1099. ಕನಸಿನ ರಾಣಿ (೧೧೯೨)

ಕನಸಿನ ರಾಣಿ ಚಿತ್ರದ ಹಾಡುಗಳು
  1. ಭೂಮಿಗಿಳಿದ ರಂಭೆಯಂತೇ ಮೇಲಿಂದ ಜಾರಿದ ಮೇನಕೆಯಂತೇ
  2. ಒಂಟಿ ಕಾಲಿನ ಕುಂಟು ಕತ್ತೆಯ
  3. ಮುನಿಸೇಕೆ ಬಿರುಸೇಕೆ ಜಂಭವ ಬಿಡೆ ನನ್ನ ದೊರೆಸಾಣಿ
  4. ನುಡಿಗಳು ಮುತ್ತಂತೆ ಸನಿಹವು ಮುತ್ತಂತೆ
  5. ನಿನ್ನ ನೋಡಿದಾಗಲೇ ಅಂದು ನಾ ಸೋತೆನು
ಕನಸಿನ ರಾಣಿ (೧೧೯೨) - ಭೂಮಿಗಿಳಿದ ರಂಭೆಯಂತೆ ಮೇಲಿಂದ ಜಾರಿದ ಮೇನಕೆಯಂತೇ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ಗಂಡು : ಭೂಮಿಗಿಳಿದ ರಂಭೆಯಂತೇ ಮೇಲಿಂದ ಜಾರಿದ ಮೇನಕೆಯಂತೆ
            ಭೂಮಿಗಿಳಿದ ರಂಭೆಯಂತೇ ಮೇಲಿಂದ ಜಾರಿದ ಮೇನಕೆಯಂತೆ 
            ಯೌವ್ವನದ ತುಂಬಿದ ಸುಂದರ ತರುಣಿ ನನ್ನಾ ಅರಗಿಣಿ ನನ್ನ ಅರಗಿಣಿ 

ಗಂಡು : ನನ್ನನ್ನು ಕಂದಾ ಒಡನೆ ಕಣ್ಣಲ್ಲಿ ಕೂಗಿ ನಿನಗಾಗಿ ಬಂದೆ ನಲ್ಲ  ಎಂದಳು 
           ನನ್ನನ್ನು ಕಂದಾ ಒಡನೆ ಕಣ್ಣಲ್ಲಿ ಕೂಗಿ ನಿನಗಾಗಿ ಬಂದೆ ನಲ್ಲ  ಎಂದಳು 
           ಹಗಲಲಿ ದಂತದ ಬೊಂಬೆಯೋ ಇರುಳಲಿ ಕನಸಿನ ರಾಣಿಯು 
           ಹಗಲಲಿ ದಂತದ ಬೊಂಬೆಯೋ ಇರುಳಲಿ ಕನಸಿನ ರಾಣಿಯು 
           ಮೆರೆದಳು ದಿನವೂ ಅಂದದ ತರುಣಿ ನನ್ನಾ ಅರಗಣಿ ನನ್ನ ಅರಗಿಣಿ 
          ಭೂಮಿಗಿಳಿದ ರಂಭೆಯಂತೇ ಮೇಲಿಂದ ಜಾರಿದ ಮೇನಕೆಯಂತೆ 
          ಯೌವ್ವನದ ತುಂಬಿದ ಸುಂದರ ತರುಣಿ ನನ್ನಾ ಅರಗಿಣಿ ನನ್ನ ಅರಗಿಣಿ 

