ಕಲಿಯುಗ ಚಲನಚಿತ್ರದ ಹಾಡುಗಳು
- ಮಂಗಳ ಪ್ರೇಮ ಸ್ವರೂಪ ಕಟ್ಟಲು ತುಂಬಿದೆ ಬೆಳಗುದೀಪ
- ಎಂದೆಂದೂ ಹೀಗೆ ನಗಬೇಕು ನನ್ನ ಬಾಳಲ್ಲಿ ಆನಂದ ತರಬೇಕು
- ಕೇಳೋರು ಯಾರು ಇಲ್ಲ ಹೇಳೋರು ಇಲ್ವೇ ಇಲ್ಲ
- ನಂಬಿ ಯಾರನು ಬಂದೆ ಭುವಿಗೆ ಯೋಚನೆ ಏಕಣ್ಣ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಶಂಕರಾ ಉಮಾಮಹೇಶ್ವರ ಮಮತೆಯ ಬೀರೋ
ಹೆಣ್ಣು : ಕರುಣೆಯ ತೋರೋ ಮೃಗ ಚರ್ಮಾಂಬರಧರ ಶಂಕರಾ..
ಇಬ್ಬರು : ಮಂಗಳ ಪ್ರೇಮ ಸ್ವರೂಪ ಕತ್ತಲು ತುಂಬಿದೆ ಬೆಳಗು ದೀಪ.. ಬೆಳಗು ದೀಪ
ಮುಳ್ಳನು ತುಳಿದೆ ಕಲ್ಲಲ್ಲಿ ನಡೆದೇ ಕಾಡನು ದಾಟಿ ಓಡುತ ಬಂದೇ
ಹೆಣ್ಣು : ನೋವಲಿ ನಿನ್ನ ಕೂಗುತ ನನ್ನಾ ವೇದನೆ ನಿಮಿಷದೇ ಮರೆತೆ
ಗಂಡು : ಪ್ರೇಮದಿ ಕರೆವ ಭಕುತರ ಕೂಗು ಸ್ವಾಮಿಯ ಇನ್ನೂ ಕೇಳಿದೇ
ಇಬ್ಬರು : ಮಂಗಳ ಪ್ರೇಮ ಸ್ವರೂಪ ಕತ್ತಲು ತುಂಬಿದೆ ಬೆಳಗು ದೀಪ.. ಬೆಳಗು ದೀಪ
ಮುಳ್ಳನು ತುಳಿದೆ ಕಲ್ಲಲ್ಲಿ ನಡೆದೇ ಕಾಡನು ದಾಟಿ ಓಡುತ ಬಂದೇ
ಗಂಡು : ಜೀವ ನಿಲ್ಲದೆ ಮೌನವಿದೇನು ಎಲ್ಲಿಹೆ ನೀನು ಓ ತಂದೆ ಮಹದೇಶ್ವರ
ಹೆಣ್ಣು : ಕೋಪವಿದೇನು ನನ್ನಲ್ಲಿ ಹೀಗೆ ಕರುಣಾಳು ಓ ಶಂಕರಾ ಜಯ ಮಾದೇಶ್ವರ ಜಯ ಜಯ ಶುಭಕರ
ಭುವಿಯ ನಡುಗಿದರೇ ಆಗಸ ಗುಡುಗಿದರೇ ನಾನು ಹೆದರುವೇನೇನೂ
ಪೂಜೆಯ ಸ್ವೀಕರಿಸಯ್ಯ ದರುಶನವ ನೀಡಯ್ಯಾ..
ಇಬ್ಬರು : ಮಂಗಳ ಪ್ರೇಮ ಸ್ವರೂಪ ಕತ್ತಲು ತುಂಬಿದೆ ಬೆಳಗು ದೀಪ.. ಬೆಳಗು ದೀಪ
ಮುಳ್ಳನು ತುಳಿದೆ ಕಲ್ಲಲ್ಲಿ ನಡೆದೇ ಕಾಡನು ದಾಟಿ ಓಡುತ ಬಂದೇ
ಮುಳ್ಳನು ತುಳಿದೆ ಕಲ್ಲಲ್ಲಿ ನಡೆದೇ ಕಾಡನು ದಾಟಿ ಓಡುತ ಬಂದೇ
ಗಂಡು : ಶಂಕರಾ ಉಮಾಮಹೇಶ್ವರ ಮಮತೆಯ ಬೀರೋ
ಹೆಣ್ಣು : ಕರುಣೆಯ ತೋರೋ ಮೃಗ ಚರ್ಮಾಂಬರಧರ ಶಂಕರಾ..
