ಜೇಷ್ಠ ಚಲನಚಿತ್ರದ ಹಾಡುಗಳು
- ಓ ಕಾಂಚನ ಮೈ ರೋಮಾಂಚನ
- ನೆನ್ನೆಗಳ ನಾಳೆಯ ಭರವಸೆಯೋ
- ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
- ನೆನ್ನೆಗಳ ನೆನೆಪುಗಳ ನಾಳೆಯ ಭರವಸೆಯೋ
- ಖಾಲಸು ಹುಡುಗಿ ವಯಸ್ಸಿಗೆ ಬಂದ ಕೂಡಲೇ
- ನೆನ್ನೆಗಳ ನೆನೆಪುಗಳ ನಾಳೆಯ ಭರವಸೆಯೋ
- ಮಣ್ಣಿಗೂ ಮನುಜಗೂ ಪ್ರೀತಿಯ ನಂಟು ಇದೆ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ರಾಜೇಶ, ಚಿತ್ರಾ
ಗಂಡು : ಓ ಕಾಂಚನ ಮೈ ರೋಮಾಂಚನ ಈ ಹೊಸತನ ಇರಲಿ ದಿನ ದಿನ
ಈ ಕುಳಿ ಕುಳಿ ಕೆನ್ನೆಯ ಒಳಗೆ ದಿನ ಅಳಿಗುಳಿ ಮನೆಯೂಟ
ಈ ಹಸಿ ಹಸಿ ತವಕದ ನಡುವೆ ನವರಸಗಳ ಬಿಸಿಯೂಟ
ಹೆಣ್ಣು : ಈ ಜೇಷ್ಠನ ನಗುವೇ ನರ್ತನ ಕೈ ಬಿಡದಲೇ ನೆರಳಾಗಿರುವೆನಾ..
ಗಂಡು : ಓ ಕಾಂಚನ ಮೈ ರೋಮಾಂಚನ ಈ ಹೊಸತನ ಇರಲಿ ದಿನ ದಿನ
ಹೆಣ್ಣು : ಕನಸೊಂದು ಕಂಡಿದ್ದೆ ನೀ ಚಿತ್ತದೆ ಹೊರಗಿದ್ದೆ
ನಾ ಬಲ್ಲೆ ನಿದಿರೆ ಕೆಡಿಸೋ ನಿನ್ನಾಸೆಯಾ.. ಅದಕೆ ಸಂಶಯ
ಗಂಡು : ನಾ ಕವಿತೆ ಓದಿದ್ದೆ ನೀ ಪದಗಳೊಗಿದ್ದೆ
ನಾ ಬಲ್ಲೆ ತಲೆಯಾ ಕೆಡಿಸೋ ನಿನ್ನೀ ಅಕ್ಷರ... ಕೊಡಲೇ ಉತ್ತರ
ಹೆಣ್ಣು : ಈ ಮೌನವೇ ಬೀಗ ಮುತ್ತುಗಳೇ ಚಾವಿ ಬಾಗಿಲು ತೆರೆದಾಯ್ತು
ಗಂಡು : ನಿನ್ನ ತುಟಿಗಳ ನಡುವೆ ಸಿಕ್ಕಿ ನನ್ನ ಹೃದಯ ಕರಗಿ ನೀರಾಯ್ತು
ಹೆಣ್ಣು : ಜೋಡಿ ಮೋಡದಾ ಮೊದಲಾ ಮಳೆ ಇದು
ಗಂಡು : ಜೋಡಿ ಜೀವದಾ ಉಸಿರಾ ಕಥೆ ಇದು
ಹೆಣ್ಣು : ಜೋಡಿ ಮೋಡದಾ ಮೊದಲಾ ಮಳೆ ಇದು
ಗಂಡು : ಜೋಡಿ ಜೀವದಾ ಉಸಿರಾ ಕಥೆ ಇದು
ಹೆಣ್ಣು : ಈ ಜೇಷ್ಠನ ನಗುವೇ ನರ್ತನ
ಗಂಡು : ಈ ಹೊಸತನ ಇರಲಿ ದಿನ ದಿನ
ಓ ಕಾಂಚನ ಮೈ ರೋಮಾಂಚನ ಈ ಹೊಸತನ ಇರಲಿ ದಿನ ದಿನ
ನಾ ಬಲ್ಲೆ ಅವಳ ಎದೆಯಾ ಏರಿಳಿತವಾ ... ಇಳಿಜಾರಿಳಿತವಾ
ಹೆಣ್ಣು : ಒಬ್ಬ ರಸಿಕ ಹೇಳ್ತಾನೆ ಹೆಣ್ಣೊಂದು ಜಿಗಿ ಜಿಂಕೆ
ನಾ ಬಲ್ಲೆ ಅವನಾ ನಡುವ ಜೂಜಾಟವ .. ನಾಜೂಕಾಟವ
ಗಂಡು : ಯಾಕೆ ಕಡಲಲಿ ಅಂದು ಬೆಳದಿಂಗಳೊಂದು ಅಪ್ಪಳಿಸಿ ನಗುತ್ತಿತ್ತು
ಹೆಣ್ಣು : ಈ ನನ್ನವನ ಹೃದಯ ನನ್ನ ನೆನೆ ನೆನೆದು ಕುಪ್ಪಳಿಸಿ ಕುಣಿತಿತ್ತು
ಗಂಡು : ಜನುಮ ಜನುಮಕೂ ಜೀವಾ ನಿನ್ನದೂ ..
