1376. ಕರ್ತವ್ಯ (೧೯೮೫)




ಕರ್ತವ್ಯ ಚಲನಚಿತ್ರದ ಹಾಡುಗಳು
  1. ಭೂಮಿಯೂ ಹೇಳಿದೆ ಆಗಸ ಹೇಳಿದೆ 
  2. ಝನ್ ಝನ್ ಝನ್ ನಾದವೂ 
  3. ಅಮ್ಮಮ್ಮಾ ರಾತ್ರಿಯಲ್ಲಿ 
  4. ಹತ್ತಿರ ಇದ್ದರೇ ಎಂಥಾ ಸುಖ 
  5. ಏನೇ ಆಗಲೀ ನನ್ನ ಯಾರೇ ಎದುರಿಸಲೀ 
ಕರ್ತವ್ಯ (೧೯೮೫) - ಭೂಮಿಯೂ ಹೇಳಿದೆ ಆಗಸ ಹೇಳಿದೆ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ 

ಗಂಡು : ಭೂಮಿಯೂ ಹೇಳಿದೇ ಆಗಸ ಹೇಳಿದೇ ಎಂದಿಗೂ ಹೀಗೆಯೇ ಬಾಳಿ ಎಂದಿದೇ ..ಬಾಳಿ ಎಂದಿದೇ ..  
ಹೆಣ್ಣು : ಭೂಮಿಯೂ ಹೇಳಿದೇ ಆಗಸ ಹೇಳಿದೇ ಎಂದಿಗೂ ಹೀಗೆಯೇ ಬಾಳಿ ಎನುತಿದೆ ಬಾಳಿ ಎನುತಿದೆ 

ಗಂಡು : ಸಾವಿರ ಜನುಮವೇ ಬರಲೀ ಬಿಡದಿ.. ಬೆಸುಗೆಯೂ .. 
            ಎಂದಿಗೂ ಕಾಣದ ಸುಮವೂ.. ಇವರ ಒಸಗೆಯೋ.. 
ಹೆಣ್ಣು : ಸರಸವೂ ಪ್ರತಿಕ್ಷಣ ಹೊಸತನ ಅನುದಿನ 
          ಸರಸವೂ ಪ್ರತಿಕ್ಷಣ ಹೊಸತನ ಅನುದಿನ 
          ಕೋಗಿಲೇ ಹಾಡಿದೇ ದುಂಬಿಯೂ ಹಾಡಿದೇ ಅಂದದ ಜೋಡಿಯ ನೋಡಿ ಎಂದಿದೇ .. ನೋಡಿ ಎಂದಿದೇ .. 

ಹೆಣ್ಣು : ಕಣ್ಣಲೀ ಪ್ರೇಮದ ಕವಿತೇ .. ಇವರೂ ಬರೆದರೂ.. 
          ಪ್ರಣಯದ ಕಾವ್ಯಾವ  ರಚಿತೇ ಧರೆಗೇ ಬಂದರೂ .. 
ಗಂಡು : ಕಾಮನ ಬಾಣದ ಚೆಲುವಿನ ಹೂವುಗಳೂ .. 
            ಕಾಮನ ಬಾಣದ ಚೆಲುವಿನ ಹೂವುಗಳೂ .. 
            ಮಲ್ಲಿಗೇ .. ಸಂಪಿಗೇ.. ಕಂಪನೂ ಚೆಲ್ಲಿದೆ ಪ್ರೇಮದ ಜೋಡಿಗೇ ಶುಭವ ಕೋರಿದೇ..  ಶುಭವ ಕೋರಿದೇ..  
ಹೆಣ್ಣು : ಭೂಮಿಯೂ ಹೇಳಿದೇ 
ಗಂಡು : ಆಗಸ ಹೇಳಿದೇ 
ಇಬ್ಬರು : ಎಂದಿಗೂ ಹೀಗೆಯೇ ಬಾಳಿ ಎನುತಿದೆ...  ಬಾಳಿ ಎನುತಿದೆ 
------------------------------------------------------------------------------------------------

ಕರ್ತವ್ಯ (೧೯೮೫) - ಝನ್ ಝನ್ ಝನ್ ನಾದವೂ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ 

