ಲಯನ್ ಜಗಪತಿರಾವ್ ಚಲನಚಿತ್ರದ ಹಾಡುಗಳು
- ಪ್ರೇಮಕ್ಕೆ ಪರ್ಮಿಟ್ ಬಂತು ಮದುವೆಗೆ ಸಿಗ್ನಲ್ ತಂತು
- ಸ್ವಾಗತ ನಿಮಗೆ ವಂದನೆ ನಿಮಗೆ ಸಂಭ್ರಮ ಸಂತೋಷ ನಿಮಗೆ
- ಏನಿದು ಶೋಧನೆ ಏಕೆ ಈ ವೇದನೆ
- ಕುಮಾರ್ ಕುಮಾರ್ ಕುಮಾರ್
- ವಿದ್ಯಾಬುದ್ಧಿ ಧನಾದಿ
- ಗಜಾನನ ಪದ್ಮಾರ್ಕಂ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಎಸ್./ಜಾನಕೀ
ಗಂಡು : ಪ್ರೇಮಕ್ಕೆ ಪರ್ಮಿಟ್ ಬಂತು ಮದುವೆಗೆ ಸಿಗ್ನಲ್ ತಂತು ಓ... ಚಿನ್ನಾ... ಓಓಓ ..
ನನ್ನಾ ಸೇರಿದೆ ಮನಸಲಿ ನೀನೇ ತುಂಬಿದೆ ಪ್ರೀತಿ ಎನ್ನುವ ಆಸೆಗಳನು ಕಣ್ಣು ಕೇಳಿವೆ ನೋಡಿಂದು
ಹೆಣ್ಣು : ಪ್ರೇಮಕ್ಕೆ ಪರ್ಮಿಟ್ ಬಂತು ಮದುವೆಗೆ ಸಿಗ್ನಲ್ ತಂತು ಓ... ಚೆನ್ನಾ... ಓಓಓ ..
ಆಸೆ ಮೂಡಿದೆ ಗರಿ ತೆರೆದು ಮೇಲೆ ಹಾರಿದೆ ಏನೋ ನೂತನ ಬಯಕೆಯ ಮೈಯ ತುಂಬಿದೆ ನೋಡಿಂದು
ಗಂಡು : ಪ್ರೇಮಕ್ಕೆ ಪರ್ಮಿಟ್ ಬಂತು ಮದುವೆಗೆ ಸಿಗ್ನಲ್ ತಂತು ಓ... ಚಿನ್ನಾ... ಓಓಓ ..
ಗಂಡು : ಮೊಲ್ಲೆ ಮೊಗ್ಗು ಅರಳೋ ಹಾಗೆ ನಗುತಾ ನನ್ನಾ ಗೆದ್ದೇ ಇಷ್ಟು ಕಾಲ ಸಿಗದೇ ನನಗೆ ನೀನು ಎಲ್ಲಿ ಇದ್ದೆ
ಹೆಣ್ಣು : ನಿನಗಾಗಿ ತಾನೇ ಹುಟ್ಟಿ ಬಂದೆ ನನ್ನನ್ನೇ ನಿನಗೆ ಒಲವಿಂದ ತಂದೆ
ಗಂಡು : ಮದುಮಗ ಆಗುವೆ ನಾನು ಮದುಮಗಳಾಗುವೆ ನೀನು ಓ ಚಿನ್ನಾ.. ಓಓಓ ..
ಹೆಣ್ಣು : ಪ್ರೇಮಕ್ಕೆ ಪರ್ಮಿಟ್ ಬಂತು ಮದುವೆಗೆ ಸಿಗ್ನಲ್ ತಂತು ಓ... ಚೆನ್ನಾ... ಓಓಓ ..
ಗಂಡು : ನನ್ನಾ ಸೇರಿದೆ ಮನಸಲಿ ನೀನೇ ತುಂಬಿದೆ ಪ್ರೀತಿ ಎನ್ನುವ ಆಸೆಗಳನು ಕಣ್ಣು ಕೇಳಿವೆ ನೋಡಿಂದು
ಹೆಣ್ಣು : ಮಾಲೆಯಲಿ ಹಾಕುವೆ ಪ್ರೀತಿಯಲಿ ನಿನ್ನಾ ಸೇರುವೆ
ಗಂಡು : ನನ್ನಾ ಆಸೆಯ ಗುಟ್ಟಿನಲಿ ನಿನ್ನಾ ಕೇಳುವೆ ಇನ್ನೆಂದೂ
ಹೆಣ್ಣು : ತುಂಟ ನಿನ್ನ ಆಟ ತಂತು ಕೆನ್ನೆ ಮೇಲೆ ಗಾಯ ಓಓಓ ..