ಹೆಣ್ಣು : ಯುಗದಾ ಆಚೆಗೂ ಪ್ರೀತಿ ನಿಲ್ಲದೂ ..
ಗಂಡು : ಓ ಕಾಂಚನ ಮೈ ರೋಮಾಂಚನ ಈ ಹೊಸತನ ಇರಲಿ ದಿನ ದಿನ
ಹೆಣ್ಣು : ಒಂದು ನದಿಯಾ ಅಲೆಗಿಂತ ಲವಲವಿಕೆ ನನ್ನವನು
ದಿನ ಪೂಜಿಸೋ ಶಿಲೆಗಳಿಗಿಂತ ತುಸು ಹೆಚ್ಚು ಸುಂದರನೂ
ಗಂಡು : ಓ ಕಾಂಚನ ಮೈ ರೋಮಾಂಚನ
ಹೆಣ್ಣು : ಈ ಜೇಷ್ಠನ ನಗುವೇ ನರ್ತನ
--------------------------------------------------------------------------------------------------------------------------
ಜ್ಯೇಷ್ಠ (೨೦೦೪) - ನೆನ್ನೆಗಳ ನಾಳೆಯ ಭರವಸೆಯೋ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ರಾಜೇಶ,
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೋ ನಾಳೆಗಳ ಕನಸುಗಳ ಇಂದಿನ ನಂಬಿಕೆಯೋ

ಈ ಯೌವ್ವನಕೆ ಒಂದು ಶುಭಾಷಯ ಹೊಸ ಜೀವನಕ್ಕೆ ಒಂದು ಶುಭಾಷಯ
ಬದುಕೆ ನಮಗೊಂದು ಹಿಮಾಲಯ ಅಲ್ಲಿ ನಾವು ನೀವುಗಳೇ ಜಲಾಶಯ
ಹೃದಯಾ ಅರಳೋ ಪ್ರೀತಿಯೇ ನಮ್ಮುಸಿರೂ ರೆಪ್ಪೆ ತೆರೆದು ನಕ್ಕರೆ ಸಾಕು ಹಚ್ಚನೆ ಹಸಿರು

ಅರಳುವ ಹೂವಿಗೆ ಎಲ್ಲುಂಟು ಬಾಗಿಲು ಕೋಗಿಲೆ ಹಾಡಿಗೆ ಯಾರು ತಾನೇ ಕಾವುಲು
ಅಂಗೈಲೇ ಸ್ವರ್ಗಾನ ದೊರೆಯಂಗೆ ಬರೆದಿಟ್ಟು ಒಂದೊಂದು ಗೆರೆಯನ್ನು ಆಳೋರೆ ನಾವುಗಳು
ಮಳೆಬಿಲ್ಲನು ಬಿಡಿಸಿರುವದು ಯಾವ ಕಲೆಗಾರನ ಕುಂಚ ನಕ್ಷತ್ರವ ಚೆಲ್ಲಿರುವುದು ಯಾವ ಬಳೆಗಾರನ ಗುಚ್ಛ
ತಲೆಯಾ ಎತ್ತಿ ನಿಂತರೆ ಆಕಾಶ ಕಾಲಾ ಕೆಳಗೆ ಚಾಪೆಯಂತೆ ಒಂದೇ ನಿಮಿಷ
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೋ ನಾಳೆಗಳ ಕನಸುಗಳ ಇಂದಿನ ನಂಬಿಕೆಯೋ
ಒಂದೊಂದು ಹೃದಯಕ್ಕೂ ಒಂದೊಂದು ಜೊತೆಯುಂಟು
ಒಂದೊಂದು ಜೊತೆಗಳಿಗೂ ಒಂದೊಂದು ಕಥೆಯುಂಟು
ಪ್ರಕೃತಿ ಅನ್ನೋದು ಎಲ್ಲರಿಗೂ ಒಂದೇನೆ ಪ್ರೀತಿಯಿಂದ ಕೈ ಚಾಚು ತಿಳಿಸಿವುದು ತನಗುಟ್ಟು
ಪ್ರತಿ ಹೆಜ್ಜೆಗೂ ಸಂತೋಷದ ಪಲ್ಲವಿಯಾ ಹಾಡೋಣ
ಪ್ರತಿ ಸಂಭ್ರಮ ಸಂದರ್ಭವ ನಮದಾಗಿಸಿ ಕೊಳ್ಳೋಣ
ಭೂಮಿ ಸುತ್ತ ನಾವಾಗುವ ಗುರುತುಗಳು
ಸೋಲೇ ಇಲ್ಲ ಇಲ್ಲಿ ಹತ್ತು ಕೈಗಳು ಹತ್ತಿರವಿರಲೂ
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೋ ನಾಳೆಗಳ ಕನಸುಗಳ ಇಂದಿನ ನಂಬಿಕೆಯೋ