ಹೆಣ್ಣು : ಆಆಆ.. ಆಆಆ.. ಆಆಆ.. ಆಆಆ.. ಆಆಆ.. 
ಗಂಡು : ಝಣ ಝಣ ಝಣ ನಾದವೂ.. 
           ಝಣ ಝಣ ಝಣ ನಾದವೂ ನಿನ್ನ ಹೆಜ್ಜೆಗಳ ಗೆಜ್ಜೆಯಲಿ ಹೊಮ್ಮುತ್ತಿರುವಾಗ 
           ಸ್ವರಸ್ವರಗಳೂ ಜೋತೆಸೇರಿ ಕುಣಿದಿವೇ 
           ಝಣ ಝಣ ಝಣ ನಾದವೂ ನಿನ್ನ ಹೆಜ್ಜೆಗಳ ಗೆಜ್ಜೆಯಲಿ ಹೊಮ್ಮುತ್ತಿರುವಾಗ 
           ಸ್ವರಸ್ವರಗಳೂ ಜೋತೆಸೇರಿ ಕುಣಿದಿವೇ 
           ಝಣ ಝಣ ಝಣ ನಾದವೂ.. 

ಕೋರಸ್ : ತನನಂ ತನನಂ ತನನನನಾನ  ತನನನನಾನ ತನನನನಾನ 
                ತನನನನಾನ  ತನನನ ತನನನ ತನನನ ತನನನ

ಗಂಡು : ನಾಟ್ಯಮಯೂರೀ ವಯ್ಯಾರಿ ಸುಮಾರೀ ..  ಕೋಮಲೆ ಚಂಚಲೇ ಪ್ರೇಮಚಕೋರಿ 
            ನಾಟ್ಯಮಯೂರೀ ವಯ್ಯಾರಿ ಸುಮಾರೀ ..  ಕೋಮಲೆ ಚಂಚಲೇ ಪ್ರೇಮಚಕೋರಿ 
            ರತಿಯೇ ಧರೆಗಿಳಿದಂತೇ ..  ನಾಟ್ಯ ಸರಸ್ವತಿಯಂತೇ.. ಊರ್ವಶಿ ನಾಚಿಸುವಂತೇ .. 
            ಆಡುವ ನಿನ್ನನೂ ಕಂಡೇನೂ ಸೋತೇನೂ 
ಹೆಣ್ಣು : ಝಣ ಝಣ ಝಣ ನಾದವೂ ನನ್ನ ಹೆಜ್ಜೆಗಳ ಗೆಜ್ಜೆಯಲಿ ಹೊಮ್ಮುತ್ತಿರುವಾಗ 
           ಸ್ವರಸ್ವರಗಳೂ ಜೋತೆಸೇರಿ ಕುಣಿದಿವೇ 
           ಝಣ ಝಣ ಝಣ ನಾದವೂ.. 

ಕೋರಸ್ : ಆಆಆ... ಆಆಆ.. ತನನನನ  ತನನನನ  ತನನನನ  
               ಆಆಆ... ಆಆಆ.. ತನನನನ  ತನನನನ  ತನನನನ  

ಹೆಣ್ಣು : ದೇವಕುಮಾರ ಸುಧೀರ ಗಂಭೀರ ಮಾರಮನೋಹರ ಬಾ ಸುಕುಮಾರ 
          ದೇವಕುಮಾರ ಸುಧೀರ ಗಂಭೀರ ಮಾರಮನೋಹರ ಬಾ ಸುಕುಮಾರ 
          ಗಾನಗಂಧರ್ವನಂತೇ.. ತುಂಬುರ ನಾರದರಂತೇ  ಶಾರದೇ ಮೈಮರೆವಂತೇ  
          ಹಾಡಿದ ನಿನ್ನನೂ ಕಂಡೇನೂ ಸೋತೇನೂ 
ಗಂಡು  : ಝಣ ಝಣ ಝಣ ನಾದವೂ 
ಹೆಣ್ಣು: ನನ್ನ ಹೆಜ್ಜೆಗಳ ಗೆಜ್ಜೆಯಲಿ ಹೊಮ್ಮುತ್ತಿರುವಾಗ 
ಗಂಡು : ಸ್ವರಸ್ವರಗಳೂ ಜೋತೆಸೇರಿ ಕುಣಿದಿವೇ ಝಣ ಝಣ ಝಣ ನಾದವೂ.. 
-----------------------------------------------------------------------------------------------

