ಕೃಷ್ಣ ಮೆಚ್ಚಿದ ರಾಧೆ ಚಲನ ಚಿತ್ರದ ಹಾಡುಗಳು
- ಕೃಷ್ಣಾ ಬೇಗ ಬಾರೋ ದರುಶನ ತೋರೋ
- ಒಲವಿನ ಕವಿತೆಯ ಬರೆಯುವ ಹೃದಯಕೆ
- ಪ್ರೀತಿ ದೈವವೂ ನಮ್ಮ ಅಕ್ಕ ಅಕ್ಕ
- ಬಾಳೋದು ಹೆಣ್ಣಿಂದ ಮನುಜ ಬೀಳೋದು ಹೆಣ್ಣಿಂದ
- ನೋಡಿ ನಗುತಿದೆ ಬೊಂಬೆ
ಕೃಷ್ಣ ಮೆಚ್ಚಿದ ರಾಧೆ (೧೯೮೮) - ಕೃಷ್ಣಾ ಬೇಗ ಬಾರೋ ದರುಶನ ತೋರೋ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ವಾಣಿಜಯರಾಂಹೇ.. ಆ... ಅಹ್ಹಹ್ಹಹ... ಹ್ಹಹ್ಹಹ್ಹ..
ಕೃಷ್ಣ ಬೇಗ ಬಾರೋ ದರುಶನ ತೋರೋ
ಉಟ್ಟ ಸೀರೆ ಮುದುಡೇ ಇಲ್ಲ ನಿನಗಾಗಿ ಕಾದೆ ಕೃಷ್ಣ ಮೆಚ್ಚಿದ ರಾಧೇ..ಓಓಓ ... ಆಆಆ..
ಕೃಷ್ಣ ಬೇಗ ಬಾರೋ ದರುಶನ ತೋರೋ
ಉಟ್ಟ ಸೀರೆ ಮುದುಡೇ ಇಲ್ಲ ನಿನಗಾಗಿ ಕಾದೆ ಕೃಷ್ಣ ಮೆಚ್ಚಿದ ರಾಧೇ..ಓಓಓ ... ಆಆಆ..
ಪ್ರೇಮವೆಂಬ ಯಮುನೆಯಲ್ಲಿ ಆಡೋ ರಾಸ ಕ್ರೀಡೆಯ
ಪ್ರೀತಿ ಎಂಬ ಬೃಂದಾವನದಿ ಸೇರು ಬಾರೇ ನಲ್ಲೆಯ
ತುಂಟ ಕೃಷ್ಣ ಲೀಲೆಗಾಗಿ
ತುಂಟ ಕೃಷ್ಣ ಲೀಲೆಗಾಗಿ ಸೋತು ಹೋದ ರಾಧೆಗೆ ಗಂಧ ಹಚ್ಚು ಮೈಯ್ಯಿಗೆ
ಮುಡಿದ ಹೂವು ಬಾಡೋ ಮುನ್ನ ಕೈ ವರಸೆ ತೋರು ಬಾರಾ ಬಾ... ..ಓಓಓ ... ಆಆಆ..
ಕೃಷ್ಣ ಬೇಗ ಬಾರೋ ದರುಶನ ತೋರೋ
ಉಟ್ಟ ಸೀರೆ ಮುದುಡೇ ಇಲ್ಲ ನಿನಗಾಗಿ ಕಾದೆ ಕೃಷ್ಣ ಮೆಚ್ಚಿದ ರಾಧೇ..
ಒಡಲ ಬೆಂಕಿ ಕುದಿಯುತಿಹುದು ತಂಪು ಮಾಡ ಬಾರಯ್ಯಾ..
