1281. ಕೋಣ ಈದೈತೆ (೧೯೯೫)

ಕೋಣ ಈದೈತೆ ಚಲನಚಿತ್ರದ ಹಾಡುಗಳು 
  1. ಆರ್ಡರ್ ಆರ್ಡರ್ ಘಟ್ಟಿನಾ ನಿಂದು ಹಾರ್ಟ್ 
  2. ಹೋ ಲೈಟ್ ಲೈಫ್ ಓ ಲೈಟ್ ರಿಪೀಟ್ ರಿಪಿಟೇಸ್ಟ್ ಲವ್ 
  3. ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ (ಚಿತ್ರಾ)
  4. ಜಾಕಿಚಾನ್ ಆ.. ಜಾಕಿಚಾನ್ ಢಮಾಲು ಢೀಮಾಲು 
  5. ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ 
  6. ನಮ್ಮ ಕೋಣಕೆ ಸೀಮಂತ ಸೀಮಂತ ಸೀಮಂತ 
  7. ಇಂಡಿಯಾ ಇರುವಾ ರೀತಿ ಕಂಡ್ಯಾ 
ಕೋಣ ಈದೈತೆ (೧೯೯೫) - ಆರ್ಡರ್ ಆರ್ಡರ್ ಘಟ್ಟಿನಾ ನಿಂದು ಹಾರ್ಟ್
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ

ಆರ್ಡರ್ ..  ಆರ್ಡರ್ ..
ಘಟ್ಟಿನಾ ನಿಂದು ಹಾರ್ಟ್ ಅಂಗಾದ್ರೆ ಹತ್ತು ಕೋರ್ಟ್
ಘಟ್ಟಿನಾ ನಿಂದು ಹಾರ್ಟ್ ಅಂಗಾದ್ರೆ ಹತ್ತು ಕೋರ್ಟ್
ಎಲೆಲೆಲೇ ಕಕ್ಷಿ ಒಂದಿ ಆಕ್ಷಿ  ಏಳು ಸುಳ್ಳಿನ ಸಾಕ್ಷಿ
ನ್ಯಾಯಕ್ಕಿಲ್ಲ ಆಕ್ಷಿ ನೀನು ಕಟಕಟೆ ಪಕ್ಷಿ
ಘಟ್ಟಿನಾ ನಿಂದು ಹಾರ್ಟ್ ಅಂಗಾದ್ರೆ ಹತ್ತು ಕೋರ್ಟ್

ಏನ್ಲಾ ಅಂದ್ರೆ ನೀನು ಕಾಸ್ಲಾ ಅಂತಾರಿಲ್ಲಿ
ಯಾಕ್ಲಾ ಅಂದ್ರೆ ನೀನು ಹೋಗ್ಲಾ ಅಂತಾರಿಲ್ಲಿ
ಸಣ್ಣ ಕೀಟಗಳಾದ್ರೆ ಜೇಡನ ಬಾಯಿಗೇ ಊಟ
ದೊಡ್ಡ ಕೀಟಗಳಾದ್ರೆ ಜೇಡನ ಬಲೆಗೆ ಗೂಟ
ಮೇಲಿದೆ ಸ್ವರ್ಗ ಕೆಳಗಿದೆ ನರಕ ಈ ನರಕದ ಹೇಸರೇನೂ ಹೇಳೂ ..
ಆರ್ಡರ್ ..  ಆರ್ಡರ್ ..
ಎಲೆಲೆಲೇ ಕಕ್ಷಿ ಒಂದಿ ಆಕ್ಷಿ  ಏಳು ಸುಳ್ಳಿನ ಸಾಕ್ಷಿ
ನ್ಯಾಯಕ್ಕಿಲ್ಲ ಆಕ್ಷಿ ನೀನು ಕಟಕಟೆ ಪಕ್ಷಿ
ಘಟ್ಟಿನಾ ನಿಂದು ಹಾರ್ಟ್ ಅಂಗಾದ್ರೆ ಹತ್ತು ಕೋರ್ಟ್

