1287. ಕೆಂಪು ಸೂರ್ಯ (೧೯೯೦)

ಕೆಂಪು ಸೂರ್ಯ ಚಲನ ಚಿತ್ರದ ಹಾಡುಗಳು 
  1. ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕುಣಿಯೋಣ ಬಾ 
  2. ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ 
  3. ಇಂಥಾ ಗಂಡೇ ಬೇಕು ಎಂದು ನೋಡಿದೆ 
  4. ದೇವರು ಬರೆವಾ ಕಥೆಯಲ್ಲಿ ಸುಖವೆಲ್ಲಿದೇ 
ಕೆಂಪು ಸೂರ್ಯ (೧೯೯೦) - ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕುಣಿಯೋಣ ಬಾ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ., ಚಿತ್ರಾ, ಕೋರಸ್

ಗಂಡು : ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕುಣಿಯೋಣ ಬಾ ಗೆಜ್ಜೆ ಕಟ್ಟಿ ಕುಣಿಯೋಕೆ ಲಜ್ಜೆ ಏಕೆ ಬಾ 
            ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕುಣಿಯೋಣ ಬಾ ಗೆಜ್ಜೆ ಕಟ್ಟಿ ಕುಣಿಯೋಕೆ ಲಜ್ಜೆ ಏಕೆ ಬಾ 

ಗಂಡು : ಊರರೆಲ್ಲ ಇಂದು ಹೊಸ ಹಬ್ಬ ಬಂದಂತೇ
ಹೆಣ್ಣು : ಮನವನ್ನು ಕಾಡುತಿರುವ ಚಿಂತೆ ಮರೆತಂತೇ
ಗಂಡು : ಎಂದೂ ಕಾಣದಂಥ ಹೊಸ ಜನರ ಕಂಡಂತೆ
ಹೆಣ್ಣು : ಮನದಲ್ಲಿ ನಿಜವಾದ ಸ್ನೇಹ ಬಂದಂತೆ
ಗಂಡು : ಹೊಸ ಸಂತೋಷ
ಕೋರಸ್ : ಮನವ ಬೆರೆತು ಕುಣಿಸುವಂಥ ಸಂತೋಷ
ಹೆಣ್ಣು : ಹೊಸ ಉಲ್ಲಾಸ
ಇಬ್ಬರು : ಬಾಳಲ್ಲಿ ಬಂದಾಗ ನಾವೆಲ್ಲ ಒಂದಾಗಿ ತಕ್ ತಕ್ ತಕ್ ಥೈ
ಗಂಡು : ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕುಣಿಯೋಣ ಬಾ ಗೆಜ್ಜೆ ಕಟ್ಟಿ ಕುಣಿಯೋಕೆ ಲಜ್ಜೆ ಏಕೆ ಬಾ 

ಹೆಣ್ಣು : ಒಂಟಿಯಾಗಿ ಬಂದೆ ನಿನ್ನ ಜೋಡಿ ನಾನಾದೆ 
ಗಂಡು : ಮನಸಾರ ನಾ ಮೆಚ್ಚಿ ಬಂದೆ ನಿನ್ ಹಿಂದೆ ಹ್ಹಾಂ !
ಹೆಣ್ಣು : ಹೇಗೋ ಏನೋ ಇಂದು ಹೊಸ ಬಾಳ ನಾ ಕಂಡೆ 
ಗಂಡು : ಒಲವಿಂದ ನಿನ್ನಲ್ಲಿ ನಾನೇ ಒಂದಾದೆ 
ಹೆಣ್ಣು : ಬಾರೋ ನನ್ನೋನೇ 
ಕೋರಸ್ : ಮನವ ಸೆಳೆದು ಕುಣಿಸಿ ನಗುವ ಹುಡುಗಿ 
ಗಂಡು : ನಿನ್ನ ಬಿಟ್ಟೆನೇ 
ಕೋರಸ್ : ಮನವ ಸೆಳೆದು ನಲಿವ ಚೆಲುವ ನಿನ್ನೊನ್ನೇ 
ಹೆಣ್ಣು : ಬಾರೋ ನನ್ನೋನೇ ..             ಗಂಡು : ನಿನ್ನ ಬಿಟ್ಟೋನೇ 
ಇಬ್ಬರು : ನಿನ್ನನ್ನೂ ಗೆದ್ದಾಯ್ತು ಆನಂದ ಕಂಡಾಯ್ತು ಥೈ ಥೈ .. 
ಗಂಡು : ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕುಣಿಯೋಣ ಬಾ ಗೆಜ್ಜೆ ಕಟ್ಟಿ ಕುಣಿಯೋಕೆ ಲಜ್ಜೆ ಏಕೆ ಬಾ 
            ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕುಣಿಯೋಣ ಬಾ ಗೆಜ್ಜೆ ಕಟ್ಟಿ ಕುಣಿಯೋಕೆ ಲಜ್ಜೆ ಏಕೆ ಬಾ 
--------------------------------------------------------------------------------------------------------

ಕೆಂಪು ಸೂರ್ಯ (೧೯೯೦) - ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ., ಚಿತ್ರಾ,