ಹೆಣ್ಣು : ಕರುಣೆಯ ತೋರೋ ಮೃಗ ಚರ್ಮಾಂಬರಧರ ಶಂಕರಾ..
-------------------------------------------------------------------------------------------------------------------------
ಕಲಿಯುಗ (೧೯೮೪) - ಎಂದೆಂದೂ ಹೀಗೆ ನಗಬೇಕು ನನ್ನ ಬಾಳಲ್ಲಿ ಆನಂದ ತರಬೇಕು
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ
ಗಂಡು : ಎಂದೆಂದೂ ಹೀಗೆ ನಗಬೇಕು ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ ನೀ ಹೀಗೆ ಇರಬೇಕು ಸ್ವರ್ಗ ನಾಚುತ್ತ ಕಾಲಡಿ ಬರಬೇಕು
ಹೆಣ್ಣು : ಎಂದೆಂದೂ ಹೀಗೆ ನಗಬೇಕು ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ ನೀ ಹೀಗೆ ಇರಬೇಕು ಸ್ವರ್ಗ ನಾಚುತ್ತ ಕಾಲಡಿ ಬರಬೇಕು
ಗಂಡು : ಸಾವಿರ ಜನ್ಮ ಬರಲೇನು ನೀನು ಇರುವಾಗ ನನಗೆ ಭಯವೇನೂ
ಹೆಣ್ಣು : ನಿನ್ನ ತೋಳಿನಲ್ಲಿ ನಾ ಸೆರೆಯಾದಾಗ ಸಾವು ಕೂಡ ನನಗೆ ಹಿತಾವೇನೇ
ಗಂಡು : ಜೀವನ ನನಗೆ ಸಿಹಿಯಾಯ್ತು ಕಹಿ ನೀ ಬಂದು ಬಾಳಿಂದು ದೂರಾಯ್ತು
ಹೆಣ್ಣು : ಎಂದೆಂದೂ ಹೀಗೆ ನಗಬೇಕು ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ ನೀ ಹೀಗೆ ಇರಬೇಕು ಸ್ವರ್ಗ ನಾಚುತ್ತ ಕಾಲಡಿ ಬರಬೇಕು
ಹೆಣ್ಣು : ಚಂದಿರ ರಾತ್ರಿ ಬಂದಂತೆ ಬೆಳದಿಂಗಳ ಚೆಲ್ಲಿ ನಗುವಂತೆ
ಗಂಡು : ನನ್ನ ಬಾಳಿನ ಬಾನಲ್ಲಿ ನೀ ಬಂದೆ ಶಾಂತಿ ನೆಮ್ಮದಿ ನೀ ತಂದೆ
ಹೆಣ್ಣು : ಭಾಗ್ಯದ ಬಾಗಿಲು ತೆರೆದಾಯ್ತು ನನ್ನ ಬದುಕೆಲ್ಲ ನಿನ್ನಿಂದ ಬೆಳಕಾಯ್ತು
ಗಂಡು : ಎಂದೆಂದೂ ಹೀಗೆ ನಗಬೇಕು ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ ನೀ ಹೀಗೆ ಇರಬೇಕು ಸ್ವರ್ಗ ನಾಚುತ್ತ ಕಾಲಡಿ ಬರಬೇಕು
ಹೆಣ್ಣು : ಎಂದೆಂದೂ ಹೀಗೆ ನಗಬೇಕು ನನ್ನ ಬಾಳಲ್ಲಿ ಆನಂದ ತರಬೇಕು
ಎಂದೂ ಜೊತೆಯಾಗಿ ನೀ ಹೀಗೆ ಇರಬೇಕು ಸ್ವರ್ಗ ನಾಚುತ್ತ ಕಾಲಡಿ ಬರಬೇಕು