ಮತ್ತೆ ಮುತ್ತು ಕೊಟ್ಟ ವೇಳೆ ನೋವು ಮಂಗಮಾಯ
ಗಂಡು : ಅಹಾ ಪ್ರತಿ ರಾತ್ರಿ ಇನ್ನೂ ಹೊಸ ಆಟ ನೋಡು ನಗಲೆಂದ ಅಧರ ನಶೆಯಲ್ಲಿ ಆಡು
ಹೆಣ್ಣು : ಕಟ್ಟಿದೆ ನೀನು ತಾಳಿ ನಿನ್ನಯ ಸಂಗದೆ ಜಾಲಿ ಓ ಚೆನ್ನಾ.. ಓಓಓ ..
ಗಂಡು : ದಾಹ ತೀರಿಸು ಹರುಷದಲಿ ನನ್ನ ತೇಲಿಸು ಎಂದೆಂದೂ...
ಹೆಣ್ಣು : ಪ್ರೇಮಕ್ಕೆ ಪರ್ಮಿಟ್ ಬಂತು ಮದುವೆಗೆ ಸಿಗ್ನಲ್ ತಂತು ಓ... ಚೆನ್ನಾ... ಓಓಓ ..
ಆಸೆ ಮೂಡಿದೆ ಗರಿ ತೆರೆದು ಮೇಲೆ ಹಾರಿದೆ ಏನೋ ನೂತನ ಬಯಕೆಯ ಮೈಯ ತುಂಬಿದೆ ನೋಡಿಂದು
ಗಂಡು : ಪ್ರೇಮಕ್ಕೆ ಪರ್ಮಿಟ್ ಬಂತು ಮದುವೆಗೆ ಸಿಗ್ನಲ್ ತಂತು ಓ... ಚಿನ್ನಾ... ಓಓಓ ..
ನನ್ನಾ ಸೇರಿದೆ ಮನಸಲಿ ನೀನೇ ತುಂಬಿದೆ ಪ್ರೀತಿ ಎನ್ನುವ ಆಸೆಗಳನು ಕಣ್ಣು ಕೇಳಿವೆ ನೋಡಿಂದು
ಇಬ್ಬರು : ಪ್ರೇಮಕ್ಕೆ ಪರ್ಮಿಟ್ ಬಂತು ಮದುವೆಗೆ ಸಿಗ್ನಲ್ ತಂತು ಓ... ಚಿನ್ನಾ... ಓಓಓ ..
-------------------------------------------------------------------------------------------------------------------------
ಲಯನ್ ಜಗಪತಿರಾವ್ ( ೧೯೯೧) - ಸ್ವಾಗತ ನಿಮಗೆ ವಂದನೆ ನಿಮಗೆ ಸಂಭ್ರಮ ಸಂತೋಷ ನಿಮಗೆ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್./ಜಾನಕೀ, ಕೋರಸ್
ಸ್ವಾಗತ ನಿಮಗೇ ವಂದನೆ ನಿಮಗೇ ಸಂಭ್ರಮ ನಿಮಗೆ ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ ಜಯವಾಗಲಿ ಮಹನೀಯರೇ ಈ ವಿಜಯಕೇ ಅಭಿನಂದನೆ
ಈ ಪ್ರೀತಿ ಆನಂದ ನಿಮಗೆ ಹೀಗೆ ಎಂದೆಂದೂ ಹೀಗೆ
ಸ್ವಾಗತ ನಿಮಗೇ ವಂದನೆ ನಿಮಗೇ ಸಂಭ್ರಮ ನಿಮಗೆ ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಸತ್ಯದಾ ಹಾದಿಯು ನಿಮದಾಗಲಿ ನ್ಯಾಯದಾ ಪೀಠಕೆ ಹೆಮ್ಮೆಯಾಗಲಿ
ಕಾನೂನು ಕೈಗೆ ಶಕ್ತಿ ನೀಡಲಿ ಕರ್ತವ್ಯ ನಿಷ್ಠೆಗೇ ಸಾಕ್ಷಿಯಾಗಲಿ
ಈ ಮಧು ಸಂಜೆ ಸವಿ ಸಂಜೆ ಹೊಸ ತಾಳ ಹೊಸ ರಾಗ ಹೊಸ ಹಾಡು ನಿಮಗಾಗೇ