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೋ ನಾಳೆಗಳ ಕನಸುಗಳ ಇಂದಿನ ನಂಬಿಕೆಯೋ
ಈ ಯೌವ್ವನಕೆ ಒಂದು ಶುಭಾಷಯ ಹೊಸ ಜೀವನಕ್ಕೆ ಒಂದು ಶುಭಾಷಯ
ಬದುಕೆ ನಮಗೊಂದು ಹಿಮಾಲಯ ಅಲ್ಲಿ ನಾವು ನೀವುಗಳೇ ಜಲಾಶಯ
ಹೃದಯಾ ಅರಳೋ ಪ್ರೀತಿಯೇ ನಮ್ಮುಸಿರೂ ರೆಪ್ಪೆ ತೆರೆದು ನಕ್ಕರೆ ಸಾಕು ಹಚ್ಚನೆ ಹಸಿರು
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೋ ನಾಳೆಗಳ ಕನಸುಗಳ ಇಂದಿನ ನಂಬಿಕೆಯೋ
--------------------------------------------------------------------------------------------------------------------------
ಜ್ಯೇಷ್ಠ (೨೦೦೪) - ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ರಾಜೇಶ, ಕಲ್ಪನಾ, ಕಾರ್ತಿಕ್
ಗಂಡು : ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮ ಚಾಲಾಕು ಚಮಕು ಇಟ್ಟೇ ರುಕ್ಕು ರುಕ್ಕಮ್ಮಾ
ಹೇಯ್.. ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮ ಚಾಲಾಕು ಚಮಕು ಇಟ್ಟೇ ರುಕ್ಕು ರುಕ್ಕಮ್ಮಾ
ರಾಜಾಧಿರಾಜ ಬಂದೆ ಏನೇನು ಮಾಡ್ತಿಯಮ್ಮ ಇಲಕಲ್ಲ ಸೀರೆ ಕುಣಿಗಲ ರವಿಕೆ ಮೂರಡಿ ಬಿಂಕ
ಒಸಿ ಒಸಿ ತಡಿಯೋ ರಾಜಕುಮಾರಿ ಕೊನೆಯಾ ತಂಕ
ಕೋರಸ್ : ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮ ಚಾಲಾಕು ಚಮಕು ಇಟ್ಟೇ ರುಕ್ಕು ರುಕ್ಕಮ್ಮಾ
ಗಂಡು : ಮೂರೂ ಘಂಟೆಗೆ ಏಳಬೇಕು ಸಾರ್ಸಬೇಕು ರಂಗೋಲಿ ಹಾಕೆಬೇಕು
ಕಾಫಿ ಮಾಡಬೇಕು ಏಳು ಗಂಟೆಗೆಲ್ಲ ಬಿಸಿ ಬಿಸಿ ದೋಸೆ ಇಡ್ಲಿ ಉಪ್ಪಿಟ್ಟು ವಡೆಯೂ ಬೇಕು
ಕಂಡರೆ ಕಂಡೋರೆಲ್ಲಾನು ಕಾಲಿಗೆ ಬೀಳ್ತಾರೆ ಬಳುಕುವ ನಮ್ಮಿ ಅರಗಿಳಿಯಾ ಹೊತ್ತುಕೊಂಡು ಹೋಗ್ತಾರೆ
ಕೋರಸ್ : ತಕಿಟ ತಕಿಟ ತೊಂ ದುಮುತ ದುಮುತ ತಕಿಟ ತಕಿಟ ತಕಿಟ ತಕಿಟ ತೊಂ ದುಮುತ ದುಮುತ
ಗಂಡು : ಕಂಡರೆ ಕಂಡೋರೆಲ್ಲಾನು ಕಾಲಿಗೆ ಬೀಳ್ತಾರೆ
ಬಳುಕುವ ನಮ್ಮಿ ಅರಗಿಳಿಯಾ ಹೊತ್ತುಕೊಂಡು ಹೋಗ್ತಾರೆ
ನಮ್ಮ ಮನೆ ದೀಪ ನಕ್ಕರೆ ಹುಣ್ಣಿಮೆ ಶಾಕುಂತಲೆಗಿಂತ ಚೂರು ಕಡಿಮೆ
ಹೆಣ್ಣು : ನೀವ್ ಕಾಡಬೇಡಿ ಜೋಡಿ ಬೇಡಿ ದಮ್ಮಯ್ಯಾ ಅಂತೀನಿ
