1320. ರಾಮಾ ಶಾಮ ಭಾಮಾ (೨೦೦೫)


ರಾಮಾ ಶಾಮ ಭಾಮಾ ಚಲನಚಿತ್ರದ ಹಾಡುಗಳು
  1. ಪದೆ ಪದೆ ನೆನಪಾದೆ
  2. ಜೋಪಾನ ರಾತ್ರಿಯಾತು
ರಾಮಾ ಶಾಮ ಭಾಮಾ (೨೦೦೫) - ಪದೆ ಪದೆ ನೆನಪಾದೆ
ಸಂಗೀತ: ಗುರುಕಿರಣ, ಸಾಹಿತ್ಯ: ಕವಿರಾಜ, ಗಾಯನ: ಚಿತ್ರ, ರಮೇಶ ಚಂದ್ರ

ಹೆಣ್ಣು : ಯಾವಾ...ಸ್ವಾಮಿ ಯಾವಾ...ಸ್ವಾಮಿ
            ಪದೆ ಪದೆ ನೆನಪಾದೆ ಪದೆ ಪದೆ ನೆನೆದೆ.....
            ಪದೆ ಪದೆ ಮರೆಯಾದೆ ಪದೆ ಪದೆ ಕರದೆ....
            ಯಾವ ಜನ್ಮದಲ್ಲಿ ನನ್ನ ನಿನ್ನ ನಡುವೆ
            ಪ್ರೀತಿ ಮೂಡಿತೇನೂ.....
            ಪದೆ ಪದೆ ನೆನಪಾದೆ ಪದೆ ಪದೆ ನೆನೆದೆ.....
            ಪದೆ ಪದೆ ಮರೆಯಾದೆ ಪದೆ ಪದೆ ಕರದೆ.....

ಗಂಡು: ಮೆಲ್ಲ ಮೆಲ್ಲಾ ನನ್ನಲೆಲ್ಲಾ ನೀ ತು೦ಬಿಕೊ೦ಡೆ
            ಒಲುವೆ...
ಹೆಣ್ಣು: ಕಳ್ಳಾ ಕಳ್ಳಾ ನನ್ನ ನಲ್ಲಾ ಕಣ್ಣಲ್ಲೆ ದೊಚಿ ಬಿಡುವೆ...
ಗಂಡು: ಹಗಲಲೂ ಕನಸು ಕನಸಲಿ ನೀ ಉಸಿರಿನ ಉಸಿರು ನೀ...
ಹೆಣ್ಣು: ಪದೆ ಪದೆ ನೆನಪಾದೆ ಪದೆ ಪದೆ ನೆನೆದೆ...
ಗಂಡು: ಪದೆ ಪದೆ ಮರೆಯಾದೆ ಪದೆ ಪದೆ ಕರದೆ...

ಹೆಣ್ಣು:  ಎಲ್ಲೂ ಎಲ್ಲೂ ಮುತ್ತು ಚಲ್ಲೊ ಪ್ರೀತಿನೇ ಸ್ವಾತಿಮಳೆಯೆ
ಗಂಡು: ಅಲ್ಲು ಇಲ್ಲೊ ಎಲ್ಲ ಮೆಲ್ಲೊ ಪ್ರೀತಿನೆ ಜೇನ ಹೋಳೆಯೆ..
ಹೆಣ್ಣು : ಪದದಲ್ಲಿ ಇರದ ಕವಿತೆ ಇದು ಸವಿ ಸವಿ ಸುದೆ ಇದು....
ಗಂಡು: ಪದೆ ಪದೆ ನೆನಪಾದೆ ಪದೆ ಪದೆ ನೆನೆದೆ
ಹೆಣ್ಣು: ಪದೆ ಪದೆ ಮರೆಯಾದೆ ಪದೆ ಪದೆ ಕರದೆ
ಗಂಡು: ಯಾವ ಜನ್ಮದಲ್ಲಿ ನನ್ನ ನಿನ್ನ ನಡುವೆ
            ಪ್ರೀತಿ ಮೂಡಿತೇನೂ....(ಹೂಂಹೂಂ)
ಹೆಣ್ಣು: ಪದೆ ಪದೆ ನೆನಪಾದೆ ಪದೆ ಪದೆ ನೆನೆದೆ.....
------------------------------------------------------------------------

