1103. ಕಿತ್ತೂರಿನ ಹುಲಿ (೧೯೯೧)

ಕಿತ್ತೂರಿನ ಹುಲಿ ಚಿತ್ರದ ಹಾಡುಗಳು 
  1. ಜಗವಿದೆ ನೋಡು 
  2. ಅಮ್ಮಮ್ಮ ಫೀಗರೂ 
  3. ಮುಂಗಾರಿನ ಮಳೆ 
  4. ಊರೆಲ್ಲಾ ಮಲಗಿದ ಸಮಯ 
  5. ಏನೆಂದೂ ಪೂಜಿಸಲಿ 
  6. ಕೇಳಬೇಡ ಕೇಳಬೇಡ 
ಕಿತ್ತೂರಿನ ಹುಲಿ (೧೯೯೧) - ಜಗವಿದೆ ನೋಡು
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್. ಜಯಗೋಪಾಲ್ ಗಾಯನ : ಎಸ್.ಪಿ.ಬಿ. ಕೋರಸ್ 

ಜಗವಿದೆ ನೋಡು ನಮ್ಮ ಕೈಲಿ ನಾವು ಮಾಡಿದ್ದೇನೆ ರೂಲ್ಸ್ ಇಲ್ಲಿ

ಕುತ್ಕೋ ಅಂದ್ರೇ ನೀವೂ ಕೂರಬೇಕು ನಿಂತ್ಕೋ ಅಂದ್ರೇ ನೀವೂ ನಿಲ್ಲಬೇಕು 
ನಾವೂ ಮಾಡೋದೆಲ್ಲ ಹೊಸ ಶೈಲಿ ನಮ್ಮನ್ನೂ ಯಾರು ಕೇಳೋರಿಲ್ಲ ಇಲ್ಲಿ 
ನಾವು ನಕ್ಕರೇ ನೀವೂ ನಗಬೇಕು ನಾವು ಕುಣಿದ್ರೆ ನೀವು ಕುಣಿಬೇಕು 
ಒನ್ ಟೂ ಥ್ರೀ ಫೋರ್ ಫಿಫ್ತ್ ಸ್ಟೂಡೆಂಟ್ ಲೈಫ್ ಬೆಸ್ಟ್ ಲೈಫ್ ಹ್ಯಾಪಿ ಹ್ಯಾಪಿ ಲೈಫ್ 
ಇದಕ್ಕೆ ಸಾಟಿಯಾಗುವುದಿಲ್ಲ ಮೈ ಫ್ರೆಂಡ್ಸ್ 

ಪುಸ್ತಕ ನೋಡ್ಬೇಕಾಗಿಲ್ಲ ಕ್ಲಾಸಿಗೇ ಹೋಗಬೇಕಾಗೇ ಇಲ್ಲಡೈಲಿ ಪಿಕನಿಕ್ ನಮಗೆಲ್ಲ ಇಯರ್ ಕಥ್ರೋ
ನೋಟು ಇದ್ರೇ ಪಾಕೇಟನಲ್ಲಿ ಬಿಸಾಕಿದ್ರೇ ನೀರಹಂಗ ಚೆಲ್ಲಿ ಯಾರನ್ನಾದ್ರೂ ಕೊಂಡ್ಕೋಬಹುದು ಶೂರ್ ಶೂರ್
ಕಾಲೇಜನಲ್ಲಿ ಸೀಟು ಬೇಕೋ ಪರೀಕ್ಷೆಯಲ್ಲಿ ಮಾರ್ಕ ಬೇಕೋ
ಪುಗಸಟ್ಟೇಲಿ ಡಿಗ್ರಿ ಬೇಕೋ ಹಿಯರ್ ಹಿಯರ್ ಮನಿ ಮೇಕ್ಸ್ ಮೆನಿ ಥಿಂಗ್ಸ್
ನನ್ನಾಣೆ ನಿಮ್ಮಾಣೆ ದೇವ್ರಾಣೆ ಈ ಮಾತು ಎಂದೆಂದೂ ಹಂಡ್ರೆಡ್ ಪರ್ಸೆಂಟ್ ಪಾಸ್
ಫೈಟ್ ಫೈಟ್ ಫೈಟ್ ಕರಾಟೆ ಕುಂಗಫೂ ಜುಡೋ
ಜಗವಿದೆ ನೋಡು ನಮ್ಮ ಕೈಲಿ ನಾವು ಮಾಡಿದ್ದೇನೆ ರೂಲ್ಸ್ ಇಲ್ಲಿ