ನೀನೇ ಕಟ್ಟಿದಂಥ ತಾಳಿ ಚುಚ್ಚಿದೆಯ ನಿನ್ನೆದೆಯ
ಜಿನುಗುತಿರುವ ಕೆಂದುಟಿ ಜೇನ... ಹೇ
ಜಿನುಗುತಿರುವ ಕೆಂದುಟಿ ಜೇನ...ದುಂಬಿಯಾಗಿ ಹೀರೆಯಾ ಮೂಗುತಿಯ ಒತ್ತಿದೆಯಾ
ಮಂಚದಲ್ಲಿ ಹಾಸಿದಂಥ ಹೂವ ಹೊಸಕು ಬಾರಾ ಬಾ... ಬಾ..
ಕೃಷ್ಣ ಬೇಗ ಬಾರೋ ದರುಶನ ತೋರೋ
ಉಟ್ಟ ಸೀರೆ ಮುದುಡೇ ಇಲ್ಲ ನಿನಗಾಗಿ ಕಾದೆ ಕೃಷ್ಣ ಮೆಚ್ಚಿದ ರಾಧೇ..
ಬಾ... .. ಆಆಆ.. ಬಾ... .. ಆಆಆ.. ಬಾ... .. ಆಆಆ.. ಬಾ... .. ಆಆಆ.. ಅಹ್ಹಹ್ಹಹಹ
--------------------------------------------------------------------------------------------------------------------------
ಕೃಷ್ಣ ಮೆಚ್ಚಿದ ರಾಧೆ (೧೯೮೮) - ಒಲವಿನ ಕವಿತೆಯ ಬರೆಯುವ ಹೃದಯಕೆ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ.
ಒಲವಿನ ಕವಿತೆಯ ಬರೆಯುವ ಹೃದಯಕೆ ಕಪಟವೂ ತಿಳಿದಿಲ್ಲಾ
ಬಡತನ ಎಂಬುದು ಸಿರಿತನವೆಂಬುದು ಪ್ರೇಮಕ್ಕೆ ಗೊತ್ತಿಲ್ಲಾ ..ಬೇಧವೂ ಅದಕಿಲ್ಲಾ .. ಒಂದೇ ಅದಕೆಲ್ಲಾ..
ಒಲವಿನ ಕವಿತೆಯ ಬರೆಯುವ ಹೃದಯಕೆ ಕಪಟವೂ ತಿಳಿದಿಲ್ಲಾ
ಬಡತನ ಎಂಬುದು ಸಿರಿತನವೆಂಬುದು ಪ್ರೇಮಕ್ಕೆ ಗೊತ್ತಿಲ್ಲಾ ..ಬೇಧವೂ ಅದಕಿಲ್ಲಾ .. ಒಂದೇ ಅದಕೆಲ್ಲಾ..
ಆಸರೆಗೆ ಯಾರು ಇಲ್ಲ ಕಣ್ಣೀರಿಗೆ ಅಂತ್ಯವಿಲ್ಲ
ಮನೆ ಇಲ್ಲ ನೆರಳು ಇಲ್ಲ ಬೀದಿಯು ಅರಮನೆಯು
ಗಂಗೆ ಇನ್ನು ಬತ್ತಿಲ್ಲ ಕರುಣೆ ಇನ್ನು ಸತ್ತಿಲ್ಲ
ನಂಬಿಕೆಯ ಹಸ್ತವ ಮುಂದೆ ನೀಡಿಹನು ನಲ್ಲ
ಅಂಬಿಗನು ಜೊತೆ ಇರಲು ದಡವ ಸೇರೋ ಚಿಂತೆ ಇಲ್ಲ
ಒಲವಿನ ಕವಿತೆಯ ಬರೆಯುವ ಹೃದಯಕೆ ಕಪಟವೂ ತಿಳಿದಿಲ್ಲಾ
ಬಡತನ ಎಂಬುದು ಸಿರಿತನವೆಂಬುದು ಪ್ರೇಮಕ್ಕೆ ಗೊತ್ತಿಲ್ಲಾ ..ಬೇಧವೂ ಅದಕಿಲ್ಲಾ .. ಒಂದೇ ಅದಕೆಲ್ಲಾ..