ಇಲಕಲ್ಲ ಸೀರೆ ಕುಣಿಗಲ ರವಿಕೆ ಮೂರಡಿ ಬಿಂಕ ಒಸಿ ಒಸಿ ತಡಿಯೋ ರಾಜಕುಮಾರಿ ಕೊನೆಯಾ ತಂಕ
ಕೋರಸ್ : ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮ ಚಾಲಾಕು ಚಮಕು ಇಟ್ಟೇ ರುಕ್ಕು ರುಕ್ಕಮ್ಮಾ
ಗಂಡು : ಮೆಲ್ಲಗೆ ನಡಿಯೇ ಗೌರಮ್ಮ ಪಾದಗಳು ಸವಿತಾವೆ ಮಾಡ್ರನ್ನೂ ಹುಡಿಗಿಯರು ಕಣ್ಣು ಕಂಫ್ಯೂಸ್ ಆಗ್ತಾವೆ
ಮೆಲ್ಲಗೆ ನಡಿಯೇ ಗೌರಮ್ಮ ಪಾದಗಳು ಸವಿತಾವೆ ಮಾಡ್ರನ್ನೂ ಹುಡಿಗಿಯರು ಕಣ್ಣು ಕಂಫ್ಯೂಸ್ ಆಗ್ತಾವೆ
ಹಸೆಮಣೆ ಕೂಡನ್ ಚಾಚೋ ಹಂಗಿದೆ ಅಹ್ ಇದ್ದಿದ್ದೆಲ್ಲ ಇದ್ದಗಲ್ದೆ ಈಗ ಹೆಂಗಿದೆ
ಹೆಣ್ಣು : ಈ ತರಲೇ ಸಾಕು ರಗಳೆ ಸಾಕು ದಾರಿ ಬೀಡ್ರಿ ಹೋಗಬೇಕು
ಇಲಕಲ್ಲ ಸೀರೆ ಕುಣಿಗಲ ರವಿಕೆ ಮೂರಡಿ ಬಿಂಕ ಒಸಿ ಒಸಿ ತಡಿಯೋ ರಾಜಕುಮಾರಿ ಕೊನೆಯಾ ತಂಕ
ಕೋರಸ್ : ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮ ಚಾಲಾಕು ಚಮಕು ಇಟ್ಟೇ ರುಕ್ಕು ರುಕ್ಕಮ್ಮಾ
ಹೆಣ್ಣು : ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮ ಚಾಲಾಕು ಚಮಕು ಇಟ್ಟೇ ರುಕ್ಕು ರುಕ್ಕಮ್ಮಾ
ಜೋಲಾಲಿ ಹಾಡೋ ಕಾಲ ಬಂದ್ರೆ ಏನ್ಮಾಡ್ತಿಯಮ್ಮಾ
ಗಂಡು : ಇಲಕಲ್ಲ ಸೀರೆ ಕುಣಿಗಲ ರವಿಕೆ ಮೂರಡಿ ಬಿಂಕ ಒಸಿ ಒಸಿ ತಡಿಯೋ ರಾಜಕುಮಾರಿ ಕೊನೆಯಾ ತಂಕ
ಓ ಕಾಂಚನ ಕ್ಷಮಿಸಮ್ಮ ನನ್ನಾ ನಾನಿಲ್ಲವೇ ನಿನ್ನಾ ಜೊತೆಗೆ ಕಣ್ಣೀರು ಒರೆಸಿಕೋ
ನಿನ್ನ ಎಲ್ಲರು ಅರುಯುವ ಕಾಲ ಬಂದೆ ಬರುವುದು ಸಹಿಸಿಕೋ
ಬಂದೆ ಬರುವುದು ಸಹಿಸಿಕೋ
ಕೋರಸ್ : ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮ ಚಾಲಾಕು ಚಮಕು ಇಟ್ಟೇ ರುಕ್ಕು ರುಕ್ಕಮ್ಮಾ
--------------------------------------------------------------------------------------------------------------------------
ಜ್ಯೇಷ್ಠ (೨೦೦೪) - ನೆನ್ನೆಗಳ ನೆನೆಪುಗಳ ನಾಳೆಯ ಭರವಸೆಯೋ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಚಿತ್ರಾ
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೋ ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ

ಈ ಸೃಷ್ಟಿಯೊಳಗೆ ಏನಿಲ್ಲಾ ಕಣೋ ನಿನ್ನ ಮುಷ್ಠಿಯೊಳಗೆ ಎಲ್ಲ ಇದೆ ಕಣೋ

