1411. ಕಿತಾಪತಿ (೧೯೮೧)





ಕಿತಾಪತಿ ಚಲನಚಿತ್ರದ ಹಾಡುಗಳು 
  1. ಸಂಜೆಯ ಹಾಡಿಗೆ ಚಂದ್ರಮಾ ಬಂದ ಹಾಂಗ್ 
  2. ಪಂಚಚಾರ್ಯ 
  3. ಒಂದರಬೆಸ ಬೇಕೇ 
ಕಿತಾಪತಿ (೧೯೮೧) - ಸಂಜೆಯ ಹಾಡಿಗೇ ಚಂದ್ರಮಾ ಬಂದ ಹಾಂಗ್ 
ಸಂಗೀತ : ಬಿ.ವಿ.ಕಾರಂತ, ಸಾಹಿತ್ಯ : ಶ್ರೀ ಆರ್ಯ, ಗಾಯನ : ಎಸ್.ಜಾನಕೀ 

ಸಂಜೆಯ ಹಾಡಿಗೇ ಚಂದ್ರಮಾ ಬಂದ ಹಾಂಗ್ 
ಕಂದಾನೇ ನಗುವಾಗಿ ಬಂದಾನ ಬಂದಾನ 
ಸಂಜೆಯ ಹಾಡಿಗೇ ಚಂದ್ರಮಾ ಬಂದ ಹಾಂಗ್ 
ಕಂದಾನೇ ನಗುವಾಗಿ ಬಂದಾನ ಬಂದಾನ 

ಬಂಜೆಯ ಹಾಡಿಗೇ ಗಿಣಿರಾಮ ಬಂದಾನ ಬಂಗಾರ ಮಾತಾ ಕಣಿ ಹೇಳತಾನ 
ಬಂಜೆಯ ಹಾಡಿಗೇ ಗಿಣಿರಾಮ ಬಂದಾನ ಬಂಗಾರ ಮಾತಾ ಕಣಿ ಹೇಳತಾನ 
ಮಾತಿಲ್ಲ ಕಣಿ ಕೇಳಿ ಮೌನದ ಕನಸೆಲ್ಲಾ ಮುತ್ತಿನ ಕಣ್ಣ ಕಟ್ಟೀ ಮಾಡತಾನ 
ಸಂಜೆಯ ಹಾಡಿಗೇ ಚಂದ್ರಮಾ ಬಂದ ಹಾಂಗ್ 
ತಂದಾನೇ ನಗುವಾಗಿ ಬಂದಾನ ಬಂದಾನ 

ಕಾ ಕಾ ಕಾಗೆಗಳ ತುತ್ತೂ ಗೂಡಿನ ಒಳಗೇ ಕೂ ಕೂ ಕೋಗಿಲೇ ಮರಿ ಕಳ್ಳ ಬಂದಾನ 
ಕೋ ಕೋ ಕೋ ಕೋಳಿಗಳೂ ಬಾರೆಂದೂ ಕರೆದಾಗ ಕತ್ತಲ ಬಿಟ್ಟೂ ಸೂರ್ಯ ಬಂದಾನ 

ಮುಚ್ಚಿದ ಬಾಗಿಲಿಗೇ ಪಚ್ಚೇ ತೋರಣವಾಗಿ ಹೊಸ್ತಿಲಗೇ ರಂಗೋಲಿ ತಂದಾನ 
ಮುಚ್ಚಿದ ಬಾಗಿಲಿಗೇ ಪಚ್ಚೇ ತೋರಣವಾಗಿ ಹೊಸ್ತಿಲಗೇ ರಂಗೋಲಿ ತಂದಾನ 
ಹೊಸ್ತಿಲ ರಂಗೋಲೀ ಸುಣ್ಣದ ಬಣ್ಣಕ್ಕೇ 
ಹೊಸ್ತಿಲ ರಂಗೋಲೀ ಸುಣ್ಣದ ಬಣ್ಣಕ್ಕೇ ಮಣ್ಣಿನ ಮಡಿ ಹೆಜ್ಜೇ ತಂದಾನ 
ಸಂಜೆಯ ಹಾಡಿಗೇ ಚಂದ್ರಮಾ ಬಂದ ಹಾಂಗ್ 
ತಂದಾನೇ ನಗುವಾಗಿ ಬಂದಾನ ಬಂದಾನ ಸಂಜೆಯ ಹಾಡಿಗೇ ಹೂಂ ಹೂಂ ಹೂಂ ಹೂಂ ಹೂಂ ಹೂಂ 
---------------------------------------------------------------------------------------------------
  
ಕಿತಾಪತಿ (೧೯೮೧) - ಪಂಚಚಾರ್ಯ 
ಸಂಗೀತ : ಬಿ.ವಿ.ಕಾರಂತ, ಸಾಹಿತ್ಯ : ಶ್ರೀ ಆರ್ಯ, ಗಾಯನ : ಪಿ.ಬಿ.ಶ್ರೀನಿವಾಸ 

ಪಂಚಾಕ್ಪ ವದನೋ ಭೂತಾಂ ಪಂಚತತ್ವಾಧಿನಾಯಕ 
ಪಂಚಬ್ರಹ್ಮಮಾಯಾನವಮೀ  ಪಂಚಾಚಾರ್ಯ ಜಗದ್ಗರೂ ... ಪಂಚಾಚಾರ್ಯ ಜಗದ್ಗರೂ 
---------------------------------------------------------------------------------------------------

