ಜ್ವಾಲಾ ಮೋಹಿನಿ ಚಲನ ಚಿತ್ರದ ಹಾಡುಗಳು
- ಎಲ್ಲಿ ಹೋದರೂ ಒಂದೂ
- ಮಾಯಾ ಮಾಟ ಮೋಡಿಗೆಲ್ಲಾ
- ಸಕ್ಕರೆ ಬೋಂಬೆ ಅಕ್ಕರೆಯಿಂದ
- ಕೆಣಕುತಿದೆ ಈ ಸೊಗಸೂ
ಸಂಗೀತ : ಸತ್ಯಂ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಪಿ.ಬಿ.ಎಸ್
ಪುರರ.. ರ್ಬ್ಯಾ...
ಎಲ್ಲಿ ಹೋದರೂ ಒಂದು ಚೆಲುವಿ ಹೆಣ್ಣ ಇರಬೇಕೂ
ಎಲ್ಲಿ ಹೋದರೂ ಒಂದು ಚೆಲುವಿ ಹೆಣ್ಣ ಇರಬೇಕೂ ಮೆಲ್ಲಾಗೇ ಮೈ ಒರಗಿ ನಗಬೇಕೂ
ಮೆಲ್ಲಾಗೇ ಮೈ ಒರಗಿ ತೋಳಿಂದ ನಡು ಬಳಸಿ ಝಲ್ಲೇನೂವಂತಾಡುತಿರಬೇಕೂ .. ಓಓಓಓಓ.. ಆಆಆ... ಹೇ...
ಸಂಪಿಗೆ ನೆರಳಾಗೇ ನಾ ಕಾಯುತಿರುವಾಗ ಕೆಂಪಾನೇ ಹುಡುಗಿಯೂ ಬರಬೇಕು
ಕೆಂಪಾನೇ ಹುಡುಗಿಯೂ ಇಂಪಾಗಿ ಹಾಡುತ್ತಾ ಜೊಂಪಲ್ಲಿ ಸವಿಗನಸ ತರಬೇಕು
ಜೊಂಪಲ್ಲಿ ಸವಿಗನಸ ತರಬೇಕು
ಓಓಓಓಓ... ಓಓಓಓಓಹೋ ....ಓಓಓಓಓ
ಬಾಳೆಯ ತೋಟದಲಿ ನಡೆಯುತ್ತ ಬರುವಾಗ ಬಾಲೆಯೊಬ್ಬಳೂ ಕೂಡಾ ಇರಬೇಕೂ..
ಬಾಲೆಯೊಬ್ಬಳೂ ಇದ್ದೂ ಲೀಲೆಯಿಂದ ನನ್ನ ಓಲಾಡಿಸಿ ಹರುಷ ತರಬೇಕೂ..
ಓಲಾಡಿಸಿ ಹರುಷ ತರಬೇಕೂ..
ಎಲ್ಲಿ ಹೋದರೂ ಒಂದು ಚೆಲುವಿ ಹೆಣ್ಣ ಇರಬೇಕೂ ಮೆಲ್ಲಾಗೇ ಮೈ ಒರಗಿ ನಗಬೇಕೂ
ಮೆಲ್ಲಾಗೇ ಮೈ ಒರಗಿ ನಗಬೇಕೂ... ಓಓಓಓಓ.. ಓಓಓಓಓ .. ..
ಅಡವಿಯ ಹಾದೀಲಿ ಗಾಡೀಲಿ ಬರುವಾಗ ಬೆಡಗಿಯೋಬ್ಬಳು ಬಂದು ನಿಲ್ಲಬೇಕೂ ...
ಬೆಡಗಿಯೋಬ್ಬಳು ಬಂದು ಹಿಡಿದಪ್ಪಿ ತುಟಿಗೊಂದು ಕೊಡುವಾಗ ಮೈ ಜುಮ್ ಎಂದೇನಬೇಕೂ ...
ಕೊಡುವಾಗ ಮೈ ಜುಮ್ ಎಂದೇನಬೇಕೂ ...