ಛಲವೇ ನಮ್ಮ ತಾಯಿತಂದೆಯರು ಒಳ್ಳೆತನವೇ ದಾರಿ ಉದ್ದಕ್ಕೂ ನಡೆಸೋ ದೇವರು

ಎಲ್ಲಿಂದ ಆರಂಭ ಎಲ್ಲಿಂದ ಬೆಳವಣಿಗೆ ಎಲ್ಲಿಂದ ಎಲ್ಲಿಗೋ ಈ ಬಾಳ ಮೆರವಣಿಗೆ
ದಾಯಾದಿ ತನವೆಂಬ ಮಾತಿಗಿಲ್ಲಿ ಸ್ಥಳವಿಲ್ಲ ಬೆವರಲ್ಲೇ ದೇವರನು ಕಾಣದೇನೇ ವಿಧಿ ಇಲ್ಲ
ಗುರಿ ಇಲ್ಲದೆ ಗುರುವಿಲ್ಲದೇ ತಿರುಗಾಡುವುದೀ ಭೂಮಿ ಸೋದರ ವಾತ್ಸಲ್ಯಕ್ಕೆ ಇದು ಬೇಕಿಲ್ಲ ಸ್ವಾಮಿ
ಎಂದೋ ಬರೆದ ಆ ಪಾಂಡವರ ಬದುಕು ಭೂಮಿ ಮೇಲೆ ಅಳಿಯದೇ ಉಳಿದಿದೆ ಎಲ್ಲಕ್ಕೂ
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೋ ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ
ಈ ಸೃಷ್ಟಿಯೊಳಗೆ ಏನಿಲ್ಲಾ ಕಣೋ ನಿನ್ನ ಮುಷ್ಠಿಯೊಳಗೆ ಎಲ್ಲ ಇದೆ ಕಣೋ
ಛಲವೇ ನಮ್ಮ ತಾಯಿತಂದೆಯರು ಒಳ್ಳೆತನವೇ ದಾರಿ ಉದ್ದಕ್ಕೂ ನಡೆಸೋ ದೇವರು
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೋ ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ
--------------------------------------------------------------------------------------------------------------------------
ಜ್ಯೇಷ್ಠ (೨೦೦೪) - ಖಾಲಸ ಹುಡುಗಿ ವಯಸ್ಸಿಗೆ ಬಂದ ಕೂಡಲೇ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಮಾಲತಿ
ಖಲಾಸ್.. ಖಲಾಸ್ ..
ಖಾಲಾಸು ಹುಡುಗಿ ಖಲಾಸು ಹುಡುಗಿ ವಯಸ್ಸಿಗೆ ಬಂದ ಕೂಡಲೇ
ಗಲ್ಲಿ ಗಲ್ಲಿ ಗೋಲಿ ಬಾರು ಸುಲ್ತಾನ್ ಪೇಟೀ ಸುಬ್ಬಿ ನಾನು ಸೂಪರ್ ಮಾರ್ಕೆಟಗೇ ಹೋದರೂ
ನನ್ನದೇ ತಾನೇ ದರಬಾರು ಹಾಂ ತಕಥೈ ತಕ ಥಕ್ಕಥೈತಕ
ಕುಣಿ ಕುಣಿ ಅನ್ನೋ ಪಕ್ಕ ಅಬ್ಬಬ್ಬಾ ಬೇಡ ಅಂದರ್ ಬಾಹರ್ ಲೆಕ್ಕ
ಅರೆ ಗುನ್ನ ಗುನ್ನ ಹೊಡೆಯೋ ಮುನ್ನ ಬೇಕು ಹೊಸ ಜೇಷ್ಠ

ಸುಂಕದಕಟ್ಟೆ ಚುರುಮುರಿ ಬೆಳ್ತಂಗಡಿ ಭೇಲಪುರಿ ಐಸಿ.. ನೀನ್ ರಂಗನಾಯಕಿ ತಾನಾದೆ
ದಾವಣಗೆರೆ ಧಾವಣಿ ನೀ ಬೇಲೂರಿಗೆ ಹೋದೆ ಬೊಂಬೆಗಳು ಮಾಯವಾಯ್ತು
ರಾಣೆಬೆನ್ನೂರು ರವಿಕೆ ತೊಟ್ಟು ಮಂಗಳೂರಿಗೆ ಹೋದೆ ಶಿಪ್ ಗಳು ಮಾಯವಾಯ್ತು
ಆ ವಯ್ಯಾರಿಯಾ ಒಸಿ ಬಳುಕಾಟ ನೋಡು ಕುಂದಾಪುರದ ಕುಣಿದಾಟ ನೋಟ
ನಾ ಬಾಗಿಲ ಕಡೆಗೆ ಬಾಗಲಕೋಟ್ ಎತ್ತರದೇ ನಮ್ಮ ಕೋಟೆ