ಕರ್ತವ್ಯ (೧೯೮೫) - ಅಮ್ಮಮ್ಮಾ ರಾತ್ರಿಯಲ್ಲಿ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಾಣಿಜಯರಾಂ , ಪಿ.ಸುಶೀಲಾ 

ಅಮ್ಮಮ್ಮಾ ರಾತ್ರಿಯಲೀ ಕೆನ್ನೆಯನೂ ಚಿವುಟಿದನೇ ಸಂದೇಹದೇ ಮುದ್ದಾಡಿದ 
ಬೆಳಗಾಗಲೂ ಕದ್ದೋಡಿದ 
ಅವ್ ಯಾರೇ..  ಹೂಂ..  ಯಾರೇ ಹೇಳೂ .. ಹೇಳಲಾ.. ಹೇಳಬಿಡ್ತೀನಿ.. ಅವನೂ ನಮ್ಮಣ್ಣಾ .. 
ಅಬ್ಬಬ್ಬಾ ಹಗಲಲ್ಲೇ ಚಿಲಕವನೂ ಹಾಕೀದನೂ ಯಾರಿಲ್ಲವೇ ಬಾ ಎಂದನು 
ಕೈಯ್ಯ ಹಿಡಿದನು ಬರಸೆಳೆದನೂ .. 
ಯಾರೇ ಹೇಳೂ.. ನಂಗ್ ಗೊತ್ತೇ.. ಅವನೂ ನಮ್ಮ ಅಣ್ಣ.. 

ತೋಳಿಂದ ಮೈ ಬಳಸಿದ.. ಈ ತನುವಲ್ಲೀ ಬಿಗಿದಪ್ಪಿದ (ಅಹ್ಹಹ)
ಸಿಹಿಯಾಗಿ ಮಾತಾಡಿದ ತುಟಿಗೇ ಸಿಹಿಯೊಂದೂ ಪಪ್ಪೀ ನೀಡಿದ.. (ಉಹೂಂಹೂಹೂ)
ಸಿಗ್ಗೆಂದ ಮುದ್ದಾಗಿ ಮೊಗವೆಲ್ಲಾ ಕೆಂಪಾಯ್ತು ಅವನಂತೇ ಒಗಟಾಗ ನಿನ್ನಾಣೆ ಸಾಕಾಯ್ತು ... 
ಅಮ್ಮಮ್ಮಾ ಆ ರಾತ್ರಿಯಲೀ ಕೆನ್ನೆಯನೂ ಚಿವುಟಿದನೇ ಸಂದೇಹದೇ ಮುದ್ದಾಡಿದ 
ಬೆಳಗಾಗಲೂ ಕದ್ದೋಡಿದ 
  
ಕಣ್ಣಲ್ಲೇ ಕಣ್ಣ ಮೀಟಿದ ಒಮ್ಮೇ .. ಮೆದುವಾಗಿ ಮೈ ಸವರಿದ (ಆ ಹ್ಹಾ ಹ್ಹಾ ಹ್ಹಾ ಹ್ಹಾ..)
ಹಿತವಾದ ಮತ್ತೇರಲೂ ನನ್ನ ಮಗುವಂತೇ ಮೇಲೆತ್ತಿದ.. (ಹೋಯ್  ಹೋಯ್  ಹೋಯ್  )
ಮುಂದೆಲ್ಲಾ ಕನಸಂತೇ ಬಾನಲ್ಲಿ ಮುಗಿಲಂತೇ ತೇಲಾಡಿ ಬಂದಂತೇ ಕೊನೆಗೊಮ್ಮೆ ನಿಶ್ಚಿಂತೇ..  
ಅಬ್ಬಬ್ಬಾ ಹಗಲಲ್ಲೇ ಚಿಲಕವನೂ ಹಾಕೀದನೂ ಯಾರಿಲ್ಲವೇ ಬಾ ಎಂದನು 
ಕೈಯ್ಯ ಹಿಡಿದನು ಬರಸೆಳೆದನೂ .. 
-----------------------------------------------------------------------------------------------

ಕರ್ತವ್ಯ (೧೯೮೫) - ಹತ್ತಿರ ಇದ್ದರೇ ಎಂಥಾ ಸುಖ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ವಾಣಿಜಯರಾಂ, ರಮೇಶ 

