ಕಾಳಿಂಗ ಚಲನಚಿತ್ರದ ಹಾಡುಗಳು
- ದುರುಗಟ್ಟಿ ನೋಡಬೇಡಯ್ಯಾ ಹೆಣ್ಣ ಹೀಗೆ ನೋಡೋದು ಸರಿಯಲ್ಲ
- ತಾಯಿ ತಂದೆ ಇಬ್ಬರೂ ಕಣ್ಣಿಗೆ ಕಾಣುವ ದೇವರು
- ಭಯವನು ಬೀಡು ಚಿಂತೆಯ ಸುಡು
- ಚಟಪಟ ಹನಿಗಳು ಬಾನಿನಿಂದ ಜಾರುತಿವೆ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ
ದುರಗುಟ್ಟಿ ನೋಡಬೇಡಯ್ಯಾ ಹೆಣ್ಣ ಹೀಗೆ ನೋಡೋದು ಸರಿಯಲ್ಲ
ಮೂಗನಂಗೇ ನಿಲ್ಲ ಬೇಡಯ್ಯಾ ಮಾತನಾಡದೇ ಹೋಗೋದು ಸರಿಯಲ್ಲ
ತುತ್ತೂರೂ ತುತ್ತೂರೂ ತುತ್ತೂರೂ ತುತ್ತೂರೂ ತುತ್ತೂರೂ ತುತ್ತೂರೂ
ಹೆಣ್ಣು ಹೂವಿನಂತೇ ಮನಸ ತಿಳಿದು ನಡೆಯಬೇಕೂ
ಅವಳ ಸರಸದಿಂದ ಸೊಗಸಿನಿಂದ ಕರೆಯಬೇಕೂ
ಬಳಿಗೆ ಬರುವ ಮುನ್ನ ಚಿನ್ನಾ ರನ್ನಾ ಎನ್ನಬೇಕೂ
ನಿನ್ನಾ ನಗುವಿನಿಂದ ನಲ್ಲೇ ಮನವಾ ಗೆಲ್ಲಬೇಕು
ಶುದ್ಧ ಒಡ್ಡ ನೀನು ಇಂಥಾ ದಡ್ಡನೇನು ಕಲ್ಲಂಗೇ ನೀನಿಂತೇ ಏಕಯ್ಯಾ
ಲಜ್ಜೇ ಬಿಟ್ಟು ಆಡಬೇಡವೇ ಹೆಣ್ಣು ಹೀಗೆ ನಡೆಯೋದು ಸರಿಯಲ್ಲ
ಗಂಡಸರ ಕಾಡಬೇಡವೇ ಗಂಡು ಬೀರಿ ಅಂತಾರೇ ಜನರೆಲ್ಲಾ
ಪಪ್ಪರೇ ಪಪ್ಪ ಪಪ್ಪ ಪರ ಪರ ಪಪರೆ ಪಪ
ದುರಗುಟ್ಟಿ ನೋಡಬೇಡಯ್ಯಾ ಹೆಣ್ಣ ಹೀಗೆ ನೋಡೋದು ಸರಿಯಲ್ಲ
ಮೂಗನಂಗೇ ನಿಲ್ಲ ಬೇಡಯ್ಯಾ ಮಾತನಾಡದೇ ಹೋಗೋದು ಸರಿಯಲ್ಲ
ಗಂಡು ಬೆಂಕಿಯಂತೆ ದೂರದಲ್ಲೇ ನಿಲ್ಲಬೇಕು
ಹೀಗೆ ಚಿಟ್ಟೆಯಂತೇ ಹಾರುವಾಟ ಮರೆಯಬೇಕು
ಹೆಣ್ಣ ಬಾಳಿನಲ್ಲಿ ನಯವಿನಯ ಕಲಿಯಬೇಕು
ಒಳ್ಳೆ ಗರತಿಯಾಗಿ ಹೊಕ್ಕ ಮನೆಯ ಬೆಳಗಬೇಕು
ಕಣ್ಣಾ ಮುಚ್ಚಿ ಆಟಬೇಡ ಸಾಕು ಕಾಟ ದಾರಿಲೇ ನಿಂತೇ ಯಾಕಮ್ಮ
ದುರಗುಟ್ಟಿ ನೋಡಬೇಡಮ್ಮಾ ಹೆಣ್ಣಾ ಹೀಗೆ ನೋಡೋದು ಸರಿಯಲ್ಲಾ.. ಪಪಪಪಪ ..