ಕೋರಸ್ : ಜಂ ತನನನಾ ಜಂ ತನನನಾ ಜಂ ತನನನಾ 
ಗಂಡು : ತೋಳಿಂದ ನನ್ನ ಬಳಸಿ ಮನವನ್ನ ಕುಣಿಸಿ ಮೈಯಲ್ಲಿ ಮಿಂಚು ತಂದು ಬಿಸಿಯಾ ತುಂಬುತಾ 
            ತುಟಿಗಳ ಮೇಲೆ ತುಟಿಯನು ಒತ್ತಿ ಹೃದಯದಿ ಅವಳ ಬಿಂಬವ ಕೆತ್ತಿ 
            ತುಟಿಗಳ ಮೇಲೆ ತುಟಿಯನು ಒತ್ತಿ ಹೃದಯದಿ ಅವಳ ಬಿಂಬವ ಕೆತ್ತಿ 
            ಹೊಸತನ ತಂದಳು ಆ ನವ ತರುಣಿ ನನ್ನಾ ಅರಗಿಣಿ 
           ಭೂಮಿಗಿಳಿದ ರಂಭೆಯಂತೇ ಮೇಲಿಂದ ಜಾರಿದ ಮೇನಕೆಯಂತೆ 
           ಯೌವ್ವನದ ತುಂಬಿದ ಸುಂದರ ತರುಣಿ ನನ್ನಾ ಅರಗಿಣಿ ನನ್ನ ಅರಗಿಣಿ 
           ಭೂಮಿಗಿಳಿದ ರಂಭೆಯಂತೇ ಮೇಲಿಂದ ಜಾರಿದ ಮೇನಕೆಯಂತೆ 
--------------------------------------------------------------------------------------------------------------------------

ಕನಸಿನ ರಾಣಿ (೧೧೯೨) - ಒಂಟಿ ಕಾಲಿನ ಕುಂಟು ಕತ್ತೆಯ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಶ್ರೀರಂಗ ಗಾಯನ : ಮಂಜುಳಾ ಗುರುರಾಜ 

ಒಂಟಿ ಕಾಲಿನ ಕುಂಟು ಕತ್ತೆಯ
ಒಂಟಿ ಕಾಲಿನ ಕುಂಟು ಕತ್ತೆಯ ಬಿಟ್ಟು ಹೋದಲವ್ವಾ ನನ್ನ ಪಾದರತ್ತೆ
ನನ್ನ ಅತ್ತೆಯ ಕುಂಟು ಕತ್ತೆಗೆ
ನನ್ನ ಅತ್ತೆಯ ಕುಂಟು ಕತ್ತೆಗೆ ಜೋಡಿ ಸಿಕ್ಕಿತ್ತವ್ವ ಒಳ್ಳೆ ಗಂಡು ಕತ್ತೆ
ಊಟಿ ದಾಟಿ ಊರಿಗೆ ಬಂದಯಿತೇ ಸೀರೆ ಪಂಚೆ ಮೂಟೆಯ ಹೊರುತೈತೆ 
ನೋವು ಬಂದರೇ ಮೇವು ತಿನ್ನದೇ ತಂಟೆ ಮಾಡಿತ್ತವ್ವ ನನ್ನ ಕುಂಟು ಕತ್ತೆ 
ಒಂಟಿ ಕಾಲಿನ ಕುಂಟು ಕತ್ತೆಯ ಬಿಟ್ಟು ಹೋದಲವ್ವಾ ನನ್ನ ಪಾದರತ್ತೆ
ನನ್ನ ಅತ್ತೆಯ ಕುಂಟು ಕತ್ತೆಗೆ

ಕುಡಿ ಮೀಸೆ ಈ ಗಂಡು ಬಾಡಿಯು ಗಲ್ ಗುಂಡು 
ಕುಡಿ ಮೀಸೆ ಈ ಗಂಡು ಬಾಡಿಯು ಗಲ್ ಗುಂಡು ಗುಣದಲ್ಲಿ ಕಸ್ತೂರಿ ತುಂಡು 
ಮದುವೆಗೆ ತುತ್ತೂರಿ ಬ್ಯಾಂಡು ಆಹಾ ಸಂಜೆನೇ ಕಲ್ಯಾಣ ಮುಂಜಾನೆ ಶೋಭಾನ 
ಮೋರಿಯ ನೀರಲ್ಲಿ ಸ್ನಾನ ಹಾಡೋದು ಇಂಪಾದ ಗಾನ 
ಹಿಕ್ಕಳು ತಿಕ್ಕು ನಾಯಿ ಹೊತ್ತಿತು ಒಳ್ಳೇಯ ಜೋಡಿ ಆಯಿತು 
ಕಂತೆಗೆ ತಕ್ಕ ಗೋಂತೆಯು ಅನ್ನೋ ಗಾದೆ ನಿಜವಾಯ್ತು ಬಾರೇ ಮುದ್ದು ಕತ್ತೆ 
ಒಂಟಿ ಕಾಲಿನ ಕುಂಟು ಕತ್ತೆಯ ಬಿಟ್ಟು ಹೋದಲವ್ವಾ ನನ್ನ ಪಾದರತ್ತೆ
ನನ್ನ ಅತ್ತೆಯ ಕುಂಟು ಕತ್ತೆಗೆ 