ರಾಜರು ನಾವು ಬೀದಿಗೆಲ್ಲಾ ರಾಂಗ್ ಮಾಡೋರನ್ನ ಬಿಡೋದಿಲ್ಲಾ
ರ್ರ್ಯಾಗಿಂಗ್ ಮಾಡಿ ಕಲಿಸ್ತೀವಿ ಪಾಠ  ಪೊಲೀಸ್ ಅಂದ್ರೆ ಹೆದರೋದಿಲ್ಲಾ
ಪಬ್ಲಿಕ್ ಬಂದ್ರೂ ಬೆದ್ರೋದಿಲ್ಲ ಇಷ್ಟ ಬಂದಾಗ ಆಡುತೀವಿ ಆಟ
ಸಿಟಿ ಬಸ್ ನಂದೇ ಎಲ್ಲಾ ಟಿಕೆಟ್ ಕೇಳೋ ಧೈರ್ಯ ಇಲ್ಲಾ
ಸ್ಟೂಡೆಂಟ್ ಅಂದ್ರೆ ಧರ ಧರ ಧರ್ರೋ ರಾಜಕೀಯ ನಮಗೆ ಫ್ರೂಟೂ
ಸ್ಟ್ರೈಕ್ ಅಂದ್ರೆ ನಮಗೆ ಲಡ್ಡು ಕಲ್ಲು ಬೀರೋ ಕಲೆಗೆ ನಾವೇ ಹೆಡ್ಡು
ಸ್ಟೂಡೆಂಟ್ ಫೋರ್ಸ್ ಇಸ್ ಎ ಮಲ್ಟ್ ಫೋರ್ಸ್
ನನ್ನಾಣೆ ನಿಮ್ಮಾಣೆ ದೇವ್ರಾಣೆ ಈ ಮಾತು ಎಂದೆಂದೂ ಹಂಡ್ರೆಡ್ ಪರ್ಸೆಂಟ್ ಪಾಸ್
ಇಲ್ಲದಿದ್ದ್ರೇ ಫಟಫಟಾ
ಜಗವಿದೆ ನೋಡು ನಮ್ಮ ಕೈಲಿ ನಾವು ಮಾಡಿದ್ದೇನೆ ರೂಲ್ಸ್ ಇಲ್ಲಿ
ಕುತ್ಕೋ ಅಂದ್ರೇ ನೀವೂ ಕೂರಬೇಕು ನಿಂತ್ಕೋ ಅಂದ್ರೇ ನೀವೂ ನಿಲ್ಲಬೇಕು 
ನಾವೂ ಮಾಡೋದೆಲ್ಲ ಹೊಸ ಶೈಲಿ ನಮ್ಮನ್ನೂ ಯಾರು ಕೇಳೋರಿಲ್ಲ ಇಲ್ಲಿ 
ನಾವು ನಕ್ಕರೇ ನೀವೂ ನಗಬೇಕು ನಾವು ಕುಣಿದ್ರೆ ನೀವು ಕುಣಿಬೇಕು 
ಒನ್ ಟೂ ಥ್ರೀ ಫೋರ್ ಫಿಫ್ತ್ ಸ್ಟೂಡೆಂಟ್ ಲೈಫ್ ಬೆಸ್ಟ್ ಲೈಫ್ ಹ್ಯಾಪಿ ಹ್ಯಾಪಿ ಲೈಫ್ 
ಇದಕ್ಕೆ ಸಾಟಿಯಾಗುವುದಿಲ್ಲ ಮೈ ಫ್ರೆಂಡ್ಸ್ 
--------------------------------------------------------------------------------------------------------------------------