ಗಂಡಸರ ಕಾಡಬೇಡವೇ ಗಂಡುಬೀರಿ ಅಂತಾರೇ ಜನರೆಲ್ಲಾ
ಲಾ... ಲಾ... ಲಾ... ಲಾ... ಲಾ... ಲಾ... ಲಾ... ಲಾ... ಲಾ...
-----------------------------------------------------------------------------------------------------
ಕಾಳಿಂಗ (೧೯೮೦) - ತಾಯಿ ತಂದೆ ಇಬ್ಬರೂ ಕಣ್ಣಿಗೆ ಕಾಣುವ ದೇವರು
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, ವಾಣಿಜಯರಾಂ
ತಾಯಿ ತಂದೆ ಇಬ್ಬರೂ ಕಣ್ಣಿಗೇ ಕಾಣೋ ದೇವರು
ನಮ್ಮ ಬಾಳಿನ ಆಕಾಶದಲಿ ಅವರೇ ಸೂರ್ಯ ಚಂದ್ರರು ಅವರೇ ಸೂರ್ಯ ಚಂದ್ರರು
ತಾಯಿ ತಂದೆ ಇಬ್ಬರೂ ಕಣ್ಣಿಗೇ ಕಾಣೋ ದೇವರು
ತಾಯಿಯ ಮಡಿಲಲ್ಲಿ ನಾವೂ ನಲಿದೆವು ತಂದೆಯ ಪ್ರೇಮದಲ್ಲಿ ನಾವೂ ಬೆಳೆದೆವು
ತಾಯಿಯ ಮಡಿಲಲ್ಲಿ ನಾವೂ ನಲಿದೆವು ತಂದೆಯ ಪ್ರೇಮದಲಿ ನಾವೂ ಬೆಳೆದೆವು
ತಾಯಿ ತಂದೆಯರು ಮಾತಾನೇ ನಾವು ಕಲಿತೆವು.. ನಾವು ಕಲಿತೆವು
ತಾಯಿ ತಂದೆ ಇಬ್ಬರೂ ಕಣ್ಣಿಗೇ ಕಾಣೋ ದೇವರು
ಸೂರ್ಯನು ಜಾರಿದರೇ ಕತ್ತಲೆ ಬರುವಂತೆ ತಾಯಿಯ ಕಾಣದಿರೇ ಸುಖವು ಕನಸಂತೇ
ಸೂರ್ಯನು ಜಾರಿದರೇ ಕತ್ತಲೆ ಬರುವಂತೆ ತಾಯಿಯ ಕಾಣದಿರೇ ಸುಖವು ಕನಸಂತೇ
ತಾಯಿ ತಂದೆ ಜೊತೆಯಾಗೇ ನಗುತಿರೇ ಸ್ವರ್ಗ ಕಂಡಂತೇ... ಸ್ವರ್ಗ ಕಂಡಂತೇ
ತಾಯಿ ತಂದೆ ಇಬ್ಬರೂ ಕಣ್ಣಿಗೇ ಕಾಣೋ ದೇವರು
ತಾಯಿಯು ಇಲ್ಲದಿರೇ ಕಂಬನಿ ಬಾಳೆಲ್ಲಾ ತಂದೆಯು ಕಾಣದಿರೇ ನೋವೇ ಬದುಕೆಲ್ಲಾ
ತಾಯಿಯು ಇಲ್ಲದಿರೇ ಕಂಬನಿ ಬಾಳೆಲ್ಲಾ ತಂದೆಯು ಕಾಣದಿರೇ ನೋವೇ ಬದುಕೆಲ್ಲಾ
ತಾಯಿ ತಂದೆ ತಮ್ಮ ಮಕ್ಕಳ ಮರೆತರೇ ತಬ್ಬಲಿ ನಾವೆಲ್ಲಾ.. ತಬ್ಬಲಿ ನಾವೆಲ್ಲಾ
