ಕರ್ಣನ ಸಂಪತ್ತು ಚಲನಚಿತ್ರದ ಹಾಡುಗಳು
- ಮೈಸೂರ ಮಾವ ಮಂಡ್ಯದ ಜೀವ
- ಬೆನಕ ಬೆನಕ ಬೆನಕ ಕರವ ಮುಗಿವೆ ಬೆನಕ
- ಕಲಿಯುಗ ಕರ್ಣನೇ ಎಂಟೆದೆ ಭಂಟನೇ
- ಬಂದಾ ಬಂದಾ ಸಣ್ ತಮ್ಮಣ್ಣ
- ಅಂಬಿಯ ಕಾಣಲು ಬಂದು ಅಂಬಲಿ ದುಡ್ಡು ಹೋಯಿತು
ಸಂಗೀತ : ಗುರು ಸಾಹಿತ್ಯ : ಶಾಂತರಾಂ ಕಣಗಾಲ್ ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ
ಹೆಣ್ಣು : ಹೊಯ್ ಮೈಸೂರ ಮಾವ ಮಂಡ್ಯಾದ ಜೀವ ಈ ಜೀವ ನೋವ ತಡೀಲಾರೆ ದ್ಯಾವ
ಹೊಯ್ ಮೈಸೂರ ಮಾವ ಮಂಡ್ಯಾದ ಜೀವ ಈ ಜೀವ ನೋವ ತಡೀಲಾರೆ ದ್ಯಾವ
ಬಾರಯ್ಯ ಬಳಿಗೆ ಬಾರಯ್ಯ ತೂರಯ್ಯ ಎದೆಯ ತೂರಯ್ಯ ಓಹೋಹೊಹೋ.. ಮಾವ
ಗಂಡು : ಅರೇ .. ಮಲ್ಲಿಗೆ ಹೂವೇ ಕಬ್ಬಿನ ಜಲ್ಲೇ ಹೀಗ್ಯಾಕೆ ನಲ್ಲೇ ಹೊಡೀಬ್ಯಾಡವೇ ಸಿಳ್ಳೆ
ಹೇಳಲೇ ಹುಡುಗಿ ಹೇಳಲೇ ಟೈಮ್ ಇಲ್ಲವೇ ನನಗೆ ಟೈಮಿಲ್ಲವೇ.. ಓಹೋಹೋಹೋ ಬೆಡಗಿ
ಹೆಣ್ಣು : ಉಡತ್ತೀನಿ ಸೀರೆಯ ನೀ ಹೇಳದಂಗೇ ತೊಟ್ಟತೀವಿನಿ ರವಿಕೆಯ ನೀ ಹೋಲಿಸದಂಗೇ
ಆ.. ಉಡತ್ತೀನಿ ಸೀರೆಯ ನೀ ಹೇಳದಂಗೇ ತೊಟ್ಟತೀವಿನಿ ರವಿಕೆಯ ನೀ ಹೋಲಿಸದಂಗೇ
ಗಂಡು : ಕಸ್ತೂರಿ ಕನ್ನಡ ಕೋಗಿಲೆಯೇ ಸುಮ್ಮನೆ ಕಾಡಬ್ಯಾಡ ಮಲೆನಾಡನವಳೇ
ಅರಮನೆಯಲಿ ಮುಂಜಾನೆ ಕಾಣುವೆ ನಾ
ಹೆಣ್ಣು : ಹೊಯ್ ಮೈಸೂರ ಮಾವ ಮಂಡ್ಯಾದ ಜೀವ ಈ ಜೀವ ನೋವ ತಡೀಲಾರೆ ದ್ಯಾವ
ಗಂಡು : ಹೊಯ್ ಹೇಳಲೇ ಹುಡುಗಿ ಹೇಳಲೇ ಟೈಮ್ ಇಲ್ಲವೇ ನನಗೆ ಟೈಮಿಲ್ಲವೇ.. ಓಹೋಹೋಹೋ ಬೆಡಗಿ
ಹೆಣ್ಣು : ಸಿಗಡಿ ಮೀನು ತರ್ತೀನಿ ನಲ್ಲಾ ಸಜ್ಜಿಗೆ ಊಟ ನೀಡ್ತಿ ನಿಂಗ
ಓಯ್ ಓಯ್ ಸಿಗಡಿ ಮೀನು ತರ್ತೀನಿ ನಲ್ಲಾ ಸಜ್ಜಿಗೆ ಊಟ ನೀಡ್ತಿ ನಿಂಗ
ಗಂಡು : ಸೀಗಡಿ ಸಜ್ಜಿಗೆ ಒಂದೂ ಬ್ಯಾಡ ಮೆಚ್ಚಿದ ಗಂಡಿಗೆ ನೀನೆಯಲ್ಲಾ
ಸರಸತಿಯೇ ಹೋಗೇಬಿಡೆ ಯಾಪಾರಕೆ..
