೨) - ಬೆಟ್ಟಪ್ಪ ಬೆಟ್ಟಪ್ಪ
ಸಂಗೀತ : ಎಂ.ಎಂ.ಕೀರವಾಣಿ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಎಸ್.ಪಿ.ಬಿ

ಕೋರಸ್: ಓಂ... ಓಂ...
ಗಂಡು : ಯಾರಪ್ಪ ಯಾರಪ್ಪ ಇವನ್ಯಾವ ಊರಿನ ಗುರಿಯಪ್ಪ
ಕೋರಸ್ : ಓಓಓಓ ... ಓಓಓಓಓ ...
ಎಲ್ಲರು : ನಮ್ಮಪ್ಪ ನಿಮ್ಮಪ್ಪ ಎಲ್ಲರೂಇವರಿಗೆ ಶರಣಪ್ಪಾ ..
ಕೋರಸ್ : ಓಓಓಓ ... ಓಓಓಓಓ ...
ಗಂಡು : ಇವ ಹೆಜ್ಜೆಯ ಇಟ್ಟರೇ ಬಿರುಗಾಳಿಯ ಅಬ್ಬರ ಆ ಕಣ್ಣನು ತೆರೆದರೇ  ನಡುಗಿತು ಗಿಡಮರ ..
            ಭೀಮನ ಬಲದವನೂ ಅಂಜೂರ ನಡೆಯುವವನು
            ಬಣ್ಣದ ಗುಣವವನೂ ಸಾಗರ ತವರಿ ಇವನೂ
            ಯಾರಪ್ಪ ಯಾರಪ್ಪ..... ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ
            ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ  ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ
            ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ
           ಯಾರಪ್ಪ ಯಾರಪ್ಪ ಇವನ್ಯಾವ ಊರಿನ ಗುರಿಯಪ್ಪ
           ನಮ್ಮಪ್ಪ ನಿಮ್ಮಪ್ಪ ಎಲ್ಲರೂಇವರಿಗೆ ಶರಣಪ್ಪಾ ..

ಕೋರಸ್ : ಓ.. ಓ.. ಓ.. ಓ ... ಓ.. ಓ... ಓ.. ಓ.. ಓ ...
ಗಂಡು : ಕಲ್ಲಿನ ಎದೆಯಲಿ ಮುಳ್ಳಿನ ಪೊದೆಯಲಿ ಸತ್ಯವ ಹುಡುಕುವನೂ ... ಓ... ಓ.. ಓ.. ಓ ...
            ಬಡವ ಬಲ್ಲಿದ ತಿರುಕನಿಗಾದರೂ ನ್ಯಾಯವ ನೀಡುವನೂ.. .. ಓ... ಓ.. ಓ.. ಓ ...
            ಗೆಳೆಯರಿಗೇ ಗೆಳೆಯನೀವ ಕೊಟ್ಟರೇ ಮಾತು ಕೋಟಿಗೇ ಒಂದೂ
            ದುಷ್ಟರಿಗೇ ದುಷ್ಟನೀವ ಸಿಂಹದ ದೃಷ್ಟಿಲಿ ಭಸ್ಮವ ಮಾಡುವ ಯಾರಪ್ಪಾ...
            ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ  ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ
            ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ
ಕೋರಸ್ : ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ  ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ
            ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ
ಗಂಡು : ಯಾರಪ್ಪ ಯಾರಪ್ಪ ಇವನ್ಯಾವ ಊರಿನ ಗುರಿಯಪ್ಪ
           ನಮ್ಮಪ್ಪ ನಿಮ್ಮಪ್ಪ ಎಲ್ಲರೂಇವರಿಗೆ ಶರಣಪ್ಪಾ ..

ಕೋರಸ್ : ಆಆಆಅ... ಆಆಆ...
ಗಂಡು : ಪ್ರೀತಿ ಪ್ರೇಮ ಬಂಧು ಬಳಗವ ಕಂಡವ ಇವನಲ್ಲ ಊರಿನ ಜನರೇ ಇವನ ಉಸಿರೂ ಅದನೂ ಮರೆತಿಲ್ಲಾ..
            ಇವನಿರಲೂ ಹಸಿವಿಲ್ಲಾ.. ಹೆತ್ತವಳಂತೇ ತುತ್ತೂನೂ ಕೊಡುವಾ
             ಕಂಬನಿಗೇ ಸ್ಥಳವಿಲ್ಲಾ.. ಇವನ ನೆರಳಿನ ಹಸ್ತವ ಇರಲೂ.. ಯಾರಪ್ಪಾ..
            ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ  ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ
ಕೋರಸ್ : ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ  ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ
            ಬೆಟ್ಟಪ್ಪ ಬೆಟ್ಟಪ್ಪ ಇವನೇ ನಮ್ಮ ಬೆಟ್ಟಪ್ಪ
ಗಂಡು : ಯಾರಪ್ಪ ಯಾರಪ್ಪ ಇವನ್ಯಾವ ಊರಿನ ಗುರಿಯಪ್ಪ
           ನಮ್ಮಪ್ಪ ನಿಮ್ಮಪ್ಪ ಎಲ್ಲರೂಇವರಿಗೆ ಶರಣಪ್ಪಾ ..
-------------------------------------------------------------------------------------------------------------------------

ಜಮೀನ್ದಾರ್ರು (೨೦೦೨) - ವೀಣಾ (ಸ್ವರಾಲಾಪನೇ) 
ಸಂಗೀತ : ಎಂ.ಎಂ.ಕೀರವಾಣಿ, ಸಾಹಿತ್ಯ : ಎಸ್.ನಾರಾಯಣ, ಗಾಯನ : ಚಿತ್ರಾ

ಹೆಣ್ಣು : ಆಆಆ...(ಧೀಮ್ ಧೀಮ್ ತನನ ಧೀಮ್ ಧೀಮ್)  ಆಆಆ..  (ತನನ ಧೀಮ್ ಧೀಮ್ )
         ಆಆಆ..  (ತನನ ಧೀಮ್ ಧೀಮ್  ತನನ ಧೀಮ್ ತಕ್ ಧೀಮ್ ತಕ್  ಧೀಮ್ ಧೀಮ್ )
         ಆಆಆ...(ಧೀಮ್ ಧೀಮ್ ತನನ ಧೀಮ್ ಧೀಮ್)  ಆಆಆ..  (ತನನ ಧೀಮ್ ಧೀಮ್ )
         ಆಆಆ..  (ತನನ ಧೀಮ್ ಧೀಮ್  ತನನ ಧೀಮ್ ತಕ್ ಧೀಮ್ ತಕ್  ಧೀಮ್ ಧೀಮ್ )
        ಆಆಆ.. (ತನಂ ತನಂ) ಆಆಆ.. (ತನಂ ತನಂ) ಆಆಆ.. (ತನಂ ತನಂ)
        ಆಆಆ.. (ತನಂ ತನಂ) ಆಆಆ.. (ತನಂ ತನಂ) ಆಆಆ.. (ತನಂ ತನಂ) ಆಆಆ.. (ತನಂ ತನಂ)
       ಆಆಆ (ಆಆಆ)  ಆಆಆ (ಆಆಆ)  ಆಆಆ (ಆಆಆ)  ಆಆಆ (ಆಆಆ)  ಆಆಆ (ಆಆಆ)

ಹೆಣ್ಣು : ಸರಿಸದ ಸಸರಿಗಮ   
-------------------------------------------------------------------------------------------------------------------------

No comments:

Post a Comment