ಕಿತ್ತೂರಿನ ಹುಲಿ (೧೯೯೧) - ಅಮ್ಮಮ್ಮ ಫೀಗರೂ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಕುಣಿಗಲ ನಾಗಭೂಷಣ  ಗಾಯನ : ಎಸ್.ಪಿ.ಬಿ. ಮಂಜುಳಾ ಗುರುರಾಜ

ಕೋರಸ್ : ಸುಪ್ರೀಂ ಹೀರೊ ಹೇಯ್ ಹೇಯ್ ಹೇಯ್ ಸುಪ್ರೀಂ ಜ್ಯೋತಿ ಹೋ... ಹೋ ... ಹೋ..
ಗಂಡು : ಅಮ್ಮಮ್ಮ ಫೀಗರ್ರೋ ಸುಪರ್ರೋ ಸೂಪರೂ ಕಣ್ತುಂಬಾ ನೋಡಿದ್ರೆ ಕಲರ್ರೋ ಕಲರ್ರು
ಗಂಡು : ಓ.. ಮೈ ಡಾರ್ಲಿಂಗ್ ನೀನು ಚಾರ್ಮಿಂಗ್ ದೇವರು ನಿನ್ನಲೇನೆ ತುಂಬಿ ಇಟ್ಟ ಎಲ್ಲ ಥರ ಮಸಾಲ
ಹೆಣ್ಣು : ಅಮ್ಮಮ್ಮ ರಾಯರೋ ಡ್ಯೂಪರ್ರೋ ಡ್ಯೂಪರು ನೀ ಹತ್ರ ಬಂದಾಗ ಡೆಂಜರೋ ಡೇಂಜರು
          ಅಬ್ಬಬ್ಬ ರಾಯರೋ ಡ್ಯೂಪರ್ರೋ
ಕೋರಸ್ : ಸೂಪರ್ರೋ
ಹೆಣ್ಣು : ನೀ ಹತ್ರ ಬಂದಾಗ ಡೇಂಜರು      ಕೋರಸ್ : ಡೇಂಜರು ಡೇಂಜರು
ಹೆಣ್ಣು : ಓ.. ಮೈ ಹಿಮ್ಯಾನ್ ಲೌಲೀ ಡ್ರಿಮ್ ಮ್ಯಾನ್
          ನೀನು ನನ್ನ ಜೊತೆ ಇದ್ರೇ ಸಾಕು ಮಜ ಮಜ    ಬಲ್ ಮಜ
ಗಂಡು : ಅಮ್ಮಮ್ಮ ಫೀಗರ್ರೋ ಸುಪರ್ರೋ ಸೂಪರೂ ಕಣ್ತುಂಬಾ ನೋಡಿದ್ರೆ ಕಲರ್ರೋ ಕಲರ್ರು
ಹೆಣ್ಣು : ಅಮ್ಮಮ್ಮ ರಾಯರೋ ಡ್ಯೂಪರ್ರೋ ಡ್ಯೂಪರು ನೀ ಹತ್ರ ಬಂದಾಗ ಡೆಂಜರೋ ಡೇಂಜರು 