ಎಲ್ಲಿ ಹೋದರೂ ಒಂದು ಚೆಲುವಿ ಹೆಣ್ಣ ಇರಬೇಕೂ ಮೆಲ್ಲಾಗೇ ಮೈ ಒರಗಿ ನಗಬೇಕೂ
ಮೆಲ್ಲಾಗೇ ಮೈ ಒರಗಿ ನಗಬೇಕೂ... ಓಓಓಓಓ.. ಅಆಆಆ ... ಓಓಓಓಓ .. ..
---------------------------------------------------------------------------------------------------------------------
ಜ್ವಾಲಾ ಮೋಹಿನಿ (೧೯೭೩) - ಮಾಯಾ ಮಾಟ ಮೋಡಿಗೆಲ್ಲಾ
ಸಂಗೀತ : ಸತ್ಯಂ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಎಲ್. ಆರ್.ಈಶ್ವರೀ
ಹೂಂಹೂಂಹೂಂಹೂಂ .. ಹೂಂಹೂಂಹೂಂಹೂಂ .. ಹೂಂಹೂಂಹೂಂಹೂಂ .. ಹೂರೂರೂರೂರೂ ..
ಹೇ..ಮಾಯಾ ಮಾಟ ಮೋಡಿಗೆಲ್ಲಾ... ಸಿಕ್ಕಿ ಬೀಳೋ ಹೆಣ್ಣ ಇದಲ್ಲಾ ..
ಹೇ..ಮಾಯಾ ಮಾಟ ಮೋಡಿಗೆಲ್ಲಾ... ಸಿಕ್ಕಿ ಬೀಳೋ ಹೆಣ್ಣ ಇದಲ್ಲಾ ..
ಎಲ್ಲಾ ಮೀರಿ ನಿಂತ ನಾ ಮೋಹಿನೀ .. ಈ ರೂಪದಿಂದ ಕಾಣುವಂತ ಡಾಕಿಣಿ ..
ಹೂಂಹೂಂಹೂಂ.. ಓಂ.. ಕ್ರೀಮ್ ಕ್ರಾಮ್ ಫಟ್
ಹೇ..ಮಾಯಾ ಮಾಟ ಮೋಡಿಗೆಲ್ಲಾ... ಸಿಕ್ಕಿ ಬೀಳೋ ಹೆಣ್ಣ ಇದಲ್ಲಾ ..
ಹ್ಹಾಂ ... ನನ್ನ ಕಟ್ಟಿ ಹಾಕ್ತಿನಂತಾ ಮಾಡಿ ಒಂದೂ ಹಾಳು ಪಂಥ ಹೇಹೇಹೇಹೇ ... ಹೇಹೇ ... ಹೇಹೇಹೇ ..
ನನ್ನ ಕಟ್ಟಿ ಹಾಕ್ತಿನಂತಾ ಮಾಡಿ ಒಂದೂ ಹಾಳು ಪಂಥ ಪೂಜೆಗೀಗ ಕೂತೇ ನನ್ನ ಕೈಲೀ ಸಿಕ್ಕೀ ನೀನೂ
ಪೂಜೆಗೀಗ ಕೂತೇ ನನ್ನ ಕೈಲೀ ಸಿಕ್ಕೀ ನೀನೂ ರಕ್ತಕಾರೀ ಸಾಯ್ತಿಯಲ್ಲೋ .. ಓಂ.. ಕ್ರೀಮ್ ಕ್ರಾಮ್ ಫಟ್
ಮಾಯಾ ಮಾಟ ಮೋಡಿಗೆಲ್ಲಾ... ಸಿಕ್ಕಿ ಬೀಳೋ ಹೆಣ್ಣ ಇದಲ್ಲಾ ..
ಎಲ್ಲಾ ಮೀರಿ ನಿಂತ ನಾ ಮೋಹಿನೀ .. ಈ ರೂಪದಿಂದ ಕಾಣುವಂತ ಡಾಕಿಣಿ .. ಡಾಕಿಣಿ
ಹೇ..ಮಾಯಾ ಮಾಟ ಮೋಡಿಗೆಲ್ಲಾ... ಸಿಕ್ಕಿ ಬೀಳೋ ಹೆಣ್ಣ ಇದಲ್ಲಾ ..