ಹೇ... ಅಂದವ ಸವಿಯುತ ಹಾಡಿ
ಸ್ವಾಗತ ನಿಮಗೇ ವಂದನೆ ನಿಮಗೇ ಸಂಭ್ರಮ ನಿಮಗೆ ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಮುಳ್ಳಿನ ದಾರಿಯೇ ಎದುರಾದರು ಅಂಜದೆ ಗಂಡೆದೆ ನಿಮ್ಮದಾಗಲಿ
ರಕ್ತವೇ ಹಾದಿಗೆ ಅಡ್ಡ ಬಂದರು ಧರ್ಮದಾ ರಕ್ಷಣೆ ನಿತ್ಯ ಸಾಗಲಿ
ಈ ಸುಖ ರಾತ್ರಿ ರಸ ರಾತ್ರಿ ಹಿತವಾಗಿ ಮೈದೂಗಿ ನೀ ಹಾಡಿ ನಲಿದಾಡಿ
ಹೇ.. ಮೈಯನು ಮರೆಯುತ ಹಾಡಿ
ಸ್ವಾಗತ ನಿಮಗೇ ವಂದನೆ ನಿಮಗೇ ಸಂಭ್ರಮ ನಿಮಗೆ ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
ಇರಲೆಂದು ಹೂವಾಗಿ ಹೀಗೆ ಜಯವಾಗಲಿ ಮಹನೀಯರೇ ಈ ವಿಜಯಕೇ ಅಭಿನಂದನೆ
ಈ ಪ್ರೀತಿ ಆನಂದ ನಿಮಗೆ ಹೀಗೆ ಎಂದೆಂದೂ ಹೀಗೆ
ಸ್ವಾಗತ ನಿಮಗೇ ವಂದನೆ ನಿಮಗೇ ಸಂಭ್ರಮ ನಿಮಗೆ ಈ ಶುಭ ಘಳಿಗೆ ನೆನಪಲ್ಲಿ ನಿಮಗೆ
-------------------------------------------------------------------------------------------------------------------------
ಲಯನ್ ಜಗಪತಿರಾವ್ ( ೧೯೯೧) - ಏನಿದು ಶೋಧನೆ ಏಕೆ ಈ ವೇದನೆ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ,
ಏನಿದು ಶೋಧನೆ ಏಕೆ ಈ ವೇದನೆ ಧರ್ಮದಾ ಹೋರಾಟದಲಿ ಗಾನು ನೀನೇ
ಸತ್ಯದಾ ಸಂಗ್ರಾಮದಲ್ಲಿ ತಂದೆ ಮಗನೇ
ಏನಿದು ಶೋಧನೆ ಏಕೆ ಈ ವೇದನೆ
ಗಯನಿಗೆ ಅರ್ಜುನ ನೀಡಿದ ಅಭಯದ ವಚನದ ದೆಸೆಯಿಂದ
ಕೃಷ್ಣಾರ್ಜುನರಲ್ಲಿ ನಡೆಯಿತು ಅಂದು ಭೀಕರ ಸಮರವದು
ಭಕ್ತ ಶ್ರೇಷ್ಠ ಮಾರುತಿ ನೀಡಿದ ಅಭಯದ ದೆಸೆಯಿಂದ
ರಾಮಂಜನೇಯರ ನಡುವಳಿ ನಡೆಯಿತು ಪ್ರಚಂಡ ಯುದ್ಧವದು
ಅಭಯವ ತಂದೆ ನಾನಿಲ್ಲಿ ಛಲದಲಿ ನಿಂತಿಹ ಮಗನಲ್ಲಿ
ಸಮರವು ಕಾದಿದೆ ನಮಗಿಲ್ಲಿ ಕಂಬನಿ ಮಿಡಿದಿದೆ ಕರುಳಲ್ಲಿ
ನೋ.. ನೋ.. ನೇವರ್ ಇಟ್ ಕಾಂಟ್ ಮೀ ಐ ಯಾಮ್ ಐ ರಾಂಗ್ ಟೆಲ್ ಮೀ
ಟೆಲ್ ಮೀ ಓ ಮೈ ಕಾನ್ಸೆಸ್
ಏನಿದು ಶೋಧನೆ ಏಕೆ ಈ ವೇದನೆ ಧರ್ಮದಾ ಹೋರಾಟದಲಿ ಗಾನು ನೀನೇ
