14. ಮಹಾಕ್ಷತ್ರಿಯ (1993)


ಮಹಾ ಕ್ಷತ್ರಿಯ ಚಲನಚಿತ್ರದ ಹಾಡುಗಳು 
  1. ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ
  2. ಓ.. ಪ್ರೇಮಾ ಓ.. ಪ್ರೇಮಾ ಓ.. ಪ್ರೇಮಾ ನೀನೆಷ್ಟು ಸುಂದರಾ...
  3. ತಾವರೆ ಕೆಂದಾವರೆ ಪ್ರೇಮದ ಪನ್ನಿರಲಿ ಪರಾಗದ
  4. ಚುಂಬನ ಚುಂಬನ  ಚುಂಬನ ಚುಂಬನ
  5. ಕೂ ಕ್ಕೂ ಕೂ ಕ್ಕೂ ಏನೈತಿ ಒಳಗೇ ಏನೈತಿ 
ಮಹಾಕ್ಷತ್ರಿಯ (1993) - ಈ ಭೂಮಿ ಬಣ್ಣದ ಬುಗುರಿ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಒ... ಒಹೊ.. ಒಹೊ...ಒ... ಒಹೊ.. ಒಹೊ..., ಒ... ಒಹೊ.. ಒಹೊ...ಒ... ಒಹೊ.. ಒಹೊ...
ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೊ||
ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ
ಕಾಲ ಕ್ಷಣಿಕ ಕಣೋ ಓ.. ಓ... ಓ||
ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೊ||

ಮರಿಬೇಡ ತಾಯಿಯ ಋಣವ, ಮರಿಬೇಡ ತಂದೆಯ ಒಲವ
ಹಡೆದವರೇ ದೈವ ಕಣೋ
ಸುಖವಾದ ಭಾಷೆಯ ಕಲಿಸೊ, ಸರಿಯಾದ ದಾರಿಗೆ ನಡೆಸೊ
ಸಂಸ್ಕೃತಿಯೇ ಗುರುವು ಕಣೋ
ಮರೆತಾಗ ಜೇವನ ಪಾಠ, ಕೊಡುತಾನೆ ಚಾಟಿಯ ಏಟ
ಕಾಲ ಕ್ಷಣಿಕ ಕಣೋ ಓ.. ಓ... ಓ||
ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ, 
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೊ||

ಓ.. ಓ... ಓ...., ಓ.. ಓ... ಓ....
ಮರಿಬೇಡ ಮಗುವಿನ ನಗುವ, ಕಳಿಬೇಡ ನಗುವಿನ ಸುಖವ
ಭರವಸೆಯೇ ಮಗುವು ಕಣೇ
ಕಳಬೇಡ ಕೊಲ್ಲಲುಬೇಡ, ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ
ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ
ಕಾಲ ಕ್ಷಣಿಕ ಕಣೋ ಓ.. ಓ... ಓ||
ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ
ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ||
----------------------------------------------------------------------------------------------------------------------

ಮಹಾಕ್ಷತ್ರಿಯ (1993) - ಈ ಭೂಮಿ ಬಣ್ಣದ ಬುಗುರಿ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ


ಆಹಾ ಆಹಾ ಲಾಲಾಲಾಲಲಾಲಾಲಲಾಲಾ
ಗ : ಓ.. ಪ್ರೇಮಾ ಓ.. ಪ್ರೇಮಾ ಓ.. ಪ್ರೇಮಾ ನೀನೆಷ್ಟು ಸುಂದರಾ...
      ಐ ಲವ್ ಯು ಮಾತೆಷ್ಟು ಮಧುರಾ...
ಹೆ : ಓ.. ಪ್ರೇಮಾ ಓ.. ಪ್ರೇಮಾ ಓ.. ಪ್ರೇಮಾ ನೀನೆಷ್ಟು ಸುಂದರಾ...
      ಐ ಲವ್ ಯು ಮಾತೆಷ್ಟು ಮಧುರಾ...
ಇಬ್ಬರು : ಓ.. ಪ್ರೇಮಾ ನೀನೆಷ್ಟು ಸುಂದರಾ...

