1164. ಕುಲಪುತ್ರ (೧೯೮೧)


ಕುಲಪುತ್ರ ಚಲನಚಿತ್ರದ ಹಾಡುಗಳು
  1. ಈ ಲೋಕವೊಂದು ಪ್ರವಾಸಿ ಮಂದಿರ ಅತಿ ಸುಂದರ 
  2. ಮನ್ಮಥ ಕುಣಿಯಲು ಆಸೆಯೂ ಕುಣಿವುದೂ 
  3. ಸಂಪಿಗೆ ಹೂವಲ್ಲಿ ಕಂಪಿರುವಂತೆ 
  4. ನಿನ್ನಾಟವೆಲ್ಲ ಮುಗಿದಂತೆ ಈಗ 
ಕುಲಪುತ್ರ (೧೯೮೧) - ಈ ಲೋಕವೊಂದು ಪ್ರವಾಸಿ ಮಂದಿರ ಅತಿ ಸುಂದರ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ

ಗಂಡು : ಹೂಂ ಹೂಂ ಹೂಂ  ಈ ಲೋಕವೊಂದು ಪ್ರವಾಸಿ ಮಂದಿರ ಆತಿ ಸುಂದರ ಚೆಲುವಿನ ಪಂಜರ
            ಹಗಲೊಂದು ದ್ವಾರ ಇರುಳೊಂದು ದ್ವಾರ ಕಾವಲಿರುವರು ಸೂರ್ಯ ಚಂದಿರ ನಿರಂತರ.. ಆಆಆ
            ಹ್ಹಾ... ಹಹ್ಹಾ... ಬರುವ ಜನರಿಗೇ ಜಾಗ ಬಿಡಲೇಬೇಕು ಬೇಗ
           ಬರುವ ಜನರಿಗೇ ಜಾಗ ಬಿಡಲೇಬೇಕು ಬೇಗ ನಮಗಿಲ್ಲಿ ಮೂರೇ ದಿನ ತಾಣ
           ನಮಗಿಲ್ಲಿ ಮೂರೇ ದಿನ ತಾಣ ಅದರೊಳಗೆ ನಾವು ಮುದ್ದಾಡಿ ನಲಿದಾಡೋಣ (ಆಆಆ)
           ಬರುವ ಜನರಿಗೇ ಜಾಗ ಬಿಡಲೇಬೇಕು ಬೇಗ ನಮಗಿಲ್ಲಿ ಮೂರೇ ದಿನ ತಾಣ
           ನಮಗಿಲ್ಲಿ ಮೂರೇ ದಿನ... ಆಆಆ.... ಹ್ಹಾ.. ಹ್ಹಹ್ಹಾ...

ಹೆಣ್ಣು : ಆಆಆ... ಆಆಆ... ಆಆಆ.... (ಆಆಆ.. )
         ಸಾಲವಾಗಿ ನಮಗೆ ದೇವರು ಕೊಟ್ಟ ಪ್ರಾಣ ಇದು ಕಾಲ ಮೀರಿದ ಮೇಲೆ ಬಿಡಲಾರ ಒಂದು ಕ್ಷಣ
ಗಂಡು : ಹ್ಹಾ.. ಆಆಆ.. ಅದಕ್ಕೇ ಮುಂಚೇ..           ಕುಡಿಯೋಣ ಗಟಗಟ ಎಂದು ಕುಣಿಯೋಣ ಥೈ ಥೈ ಎಂದೂ
           ಕುಡಿಯೋಣ ಗಟಗಟ ಎಂದು ಕುಣಿಯೋಣ ಥೈ ಥೈ ಎಂದೂ
           ಹಾಡೋಣ ಸರಿಗಮ ಎಂದು ಆಡೋಣ ಸೈ ಸೈ ಎಂದೂ
          ಹಾಯಾಗಿ ಒಂದಾಗಿ ಹಿತವಾಗಿ ಝಂ ಝಂ ಎಂದು
ಹೆಣ್ಣು : ಬರುವ ಜನರಿಗೇ ಜಾಗ (ಅರೆರೇ )ಬಿಡಲೇಬೇಕು ಬೇಗ
ಗಂಡು : ನಮಗಿಲ್ಲಿ ಮೂರೇ ದಿನ... ನಮಗಿಲ್ಲಿ ಮೂರೇ ದಿನ.
ಹೆಣ್ಣು : ಮುದ್ದಾಡಿ ನಲಿದಾಡೋಣ ಆಆಆ..  ಆಆಆ.. ಆಆಆ.. 

