1093. ಕಾರ್ಮಿಕ ಕಳ್ಳನಲ್ಲ (೧೯೮೨)

ಕಾರ್ಮಿಕ ಕಳ್ಳನಲ್ಲ ಚಿತ್ರದ ಹಾಡುಗಳು 
  1. ಅಣ್ಣಾ ಅಣ್ಣಾ ಆ ದೇವ ಮೇಲಿಂದ ಬರಲಿ 
  2. ಅಬ್ಬಬ್ಬಾ ಹೋಗಬೇಡ ನನ್ನ ನೀ ಬಿಟ್ಟು 
  3. ನಿನಗಾಗೇ ಕಾದಿದ್ದೆ ಊರೆಲ್ಲಾ ಹುಡುಕಾಡಿದೇ 
  4. ಹೋಗೋರೆಲ್ಲಾ ಹೋಗಲಿ ದೂರ ದೂರ 
  5. ಎಂಥಾ ಭಾಗ್ಯ ತಂದಿರುವೇ 
ಕಾರ್ಮಿಕ ಕಳ್ಳನಲ್ಲ (೧೯೮೨) - ಅಣ್ಣಾ ಅಣ್ಣಾ ಆ ದೇವ ಮೇಲಿಂದ ಬರಲಿ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ರಮೇಶ 

ಮೋಹನ : ಲಾಲಲಾ... ಲಾಲಲಾ ಲಾಲಲಾ  ಲಾಲಲ  ಲಾಲ
ಸುಧಾ : ಅಣ್ಣಾ.. ಅಣ್ಣಾ.. ಆ ದೇವಾ ಮೇಲಿಂದ ಬರಲಿ ನನ ಕೇಳೊಂದು ವರ ನೀನು ಎನಲಿ
           ಏನನೂ ನಾನು ಬೇಡುವುದಿಲ್ಲ
           ಏನನೂ ನಾನು ಬೇಡುವುದಿಲ್ಲ ನನ್ನಾಸೆ ಪೂರೈಸಲೂ
           ಈ ದೇವರಂಥಾ ಅಣ್ಣಾ ಇಲ್ಲವೇ ಸ್ವಾಮಿ ದಯಮಾಡು ಎಂದು ಹೇಳುವೇ... ಅಣ್ಣಾ...

ಸುಧಾ : ಮಳೆಯಾದರೇನೂ ಉರಿ ಬಿಸಿಲಾದರೇನೂ ನೆರಳಾಗಿ ನೀನಿಲ್ಲವೇ
            ಆನಂದವನ್ನೂ ಈ ಬಾಳಲ್ಲಿ ನೀನು ನನಗಿಂದು ತರಲಿಲ್ಲವೇ.. ಅಣ್ಣಾ..
ಮೋಹನ: ಪ್ರೀತಿಯಾ ಹಿತ ಹಿತ ಸ್ನೇಹದ ಸುಖ ಸುಖ
               ಬದುಕಲಿ ತಂದೆ  ಹರುಷವ ಕಂಡೆ
               ಬಾಳೊಂದು ಹಾಡಾಗಿದೆ ಆಹಾ... ನೋಡೆಂಥ ಸೊಗಸಾಗಿದೇ..
               ನೋಡೆಂಥ ಸೊಗಸಾಗಿದೇ... ಅಣ್ಣಾ..

ಮೋಹನ : ಆಕಾಶದಿಂದ ಆ ರವಿ ದೂರವಾಗಿ ಇರಲಾರ ಎಂದೆಂದಿಗೂ
               ಕನಸಲ್ಲೂ ಕೂಡಾ ನಾ ನಿನ್ನನೂ ಆಗಲಿ ಇರಲಾರೇ ನನ್ನಾಣೆಗೂ
ಸುಧಾ : ತಾಯಿಯ ಸವಿ ನುಡಿ ತಂದೆಯ ನಡೆನುಡಿ ನಿನ್ನಲ್ಲಿ ಕಂಡೇ ಅಚ್ಚರಿಗೊಂಡೇ
            ಊರೆಲ್ಲಾ ಬೆರಗಾಗಿದೆ ಅಣ್ಣಾ... ಈ ನಮ್ಮ ಅನುಬಂಧಕೇ
ಮೋಹನ : ಈ ನಮ್ಮ ಸಂತೋಷಕೆ ..     ಸುಧಾ : ಅಣ್ಣಾ ..                   
ಮೋಹನ : ತಮ್ಮಾ....  ಆ ದೇವಾ ಮೇಲಿಂದ ಬರಲಿ ನನ ಕೇಳೊಂದು ವರ ನೀನು ಎನಲಿ
ಸುಧಾ :  ಏನನೂ ನಾನು ಬೇಡುವುದಿಲ್ಲ ನನ್ನಾಸೆ ಪೂರೈಸಲೂ ಈ ದೇವರಂಥಾ ಅಣ್ಣಾ ಇಲ್ಲವೇ
ಮೋಹನ : ಸ್ವಾಮಿ ದಯಮಾಡು ಎಂದು ಹೇಳುವೇ...
ಸುಧಾ : ಅಣ್ಣಾ...          ಮೋಹನ : ತಮ್ಮಾ ...
--------------------------------------------------------------------------------------------------------------------------