ಗಂಡು : ನೀನು ಬರೋವಾಗ ಮನ್ಸಿಲ್ ಹಾರ್ಮೋನಿಯಂ ನೀನು ನಕ್ಕರೇ ಜೊತೆ ನಕ್ಕು ಈ ಸ್ಟೇಡಿಯಂ 
ಹೆಣ್ಣು : ಬರೆದೆ ನೀನು ಹೊಸ ಒಂದು ಪ್ರೇಮಾಯಣ ನಿನ್ನ ಕಂಡು ಓಡಿಹೋದ ವಾತ್ಸಾಯನಾ 
ಗಂಡು : ಕಂಡೆ ನಿನ್ನ ಮೊನಾಲಿಸಾ ಎದೆಯಲಿ ಒಸಿಬಿಸಾ 
ಹೆಣ್ಣು : ಮಾತಿನಲಿ ಹೊಸಹೊಸ ಸರಿಗಮ ಪದನಿಸ 

--------------------------------------------------------------------------------------------------------------------------

ಕಿತ್ತೂರಿನ ಹುಲಿ (೧೯೯೧) - ಮುಂಗಾರಿನ ಮಳೆ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಕುಣಿಗಲ ನಾಗಭೂಷಣ  ಗಾಯನ : ಎಸ್.ಪಿ.ಬಿ. ಮಂಜುಳಾ ಗುರುರಾಜ

ಗಂಡು : ಮೋಡ ಮೋಡ ಡಿಕ್ಕಿ ಹೊಡೆಯೇ ಮಿಂಚು ಬಂತು ಮನ್ಸು ಮನ್ಸು ಡಿಕ್ಕಿ ಹೊಡೆಯೇ ಪ್ರೇಮ ಹುಡ್ತು
ಇಬ್ಬರು : ಮುಂಗಾರಿನ ಮಳೆ ಹನಿಯುತಿದೆ ರಂಗೋಲಿ ಬಾನಲಿ ಹಾಕುತಿದೆ
             ತಂಗಾಳಿ ಕರೆಯುತಿದೆ ಈ ಪ್ರೇಮ ಜೋಡಿ ಬಂದಾಯ್ತು ಕೂಡಿ ಆಡಿ ಓಡಿ ಹಾಡಿ
ಹೆಣ್ಣು : ಮಳೆಯು ನಿಂತು ಬೆಳಕು ಬಂತು ಹಸಿರ ತಂತು ಎಲ್ಲ ಹೂವು ಅರಳಿ ನಿಂತು ಸೊಗಸು ತಂತು
ಗಂಡು : ಈ ಪ್ರೇಮ ಬಂತು ಕಣ್ಣಾ ಮುಚ್ಚಿ ಕಾಡೆ ಗೋಡೆ ಆಡಿ
ಹೆಣ್ಣು : ಈ ನನ್ನ ಎದೆಯು ತಾಳ ತಪ್ಪು ಕುದುರೆ ಹಾಗೆ ಓಡಿ
ಗಂಡು : ಕಣ್ಣಲ್ಲಿ ಕಣ್ಣು ಹೇಗೋ ಸೇರಿದಾಗ ಏನೇನೋ ಮೌನ ಬಾಷೆ ಆಡಿದಾಗ
ಹೆಣ್ಣು : ಹೂವಂತೇ ನಮ್ಮ ಪ್ರೇಮ ಅರಳಿ ಈಗ ಮಂಜಂತೇ ನಮ್ಮ ವಿರಸ ಕರಗಿದಾಗ
ಗಂಡು : ಈ ಪ್ರೇಮವೆಂಬ ಗಾನಾ ಹೊಸದಾದ ರಾಗ ಹೊಸದಾದ ತಾಳ ಅಂದ ಅಂದ ಚೆಂದ
ಹೆಣ್ಣು : ಆ ಮೇಘ ನಮ್ಮನ್ನು ಹರಸುತಿದೆ ಹೂವೆಲ್ಲ ಆನಂದ ಸೂಸುತಿದೆ ಬಾನಾಡಿ ಹಾಡುತಿವೆ
          ಈ ಪ್ರೇಮ ಜೋಡಿ ಬಂದಾಯ್ತು ಕೂಡಿ ಆಡಿ ಓಡಿ ಹಾಡಿ  