ಹೆಣ್ಣು : ಹೊಯ್ ಮೈಸೂರ ಮಾವ ಮಂಡ್ಯಾದ ಜೀವ ಈ ಜೀವ ನೋವ ತಡೀಲಾರೆ ದ್ಯಾವ
ಬಾರಯ್ಯ ಬಳಿಗೆ ಬಾರಯ್ಯ ತೂರಯ್ಯ ಎದೆಯ ತೂರಯ್ಯ ಓಹೋಹೊಹೋ.. ಮಾವ
ಗಂಡು : ಅರೆರೆರೆರೇ .. ಮಲ್ಲಿಗೆ ಹೂವೇ ಕಬ್ಬಿಣ ಜಲ್ಲೇ ಹೀಗ್ಯಾಕೆ ನಲ್ಲೇ ಹೊಡೀಬ್ಯಾಡವೇ ಸಿಳ್ಳೆ
ಹೇಳಲೇ ಹುಡುಗಿ ಹೇಳಲೇ
ಹೆಣ್ಣು : ಬಾರಯ್ಯ ಬಳಿಗೆ ಬಾರಯ್ಯ
ಗಂಡು : ಟೈಮ್ ಇಲ್ಲವೇ ನನಗೆ ಟೈಮಿಲ್ಲವೇ..
ಹೆಣ್ಣು : ತೂರಯ್ಯ ಎದೆಯ ತೂರಯ್ಯ
ಗಂಡು : ಆಹ್ಹಾಅಹ್ಹಹ್ಹಾ
--------------------------------------------------------------------------------------------------------------------------
ಕರ್ಣನ ಸಂಪತ್ತು ( ೨೦೦೫) - ಬೆನಕ ಬೆನಕ ಬೆನಕ ಕರವ ಮುಗಿವೆ ಬೆನಕ
ಸಂಗೀತ : ಗುರು ಸಾಹಿತ್ಯ : ಗೌರಿಶಂಕರ ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ
ಕೋರಸ್ : ಬೆನಕ ಬೆನಕ ಬೆನಕ
ಗಂಡು : ಕರವ ಮುಗಿವೆ ಬೆನಕ ಕೋರಸ್ : ಬೆನಕ ಬೆನಕ ಬೆನಕ
ಹೆಣ್ಣು : ವರವ ನೀಡೋ ಬೆನಕ
ಗಂಡು : ಓ.. ಗಣಪ ಹೆಣ್ಣು : ಹೋ .. ಬೆನಕ
ಗಂಡು : ಹೇ.. ಶಕ್ತಿದಾಯಕ ...
ಗಂಡು : ಓ.. ಗಣಪ ಹೆಣ್ಣು : ಹೋ .. ಬೆನಕ
ಗಂಡು : ಹೇ.. ಶಕ್ತಿದಾಯಕ ... ಕೋರಸ್ : ಬೆನಕ ಬೆನಕ ಬೆನಕ
ಗಂಡು : ಕರವ ಮುಗಿವೆ ಬೆನಕ
ಗಂಡು : ಹಾಲು ಹಣ್ಣು ಜೇನು ಉಂಡ ಜನ ಒಂದೆಡೆ ಕೋರಸ್ : ಜನ ಒಂದೇಡೆ
ಹೆಣ್ಣು : ಮೇವು ಗೂಡು ಇಲ್ಲ ಎಂಬ ಕೂಗು ಹಲವಡೆ ಕೋರಸ್ : ಕೂಗು ಹಲವೆಡೆ
ಗಂಡು : ಮಾಟವ .. ಹೆಣ್ಣು : ಮೋಡಿಯ
ಇಬ್ಬರು : ಕಪಟವ ತಿಳಿಯದು ಬೆನಕ
ಗಂಡು : ಮಾಟವ .. ಹೆಣ್ಣು : ಮೋಡಿಯ
ಇಬ್ಬರು : ಕಪಟವ ತಿಳಿಯದು ಬೆನಕ
ಕೋರಸ್ : ಬೆನಕ ಬೆನಕ ಬೆನಕ ಗಂಡು : ಕರವ ಮುಗಿವೆ ಬೆನಕ
ಗಂಡು : ಮೊಂಡ ಮಾತು ಭಂಡ ಬದುಕು ಮೋಸ ಹಲವಡೆ ಕೋರಸ್ : ಮೋಸ ಹಲವಡೆ
ಹೆಣ್ಣು : ಗುಂಡು ಸದ್ದು ನಾಡ ನಡುಕ ಸಾವು ಎಲ್ಲೆಡೆ ಕೋರಸ್ : ಸಾವು ಎಲ್ಲೆಡೆ
ಗಂಡು : ಪುಂಡರೇ .. ಹೆಣ್ಣು : ಭಂಡರೇ ...