ನೋಡೋಕೆ ಶ್ರೀ ರಾಮ ಸುಳ್ಳಲ್ಲಿ ನಿಸ್ಸಿಮ 
ನೋಡೋಕೆ ಶ್ರೀ ರಾಮ ಸುಳ್ಳಲ್ಲಿ ನಿಸ್ಸಿಮ ಮೋಡಿಯ ಮಾತಲ್ಲಿ ಪ್ರೇಮಾ ಹಾಕೋದು ಮೇಲ್ಕೋಟೆ ನಾಮ 
ಆಹಾ ಸೀರೆಯ ಸೆಣೆದಾಯಿತು ಪಂಚೆಯು ಒಗೆದಾಯಿತು 
ಸೊಂಟದ ಕೀಲೆಲ್ಲಾ ನೋವು ದಿನವೆಲ್ಲಾ ದುಡಿಯೋರು ನಾವು 
ಹೊಟ್ಟೆಗೆ ಹಿಟ್ಟು ಇಲ್ಲದ ಮೇಲೆ ಜುಟ್ಟಿಗೆ ಮಲ್ಲಿಗೆ ಏಕೆ 
ಬಿಕ್ಷೆಯ ಬೇಡೋ ತಿರುಕ ನಿಂಗೇಕೆ ದೊರೆಯ ದೊಡ್ಡ ಬಯಕೆ 
ಹೇಳೇ ಗಂಡು ಕತ್ತೆ ಹೈ ಹೈ ಹೈ ಹೇಳೇ ಗಂಡು ಕತ್ತೆ 
ಒಂಟಿ ಕಾಲಿನ ಕುಂಟು ಕತ್ತೆಯ ಬಿಟ್ಟು ಹೋದಲವ್ವಾ ನನ್ನ ಪಾದರತ್ತೆ
ನನ್ನ ಅತ್ತೆಯ ಕುಂಟು ಕತ್ತೆಗೆ
ನನ್ನ ಅತ್ತೆಯ ಕುಂಟು ಕತ್ತೆಗೆ ಜೋಡಿ ಸಿಕ್ಕಿತ್ತವ್ವ ಒಳ್ಳೆ ಗಂಡು ಕತ್ತೆ
ಊಟಿ ದಾಟಿ ಊರಿಗೆ ಬಂದಯಿತೇ ಸೀರೆ ಪಂಚೆ ಮೂಟೆಯ ಹೊರುತೈತೆ 
ನೋವು ಬಂದರೇ ಮೇವು ತಿನ್ನದೇ ತಂಟೆ ಮಾಡಿತ್ತವ್ವ ನನ್ನ ಕುಂಟು ಕತ್ತೆ 
ಒಂಟಿ ಕಾಲಿನ ಕುಂಟು ಕತ್ತೆಯ ಬಿಟ್ಟು ಹೋದಲವ್ವಾ ನನ್ನ ಪಾದರತ್ತೆ
ನನ್ನ ಅತ್ತೆಯ ಕುಂಟು ಕತ್ತೆಗೆ 
--------------------------------------------------------------------------------------------------------------------------