ಒಲವಿನ ಕವಿತೆಯ ಬರೆಯುವ ಹೃದಯಕೆ ಕಪಟವೂ ತಿಳಿದಿಲ್ಲಾ... ಆಆಆ....
ಕಂಕಣ ಭಾಗ್ಯ ಕೂಡುವ ಕಾಲವು ತಾನೇ ಬಂತಿಂದು
ಅವಳ ಕಣ್ಣ ಓರೇ ನೋಟ ಇವನ ಕಣ್ಣ ಪ್ರೇಮ ನೋಟ
ಕೂಡಿ ಕೂಡಿ ಹಾಡಿಹುದು ಅನುರಾಗದ ಹಾಡೊಂದು
ಮೈ ಮರೆತು ಮನ ಬೆರೆತು ಜೀವ ಜೀವ ಸೇರಿ ಎಲ್ಲ
ಒಲವಿನ ಕವಿತೆಯ ಬರೆಯುವ ಹೃದಯಕೆ ಕಪಟವೂ ತಿಳಿದಿಲ್ಲಾ
ಬಡತನ ಎಂಬುದು ಸಿರಿತನವೆಂಬುದು ಪ್ರೇಮಕ್ಕೆ ಗೊತ್ತಿಲ್ಲಾ ..ಬೇಧವೂ ಅದಕಿಲ್ಲಾ .. ಒಂದೇ ಅದಕೆಲ್ಲಾ..
ಒಲವಿನ ಕವಿತೆಯ ಬರೆಯುವ ಹೃದಯಕೆ ಕಪಟವೂ ತಿಳಿದಿಲ್ಲಾ.. ಆಆಆ
--------------------------------------------------------------------------------------------------------------------------
ಕೃಷ್ಣ ಮೆಚ್ಚಿದ ರಾಧೆ (೧೯೮೮) - ಪ್ರೀತಿ ದೈವವೂ ನಮ್ಮ ಅಕ್ಕ ಅಕ್ಕ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ , ರಮೇಶ
ಗಂಡು : ಪ್ರೀತಿ ದೈವವು ನಮ್ಮ ಅಕ್ಕ ಅಕ್ಕ
ರಮೇಶ : ನಮ್ಮ ಜೀವವೂ ನಮ್ಮ ಭಾವ ಭಾವ
ಗಂಡು : ತಂದೆ ಯಾರೋ ತಾಯಿ ಯಾರೋ ನಾವು ಕಾಣೆವಲ್ಲ ಎಂದು ನಮಗೆ ನೀವೇ ಎಲ್ಲ
ರಮೇಶ : ಅಕ್ಕ ಅಕ್ಕ ನಮ್ಮ ಅಮ್ಮನು ನೀನೇ ಭಾವ ಭಾವ ನಮ್ಮ ಅಪ್ಪನು ನೀನೇ
ಇಬ್ಬರು : ನಾವೇ ನಿಮ್ಮ ಮಕ್ಕಳು ತಾನೇ
ರಮೇಶ : ಪ್ರೀತಿ ದೈವವು ನಮ್ಮ ಅಕ್ಕ ಅಕ್ಕ
ಗಂಡು : : ನಮ್ಮ ಜೀವವೂ ನಮ್ಮ ಭಾವ ಭಾವ
ರಮೇಶ : ತಂದೆ ಯಾರೋ ತಾಯಿ ಯಾರೋ ನಾವು ಕಾಣೆವಲ್ಲ ಎಂದು ನಮಗೆ ನೀವೇ ಎಲ್ಲ
ಗಂಡು : ಅಕ್ಕ ಅಕ್ಕ ನಮ್ಮ ಅಮ್ಮನು ನೀನೇ ಭಾವ ಭಾವ ನಮ್ಮ ಅಪ್ಪನು ನೀನೇ
ಇಬ್ಬರು : ನಾವೇ ನಿಮ್ಮ ಮಕ್ಕಳು ತಾನೇ...