ಕಾರ್ಮಿಕ ಕಳ್ಳನಲ್ಲ (೧೯೮೨) - ಅಬ್ಬಬ್ಬಾ ಹೋಗಬೇಡ ನನ್ನ ನೀ ಬಿಟ್ಟು
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಪಿ.ಸುಶೀಲಾ

ಗಂಡು : ಅಬ್ಬಬ್ಬ ಅಬ್ಬಬ್ಬ ಹೋಗಬೇಡ ನನ್ನ ನೀ ಬಿಟ್ಟು ಅಯ್ಯೋ ನನ್ನ ನೀ ಬಿಟ್ಟೂ
            ತಾಳಲಾರೇ ಕಣ್ಣಿಂದ ನೀನು ಕೊಟ್ಟ ಆ ಪೆಟ್ಟೂ ಅಯ್ಯೋ ಕೊಟ್ಟ ಆ ಪೆಟ್ಟೂ..
 ಹೆಣ್ಣು : ಅಬ್ಬಬ್ಬ ಅಬ್ಬಬ್ಬ ಎಂಥ ಚೆನ್ನ ನಿನ್ನ ಮೈಕಟ್ಟೂ ಆಹ್ ನಿನ್ನ ಮೈಕಟ್ಟೂ
           ಪ್ರೀತಿಯಿಂದ ಒಮ್ಮೆ ಬಂದು ನನ್ನ ಮೈ ಮುಟ್ಟು ಬೇಗ ನನ್ನ ಮೈ ಮುಟ್ಟು

ಗಂಡು : ಈ ಮೊಗವೂ ಎಂಥ ಚೆನ್ನ ಈ ನಡುವೂ ಎಷ್ಟ ಸಣ್ಣ
           ಈ ಮೊಗವೂ ಎಂಥ ಚೆನ್ನ ಈ ನಡುವೂ ಎಷ್ಟ ಸಣ್ಣ
           ನಿಂಬೇ ಹಣ್ಣು ಮೈಯ್ ಬಣ್ಣ  ಮನೆಯಲ್ಲಿರಿಯೇ ಕಿವಿಯಲ್ಲಿ ಹೇಳೆ
           ಮನೆಯಲ್ಲಿರಿಯೇ ಕಿವಿಯಲ್ಲಿ ಹೇಳೆ ಅಪ್ಪ ಅಮ್ಮ ಇಲ್ಲದೇ ವೇಳೆ ಬರುವೆನು ನಾಳೇ
 ಹೆಣ್ಣು : ಅಬ್ಬಬ್ಬ ಅಬ್ಬಬ್ಬ ಎಂಥ ಚೆನ್ನ ನಿನ್ನ ಮೈಕಟ್ಟೂ ಆಹ್ ನಿನ್ನ ಮೈಕಟ್ಟೂ
           ಪ್ರೀತಿಯಿಂದ ಒಮ್ಮೆ ಬಂದು ನನ್ನ ಮೈ ಮುಟ್ಟು ಬೇಗ ನನ್ನ ಮೈ ಮುಟ್ಟು