ತಾಲ್ಲೂಕ ಕೋರ್ಟಿನ ತೀರ್ಪು ಜಿಲ್ಲಾ ಕೋರ್ಟಿಗೆ ಪ್ರಶ್ನೆ..
ಜಿಲ್ಲಾ ಕೋರ್ಟಿನ ನ್ಯಾಯ ಹೈಕೋರ್ಟನಲ್ಲಿ ಮಾಯ
ಹೈಕೋರ್ಟ್ ಕೊಟ್ರೆ ಶಿಕ್ಷೇ ಸುಪ್ರೀಂ ಕೋರ್ಟನಲ್ಲ ರಕ್ಷೇ
ಸುಪ್ರೀಂ ಕೋರ್ಟಲು ಸೋತ್ರೆ ದೇವರ ಹತ್ರ ಭಿಕ್ಷೆ
ದೇವರ ಕಾನೂನು ಕಾಪಾಡೈತೇ  ಈ ಮನುಷ್ಯರ ಕಾನೂನು
ಆರ್ಡರ್ ..  ಆರ್ಡರ್ ..
ಎಲೆಲೆಲೇ ಕಕ್ಷಿ ಒಂದಿ ಆಕ್ಷಿ  ಏಳು ಸುಳ್ಳಿನ ಸಾಕ್ಷಿ
ನ್ಯಾಯಕ್ಕಿಲ್ಲ ಆಕ್ಷಿ ನೀನು ಕಟಕಟೆ ಪಕ್ಷಿ
ಘಟ್ಟಿನಾ ನಿಂದು ಹಾರ್ಟ್ ಅಂಗಾದ್ರೆ ಹತ್ತು ಕೋರ್ಟ್
ಭರ್ತಿನ ನಿನ್ ಸೂಟಕೇಸು ಅಂಗಾದ್ರೆ ಹಾಕು ಕೇಸೂ
ಘಟ್ಟಿನಾ ನಿಂದು ಹಾರ್ಟ್ ಅಂಗಾದ್ರೆ ಹತ್ತು ಕೋರ್ಟ್
ಆರ್ಡರ್ ..  ಹೋಗ್ಲಾ...
------------------------------------------------------------------------------------------

ಕೋಣ ಈದೈತೆ (೧೯೯೫) - ಹೋ ಲೈಟ್ ಲೈಫ್ ಓ ಲೈಟ್ ರಿಪೀಟ್ ರಿಪಿಟೇಸ್ಟ್ ಲವ್
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಚಿತ್ರಾ

ಗಂಡು : ಓ... ಲೈಟ್ ಲೈಫ್ ಓ.. ಲೈಟ್ ರಿಪೀಟ್ ರಿಪಿಟೇಸ್ಟ್ ಲವ್
            ಪ್ರೇಮ ಪ್ರಥಮ ಪ್ರಣಯ ಸಂಗಮ
ಹೆಣ್ಣು : ಓ.. ನೈಟ್ ಹೋ .. ನೈಸ್ ಹೋ .. ಮೈ ಓ ಲೈಟ್ ಓ ಲೈಟ್ ಹೋ ..
          ಲೈಫ್ ರಿಪೀಟ್ ರಿಪಿಟೇಸ್ಟ್ ಲವ್

ಇಬ್ಬರು : ಓಂ ಮನ್ಮಥಾಯೇ ನಮಃ ಓಂ ಮದನ ಪ್ರಿಯಾಯೇ ನಮಃ
             ಮಧುರ ಚುಂಬನಂ ಸಮರ್ಪಯಾಮಿ
ಹೆಣ್ಣು : ಕಣ್ಣುಗಳಾ ಮುಚ್ಚಿದರೂ ಕತ್ತಲಿಲ್ಲಾ ಮೈಯೊಳಗೇ
          ಹುಣ್ಣಿಮೆ ಬೆಳಕಿನ ಹಾಲು ತುಂಬಿತು ನರಗಳ ಸಾಲು
ಗಂಡು : ಯೌವ್ವನದ ಕಾನನದ ಮಾಮರದೀ ತೂಗಿರುವಾ
            ಪ್ರೇಮದ ಜೇನಿನ ಸಾರ ಸೇರಿದ ಬೆಳಕಿನ ತೀರ ಆಆಆ....
ಹೆಣ್ಣು : ಓ.. ನೈಟ್ ಹೋ .. ನೈಸ್ ಹೋ .. ಮೈ ಓ ಲೈಟ್ ಓ ಲೈಟ್ ಹೋ ..
          ಲೈಫ್ ರಿಪೀಟ್ ರಿಪಿಟೇಸ್ಟ್ ಲವ್