ಗಂಡು : ಅಕ್ಕ ಅಕ್ಕ ನಮ್ಮ ಅಮ್ಮನು ನೀನೇ ಭಾವ ಭಾವ ನಮ್ಮ ಅಪ್ಪನು ನೀನೇ
ಇಬ್ಬರು : ನಾವೇ ನಿಮ್ಮ ಮಕ್ಕಳು ತಾನೇ...
ರಮೇಶ :ಸತ್ಯ ನೀತಿಯ ಪಾಪ ಭೀತಿಯ ಲೋಕ ರೀತಿಯ ಭಾವ ಕಲಿಸಿದೆ
ಗಂಡು : ಅಕ್ಕನ ಮಾತಿಗೆಂದು ಎದುರೇ ಇಲ್ಲ
ರಮೇಶ : ಭಾವ ಎಳೆದ ಗೆರೆಯು ದಾಟುವುದಿಲ್ಲ
ಗಂಡು : ನಿಮ್ಮೆದುರು ಬಾಲ ಬಿಚ್ಚುವ ಧೈರ್ಯವೂ ಇಲ್ಲ
ರಮೇಶ : ಕೋಪ ನಿಮಗೆ ಬಂದುದನ್ನು ಕಂಡೆ ಇಲ್ಲ
ಇಬ್ಬರು : ಶಾಂತಿ ಸಹನೆ ಮೂರ್ತಿಯು ನೀವೇ ಎಲ್ಲ
ನೀವಲ್ಲದೆ ನಮಗೆ ಬೇರೆ ದೇವರೇ ಇಲ್ಲ
ಗಂಡು : ಪ್ರೀತಿ ದೈವವು ನಮ್ಮ ಅಕ್ಕ ಅಕ್ಕ
ರಮೇಶ : ನಮ್ಮ ಜೀವವೂ ನಮ್ಮ ಭಾವ ಭಾವ
ಗಂಡು : ತಂದೆ ಯಾರೋ ತಾಯಿ ಯಾರೋ ನಾವು ಕಾಣೆವಲ್ಲ ಎಂದು ನಮಗೆ ನೀವೇ ಎಲ್ಲ
ರಮೇಶ : ಅಕ್ಕ ಅಕ್ಕ ನಮ್ಮ ಅಮ್ಮನು ನೀನೇ ಭಾವ ಭಾವ ನಮ್ಮ ಅಪ್ಪನು ನೀನೇ
ಇಬ್ಬರು : ನಾವೇ ನಿಮ್ಮ ಮಕ್ಕಳು ತಾನೇ...
ಗಂಡು : ಪ್ರೀತಿ ದೈವವು ನಮ್ಮ ಅಕ್ಕ ಅಕ್ಕ
ರಮೇಶ : ನಮ್ಮ ಜೀವವೂ ನಮ್ಮ ಭಾವ ಭಾವ
ರಮೇಶ : ನಮ್ಮ ಜೀವವೂ ನಮ್ಮ ಭಾವ ಭಾವ
ಗಂಡು : ನಮಗೆ ಜನ್ಮವೂ ಮತ್ತೆ ಇದ್ದರೆ ನಿಮ್ಮ ಮಕ್ಕಳಾಗಿ ಹುಟ್ಟಿ ಬರುವೆವು
ರಮೇಶ : ಮಮತೆ ಮೂರ್ತಿಯೇ ಕರುಣೆ ಜ್ಯೋತಿಯೇ ನಿಮ್ಮ ಭಾರವ ನಾವು ಹೊರೆವೆವು
ಗಂಡು : ಅಕ್ಕನಿಗೆ ಇದುವರೆಗೆ ಮಕ್ಕಳೇ ಇಲ್ಲ ನಮ್ಮನ್ನು ಸಾಕಲೆಂದು ಹೇರಲೇ ಇಲ್ಲ
ಇಬ್ಬರು : ನಿಮ್ಮ ಋಣ ತೀರಿಸೋ ಬಗೆ ಗೊತ್ತೇ ಇಲ್ಲ ಧನ್ಯವಾದ ಹೇಳಲು ಮಾತುಗಳಿಲ್ಲ
ನಿಮ್ಮ ಋಣ ತೀರಿಸೋ ಬಗೆ ಗೊತ್ತೇ ಇಲ್ಲ ಧನ್ಯವಾದ ಹೇಳಲು ಮಾತುಗಳಿಲ್ಲ