ನಮ್ಮ ಬಾಳಿನ ಆಕಾಶದಲಿ ಅವರೇ ಸೂರ್ಯ ಚಂದ್ರರು ಅವರೇ ಸೂರ್ಯ ಚಂದ್ರರು
ತಾಯಿ ತಂದೆ ಇಬ್ಬರೂ ಕಣ್ಣಿಗೇ ಕಾಣೋ ದೇವರು
-----------------------------------------------------------------------------------------------------
ಕಾಳಿಂಗ (೧೯೮೦) - ಭಯವನು ಬೀಡು ಚಿಂತೆಯ ಸುಡು
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕೀ, ಮಲೇಷಿಯಾ ಮಹಾದೇವನ್
ಭಯವನು ಬೀಡು ಚಿಂತೆಯಾ ಸುಡು ಮನಸನು ಕೊಡು ಕಣ್ಣಿಲಿಡು
ಹೆಣ್ಣೊಂದು ಬಂದಾಗ ಬಳಿಯಲ್ಲಿ ನಿಂತಾಗ ಅವಳಂದಾ ಕಂಡಾಗ ನೀ.. ನೀ.. ನೀ..
ಭಯವನು ಬೀಡು ಚಿಂತೆಯಾ ಸುಡು ಮನಸನು ಕೊಡು ಕಣ್ಣಿಲಿಡು
ಹೆಣ್ಣೊಂದು ಬಂದಾಗ ಬಳಿಯಲ್ಲಿ ನಿಂತಾಗ ಅವಳಂದಾ ಕಂಡಾಗ ನೀ.. ನೀ.. ನೀ..
ಭಯವನು ಬಿಡು ನಗಬೇಡ ಹೀಹಿ ಹಿಹೀ ಮೈಯೆಲ್ಲಾ ಸಿಹಿ ಸಿಹಿ ..
ಬಿಟ್ಟೋನ ಪಾಲಿಗೆ ಕಹೀ .. ಕಹೀ .. ಬಿಡಬೇಡ ಹಿಡಿ ಹಿಡಿ
ಮಧುವನು ಕುಡಿ ಕುಡಿ ಜೊತೆಯಲಿ ನಹೀ .. ಹೀಹಿ ಹಿಹೀ ಹ.. ಹ.. ಹ.. ಹ..ಹಾ
ಭಯ ಬಿಡುವೇನೂ ಜೊತೆಯಲಿರುವೆನು ಮನ ಕೊಡುವೇನೂ ಕಣ್ಣಿಡುವೇನೂ
ಹೆಣ್ಣೊಂದು ಬಂದಾಗ ಚಳಿಯಲ್ಲಿ ನಿಂತಾಗ ಅವಳಂದ ಕಂಡಾಗ.. ನಾ.. ನಾ... ನಾ.. ನಾ..
ಭಯವನು ಬಿಡುವೇನು.. ಹ..ಹ..ಹಾ
ಈ ಲೋಕ ನಾಟಕವೂ ನಾವೆಲ್ಲಾ ನಟರುಗಳು ಈ ವೇಷ ನಾಲ್ಕೈದೇ ಗಂಟೆಗಳೂ
ಈ ಲೋಕ ನಾಟಕವೂ ನಾವೆಲ್ಲಾ ನಟರುಗಳು ಈ ವೇಷ ನಾಲ್ಕೈದೇ ಗಂಟೆಗಳೂ
ಜೇಬಲ್ಲಿ ಹಣ ಸಂತೋಷ ದಿನ ಹೂವಂತೆ ಮನ
ಭಯವನು ಬಿಡು ಭಯ ಬಿಡುವೇನು
ಜೊತೆಯಲಿ ಇರು ಜೊತೆಯಿರುವೇನು
ಮನವನು ಕೊಡು ಮನ ಕೊಡುವೇನು ಕಣ್ಣಲ್ಲಿಡು ಎಲ್ಲಿ... ಆಆಆ..