ಕನಸಿನ ರಾಣಿ (೧೧೯೨) - ಮುನಿಸೇಕೆ ಬಿರುಸೇಕೆ ಜಂಭವ ಬಿಡೆ ನನ್ನ ದೊರೆಸಾಣಿ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್ ಹೊಯ್ ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್ ಹೊಯ್ ಚಿಕ್ಕ ಚಕ್ಕ ಚಿಕ್ಕ ಚಕ್ಕ ಚಾ
ಮುನಿಸೇಕೆ ಬಿರುಸೇಕೆ ಜಂಭವ ಬಿಡೆ ನನ್ನ ದೊರೆಸಾಣಿ  ನನ್ನ ಮುದ್ದಿನ ರಾಣಿ ಮಂಕು ಸಾಂಬ್ರಾಣಿ
ನೆಲದಲಿ ನಡೆಯೇ ಬಿನ್ನಾಣಗಾತಿ ನಡೆ ಜಾರಿದಾಗ ಎಲ್ಲಾ ಫಜೀತಿ

ಮೋರೆಯ ಮೇಲೆ ಉರಿಯೋ ಬೆಂಕಿ ಮಾತುಗಳೆಲ್ಲಾ ಆನೆ ಪಟಾಕಿ
ನೋಡಲು ಚೆಂದ ಈ ನಿನ್ನ ಬ್ಯುಟಿ ಪ್ರೀತಿಗೆ ನಾಂದಿ ಈ ನಮ್ಮ ಭೇಟಿ
ನಿನ್ನಾ ಬಳುಕುವ ಬಾಡಿಯು ಕುಲುಕುವ ಮೋಡಿಯೂ
ಮುನಿಸೇಕೆ ಬಿರುಸೇಕೆ ಜಂಭವ ಬಿಡೆ ನನ್ನ ದೊರೆಸಾಣಿ  ನನ್ನ ಮುದ್ದಿನ ರಾಣಿ ಮಂಕು ಸಾಂಬ್ರಾಣಿ

ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಈಜುವ ಉಡುಗೆ ಧರಿಸಿದ ನೀರೆ ಮೋಜಿನ ಆಟ ಆಡೋಣ ಬಾರೆ 
ವಯ್ಯಾರಿ ನೀನೇ ಮೈಕಲ್ ಲೇಡಿ ನಿನಗಾಗಿ ಬಂದೆ ನಾನೇ ಕಿಲಾಡಿ 
ನಿನ್ನ ಚಂಡುಡುಗೆ ಕೊಡುವೆನು ಒಲವಿನ ಉಡುಗೊರೆ 
ಮುನಿಸೇಕೆ ಬಿರುಸೇಕೆ ಜಂಭವ ಬಿಡೆ ನನ್ನ ದೊರೆಸಾಣಿ  ನನ್ನ ಮುದ್ದಿನ ರಾಣಿ ಮಂಕು ಸಾಂಬ್ರಾಣಿ
ನೆಲದಲಿ ನಡೆಯೇ ಬಿನ್ನಾಣಗಾತಿ ನಡೆ ಜಾರಿದಾಗ ಎಲ್ಲಾ ಫಜೀತಿ 
--------------------------------------------------------------------------------------------------------------------------

ಕನಸಿನ ರಾಣಿ (೧೧೯೨) - ನುಡಿಗಳು ಮುತ್ತಂತೆ ಸನಿಹವು ಮತ್ತಂತೆ 
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಮಂಜುಳಾಗುರುರಾಜ 

ಕೋರಸ್ : ಆಹಾ ಆಹಾ ಆಹಾ ಆಹಾ ಆಹಾ ಆಹಾ
ಗಂಡು : ನುಡಿಗಳು ಮುತ್ತಂತೆ ಸನಿಹವು ಮುತ್ತಂತೆ ಚೆಲುವೆ ನೀನು ಒಲಿದರೆ
            ಪ್ರೀತಿ ಮಾತು ನುಡಿದರೇ ಹಗಲು ರಾತ್ರಿ ಒಂದು ತಿಳಿಯದು
ಹೆಣ್ಣು : ನುಡಿಗಳು ಮುತ್ತಂತೆ ಸನಿಹವು ಮುತ್ತಂತೆ ಚೆಲುವ ನೀನು ಒಲಿದರೆ
            ಪ್ರೀತಿ ಮಾತು ನುಡಿದರೇ ಹಗಲು ರಾತ್ರಿ ಒಂದು ತಿಳಿಯದು