ಗ : ಓ.. ತುಟಿಯೇ.. ನೀನೆಂಥ ತುಂಟಿಯೇ ತನುವ ತನುವ ಸೆಳೆದಿಡುವೆ
ಹೆ : ಓ.. ಕಣ್ಣೇ ನೀನೆಂತ ಕಲೆಯೇ ಮನದ ಮಾತು ತೆರೆದಿಡುವೆ
ಗ : ಅಲೆ ಅಲೆಯಾಗಿ      ಹೆ : ಅಲೆ ಅಲೆಯಾಗಿ
ಗ : ಹೊಸತನಕ್ಕಾಗಿ      ಹೆ : ಹೊಸತನಕ್ಕಾಗಿ
ಗ : ಮಿಡಿಯುವವು ಬದುಕೇ ...
ಹೆ : ಪ್ರೀತಿ ಒಲಿಯ ಸವಿ ಏಕೋ ಇಂದು
ಗ : ಕರುಣೆ ಕರೆಯಲಿ ನಿಜ ರೂಪ ಬಂಧು
ಇಬ್ಬರು : ಸರ್ವಂ ಪ್ರೇಮಮಯೇ ..
ಹೆ : ಓ.. ಪ್ರೇಮಾ ಓ.. ಪ್ರೇಮಾ ಓ.. ಪ್ರೇಮಾ ನೀನೆಷ್ಟು ಸುಂದರಾ...
      ಐ ಲವ್ ಯು ಮಾತೆಷ್ಟು ಮಧುರಾ...
ಗ : ಓ.. ಪ್ರೇಮಾ ಓ.. ಪ್ರೇಮಾ ಓ.. ಪ್ರೇಮಾ ನೀನೆಷ್ಟು ಸುಂದರಾ...
     ಐ ಲವ್ ಯು ಮಾತೆಷ್ಟು ಮಧುರಾ...
ಇಬ್ಬರು : ಓ.. ಪ್ರೇಮಾ ನೀನೆಷ್ಟು ಸುಂದರಾ...

ಆಹಾ ಲಾಲಾಲಾಲಲಾಲಾಲಲಾಲಾ ಹೊಯ್
ಹೆ : ಓ.. ಹೃದಯ ನೀನೆಂತ ಗೆಳೆಯಾ ಮಿಡಿದೆ ಮಿಡಿದೆ ಜೊತೆಯಿರುವೆ
ಗ : ಓ.. ಮನಸ್ಸೇ ನೀನೆಂತ ಕನಸೇ ಬಯಸಿ ಬಯಸಿ ಸುಖ ಪಡುವೆ
ಹೆ: ಎಳೆ ಎಳೆಯಾಗಿ ಗ : ಎಳೆ ಎಳೆಯಾಗಿ
ಹೆ : ಎಳೆತನಕ್ಕಾಗಿ ಗ : ಎಳೆತನಕ್ಕಾಗಿ
ಹೆ : ಎಳೆಯುವುವೋ ಹರೆಯಾ ಗ : ನಿನಗೆ ಅಪ್ಪುಗೆ ಹಾರವಿರಲು
ಹೆ : ಮಾತು ತಪ್ಪದ ಆಣೆಯಿಡಲು
ಇಬ್ಬರೂ : ಸರ್ವಂ ಪ್ರೇಮಮಯ..
ಗ : ಓ.. ಪ್ರೇಮಾ ಓ.. ಪ್ರೇಮಾ ಓ.. ಪ್ರೇಮಾ ನೀನೆಷ್ಟು ಸುಂದರಾ...
     ಐ ಲವ್ ಯು ಮಾತೆಷ್ಟು ಮಧುರಾ...
ಹೆ : ಓ.. ಪ್ರೇಮಾ ಓ.. ಪ್ರೇಮಾ ಓ.. ಪ್ರೇಮಾ ನೀನೆಷ್ಟು ಸುಂದರಾ...
      ಐ ಲವ್ ಯು ಮಾತೆಷ್ಟು ಮಧುರಾ...
ಇಬ್ಬರು : ಓ.. ಪ್ರೇಮಾ ನೀನೆಷ್ಟು ಸುಂದರಾ...
-------------------------------------------------------------------------------------------------------------------------

ಮಹಾಕ್ಷತ್ರಿಯ (1993) - ತಾವರೆ ಕೆಂದಾವರೆ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ 


ದಿ ರೀ ರಿರಿರಿರಿರಿ ತಾವರೆ ಕೆಂದಾವರೆ
ತಾವರೆ ಕೆಂದಾವರೆ ಪ್ರೇಮದ ಪನ್ನಿರಲಿ ಪರಾಗದ
ಪನ್ನಿರಲಿ ತೇಲುವಾ ಕೆಂದಾವರೆ