ಗಂಡು : ಆಆಆ... ಎಂಥ ಕಟುಕ ಅವನು ಹೊಯ್  ಇಂಥಾ ರೂಪವಂತೆಯನ್ನು
           ಇವಳಾ ಕಮಲದ ಕಣ್ಣನ್ನು ಇವಳಾ ಸಂಪಿಗೆ ಮೂಗನ್ನೂ
          ಇವಳಾ ಹವಳದ ತುಟಿಯನ್ನು ಇವಳು ಬಳ್ಳಿಯ ನಡುವನ್ನೂ
          ಇವಳ ಕೋಮಲ ತನುವನ್ನು ಇವಳ ನವಯೌವ್ವನವನ್ನು
          ಕಾಲದ ನೆಪದಲ್ಲಿ ನಾಳೇ ಬಿಡದೆ ಕಸಿಯುವನು ಅದಕ್ಕೇ ಈಗ್ಲೆ ...
         ಇವಳನ್ನು ಸೇರೋಣ ಆನಂದ ಹೊಂದೋಣ
ಹೆಣ್ಣು : ಬರುವ ಜನರಿಗೇ ಜಾಗ (ಹ್ಹಹ್ಹ ) ಬಿಡಲೇಬೇಕು ಬೇಗ
ಗಂಡು : ನಮಗಿಲ್ಲಿ ಮೂರೇ ದಿನ ತಾಣ ನಮಗಿಲ್ಲಿ ಮೂರೇ ದಿನ...
ಹೆಣ್ಣು : ಅಹ್ಹಹ್ಹಹ್ಹ ... ಅದರೊಳಗೆ ನಾವು ಮುದ್ದಾಡಿ ನಲಿದಾಡೋಣ
--------------------------------------------------------------------------------------------------------------------------

ಕುಲಪುತ್ರ (೧೯೮೧) - ಮನ್ಮಥ ಕುಣಿಯಲೂ ಆಸೆಯೂ ಕುಣಿವುದು
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ

ಗಂಡು : ಮನ್ಮಥ ಕುಣಿಯಲು ಯೌವ್ವನ ಕುಣಿವುದು ಮನ್ಮಥ ನಲಿಯಲು ಆಸೆಯೂ ನಲಿವುದು
           ಹೂವಾಗಿ ಮನಸು ಆಗ ನೂರಾರು ಕನಸು ....(ಲಲ್ಲಲ್ಲಲ್ಲಲ್ಲಾ.. ) ನೂರಾರು ಕನಸು .
ಹೆಣ್ಣು : ಆಆಆ... ಆಆಆ... ಆಆಆ...

ಗಂಡು : ಮಾವಿನ ಮರವು ಮುದಿಯಾಗುತಿರೇ ಹಣ್ಣಿನ ರುಚಿ ಕಹಿಯೇನು
            ಸಂಪಿಗೆ ಮರವು ಮುಡಿಯಾದರೇ ಆ ಹೂವಲಿ ಕಂಪಿರದೇನೂ ( ಆಆಆ... ಲಲ್ಲಲ್ಲಲ್ಲಲ್ಲಾ.. ಆಆಆ.. )
           ಕಣ್ಣಲಿ ಕರೆಯುವ  ಹೆಣ್ಣಿನ ನೋಟಕೆ ಸೋಲದ ಜನರುಂಟೇನು
           ಚೆಲುವೆಯ ಸ್ನೇಹವ ಅಂಗನೆ ಸಂಗವ ಬೇಡದ ಮನಸುಂಟೆನು
           ಮದನನ ಬಾಣ ಸೋಕಿದ ಮೇಲೆ ಮುದಿಯನ ಬದುಕು ಶೃಂಗಾರ ಲೀಲೆ
          ಮನ್ಮಥ ಕುಣಿಯಲು ಯೌವ್ವನ ಕುಣಿವುದು ಮನ್ಮಥ ನಲಿಯಲು ಆಸೆಯೂ ನಲಿವುದು
          ಹೂವಾಗಿ ಮನಸು ಆಗ ನೂರಾರು ಕನಸು ....(ಆಆಆ... ಆಆಆ... ಆಆಆ  )