ಸತ್ಯದಾ ಸಂಗ್ರಾಮದಲ್ಲಿ ತಂದೆ ಮಗನೇ
ಏನಿದು ಶೋಧನೆ ಏಕೆ ಈ ವೇದನೆ
ಹರಿಶ್ಚಂದ್ರನು ವಿಶ್ವಾಮಿತ್ರಕೆ ನೀಡಿದ ವಚನವ ಪಾಲಿಸಲು
ಹೆಂಡತಿ ಮಗನನೇ ಮಾರಿದ ಅಂದು ಸತ್ಯ ಪರೀಕ್ಷೆಯಲ್ಲಿ
ತಂದೆಗೆ ನೀಡಿದ ಮಾತನು ಪಾಲಿಸೆ ರಾಜ್ಯವ ತ್ಯಜಿಸಿದ ಆ ಭೀಷ್ಮ
ಬ್ರಹ್ಮಚರ್ಯವ ಸಾಧಿಸಿ ಗೆದ್ದನು ಧರ್ಮ ಪರೀಕ್ಷೆಯಲಿ
ಆಡಿದ ಮಾತಿಗೆ ತಪ್ಪುವನೇ ಧರ್ಮವು ಇದನು ಒಪ್ಪುವುದೇ
ರಕ್ತ ಸಂಬಂಧಕೆ ಮಣಿಯುವುದೇ ನಾಲಿಗೆ ಸತ್ಯವ ಮರೆಯುವುದೇ
ನೋ.. ನೋ.. ಐ ವುಡ್ ಅಲೋನ್ ವಿಥ್ ಕಮ್ ಮೀಟ್ ಮೀ ಐ ವಿಲ್ ಫೇಸ್ ಇಟ್
ಬಂದರು ಶೋಧನೆ ಸಹಿಸುವೆ ವೇದನೆ ಧರ್ಮದಾ ಹೋರಾಟದಲಿ ಎಲ್ಲಾ ಒಂದೇ
ಸತ್ಯದಾ ಸಂಗ್ರಾಮದಲ್ಲಿ ಗೆಲ್ಲುವೆನೆಂದೇ
ಏನಿದು ಶೋಧನೆ ಏಕೆ ಈ ವೇದನೆ
ಕರ್ತವ್ಯವೆನ್ನುವ ಸಂಕೋಲೆ ತೋಡಿಸೋ ಬಂಧಿಗಳು ನಾವು
ನ್ಯಾಯ ದೇವತೆಯ ಗುಡಿಯಲ್ಲಿ ಸಲ್ಲದು ಕರುಳಿನ ಮಮತೆಯ ಹೂವು
ನ್ಯಾಯ ದೇವತೆಯ ಗುಡಿಯಲ್ಲಿ ಸಲ್ಲದು ಕರುಳಿನ ಮಮತೆಯ ಹೂವು
-------------------------------------------------------------------------------------------------------------------------
ಲಯನ್ ಜಗಪತಿರಾವ್ ( ೧೯೯೧) - ಕುಮಾರ್ ಕುಮಾರ್ ಕುಮಾರ್
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಎಸ್./ಜಾನಕೀ
ಹೆಣ್ಣು : ಕುಮಾರ್ ಕುಮಾರ್ ಕುಮಾರ್ ಕುಮಾರ್ ಕುಮಾರ್ ಕುಮಾರ್ ಓ ಮಿಸ್ಟರ್ ಕುಮಾರ್
ಮೈ ತುಂ ಸೇ ಕರತೀ ಹೂಂ ಪ್ಯಾರ್ ನಾನ್ ಉನ್ನೈ ಕಾದಲಿಕ್ಕಿರೇನ್ ಸಾರ್
ನಿನ್ನೂ ಪ್ರೇಮಿಸ್ತುನ್ನಾನು ಸರ್ದಾರ್ ನಾ ನಿನ್ನ ಪ್ರೀಮಿಸ್ತೀನಿ ನಂಬಿದಾರ್
ನ್ಯಾನ್ ನಿನ್ನು ಪ್ರೇಮಿಕ್ಕಿನ್ನು ಸಾರೇ
ಪೊಲೀಸು ಹೀರೋ ವೆಲ್ ಕಮ್ ನೀ ನನ್ನ ಹತ್ರ ಕಮ್ ಕಮ್
ನಾನುಂ ನೀನೂ ಹಮದಮ್ ಇಲ್ಲೇನೇ ನಮ್ಮ ಸಂಗಮ್
ವೆಲ್ಕಮ್ ಹೀರೋ ವೆಲ್ಕಮ್ ನಿಜವಾಗಿ ನೀನು ಹ್ಯಾಂಡ್ಸ್ ಸಮ್