-------------------------------------------------------------------------------------------------------------------------
ಕಲಿಯುಗ (೧೯೮೪) - ಕೇಳೋರು ಯಾರು ಇಲ್ಲ ಹೇಳೋರು ಇಲ್ವೇ ಇಲ್ಲ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ:ಚಿ.ಉದಯಶಂಕರ,ಗಾಯನ: ಎಸ್.ಪಿ.ಶೈಲಜಾ, ರಾಜಕುಮಾರಭಾರತಿ, ಕೋರಸ್
ಕೋರಸ್ : ಹೇ.. ಲಾಲಾಲಾಲಾ
ಗಂಡು : ಕೇಳೋರು ಯಾರು ಇಲ್ಲ ಹೇಳೋರೂ ಇಲ್ವೇ ಇಲ್ಲ
ಎಲ್ಲರು : ಕೇಳೋರು ಯಾರು ಇಲ್ಲ ಹೇಳೋರೂ ಇಲ್ವೇ ಇಲ್ಲ
ಹೆಣ್ಣು : ಜೀವನದ ಪ್ರತಿ ನಿಮಿಷ ಅನುಭವಿಸು ಹೊಸ ಹರುಷ ತಾಳಿ ಬಾಳಿ ಉಲಿಯುವ
ಎಲ್ಲರು : ಕೇಳೋರು ಯಾರು ಇಲ್ಲ ಹೇಳೋರೂ ಇಲ್ವೇ ಇಲ್ಲ
ಕೇಳೋರು ಯಾರು ಇಲ್ಲ ಹೇಳೋರೂ ಇಲ್ವೇ ಇಲ್ಲ
ಎಲ್ಲರು : ಕೇಳೋರು ಯಾರು ಇಲ್ಲ ಹೇಳೋರೂ ಇಲ್ವೇ ಇಲ್ಲ
ಹೆಣ್ಣು : ಜೀವನದ ಪ್ರತಿ ನಿಮಿಷ ಅನುಭವಿಸು ಹೊಸ ಹರುಷ ತಾಳಿ ಬಾಳಿ ಉಲಿಯುವ
ಎಲ್ಲರು : ಕೇಳೋರು ಯಾರು ಇಲ್ಲ ಹೇಳೋರೂ ಇಲ್ವೇ ಇಲ್ಲ
ಹೆಣ್ಣು : ಜೋಡಿ ಯಾರೋ ಕರೆ ಮೋಜು ಮಾಡಿ ಕರೆ ಬೇಗ
ಗಂಡು : ಹೀರಿ ಮಧುವ ಕುಡಿ ಸೇರಿ ಸುಖವ ಪಡಿ ಈಗ
ಹೆಣ್ಣು : ಎಲ್ಲ ಬಂಧ ತೊರೆ ಸೇರಿ ಎಲ್ಲ ಮರೆ ಈಗ
ಗಂಡು : ಮೋಜಿನ ಬಾಳಿನಲಿ ಕರುಳಿದು ಕುರುಡು
ಮೋಜಿನ ಬಾಳಿನಲಿ ಕರುಳಿದು ಕುರುಡು
ಆಸರೆ ಇಲ್ಲ ಆದರವಿಲ್ಲ ಪ್ರೀತಿಗೆ ನೋವೇ ಫಲವೆಲ್ಲ
ಎಲ್ಲರು : ಕೇಳೋರು ಯಾರು ಇಲ್ಲ ಹೇಳೋರೂ ಇಲ್ವೇ ಇಲ್ಲ
ಹೆಣ್ಣು : ಜೀವನದ ಪ್ರತಿ ನಿಮಿಷ ಅನುಭವಿಸು ಹೊಸ ಹರುಷ ತಾಳಿ ಬಾಳಿ ಉಲಿಯುವ
ಕೋರಸ್ : ತಗತಗದಿತ್ತ ತಗತಗದಿತ್ತ... ತಗತಗದಿತ್ತ ತಗತಗದಿತ್ತ...
ಹೆಣ್ಣು : ಜೀವನದ ಪ್ರತಿ ನಿಮಿಷ ಅನುಭವಿಸು ಹೊಸ ಹರುಷ ತಾಳಿ ಬಾಳಿ ಉಲಿಯುವ
ಕೋರಸ್ : ತಗತಗದಿತ್ತ ತಗತಗದಿತ್ತ... ತಗತಗದಿತ್ತ ತಗತಗದಿತ್ತ...