ಹೆಣ್ಣು : ಮಾತೇನೋ ಸಿಹಿಯಾಗಿದೆ ಈ ಆಸೆ ನನಗೂ ಇದೇ
          ಮಾತೇನೋ ಸಿಹಿಯಾಗಿದೆ ಈ ಆಸೆ ನನಗೂ ಇದೇ
          ಮನೆಯೇಕೇ ನಮ್ಮಾಟಕೇ ತಡೆಯುವರನ್ನು ಕಾಣೆನು ನಾನು
          ತಡೆಯುವರನ್ನು ಕಾಣೆನು ನಾನು ನಾಳೆ ಮಾತು ಏಕೇ ಇಂದು ಬೇಡುವೇ ನಾನು
ಗಂಡು : ಅಬ್ಬಬ್ಬ ಅಬ್ಬಬ್ಬ ಹೋಗಬೇಡ ನನ್ನ ನೀ ಬಿಟ್ಟು ಅಯ್ಯೋ ನನ್ನ ನೀ ಬಿಟ್ಟೂ
            ತಾಳಲಾರೇ ಕಣ್ಣಿಂದ ನೀನು ಕೊಟ್ಟ ಆ ಪೆಟ್ಟೂ ಅಯ್ಯೋ ಕೊಟ್ಟ ಆ ಪೆಟ್ಟೂ..
 ಹೆಣ್ಣು : ಅಬ್ಬಬ್ಬ ಅಬ್ಬಬ್ಬ ಎಂಥ ಚೆನ್ನ ನಿನ್ನ ಮೈಕಟ್ಟೂ ಆಹ್ ನಿನ್ನ ಮೈಕಟ್ಟೂ
           ಪ್ರೀತಿಯಿಂದ ಒಮ್ಮೆ ಬಂದು ನನ್ನ ಮೈ ಮುಟ್ಟು ಬೇಗ ನನ್ನ ಮೈ ಮುಟ್ಟು
--------------------------------------------------------------------------------------------------------------------------

ಕಾರ್ಮಿಕ ಕಳ್ಳನಲ್ಲ (೧೯೮೨) - ನಿನಗಾಗೇ ಕಾದಿದ್ದೆ ಊರೆಲ್ಲಾ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಶೈಲಜಾ

ಹೆಣ್ಣು : ನಿನಗಾಗೇ...  ಕಾದಿದ್ದೆ..  ನಿನಗಾಗೇ ಕಾದಿದ್ದೆ ಊರೆಲ್ಲಾ ಹುಡುಕಾಡಿದೆ
          ನೆನಪಲಿ ನಾನೊಂದೇ ವಿರಹದಿ ನಾ ಬೆಂದೆ
          ನೆನಪಲಿ ನಾನೊಂದೇ ವಿರಹದಿ ನಾ ಬೆಂದೆ  ಅಂತೂ ನಿನ್ನ ನಾ ಕಂಡೇ
ಗಂಡು : ಅರೇ ನಿನಗಾಗೇ... ಹೊಯ್  ಕಾದಿದ್ದೆ
           ನಿನಗಾಗೇ... ಕಾದಿದ್ದೆ  ನಾ ಹೇಳೋ ನುಡಿಯೊಂದಿದೆ
           ನೆನಪಿನ ಮಾತೇಕೆ ವಿರಹದ ನೋವೇಕೆ
           ನೆನಪಿನ ಮಾತೇಕೆ ವಿರಹದ ನೋವೇಕೆ ನಾನು ಎಂದೂ ನಿನ್ನಲ್ಲೇ... ಹೊಯ್

ಹೆಣ್ಣು : ಇನ್ನೊಮ್ಮೆ ಹೀಗೆ ನೀ ನನ್ನಿಂದ ದೂರ ಹೋದಾಗ ಈ ಜೀವ ನಿಲ್ಲದೂ
          ಇನ್ನೊಮ್ಮೆ ಹೀಗೆ ನೀ ನನ್ನಿಂದ ದೂರ ಹೋದಾಗ ಈ ಜೀವ ನಿಲ್ಲದೂ
          ನನ್ನಾಣೆ ಇನ್ನೂ ಬಿಡಲಾರೆ ನಿನ್ನ
          ನನ್ನಾಣೆ ಇನ್ನೂ ಬಿಡಲಾರೆ ನಿನ್ನ ಚಿನ್ನ ನೀನೇ ನನ್ನ ಪ್ರಾಣ
ಗಂಡು : ಅರೇರೆರೇ ನಿನಗಾಗೇ... ಕಾದಿದ್ದೆ  ನಾ ಹೇಳೋ ನುಡಿಯೊಂದಿದೆ
           ನೆನಪಿನ ಮಾತೇಕೆ ವಿರಹದ ನೋವೇಕೆ
           ನೆನಪಿನ ಮಾತೇಕೆ ವಿರಹದ ನೋವೇಕೆ ನಾನು ಎಂದೂ ನಿನ್ನಲ್ಲೇ... ಆಹಾಹಾಹಾ...