ಹ್ಹಾಂ .. ಮೂಳೆ ಮುರಿದೂ ಮೂಲೆಗೆ ಎಸೆದು ಲಟಕ ಲಟಕ್ ಲಟಕ್
ರಕ್ತ ಹೀರಿ ಕುಡಿದೂ ನಾನೂ .. ಗಟಕೂ.. ಗಟಕೂ..ಗಟಕೂ..
ಮೂಳೆ ಮುರಿದೂ ಮೂಲೆಗೆ ಎಸೆದು ಲಟ ಲಟ ಲಟಕೂ..
ರಕ್ತ ಹೀರಿ ಕುಡಿದೂ ನಾನೂ .. ಗಟ.. ಗಟ..ಗಟ ಗಟಕೂ..
ಹಣ್ಣಿನಂತೇ ತಿಂದೂ ಮತ್ತೇ ಮಣ್ಣಿನಲ್ಲಿ ಹೂತು
ಹಣ್ಣಿನಂತೇ ತಿಂದೂ ಮತ್ತೇ ಮಣ್ಣಿನಲ್ಲಿ ಹೂತು ಮೆರೆಯಲೆಂದೂ ಬಂದೇನಲ್ಲೋ
ಮಾಯಾ ಮಾಟ ಮೋಡಿಗೆಲ್ಲಾ... ಸಿಕ್ಕಿ ಬೀಳೋ ಹೆಣ್ಣ ಇದಲ್ಲಾ .. ಹುಂಹುಂಹೂಂ..
ಎಲ್ಲಾ ಮೀರಿ ನಿಂತ ನಾ ಮೋಹಿನೀ .. ಈ ರೂಪದಿಂದ ಕಾಣುವಂತ ಡಾಕಿಣಿ ..
ಓಂ.. ಕ್ರೀಮ್ ಕ್ರಾಮ್ ಫಟ್ ... ಓಂ.. ಕ್ರೀಮ್ ಕ್ರಾಮ್ ಫಟ್ ... ಓಂ.. ಕ್ರೀಮ್ ಕ್ರಾಮ್ ಫಟ್
ಓಂ.. ಕ್ರೀಮ್ ಕ್ರಾಮ್ ಫಟ್...
---------------------------------------------------------------------------------------------------------------------
ಜ್ವಾಲಾ ಮೋಹಿನಿ (೧೯೭೩) - ಸಕ್ಕರೆ ಬೋಂಬೆ ಅಕ್ಕರೆಯಿಂದ
ಸಂಗೀತ : ಸತ್ಯಂ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಎಲ್. ಆರ್.ಈಶ್ವರೀ
ಆಆಆ.... ಆಆಆ... ಲಲಲಲಾ... ಓಓಓಓ ... ಓಓಓಓ
ಸಕ್ಕರೆ ಬೊಂಬೆ ಅಕ್ಕರೆಯಿಂದ ಪಕ್ಕಕ್ಕೆ ಬಂದೂ ನಿಂತಿದೆ ನೋಡು
ಮಾವಯ್ಯ.. ಭಲಾರೇ ಮಾವಯ್ಯಾ.. ಮಾವಯ್ಯ.. ಕಿಲಾಡಿ ಮಾವಯ್ಯಾ..
ಸಕ್ಕರೆ ಬೊಂಬೆ ಹ್ಹ... ಅಕ್ಕರೆಯಿಂದ ಪಕ್ಕಕ್ಕೆ ಬಂದೂ ನಿಂತಿದೆ ನೋಡು
ಮಾವಯ್ಯ.. ಭಲಾರೇ ಮಾವಯ್ಯಾ.. ಮಾವಯ್ಯ.. ಕಿಲಾಡಿ ಮಾವಯ್ಯಾ..
ಸಿಹಿ.. ಆಹಾ.. ಸಿಹಿ.. ಒಹೋ.. ಸಿಹಿ.. ಸಿಹಿ.. ಸಿಹಿ.. ಸಿಹಿ..
ಎಲ್ಲೆಲ್ಲೋ ಸಿಹಿ ಮೈಯೆಲ್ಲಾ ಸಿಹಿ
ಎಲ್ಲೆಲ್ಲೋ ಸಿಹಿ ಮೈಯೆಲ್ಲಾ ಸಿಹಿ ಬಲ್ಲವ ಬಲ್ಲ ಬೆಲ್ಲದ ಸವಿಯ ಬಿಟ್ಟರೇ ಸಿಕ್ಕೋದಿಲ್ಲಾ..