ಇಬ್ಬರು : ಮರ್ಮವ ತಿಳಿಯದು ಬೆನಕ ...
ಗಂಡು : ಪುಂಡರೇ .. ಹೆಣ್ಣು : ಭಂಡರೇ ...
ಇಬ್ಬರು : ಮರ್ಮವ ತಿಳಿಯದು ಬೆನಕ ...
ಕೋರಸ್ : ಬೆನಕ ಬೆನಕ ಬೆನಕಗಂಡು : ಕರವ ಮುಗಿವೆ ಬೆನಕ ಕೋರಸ್ : ಬೆನಕ ಬೆನಕ ಬೆನಕ
ಹೆಣ್ಣು : ವರವ ನೀಡೋ ಬೆನಕ
ಗಂಡು : ಓ.. ಗಣಪ ಹೆಣ್ಣು : ಹೋ .. ಬೆನಕ
ಗಂಡು : ಹೇ.. ಶಕ್ತಿದಾಯಕ ...
ಗಂಡು : ಓ.. ಗಣಪ ಹೆಣ್ಣು : ಹೋ .. ಬೆನಕ
ಗಂಡು : ಹೇ.. ಶಕ್ತಿದಾಯಕ ...
ಗಂಡು : ಕರವ ಮುಗಿವೆ ಬೆನಕ ಕೋರಸ್ : ಬೆನಕ ಬೆನಕ ಬೆನಕ
ಹೆಣ್ಣು : ವರವ ನೀಡೋ ಬೆನಕ
ಕರ್ಣನ ಸಂಪತ್ತು ( ೨೦೦೫) - ಕಲಿಯುಗ ಕರ್ಣನೇ ಎಂಟೆದೆ ಭಂಟನೇ
ಸಂಗೀತ : ಗುರು ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಎಸ್.ಪಿ.ಬಿ, ಗುರು, ರವಿ
ಗಂಡು : ಕಲಿಯುಗ ಕರ್ಣನೇ ಎಂಟೆದೆ ಭಂಟನೇ ಯಾವುದು ಈ ಬಂಧ ಬೆಸೆದಿಹ ಕಾಣದ ಅನುಬಂಧ
ಹೃದಯ ಮೀಟುವ ಭಾವ ಚಿಮ್ಮುವ ಪ್ರೀತಿಯ ಸಂಬಂಧ ಪ್ರೀತಿಯ ಸಂಬಂಧ
ಕಲಿಯುಗ ಕರ್ಣನೇ ಎಂಟೆದೆ ಭಂಟನೇ ಯಾವುದು ಈ ಬಂಧ ಬೆಸೆದಿಹ ಕಾಣದ ಅನುಬಂಧ
ಹೃದಯ ಮೀಟುವ ಭಾವ ಚಿಮ್ಮುವ ಪ್ರೀತಿಯ ಸಂಬಂಧ ಪ್ರೀತಿಯ ಸಂಬಂಧ
ಗಂಡು : ಓಹೋಹೊಹೋ... ಒಹೋ .. ಒಹೋ..
ಮೈಸೂರಿನ ಮುದ್ದಾಡುವ ಕಂದಮ್ಮ ನೀನಾಗಿ ಬಂದೇ ..
ಈ ತೌರಿನ ಬಂಗಾರದ ಕನಸನ್ನು ಮೈದುಂಬಿ ನಿಂತೇ..
ಮೈಸೂರಿನ ಮುದ್ದಾಡುವ ಕಂದಮ್ಮ ನೀನಾಗಿ ಬಂದೇ ..
ಈ ತೌರಿನ ಬಂಗಾರದ ಕನಸನ್ನು ಮೈದುಂಬಿ ನಿಂತೇ..
ಗಂಡು : ಈ ನಾಡಿನ ಕೋರಸ್ : ಆಹಾ....