ರಾಮಾ ಶಾಮ ಭಾಮಾ (೨೦೦೫) - ಜೋಪಾನ ರಾತ್ರಿಯಾತು
ಸಂಗೀತ: ಗುರುಕಿರಣ, ಸಾಹಿತ್ಯ: ಗೋಟರೀ, ಗಾಯನ: ಗುರುಕಿರಣ, ಗುರುರಾಜ ಹೊಸಕೋಟೆ, ಶಮಿತಾ, 

ಗುರು: ಜೋಪಾನ ರಾತ್ರಿಯಾತು
          ಕಳ್ಳ ಕಾಕರು ಹೊರಡುವ ಹೊತ್ತು
          ಜೋಪಾನ ನಿಮ್ಮ ಸ್ವತ್ತು
          ಒಮ್ಮೆ ಹೋದರೆ ಸಿಗದ್ಯಾವತ್ತೂ
       
ಗಂಡು: ಜೋಪಾನ ರಾತ್ರಿಯಾತು
ಹೆಣ್ಣು:  ಯಾಕ ಮಾವ ಅಯ್ಯೋ ಯಾಕ ಮಾವ
ಗಂಡು: ಜಾಗರಣೆ ಖಾತ್ರಿಯಾತು
ಹೆಣ್ಣು: ಯಾಕ ಮಾವ ಅಯ್ಯೋ ಯಾಕ ಮಾವ
ಗಂಡು: ಜೋಪಾನ ರಾತ್ರಿಯಾತು ಜಾಗರಣೆ ಖಾತ್ರಿಯಾತು
       ಮೈಯಗೊಬ್ಬ......
       ಏ ಮೈಯಗೊಬ್ಬ ಕಳ್ಳವನಲ್ಲ ಸುಮ್ನೆ ಮಲ್ಗಕ್ ಬಿಡದೆ ಇಲ್ಲ
       ಜೋಪಾನ........
       ಏ ಜೋಪಾನ ರಾತ್ರಿಯಾತು ಜಾಗರಣೆ ಖಾತ್ರಿಯಾತು

ಹೆಣ್ಣು:  ಯಾಕ ಅವ ಏನ್ ಮಾಡ್ತಾನ
ಗಂಡು: ತುಂಟ ಕಚಗುಳಿ ಇಡ್ತಾನಲ್ಲ ಸೊಂಟ
            ಕುಣಿವಂಗ್ ಮಾಡ್ತಾನಲ್ಲ
ಹೆಣ್ಣು: ಹಂಗೇನಾ ಎಲಾ ಇವ್ನ ಮನೆ ಕಾಯ್ವಗ
ಗಂಡು:  ಕಂಬ್ಳಿ ಹೋದ್ರು ಚಳಿ ಹೋಗಲ್ಲ
            ಮಳೆಯಾಗ್ ನೆಂದ್ರೂ ಕಾವಿಳಿಯಲ್ಲ
ಹೆಣ್ಣು: ಅಂದ್ರ ಎಲ್ಲ ಉಲ್ಟಾ ಪಲ್ಟಾ ಮಾಡ್ತನೇನ
ಗಂಡು: ಕೈಯ ಕೆರೆತ ,,,,,,,
           ಕೈಯ ಕೆರೆತ ಮೈಯ ಪೊರೆತ
           ಬೆಂಕಿ ಇಲ್ದ ಮೈ ಬಿಸಿಯಾತ
         ಜೋಪಾನ........
         ಏ ಜೋಪಾನ ರಾತ್ರಿಯಾತು ಜಾಗರಣೆ ಖಾತ್ರಿಯಾತು
         ಅಲ್ನೋಡು .....