ಹೆಣ್ಣು : ಓಂ ಅಧರಾಯೇ ನಮಃ ಓಂ ಆಲಿಂಗನಾಯೇ ನಮಃ
          ಅಮರ ಸುಖಂ ಸಮರ್ಪಯಾಮಿ
ಗಂಡು : ಹೂವುಗಳ ಹಣ್ಣುಗಳ ಬಾಳೆಗಳ ದಿಂಡುಗಳ
            ಅಂದದ ತೋಟದ ಮೇಲೆ ದುಂಬಿಯ ಗಾನದ ಲೀಲೆ
ಹೆಣ್ಣು : ಅಮೃತದ ಅಂಬಲಿಯಾ ಹಂಚುತಿರೋ ಅಂಗನೆಯ
          ಗಂಧದ ತಂಪಿನ ತೊಳೆ ದುಂಬಿಯ ಕೊರಳಿನ ಮಾಲೇ .. ಆಆಆ...
ಗಂಡು : ಓ... ಲೈಟ್ ಲೈಫ್ ಓ.. ಲೈಟ್ ರಿಪೀಟ್ ರಿಪಿಟೇಸ್ಟ್ ಲವ್
            ಪ್ರೇಮ ಪ್ರಥಮ ಪ್ರಣಯ ಸಂಗಮ
ಹೆಣ್ಣು : ಓ.. ನೈಟ್ ಹೋ .. ನೈಸ್ ಹೋ .. ಮೈ ಓ ಲೈಟ್ ಓ ಲೈಟ್ ಹೋ ..
          ಲೈಫ್ ರಿಪೀಟ್ ರಿಪಿಟೇಸ್ಟ್ ಲವ್
------------------------------------------------------------------------------------------

ಕೋಣ ಈದೈತೆ (೧೯೯೫) - ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ (ಚಿತ್ರಾ)
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ

ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ
ಈ ಬ್ಯೂಟಿಯಲಿರುವ ಅಮೃತ ಕುಡಿ ಕುಡಿ ಬಾ
ಆ ಅಮೃತ ಕುಡಿದು ಪ್ರೇಮದ ಡ್ಯೂಟಿ ಮಾಡು ಬಾ
ಓ.ಕೆ ನಾ.. ಟೀಕೇನಾ.. ಓ.ಕೆ. ನಾ  ಟೀಕೇನಾ..
ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ

ಬಾ ನಾವು ನಾವೇ ನೋಡಿಕೊಂಡು ಒಪ್ಪಿಕೊಳ್ಳೋಣ
ಬಾ ನಾವೇ ಮಂತ್ರ ಹೇಳಿಕೊಂಡು ಅಪ್ಪಿಕೊಳ್ಳೋಣ
ಟೈಮಿಲ್ಲ ನಮಗೆ ಅಯ್ಯೋ ಅರ್ಜೆಂಟು ನಮಗೆ
ಹನಿಮೂನೇ ನಮ್ಮ ಏಮೂ ದಿನವೆಲ್ಲ ಲವ್ವೆ ಗೇಮು
ಬಾ ಊಟಿಯಲ್ಲೊ ನಂದಿಯಲ್ಲೋ ಟೆಂಟು ಹಾಕೋಣ
ಆ ಟೆಂಟಿನಲ್ಲಿ ಟ್ಟಿಂಪೋರು ಘಂಟೆ ಕಳೆಯೋಣ
ಕೋಲ್ಡ್ ಆದ್ರೇ ಹಾಟು ಹಾಟಾದ್ರೆ ಕೋಲ್ಡ್
ದಿನವೆಲ್ಲ ಲವ್ವೆ ಗೇಮು ಹನಿಮೂನ್ ನಮ್ಮ ಈಮು
ಇದು ಗೋಲ್ಡನ್ ಆಫರ್ ಈ ಆಫರ್ ಸೂಪರ್
ತಡಮಾಡ ಬೇಡ ತಡಕಾಡಬೇಡ ಹುಡುಗ
ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ
ಈ ಬ್ಯೂಟಿಯಲಿರುವ ಅಮೃತ ಕುಡಿ ಕುಡಿ ಬಾ