ಗಂಡು : ಒಂದಾದ ವೇಳೆ ಈ ನೋವೇನು ಹೇಳೇ ಬಂಗಾರಿ ನೀ ನನ್ನ ಉಸಿರೂ 
           ಒಂದಾದ ವೇಳೆ ಈ ನೋವೇನು ಹೇಳೇ ಬಂಗಾರಿ ನೀ ನನ್ನ ಉಸಿರೂ
           ಬಾಳೆಲ್ಲ ಇನ್ನೂ ಸಂತೋಷವನ್ನೇ
           ಬಾಳೆಲ್ಲ ಇನ್ನೂ ಸಂತೋಷವನ್ನೇ ತರುವೆ ಚಿನ್ನ ನಂಬು ನನ್ನ 
ಹೆಣ್ಣು : ಹೊಯ್ ನಿನಗಾಗೇ ಕಾದಿದ್ದೆ ಊರೆಲ್ಲಾ ಹುಡುಕಾಡಿದೆ
          ನೆನಪಲಿ ನಾನೊಂದೇ (ರರರ) ವಿರಹದಿ ನಾ ಬೆಂದೆ (ಅರೆರೆರೆರೇ)
          ನೆನಪಲಿ ನಾನೊಂದೇ (ರರರ) ವಿರಹದಿ ನಾ ಬೆಂದೆ (ಅರೆರೆರೆರೇ)  ಅಂತೂ ನಿನ್ನ ನಾ ಕಂಡೇ
ಗಂಡು : ಅರೇರೆರೇ ನಿನಗಾಗೇ... ಕಾದಿದ್ದೆ  ನಾ ಹೇಳೋ ನುಡಿಯೊಂದಿದೆ
           ನೆನಪಿನ ಮಾತೇಕೆ ವಿರಹದ ನೋವೇಕೆ
           ನೆನಪಿನ ಮಾತೇಕೆ ವಿರಹದ ನೋವೇಕೆ ನಾನು ಎಂದೂ ನಿನ್ನಲ್ಲೇ... ಆಹಾಹಾಹಾ...
--------------------------------------------------------------------------------------------------------------------------

ಕಾರ್ಮಿಕ ಕಳ್ಳನಲ್ಲ (೧೯೮೨) - ಹೋಗೋರೆಲ್ಲಾ ಹೋಗಲಿ ದೂರ ದೂರ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ

ಹೋಗೋರೆಲ್ಲ ಹೋಗಲಿ ದೂರ ದೂರ ಯಾರನು ನಾನು ಕೂಗುವುದಿಲ್ಲ ಹತ್ತಿರ... ಹ್ಹಾ..
ಹೋಗೋರೆಲ್ಲ ಹೋಗಲಿ ದೂರ ದೂರ ಯಾರನು ನಾನು ಕೂಗುವುದಿಲ್ಲ ಹತ್ತಿರ
ಯಾರನು ನಂಬಿ ನಾ ಹುಟ್ಟಿಲ್ಲ ಯಾರಿಗೂ ನಾನು ಹೆದರೋದಿಲ್ಲ ಹೋಗೋ .........
ಹೋಗೋ ಹೋಗೋ ಹೋಗೋ ಹೋಗೋ ಹೋಗೋ
ಹೋಗೋರೆಲ್ಲ ಹೋಗಲಿ ದೂರ ದೂರಾ....ಆ ಆಹ್ಹಹಾ