ಹೆಣ್ಣು: ಯವ್ವ ಲಗ್ನ ಆಗಿ ಇಷ್ಟು ವರ್ಷ ಆದ್ರೂ
           ಇನ್ನು ಕಾಡ್ತಾನೇನ್ರೀ ಯಾವನ್ರಿ ಆ ಪೋರ
ಗಂಡು:  ಆ ಕಳ್ಳ ಇನ್ಯಾರು ಅಲ್ಲ ನಮ್ಮ ಪ್ರೀತಿ ಪ್ರೇಮ ಎಲ್ಲಾ
ಹೆಣ್ಣು: ಹೌದೇನಾ ಭಾರಿ ಕಿಲಾಡಿ ಅದಾನ್ರೀ ಅವ
ಗಂಡು: ಬೆಚ್ಚನೆ ಮನೆಯು ವೆಚ್ಚಕೆ ಹೊನ್ನು
           ಇಚ್ಛೆಯನರಿವ ಹೆಂಡ್ತಿ ಇದ್ರ
ಹೆಣ್ಣು:  ಇದ್ರ ಏನಾಗತೈತಿ ಮಾವ
ಗಂಡು: ಆ ಸ್ವರ್ಗಕ್ಕೆ.....
           ಆ ಸ್ವರ್ಗಕ್ಕೆ ಕಿಚ್ಚುಹೆಚ್ಚೆಂದು ಆ ಸರ್ವಜ್ಞ ಹೇಳವನಲ್ಲ
ಹೆಣ್ಣು: ಕ್ಯಾಚ್ ಕ್ಯಾಚ್ ಕ್ಯಾಚ್ ಓಹ್ ಡ್ರಾಪ್
           ಜೋಪಾನ ಸದ್ಯಾಕ್ ಮಾಡ್ತಿ ಮಲಗ್ದೊನ್ನ
           ಯಾಕ್ ಎಬ್ಬಿಸ್ತೀ

ಕೋರಸ್: ಹೇ. ಹೇಯ್..ಹೇ. ಹೇಯ್ ಹೇ. ಹೇಯ್
ಹೆಣ್ಣು:  ರೀ ಭಾರಿ ಖದೀಮ ಅದಾನ್ರೀ ಆವಾ
ಗಂಡು: ಮೈಯಗೊಂದು ತಿಗಣೆ ಹೊಕ್ಕು
           ಸಿಹಿಯ ಕಡಿತ ಶುರತದಲ್ಲಾ
ಕಮಲ:  ಇನ್ನೇನ್ ಆಗ್ತದೆ ಗೊತ್ತೇನ್
ಹೆಣ್ಣು: ಹ್ಹೂಂ.. ಬ್ಯಾಡ ಮಾವ ಈಗ ಆ ಕಳ್ಳ
          ನನ್ನ ಒಳಗು ಸೇರ್ತಾವ್ನಲ್ಲ
ಕಮಲ:  ಹೌದೇನು ಛಲೋ ಆತು ಬುಡು
ಗಂಡು: ಇಂಥ ಕಳ್ಳ .....
          ಇಂಥ ಕಳ್ಳ ಮೈಯಾಗಿದ್ರೆ ಗಂಡ ಹೆಂಡ್ತಿಗೆ ಬಿಡುವೆ ಇಲ್ಲ
          ಜೋಪಾನ ...
          ಜೋಪಾನ ರಾತ್ರಿಯಾತು
          ಜೋಪಾನ ರಾತ್ರಿಯಾತು ಜಾಗರಣೆ ಖಾತ್ರಿಯಾತು
          ಮೈಯಗೊಬ್ಬ......
           ಏ ಮೈಯಗೊಬ್ಬ ಕಳ್ಳವನಲ್ಲ ಸುಮ್ನೆ ಮಲ್ಗಕ್
           ಬಿಡದೆ ಇಲ್ಲ
           ಜೋಪಾನ........
           ಏ ಜೋಪಾನ ರಾತ್ರಿಯಾತು ಜಾಗರಣೆ ಖಾತ್ರಿಯಾತು
--------------------------------------------------------------------

No comments:

Post a Comment