-----------------------------------------------------------------------------------------------------
ಕಾಳಿಂಗ (೧೯೮೦) - ಚಟಪಟ ಹನಿಗಳು ಬಾನಿನಿಂದ ಜಾರುತಿವೆ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ
ಚಟಪಟ ಹನಿಗಳು ಬಾನಿಂದ ಜಾರುತಿವೆ
ಅವು ನೂರಾರು ಆಸೆಯ ಮನದಲ್ಲಿ ತಂದಿದೆ
ಗುಡುಗಿಗೂ ಮಿಂಚಿಗೂ ನಮ್ಮಂಥೆ ಪ್ರೀತಿ ಇದೆ
ಅವು ಒಲವಿಂದ ಬಾನಲಿ ಜೊತೆಯಲಿ ಓಡಿವೆ
ಚಟಪಟ ಹನಿಗಳು ಬಾನಿಂದ ಜಾರುತಿವೆ
ನೋಡು ತಂಗಾಳಿ ಹೇಗೆ ಆಡುತಿದೆ ನನ್ನ ಸೆರಗೆಳೆದು ಮೈಯ್ಯೆಲ್ಲಾ ಸೋಕುತಿದೆ
ನೋಡು ತಂಗಾಳಿ ಹೇಗೆ ಆಡುತಿದೆ ನನ್ನ ಸೆರಗೆಳೆದು ಮೈಯ್ಯೆಲ್ಲಾ ಸೋಕುತಿದೆ
ಆ ತೊಳಲಿ ಬಳಸುವೆ ಹತ್ತಿರ ಸೆಳೆಯುವೆ ಗಾಳಿ ತಡೆಯುವೆ ಏತಕೆ ಹೆದರುವೇ..
ಚಟಪಟ ಹನಿಗಳು ಬಾನಿಂದ ಜಾರುತಿವೆಅವು ನೂರಾರು ಆಸೆಯ ಮನದಲ್ಲಿ ತಂದಿದೆ
ಗುಡುಗಿಗೂ ಮಿಂಚಿಗೂ ನಮ್ಮಂಥ ಪ್ರೀತಿ ಇದೆ
ಅವು ಒಲವಿಂದ ಬಾನಲಿ ಜೊತೆಯಲಿ ಓಡಿವೆ
ಚಟಪಟ ಹನಿಗಳು ಬಾನಿಂದ ಜಾರುತಿವೆ
ಚಟಪಟ ಹನಿಗಳು ಬಾನಿಂದ ಜಾರುತಿವೆ
ಚಿನ್ನ ನಾವೆಂದು ಕಾಣೆ ಈ ಸೊಗಸು ನೋಡಿ ಬೆರಗಾಯ್ತು ಇಂದು ಈ ಮನಸ್ಸೂ
ಚಿನ್ನ ನಾವೆಂದು ಕಾಣೆ ಈ ಸೊಗಸು ನೋಡಿ ಬೆರಗಾಯ್ತು ಇಂದು ಈ ಮನಸ್ಸೂ
ಆತುರ ಏತಕೆ ಪಡದಿರು ನಾಚಿಕೆ ನನ್ನದು ಏನಿದೇ ಎಲ್ಲವು ನಿನ್ನದೇ
ಅವು ನೂರಾರು ಆಸೆಯ ಮನದಲ್ಲಿ ತಂದಿದೆ
ಗುಡುಗಿಗೂ ಮಿಂಚಿಗೂ ನಮ್ಮಂಥೆ ಪ್ರೀತಿ ಇದೆ
ಅವು ಒಲವಿಂದ ಬಾನಲಿ ಜೊತೆಯಲಿ ಓಡಿವೆ
ಚಟಪಟ ಹನಿಗಳು ಬಾನಿಂದ ಜಾರುತಿವೆ
-----------------------------------------------------------------------------------------------------
No comments:
Post a Comment