ಪ್ರೀತಿ ಪ್ರೇಮ ಅನ್ನೋದೆಲ್ಲ ಮಾತಲ್ಲಿ (ಲಾ ಲಾ ಲಾ ಲಾ )
ನ್ಯಾಯ ನೀತಿ ಅನ್ನೋ ಪದವು ಕಥೆಯಲ್ಲಿ ಹೇ.ಹ್ಹಹ್ಹಹ್ಹಾ (ತುತ್ತುತ್ತಾರೋ ತುತ್ತುತ್ತಾರೋ ತುತ್ತುತ್ತಾರೋ ತುರೋ )
ಆ... ಪ್ರೀತಿ ಪ್ರೇಮ ಅನ್ನೋದೆಲ್ಲ ಮಾತಲ್ಲಿ ಹಾ  ನ್ಯಾಯ ನೀತಿ ಅನ್ನೋ ಪದವು ಕಥೆಯಲ್ಲಿ
ಕಾಲವು ಮುನಿದಾಗಲೇ ನೆರಳು ಹಾವಂತೆ ಸ್ನೇಹವು ಹರಿದಂತೆಯೇ ಇನ್ನು ಕೈ ಬಿಡು ಚಿಂತೆ
ಐ ಡೋಂಟ್ ಕೇರ್ ಕೇರ್ ಕೇರ್ ಕೇರ್ ಕೇರ್
ಹೋಗೋರೆಲ್ಲ ಹೋಗಲಿ ದೂರ ದೂರಾ...
ರೀಬ ರಿಬಬ  ರಿಬಾಬ ಪಾ.... ರೀಬ ರೀಬ ಪಬ ಪಬಪ ರೀಬ ಶಬರಿಬಾಪಾ... ರೀಬ ರಬ ರಬ ರಬಪಾ

ತಕಧಿನ್..  ತಕಧಿನ್..  (ವ್ವವ್ವವ್ವಾ ವ್ವವ್ವವ್ವಾ ವ್ವವ್ವವ್ವಾ ವ್ವವ್ವಾ ವ್ವವ್ವಾ ವ್ವವ್ವಾ )
ಮಮತೆ ಎಂಬ ಮಾತಿಗಿಂದು ಬೆಲೆ ಇಲ್ಲ (ಲಾ ಲಾ ಲಾ ಲಾ )
ಆಸೆಯಿಂದ ಎಂದು ನಿನಗೆ ಸುಖವಿಲ್ಲಾ ಇಲ್ಲಾ (ತುತ್ತುತ್ತಾರೋ ತುತ್ತುತ್ತಾರೋ ತುತ್ತುತ್ತಾರೋ ತುರೋ )
ಓ... ಮಮತೆ ಎಂಬ ಮಾತಿಗಿಂದು ಬೆಲೆ ಇಲ್ಲ...  ಇಲ್ಲಾ  ಆಸೆಯಿಂದ ಎಂದು ನಿನಗೆ ಸುಖವಿಲ್ಲಾ
ಅಣ್ಣನೋ ಇಲ್ಲಾ ತಮ್ಮನೋ ಯಾರಿಗೂ ಯಾರಿಲ್ಲ
ಬಾಳಿನ ಈ ಸತ್ಯವ ಕಲಿಯದೆ ವಿಧಿಯಿಲ್ಲ ಐ ಡೋಂಟ್ ಕೇರ್ ಕೇರ್ ಕೇರ್ ಕೇರ್ ಕೇರ್
ಹೋಗೋರೆಲ್ಲ ಹೋಗಲಿ ದೂರ ದೂರ ಯಾರನು ನಾನು ಕೂಗುವುದಿಲ್ಲ ಹತ್ತಿರ ಹಾ ಹಾ
ಯಾರನು ನಂಬಿ ನಾ ಹುಟ್ಟಿಲ್ಲ ಯಾರಿಗೂ ನಾನು ಹೆದರೋದಿಲ್ಲ ಹೋಗೋ .........
ಹೋಗೋ ಹೋಗೋ ಹೋಗೋ ಹೋಗೋ
--------------------------------------------------------------------------------------------------------------------------

ಕಾರ್ಮಿಕ ಕಳ್ಳನಲ್ಲ (೧೯೮೨) - ಎಂಥಾ ಭಾಗ್ಯ ತಂದಿರುವೇ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ ಗಾಯನ : ಮಹೇಶ್ವರ, ವಾಣಿಜಯರಾಂ

ಹೆಣ್ಣು : ಆಆಆ... ಆಆಆ... ಲಲ್ಲಲಲ  ಲಲ್ಲಲಲ ಆಆಆ...
         ಎಂಥ ಭಾಗ್ಯ ತಂದಿರುವೇ ಆನಂದ ತಂದು ತುಂಬಿರುವೇ
         ಬಾಳಲ್ಲಿ ಬೆಳಕನ್ನೂ ಮೂಡಿದೆ ಬಳಿ ನೀನಿರಲೂ ನಗುತಲಿ ದಿನವೂ
         ಹೂವಾಗುತಾ ಅರಳಿರೇ ಮನವೂ ಇನ್ನೇಕೇ ಸ್ವರ್ಗವೂ...  ಇನ್ನೇಕೇ ಸ್ವರ್ಗವೂ...
         ಆಆಆ... ಆಆಆ... ಆಆಆ... ಆಆಆ...