ಕೋರಸ್ : ಆಹಾ ಜೂಜು ಜೂಜು ಜೂಜುಜೂಜು
ಗಂಡು : ಅರಳಲು ಯೌವ್ವನ ಸುಮವು ಬಯಕೆಯು ಹೊಮ್ಮಿತು ದಿನವೂ
           ಅರಳಲು ಯೌವ್ವನ ಸುಮವು ಬಯಕೆಯು ಹೊಮ್ಮಿತು ದಿನವೂ
ಹೆಣ್ಣು : ನಲಿಯುತ ಚಿಮ್ಮಲು ಮನವು ಅನುಕ್ಷಣ ಕಂಡೆನು ಚೆಲುವು
ಗಂಡು : ಸಡಗರ ಸಲಿಗೆ ಹೊಮ್ಮಿತು ಹರುಷ
ಹೆಣ್ಣು : ಹೊಸ ಹೊಸ ಕನಸು ತಂದಿರೆ ಸರಸ ಭುವಿಗೆ ಸ್ವರ್ಗ ಇಂದು ಜಾರಿತು
ಗಂಡು : ನುಡಿಗಳು ಮುತ್ತಂತೇ         ಕೋರಸ್ : ಒಹೋ.. ಆಹಾ.. ಒಹೋ.. ಆಹಾ
 ಗಂಡು : ಸನಿಹವು ಮತ್ತಂತೆ           ಕೋರಸ್ : ಒಹೋ.. ಆಹಾ.. ಒಹೋ.. ಆಹಾ
ಕೋರಸ್ : ನುಡಿಗಳು ಮುತ್ತಂತೆ ಸನಿಹವು ಮತ್ತಂತೆ

ಹೆಣ್ಣು : ಬಯಸದೆ ನೀ ಬಳಿ ಬಂದೆ ಒಲವಿನ ಸಂಭ್ರಮ ತಂದೆ
           ಬಯಸದೆ ನೀ ಬಳಿ ಬಂದೆ ಒಲವಿನ ಸಂಭ್ರಮ ತಂದೆ
ಗಂಡು : ಭಾಗ್ಯದ ಬಾಗಿಲ ತೆರೆದೆ ಬಾಳಲಿ ಲಕ್ಷ್ಮಿಯ ಕಂಡೆ
ಹೆಣ್ಣು : ಸಿಹಿ ಸಿಹಿ ನುಡಿಯ ಕೇಳಿದೆ ಇನಿಯಾ
ಗಂಡು : ಕಿವಿಯನು ತರುವ ಹೆಜ್ಜೆಯ ಧನಿಯ ಗೆಳತೀ ಇಂದು ನಾನು ಕೇಳಿದೆ
ಗಂಡು : ನುಡಿಗಳು ಮುತ್ತಂತೇ         ಕೋರಸ್ : ಒಹೋ.. ಆಹಾ.. ಒಹೋ.. ಆಹಾ
 ಗಂಡು : ಸನಿಹವು ಮತ್ತಂತೆ           ಕೋರಸ್ : ಒಹೋ.. ಆಹಾ.. ಒಹೋ.. ಆಹಾ
ಕೋರಸ್ : ನುಡಿಗಳು ಮುತ್ತಂತೆ ಸನಿಹವು ಮತ್ತಂತೆ
--------------------------------------------------------------------------------------------------------------------------

ಕನಸಿನ ರಾಣಿ (೧೧೯೨) - ನಿನ್ನ ನೋಡಿದಾಗಲೇ ಅಂದು ನಾ ಸೋತೆನು  
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಲ್.ಏನ್.ಶಾಸ್ತ್ರಿ  ಮಂಜುಳಾಗುರುರಾಜ 