ಗಂಡು : ಮೂರನೇ ಕಣ್ಣಲಿ ಮಾರನ ಈಶ್ವರ ಸುಟ್ಟನು ಎಂಬುದು ಸುಳ್ಳು
           ಕಾಮಿನಿ ಕಂಗಳ ಅಂಚಲಿ ಇನ್ನೂ ತೋರುವ ಸಕ್ಕರೆ ಬಿಲ್ಲು (ಆಆಆ... ಪಪ್ಪಪ್ಪ .. ಆಆಆ  )
           ತಾಳೆನು ವಿರಹದ ನೋವನು ಸುಂದರಿ ಸನಿಹಕೆ ಬಂದು ನಿಲ್ಲು
           ಅನುದಿನ ತಾಪವ ತೀರಿಸಿ ನಂತರ ನಿನ್ನಾ ನಗುವಲಿ ಕೊಲ್ಲು
           ಸುಂದರ ತಾರೆ ಪ್ರೀತಿಯ ಧಾರೆ ಮಲ್ಲಿಗೆ ಹಾಸಿಗೆ ಹಾಸುವೇ ಬಾರೆ
          ಮನ್ಮಥ (ಆ) ಕುಣಿಯಲು (ಆ) ಯೌವ್ವನ (ಆ) ಕುಣಿವುದು (ಆ) ಮನ್ಮಥ (ಆ)
          ನಲಿಯಲು (ಆ) ಆಸೆಯೂ (ಆ) ನಲಿವುದು
ಎಲ್ಲರು : ಹೂವಾಗಿ ಮನಸು ಆಗ ನೂರಾರು ಕನಸು ....(ಪಪ್ಪಪ್ಪಪ್ಪ   )
             ಹೂವಾಗಿ ಮನಸು ಆಗ ನೂರಾರು ಕನಸು ...
--------------------------------------------------------------------------------------------------------------------------

ಕುಲಪುತ್ರ (೧೯೮೧) - ಸಂಪಿಗೆ ಹೂವಲ್ಲಿ ಕಂಪಿರುವಂತೇ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ

ಗಂಡು : ಸಂಪಿಗೆ ಹೂವಲ್ಲಿ ಕಂಪಿರುವಂತೆ ಹರಿಯುವ ನೀರಲ್ಲಿ ತಂಪಿರುವಂತೆ
            ಕೋಗಿಲೆ ದನಿಯಲ್ಲಿ  ಇಂಪಿರುವಂತೆ  ಇರಬೇಕು ನೀ ನನ್ನಲ್ಲಿ..
ಹೆಣ್ಣು : ಬಾನಲಿ ನೀಲಿಯು ಸೇರಿರುವಂತೆ ಮಿಂಚಲ್ಲಿ ಬೆಳ್ಳಿಯ ಹೊಳಪಿರುವಂತೇ
          ಜೇನಲ್ಲಿ ಸಿಹಿಯು ತುಂಬಿರುವಂತೆ ಇರಬೇಕು ನೀ ನನ್ನಲ್ಲಿ...

ಗಂಡು : ಆ ಸೂರ್ಯಗೆ ಆ ಚಂದ್ರಗೆ ಆಕಾಶವೇ ತಾಣ ಗಿರಿ ಸಾಲಿಗೆ ವನರಾಶಿಗೆ ಈ ಭೂಮಿಯ ತಾಣ
           ಆ ಸೂರ್ಯಗೆ ಆ ಚಂದ್ರಗೆ ಆಕಾಶವೇ ತಾಣ ಗಿರಿ ಸಾಲಿಗೆ ವನರಾಶಿಗೆ ಈ ಭೂಮಿಯ ತಾಣ
           ನನ ಸಂಗಾತಿ ನಿನ್ನ ಸ್ಥಾನ ಈ ಹೃದಯವು ನನ್ನೀ ಹೃದಯವೂ ..
ಹೆಣ್ಣು : ಬಾನಲ್ಲಿ  ನೀಲಿಯು ಸೇರಿರುವಂತೆ     ಗಂಡು : ಹರಿಯುವ ನೀರಲ್ಲಿ ತಂಪಿರುವಂತೆ
ಹೆಣ್ಣು : ಜೇನಲ್ಲಿ ಸಿಹಿಯು ತುಂಬಿರುವಂತೆ     ಗಂಡು : ಇರಬೇಕು ಹ್ಹಾ....
ಹೆಣ್ಣು : ನೀ ನನ್ನಲ್ಲಿ...

ಹೆಣ್ಣು : ಆಕಾಶದ ಮಳೆಗೀಲ್ಲಿಗೆ ಆ ಬಣ್ಣವೇ ಪ್ರಾಣ ಕುಣಿದಾಡುವ ನವಿಲಂದಕೆ ಆ ಗರಿಗಳೇ ಪ್ರಾಣ 
          ಆಕಾಶದ ಮಳೆಗೀಲ್ಲಿಗೆ (ಲಲಲಲ್ಲಲ ) ಆ ಬಣ್ಣವೇ ಪ್ರಾಣ ಕುಣಿದಾಡುವ ನವಿಲಂದಕೆ(ಲಲಲಲ್ಲಲ )
           ಆ ಗರಿಗಳೇ ಪ್ರಾಣ ನಿಜ ನನ್ನಾಣೆ ನನ್ನ ಪ್ರಾಣ ನೀನೇ ನಲ್ಲನೇ .. ನೀನೇ ನಲ್ಲನೇ .. 
ಗಂಡು : ಸಂಪಿಗೆ ಹೂವಲ್ಲಿ ಕಂಪಿರುವಂತೆ ಹರಿಯುವ ನೀರಲ್ಲಿ ತಂಪಿರುವಂತೆ
            ಕೋಗಿಲೆ ದನಿಯಲ್ಲಿ  ಇಂಪಿರುವಂತೆ  ಇರಬೇಕು ನೀ ನನ್ನಲ್ಲಿ..
ಹೆಣ್ಣು : ಬಾನಲ್ಲಿ ನೀಲಿಯು ಸೇರಿರುವಂತೆ ಮಿಂಚಲ್ಲಿ ಬೆಳ್ಳಿಯ ಹೊಳಪಿರುವಂತೇ
          ಜೇನಲ್ಲಿ ಸಿಹಿಯು ತುಂಬಿರುವಂತೆ ಇರಬೇಕು ನೀ ನನ್ನಲ್ಲಿ... 
--------------------------------------------------------------------------------------------------------------------------