ಗಂಡು : ಆಆಆ... ಆಆಆ...       ಹೆಣ್ಣು : ಆಆಆ... ಆಆಆ...
ಗಂಡು : ಹಣ್ಣಾಗಿ ಹೊನ್ನಾಗಿ ಬದುಕಲ್ಲಿ ನನಗೇ ಕಣ್ಣಾಗಿ ನೀ ಒಲಿದು ಬಂದೇ
ಹೆಣ್ಣು : ನಿನ್ನಾಸೆಯೆಲ್ಲಾ ಒಂದಾದ ಹಾಗೇ ನಾ ಕಂಡ ಕನಸೂ ನಿಜವಾದ ಹಾಗೇ
          ಒಲಿದೇ... ನೀವೂ ....  ಒಲಿದೇ... ನೀವೂ ....ಆಆಆ... ಆಆಆ..
         ಎಂಥ ಭಾಗ್ಯ ತಂದಿರುವೇ ಆನಂದ ತಂದು ತುಂಬಿರುವೇ
         ಬಾಳಲ್ಲಿ ಬೆಳಕನ್ನೂ ಮೂಡಿದೆ ಬಳಿ ನೀನಿರಲೂ ನಗುತಲಿ ದಿನವೂ
         ಹೂವಾಗುತಾ ಅರಳಿರೇ ಮನವೂ ಇನ್ನೇಕೇ ಸ್ವರ್ಗವೂ...  ಇನ್ನೇಕೇ ಸ್ವರ್ಗವೂ...
         ಆಆಆ... ಆಆಆ... ಆಆಆ... ಆಆಆ...

ಗಂಡು : ಆಆಆ... ಆಆಆ...       ಹೆಣ್ಣು : ಆಆಆ... ಆಆಆ...
ಗಂಡು : ಆಆಆ...         ..       ಹೆಣ್ಣು : ಆಆಆ...  ಗಂಡು : ಆಆಆ...
ಹೆಣ್ಣು : ಹಾಲಂತೆ ಹೂವಂತೇ ಸುಧೆಯಂತೇ ಇರುವಾ ಮನಸ್ಸನ್ನೂ ನಿನ್ನಲ್ಲೀ ಕಂಡೇ 
ಗಂಡು : ಬೆಳದಿಂಗಳೊಂದು ಹೆಣ್ಣಾದ  ಹಾಗೇ ಸಂಗೀತ ಅವಳ ನುಡಿಯಾದ ಹಾಗೇ 
            ಕಂಡೇ ... ನಿನ್ನ ...  ಕಂಡೇ ... ನಿನ್ನ ... ಆಆಆಅ... ಆಆಆಅ.. 
ಹೆಣ್ಣು : ಎಂಥ ಭಾಗ್ಯ ತಂದಿರುವೇ            ಗಂಡು : ಆನಂದ ತಂದು ತುಂಬಿರುವೇ
ಹೆಣ್ಣು :  ಬಾಳಲ್ಲಿ ಬೆಳಕನ್ನೂ ಮೂಡಿದೆ       ಗಂಡು : ಬಳಿ ನೀನಿರಲೂ ನಗುತಲಿ ದಿನವೂ
ಹೆಣ್ಣು : ಹೂವಾಗುತಾ ಅರಳಿರೇ ಮನವೂ  ಗಂಡು : ಇನ್ನೇಕೇ ಸ್ವರ್ಗವೂ...
ಇಬ್ಬರು: ಇನ್ನೇಕೇ ಸ್ವರ್ಗವೂ...    ಆಆಆ... ಆಆಆ... ಆಆಆ... ಆಆಆ...
--------------------------------------------------------------------------------------------------------------------------

No comments:

Post a Comment