ಆ ಕಣ್ಣಿನಲ್ಲಿ ಕಾಮನೆಂಬ ಕಳ್ಳ ಕಾದಿರುವ
ಆ ಕಳ್ಳನನ್ನೂ ಈಚೆ ಬಿಟ್ಟರೇ ಲಿಂಕು ಮಾಡಿರುವ
ಅವನ್ಯಾವ ಮದನ ನೋಡೋಣ ಅವನ
ಕಣ್ತೆರೆಯೋ ಜೋಕುಮಾರ ಸೈ ಎನ್ನೋ ಜೈ ಕುಮಾರ
ಈ ಬಾಂಡು ಮುಂದೆ ಜೇಮ್ಸುಬಾಂಡು ಬಂದ್ರು ಬೇಕಿಲ್ಲ
ಈ ಮ್ಯಾನ ಮುಂದೆ ಹಿಮ್ಯಾನೂ  ಬಂದ್ರು ನೋಡಲ್ಲ
ನೀ  ಸಾಕು ನನಗೇ ನೀ ಬೇಕು ನನಗೆ
ಸೈ ಎನ್ನದೇ ಕುಮಾರ ಕಣ್ತೆರೆಯೋ ಜೋಕುಮಾರ
ಇದು ಡಿಸ್ಕೋ ಸೀಲು ಇದು ಹೋಲ್ ಸೇಲು
ಡೀಲು ತಡಮಾಡ ಬೇಡ ತಡಕಾಡ ಬೇಡ ಹುಡುಗ
ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ
ಈ ಬ್ಯೂಟಿಯಲಿರುವ ಅಮೃತ ಕುಡಿ ಕುಡಿ ಬಾ
ಆ ಅಮೃತ ಕುಡಿದು ಪ್ರೇಮದ ಡ್ಯೂಟಿ ಮಾಡು ಬಾ
ಓ.ಕೆ ನಾ.. ಟೀಕೇನಾ.. ಓ.ಕೆ. ನಾ  ಟೀಕೇನಾ..
ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ
------------------------------------------------------------------------------------------

ಕೋಣ ಈದೈತೆ (೧೯೯೫) - ಜಾಕಿಚಾನ್ ಆ.. ಜಾಕಿಚಾನ್ ಢಮಾಲು ಢೀಮಾಲು
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಜಾನಕೀ, ರಾಜೇಶ

ಹೆಣ್ಣು : ಜಾಕಿಚಾನ್ ಆ... ಜಾಕಿಚಾನ್ ...
         ಜಾಕಿಚಾನ್ ಢಮಾಲು ಡಿಮಾಲು ಸೂಪರ ಮ್ಯಾನ್
         ಸವಾಲಾಗೇ ಸವಾಲು ಕಮಾಲಾಗೆ ಕಮಾಲು
         ಮುಟ್ಟಿದರೇ ಉಲ್ಟಾ ತಟ್ಟಿದರೇ ಲಾತ ಗುದ್ದಿದರೇ ಗೂಸಾ ಕುಟ್ಟಿದರೇ ನಾಶ
         ಲವ್ವಲೀ ನಾನೂ ಜೀರೋ ರೇಪಲಿ ನಾನು ಹೀರೊ
         ಜಾಕಿಚಾನ್ ಆ... ಜಾಕಿಚಾನ್ ...ಢಮಾಲು ಡಿಮಾಲು ಸೂಪರ ಮ್ಯಾನ್

ಹೆಣ್ಣು : ರಾವಣ ಅಯ್ಯೋ ರಾವಣ
ಗಂಡು : ಹ್ಹ.. ರಾಮನ ಈಜ್ ಏ ಫೇಲ್ಯೂರ್ ರೇಪಿಸ್ಟ್
ಹೆಣ್ಣು : ಯೂ .. ಕೀಚಕಾ ..
ಗಂಡು : ಈ.. ಕೀಚಕಾ ಈಸ್ ಏ ದೇ ಕ್ರೂಟ್ ರೇಪಿಸ್ಟ್
ಹೆಣ್ಣು : ಏಯ್.. ದುಶ್ಶಾಸನ
ಗಂಡು : ಹೂ.. ಹ್ಹಹ್ಹಹ್ಹಾ.. ದುಶ್ಯಾಸನ ಈಸ್ ಏ ನ್ಯಾಸಿಸ್ ರೇಪಿಸ್ಟ್
ಹೆಣ್ಣು : ಗಬ್ಬರ್ ಸಿಂಗ್ .. ಗಬ್ಬರ್ ಸಿಂಗ್
ಗಂಡು : ಗಬ್ಬರ್ ಸಿಂಗ್ ಅರೇ ಓ ಸಾಂಬ
            ಗಬ್ಬರ್ ಸಿಂಗ್ ಈಸ್ ಏ ರಿಂಗ್ ರೇಪಿಸ್ಟ್
ಹೆಣ್ಣು : ಆದ್ರೇ ನೀನೂ
ಗಂಡು : ಐ ಆಮ್ ಈಸ್ ಏ ರಿಯಲ್ ರೇಪಿಸ್ಟ್ ಲೇಡಿ
         ಜಾಕಿಚಾನ್ ಆ... ಜಾಕಿಚಾನ್ ...ಢಮಾಲು ಡಿಮಾಲು ಸೂಪರ ಮ್ಯಾನ್

