ಮಧುಚಂದ್ರ ಚಲನಚಿತ್ರದ ಹಾಡುಗಳು
- ವಸಂತ ಮಂಟಪ ಈ ಹೂ ತೋಟ
- ಬೆಳ್ಳಿ ಹಕ್ಕಿ ಮುಗಿಲ ತುಂಬಿ
- ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
- ನಮ್ಮ ತಾಯಿ ಮಾದೇವಿ
ಮಧುಚಂದ್ರ (೧೯೭೯) - ವಸಂತ ಮಂಟಪ ಈ ಹೂ ತೋಟ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಎಸ್.ಜಾನಕೀ
ಲಾಲಾಲಾ ಆಆಆ .. ಆಆಆ ಆಆಆ ಲಲಲಲಾ... ಆಆಆ... ಆಆಆ..
ವಸಂತ ಮಂಟಪ ಈ ಹೂದೋಟ ಸೆಳೆಯುತ ನಿಂತಿದೇ ನಮ್ಮ ಕಣ್ಣೋಟ
ಸ್ವಾಗತ ನೀಡಿದ ರಸದೂಟ ಪ್ರೇಮಿಯ ಬಾಳಿಗೆ ಹೊಸ ನೋಟ
ವಸಂತ ಮಂಟಪ ಈ ಹೂದೋಟ
ನಿನ್ನೊಂದೂ ನಗುವೂ ಕಡಲಿನ ಚೆಲುವೂ ಮೋಹಾನುರಾಗ ಶೃತಿ ಮೀಟಿ ಒಲಿದು
ಕಡಲಿನ ಚೆಲುವೂ ಮೋಹಾನುರಾಗ ಶೃತಿ ಮೀಟಿ ಒಲಿದು
ಹೂಮಳೆ ಕರೆದ ಲಾವಣ್ಯ ತಾಣದಿ
ಹೂಮಳೆ ಕರೆದ ಲಾವಣ್ಯ ತಾಣದಿ ಈ ನನ್ನ ಚಂದ್ರನ ಏಕಾಂತವೂ ..
ಹೂಮಳೆ ಕರೆದ ಲಾವಣ್ಯ ತಾಣದಿ
ನೀ ಬಾಳುವಂಥ ಸುರಲೋಕ ಇದುವೇ ನಾ ಕಾಣುವಂಥ ಶಶಿಲೋಕ ಇದುವೇ
ನೀ ಬಾಳುವಂಥ ಸುರಲೋಕ ಇದುವೇ ನಾ ಕಾಣುವಂಥ ಶಶಿಲೋಕ ಇದುವೇ
ಲೋಕ ಮರೆಸುವ ಬೇರೊಂದು ಲೋಕದೀ ..
ಲೋಕ ಮರೆಸುವ ಬೇರೊಂದು ಲೋಕದಿ ಈ ಮಧುಚಂದ್ರನ ನಾ ಕೋರುವೇ.. ..
ವಸಂತ ಮಂಟಪ ಈ ಹೂದೋಟ ಸೆಳೆಯುತ ನಿಂತಿದೇ ನಮ್ಮ ಕಣ್ಣೋಟ
ಸ್ವಾಗತ ನೀಡಿದ ರಸದೂಟ ಪ್ರೇಮಿಯ ಬಾಳಿಗೆ ಹೊಸ ನೋಟ
ಲಾಲಲಲಲಲಾ... ಆಹಹಹಾ ಲಾಲಲಲಲಲಾ... ಆಹಹಾಹ
------------------------------------------------------------------------------------
ಮಧುಚಂದ್ರ (೧೯೭೯) - ಬೆಳ್ಳಿ ಹಕ್ಕಿ ಮುಗಿಲ ತುಂಬಿ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಡಿ.ಪ್ರಭಾಕರ
ಬೆಳ್ಳಿ ಹಕ್ಕಿ ಮುಗಿಲ ತುಂಬಿ....
ಬೆಳ್ಳಿ ಹಕ್ಕಿ ಮುಗಿಲ ತುಂಬಿ....ಕರೆಯುತ್ತಿವೇ.. ಕಂಗಳ ತುಂಬಿ...ಕಂಗಳ ತುಂಬಿ...
ಬೆಳ್ಳಿ ಹಕ್ಕಿ ಮುಗಿಲ ತುಂಬಿ....
ಸಾಗುತಿದೇ ಬಾಳಿನ ದೋಣಿ ನದಿಯನ್ನೇ ಸೀಳಿಕೊಂಡು
ಸಂತೋಷ ಅಲೆಯಂತೆ ಬಂಡೆಗಳ ಮ್ಯಾಲೇರಿ
ನೊರೆಯಾಗಿ ಹಾರುತಿದೇ.. ಚಂದಾಗಿ ಕಾಣುತಿದೇ
ಸಾಲಾಗಿ ಬಿಡದೇನೇ ಜೊತೆಯಾಗೇ ಹೊಂಟೈತಿ..