ಹೆಣ್ಣು :  ಹೆಜ್ಜೆ ಹಾಕಿ ಹಾಡಿ ಬನ್ನಿ ಸುವ್ವಿ ಸುವ್ವಿ ಎಲ್ಲ ಸೇರಿ ಆಡಿ ಬನ್ನಿ ಸುವ್ವಿ ಸುವ್ವಿ
ಗಂಡು : ಆ ಕಾಮದೇವ ಬಿಟ್ಟ ಹೂವ ಬಾಣ ನಮ್ಮ ಮೇಲೆ
ಹೆಣ್ಣು : ಆ ರತಿಯ ಎತ್ತಿ ಆರತಿಯ ತರಲೇ ಹೂವ ಮಾಲೆ
--------------------------------------------------------------------------------------------------------------------------

ಕಿತ್ತೂರಿನ ಹುಲಿ (೧೯೯೧) - ಊರೆಲ್ಲಾ ಮಲಗಿದ ಮೇಲೆ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಸಂಗೀತ ಕಟ್ಟಿ

ಗಂಡು : ಊರೆಲ್ಲಾ ಮಲಗಿದ ಸಮಯ ಆಸೆ ತುಂಬಿ ಬಂತು ನನ್ನ ಎದೆಯ
            ಊರೆಲ್ಲಾ ಮಲಗಿದ ಸಮಯ ಆಸೆ ತುಂಬಿ ಬಂತು ನನ್ನ ಎದೆಯ
            ಏಕೆಂದು ಕೇಳಬೇಡ ನೀ ನನ್ನ ಅದಕೆ ಎಂದೂ ಹೇಳಲಾರೆ ಓ ಚೆನ್ನ
ಹೆಣ್ಣು :  ಈ ವಿರಹ ಹೊಸದು ತರಹ ಈ ಒಡಲು ಬೆಂಕಿ ತರಹ ಏನೆಂದು ಹೇಳಲಿ ನನ್ನ ಸ್ಥಿತಿಯ
ಗಂಡು : ಊರೆಲ್ಲಾ ಮಲಗಿದ ಸಮಯ ಆಸೆ ತುಂಬಿ ಬಂತು ನನ್ನ ಎದೆಯ

ಹೆಣ್ಣು : ಆಆಆಅ ಲಾಲಾ ಲಾಲಾ
          ಹೂ ಮಂಚ ಮುಡಿದಾ ಮಲ್ಲೆ ನಿಂಗಾಗಿ ಇದೆ ಬಾ ಬೇಗ
ಗಂಡು : ಮೈ ಸೋಂಪು ತುಟಿಯ ತಂಪು ನೆನೆದಾಗ ಹೊಸ ಆವೇಗ
ಹೆಣ್ಣು : ಪ್ರತಿಕ್ಷಣ ಕಳಕಳ ಸನಿಹದ ಸುಖವನು ಬೇಡಿ ಬಾಡಿದೆ
ಗಂಡು : ಊರೆಲ್ಲಾ ಮಲಗಿದ ಸಮಯ ಆಸೆ ತುಂಬಿ ಬಂತು ನನ್ನ ಎದೆಯ