ಕಿತಾಪತಿ (೧೯೮೧) - ಒಂದರ ಬೆಸ ಬೇಕೇ ಎರಡರ ಸರಿ ಸಾಕೇ .. 
ಸಂಗೀತ : ಬಿ.ವಿ.ಕಾರಂತ, ಸಾಹಿತ್ಯ : ಶ್ರೀ ಆರ್ಯ, ಗಾಯನ : ಜಯಚಂದ್ರನ 

ಒಂದರ ಬೆಸ ಬೇಕೇ ಎರಡರ ಸರಿ ಸಾಕೇ .. 
ಬಾಡಿಗೆ ಬಾಳಿನ ಪಗಡೆಯ  ಆಟಕ್ಕೇ  
ಒಂದರ ಬೆಸ ಬೇಕೇ ಎರಡರ ಸರಿ ಸಾಕೇ .. 
ಬಾಡಿಗೆ ಬಾಳಿನ ಪಗಡೆಯ  ಆಟಕ್ಕೇ  

ಆ ಮನೆಗೇ ಬೀಳುತ್ತಾ ಈ ಮನೆಗೇ ಏಳುತ್ತಾ 
ನಡುಮನೆಗೇ ಬಂದಾಳೇ ಪಗಡೆಯ ಹುಡುಗೀ .. 
ನಾ ತಾಳಿ ಕಟ್ಟಿಲ್ಲ ನೀ ಕುಂಕುಮ ಹಚ್ಚಿಲ್ಲಾ .. ಅಹ್.. 
ಗರತಿ ಗುಮ್ಮಾನದ ಎರವಿನ ಹೆಂಡ್ತೀ .. 
ಆಗ ಕಂಗಾಲಾದ ಗಂಡನೆಂಬವನೂ ಏನೂ ಹೇಳುತ್ತಾನೆಂದರೇ .. 
ಕಣ್ಣು ಮುಚ್ಚಲಯ್ಯ ನೀ ನಾಳೆಗೇ ಕೊಂಡಾಗ 
ಕಣ್ಣ ಕಟ್ಟಿದರೂ ಹುಡುಗಿ ಮುಟ್ಟಲೂ ಬಂದೀಯಾ 
ಕಣ್ಣು ಕಟ್ಟಿನ ಹುಡುಗಿ.. ಕಣ್ಣು ಕಟ್ಟಿನ ಹುಡುಗಿ.. ಕಣ್ಣು ಕಟ್ಟಿನ ಹುಡುಗಿ.. 

ಗಂಡನಿಲ್ಲದೇ ಹುಡುಗೀ ಮುತ್ತೈದೆಯಾಗಿಹ ಸೊಕ್ಕಿನಿಲ್ಲದೇ ಹುಡುಗೀ 
ಮಾತಾಯೀಯಾಗಿಹ ಗಂಡನಿಲ್ಲದೇ ಹುಡುಗೀ ಮುತ್ತೈದೆಯಾಗಿಹ ಸೊಕ್ಕಿನಿಲ್ಲದೇ ಹುಡುಗೀ 

ಆ ಕಣ್ಣೂ ಅಲ್ಲಿ ಹೊಡೆದೂ ಈ ಕಣ್ಣೂ ಇಲ್ಲಿ ಹೊಡೆದೂ 
ಆ ಕಣ್ಣೂ ಅಲ್ಲಿ ಹೊಡೆದೂ ಈ ಕಣ್ಣೂ ಇಲ್ಲಿ ಹೊಡೆದೂ 
ಅಪಶೃತಿ ಹಾಡಿಗೇ ಹಿಡಿದೀ ಆದಿತಾಳ 
ಅಪಶೃತಿ ಹಾಡಿಗೇ ಹಿಡಿದೀ ಆದಿತಾಳ 
ತಕಧಿಮಿ ತಕಧಿಮಿ ತಕಧಿಮಿ ತಕಧಿಮಿ ತಕಧಿಮಿ ತಕಧಿಮಿ ತಕಧಿಮಿ ತಕಧಿಮಿ 
ತಂದಾಗಿರಡತೋಮ ಧಿತ್ತ್ ತಂದಾಗಿರಡತೋಮ ಧಿತ್ತ್ ತಂದಾಗಿರಡತೋಮ

ಆ ಗಾಳ ಅಲ್ಲಿ ಒಗೆದೂ ಈ ದಾಳ ಇಲ್ಲಿ ಒಗೆದೂ 
ಆ ಗಾಳ ಅಲ್ಲಿ ಒಗೆದೂ ಈ ದಾಳ ಇಲ್ಲಿ ಒಗೆದೂ 
ಮಳ್ಳಿ ಮದುವೆಯ ಆಟ ಗೆಲ್ಲಲೂ ಬಂದೀಯ 
ಮಳ್ಳಿ ಮದುವೆಯ ಆಟ ಗೆಲ್ಲಲೂ ಬಂದೀಯ 
ಒಂದರ ಬೆಸ ಬೇಕೇ ಎರಡರ ಸರಿ ಸಾಕೇ .. 
ಬಾಡಿಗೆ ಬಾಳಿನ ಪಗಡೆಯ  ಆಟಕ್ಕೇ  
ಒಂದರ ಬೆಸ ಬೇಕೇ ಎರಡರ ಸರಿ ಸಾಕೇ .. 
---------------------------------------------------------------------------------------------------

No comments:

Post a Comment