ಗಂಡು : ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
            ನಿನ್ನ ಈ ಕೆನ್ನೆ ಕೆಂಪಾಗಿದೆ ಮುತ್ತೊಂದಾ ತಾ ಎಂದಿದೇ ..
ಹೆಣ್ಣು : ನಿನ್ನ ಪ್ರೇಮದಲಿ ಸವಿಮಾತಿನಲಿ ನನ್ನಾ ಮನಸು ತೇಲಿ ಹೋಗಿದೆ

ಗಂಡು : ಅಧರದಾ ಕೆಂಪು ಬಯಸಲು ತಂಪು  ಈ ಸಂಜೆ ಮೈಯಲ್ಲಿ ಇಂಥ ಬಿಸಿ ಏಕೆ
ಹೆಣ್ಣು : ನಿನ್ನೊಲವಿಗೆ ಈ ಸರಸಕೆ ನನ್ನ ಸೇರುವಾಸೆಗೆ
ಗಂಡು : ಮುಗಿಯದಾ ದಾಹ ಹೊಸೆದಳು ಮೋಹ ನನ್ನಲ್ಲಿ ಬಂಡಿಗ ಕಾಡುತಿದೆ ಏಕೆ
ಹೆಣ್ಣು : ಏಕಾಂತದಿ ನೀ ಹಾಡಿದ ಈ ಪ್ರೇಮ ಗೀತೆಗೆ
ಗಂಡು : ಚಿನ್ನದಂತ ನಿನ್ನ ಮಾತು ಇಂಪಾಗಿದೆ
            ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
            ನಿನ್ನ ಈ ಕೆನ್ನೆ ಕೆಂಪಾಗಿದೆ ಮುತ್ತೊಂದಾ ತಾ ಎಂದಿದೇ ..

ಹೆಣ್ಣು : ಹೊಸ ಕಥೆ ಈಗ ಬರೆಯುವೆ ನಾನು ನನ್ನಾಣೆ ಅದರಲ್ಲಿ ನಾಯಕನು ನೀನೇ 
ಗಂಡು : ನೀ ಬರೆಯುವ ಆ ಕಥೆಯಲ್ಲಿ ನನ ಜೋಡಿ ನೀ ತಾನೇ 
ಹೆಣ್ಣು : ಒಲಿದಿಹ ನಲ್ಲ ಬಯಸಿದ ಮೇಲೆ ಬೇಡೆಂದು ಹೇಳೋದು ಹೇಗೆ ನೀ ಹೇಳು 
ಗಂಡು : ನೀ ಹೇಳದೇ ನಾ ಬಿಡುವೇನೇ ನೀನೆಂದೂ ನನ್ನವಳೂ 
ಹೆಣ್ಣು : ತುಂಟ ನಿನ್ನ ಆಸೆ ಎಂಥ ಸೊಂಪಾಗಿದೆ 
            ಕೆಂಪು ಸೂರ್ಯನ ಕೆಂಪು ರಂಗು ಚೆಲ್ಲಿದೆ
            ನಿನ್ನ ಈ ಕೆನ್ನೆ ಕೆಂಪಾಗಿದೆ ಮುತ್ತೊಂದಾ ತಾ ಎಂದಿದೇ ..
ಗಂಡು : ನಿನ್ನ ಪ್ರೇಮದಲಿ ಸವಿಮಾತಿನಲಿ ನನ್ನಾ ಮನಸು ತೇಲಿ ಹೋಗಿದೆ 
--------------------------------------------------------------------------------------------------------

ಕೆಂಪು ಸೂರ್ಯ (೧೯೯೦) - ಇಂಥಾ ಗಂಡೇ ಬೇಕು ಎಂದು ನೋಡಿದೆ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ., ಚಿತ್ರಾ,

ಹೆಣ್ಣು : ಇಂಥಾ ಗಂಡೇ ಬೇಕು ಎಂದು ನೋಡಿದೆ ಹುಡುಕಾಡಿದೆ ಬಯಸಿದೆ ಬಳಲಿದೆ
           ನನ್ನ ಕನಸು ಇಂದು ನಿಜವಾಗಿದೆ
ಗಂಡು : ಇಂಥ ಹೆಣ್ಣೇ ಬೇಕು ಎಂದು ನೋಡಿದೆ ಹುಡುಕಾಡಿದೇ ಬಯಸಿದೆ ಬಳಲಿದೆ
            ನನ್ನ ಕನಸೇ ಇಂದು ನಿಜವಾಗಿದೆ

ಹೆಣ್ಣು : ತಣ್ಣನೇ ನೂರು ಒಲವಿನ ಲತೆಯ ಹೃದಯದಿ ಬೆರೆಯಲು
ಗಂಡು : ನೋಟದಿ ನೀನು ಪ್ರಣಯದಾ ಕವಿತೆ ಹರುಷದಿ ಹಾಡಲೂ
ಹೆಣ್ಣು : ಬಯಕೆಯ ಹೂವು ಅರಳುತ ಈಗ ಪರಿಮಳ ಚೆಲ್ಲಲ್ಲು ನಿನ್ನನ್ನೂ ಸೇರಲೂ
ಇಬ್ಬರು : ಆನಂದ.. ಆನಂದ.. ಆನಂದ ತುಂಬಿದೆ
ಗಂಡು : ಇಂಥ ಹೆಣ್ಣೇ ಬೇಕು ಎಂದು ನೋಡಿದೆ ಹುಡುಕಾಡಿದೇ ಬಯಸಿದೆ ಬಳಲಿದೆ
            ನನ್ನ ಕನಸೇ ಇಂದು ನಿಜವಾಗಿದೆ