ಗಂಡು : ಕ್ರೌರ್ಯ ವಸ್ತ್ರಾಪಹರಣ ಕ್ರೌರ್ಯ ವಸ್ತ್ರಾಪಹರಣಾ ನಾ
ಹೆಣ್ಣು : ಬೇಡಾ..
ಗಂಡು : ಭದ್ರ ರೂಪಹರಣಾನಾ ಛಿಧ್ರ ರೂಪಾಹರಣಾನಾ
ಹೆಣ್ಣು : ಬೇಡ.. ಬೇಡ..
ಗಂಡು : ಸುಪ್ತ ಪ್ರೇಮಾಪಹರಣಾನಾ ಗುಪ್ತ ಪ್ರೇಮಾಹಾರಾಣಾನಾ
ಹೆಣ್ಣು : ಅಯ್ಯೋ ಬೇಡ
ಗಂಡು : ಶಕ್ತ ಕಾಮಾಪಹರಣಾನಾ ಮುಕ್ತ ಕಾಮಹಾರಣಾನಾ   
ಹೆಣ್ಣು : ಹಾಂ..ಹಾಂ..ಬೇಡ.. ಬೇಡ..
ಗಂಡು : ರಮ್ಯ  ಹೃದಯಾಪಹರಣಾನಾ ಸೌಮ್ಯಪಂತಾಪಹರಣಾನಾ
ಹೆಣ್ಣು : ಬೇಡ ಬೇಡ ಜಾಕಿಚಾನ್
          ದಮ್ಮಯ್ಯ ದಮ್ಮಯ್ಯ ಬೇಡಯ್ಯಾ ಬೇಡಯ್ಯಾ
          ಸೂಪರ್ ಮ್ಯಾನ್ ಅಪ್ಪಯ್ಯ ಅಪ್ಪಯ್ಯ  ತಪ್ಪಯ್ಯ ತಪ್ಪಯ್ಯ
ಗಂಡು :  ಮುಟ್ಟಿದರೇ ಉಲ್ಟಾ ತಟ್ಟಿದರೇ ಲಾತ ಗುದ್ದಿದರೇ ಗೂಸಾ ಕುಟ್ಟಿದರೇ ನಾಶ
            ಲವ್ವಲೀ ನಾನೂ ಜೀರೋ ರೇಪಲಿ ನಾನು ಹೀರೊ
            ಜಾಕಿಚಾನ್ ಆ... ಜಾಕಿಚಾನ್ ...ಢಮಾಲು ಡಿಮಾಲು ಸೂಪರ ಮ್ಯಾನ್
------------------------------------------------------------------------------------------

ಕೋಣ ಈದೈತೆ (೧೯೯೫) - ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ

ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ
ಈ ಬ್ಯೂಟಿಯಲಿರುವ ಅಮೃತ ಕುಡಿ ಕುಡಿ ಬಾ
ಆ ಅಮೃತ ಕುಡಿದು ಪ್ರೇಮದ ಡ್ಯೂಟಿ ಮಾಡು ಬಾ
ಓ.ಕೆ ನಾ.. ಟೀಕೇನಾ.. ಓ.ಕೆ. ನಾ  ಟೀಕೇನಾ..
ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ

ಬಾ ನಾವು ನಾವೇ ನೋಡಿಕೊಂಡು ಒಪ್ಪಿಕೊಳ್ಳೋಣ
ಬಾ ನಾವೇ ಮಂತ್ರ ಹೇಳಿಕೊಂಡು ಅಪ್ಪಿಕೊಳ್ಳೋಣ
ಟೈಮಿಲ್ಲ ನಮಗೆ ಅಯ್ಯೋ ಅರ್ಜೆಂಟು ನಮಗೆ
ಹನಿಮೂನೇ ನಮ್ಮ ಏಮೂ ದಿನವೆಲ್ಲ ಲವ್ವೆ ಗೇಮು
ಬಾ ಊಟಿಯಲ್ಲೊ ನಂದಿಯಲ್ಲೋ ಟೆಂಟು ಹಾಕೋಣ
ಆ ಟೆಂಟಿನಲ್ಲಿ ಟ್ಟಿಂಪೋರ ಘಂಟೆ ಕಳೆಯೋಣ
ಕೋಲ್ಡ್ ಆದ್ರೇ ಹಾಟು ಹಾಟಾದ್ರೆ ಕೋಲ್ಡ್
ದಿನವೆಲ್ಲ ಲವ್ವೆ ಗೇಮು ಹನಿಮೂನ್ ನಮ್ಮ ಈಮು
ಇದು ಗೋಲ್ಡನ್ ಆಫರ್ ಈ ಆಫರ್ ಸೂಪರ್
ತಡಮಾಡ ಬೇಡ ತಡಕಾಡಬೇಡ ಹುಡುಗ
ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ
ಈ ಬ್ಯೂಟಿಯಲಿರುವ ಅಮೃತ ಕುಡಿ ಕುಡಿ ಬಾ

ಆ ಕಣ್ಣಿನಲ್ಲಿ ಕಾಮನೆಂಬ ಕಳ್ಳ ಕಾದಿರುವ
ಆ ಕಳ್ಳನನ್ನೂ ಈಚೆ ಬಿಟ್ಟರೇ ಲಿಂಕು ಮಾಡಿರುವ
ಅವನ್ಯಾವ ಮದನ ನೋಡೋಣ ಅವನ
ಕಣ್ತೆರೆಯೋ ಜೋಕುಮಾರೀ  ಸೈ ಎನ್ನೋ ಜೈ ಕುಮಾರೀ
ಈ ಬಾಂಡು ಮುಂದೆ ಜೇಮ್ಸುಬಾಂಡು ಏನೂ ಮಾಡಲ್ಲ
ಈ ಮ್ಯಾನ ಮುಂದೆ ಹಿಮ್ಯಾನೂ  ಬಾಲ ಬಿಚ್ಚೋಲ್ಲ
ನೀ  ಸಾಕು ನನಗೇ ನೀ ಬೇಕು ನನಗೆ
ಸೈ ಎನ್ನೋ ಜೋಕಮಾರೀ ಕಣ್ತೆರೆಯೇ ಜೋಕುಮಾರೀ
ಇದು ಡಿಸ್ಕೋ ಸೀಲು ಇದು ಹೋಲ್ ಸೇಲು ಡೀಲು
ತಡಮಾಡ ಬೇಡ ತಡಕಾಡ ಬೇಡ ಹುಡುಗಿ
ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ
ಈ ಬ್ಯೂಟಿಯಲಿರುವ ಅಮೃತ ಕುಡಿ ಕುಡಿ ಬಾ
ಆ ಅಮೃತ ಕುಡಿದು ಪ್ರೇಮದ ಡ್ಯೂಟಿ ಮಾಡು ಬಾ
ಓ.ಕೆ ನಾ.. ಟೀಕೇನಾ.. ಓ.ಕೆ. ನಾ  ಟೀಕೇನಾ..
ಬಾ ಸೈಟ್ ಹೊಡಿ ಬಾ ಬಾ ಲೈನ್ ಹೊಡಿ ಬಾ
------------------------------------------------------------------------------------------

ಕೋಣ ಈದೈತೆ (೧೯೯೫) - ನಮ್ಮ ಕೋಣಕೆ ಸೀಮಂತ ಸೀಮಂತ ಸೀಮಂತ
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಸಿ.ಅಶ್ವಥ

ನಮ್ಮ ಕೋಣಕೆ ಸೀಮಂತ ಸೀಮಂತ ಸೀಮಂತ ಆಹಾ ನಮ್ಮ ಕೋಣಕೆ ಸೀಮಂತ
ಮಾನವಂತ ಇವನ ಹೊಟ್ಟೆಗೆ ದುಟ್ಟೆ ಆಗದೇ ಇರಲೂ
ಅಕ್ಕಿಯ ಮುಟ್ಟಿ ಕೀರ್ತನೆ ಮಾಡಿರಿಯಮ್ಮ ವಾಸನನಾ       
ನಮ್ಮ ಕೋಣಕೆ ಸೀಮಂತ ಸೀಮಂತ ಸೀಮಂತ ಆಹಾ ನಮ್ಮ ಕೋಣಕೆ ಸೀಮಂತ