ಆದಾಗ ನಿಮ್ಮ ಸಂಗಮ್ ನಿನ್ನ ಪ್ರೇಮ ಅನುರಾಗ ಸಂಗಮ್
ಪೊಲೀಸು ಹೀರೋ ವೆಲ್ ಕಮ್ ನೀ ನನ್ನ ಹತ್ರ ಕಮ್ ಕಮ್
ನಾನುಂ ನೀನೂ ಹಮದಮ್ ಇಲ್ಲೇನೇ ನಮ್ಮ ಸಂಗಮ್
ವೆಲ್ಕಮ್ ಹೀರೋ ವೆಲ್ಕಮ್ ನಿಜವಾಗಿ ನೀನು ಹ್ಯಾಂಡ್ಸ್ ಸಮ್
ಆದಾಗ ನಿಮ್ಮ ಸಂಗಮ್ ನಿನ್ನ ಪ್ರೇಮ ಅನುರಾಗ ಸಂಗಮ್
ಹೆಣ್ಣು : ಓ.. ಓ.. ಪ್ರಿಯ ಈ ನನ್ನ ಮನ ನಿನ್ನ ಹಿಂದೆ ಹೋಯಿತು
ನಾ ಅದ ತಿಳಿಸೋಕೆ ಹೀಗೆಲ್ಲ ಮಾಡಬೇಕಾಯ್ತು
ನಿನ್ನ ಕಾಡಬೇಕಾಯ್ತು, ಆಡ ಬೇಕಾಯ್ತು ನಾಟಕ
ನೀ ನನ್ನ ಪ್ರೀತಿಯ ರೀತಿಯ ಇಂದು ಮನ್ನಿಸು
ನಿನ್ನ ಪ್ರೀತಿ ತೋರಿಸು ನನ್ನ ಬಾಳಲ್ಲಿ ನೀ ನಾಯಕ
ಬಾರೋ ಸಾಹಸಸಿಂಹ ನನ್ನ ಜಯಸಿಂಹ ನೀನೇ ನಮ್ಮೂರ ರಾಜ ಕೇಳು ಪೊಲೀಸ್ ದಾದ್
ದಮ್ಮಯ್ಯ ಬೇಡ ಬೇಡ ಬಿಡು ನೀ ಕೋಪ
ಪೊಲೀಸು ಹೀರೋ ವೆಲ್ ಕಮ್ ನೀ ನನ್ನ ಹತ್ರ ಕಮ್ ಕಮ್
ನಾನುಂ ನೀನೂ ಹಮದಮ್ ಇಲ್ಲೇನೇ ನಮ್ಮ ಸಂಗಮ್
ವೆಲ್ಕಮ್ ಹೀರೋ ವೆಲ್ಕಮ್ ನಿಜವಾಗಿ ನೀನು ಹ್ಯಾಂಡ್ಸ್ ಸಮ್
ಆದಾಗ ನಿಮ್ಮ ಸಂಗಮ್ ನಿನ್ನ ಪ್ರೇಮ ಅನುರಾಗ ಸಂಗಮ್
ಹೆಣ್ಣು : ಸಾರಿ ಸಾರಿ ರೀ ಸಾರಿ ರೀ ತಪ್ಪಾಯಿತು ರೀ ನನ್ನ ಅರ್ಥ ಮಾಡ್ಕೊಳ್ಳಿ
ಆಯ್ ಲವ್ ಯೂ ನಿಜಾ ಹೇಳ್ತಿನಿ ನಂಬ್ರಿ ನಾನ್ ನಿಮ್ಮನ್ ಪ್ರೀತಿಸ್ತೀನ್ ರೀ
ಗಂಡು : ಸ್ಟುಪಿಟ ನಮ್ಗ್ ನಿಮ್ಮನ್ ಕಂಡ್ರೆ ಹಂಗೇರಿ
ಓ ನನ್ನ ಪ್ಯಾರಿ ಬೇಗಂ ಎದೆಯಲ್ಲಿ ನಿಂಗೆ ವೆಲ್ಕಮ್ ಆದಾಕೆ ನಮ್ಮ ಸಂಗಮ್ ಅಂದಾನ ಪ್ರೇಮ ಸ್ವರ್ಗಂ
ನೀ ಬಳಿ ಬಂದಿಲ್ಲಿ ಕಣ್ಣಲ್ಲಿ ಒಮ್ಮೆ ಕೊಂದರೆ ಆ ಕ್ಷಣ ನನ್ನಲ್ಲಿ ಆರಂಭ ನೂರು ತೊಂದರೆ
ಹೀಗೆ ನೀನು ನಕ್ಕರೇ ನಿನ್ನ ಅಂದಕ್ಕೆ ಮನ ಸೋತಿತು
ನೀ ಅಡಿ ಇಟ್ಟಲ್ಲಿ ಹೂವಾಯ್ತು ರಂಗು ತುಂಬಿತು
ಹೊಸ ಚೈತ್ರ ಬಂದಿತು ನನ್ನ ಎದೆ ಕುಣಿದಾಡಿತು
ಹೆಣ್ಣು : ಮಿಡಿದೆ ಹೃದಯಗೀತೆ ತಂದೆ ಮುತ್ತಿನ ಹಾರ ನಮ್ಮ ಈ ಶುಭ ಮಿಲನ ಬೆಳಗಿಸಿ ಜೀವನ ಜ್ಯೋತಿ
ಈ ದಿನ ಮರೆಯದು ಎಂದೂ ಎಂದೂ