ಹೆಣ್ಣು : ಹತ್ತಿರ ಇದ್ದರೇ ಎಂಥ ಸುಖ.. (ಅಹ..ಅಹ್ಹಹಾಹಾ..)
          ಮುಟ್ಟತಲಿದ್ದರೇ ಎಂಥ ಸುಖ..(ಅಹ..ಅಹ್ಹಹಾಹಾ..)  
          ಚೆಲುವನೇ ಸನಿಹವೂ ಎಂಥ ಸುಖ ಒಲವಿನ ನುಡಿಗಳೂ ಎಂಥ ಸುಖ 
          ನಿನ್ನೇ ಹಾಗೇ ಮೊನ್ನೇ ಹಾಗೇ ಇಂದೂ ಕೂಡ ನೀನೂ ನನ್ನ (ಹೋಯ್ ಹೋಯ್ ಹೋಯ್ ಹೋಯ್  )   
          ಹತ್ತಿರ ಇದ್ದರೇ ಎಂಥ ಸುಖ.. (ಅಹ..ಅಹ್ಹಹಾಹಾ..)
          ಮುಟ್ಟತಲಿದ್ದರೇ ಎಂಥ ಸುಖ..(ಅಹ..ಅಹ್ಹಹಾಹಾ..)  
          ಚೆಲುವನೇ ಸನಿಹವೂ ಎಂಥ ಸುಖ ಒಲವಿನ ನುಡಿಗಳೂ ಎಂಥ ಸುಖ 
          ನಿನ್ನೇ ಹಾಗೇ ಮೊನ್ನೇ ಹಾಗೇ ಇಂದೂ ಕೂಡ ನೀನೂ ನನ್ನ (ಹೋಯ್ ಹೋಯ್ ಹೋಯ್ ಹೋಯ್  )   

ಗಂಡು : ಕಾಣೇನೂ ಇಂಥಾ ... ಓಓಓಓ ... ರೂಪಸಿಯನ್ನ .. 
            ಬಿಡುವೇನೇ ಇಂಥಾ.. ಓಓಓಓಓ ಊರ್ವಶಿಯೆಂದೂ 
ಹೆಣ್ಣು :  ಆಸೆಯೂ ಚಿಮ್ಮಲೀ ಏಕೇ .. ಕಣ್ಣಲೀ ಕೊಲ್ಲುವೇ ಏಕೇ .. 
           ಆಸೆಯೂ ಚಿಮ್ಮಲೀ ಏಕೇ .. ಕಣ್ಣಲೀ ಕೊಲ್ಲುವೇ ಏಕೇ .. 
           ಮನದಲೀ ನವಿತಿರು ಕಾಡುತಿದೇ  ರಸಿಕನ ಪ್ರೇಮವ ಕೇಳುತಿದೇ .. 
          ನಿನ್ನೇ ಹಾಗೇ ಮೊನ್ನೇ ಹಾಗೇ ಇಂದೂ ಕೂಡ ನೀನೂ ನನ್ನ (ಹೋಯ್ ಹೋಯ್ ಹೋಯ್ ಹೋಯ್  )   
          ಹತ್ತಿರ ಇದ್ದರೇ ಎಂಥ ಸುಖ.. (ಅಹ..ಅಹ್ಹಹಾಹಾ..)
          ಮುಟ್ಟುತಲಿದ್ದರೇ ಎಂಥ ಸುಖ..(ಅಹ..ಅಹ್ಹಹಾಹಾ..)  