ಪೀಪೀಪೀಪೀಪೀಪೀ.. ಪ್ಪಿಪ್ಪಿಪೀಪೀಪೀಪೀಪೀ
ಹೂವಿರಲಿ ಕೊಂಬಲ್ಲಿ ಬಳೆ ಇರಲಿ ಕಾಲಲ್ಲಿ..  ಪೀಪೀಪೀಪೀಪೀ 
ಮುತ್ತಿರಲಿ ಕಿವಿಯಲಿ ನತ್ತಿರಲಿ ಮೂಗಲ್ಲಿ..  ಪ್ಪಿಪ್ಪಿಪೀಪೀಪೀಪೀಪೀ
ಎಡಬಲದಲ್ಲಿ ಕರಿಮಣಿ ಇರಲಿ ಅರಿಷಿಣ ಕೊಂಬು ಕೊರಳಿನಲಿ 
ಏಳು ಮಾಸ ತುಂಬಿದ ತಂದೆ ಬೆಣ್ಣೆಯ ಬೂಸ ನಿನ್ನಯ ಮುಂದೆ 
ಏಳಬೇಡ ಓಡಬೇಡ ಹಾಯಬೇಡ ಹತ್ತಬೇಡ ದಿನ ತುಂಬಿ ಈವಾಗ 
ಗದ್ದೆ ಹೊಲ  ಉಳಬೇಡ ಹಾಹಾ.. 
ನಮ್ಮ ಕೋಣಕೆ ಸೀಮಂತ ಸೀಮಂತ ಸೀಮಂತ ಆಹಾ ನಮ್ಮ ಕೋಣಕೆ ಸೀಮಂತ

ಕಲಿಗಾಲ ಬಂತಯ್ಯಾ ಕೋಣ ಗರ್ಭ ತುಂಬತಯ್ಯ.. ಪ್ಪಿಪ್ಪಿಪೀಪೀಪೀಪೀಪೀ
ನಮ್ಮೂರ ಕೊಣಯ್ಯ ಎರಡೆರಡು ಈಯಯ್ಯ.. 
ಸುಖ ಪ್ರಸವಕ್ಕೆ ಕೋಳಿಯ ಊಟ ನಾಮಕರಣಕ್ಕೆ ಹುಳಿಮಾರುಟ 
ಕಲ್ಲಿನ ಕೋಳಿ ಕೂಗುತ್ತಂತೆ.. ಕಲ್ಲಿನ ಬಸವ ಓಡುತ್ತಂತೆ 
ಸತ್ಯವಂತ ಭೂಮಿಯಲ್ಲಿ ಇನ್ನೂ ಮುಂದೆ ಹುಟ್ಟನಂತೆ 
ಹುಟ್ಟಿದರೇ ಕೋಣ ನಿನ್ನ ಹೊಟ್ಟೆಯಲ್ಲಿ ಹುಟ್ಟದಂತೇ .. ಹಾಂ..ಹಾಂ 
ನಮ್ಮ ಕೋಣಕೆ ಸೀಮಂತ ಸೀಮಂತ ಸೀಮಂತ ಆಹಾ ನಮ್ಮ ಕೋಣಕೆ ಸೀಮಂತ
ಮಾನವಂತ ಇವನ ಹೊಟ್ಟೆಗೆ ದುಟ್ಟೆ ಆಗದೇ ಇರಲೂ
ಅಕ್ಕಿಯ ಮುಟ್ಟಿ ಕೀರ್ತನೆ ಮಾಡಿರಿಯಮ್ಮ ವಾಸನನಾ       
ನಮ್ಮ ಕೋಣಕೆ ಸೀಮಂತ ಸೀಮಂತ ಸೀಮಂತ ಆಹಾ ನಮ್ಮ ಕೋಣಕೆ ಸೀಮಂತ
-----------------------------------------------------------------------------------------

ಕೋಣ ಈದೈತೆ (೧೯೯೫) - ಇಂಡಿಯಾ ಇರುವಾ ರೀತಿ ಕಂಡ್ಯಾ
ಸಂಗೀತ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ

ತಂದನಾ ತನ್ನನಾ ತನ್ನನಾ ತನ್ನನಾ ತನ್ನನಾ ತನ್ನನಾನಾ
ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ  ಇರುವ ರೀತಿ ಕಂಡ್ಯಾ ..
ಇಂಡಿಯಾ .. ಇರುವ ರೀತಿ ಕಂಡ್ಯಾ .. ಭಾರತಾಂಬೆ ಮೈಯ್ಯಲ್ಲಿ ಬಟ್ಟೆ ಇಲ್ಲಾ 
ಸಾಲಾನೂ ಮೈತುಂಬಾ ಸಾಲಾನೂ
ಸಾಲಾನೋ ಮೈತುಂಬಾ ಸಾಲಾನೋ
ಭಾರತಾಂಬೆ ಹಣೆಯಲ್ಲಿ ಬೊಟ್ಟಿಲ್ಲಾ ನಾಮಾನೋ ತಿರುಪತಿ ನಾಮಾನೋ
ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ  ಇರುವ ರೀತಿ ಕಂಡ್ಯಾ ..