ಗಂಡು : ಈ ಮಣ್ಣಿನಾ.. ಕೋರಸ್ : ಆಹಾ...
ಗಂಡು : ಕಣ್ಣಾಗುತಾ ನೀ ನಿಂತಿಹೇ ...
ಪಡೆದಿರುವೆ ಪ್ರೀತಿಯ ಆದರ ಅಭಿಮಾನವ
ಗಂಡು : ಕಲಿಯುಗ ಕರ್ಣನೇ ಎಂಟೆದೆ ಭಂಟನೇ ಯಾವುದು ಈ ಬಂಧ ಬೆಸೆದಿಹ ಕಾಣದ ಅನುಬಂಧ
ಹೃದಯ ಮೀಟುವ ಭಾವ ಚಿಮ್ಮುವ ಪ್ರೀತಿಯ ಸಂಬಂಧ ಪ್ರೀತಿಯ ಸಂಬಂಧ
ಗಂಡು : ಈ ಬೀಡಿನ ಶ್ರೀಗಂಧದ ಸೌಗಂಧ ನೀ ಹೀರಿ ಬೆಳೆದೆ
ಈ ಬಾಷೆಗೆ ಅಭಿಮಾನವ ಎಂದೆಂದೂ ನೀ ತೋರಿ ನಿಂತೇ
ಈ ಬೀಡಿನ ಶ್ರೀಗಂಧದ ಸೌಗಂಧ ನೀ ಹೀರಿ ಬೆಳೆದೆ
ಈ ಬಾಷೆಗೆ ಅಭಿಮಾನವ ಎಂದೆಂದೂ ನೀ ತೋರಿ ನಿಂತೇ
ಗಂಡು : ಈ ದೇಹವೂ ... ಕೋರಸ್: ಆಹಾ...
ಗಂಡು : ಈ ಪ್ರಾಣವೂ ... ಕೋರಸ್ : ಆಹಾ...
ಗಂಡು : ತಾಯ್ ನಾಡಿಗೆ... ಕೋರಸ್ : ಆಹಾ ..
ಗಂಡು : ನಾ ನೀಡುವೇ .. ಗಳಿಸಿರುವೆ ನಿಮ್ಮಯ ಸ್ನೇಹದಾ ಅಭಿಮಾನವ
ಗಂಡು : ಕಲಿಯುಗ ಕರ್ಣನೇ ಎಂಟೆದೆ ಭಂಟನೇ ಯಾವುದು ಈ ಬಂಧ ಬೆಸೆದಿಹ ಕಾಣದ ಅನುಬಂಧ
ಹೃದಯ ಮೀಟುವ ಭಾವ ಚಿಮ್ಮುವ ಪ್ರೀತಿಯ ಸಂಬಂಧ ಪ್ರೀತಿಯ ಸಂಬಂಧ
--------------------------------------------------------------------------------------------------------------------------
ಕರ್ಣನ ಸಂಪತ್ತು ( ೨೦೦೫) - ಬಂದಾ ಬಂದಾ ಸಣ್ ತಮ್ಮಣ್ಣ
ಸಂಗೀತ : ಗುರು ಸಾಹಿತ್ಯ : ಹೊಯ್ಸಳ ಗಾಯನ : ಎಸ್.ಪಿ.ಬಿ,ಕೋರಸ್
ಗಂಡು : ಬಂದಾ ಬಂದಾ ಸಣ್ ತಮ್ಮಣ್ಣ ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಬಂದಾ ಬಂದಾ ಸಣ್ ತಮ್ಮಣ್ಣ ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಕಾಸಿನ ಸಾಲು ಕಳ್ ಜೇಬಲ್ಲಿ ಚಿನ್ನಿ ದಾಂಡು ಎಡಬಲದಲ್ಲಿ
ಟೀಕು ಟಾಕಾಗಿ ಬಂದಾ ಬಂದಾ ಸಣ್ ತಮ್ಮಣ್ಣ
ಬಂದಾ ಬಂದಾ ಸಣ್ ತಮ್ಮಣ್ಣ ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಗಂಡು : ಅಮ್ಮನ ಹಾರ ಉಬ್ಬಿದ ಎದೆಗೆ ಬಿದಿರಿನ ಕೊಳಲು ಗೆಜ್ಜೆಯ ಜೊತೆಗೆ
ಹದ್ದಿನ ರಕ್ಕೆ ಎತ್ತಿದ ತಲೆಗೆ ಜೋಡಿ ಜೋಡು ಹೊತ್ತಿದ ನೆಲಕೆ
ಬಂದಾ ಬಂದಾ ಸಣ್ ತಮ್ಮಣ್ಣ ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಬಂದಾ ಬಂದಾ ಸಣ್ ತಮ್ಮಣ್ಣ ಪಟ್ಟಾಸು ಪೆಟ್ಲು ಒಳ ಜೇಬಲ್ಲಿ.. ಹ್ಹಾಂ ..