ಹೇ ಯ್ಯಾ ವ್ವ ವು ವು
ತೂರು ರು ರುತೂರು ರು ರು
ನಲಿದು ನಿನ್ನ ನೋಡುವ ಹೂವ ಸುಮಬಾಣ ಕಾಣದು
ಪ್ರಕೃತಿಯಾಗೋ ದುಂಬಿಗೆ ಮಧುರ
ಮರೆಯ ಮಾಡದು ನೀರೆರೆದು ಕೊಳ್ಳುವ ಹೂವುನ
ಸುಖ ದುಃಖ ಕಾಣದು ಕುರುಣೆ ಸುರಿಸೋ ನೀರಿಗೆ ಮಧುರ ನೀರ ಮಾಡದು
ಕಮಲ ರಾಣಿಯ ಕಾಯನಾ ಪ್ರೇಮಾ ರಸಿಕ ನಾನು
ಮೂರೂ ಊರಿನ ಕಥೆಯ ಕೇಳಿ
ತಾವರೆ ಕೆಂದಾವರೆ ಪ್ರೇಮದ ಪನ್ನಿರಲಿ ಪರಾಗದ
ಪನ್ನಿರಲಿ ತೇಲುವಾ ಕೆಂದಾವರೆ

ತಿಳಿಮಲ್ಲೇ ಹೂವ ನೋಡಿ ಮನ ಸೋಲಲಿಲ್ಲ ನಾ
ತಂಪು ಕೊಡುವ ಸಂಪಿಗೆ ಸೆಳೆದರು
ಮೈ ಮರೆಯನಾ ಪತ್ರವಾಗಿ ರಾತ್ರಿ ರಾಣಿ
ಹಿಂಡಾಗಿ ಬಂದರೂ ಕಮಲ ನಿನ್ನ ನೆನೆದರೆ
ಎದೆಯ ಬಿಂದು ಹೋಗದು
ಕುಸುಮಾ ಕೋಮಲ ಪ್ರೇಮದ ಪ್ರಥಮ ಸ್ಪರ್ಶ
ನೀನು ನಿನಗೆ ನೀಡುವ ಹೃದಯದೊಳ ಜೇನು
ತಾವರೆ ಕೆಂದಾವರೆ ಪ್ರೇಮದ ಪನ್ನಿರಲಿ ಪರಾಗದ
ಪನ್ನಿರಲಿ ತೇಲುವಾ ಕೆಂದಾವರೆ
------------------------------------------------------------------------------------------------------------------------

ಮಹಾಕ್ಷತ್ರಿಯ (1993) - ತಾವರೆ ಕೆಂದಾವರೆ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ


ಹೇ..ಹೇ..ಹೇ..ಹೇ.. ಆಹಾ.. ಆಹಾ..
ಹೇ..ಹೇ..ಹೇ..ಹೇ.. ಬನ ಬನ ಬನ
ಚುಂಬನ ಚುಂಬನ  ಚುಂಬನ ಚುಂಬನ
ಹೂ ಚುಂಬನ ಚುಂಬನ ಬನದ  ಮಹಾಂಕ್ಷಿಯಾ
ರೋಮಾಂಚನ  ಹೇ..ಹೇ.. ಹೇ.. ಹೇ.. ರೋಮಾಂಚನ
ಹೇ.. ಹೇ.. ಹೇ.. ಆಹಾ ... ಆಹಾ..
ಚುಂಬನ ಚುಂಬನ  ಚುಂಬನ ಚುಂಬನ 

ಈ ಹರೆಯದ ಕಣ್ಣಿಗೆ ಚುಂಬನ ತೆರೆ ಹಾಕುವ ರೆಪ್ಪೆಗೆ ಕೋಲ್ಮಿಂಚನಾ ಚುಂಬನಾ
ಕೆನ್ನೆಗೆ ಮುದ್ರೆಯ ಚುಂಬನಾ ಕೆಂಪೇರುವ ಆದರೇಕೆ  ಮೈ ಮಿಂಚುವ ಚುಂಬನ
ರೋಮಾಂಚನ ಹೇ..ಹೇ..ಹೇ..ಆಹಾ..ರೋಮಾಂಚನ
ಹೇ.. ಹೇ.. ಹೇ.. ಹೇ..
ಚುಂಬನ ಚುಂಬನ  ಚುಂಬನ ಚುಂಬನ