ಖಾಲಾಸು ಹುಡುಗಿ ಖಲಾಸು ಹುಡುಗಿ ವಯಸ್ಸಿಗೆ ಬಂದ ಕೂಡಲೇ
ಗುಂಡ್ಲುಪೇಟೆ ಜಿಲೇಬಿ ಬನವಾಸಿಲ್ ಹಾಯಾಗಿ ಹುಬ್ಬಳ್ಳಿಲ್ ಹುಬ್ಬೇರಿಸಿದವಳು
ಚಿಂತಾಮಣಿಯ ಚಿಂತೇನಾ ಕೋಲಾರದಲ್ ಸಂತೇನಾ ಕುಂದಾಪುರದಲ್
ಎಲ್ಲಾ ಮರೆತವಳೋ ಬೆಳಗಾವಿಲ್ ತಾ ದಿಣ್ಣೆ ಎರ್ಕೊಂಡ್ ಚಿತ್ರಾ ಬಿಡಿಸೆಕ್ ಹೋದೆ
ಕಲ್ಲಿಕೋಟೆ ಬೆಳ್ಳಗಾಯ್ತೋ ಉಳ್ಳಾಲದಿಂದ ಉರುಳಾಡುತ್ತಾ ಮಂಡ್ಯದವರೆಗೂ ಹೋದೆ
ಅಮೃತದ ಕಬ್ಬುಸಿಕ್ತು ಆ ಲಿಂಗಮಕ್ಕಿಯಲ್ಲಿ ಮೈ ಜಲಸಿ ಕೊಟ್ಟೆ
ಆ ಬೀದರ್ ಗಂಟಾ ಹೋಗಿ ತಲೆಮಾರಿಸಿಕೊಂಡೇ
ಮೈ ತುಂಬಾ ನಂಗೆ ಎರಡ್ ಕಣ್ಣು ಯಾರಿಲ್ಲ ನೆನೆಸ್ಕಂಡು
ಖಾಲಾಸು ಹುಡುಗಿ ಖಲಾಸು ಹುಡುಗಿ ವಯಸ್ಸಿಗೆ ಬಂದ ಕೂಡಲೇ
ಗಲ್ಲಿ ಗಲ್ಲಿ ಗೋಲಿ ಬಾರು ಸುಲ್ತಾನ್ ಪೇಟೀ ಸುಬ್ಬಿ ನಾನು ಸೂಪರ್ ಮಾರ್ಕೆಟಗೇ ಹೋದರೂ
ನನ್ನದೇ ತಾನೇ ದರಬಾರು ಹಾಂ ತಕಥೈ ತಕ ಥಕ್ಕಥೈತಕ
ಕುಣಿ ಕುಣಿ ಅನ್ನೋ ಪಕ್ಕ ಅಬ್ಬಬ್ಬಾ ಬೇಡ ಅಂದರ್ ಬಾಹರ್ ಲೆಕ್ಕ
ಅರೆ ಗುನ್ನ ಗುನ್ನ ಹೊಡೆಯೋ ಮುನ್ನ ಬೇಕು ಹೊಸ ಜೇಷ್ಠ
ಖಾಲಾಸು ಹುಡುಗಿ ಖಲಾಸು ಹುಡುಗಿ ವಯಸ್ಸಿಗೆ ಬಂದ ಕೂಡಲೇ
ಗಲ್ಲಿ ಗಲ್ಲಿ ಗೋಲಿ ಬಾರು ಸುಲ್ತಾನ್ ಪೇಟೀ ಸುಬ್ಬಿ ನಾನು ಸೂಪರ್ ಮಾರ್ಕೆಟಗೇ ಹೋದರೂ
ನನ್ನದೇ ತಾನೇ ದರಬಾರು ಹಾಂ ತಕಥೈ ತಕ ಥಕ್ಕಥೈತಕ
ಕುಣಿ ಕುಣಿ ಅನ್ನೋ ಪಕ್ಕ ಅಬ್ಬಬ್ಬಾ ಬೇಡ ಅಂದರ್ ಬಾಹರ್ ಲೆಕ್ಕ
ಅರೆ ಗುನ್ನ ಗುನ್ನ ಹೊಡೆಯೋ ಮುನ್ನ ಬೇಕು ಹೊಸ ಜೇಷ್ಠ
ಖಾಲಾಸು ಹುಡುಗಿ ಖಲಾಸು ಹುಡುಗಿ ವಯಸ್ಸಿಗೆ ಬಂದ ಕೂಡಲೇ
--------------------------------------------------------------------------------------------------------------------------
ಜ್ಯೇಷ್ಠ (೨೦೦೪) - ನೆನ್ನೆಗಳ ನೆನೆಪುಗಳ ನಾಳೆಯ ಭರವಸೆಯೋ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಶ್ರೀನಿವಾಸ
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೂ ನಾಳೆಯ ಕನಸುಗಳು ಇಂದಿನ ನಂಬಿಕೆಯು
ಅದು ಯಾರೋ ಮಾಡಿದ ತಪ್ಪು ಇದು ಇನ್ಯಾರಿಗೋ ಶಿಕ್ಷೆ ಬೇಕೆನಮ್ಮ
ಅಪರಂಜಿಯಂತಿರೋ ಜೀವಾ ಅದು ಅಪರಾಧಿ ಪಟ್ಟವು ಇನ್ಯಾಕಮ್ಮ
ವ್ಯಥೆಯಾ ದಹಿಸೋ ದುಃಖ ಮನೆಯಲ್ಲಿದೆ