ಶಾರದಾಂಬೆ ಸುತ್ತ ಕ್ಯಾಪಿಟೇಷನ್ ಹುತ್ತ..  ಅನ್ನಪೂರ್ಣೆಯ ಹಸ್ತ ನೋಡು ರಕ್ತಸಿಕ್ತ  
ಹೋಳಾಗಿ ಹೋಗುತಿದೆ ವನದೇವಿ ಸಿರಿಮುಡಿ
ಹಾಳಾಗಿ ಹೋಗುತಿದೆ ನ್ಯಾಯದೇವಿ ವರಗುಡಿ
ಮೂಗಿ ಮೂಗಿ ಧರ್ಮದ ದೇವತೆ ಕಡು ಮೂಗಿ
ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ  ಇರುವ ರೀತಿ ಕಂಡ್ಯಾ ..
ಭಾರತಾಂಬೆ ಕಣ್ಣಲ್ಲಿ ಕನಸಿಲ್ಲ ಅಂಧಕಾರ ಕಿರೀಟ ಅಲಂಕಾರ 
ಭಾರತಾಂಬೆ ಮೊಗದಲ್ಲಿ ನಗುವಿಲ್ಲ ಬರಿ ಅಳಲು ಬಾವುಟ ಊರುಗೋಲು 
ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ  ಇರುವ ರೀತಿ ಕಂಡ್ಯಾ ..

ಹೆಸರಿಗೇ ಸ್ವಾತಂತ್ರ ಸಕಲವೂ ಪರತಂತ್ರ 
ಮಂತ್ರಿಗಳ ಮನೆಯ ಪೂಜೆಗೂ ಲಂಚಮಂತ್ರ 
ಈ ದೇಶ ಬೀಸುತಿದೆ ಓಟಿಗಾಗಿ ಹೆಬ್ಬಲೆ 
ಆ ಬಲೆಯ ಒಳಗಿದೆ ಹರಿಗಿರಿಜನ ಕಗ್ಗೊಲೆ 
ಯಮನ ಸದನ ನಮ್ಮ ಪೊಲೀಸ್ ಪ್ಯಾಲೇಸ್ 
ಜ್ಞಾನಿ ವಿಜ್ಞಾನಿ ಬಾಂಬಿನ ರಾಜರ ಷೂಲೇಸು ಅಯ್ಯಯ್ಯೋ.. 
ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ  ಇರುವ ರೀತಿ ಕಂಡ್ಯಾ ..
ಭಾರತಾಂಬೆ ಕಾಲಲ್ಲಿ ಕಸ್ಸುವಿಲ್ಲ ಅಕಟಕಟ ನೇತಾಡೋ ಚಿತ್ರಪಟ 
ಬಾರತಾಂಬೆ ಎದೆಯಲ್ಲಿ ಹಾಲಿಲ್ಲ ನೋವುಗಳು ಆರದ ಗಾಯಗಳೂ .. 
ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ  ಇರುವ ರೀತಿ ಕಂಡ್ಯಾ ..
ಇಂಡಿಯಾ .. ಇರುವ ರೀತಿ ಕಂಡ್ಯಾ .. ಭಾರತಾಂಬೆ ಮೈಯ್ಯಲ್ಲಿ ಬಟ್ಟೆ ಇಲ್ಲಾ 
ಸಾಲಾನೂ ಮೈತುಂಬಾ ಸಾಲಾನೂ
ಸಾಲಾನೋ ಮೈತುಂಬಾ ಸಾಲಾನೋ
ಭಾರತಾಂಬೆ ಹಣೆಯಲ್ಲಿ ಬೊಟ್ಟಿಲ್ಲಾ ನಾಮಾನೋ ತಿರುಪತಿ ನಾಮಾನೋ
ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ ಇಂಡಿಯಾ  ಇರುವ ರೀತಿ ಕಂಡ್ಯಾ ..
-----------------------------------------------------------------------------------------

No comments:

Post a Comment