ಚಿಕ್ ತುರು ಚಿಕ್ ತುರುತು
ಅತಿ ಚುಂಬನ ಪಾಪಪ ಚುಂಬನ ಚೂರು ಚುಂಬಾ ಸೆಳೆಯುವ ಸೊಂಟಕೆ ಚುಂಬನಾ
ಕುಲುಕಾಡುವ ನಾರಿಯ ನಾಡು ಬಿಂಕಕೆ ಚುಂಬನಾ
ಹಾಡುವ ಹೃದಯಕೆ ಚುಂಬನಾ
ಹೆಣ್ಣೆದೆಯಲಿ ನಾಟುವ ತುಳುಕಾಡುವ ಚುಂಬನಾ
ರೋಮಾಂಚನ..  ಹೇ.. ಹೇ.. ಹೇ.. ಹೇ.. ರೋಮಾಂಚನಾ  
ಚುಂಬನ ಚುಂಬನ  ಚುಂಬನ ಚುಂಬನ
----------------------------------------------------------------------------------------------

ಮಹಾಕ್ಷತ್ರಿಯ (1993) - ಈ ಭೂಮಿ ಬಣ್ಣದ ಬುಗುರಿ
ಸಂಗೀತ: ಹಂಸಲೇಖ ಸಾಹಿತ್ಯ: ಗುರುರಾಜ ಹೊಸಕೋಟೆ ಗಾಯನ: ಗುರುರಾಜ ಹೊಸಕೋಟೆ, ಮಾಲ್ಗುಡಿ ಶುಭ

ಗಂಡು : ಕೂಕೂಕೂಕೂ.. ಕೂಕೂಕೂಕೂ
           ಏನೈತೀ..  ಒಳಗ ಏನೈತೀ..   ಏನೈತೀ..  ಒಳಗ ಏನೈತೀ.. 
           ಹುಬ್ಬಳ್ಯಾಗಿಲ್ಲದ್ದೂ.. ಗದಗದಾಗಿಲ್ಲದ್ದೂ ತುರಗದಾಗಿಲ್ಲದ್ದೂ
           ಈ ಸೀಮ್ಯಾಗಿಲ್ಲದ್ದು ಅಂಥಾದ್ದೇನೈತಿ ಸ್ಪೆಷಲ್ ಏನೈತಿ
           ತಿನ್ನಲಾಕ್ ಏನೈತಿ ಉಣ್ಣಲಾಕ್ ಏನೈತಿ
           ತಿನ್ನಲಾಕ್ ಏನೈತಿ ಉಣ್ಣಲಾಕ್ ಏನೈತಿ
           ಫುಲ್ ಮಿಲ್ಸ್ ಎಷ್ಟು ಮಿನಿ ಮಿಲ್ಸ್ ಎಷ್ಟು
           ಫುಲ್ ಮಿಲ್ಸ್ ಎಷ್ಟು ಮಿನಿ ಮಿಲ್ಸ್ ಎಷ್ಟು ಹೇಳಿದ್ದು ಮಾಡಕೆ ಎಕ್ಸಟ್ರಾ ಎಷ್ಟೂ
ಹೆಣ್ಣು : ಐದು ಕೊಟ್ಟರೇ ಚಾಪೆ ಮಿಲ್ಸ್ ಹತ್ತು ಕೊಟ್ಟರೇ ಮಂಚದ ಮಿಲ್ಸ್
          ಏನ್ ತಿಂತೀ .. ಕೊಟ್ಟರೇ .. ಎಷ್ಟ್ ತಿಂತೀ
          ಏನ್ ತಿಂತೀ .. ಕೊಟ್ಟರೇ .. ಎಷ್ಟ್ ತಿಂತೀ
          ಮಂಗಳೂರೇ ಮೆಚ್ಚಿದ್ದೂ .. ಬೆಂಗಳೂರೇ ಮೆಚ್ಚಿದ್ದೂ
          ಕಲ್ಬುರ್ಗಿ ಮೆಚ್ಚಿದ್ರೂ ಈ ಸೀಮೇನೇ ಮೆಚ್ಚದ್ದೂ
          ನಮ್ದು ಹಾಂಗೈತಿ ಭಾರಿ ಭೇಶೈತೇ ರೊಟ್ಟಿ ರೋಷಟೈತಿ ಭಾರಿ ಟೆಸ್ಟ್ ಐತಿ
ಗಂಡು : ಬದನೇಕಾಯಿ ಪಡುವಲಕಾಯಿ ಅಯ್ಯೋ ..  ಸೋರಿಕಾಯಿ ಹೀರೇಕಾಯಿ ಅಯ್ಯೋ
            ಮಾಡುವುದಿಲ್ಲೇನ್ರಿ ನುಗ್ಗೆಕಾಯಿ..  ಮಾಡುವುದಿಲ್ಲೇನ್ರಿ ನುಗ್ಗೆಕಾಯಿ.. 
ಹೆಣ್ಣು : ಉದ್ದಾ.. ಉದ್ದಾ.. ಕಾಯ್ ನಂಗು ಇಷ್ಟ ಸುತ್ತಮುತ್ತ ಇಲ್ಲಿ ಸಿಗೋದ ಕಷ್ಟ
ಗಂಡು : ಏನೈತೀ..  ಬ್ಯಾರೇ ಏನೈತೀ..   ಸೂಸೂಸೂ.. ಇನ್ನೇನೈತಿ ಬಿಸಿ ಬಿಸಿ ಏನೈತಿ
            ಕೊಡಗದಾಗಿಲ್ಲದ್ದು.. ಹಾಸನದಾಗಿಲ್ಲದ್ದು... ಆಆಆ...
            ಬೀದರದಾಗಿಲ್ಲದ್ದು ಈ ಸೀಮ್ಯಾಗೇ ಇಲ್ಲದ್ದೂ... ಆಆಆ
            ಅಂಥಾದ್ದೇನೈತಿ ಸ್ಪೆಷಲ್ ಏನೈತಿ ... ನಂಜಲಾಕ್ ಏನೈತಿ ನೆಕ್ಕಲಾಕ್ ಏನೈತಿ
            ಅಂಥಾದ್ದೇನೈತಿ ಸ್ಪೆಷಲ್ ಏನೈತಿ ... ನಂಜಲಾಕ್ ಏನೈತಿ ನೆಕ್ಕಲಾಕ್ ಏನೈತಿ