ಗಂಡು : ಓ ನನ್ನ ಪ್ಯಾರಿ ಬೇಗಂ ಎದೆಯಲ್ಲಿ ನಿಂಗೆ ವೆಲ್ಕಮ್ ಆದಾಕೆ ನಮ್ಮ ಸಂಗಮ್ ಅಂದಾನ ಪ್ರೇಮ ಸ್ವರ್ಗಂ
ನೀ ಬಳಿ ಬಂದಿಲ್ಲಿ ಕಣ್ಣಲ್ಲಿ ಒಮ್ಮೆ ಕೊಂದರೆ ಆ ಕ್ಷಣ ನನ್ನಲ್ಲಿ ಆರಂಭ ನೂರು ತೊಂದರೆ
ಹೀಗೆ ನೀನು ನಕ್ಕರೇ ನಿನ್ನ ಅಂದಕ್ಕೆ ಮನ ಸೋತಿತು
ನೀ ಅಡಿ ಇಟ್ಟಲ್ಲಿ ಹೂವಾಯ್ತು ರಂಗು ತುಂಬಿತು
ಹೊಸ ಚೈತ್ರ ಬಂದಿತು ನನ್ನ ಎದೆ ಕುಣಿದಾಡಿತು
-------------------------------------------------------------------------------------------------------------------------
ಲಯನ್ ಜಗಪತಿರಾವ್ ( ೧೯೯೧) - ವಿದ್ಯಾಬುದ್ಧಿ ಧನಾದಿ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್./ಜಾನಕೀ
ವಿದ್ಯಾ ಬುದ್ದಿ ಧನಾದಿ ಸರ್ವ ವಿಧ ಪ್ರಾಪ್ತೆಹೈ ಜಗ ಮಂಗಳಂ
ಸರ್ವಾಭಿಷ್ಟ ಫಲಪ್ರದಾಂ ಸ್ಮಿತ ಮುಖಿಮ್ ದಾರಿದ್ರ್ಯ ರೋಗಪಹಾರಂ
ಕಾರುಣ್ಯಮೃತ ವರ್ಷಿನ್ಯೇತ್ರ ಯುಗಳಂ ತಾಪತ್ರಯ ಧ್ವಂಸನಿ
ಭಕ್ತ ತ್ರಾಣ ಪರಾಯಣ ಭಗವತಿ ಧ್ಯಾಯಾಮಿ ಸರ್ವೇಶ್ವರಿ
-------------------------------------------------------------------------------------------------------------------------
ಲಯನ್ ಜಗಪತಿರಾವ್ ( ೧೯೯೧) - ಗಜಾನನ ಪದ್ಮಾರ್ಕಂ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಭಕ್ತಿಗೀತೆ, ಗಾಯನ : ಎಸ್.ಪಿ.ಬಿ,
ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
ಅನೇಕ ದಂತಂ ಭಕ್ತಾನಾಮ್ ಏಕ್ ದಂತಮುಪಾಸ್ಮೆಹೇ ...
ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
ಅನೇಕ ದಂತಂ ಭಕ್ತಾನಾಮ್ ಏಕ್ ದಂತಮುಪಾಸ್ಮೆಹೇ ...
-------------------------------------------------------------------------------------------------------------------------
No comments:
Post a Comment