ದೈವ ಕ್ಷಮಿಸೋ ತ್ಯಾಗದ ದೇವತೆ ಸೆರೆಮನೆಯಲ್ಲಿದೇ

ತಲೆಯು ಬಾಗಿ ತಾಳಿನಾ ಕಟ್ಟಿಕೊಂಡ ಅಬಲೆಯು ಸೇವೆಗೈದ ತಪ್ಪಿಗೆ ಸೇವಕಳೆ ಆಗೋದಳು
ಎಲ್ಲವನ್ನು ಬಲ್ಲವರು ಏನು ಮಾಡಲಾಗದೇ ಸಮಯಗಳ ಸುಳಿಯೊಳಗೆ ಸಿಕ್ಕಿಕೊಂಡು ನರಳಿದನು
ಎದೆಯಲ್ಲಿಯೇ ಮುಳ್ಳಿದ್ದರು ಕಾಲ ತೋರುವುದು ಗಡಿಯಾರ
ಪ್ರತಿ ಕತ್ತಲೆ ಹಿಂದೆಯೇ ಬೆಳಕಿರುವುದೇ ವ್ಯವಹಾರ ನಾಳೆ ನಮದು ಎನ್ನೋಣ ಹೀಗೆ
ಚಿಂತೆ ಎಂದು ನೀರಾ ಮೇಲಿನ ಗುಳ್ಳೆಯ ಹಾಗೇ
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೂ ನಾಳೆಯ ಕನಸುಗಳು ಇಂದಿನ ನಂಬಿಕೆಯು
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೂ ನಾಳೆಯ ಕನಸುಗಳು ಇಂದಿನ ನಂಬಿಕೆಯು
ಕನಸು ಕಟ್ಟೋ ಕೈಗಳಿಗೆ ಕಷ್ಟ ಉಂಡು ನೂರಾರು
ಬ್ರಹ್ಮ ಬರೆದ ಬರಹದಲಿ ದಿನಕ್ಕೊಂದು ತಕರಾರು
ನ್ಯಾಯ ನೀತಿ ಧರ್ಮಗಳ ನೆಚ್ಚಿ ನಡೆದವರಿಗೊಂದು
ನಾಲ್ಕು ದಿಕ್ಕಿನಲ್ಲಿಯೂ ಕಾಣೋರೆಲ್ಲಾ ನಮ್ಮೋರು
ಅಳುವಿಲ್ಲದ ಅಳುಕಿಲ್ಲದ ನಿಷ್ಕಲ್ಮಷ ಮಡಿಲಲ್ಲಿ
ಮಗುವಾಗಿಯೇ ದಿನ ಕಳೆಯುವ ಸೋದರನ ಕಥೆ ಇಲ್ಲಿ
ಒಳ್ಳೆ ಕಾಲ ಬಂದೆ ಬರಬೇಕು ಅಲ್ಲಿವರೆಗೂ ನಂಬಿಕೆ ಹೆಸರಲಿ ನಗುತಿರಬೇಕು
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೂ ನಾಳೆಯ ಕನಸುಗಳು ಇಂದಿನ ನಂಬಿಕೆಯು
ಅದು ಯಾರೋ ಮಾಡಿದ ತಪ್ಪು ಇದು ಇನ್ಯಾರಿಗೋ ಶಿಕ್ಷೆ ಬೇಕೆನಮ್ಮ
ಅಪರಂಜಿಯಂತಿರೋ ಜೀವಾ ಅದು ಅಪರಾಧಿ ಪಟ್ಟವು ಇನ್ಯಾಕಮ್ಮ
ವ್ಯಥೆಯಾ ದಹಿಸೋ ದುಃಖ ಮನೆಯಲ್ಲಿದೆ
ದೈವ ಕ್ಷಮಿಸೋ ತ್ಯಾಗದ ದೇವತೆ ಸೆರೆಮನೆಯಲ್ಲಿದೇ
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೂ ನಾಳೆಯ ಕನಸುಗಳು ಇಂದಿನ ನಂಬಿಕೆಯು
ಅದು ಯಾರೋ ಮಾಡಿದ ತಪ್ಪು ಇದು ಇನ್ಯಾರಿಗೋ ಶಿಕ್ಷೆ ಬೇಕೆನಮ್ಮ
ಅಪರಂಜಿಯಂತಿರೋ ಜೀವಾ ಅದು ಅಪರಾಧಿ ಪಟ್ಟವು ಇನ್ಯಾಕಮ್ಮ
ವ್ಯಥೆಯಾ ದಹಿಸೋ ದುಃಖ ಮನೆಯಲ್ಲಿದೆ
ದೈವ ಕ್ಷಮಿಸೋ ತ್ಯಾಗದ ದೇವತೆ ಸೆರೆಮನೆಯಲ್ಲಿದೇ
ನೆನ್ನೆಗಳ ನೆನಪುಗಳ ನಾಳೆಯ ಭರವಸೆಯೂ ನಾಳೆಯ ಕನಸುಗಳು ಇಂದಿನ ನಂಬಿಕೆಯು
--------------------------------------------------------------------------------------------------------------------------