ಗಂಡು : ನೋಡಿದಾಗಲೇ ಅಂದು ನಾ ಸೋತೆನು ಸವಿಯಾದ ಮಾತನು ಕೇಳಿ ಮೈ ಮರೆತೆನು
            ಅನುರಾಗದ  ಆನಂದವೇನು ಎಂದು ಅರಿವಾಯಿತಿಂದು ನಿನ್ನ ಕಂಡು ಚೆಲುವೆಯೇ ನನ್ನಾಣೆ
ಹೆಣ್ಣು : ನೋಡಿದಾಗಲೇ ಅಂದು ನಾ ಸೋತೆನು ಸವಿಯಾದ ಮಾತನು ಕೇಳಿ ಮೈ ಮರೆತೆನು
            ಅನುರಾಗದ  ಆನಂದವೇನು ಎಂದು ಅರಿವಾಯಿತಿಂದು ನಿನ್ನ ಕಂಡು ಚೆಲುವನೇ ನನ್ನಾಣೆ

ಗಂಡು : ಮನದ  ಆಸೆಯ ನಯನ ಹಾಡಿದೆ ಸನಿಹ ಬೇಡಿದೆ ಬಯಕೆ ಹೇಳಿದೆ
ಹೆಣ್ಣು : ಆಸೆ ಲತೆಗಳಲಿ ಹೊಸ ಸಾವಿರ ಹೂವುಗಳು ನಗುತಾ ನಗುತಾ ಅರಳಿ ಅರಳಿ ಆತುರ ಹೆಚ್ಚುತಲಿ
          ಕ್ಷಣವೋ ಯುಗವೋ ತಿಳಿಯೆ ಏನುತಾ ಕಾತರ ತರುತಿರೆ
ಗಂಡು : ಸರಸದಲಿಯೇ ಸಮಯ ಕಳೆಯುವೆ ಏಕೇ ಹೀಗೆ ನಾ ತಾಳಲಾರೆ  ಇನ್ನು ಕೊಡದಿರೆ ನನ್ನಾಣೆ
ಹೆಣ್ಣು : ನೋಡಿದಾಗಲೇ ಅಂದು ನಾ ಸೋತೆನು ಸವಿಯಾದ ಮಾತನು ಕೇಳಿ ಮೈ ಮರೆತೆನು

ಹೆಣ್ಣು : ಸಂಜೆ ಮೂಡಿದೆ ಕೆಂಪು ಚೆಲ್ಲಿದೆ ತಂಪು ಗಾಳಿಯು ಕಂಪು ಚೆಲ್ಲಿದೆ 
ಗಂಡು : ಹೂವೂ ದುಂಬಿಗಳು ನಲಿದಾಡಿವೆ ಕಾಣಿಸದೆ ಅರಿತು ಬೆರೆತು ಮನಸು ನಮದು ಬಲ್ಲೆಯ ನೀ ತರುವೆ 
          ಆದರ  ಆದರ ಬೆರೆಸು ಶ್ರುತಿಸು ಬೇಗನೆ ಬಾ ಹರಿಣಿ 
ಹೆಣ್ಣು : ಸಮಯ ಬರದೇ ಬಳಿಗೆ ಬರಲಾರೆ ನಾನು ಬಿಡು ನನ್ನ ನಲ್ಲಾ ಈಗ ನೀನು ಬಿಡದಿರೆ ನನ್ನಾ 
ಗಂಡು : ನೋಡಿದಾಗಲೇ ಅಂದು ನಾ ಸೋತೆನು ಸವಿಯಾದ ಮಾತನು ಕೇಳಿ ಮೈ ಮರೆತೆನು
            ಅನುರಾಗದ  ಆನಂದವೇನು ಎಂದು ಅರಿವಾಯಿತಿಂದು ನಿನ್ನ ಕಂಡು ಚೆಲುವೆಯೇ ನನ್ನಾಣೆ
ಹೆಣ್ಣು : ನೋಡಿದಾಗಲೇ ಅಂದು ನಾ ಸೋತೆನು ಸವಿಯಾದ ಮಾತನು ಕೇಳಿ ಮೈ ಮರೆತೆನು
            ಅನುರಾಗದ  ಆನಂದವೇನು ಎಂದು ಅರಿವಾಯಿತಿಂದು ನಿನ್ನ ಕಂಡು ಚೆಲುವನೇ ನನ್ನಾಣೆ
--------------------------------------------------------------------------------------------------------------------------

No comments:

Post a Comment