ಮಾವಯ್ಯ.. ಭಲಾರೇ ಮಾವಯ್ಯಾ.. ಮಾವಯ್ಯ.. ಕಿಲಾಡಿ ಮಾವಯ್ಯಾ..
ಮುಟ್ಟುವ ಆಸೆಗೇ ಸಿಕ್ಕುವಳಲ್ಲಾ.. ದುಷ್ಟರಿಗೇ ಎಂದೂ ದಕ್ಕುವಳಲ್ಲಾ.. ..
ಓ .. ಮುಟ್ಟುವ ಆಸೆಗೇ ಸಿಕ್ಕುವಳಲ್ಲಾ.. ದುಷ್ಟರಿಗೇ ಎಂದೂ ದಕ್ಕುವಳಲ್ಲಾ..
ಇಷ್ಟ ಬಂದರೇ .. ಹ್ಹಾ.. ಇಷ್ಟ ಬಂದರೇ .. ಇಷ್ಟ ಬಂದರೇ ಬಿಡುವುದೇ ಇಲ್ಲಾ... ..
ಮಾವಯ್ಯ.. ಭಲಾರೇ ಮಾವಯ್ಯಾ.. ಮಾವಯ್ಯ.. ಕಿಲಾಡಿ ಮಾವಯ್ಯಾ..
ಸಕ್ಕರೆ ಬೊಂಬೆ ಹ್ಹ... ಅಕ್ಕರೆಯಿಂದ ಪಕ್ಕಕ್ಕೆ ಬಂದೂ ನಿಂತಿದೆ ನೋಡು
ಮಾವಯ್ಯ.. ಭಲಾರೇ ಮಾವಯ್ಯಾ.. ಮಾವಯ್ಯ.. ಕಿಲಾಡಿ ಮಾವಯ್ಯಾ..
ಮಾವಯ್ಯ.. ಭಲಾರೇ ಮಾವಯ್ಯಾ.. ಮಾವಯ್ಯ.. ಕಿಲಾಡಿ ಮಾವಯ್ಯಾ..
ಓ.. ಕಾಣದೇ ಅಂದ ತೋರಲೂ ಬಂದೇ .. ನಾಕದ ಸುಖವ ನೀಡಲೂ ತಂದೇ ...
ಓ.. ಕಾಣದೇ ಅಂದ ತೋರಲೂ ಬಂದೇ .. ನಾಕದ ಸುಖವ ನೀಡಲೂ ತಂದೇ ...
ಒಲಿದರೇ ಈಗ... ಹೊಯ್ ಒಲಿದರೇ ಈಗ.. ಒಲಿದರೇ .. ಈಗ ಎಲ್ಲಾ ನಿಂದೇ ..
ಮಾವಯ್ಯ.. ಭಲಾರೇ ಮಾವಯ್ಯಾ.. ಮಾವಯ್ಯ.. ಕಿಲಾಡಿ ಮಾವಯ್ಯಾ..
ಸಕ್ಕರೆ ಬೊಂಬೆ ಹ್ಹ... ಅಕ್ಕರೆಯಿಂದ ಪಕ್ಕಕ್ಕೆ ಬಂದೂ ನಿಂತಿದೆ ನೋಡು
ಮಾವಯ್ಯ.. ಭಲಾರೇ ಮಾವಯ್ಯಾ.. ಮಾವಯ್ಯ.. ಕಿಲಾಡಿ ಮಾವಯ್ಯಾ..
ಮಾವಯ್ಯ.. ಭಲಾರೇ ಮಾವಯ್ಯಾ.. ಮಾವಯ್ಯ.. ಕಿಲಾಡಿ ಮಾವಯ್ಯಾ..
---------------------------------------------------------------------------------------------------------------------
ಜ್ವಾಲಾ ಮೋಹಿನಿ (೧೯೭೩) - ಕೆಣಕುತಿದೆ ಈ ಸೊಗಸೂ
ಸಂಗೀತ : ಸತ್ಯಂ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಪಿ.ಬಿ.ಎಸ್, ಎಸ್.ಜಾನಕೀ
ಗಂಡು: ಕೆಣಕುತಿದೇ ಈ ಸೊಗಸೂ.. ಕೆರಳುತಿದೇ ಈ ಮನಸೂ ಮೆಲ್ಲಗೇ. ಬಾ ಮಲ್ಲಿಗೇ .. ಮೆಲ್ಲಗೇ.. ಬಾ ಮಲ್ಲಿಗೇ ..
