ಕಾಡಿನ ಬೆಂಕಿ ಚಲನಚಿತ್ರದ ಹಾಡುಗಳು
- ನನ್ನ ಪ್ರೀತಿಯ ಹುಡುಗಿ
- ಯಾವುದು ಪ್ರೀತಿ
- ಋತುಮಾನ ಸಂಪುಟದಿ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ ಗಾಯನ : ಸುರೇಶ ಹೆಬ್ಳಿಕರ್
ನನ್ನ ಪ್ರೀತಿಯ ಹುಡುಗಿ ಬಾರೆ ಮೆಲ್ಲ ಮೆಲ್ಲನೆ ನಡೆದು ಬಾರೆ

ರೆಂಬೆ ರೆಂಬೆಗೆ ಅರಳಿದೆ ಹೂವು ಹಕ್ಕಿ ಹಾಡಿಗೆ ಮರೆಯುವ ನೋವು

ಕನಸುಗಳನು ಹಸನಗೊಳಿಸಿ ಬಾರೆ ಬಾರೆ ಸಂಗಾತಿ
ನನ್ನ ಪ್ರೀತಿಯ ಹುಡುಗಿ ಬಾರೆ ಮೆಲ್ಲ ಮೆಲ್ಲನೆ ನಡೆದು ಬಾರೆ
ನಿನ್ನ ದಾರಿಗೆ ಕನಸನು ಹಾಸಿ ನನ್ನ ಪ್ರೀತಿಯ ಮಧುವನು ಸೂಸಿ

ಹಗಲು ಇರುಳು ಜೊತೆಗೆ ಇರುವೆ ನಾನು ನಿನ್ನ ಕಣ್ಣಾಗಿ
ನಿನ್ನ ದಾರಿಗೆ ಕನಸನು ಹಾಸಿ ನನ್ನ ಪ್ರೀತಿಯ ಮಧುವನು ಸೂಸಿ
ಒಂಟಿ ಬಾಳಲಿ ನರಳಿದೆ ನಾನು ಜೋಡಿ ಆಗುತ ನೀಡಿದೆ ಜೇನು

ಹೊಸತು ಬದುಕು ಬೆಸೆದು ಬರಲಿ ಬಾರೆ ನನ್ನ ಬಂಗಾರಿ
ಒಂಟಿ ಬಾಳಲಿ ನರಳಿದೆ ನಾನು ಜೋಡಿ ಆಗುತ ನೀಡಿದೆ ಜೇನು
--------------------------------------------------------------------------------------------------------------------------
ಕಾಡಿನ ಬೆಂಕಿ (೧೯೮೮) - ಯಾವುದು ಪ್ರೀತಿ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಬಿ.ಆರ್.ಛಾಯ
ಯಾವುದು ಪ್ರೀತಿ ಯಾವುದು ನೀತಿ ಬಾಳಿಗೆ ಬರುವುದೇ ಸವಿಯು

ನಿಜವನು ಅರಿಯದೆ ಸುಳ್ಳನ್ನೂ ನಂಬಿದೆ ಕಳೆಯುವುದೆಂದಿಗೇ ಭ್ರಮೆಯೂ ..

ಹೊಸ ಬಾಳಿನ ಹಸುರೆಲೆ ತೋರಣ ಮದುರಿತೇ ಒಣಗುತ ಇಂದು

ಮಧುಮಾಸದ ಪ್ರೀತಿಯ ಹೂರಣ ಬೆರೆಸಿತೆ ಕಹಿಯನು ತಂದು
ಎಲ್ಲಿದೆ ತಿಂಗಳ ಬೆಳಕು ದಹಿಸಿದೆ ರಣ ರಣ ಬಿಸಿಲು
ಯಾವುದು ಪ್ರೀತಿ ಯಾವುದು ನೀತಿ ಬಾಳಿಗೆ ಬರುವುದೇ ಸವಿಯು
ಕಿವಿ ತುಂಬುವ ಕೈ ಬಳೆ ಗುಂಗಿಗೆ ಮೀಟಿದೆ ಮಿಲನದ ಬಯಕೆ

ಸವಿ ಕಾಣದು ಯೌವ್ವನ ಚಿಮ್ಮಿದೆ ವಿರಹವನುಳಿಸುತ ಮನಕೆ
ಎಂದಿಗೆ ಬರುವುದೋ ಹಗಲು ಬರುವುದೇ ಬೆಳಕಿನ ಕಡಲು
ಯಾವುದು ಪ್ರೀತಿ ಯಾವುದು ನೀತಿ ಬಾಳಿಗೆ ಬರುವುದೇ ಸವಿಯು
ನಿಜವನು ಅರಿಯದೆ ಸುಳ್ಳನ್ನೂ ನಂಬಿದೆ ಕಳೆಯುವುದೆಂದಿಗೇ ಭ್ರಮೆಯೂ ..
ಯಾವುದು ಪ್ರೀತಿ ಯಾವುದು ನೀತಿ ಬಾಳಿಗೆ ಬರುವುದೇ ಸವಿಯು
ನಿಜವನು ಅರಿಯದೆ ಸುಳ್ಳನ್ನೂ ನಂಬಿದೆ ಕಳೆಯುವುದೆಂದಿಗೇ ಭ್ರಮೆಯೂ ..
ಯಾವುದು ಪ್ರೀತಿ ಯಾವುದು ನೀತಿ ಬಾಳಿಗೆ ಬರುವುದೇ ಸವಿಯು
--------------------------------------------------------------------------------------------------------------------------
ಕಾಡಿನ ಬೆಂಕಿ (೧೯೮೮) - ಋತುಮಾನ ಸಂಪುಟದಿ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ ಗಾಯನ : ಬಿ.ಆರ್.ಛಾಯ
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೇ
ಮಾನವ ಕುಲವ ಕಾಯುವ ತಾಯೇ
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೇ
ಮಾನವ ಕುಲವ ಕಾಯುವ ತಾಯೇ
ಪಚ್ಚೆ ಕಾಡಿನ ನಡುವೆ ಸ್ವಚ್ಛ ಪ್ರೀತಿಯ ಧಾರೇ
ಪಚ್ಚೆ ಕಾಡಿನ ನಡುವೆ ಸ್ವಚ್ಛ ಪ್ರೀತಿಯ ಧಾರೇ
ಸಂಗೀತ ಹಾಡುತ ಬಂದ ಬೆರಗು ಜಾರು ಜಲಪಾತ ವಿಧ ವಿಧ ಅವತಾರ
ಹಸಿರು ಈ ವನ ತಾಯಿ ಚೆಂದ ಸೆರಗು
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೇ
ಮಾನವ ಕುಲವ ಕಾಯುವ ತಾಯೇ
ಮಣ್ಣು ಗಂಧವ ಹರಡಿ ಮೌನ ಹಂದರ ಹಾಸಿ
ಮಣ್ಣು ಗಂಧವ ಹರಡಿ ಮೌನ ಹಂದರ ಹಾಸಿ
ಈ ಕಾಡು ತಾನಾಗಿ ತಂದ ನಿಧಿಯು ಮಾತು ತಿಳಿದಾತ ಮರಗಿಡ ಕೊಂದಾಗ
ವನದ ಮೌನಕೆ ತಾಳ್ಮೆ ಎಲ್ಲಿಯವರೆಗೂ
ಋತುಮಾನ ಸಂಪುಟದಿ ಹೊಸ ಕಾವ್ಯ ಬರೆದವಳೇ
ಮಾನವ ಕುಲವ ಕಾಯುವ ತಾಯೇ
--------------------------------------------------------------------------------------------------------------------------
No comments:
Post a Comment