ಬಂದಾ ಬಂದಾ ಸಣ್ ತಮ್ಮಣ್ಣ ಪಟ್ಟಾಸು ಪೆಟ್ಲು ಒಳ ಜೇಬಲ್ಲಿ.. ಹ್ಹಾಂ ..
ಗಂಡು : ಮೊದಲನೇ ಮಾತು ಹೂವಿನ ಮುತ್ತು ಎರಡನೇ ಮಾತು ಒಲವಿನ ಸೊತ್ತು
ಮರು ಮಾತಾಡಲು ಸಿಡಿಲು ಗುಡುಗು ಕೊನೆ ಮಾತಾಡಲು ಆಲಿಯ ಕಲ್ಲು ಮಳೆ
ಬಂದಾ ಬಂದಾ ಸಣ್ ತಮ್ಮಣ್ಣ ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಬಂದಾ ಬಂದಾ ಸಣ್ ತಮ್ಮಣ್ಣ ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಬಂದಾ ಬಂದಾ ಸಣ್ ತಮ್ಮಣ್ಣ ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಕಾಸಿನ ಸಾಲು ಕಳ್ ಜೇಬಲ್ಲಿ ಚಿನ್ನಿ ದಾಂಡು ಎಡಬಲದಲ್ಲಿ
ಟೀಕು ಟಾಕಾಗಿ ಬಂದಾ ಬಂದಾ ಸಣ್ ತಮ್ಮಣ್ಣ
ಬಂದಾ ಬಂದಾ ಸಣ್ ತಮ್ಮಣ್ಣ ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಕೋರಸ್ : ಬಾರೋ ಬಾರೋ ಸಿಡಿಲಿನ ಮರಿಯೇ ತೋರೋ ಸಿರಿಮೊಗೆ ತುಂಟರ ಗುರುವೇ
ಟೀಕು ಟಾಕಾಗಿ ಬಂದಾ ಬಂದಾ ಸಣ್ ತಮ್ಮಣ್ಣ
ಬಂದಾ ಬಂದಾ ಸಣ್ ತಮ್ಮಣ್ಣ ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಕೋರಸ್ : ಬಾರೋ ಬಾರೋ ಸಿಡಿಲಿನ ಮರಿಯೇ ತೋರೋ ಸಿರಿಮೊಗೆ ತುಂಟರ ಗುರುವೇ
ಬಾರೋ ಬಾರೋ ಸಿಡಿಲಿನ ಮರಿಯೇ ತೋರೋ ಸಿರಿಮೊಗೆ ತುಂಟರ ಗುರುವೇ
ಬಾರೋ ಬಾರೋ ಸಿಡಿಲಿನ ಮರಿಯೇ ತೋರೋ ಸಿರಿಮೊಗೆ ತುಂಟರ ಗುರುವೇ
ತೋರೋ ಸಿರಿಮೊಗೆ ತುಂಟರ ಗುರುವೇ
ತೋರೋ ಸಿರಿಮೊಗೆ ತುಂಟರ ಗುರುವೇ
ಕರ್ಣನ ಸಂಪತ್ತು ( ೨೦೦೫) - ಅಂಬಿಯ ಕಾಣಲು ಬಂದು ಅಂಬಲಿ ದುಡ್ಡು ಹೋಯಿತು
ಸಂಗೀತ : ಗುರು ಸಾಹಿತ್ಯ : ಎಂ.ಏನ್.ವ್ಯಾಸರಾವ್ ಗಾಯನ : ಎಸ್.ಪಿ.ಬಿ, ಗುರು, ರವಿ
ಅಂಬಿಯ ಕಾಣಲು ಬಂದು ಅಂಬಲಿ ದುಡ್ಡು ಹೋಯಿತು