ಗಂಡು : ಲೇಡಿಸೇ ಇಲ್ಲಿ ಯಜಮಾನ್ ಏನ್ರೀ .. ಸಾಲಾಗೀಲ ನಡಿತೈತೇನ್ರೀ ಅಯ್ಯಯ್ಯೋ 
            ಕೈಯೊಳಗೇ ಕೊಟ್ಟೇ ಬೀಡಬೇಕೆನ್ರೀ..  ಕೈಯೊಳಗೇ ಕೊಟ್ಟೇ ಬೀಡಬೇಕೆನ್ರೀ 
ಹೆಣ್ಣು : ನಾನು ತಿನ್ನೋರಿಗೆಲ್ಲ ಸಪ್ಲೈಯರು ರೊಕ್ಕ ಕೊಟ್ಟರೇ ನಮ್ಮ ಯಜಮಾನರು
ಗಂಡು : ಭೇಷ್ ಐತಿ ಭಾರೀ ಭೇಷ್ ಐತಿ ಸೋಕೈತಿ ಭಾರಿ ಷಾಕೈತಿ
             ಇಲ್ಲಿಗಂಟ ಕಂಡದ್ದೂ .. ಇಲ್ಲಿಗಂಟ್ ಉಂಡದ್ದೂ .. ಆಆಆ
             ಇಲ್ಲಿಗಂಟ್ ಕುಣಿದದ್ದೂ .. ಆಆಆ ಇಲ್ಲಿಗುಂಟ ಹಾಡಿದ್ದೂ .. ಆಆಆ
              ಭಾರೀ ಜೋರೈತಿ... ಭಾರೀ  ಭೇಶೈತೀ..ರೊಟ್ಟಿ ಟೋಷಟೈತಿ ಭಾರಿ ಟೆಸ್ಟ್ ಐತಿ    
             ಭಾರೀ ಜೋರೈತಿ... ಭಾರೀ  ಭೇಶೈತೀ..ರೊಟ್ಟಿ ಟೋಷಟೈತಿ ಭಾರಿ ಟೆಸ್ಟ್ ಐತಿ    
  ----------------------------------------------------------------------------------------------

No comments:

Post a Comment