ಗಂಡು : ಮಾತಲೇ ಏಕೇ ಓಓಓಓಓ.. ಕಾಲವ ಕಳೆವೇ.. 
            ಕೂಗಿದರೊಮ್ಮೆ... ಓಓಓಓಓ ಈಗಲೇ ಬರುವೇ .. 
ಹೆಣ್ಣು : ಮಾತುಗಳೇತಕೆ ಇಂದೂ ಸೋತೇನೇ ಇನಿಯನೇ ನಾನೂ   
          ಮಾತುಗಳೇತಕೆ ಇಂದೂ ಸೋತೇನೇ ಇನಿಯನೇ ನಾನೂ    
          ಇನಿಯಲಿ ಬಯಕೆಯ ನುಡಿಯುವೇನೂ ಸರಸದ ಸುಖವನು ಪಡೆಯುವೇನು 
          ನಿನ್ನೇ ಹಾಗೇ ಮೊನ್ನೇ ಹಾಗೇ ಇಂದೂ ಕೂಡ ನೀನೂ ನನ್ನ.. ಆ  (ಹೋಯ್ ಹೋಯ್ ಹೋಯ್ ಹೋಯ್  )   
          ಆ.. ಹತ್ತಿರ ಇದ್ದರೇ ಎಂಥ ಸುಖ.. (ಅಹ..ಅಹ್ಹಹಾಹಾ..)
          ಹೂಂ .. ಮುಟ್ಟತಲಿದ್ದರೇ ಎಂಥ ಸುಖ..(ಒಹೋ.. ಹೋ ಓಹೋ ..)  
          ಚೆಲುವನೇ ಸನಿಹವೂ ಎಂಥ ಸುಖ ಒಲವಿನ ನುಡಿಗಳೂ ಎಂಥ ಸುಖ 
          ನಿನ್ನೇ ಹಾಗೇ ಮೊನ್ನೇ ಹಾಗೇ ಇಂದೂ ಕೂಡ ನೀನೂ ನನ್ನ (ಹೋಯ್ ಹೋಯ್ ಹೋಯ್ ಹೋಯ್  )   
-----------------------------------------------------------------------------------------------

ಕರ್ತವ್ಯ (೧೯೮೫) - ಏನೇ ಆಗಲೀ ನನ್ನ ಯಾರೇ ಎದುರಿಸಲೀ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, 

ಏನೇ ಆಗಲೀ ... ನನ್ನ ಯಾರೇ ಏದುರಿಸಲೀ .. 
ಏನೇ ಆಗಲೀ ... ನನ್ನ ಯಾರೇ ಏದುರಿಸಲೀ .. 
ಇಟ್ಟ ಹೆಜ್ಜೆಯ ಹಿಂದಕೇ ಈಡೇನು ದಿಟ್ಟತನವನೂ ಮರೆತೂ ಓಡೇನು .. 
ಏನೇ ಆಗಲೀ ... ನನ್ನ ಯಾರೇ ಏದುರಿಸಲೀ .. 
(ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. )

(ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. )
ಸ್ವಂತ ತಂಗಿಯ ಶವವ ನೋಡಿದೇ .. (ಆಆಆಆಆಆ.. )
ತಂದೆತಾಯಿಯ ಕೊಲೆಯ ನೋಡಿದೇ .. 
ಇಂಥ ಘೋರವ ನೋಡಿದ ಮೇಲೂ ಎದೆಯೂ ಒಡೆಯದೇ .. ನಾನು ಬದುಕಿದೇ .. 
ಯಾಕೇ .. ಯಾಕೇ .. ಸೇಡು.. ಸೇಡು ... ಸೇಡು 
ಏನೇ ಆಗಲೀ ... ನನ್ನ ಯಾರೇ ಏದುರಿಸಲೀ .. 
ಇಟ್ಟ ಹೆಜ್ಜೆಯ ಹಿಂದಕೇ ಈಡೇನು ದಿಟ್ಟತನವನೂ ಮರೆತೂ ಓಡೇನು .. 
 
(ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ) 
(ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. ಆಆಆ.. )
ದೇವರೆನ್ನುತ ಹಾಲನೆರೆದರೂ.. (ಓಓಓಓಓಓಓ) ಭೂಮಿ ನಿಂತಲಿ ಪೂಜೆಗೈದರೂ   
ನಿನ್ನ ಮನಸೂ ಕಲ್ಲಾಗೇ ಉಳಿಯಿತೇ.. ಕರುಣೆ ತೋರೇಯಾ .. ಮಾತನಾಡೆಯಾ... 
ಇಲ್ಲಾ.. ನೀನೂ ಮಾತಡಲ್ಲ..  ನಂಗ್ ಗೊತ್ತೂ.. ನೀನೂ ಕಲ್ಲೂ .. ಕಾಡು ಕಲ್ಲೂ .. 
ಏನೇ ಆಗಲೀ ... ನನ್ನ ಯಾರೇ ಏದುರಿಸಲೀ .. 
ಇಟ್ಟ ಹೆಜ್ಜೆಯ ಹಿಂದಕೇ ಈಡೇನು ದಿಟ್ಟತನವನೂ ಮರೆತೂ ಓಡೇನು .. 
ಏನೇ ಆಗಲೀ ... ನನ್ನ ಯಾರೇ ಏದುರಿಸಲೀ .. 
-------------------------------------------------------------------------------------------------

No comments:

Post a Comment