ಹೆಣ್ಣು : ತಾಳ ಹಾಕಿ ನಲಿ ಪ್ರೀತಿ ಪಾಠ ಕಲಿ ಬಾರಾ
ಗಂಡು : ಹೆಜ್ಜೆ ಹಾಕಿ ಕುಣಿ ಕಾಲ ಮರೆಸು ದನಿ ಈಗ
ಹೆಣ್ಣು : ತೇಲಿ ಎಲ್ಲ ಕೊಡು ನಾಳೆ ಚಿಂತೆ ಬಿಡು ಈಗ
ಗಂಡು : ಜೀವನ ಪ್ರತಿ ನಿಮಿಷ ಹೊಸತನವಿಲ್ಲ
ಜೀವನ ಪ್ರತಿ ನಿಮಿಷ ಹೊಸತನವಿಲ್ಲ
ಒಳ್ಳೆಯ ತನಕೆ ಪ್ರತಿಫಲವಿದೆಯೇ ನಂಬಿದ ದೈವಕೆ ಕಣ್ಣಿಲ್ಲ
ಎಲ್ಲರು : ಕೇಳೋರು ಯಾರು ಇಲ್ಲ ಹೇಳೋರೂ ಇಲ್ವೇ ಇಲ್ಲಕೇಳೋರು ಯಾರು ಇಲ್ಲ ಹೇಳೋರೂ ಇಲ್ವೇ ಇಲ್ಲ
ಈ ಕಳ್ಳಾಟ ಪ್ರತಿ ನಿಮಿಷ ಅನುಭವಿಸಿ ಹೊಸ ಹರುಷ ತಾಳಿ ಬಾಳಿ ಉಲಿಯುವ
ಕೇಳೋರು ಯಾರು ಇಲ್ಲ ಹೇಳೋರೂ ಇಲ್ವೇ ಇಲ್ಲ
ಕೇಳೋರು ಯಾರು ಇಲ್ಲ ಹೇಳೋರೂ ಇಲ್ವೇ ಇಲ್ಲ
ಲಾಲಾಲಾಲಾಲಾ ಜೂಜೂಜೂ... ಲಾಲಾಲಾಲಾಲಾ ಜೂಜೂಜೂ...
ಲಾಲಾಲಾಲಾಲಾ ಜೂಜೂಜೂ... ಲಾಲಾಲಾಲಾಲಾ ಜೂಜೂಜೂ...
-------------------------------------------------------------------------------------------------------------------------
ಕಲಿಯುಗ (೧೯೮೪) - ನಂಬಿ ಯಾರನು ಬಂದೆ ಭುವಿಗೆ ಯೋಚನೆ ಏಕಣ್ಣ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ,
ನಂಬಿ ಯಾರನು ಬಂದೆ ಭೂಮಿಗೆ ಯೋಚನೆ ಏಕಣ್ಣ
ನಮ್ಮ ಕಾಲಲೇ ನಾವು ನಿಲ್ಲುತ ತೋರಿಸಬೇಕಣ್ಣ
ಬಾಳಿ ತೋರಿಸುವ ನಾವು ಛಲದಿಂದ ನಿಲ್ಲಿರಿ ನೀವೂ
ದುಡಿದು ಜೊತೆ ನಡೆದು ಹೊಸ ನಂಬಿಕೆ ಪಡೆಯೋಣ...
ಹೊಸ ದಾರಿಯ ಹಿಡಿಯೋಣ...
ನಂಬಿ ಯಾರನು ಬಂದೆ ಭೂಮಿಗೆ ಯೋಚನೆ ಏಕಣ್ಣ
ನಮ್ಮ ಕಾಲಲೇ ನಾವು ನಿಲ್ಲುತ ತೋರಿಸಬೇಕಣ್ಣ
ಬಾಳಿ ತೋರಿಸುವ ನಾವು ಛಲದಿಂದ ನಿಲ್ಲಿರಿ ನೀವೂ
ನಮ್ಮ ಕಾಲಲೇ ನಾವು ನಿಲ್ಲುತ ತೋರಿಸಬೇಕಣ್ಣ
ಬಾಳಿ ತೋರಿಸುವ ನಾವು ಛಲದಿಂದ ನಿಲ್ಲಿರಿ ನೀವೂ
ದುಡಿದು ಜೊತೆ ನಡೆದು ಹೊಸ ನಂಬಿಕೆ ಪಡೆಯೋಣ...