ಹೆಣ್ಣು : ಓ.. ಎದೆಯೊಳಗೇ ಹೋರಾಟ.. ನನ್ನೆದರೂ ಚೆಲ್ಲಾಟ.. ಮೋಡಿಯ ಮಾಡಿದೇ ..ಮೋಡಿಯ ಮಾಡಿದೇ ..
ಗಂಡು : ಆಆಆಆಹ್ಹಾಆಆ .... (ಆಹ್ಹಾಆಆಆಆಆ ....)
ಗಂಡು : ಈ ಅಂದದಲೀ.. ಈ ಚೆಂದದಲೀ.. ನನ್ನೇ ನಾ ಮರೆತೇ ..
ಹೆಣ್ಣು : ಆಆಆ.. ಈ ಸ್ನೇಹದಲೀ .. ಈ ಮಾತಿನಲಿ ಕಂಡೇ ... ನಾ ಕವಿತೇ ..
ಗಂಡು : ಓಓಓಓ... ಈ ಅಂದದಲೀ.. ಈ ಚೆಂದದಲೀ.. ನನ್ನೇ ನಾ ಮರೆತೇ ..
ಹೆಣ್ಣು : ಓಓಓ .. ಈ ಸ್ನೇಹದಲೀ .. ಈ ಮಾತಿನಲಿ ಕಂಡೇ ... ನಾ ಕವಿತೇ ..
ಗಂಡು : ನಾವಾಡುವಾ ಹಾಡುವಾ ಹರುಷದಿ ಪಡುವಾ ಇಲ್ಲೇ ನಾನ್ ಇಲ್ಲೇ.. ನಾವ್ ಇಲ್ಲೇ ಬಾ ನಲ್ಲೇ ..
ಹೆಣ್ಣು : ಓ.. ಎದೆಯೊಳಗೇ ಹೋರಾಟ.. ನನ್ನೆದುರೂ ಚೆಲ್ಲಾಟ.. ಮೋಡಿಯ ಮಾಡಿದೇ .. ಮೋಡಿಯ ಮಾಡಿದೇ ..
ಗಂಡು : ಈ ಸಂಜೆಯಲೀ.. ಈ ಸೊಬಗಿನಲೀ .. ಏನೋ ಉಲ್ಲಾಸ...
ಹೆಣ್ಣು : ಓಓಓ .. ಈ ತಾಣದಲೀ .. ಈ ಏಕಾಂತದಲೀ .. ಏಕೋ ಹೊಸ ಹರುಷ..
ಗಂಡು : ಓಓಓ.. ಈ ಸಂಜೆಯಲೀ.. ಈ ಸೊಬಗಿನಲೀ .. ಏನೋ ಉಲ್ಲಾಸ...
ಹೆಣ್ಣು : ಓಓಓ .. ಈ ತಾಣದಲೀ .. ಈ ಏಕಾಂತದಲೀ .. ಏಕೋ ಹೊಸ ಹರುಷ..
ಗಂಡು : ನನ್ನಾಸೆಯ ಕೇಳೆಯ ಸುಖವನು ನೀಡೆಯ ನಲ್ಲೇ.. ನೀ ನಿಲ್ಲೇ... ಓ... ನಲ್ಲೇ.. ನೀ ನಿಲ್ಲೇ..
ಹೆಣ್ಣು : ಓ.. ಎದೆಯೊಳಗೇ ಹೋರಾಟ.. ನನ್ನೆದುರೂ ಚೆಲ್ಲಾಟ.. ಮೋಡಿಯ ಮಾಡಿದೇ ..
ಗಂಡು : ಮೆಲ್ಲಗೇ.. ಬಾ ಮಲ್ಲಿಗೇ ..
ಗಂಡು : ಮೆಲ್ಲಗೇ.. ಬಾ ಮಲ್ಲಿಗೇ ..
---------------------------------------------------------------------------------------------------------------------
No comments:
Post a Comment