ಕುಲಪುತ್ರ (೧೯೮೧) - ನಿನ್ನಾಟವೆಲ್ಲಾ ಮುಗಿದಂತೇ ಈಗ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ

ಗಂಡು : ನಿನ್ನಾಟವೆಲ್ಲ ಮುಗಿದಂತೆ ಈಗ ನೀ ಹಾಕಬೇಕು ನನ್ನ ಮುಂದೆ ಲಾಗ
            ತೆಗೆದುಕೋ ಯಜಮಾನ ಕೊಡುವೆನು ಬಹುಮಾನ

ಹೆಣ್ಣು : ಆಆಆ... ಆಆಆ.... ಆ.. ಆ..
ಗಂಡು : ಹೇಳೋದೊಂದು ಮಾಡೋದೊಂದು ಕೊನೆಗೆ ಆಗೋದೊಂದು
           ಒಳಗೆ ಒಂದು ಹೊರಗೆ ಒಂದು ಮಾಡೋದೇ ಬೇರೊಂದು
ಹೆಣ್ಣು :  ಹ್ಹಾ..  ಅನ್ನ ತಿಂದ ಮನೆಗೇ ಕನ್ನಾ ಹಾಕಿ ಸಿಕ್ಕಿದ್ದನ್ನೆಲ್ಲಾ ದೋಚಾಯ್ತು
          ಹೇ.. ಅನ್ನ ತಿಂದ ಮನೆಗೇ ಕನ್ನಾ ಹಾಕಿ ಸಿಕ್ಕಿದ್ದನ್ನೆಲ್ಲಾ ದೋಚಾಯ್ತು
         ನಿನ್ನಾಟ ಮುಗಿವ ಕಾಲ ಬಂದಾಯ್ತು ನಿನ್ನನ್ನು ಬಡಿವಾ ಕೆಲಸ ನಂಗಾಯ್ತು
ಗಂಡು : ತೆಗೆದುಕೋ ಯಜಮಾನ             ಹೆಣ್ಣು : ಕೊಡುವೆನು ಬಹುಮಾನ

ಹೆಣ್ಣು : ಆಆಆ... ಆಆಆ.... ಆ.. ಆ..
ಗಂಡು : ಹೆಣ್ಣು ಉಂಟು ಹೆಂಡಾ ಉಂಟು ಮೋಸ ವಂಚನೆಯುಂಟು
           ಗುಳ್ಳೇನರಿ ಬುದ್ಧಿಯುಂಟು ನಂಬಿಸಿ ಕೊಲ್ಲೋದುಂಟು
ಹೆಣ್ಣು : ಹ್ಹಾ.. ಅಂತೂ ಇಂತೂ ನಿಂಗೂ ನಂಗೂ ದೇವ್ರು ಹಾಕಿದನೇತಕೋ ಈ ಗಂಟು 
         ಅಂತೂ ಇಂತೂ ನಿಂಗೂ ನಂಗೂ ದೇವ್ರು ಹಾಕಿದನೇತಕೋ ಈ ಗಂಟು
         ನುಂಗಿದ್ದನ್ನೇಲ್ಲಾ ಕಕ್ಕಲೇ ಬೇಕು ಕಕ್ಕುವ ತನಕ ನಾ ಇಕ್ಕಲೇ ಬೇಕು 
ಗಂಡು : ತೆಗೆದುಕೋ ಯಜಮಾನ            ಹೆಣ್ಣು : ಕೊಡುವೆನು ಬಹುಮಾನ
ಗಂಡು : ನಿನ್ನಾಟವೆಲ್ಲ ಮುಗಿದಂತೆ ಈಗ   ಹೆಣ್ಣು : ನೀ ಹಾಕಬೇಕು ನನ್ನ ಮುಂದೆ ಲಾಗ 
ಇಬ್ಬರು : ತೆಗೆದುಕೋ ಯಜಮಾನ ಕೊಡುವೆನು ಬಹುಮಾನ
--------------------------------------------------------------------------------------------------------------------------

No comments:

Post a Comment