ಬೆಳ್ಳಿ ಹಕ್ಕಿ ಮುಗಿಲ ತುಂಬಿ....ಕರೆಯುತ್ತಿವೇ.. ಕಂಗಳ ತುಂಬಿ...ಕಂಗಳ ತುಂಬಿ...
ನಿನ್ನಂದ ಚಂದಿಲ್ಲೀ .. ಭೂದೇವಿ ಎದುರಲ್ಲಿ
ಆದರೂ ಅವಳೇ ಸೋತವಳೇ ಇಲ್ಲೇ
ನಗುತಾ ಕುಂತವನೇ ದ್ಯಾವರೂ ಮ್ಯಾಲೇ
ನೋಡಲ್ಲಿ ನೋಡೋ ಭಾರ ಹಾಲಿನ ಮೋಡ
ಬೆಳ್ಳಿ ಹಕ್ಕಿ ಮುಗಿಲ ತುಂಬಿ...
ಬೆಳ್ಳಿ ಹಕ್ಕಿ ಮುಗಿಲ ತುಂಬಿ....ಕರೆಯುತ್ತಿವೇ.. ಕಂಗಳ ತುಂಬಿ...ಕಂಗಳ ತುಂಬಿ...
ಕಂಗಳ ತುಂಬಿ...ಕಂಗಳ ತುಂಬಿ... ಕಂಗಳ ತುಂಬಿ...ಕಂಗಳ ತುಂಬಿ...
------------------------------------------------------------------------------------
ಮಧುಚಂದ್ರ (೧೯೭೯) - ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಜಯಚಂದ್ರನ, ವಾಣಿಜಯರಾಂ
ಹೆಣ್ಣು : ಆಹ್ಹಹ್ಹಾ.. ಅಹ್ಹಹ್ಹಹ್ಹಾ ಗಂಡು : ಅಹ್ಹಹ್ಹಹ್ಹಾ..
ಹೆಣ್ಣು : ಆಹ್ಹಹ್ಹಾ.. ಆಆಆ ಗಂಡು : ಆಆಆ ಅಹ್ಹಹ್ಹಹ್ಹಾ..
ಗಂಡು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ನನ್ನ ನೋಡಿ ಮಾತಾಡೀ ಕರೆದೇ ನೀ ಜಾಣೇ ...
ಹೆಣ್ಣು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ನನ್ನ ನೋಡಿ ಮಾತಾಡೀ ಕರೆದೇ ನೀ ಜಾಣ ...
ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ಗಂಡು : ನನಗೆ ಈ ದಿನ
ಗಂಡು : ಏನ್ ನುಡಿದೂ ಬಣ್ಣಿಸಲೀ ಆಸೆಯ ಹೇಗೇ ತಿಳಿಸಲೀ..
ಹೆಣ್ಣು : ಆಆಆ.. ಆಆಆ...
ಗಂಡು : ಏನ್ ನುಡಿದೂ ಬಣ್ಣಿಸಲೀ ಆಸೆಯ ಹೇಗೇ ತಿಳಿಸಲೀ..
ಏನೋ ಹೇಳಲೂ ಕಾದಿರುವೇ ನುಡಿಯಲೂ ಬಾರದೇ ನಿಂತಿರುವೇ
ಹೆಣ್ಣು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ಗಂಡು : ನನಗೆ ಈ ದಿನ
ಹೆಣ್ಣು : ಪ್ರೀತಿಯ ಮಾತನೂ ಹೇಳಿದೀರಿ ಆಸೆಯ ನನಗೇ ತಿಳಿಸಿರೀ.. (ಆಆಆಆಅ.. ಆಆಆ)
ಹೆಣ್ಣು : ಪ್ರೀತಿಯ ಮಾತನೂ ಹೇಳಿದೀರಿ ಆಸೆಯ ನನಗೇ ತಿಳಿಸಿರೀ..
ದೇಹವೂ ಮನಸೂ ಕೂಡಿರೇ.. ರಸಮಯ ಕವಿತೇ ಬೇರೇಕೆ
ಗಂಡು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ಹೆಣ್ಣು : ನನಗೆ ಈ ದಿನ
ಹೆಣ್ಣು : ತಾನಾಗೀ ಕರೆದ ತುಟಿಗಳೂ ನಿನ್ನ ಕಂಡೂ ನಡುಗಿರೇ..
ಗಂಡು : ಅಹ್ಹಹ್ಹಾ.. (ಅಹ್ಹಹ್ಹಹ್ಹಾ ) ಲಲಲಲ್ಲಾ (ಲಲಲಲ್ಲಾ )
ಹೆಣ್ಣು : ತಾನಾಗೀ ಕರೆದ ತುಟಿಗಳೂ ನಿನ್ನ ಕಂಡೂ ನಡುಗಿರೇ
ಗಂಡು : ರಮಿಸಲೂ ನಾನು ಬಂದಿರಲೂ ನಗಿಸುತ ನಿಂದೇ ನನ್ನವಳೂ
ಹೆಣ್ಣು : ನಿನ್ನ ನೋಡಿದ ನೆನಪಿದೆ ನನಗೆ ಈ ದಿನ
ನನ್ನ ನೋಡಿ ಮಾತಾಡೀ
ಇಬ್ಬರು : ಕರೆದೇ ನೀ ಜಾಣೇ ...
