1098. ಕಳ್ಳ ಮಳ್ಳ (೧೯೯೧)

ಕಳ್ಳ ಮಳ್ಳ ಚಿತ್ರದ ಹಾಡುಗಳು
  1. ಕಳ್ಳ ಮಳ್ಳ ಮಳ್ಳ ಕಳ್ಳ 
  2. ಬಂದೇ ನೀನು 
  3. ಸೇಂದಿ ಎಂದರೂ 
  4. ನೆತ್ತಿಗೇ ಹತ್ತಿತ್ತು 
ಕಳ್ಳ ಮಳ್ಳ (೧೯೯೧) - ಕಳ್ಳ ಮಳ್ಳ ಮಳ್ಳ ಕಳ್ಳ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್. ಏನ್.ಜಯಗೋಪಾಲ ಗಾಯನ : ಎಸ್.ಪಿ.ಬಿ. ಕೋರಸ್

ವಿಧಾನಸೌಧವನೇ ಮಾರಿಬಿಟ್ಟೆ ನಾನು ಹೈ ಕೋರ್ಟ್ ಬಿಲ್ಡಿಂಗನ್ನೇ ಕೊಟ್ಟು ಬಿಟ್ಟೇ ನಾನು
ಹರಿಶ್ಚಂದ್ರನ ಹಿರಿಯ ಮಗ ನಾನು ಧರ್ಮರಾಯನ ಮರಿ ಮಗ ನಾನು
ಒಬ್ಬರಿಗಿಂತ ಒಬ್ಬರು ನೋಡು ಬಲು ಜೋರೂ
ನೀನು ಅವರೇ ಸೇರೂ ನಾನು ಸಾವ್ವ ಸೇರು
ಕಳ್ಳ ಮಳ್ಳ ಮಳ್ಳ ಕಳ್ಳ ಕಳ್ಳ ಮಳ್ಳ ಮಳ್ಳ ಕಳ್ಳ

ಅರಿಯದ ಹೆಣ್ಣು ನೋಡು ಕಣ್ಣಿಗೆಂಥ ಅಂದ ಜೊಲ್ಲು ಬಿಟ್ಟು ನೋಡಬೇಡ ಸಿಂಗಾರಿಯ ಚಂದ 
ಬ್ರಹ್ಮಚಾರಿ ದೃಷ್ಟಿಯಲ್ಲಿ ಗರುಡಗಂಭ ರಂಭೆ ಗೃಹಸ್ಥಂಗೆ ಬೇರೂರು ಹೆಂಡ್ತಿ ನೋಡು ದಂತದ ಗೊಂಬೆ 
ಕೋರೈಸುತ್ತೇ ಮಿಂಚಿನಂಗೆ ಮಿಣ ಮಿಣ ಸಿಂಗಾರ 
ಕೋರೈಸುತ್ತೇ ಮಿಂಚಿನಂಗೆ ಮಿಣ ಮಿಣ ಸಿಂಗಾರ 
ಅಯ್ಯೋ ಮಂಕೆ ಅಲ್ಲಿ ನೋಡು ಮಣ ಮಣ ಬಂಗಾರ 
ತೋರಿಸು ನಿನ್ನ ಕೈ ಚಳಕ ನಮ್ಮದೇ ಗೆಲುವು ಕೊನೆತನಕ 
ನೀನು ಅವರೇ ಸೇರೂ ನಾನು ಸಾವ್ವ ಸೇರು
ಕಳ್ಳ ಮಳ್ಳ ಮಳ್ಳ ಕಳ್ಳ ಕಳ್ಳ ಮಳ್ಳ ಮಳ್ಳ ಕಳ್ಳ ಅಪ್ಪ ಕಳ್ಳ ಮಗ ಮಳ್ಳ
ಮೈಸೂರ ಅರಮನೆ ಕೊಟ್ಟು ಬಿಟ್ಟೇ ನಾನು
ಚಾಮುಂಡಿ ಬೆಟ್ಟವನೇ ಮಾರಿಬಿಟ್ಟೆ ನಾನು
ಹರಿಶ್ಚಂದ್ರನ ಹಿರಿಯ ಮಗ ನಾನು ಧರ್ಮರಾಯನ ಮರಿ ಮಗ ನಾನು
ಒಬ್ಬರಿಗಿಂತ ಒಬ್ಬರು ನೋಡು ಬಲು ಜೋರೂ
ನೀನು ಅವರೇ ಸೇರೂ ನಾನು ಸಾವ್ವ ಸೇರು
ಕಳ್ಳ ಮಳ್ಳ ಮಳ್ಳ ಕಳ್ಳ ಕಳ್ಳ ಮಳ್ಳ ಮಳ್ಳ ಕಳ್ಳ