ರಮೇಶ : ಪ್ರೀತಿ ದೈವವು ನಮ್ಮ ಅಕ್ಕ ಅಕ್ಕ
ಗಂಡು : : ನಮ್ಮ ಜೀವವೂ ನಮ್ಮ ಭಾವ ಭಾವ
ರಮೇಶ : ಪ್ರೀತಿ ದೈವವು ನಮ್ಮ ಅಕ್ಕ ಅಕ್ಕ
ಗಂಡು : : ನಮ್ಮ ಜೀವವೂ ನಮ್ಮ ಭಾವ ಭಾವ
ರಮೇಶ : ತಂದೆ ಯಾರೋ ತಾಯಿ ಯಾರೋ ನಾವು ಕಾಣೆವಲ್ಲ ಎಂದು ನಮಗೆ ನೀವೇ ಎಲ್ಲ
ಗಂಡು : ಅಕ್ಕ ಅಕ್ಕ ನಮ್ಮ ಅಮ್ಮನು ನೀನೇ ಭಾವ ಭಾವ ನಮ್ಮ ಅಪ್ಪನು ನೀನೇ
ಇಬ್ಬರು : ನಾವೇ ನಿಮ್ಮ ಮಕ್ಕಳು ತಾನೇ...
ಗಂಡು : ಅಕ್ಕ ಅಕ್ಕ ನಮ್ಮ ಅಮ್ಮನು ನೀನೇ ಭಾವ ಭಾವ ನಮ್ಮ ಅಪ್ಪನು ನೀನೇ
ಇಬ್ಬರು : ನಾವೇ ನಿಮ್ಮ ಮಕ್ಕಳು ತಾನೇ...
--------------------------------------------------------------------------------------------------------------------------
ಕೃಷ್ಣ ಮೆಚ್ಚಿದ ರಾಧೆ (೧೯೮೮) - ಬಾಳೋದು ಹೆಣ್ಣಿಂದ ಮನುಜ ಬೀಳೋದು ಹೆಣ್ಣಿಂದ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ
ಬಾಳೋದು ಹೆಣ್ಣಿಂದ ಮನುಜ ಬೀಳೋದು ಹೆಣ್ಣಿಂದ
ಅಳೋದು ಹೆಣ್ಣಿಂದ ಅವನು ಅಳಿವುದು ಹೆಣ್ಣಿಂದ
ಬಾಳೋದು ಹೆಣ್ಣಿಂದ ಮನುಜ ಬೀಳೋದು ಹೆಣ್ಣಿಂದ
ಅಳೋದು ಹೆಣ್ಣಿಂದ ಅವನು ಅಳಿವುದು ಹೆಣ್ಣಿಂದ
ಕಿತ್ತೂರ ಕೀರ್ತಿಯು ನಾಡೆಲ್ಲ ಹಬ್ಬುತ್ತ ಮರೆದಿದ್ದು ಹೆಣ್ಣಿಂದ
ಚಿತ್ರದುರ್ಗದ ಕೋಟೇಲಿ ವೈರಿಯ ಸೋಲಾಯ್ತು ಹೆಣ್ಣಿಂದ
ಶೂರ ರಕ್ಕಸ ಮಹಿಷ ಮರ್ಧನ ಆಗಿದ್ದು ಹೆಣ್ಣಿಂದ
ತ್ರಿಲೋಕ ಆಳುವ ತ್ರಿಮೂರ್ತಿಗಳು ಶಿಶುವಾದದ್ದು ಹೆಣ್ಣಿಂದ
ಇಂಡಿಯಾ ಚಿನ್ನದ ಪದಕ ಗೆದ್ದಿದ್ದು ಕೂಡ ಹೆಣ್ಣಿಂದ