ಗಂಡು : ಈ ದಿಂಬು ನನ್ನ ಈ ತೋಳು ನಿಂಗಾಗೇ ಪ್ರಿಯ ನೋಡೆಂದು
ಹೆಣ್ಣು : ಈ ಸೊಂಟ ಕೇಳಿದೆ ತುಂಟ ಕೈ ಸ್ಪರ್ಶ ಸುಖ ನೀಡೆಂದು
ಗಂಡು : ನೆನಪಿನ ಅಲೆಗಳು ಪದೇಪದೇ ಎದೆಯನು ತಾಕಿ ನೊಂದಿದೆ
ಗಂಡು : ಊರೆಲ್ಲಾ ಮಲಗಿದ ಸಮಯ ಆಸೆ ತುಂಬಿ ಬಂತು ನನ್ನ ಎದೆಯ
            ಏಕೆಂದು ಕೇಳಬೇಡ ನೀ ನನ್ನ ಅದಕೆ ಎಂದೂ ಹೇಳಲಾರೆ ಓ ಚೆನ್ನ
ಹೆಣ್ಣು :  ಈ ವಿರಹ ಹೊಸದು ತರಹ ಈ ಒಡಲು ಬೆಂಕಿ ತರಹ ಏನೆಂದು ಹೇಳಲಿ ನನ್ನ ಸ್ಥಿತಿಯ
ಗಂಡು : ಊರೆಲ್ಲಾ ಮಲಗಿದ ಸಮಯ ಆಸೆ ತುಂಬಿ ಬಂತು ನನ್ನ ಎದೆಯ
--------------------------------------------------------------------------------------------------------------------------

ಕಿತ್ತೂರಿನ ಹುಲಿ (೧೯೯೧) - ಏನೆಂದೂ ಪೂಜಿಸಲಿ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಸಂಗೀತ ಕಟ್ಟಿ 

ಹೆಣ್ಣು : ಏನೆಂದು ಪೂಜಿಸಲಿ ನಿಮ್ಮನು ಏನೆಂದು ಬಣ್ಣಿಸಲಿ
          ನನ್ನ ಒಲವಿಂದ ಸ್ವೀಕಾರ ಮಾಡಿದ ನಿಮ್ಮನ್ನು ಹೆಂಗ್ರೀ ಗುಡಿಕಟ್ಟಿ ಪೂಜಿಸಲಿ
          ದೇವರ ದೇವನೆಂದು ಅರ್ಚಿಸಲೇ
ಗಂಡು : ದೇವರು ನಾನಲ್ಲ ನನ್ನನ್ನು ಪೂಜಿಸಬೇಕಿಲ್ಲ ಎಂದೂ ನಿನ್ನವನೇ ನಾನೆಂದು ನಿನ್ನವನೇ
            ಪ್ರೇಮಿ ನಿನ್ನನ್ನು ಆಗಲಿ ಬದುಕಿರೇನೂ
ಹೆಣ್ಣು : ನಾನೇನು ನನಗೆ ಇಷ್ಟು ಬೆಲೆ ಏನು ಈ ನಿಮ್ಮ ಪ್ರೀತಿ ಪಡೆಯೇ ಅರ್ಹಳೇನು ನಾನು
ಗಂಡು : ಧರ್ಮೇಚ ಅರ್ಥೇಚ ಕಾಮೇಚ ಮೋಕ್ಷೇಚ ನಾತಿಚರಾಮಿ
            ಕಷ್ಟ ಸುಖ ಎಲ್ಲದರಲೂ ಜೊತೆಕೊಡಲು ಸಪ್ತಪದಿ ತುಳಿದು ನಿನ್ನ ವರಿಸಿದೆ ನಾನು
            ತಪ್ಪು ಗೈದ ಮುಳ್ಳನ್ನು ಬಿಟ್ಟು ಎಲೆಗೆ ಏಕೆ ಶಿಕ್ಷೆ

ಹೆಣ್ಣು : ನಿಮ್ಮ ಬಿಟ್ಟು ಬಾಳಿನಲ್ಲಿ ನನಗೆ ಯಾರು ರಕ್ಷೆ 
          ಏನೆಂದು ಪೂಜಿಸಲಿ ನಿಮ್ಮನು ಏನೆಂದು ಬಣ್ಣಿಸಲಿ
          ನನ್ನ ಒಲವಿಂದ ಸ್ವೀಕಾರ ಮಾಡಿದ ನಿಮ್ಮನ್ನು ಹೆಂಗ್ರೀ ಗುಡಿಕಟ್ಟಿ ಪೂಜಿಸಲಿ
          ದೇವರ ದೇವನೆಂದು ಅರ್ಚಿಸಲೇ 