ಗಂಡು : ಹೇ.. ಕೃಷ್ಣ ಗಿರಿಧಾರಿ ನೋಡು ನೋಡು ಎಂಥ ಕಳ್ಳ ನಮ್ಮ ಗೋವಿಂದ 
            ಹೇ.. ಕೃಷ್ಣ ಗಿರಿಧಾರಿ ನೋಡು ನೋಡು ಎಂಥ ಕಳ್ಳ ನಮ್ಮ ಗೋವಿಂದ 
ಕೋರಸ್ : ಜೈ ಜೈ ಕೃಷ್ಣ ಮುಕುಂದ ಹರಿ ಹರಿ ಜೈ ಗೋಪಾಲ ಗೋವಿಂದ ಹರಿ ಹರಿ 
               ಜೈ ಜೈ ಕೃಷ್ಣ ಮುಕುಂದ ಹರಿ ಹರಿ ಜೈ ಗೋಪಾಲ ಗೋವಿಂದ ಹರಿ ಹರಿ 
ಗಂಡು : ಮಳ್ಳ ಹಂಗೆ ಬಂದು ಆವ್ ಬೆಣ್ಣೆಯ ತಿಂದ ನಾರಿಯ ಸೀರೆಯ ಕದ್ದ ಕಾಳಿಂಗನ ಮೇಲೆ ಗೆದ್ದ 
           ಕೈ ತುಂಬಾ ತುಂಬಿಕೊಂಡು ಇದ್ದ ವಿಜಯನ ಸಾಧಿಸಿ ಎದ್ದಾ 
           ಕಳ್ಳರ ಕಳ್ಳ ಅವನೇ ಮಳ್ಳರ ಮಳ್ಳ ಅವನೇ 
ಕೋರಸ್ : ಜೈ ಜೈ ಕೃಷ್ಣ ಮುಕುಂದ ಹರಿ ಹರಿ ಜೈ ಗೋಪಾಲ ಗೋವಿಂದ ಹರಿ ಹರಿ 
               ಜೈ ಜೈ ಕೃಷ್ಣ ಮುಕುಂದ ಹರಿ ಹರಿ ಜೈ ಗೋಪಾಲ ಗೋವಿಂದ ಹರಿ ಹರಿ 
           ಎಲ್ಲೂ ಇರುವ ಅವನೇ 
ಕಳ್ಳ ಮಳ್ಳ ಮಳ್ಳ ಕಳ್ಳ ಕಳ್ಳ ಮಳ್ಳ ಮಳ್ಳ ಕಳ್ಳ ಅಪ್ಪ ಕಳ್ಳ ಮಗ ಮಳ್ಳ 
ವಿಧಾನಸೌಧವನೇ ಮಾರಿಬಿಟ್ಟೆ ನಾನು ಹೈ ಕೋರ್ಟ್ ಬಿಲ್ಡಿಂಗನ್ನೇ ಕೊಟ್ಟು ಬಿಟ್ಟೇ ನಾನು
ಹರಿಶ್ಚಂದ್ರನ ಹಿರಿಯ ಮಗ ನಾನು ಧರ್ಮರಾಯನ ಮರಿ ಮಗ ನಾನು
ಒಬ್ಬರಿಗಿಂತ ಒಬ್ಬರು ನೋಡು ಬಲು ಜೋರೂ
ನೀನು ಅವರೇ ಸೇರೂ ನಾನು ಸಾವ್ವ ಸೇರು
ಕಳ್ಳ ಮಳ್ಳ ಮಳ್ಳ ಕಳ್ಳ ಕಳ್ಳ ಮಳ್ಳ ಮಳ್ಳ ಕಳ್ಳ
ವಿಧಾನಸೌಧವನೇ ಮಾರಿಬಿಟ್ಟೆ ನಾನು ಹೈ ಕೋರ್ಟ್ ಬಿಲ್ಡಿಂಗನ್ನೇ ಕೊಟ್ಟು ಬಿಟ್ಟೇ ನಾನು
ಹರಿಶ್ಚಂದ್ರನ ಹಿರಿಯ ಮಗ ನಾನು ಧರ್ಮರಾಯನ ಮರಿ ಮಗ ನಾನು
ಒಬ್ಬರಿಗಿಂತ ಒಬ್ಬರು ನೋಡು ಬಲು ಜೋರೂ
ನೀನು ಅವರೇ ಸೇರೂ ನಾನು ಸಾವ್ವ ಸೇರು
ಕಳ್ಳ ಮಳ್ಳ ಮಳ್ಳ ಕಳ್ಳ ಕಳ್ಳ ಮಳ್ಳ ಮಳ್ಳ ಕಳ್ಳ
--------------------------------------------------------------------------------------------------------------------------