ಹೊಸ ದಾರಿಯ ಹಿಡಿಯೋಣ...
ನಾಳೆಯು ನಮದೆಂಬಾ ನಿಶ್ಚಯ ನಮಗಿರಲು
ಬಾಳಿನಲಿ ಯಾರಾ ಹಂಗೂ ಬೇಕಿಲ್ಲ
ಜೇಬಿನಲಿ ಝಣ ಝಣಿಸೋ ಹಣ ಕಾಸು ತುಂಬಿರಲು
ಸ್ವಾಗತಿಸಿ ಓಡಿ ಬಾರೋ ಆಗೆಲ್ಲ
ಗಳಿಸರು ಗುಣವನು ನಮಿಪರು ಹಣವನ್ನೂ
ಗಳಿಸರು ಗುಣವನು ನಮಿಪರು ಹಣವನ್ನೂ
ಗಳಿಸರು ಗುಣವನು ನಮಿಪರು ಹಣವನ್ನೂ
ನಿಜವಿದ ಅರಿಯಿರಿ ದುಡಿಯಲು ಬೆರೆಯಿರಿ
ನಿಜವಿದ ಅರಿಯಿರಿ ದುಡಿಯಲು ಬೆರೆಯಿರಿ
ಪಡೆಯಿರಿ ನೆಮ್ಮದಿಯ.. ಪಡೆಯಿರಿ ನೆಮ್ಮದಿಯ... ಪಡೆಯಿರಿ ನೆಮ್ಮದಿಯ
ನಂಬಿ ಯಾರನು ಬಂದೆ ಭೂಮಿಗೆ ಯೋಚನೆ ಏಕಣ್ಣ
ನಮ್ಮ ಕಾಲಲೇ ನಾವು ನಿಲ್ಲುತ ತೋರಿಸಬೇಕಣ್ಣ
ನಂಬಿ ಯಾರನು ಬಂದೆ ಭೂಮಿಗೆ ಯೋಚನೆ ಏಕಣ್ಣ
ನಮ್ಮ ಕಾಲಲೇ ನಾವು ನಿಲ್ಲುತ ತೋರಿಸಬೇಕಣ್ಣ
ಬಾಳಿ ತೋರಿಸುವ ನಾವು ಛಲದಿಂದ ನಿಲ್ಲಿರಿ ನೀವೂ
ದುಡಿದು ಜೊತೆ ನಡೆದು ಹೊಸ ನಂಬಿಕೆ ಪಡೆಯೋಣ...
ಹೊಸ ದಾರಿಯ ಹಿಡಿಯೋಣ...
ತೆಂಗನ್ನು ನೆಟ್ಟಾಗ ಈವುದು ಎಳನೀರೂ
ಮಕ್ಕಳನು ಹೇರಲು ಫಲವೇ ಕಣ್ಣೀರೂ
ಈ ಆಲ ಬಿಳಲುಗಳು ಆಸರೆಯು ಮುದಿ ಮರಕೆ
ಈ ಸತ್ಯ ಮನುಜ ಕುಲಕೆ ಸುಳ್ಳಾಯಿತು
ಮಮತೆಗೆ ಬೆಲೆ ಇಲ್ಲ ಸ್ವಾರ್ಥಕ ಮಿತಿ ಇಲ್ಲ
ಮಮತೆಗೆ ಬೆಲೆ ಇಲ್ಲ ಸ್ವಾರ್ಥಕ ಮಿತಿ ಇಲ್ಲ
ಮೇಲಕೆ ಏರಲು ಏಣಿಯ ಕಾಲಲಿ ಒದೆಯುವ ಕಥೆ ಇದುವೇ..
ಒದೆಯುವ ಕಥೆ ಇದುವೇ... ಒದೆಯುವ ಕಥೆ ಇದುವೇ..
ಒದೆಯುವ ಕಥೆ ಇದುವೇ ಒದೆಯುವ ಕಥೆ ಇದುವೇ
-----------------------------------------------------------------------------------------------------------------------
-----------------------------------------------------------------------------------------------------------------------
No comments:
Post a Comment