ಇಂಡಿಯಾ ಚಿನ್ನದ ಪದಕ ಗೆದ್ದಿದ್ದು ಕೂಡ ಹೆಣ್ಣಿಂದ
ಗಂಡನ ಮುನ್ನೆಡೆಗೆ ನಿಜ ಶಕ್ತಿ ಹೆಣ್ಣಿಂದ
ಬಾಳೋದು ಹೆಣ್ಣಿಂದ ಮನುಜ ಬೀಳೋದು ಹೆಣ್ಣಿಂದ
ಅಳೋದು ಹೆಣ್ಣಿಂದ ಅವನು ಅಳಿವುದು ಹೆಣ್ಣಿಂದ
ಬಾಳೋದು ಹೆಣ್ಣಿಂದ ಮನುಜ ಬೀಳೋದು ಹೆಣ್ಣಿಂದ
ಅಳೋದು ಹೆಣ್ಣಿಂದ ಅವನು ಅಳಿವುದು ಹೆಣ್ಣಿಂದ
ಅಂದು ಪುತ್ರ ಶೋಕದಲಿ ದಶರಥ ಪ್ರಾಣವ ಬಿಟ್ಟಿದ್ದು ಹೆಣ್ಣಿಂದ
ಲಂಕೆಯ ರಾವಣ ಕಾಮಕ್ಕೆ ಸಿಲುಕಿ ಹಾಳಾದ್ದು ಹೆಣ್ಣಿಂದ
ಮರಳು ಕಾಡಿನಲಿ ಮಜನೂ ಹುಚ್ಚಿನಲಿ ತಿರುಗಿದ್ದು ಹೆಣ್ಣಿಂದ
ಅಂದು ಕೀಚಕ ಭೀಮನ ಕೈಯಲ್ಲಿ ಸೋತು ಸತ್ತಿದ್ದು ಹೆಣ್ಣಿಂದ
ರಾಜಕೀಯ ಪಕ್ಷವೊಂದು ಎರಡಾದ್ದು ಹೆಣ್ಣಿಂದ
ರಾಜಕೀಯ ಪಕ್ಷವೊಂದು ಎರಡಾದ್ದು ಹೆಣ್ಣಿಂದ
ಲಂಚದ ಭೂತಕ್ಕೆ ಸತ್ಯ ಸಂಧನೂ ಬಲಿಯಾದ ನಿನ್ನಿಂದ
ಬಾಳೋದು ಹೆಣ್ಣಿಂದ ಮನುಜ ಬೀಳೋದು ಹೆಣ್ಣಿಂದ
ಅಳೋದು ಹೆಣ್ಣಿಂದ ಅವನು ಅಳಿವುದು ಹೆಣ್ಣಿಂದ
ಬಾಳೋದು ಹೆಣ್ಣಿಂದ ಮನುಜ ಬೀಳೋದು ಹೆಣ್ಣಿಂದ
ಅಳೋದು ಹೆಣ್ಣಿಂದ ಅವನು ಅಳಿವುದು ಹೆಣ್ಣಿಂದ
--------------------------------------------------------------------------------------------------------------------------
ಕೃಷ್ಣ ಮೆಚ್ಚಿದ ರಾಧೆ (೧೯೮೮) - ನೋಡಿ ನಗುತಿದೆ ಬೊಂಬೆ
ಸಂಗೀತ : ಶಂಕರ ಗಣೇಶ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ವಾಣಿಜಯರಾಂ
ನೋಡಿ ನಗುತಿದೆ ಬೊಂಬೆ ನನ್ನ ನೋಡಿ ನಗುತಿದೆ ಬೊಂಬೆ