ಗಂಡು : ಛಳಿಯಲಿ ನಡುಗುವೇ ಏಕೆ ಬಿಸಿಯನು ತುಂಬಲೇ
ಹೆಣ್ಣು : ಮಾತಲಿ ಕಾಲ ಕಳೆಯುವೆ ಏಕೆ ಸನಿಹ ಬಾ ಈಗಲೇ
ಗಂಡು : ಕೆಣಕಲು ಹೀಗೆ ಬಿಡವೇನೇ ನಿನ್ನ ಚೆಲುವಿನಾ ಚಂಚಲೇ
ಹೆಣ್ಣು : ಕೆರಳಿಸಿ ನನ್ನ ಅಳಿಸದೇ ನಲ್ಲ ಬಳಸು ಬಾ ತೊಳಲಿ
ಇಬ್ಬರು : ಆನಂದ.. ಆನಂದ .. ಆನಂದ.. ತುಂಬಿದೆ
ಹೆಣ್ಣು : ಇಂಥಾ ಗಂಡೇ ಬೇಕು ಎಂದು ನೋಡಿದೆ ಹುಡುಕಾಡಿದೆ ಬಯಸಿದೆ ಬಳಲಿದೆ
           ನನ್ನ ಕನಸು ಇಂದು ನಿಜವಾಗಿದೆ
ಗಂಡು : ಇಂಥ ಹೆಣ್ಣೇ ಬೇಕು ಎಂದು ನೋಡಿದೆ ಹುಡುಕಾಡಿದೇ ಬಯಸಿದೆ ಬಳಲಿದೆ
            ನನ್ನ ಕನಸೇ ಇಂದು ನಿಜವಾಗಿದೆ
-------------------------------------------------------------------------------------------------------

ಕೆಂಪು ಸೂರ್ಯ (೧೯೯೦) - ದೇವರು ಬರೆವಾ ಕಥೆಯಲ್ಲಿ ಸುಖವೆಲ್ಲಿದೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ.

ದೇವರು ಬರೆವಾ ಕಥೆಯಲ್ಲಿ ಸುಖವೆಲ್ಲಿದೇ ಹಣೆಬರಹ ಗೀಚುವಾ ಉರಿವಾ ಬೆಂಕಿಯಲ್ಲಿ

ಎಲ್ಲೋ ಹುಟ್ಟಿ ಬಂದೇ ಎಲ್ಲಾ ಸಾವು ಕಂಡೇ ನಿನ್ನ ಬಾಳು ಏತಕೆ ಹೀಗಾಯಿತು
ಈ ತಾಣ ನಿನಗಿಂದು ಮನೆಯಾಯಿತು ಯಾರ ನೋಡಲೆಂದೋ ಯಾರ ಸೇರಲೊಂದೋ
ಬಂದ ನಿನ್ನ ಆಸೆಯು ಏನಾಯಿತು ಕಾಡಲ್ಲಿ ನಿನದೇಹ ಮಣ್ಣಾಯಿತು
ಸಾವಲ್ಲಿ ಚಿರ ಶಾಂತಿ ಕಂಡಾಯಿತು
ದೇವರು ಬರೆವಾ ಕಥೆಯಲ್ಲಿ ಸುಖವೆಲ್ಲಿದೇ ಹಣೆಬರಹ ಗೀಚುವಾ ಉರಿವಾ ಬೆಂಕಿಯಲ್ಲಿ

ಕಲ್ಲು ಮನಸು ಬೇಕು ಮುಳ್ಳು ತುಳಿಯಬೇಕು ಬಾಳಲಾರೆ ಎನ್ನುವಾ ಕೂಗೇತಕೆ
ನಿಜವನ್ನು ಅರಿತಾಗ ಭಯವೇತಕೆ ಏನೇ ಬಂದರೇನು ಏನೇ ಆದರೇನು
ತಾಳಲಾರೇ ಎನ್ನುವಾ ನೋವೇತಕೆ ಬದುಕೊಂದು ಹೂವಲ್ಲ ಕನಸೇತಕೆ
ಓ ಜೀವಾ ಕಣ್ಣೀರು ಇನ್ನೇತಕೇ ..
ದೇವರು ಬರೆವಾ ಕಥೆಯಲ್ಲಿ ಸುಖವೆಲ್ಲಿದೇ ಹಣೆಬರಹ ಗೀಚುವಾ ಉರಿವಾ ಬೆಂಕಿಯಲ್ಲಿ
-------------------------------------------------------------------------------------------------------

No comments:

Post a Comment