ಜ್ಯೇಷ್ಠ (೨೦೦೪) - ಮಣ್ಣಿಗೂ ಮನುಜಗೂ ಪ್ರೀತಿಯ ನಂಟು ಇದೆ
ಸಂಗೀತ : ಎಸ್.ಎ.ರಾಜಕುಮಾರ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ರಾಜೇಶ, ಚಿತ್ರಾ
ಮಣ್ಣಿಗೂ ಮನುಜನಿಗೂ ಪ್ರೀತಿಯ ನಂಟು ಇದೆ
ಗಾಳಿಗೂ ಉಸಿರಿಗೂ ಸ್ನೇಹದ ನಂಟೂ ಇದೆ
ನೋಟಕೂ ಬೆಂಕಿಗೂ ನಂಟಿದೆ ಇಂದಿಗೂ ಬದುಕಿಗೂ ನೀರಿಗೂ ನಂಟಿದೆ ಎಂದಿಗೂ
ಆಸೆಯೇ ಆಗಸ ಎಲ್ಲವಾ ನೀಡುವಾ ನಂಟಿದೆ ನಮ್ಮಲ್ಲಿ ಪ್ರಾಣವೇ ಅಡಗಿದೆ ಅನ್ನದಾ ಋಣದಲಿ
ಮಣ್ಣಿಗೂ ಮನುಜನಿಗೂ ಪ್ರೀತಿಯ ನಂಟು ಇದೆ
ಗಾಳಿಗೂ ಉಸಿರಿಗೂ ಸ್ನೇಹದ ನಂಟೂ ಇದೆ
ಅದೇ ಸೂರ್ಯನು ಅದೇ ಚಂದ್ರನು ಅದೇ ಬೀಸೋ ಗಾಳಿ ಅದೇ ಕಲರವ
ಎತ್ತಿ ಆಡಿಸೋ ಗೋವು ಕರುಗಳು ತಲೆ ಕಾಯೋ ನೂರಾರು ಸಾಲುಮರಗಳು
ಅತ್ತು ಕರೆದು ಅಂಬಲಿ ಕುಡಿದಾ ಅಜ್ಜಿ ಕುಡಿಸಿದಳು ರುಚಿ ಇನ್ನು ಆರೋ ಮೊದಲೇ ಎಲ್ಲಿ ಹೋದಳು
ಈ ಬಾಲ್ಯ ಯೌವ್ವನ ಮುಪ್ಪು ಎಂಬುದು ದೇಹಕೆ ಅನಿವಾರ್ಯ
ಈ ಅನಿವಾರ್ಯತೆಯ ಮೀರಿ ನಡೆವುದು ಸಾಧಕನಿಗೆ ಸಾಧ್ಯ
ಮಣ್ಣಿಗೂ ಮನುಜನಿಗೂ ಪ್ರೀತಿಯ ನಂಟು ಇದೆ
ಗಾಳಿಗೂ ಉಸಿರಿಗೂ ಸ್ನೇಹದ ನಂಟೂ ಇದೆ
ತವರು ಇಲ್ಲಿದೆ ನೆರಳು ಇಲ್ಲಿದೆ ಹೆತ್ತೋರು ತೂಗಿದ ಜೋಲಿ ಇಲ್ಲಿದೆ
ಸ್ವಾರ್ಥವಿಲ್ಲದೆ ಹೃದಯ ತುಂಬಿದೆ ಕೂಡಿ ಬಾಳಲು ಇಲ್ಲಿ ಸ್ವರ್ಗ ಸುಖವಿದೆ
ಕಾಲ ಒಂದು ಓಡುವ ಕುದುರೆ ಅಂತ ಗೊತ್ತಿದೆ
ಮಣ್ಣೇ ನಮ್ಮ ಮೊದಲು ಕೊನೆಯು ಕಣ್ಣ ಮುಂದಿದೆ
ಇಲ್ಲಿ ಬಿತ್ತಿ ಬೆಳೆಯೋ ಪ್ರೀತಿಯ ಬೆಳೆಯ ತೆನೆಗಳು ನಾವುಗಳು
ಈ ಜೇಷ್ಠನ ಜನ್ಮಕೆ ಅರ್ಥವ ಕೊಟ್ಟ ಶ್ರೇಷ್ಠರು ನೀವುಗಳು
ಮಣ್ಣಿಗೂ ಮನುಜನಿಗೂ ಪ್ರೀತಿಯ ನಂಟು ಇದೆ
ಗಾಳಿಗೂ ಉಸಿರಿಗೂ ಸ್ನೇಹದ ನಂಟೂ ಇದೆ
ನೋಟಕೂ ಬೆಂಕಿಗೂ ನಂಟಿದೆ ಇಂದಿಗೂ ಬದುಕಿಗೂ ನೀರಿಗೂ ನಂಟಿದೆ ಎಂದಿಗೂ
ಆಸೆಯೇ ಆಗಸ ಎಲ್ಲವಾ ನೀಡುವಾ ನಂಟಿದೆ ನಮ್ಮಲ್ಲಿ ಪ್ರಾಣವೇ ಅಡಗಿದೆ ಅನ್ನದಾ ಋಣದಲಿ
ಮಣ್ಣಿಗೂ ಮನುಜನಿಗೂ ಪ್ರೀತಿಯ ನಂಟು ಇದೆ
ಗಾಳಿಗೂ ಉಸಿರಿಗೂ ಸ್ನೇಹದ ನಂಟೂ ಇದೆ
--------------------------------------------------------------------------------------------------------------------------
No comments:
Post a Comment