ಕಳ್ಳ ಮಳ್ಳ (೧೯೯೧) - ನೆತ್ತಿಗೆ ಹತ್ತಿತು ಮತ್ತು ಮತ್ತಲಿ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್. ಏನ್.ಜಯಗೋಪಾಲ ಗಾಯನ : ಎಸ್.ಪಿ.ಬಿ. ಮಂಜುಳಗುರುರಾಜ 

ಗಂಡು : ನೆತ್ತಿಗೆ ಹತ್ತಿತ್ತು ಮತ್ತು ಮತ್ತಲಿ ಅದೇನಾ ಚಿತ್ತು
            ಮೈ ಬೆವರಾಯಿತು ಉಸಿರು ಬಿಸಿಯಾಯಿತು
            ಕಾಲು ಸೋತು ಹೋಯಿತು ತೋಳು ಬೇಕಾಯಿತು ಎಲ್ಲಾ ನಿಂದಾಯಿತು

ಗಂಡು : ಮುಟ್ಟಿದ ಜಾಗವೆಲ್ಲ ಕೆಂಪಗಾಯಿತು ಏತಕೆ
ಹೆಣ್ಣು : ಗುಟ್ಟೇನು ಅದರಲ್ಲಿ ಎಲ್ಲಾ ನಿನ್ನ ಆಟಕೆ
ಗಂಡು ನೂರಾಸೆ ನನ್ನಲೀಗ ನಿನ್ನ ಮೈಯ ಮಾಟಕೆ
ಹೆಣ್ಣು : ತುಂಟಾಟ ಈಗ ಬೇಡ ಎಲ್ಲಾ ಬರಿ ನೋಟಕೆ
ಗಂಡು : ನನ್ನಲ್ಲಿ ಇಂಥ ಹಠ ಏಕಮ್ಮಾ
ಹೆಣ್ಣು : ಬಿಟ್ಟರೇ ಸಾಕು ನಿನ್ನ ಅಮ್ಮಮ್ಮಾ
ಗಂಡು : ತಡೆದು ನೋಡು ನೀ ನನ್ನನ್ನು
            ನೆತ್ತಿಗೆ ಹತ್ತಿತ್ತು ಮತ್ತು ಮತ್ತಲಿ ಅದೇನಾ ಚಿತ್ತು
            ಮೈ ಬೆವರಾಯಿತು ಉಸಿರು ಬಿಸಿಯಾಯಿತು
            ಕಾಲು ಸೋತು ಹೋಯಿತು ತೋಳು ಬೇಕಾಯಿತು ಎಲ್ಲಾ ನಿಂದಾಯಿತು