ಗಂಡು : ನೀನಂದು ಬಂಡೆಯಂತಿದ್ದ ನನ್ನನ್ನು ಛಲದಿಂದ ಪ್ರತಿಮೆಯ ಗೈದ ಶಿಲ್ಪಿ ಅಲ್ಲವೇನು 
            ಕಾರ್ಯೇಷುದಾಸಿ ಕರುಣೇಷು ಮಂತ್ರಿ ಭೋಜ್ಯೇಷುಮಾತಾ ಕ್ಷಮಯಾಧರಿತ್ರಿ 
ಹೆಣ್ಣು : ನಾನೆಂದು ಪಾಲಿಸಿದೆ ಮಾನವತೆ ನಿಮ್ಮ ಮನಸ್ಸು ಅರಿತೇ ನಾನು ನಡೆದೇ ನೆರಳಂತೆ 
ಗಂಡು : ನಿಮ್ಮ ಕಂಡೆ ನಾನು ನಿಜ ದೈವರೂಪ 
            ದೇವರು ನಾನಲ್ಲ ನನ್ನನ್ನು ಪೂಜಿಸಬೇಕಿಲ್ಲ ಎಂದೂ ನಿನ್ನವನೇ ನಾನೆಂದು ನಿನ್ನವನೇ
            ಪ್ರೇಮಿ ನಿನ್ನನ್ನು ಆಗಲಿ ಬದುಕಿರೇನೂ
ಹೆಣ್ಣು : ಏನೆಂದು ಪೂಜಿಸಲಿ ನಿಮ್ಮನು ಏನೆಂದು ಬಣ್ಣಿಸಲಿ
          ನನ್ನ ಒಲವಿಂದ ಸ್ವೀಕಾರ ಮಾಡಿದ ನಿಮ್ಮನ್ನು ಹೆಂಗ್ರೀ ಗುಡಿಕಟ್ಟಿ ಪೂಜಿಸಲಿ
          ದೇವರ ದೇವನೆಂದು ಅರ್ಚಿಸಲೇ
--------------------------------------------------------------------------------------------------------------------------

ಕಿತ್ತೂರಿನ ಹುಲಿ (೧೯೯೧) - ಕೇಳಬೇಡ ಕೇಳಬೇಡ
ಸಂಗೀತ : ಉಪೇಂದ್ರಕುಮಾರ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.  

ಕೇಳಬೇಡ ಕೇಳಬೇಡ ಹೆಂಡ್ತಿ ಮಾತು ಕೈ ಚಾಚಬೇಡ ಸಂಮಥಿಂಗಿಗೆ ಅವಳಿಗೆ ಸೋತು
ಮಾಡಬೇಡ ಮಾಡಬೇಡ ಹಣದಾಸೆಗೆ ಪಾಪದ ಕೆಲಸ ಗೋಳಾಡಬೇಡ ನನ್ ಥರ ನೀ ಪ್ರತಿ ದಿವಸ
ಮೇಲೆ ಇಲ್ಲ ನರಕ ಮೇಲೆ ಇಲ್ಲ ನರಕ ಅದು ಇರುವುದು ಇಲ್ಲೇ