ಅಂಬಿಯ ಕಾಣಲು ಬಂದು ಅಂಬಲಿ ದುಡ್ಡು ಹೋಯಿತು
ದೊಂಬಿಯ ನಗರದಲಿಂದು ಅಂಬೋ ಅನ್ನೋ ಹಂಗಾಯಿತು
ರೆಬೆಲ್ ಸ್ಟಾರ್ ಬಾರೋ ಸೂಪರ್ ಸ್ಟಾರ್ ಅಯ್ಯೋ ಟ್ರಬಲ್ ಸ್ಟಾರ್ ತುಂಬಾ ಟ್ರಬಲ್ ಸ್ಟಾರ್

ಈ ಜನರ ಕಪಟಕೆ ಸಿಕ್ಕುತ ನಿನ್ನನೇ ನೆನೆವಾಗ
ಎಲ್ಲಿರುವೆ ನಂಬಿದ ಗೆಳೆಯರು ಸಂಕಟ ಪಡುವಾಗ
ಜಗವೇ ಮೋಸ ತುಂಬಿದೆ ಅಂಬರೀಶ ವಂಚನೆ ಗುರುವೇ ಮೀರಿದೆ ಪ್ರಾಣೇಶ
ಕರುಣಾಕರಣೆ ಕಂಟಕಹರನೇ ಕಾಪಾಡು ಈ ಭಕ್ತರ
ಎಲ್ಲಿರುವೆ ನಂಬಿದ ಗೆಳೆಯರು ಸಂಕಟ ಪಡುವಾಗ
ಜಗವೇ ಮೋಸ ತುಂಬಿದೆ ಅಂಬರೀಶ ವಂಚನೆ ಗುರುವೇ ಮೀರಿದೆ ಪ್ರಾಣೇಶ
ಕರುಣಾಕರಣೆ ಕಂಟಕಹರನೇ ಕಾಪಾಡು ಈ ಭಕ್ತರ
ಅಂಬಿಯ ಕಾಣಲು ಬಂದು ಅಂಬಲಿ ದುಡ್ಡು ಹೋಯಿತು
ದೊಂಬಿಯ ನಗರದಲಿಂದು ಅಂಬೋ ಅನ್ನೋ ಹಂಗಾಯಿತು
ದೊಂಬಿಯ ನಗರದಲಿಂದು ಅಂಬೋ ಅನ್ನೋ ಹಂಗಾಯಿತು
ರೆಬೆಲ್ ಸ್ಟಾರ್ ಬಾರೋ ಸೂಪರ್ ಸ್ಟಾರ್ ಅಯ್ಯೋ ಟ್ರಬಲ್ ಸ್ಟಾರ್ ತುಂಬಾ ಟ್ರಬಲ್ ಸ್ಟಾರ್
ದಿನದಿನವು ನಿನ್ನನು ಕಾಣುವ ಹಂಬಲ ಇರುವಾಗ
ಪ್ರತಿಕ್ಷಣವೂ ಎದೆಯಲಿ ಕಾತರ ಹತ್ತಿಸಿ ಉರಿವಾಗ
ಲೋಕವೇ ನಮ್ಮನ್ನೂ ನೂಕಲಿ ಹೆದರೋಲ್ಲ
ಜೀವವೇ ಹೋದರೂ ನಿನ್ನನೂ ಮರೆಯೋಲ್ಲ
ಎದೆ ಮಂದಿರದಿ ದಿನ ಪೂಜಿಸುವ ನೀನೇನೆ ಆ ದೇವರು ಸ್ವಾಮಿ
ಅಂಬಿಯ ಕಾಣಲು ಬಂದು ಅಂಬಲಿ ದುಡ್ಡು ಹೋಯಿತುಎದೆ ಮಂದಿರದಿ ದಿನ ಪೂಜಿಸುವ ನೀನೇನೆ ಆ ದೇವರು ಸ್ವಾಮಿ
ದೊಂಬಿಯ ನಗರದಲಿಂದು ಅಂಬೋ ಅನ್ನೋ ಹಂಗಾಯಿತು
ರೆಬೆಲ್ ಸ್ಟಾರ್ ಬಾರೋ ಸೂಪರ್ ಸ್ಟಾರ್ ಅಯ್ಯೋ ಟ್ರಬಲ್ ಸ್ಟಾರ್ ತುಂಬಾ ಟ್ರಬಲ್ ಸ್ಟಾರ್
ರೆಬೆಲ್ ಸ್ಟಾರ್ ಬಾರೋ ಸೂಪರ್ ಸ್ಟಾರ್ ಅಯ್ಯೋ ಟ್ರಬಲ್ ಸ್ಟಾರ್ ತುಂಬಾ ಟ್ರಬಲ್ ಸ್ಟಾರ್
No comments:
Post a Comment