ಗಂಡು : ಮಳೆಯಲ್ಲಿ ಆಡುವಾಗ ಚಳಿಯಾಯಿತೇ ಹೇಳಿಗಾ.. 
ಹೆಣ್ಣು : ನೂರಾಸೆ ಹೊಮ್ಮಿ ಬಂದು ಬೆಂಕಿಯಾಯಿತೇ ಮೈಯಿಗಾ 
ಗಂಡು : ಬೆಂಕಿನ ತಂಪು ಮಾಡೋ ರೀತಿ ಬಲ್ಲೆ ನಾನೀಗ 
ಹೆಣ್ಣು : ನೀ ಹತ್ತಿರ ಬಂದರೇ ಸಾಕು ನನ್ನಲೇನೋ ಆವೇಗ 
ಗಂಡು : ಈ ನಿನ್ನ ಕಣ್ಣ ನೋಟ ಗುಂಡೇಟು 
ಹೆಣ್ಣು : ಈ ನಿನ್ನ ಕೈಯ್ ಆಟ ಬೊಂಬಾಟ್ 
ಗಂಡು : ಬಿಡೇನು ಈಗ ನಾ ನಿನ್ನನೂ 
            ನೆತ್ತಿಗೆ ಹತ್ತಿತ್ತು ಮತ್ತು ಮತ್ತಲಿ ಅದೇನಾ ಚಿತ್ತು
            ಮೈ ಬೆವರಾಯಿತು ಉಸಿರು ಬಿಸಿಯಾಯಿತು
            ಕಾಲು ಸೋತು ಹೋಯಿತು ತೋಳು ಬೇಕಾಯಿತು ಎಲ್ಲಾ ನಿಂದಾಯಿತು
--------------------------------------------------------------------------------------------------------------------------

ಕಳ್ಳ ಮಳ್ಳ (೧೯೯೧) - ಸೇಂದಿ ಎಂದರೂ ಬ್ರಾಂದಿ ಎಂದರೂ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್. ಏನ್.ಜಯಗೋಪಾಲ ಗಾಯನ : ಎಸ್.ಪಿ.ಬಿ. ಕೋರಸ್

ಗಂಡು : ಸೇಂದಿ ಎಂದರೂ ಬ್ರಾಂದಿ ಎಂದರೂ  ಒಳಗಡೆ ಹೋದ ಮೇಲೆ ಒಂದೇ ಒಂದೇ
ಕೋರಸ್ : ಸೇಂದಿ ಎಂದರೂ ಬ್ರಾಂದಿ ಎಂದರೂ  ಒಳಗಡೆ ಹೋದ ಮೇಲೆ ಒಂದೇ ಒಂದೇ
ಗಂಡು : ಸೋಡನಾದ್ರೂ ಹಾಕಿಕೊಳ್ಳಿ ನೀರನಾದ್ರೂ ಸುರ್ ಕೊಳ್ಳಿ ನೀಟಾಗಿ ಹೀರಿಕೊಳ್ಳಿ ಗುಂಜುಮ ಗುಂ
ಗಂಡು : ಸೇಂದಿ ಎಂದರೂ ಬ್ರಾಂದಿ ಎಂದರೂ  ಒಳಗಡೆ ಹೋದ ಮೇಲೆ ಒಂದೇ ಒಂದೇ
ಕೋರಸ್ : ಸೇಂದಿ ಎಂದರೂ ಬ್ರಾಂದಿ ಎಂದರೂ  ಒಳಗಡೆ ಹೋದ ಮೇಲೆ ಒಂದೇ ಒಂದೇ

ಗಂಡು : ಕೆಲಸವು ಸಿಕ್ಕಿದಾಗ ಹಾಕು ಒಂದು ಪೆಗ್  
ಕೋರಸ್ : ಹಾಕು ಒಂದು ಪೆಗ್ 
ಗಂಡು : ಇದ್ದ ಕೆಲಸ ಹೋದರೇ ಸಾಲದೆರಡು ಪೆಗ್ಗು 
            ಮದುವೇ ಆಯಿತು ಎಂದು ನೀ ಹಿರಿ ಹಿಗ್ಗೂ ಹೆಂಡ್ತಿ ಓಡಿ ಹೋದರೇ 
ಕೋರಸ್ : ಹೋದರೇ 
ಗಂಡು : ನೀ ಕುಡಿದು ಬಗ್ಗು ಜಾತಿ ಬೇಧ ಯಾವುದಿಲ್ಲಾ ಬಾಷೆ ಜಗಳ ಇದಕೆ ಇಲ್ಲ 
            ಕುಡಿಯೋರೆಲ್ಲ ಕೆಟ್ಟೋರಲ್ಲ ಟಂ ಟಮಟಂ 
            ಸೇಂದಿ ಎಂದರೂ ಬ್ರಾಂದಿ ಎಂದರೂ  ಒಳಗಡೆ ಹೋದ ಮೇಲೆ ಒಂದೇ ಒಂದೇ
ಕೋರಸ್ : ಸೇಂದಿ ಎಂದರೂ ಬ್ರಾಂದಿ ಎಂದರೂ  ಒಳಗಡೆ ಹೋದ ಮೇಲೆ ಒಂದೇ ಒಂದೇ 