ಮಾಡಿದಂತ ಪಾಪಕೆ ಶಿಕ್ಷೆಯು ಇಲ್ಲೇ 

ಹೆಂಡ್ತೀಲಿ ಆಸೆ ಹುಟ್ಟುತ್ತಿದ್ದ ಹಂಗೇ ಚಪ್ಲಿಲ್ ಹೊಡಿ ಅದನ್ನ 

ಇಲ್ದೇ ಇದ್ರೇ ಕ್ಯಾನ್ಸರ್ ಹಂಗೇ ತಿಂದಾಕ್ ಬಿಡುತ್ತೇ ನಿನ್ನನ್ನ 
ಆಸೇ ಅನ್ನೋದು ಓ.ಕೆ.  ಆಸೇ ಅನ್ನೋದು ಓ.ಕೆ 
ದುರಾಸೇ ಡೇಂಜರ್ ಕೇಳಣ್ಣ ... 
ದುರಾಸೇ ಡೇಂಜರ್ ಕೇಳಣ್ಣ ... ಲಂಚ ತಿಂದ್ರೆ ಏನಾಗುತ್ತೋ ಸಾಕ್ಷಿ ನೋಡು ನನ್ನನ್ನ ಮೋಟಾಷ 
ಕೇಳಬೇಡ ಕೇಳಬೇಡ ಹೆಂಡ್ತಿ ಮಾತು ಕೈ ಚಾಚಬೇಡ ಸಂಮಥಿಂಗಿಗೆ ಅವಳಿಗೆ ಸೋತು
ಮಾಡಬೇಡ ಮಾಡಬೇಡ ಹಣದಾಸೆಗೆ ಪಾಪದ ಕೆಲಸ ಗೋಳಾಡಬೇಡ ನನ್ ಥರ ನೀ ಪ್ರತಿ ದಿವಸ 

ಲಂಚ ತೊಗೊಳೋ ಕೈಯಿನ ಕತ್ತರಿಸಿ ಹಾಕಬೇಕಣ್ಣ 
ಮೋಸ ಮಾಡೋ ಪಾಪಿನ ಪಬ್ಲಿಕಲ್ಲೇ ನೇಣು ಹಾಕಬೇಕಣ್ಣ 
ಬಡವರ ದೋಚೋ ಅಧಿಕಾರಿನ ಅಲ್ಲೇ ಹೂತ ಹಾಕಬೇಕಣ್ಣ 
ಹೆಣ್ಣಿನ ಮಾನಭಂಗ ಮಾಡೋನ ನನ್ನ ಏನ್ ಮಾಡಬೇಕು 
ಹೂ ಹಾ ಹಾ ಹಾ ಡಗಾರ್ 
ಕೇಳಬೇಡ ಕೇಳಬೇಡ ಹೆಂಡ್ತಿ ಮಾತು ಕೈ ಚಾಚಬೇಡ ಸಂಮಥಿಂಗಿಗೆ ಅವಳಿಗೆ ಸೋತು
ಮಾಡಬೇಡ ಮಾಡಬೇಡ ಹಣದಾಸೆಗೆ ಪಾಪದ ಕೆಲಸ ಗೋಳಾಡಬೇಡ ನನ್ ಥರ ನೀ ಪ್ರತಿ ದಿವಸ
ಮೇಲೆ ಇಲ್ಲ ನರಕ ಮೇಲೆ ಇಲ್ಲ ನರಕ ಅದು ಇರುವುದು ಇಲ್ಲೇ
ಮೇಲೆ ಇಲ್ಲ ನರಕ ಮೇಲೆ ಇಲ್ಲ ನರಕ ಅದು ಇರುವುದು ಇಲ್ಲೇ
ಮಾಡಿದಂತ ಪಾಪಕೆ ಶಿಕ್ಷೆಯು ಇಲ್ಲೇ 
ಕೇಳಬೇಡ ಕೇಳಬೇಡ ಹೆಂಡ್ತಿ ಮಾತು ಕೈ ಚಾಚಬೇಡ ಸಂಮಥಿಂಗಿಗೆ ಅವಳಿಗೆ ಸೋತು
ಮಾಡಬೇಡ ಮಾಡಬೇಡ ಹಣದಾಸೆಗೆ ಪಾಪದ ಕೆಲಸ ಗೋಳಾಡಬೇಡ ನನ್ ಥರ ನೀ ಪ್ರತಿ ದಿವಸ 
--------------------------------------------------------------------------------------------------------------------------

No comments:

Post a Comment