ನೋಡಿ ನಗುತಿದೆ ಬೊಂಬೆ ನನ್ನ ನೋಡಿ ನಗುತಿದೆ ಬೊಂಬೆ
ನಮ್ಮಂತೆ ಈ ಹೆಣ್ಣು ಆಟದ ಬೊಂಬೆಯೂ ಎಂದು ಅಣಕಿಸಿ
ನೋಡಿ ನಗುತಿದೆ ಬೊಂಬೆ ನನ್ನ ನೋಡಿ ನಗುತಿದೆ ಬೊಂಬೆ
ಶಕ್ತಿ ಇರೋ ಗಂಡಸಿಗೆ ಬುದ್ದಿ ಇಲ್ಲ ಇದು ವಿಧಿಯು ಬರೆದಿಹ ಬರಹ
ಬೆಳ್ಳಗಿರೋದೆಲ್ಲ ಹಾಲು ಎಂದು ಅಲ್ಲ ಈ ನಿಜವ ನಂಬುವರಿಲ್ಲ
ಕಪ್ಪಗಿರೋದೆಲ್ಲ ಎಂದು ವಿಷವಲ್ಲ ಈ ಸತ್ಯವ ತಿಳಿದೋರಿಲ್ಲ
ತ್ಯಾಗಕ್ಕಾಗಿ ಬಾಳೋರೆಲ್ಲ ತಿರುಪೆ ಬೇಡೋ ಕಾಲದಲಿ
ಸ್ವಾರ್ಥಕ್ಕಾಗಿ ಬಾಳಿದರೆ ಒಪ್ಪೇನೋ ನಾ ಕಾಣೆ.. ಅಹ್ಹಹ್ಹ
ನೋಡಿ ನಗುತಿದೆ ಬೊಂಬೆ ನನ್ನ ನೋಡಿ ನಗುತಿದೆ ಬೊಂಬೆ
ನಮ್ಮಂತೆ ಈ ಹೆಣ್ಣು ಆಟದ ಬೊಂಬೆಯೂ ಎಂದು ಅಣಕಿಸಿ
ನೋಡಿ ನಗುತಿದೆ ಬೊಂಬೆ ನನ್ನ ನೋಡಿ ನಗುತಿದೆ ಬೊಂಬೆ
ಅದೇ ನ್ಯಾಯವನ್ನು ಬೆಲೆ ಕೊಟ್ಟು ಕೊಂಡುಕೊಂಡು ಇಲಿಯಾಗಿದೆ ಹುಲಿಯಾ ಹಾಗೆ
ಸುರಿವುದು ಘನತೆ ಗೌರವ ಸಿರಿತನವೇ ನಮಗಿರುವಾಗ
ಹೀನವಾಗಿ ಕಾಣುವರೂ ನಮ್ಮನ್ನೆಲ್ಲ ಬಡತನದೇ ಮುಳುಗಿರುವಾಗ
ಹರಿಶ್ಚಂದ್ರ ಕಷ್ಟವ ಪಟ್ಟ ಕಾಪಾಡಿ ಸತ್ಯವನು
ಒಂದು ಸುಳ್ಳು ಹೇಳಿದ್ದರೇನು ಆದೆ ದೊಡ್ಡ ತಪ್ಪೇನು.. ಆಹ್
ನೋಡಿ ನಗುತಿದೆ ಬೊಂಬೆ ನನ್ನ ನೋಡಿ ನಗುತಿದೆ ಬೊಂಬೆ
ನಮ್ಮಂತೆ ಈ ಹೆಣ್ಣು ಆಟದ ಬೊಂಬೆಯೂ ಎಂದು ಅಣುಕಿಸಿ
ನೋಡಿ ನಗುತಿದೆ ಬೊಂಬೆ ನನ್ನ ನೋಡಿ ನಗುತಿದೆ ಬೊಂಬೆ
--------------------------------------------------------------------------------------------------------------------------
No comments:
Post a Comment