 ಗಂಡು : ಹಾಕು ಪೆಗ್ಗು                    ಕೋರಸ್ : ಐಸಾ 
 ಗಂಡು : ಇಳಿಸು ಪೆಗ್ಗು                   ಕೋರಸ್ : ಐಸಾ 
 ಗಂಡು : ಹೊಯ್ಯಿಕೋ ಪೆಗ್ಗು           ಕೋರಸ್ : ಐಸಾ 
 ಗಂಡು : ಏರಿಸು ಪೆಗ್ಗು                   ಕೋರಸ್ : ಐಸಾ 
ಗಂಡು : ಚಿಲಿಚಿಕನ್ ಜೊತೆ ಇದ್ದರೇ ಕರಂ ಕರಂ 
ಕೋರಸ್ : ಕರಂ ಕರಂ ಆಹಾ ಕರಂ ಕರಂ 
ಗಂಡು : ಕಡಲೇಕಾಯಿ ಜೊತೆ ತಿಂದರೇ ನರಂ ನರಂ  
ಕೋರಸ್ : ನರಂ ನರಂ  ಅರೇ ನರಂ ನರಂ  
ಗಂಡು : ದುಡ್ಡು ಜೇಬಲ್ಲಿದ್ದರೆ ವಿಸ್ಕ್ ಅಥವಾ ರಂ ಇಲ್ಲದ್ದಿದ್ದರೇ ಎಲ್ಲರತ್ರ ಗರಂ ಗರಂ 
            ತೂರಾಡಿದೆ ಕಾಲು ಇಲ್ಲಿ ಅಲ್ಲಾಡಿದೆ ರೋಡು ಅಲ್ಲಿ 
            ಹರಿದಾಡಿದೆ ಗುಂಡು ಚೆಲ್ಲ ಗಂ ಗಮಗಂ 
           ಸೇಂದಿ ಎಂದರೂ ಬ್ರಾಂದಿ ಎಂದರೂ  ಒಳಗಡೆ ಹೋದ ಮೇಲೆ ಒಂದೇ ಒಂದೇ
ಕೋರಸ್ : ಸೇಂದಿ ಎಂದರೂ ಬ್ರಾಂದಿ ಎಂದರೂ  ಒಳಗಡೆ ಹೋದ ಮೇಲೆ ಒಂದೇ ಒಂದೇ
ಗಂಡು : ಸೋಡನಾದ್ರೂ ಹಾಕಿಕೊಳ್ಳಿ ನೀರನಾದ್ರೂ ಸುರ್ ಕೊಳ್ಳಿ ನೀಟಾಗಿ ಹೀರಿಕೊಳ್ಳಿ ಗುಂಜುಮ ಗುಂ
ಗಂಡು : ಸೇಂದಿ ಎಂದರೂ ಬ್ರಾಂದಿ ಎಂದರೂ  ಒಳಗಡೆ ಹೋದ ಮೇಲೆ ಒಂದೇ ಒಂದೇ
ಕೋರಸ್ : ಸೇಂದಿ ಎಂದರೂ ಬ್ರಾಂದಿ ಎಂದರೂ  ಒಳಗಡೆ ಹೋದ ಮೇಲೆ ಒಂದೇ ಒಂದೇ 
--------------------------------------------------------------------------------------------------------------------------

ಕಳ್ಳ ಮಳ್ಳ (೧೯೯೧) - ಬಂದೇ ನೀನು ಬಾಳು ಹಸಿರಾಯಿತು 
ಸಂಗೀತ: ಉಪೇಂದ್ರಕುಮಾರ, ಸಾಹಿತ್ಯ: ಆರ್. ಏನ್.ಜಯಗೋಪಾಲ ಗಾಯನ: ಎಸ್.ಪಿ.ಬಿ. ಸಂಗೀತಕಟ್ಟಿ, ಕೋರಸ್

ಗಂಡು : ಬಂದೇ ನೀನು ಬಾಳು ಹಸಿರಾಯಿತು ನಿಂದೆ ನಗುತಾ ಜೀವ ಬೆಳಕಾಯಿತು
            ಬಂಧ ಹೊಸತು ಭಾವ ಹೊಸತು ಪ್ರೀತಿ ಹೊಸತು ರೀತಿ ಹೊಸತು
            ನಿನ್ನ ಜೊತೆ ಇರುವ ಘಳಿಗೆ ಸಂಭ್ರಮ ನಿನ್ನಾಣೆ ನನ್ನಾಣೆ ಚೆಲುವೇ

ಗಂಡು : ಹೃದಯದೆ ಬರೆದೆ ನೀ ಪ್ರಣಯದ ಗೀತೆ ಕಿವಿಯಲಿ ತುಂಬಿದೆ ನೀ ಮುದ್ದು ಮುದ್ದು ಮಾತೇ
ಹೆಣ್ಣು : ಮೊದಲನೇ ಅನುಭವ ಈ ನಮ್ಮ ಪ್ರೇಮ ಆಯಿತು ನೆಮ್ಮದಿಗೇ ಪೂರ್ಣ ವಿರಾಮ
ಗಂಡು : ನಿನ್ನಿಂದ ಮನ ನಲಿಯಿತು ಏನೇನೋ ಸುಖ ಪಡೆಯಿತು
ಹೆಣ್ಣು : ಈ ಹಕ್ಕಿ ಗರಿ ಗೆದರಿತು ಹಾರಾಡಿ ಅದು ತಣಿಯಿತು
ಗಂಡು : ಎಂಥ ಸೊಗಸು ಎರಡು ಮನದ ಸಂಗಮ ನನ್ನಾಣೆ ನಿನ್ನಾಣೆ ಚೆಲುವೇ
            ಬಂದೇ ನೀನು ಬಾಳು ಹಸಿರಾಯಿತು ನಿಂದೆ ನಗುತಾ ಜೀವ ಬೆಳಕಾಯಿತು
            ಬಂಧ ಹೊಸತು ಭಾವ ಹೊಸತು ಪ್ರೀತಿ ಹೊಸತು ರೀತಿ ಹೊಸತು
            ನಿನ್ನ ಜೊತೆ ಇರುವ ಘಳಿಗೆ ಸಂಭ್ರಮ ನಿನ್ನಾಣೆ ನನ್ನಾಣೆ ಚೆಲುವೇ
ಕೋರಸ್ : ಝಮ್ ತರಿಕ ಝಮತರೀಕ  ಆಹಾ ... 

ಹೆಣ್ಣು : ಎಲ್ಲೇ ನೀನು ಹೋದರುನು ನೆನಪಿಡು ಜಾಣ ನಲ್ಲ ನಾನು ನಿಂಗಾಗಿಯೇ ಕೊಡುವೆನು ಪ್ರಾಣ
ಗಂಡು : ನನ್ನೋರು ಯಾರು ಇಲ್ಲವೆಂದು ಇದ್ದೇ  ಅಂದು ನಾನು ನನ್ನೊಳಾದೆ ಸಂಗಾತಿ ನೀ ತಂದ ಪ್ರೀತಿ ಜೇನು
ಹೆಣ್ಣು : ನಾ ನಿನ್ನ ನೆರಳಲ್ಲವೇ ನೀ ನನ್ನ ಉಸಿರಲ್ಲವೇ
ಗಂಡು : ನೀ ನಿಂತೇ ಕಣಕಣದಲ್ಲೂ ಮನದಲಿ ಪ್ರತಿ ಕ್ಷಣದಲೂ
ಹೆಣ್ಣು : ನಿನ್ನಲ್ಲಿ ಬೆರೆತೆ ಮರೆತೇ ನನ್ನ ಈ ದಿನ ನನ್ನಾಣೆ ನಿನ್ನಾಣೆ ಚೆಲುವಾ
ಗಂಡು : ಬಂದೇ ನೀನು ಬಾಳು ಹಸಿರಾಯಿತು ನಿಂದೆ ನಗುತಾ ಜೀವ ಬೆಳಕಾಯಿತು
            ಬಂಧ ಹೊಸತು ಭಾವ ಹೊಸತು ಪ್ರೀತಿ ಹೊಸತು ರೀತಿ ಹೊಸತು
            ನಿನ್ನ ಜೊತೆ ಇರುವ ಘಳಿಗೆ ಸಂಭ್ರಮ ನಿನ್ನಾಣೆ ನನ್ನಾಣೆ ಚೆಲುವೇ
--------------------------------------------------------------------------------------------------------------------------

No comments:

Post a Comment