------------------------------------------------------------------------------------
ಮಧುಚಂದ್ರ (೧೯೭೯) - ನಮ್ಮ ತಾಯಿ ಮಾದೇವಿ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ವಾಣಿಜಯರಾಂ, ಕೋರಸ್
ಕೋರಸ್ : ಊಂಊಂಊಂಊಂ... ಊಂಊಂಊಂ.. ಆಆಆ .. ಓಓಓಓಓ ಓಓಓಓಓ
ಹೆಣ್ಣು : ನಮ್ಮ ತಾಯೀ ಮಾದೇವಿ...
ನಮ್ಮ ತಾಯೀ ಮಾದೇವಿ ಮಂಗಳ ಮಾದೇವಿ
ಮೈತುಂಬಿ ಬಂದೋಳೇ ದಿನದಿನವೂ ನಲಿದವಳೇ.. ದಿನದಿನವೂ ನಲಿದವಳೇ
ಕೋರಸ್ : ನಮ್ಮ ತಾಯೀ ಮಾದೇವಿ... ನಮ್ಮ ತಾಯೀ ಮಾದೇವಿ...
ಹೆಣ್ಣು : ಸಂತೋಷ ಮುಗಿಲತ್ತ ಕಾರಂಜಿ ಪುಟಿದಂತೇ ಸುಖಬಾಳ ಕಂಡೀವಿ ಹಾಯಾಗೀ..
ಕೋರಸ್ : ಲಲಲ್ಲಲ್ಲಾ.. ಲಲಲ್ಲಲ್ಲಾ.. ಲಲಲ್ಲಲ್ಲಾ.. ಲಲಲ್ಲಲ್ಲಾ.. ಲಲಲ್ಲಲ್ಲಾ.. ಲಲಲಲಾ
ಹೆಣ್ಣು : ಹುಣ್ಣಿಮೆ ಬಂದೈತೆ ಹೂವಾಗಿ ನಿಂತೈತೇ ನವರಾತ್ರೀ ಕರದೈತೆ ಬಾರೆಂದೂ
ಕೋರಸ್ : ನವರಾತ್ರೀ ಕರದೈತೆ ಬಾರೆಂದೂ
ಹೆಣ್ಣು : ಹೂತೇರ ನಡೆಸುತ್ತಾ ಬರೋ ದೋಣಿ ಹಸಿರುಟ್ಟೂ ಸಿರಿಗಂಧ ಕಂಪಲ್ಲಿ ಲೇಪಾಗಿ
ಚಿತ್ತಾರ ಕೆತ್ತಿರುವ ಆಕಾಶ ಮಂಟಪದಿ ಮಳೆಯಾಗಿ ಸುರಿದವಳೇ ನದಿಯಾಗಿ
ಮಳೆಯಾಗಿ ಸುರಿದವಳೇ ನದಿಯಾಗಿ ನಮ್ಮ ತಾಯೀ ಮಾದೇವಿ... ನಮ್ಮ ತಾಯೀ ಮಾದೇವಿ...
ಹೆಣ್ಣು : ನಮ್ಮ ತಾಯೀ ಮಾದೇವಿ ಮಂಗಳ ಮಾದೇವಿ
ಹೆಣ್ಣು : ಬಂಗಾರ ತುಂಬೀ ಸಿಂಗಾರ ಜೊತೆ ತಂದೂ ನೀಡುವಳು ನಮಗೇ ಕೈತುಂಬಾ ...
ಕೋರಸ್ : ಲಲಲ್ಲಲ್ಲಾ.. ಲಲಲ್ಲಲ್ಲಾ.. ಲಲಲ್ಲಲ್ಲಾ.. ಲಲಲ್ಲಲ್ಲಾ.. ಲಲಲ್ಲಲ್ಲಾ.. ಲಲಲಲಾ
ಹೆಣ್ಣು : ಕಡಲಂಥ ಕರುಣೇ.. ದೂರಾಯ್ತು ಚಿಂತೇ ಹಾಲುಕ್ಕಿ ಹರಿದೂ ನಿಂತೈತೇ ..
ಕೋರಸ್ : ಹಾಲುಕ್ಕಿ ಹರಿದೂ ನಿಂತೈತೇ ..
ಹೆಣ್ಣು : ದುಷ್ಟರ ದಂಡಿಸುತ ಭಕ್ತರ ಪೊರೆವಳೂ.. ಕುಣಿಯೋಣ ಬನ್ನೀ .. ನಾವೆಲ್ಲಾ
ಪನ್ನೀರು ಕೊಡ ತುಂಬೀ ಆ ದೇವಿ ಪಾದಕ್ಕೇ ಸುರಿಯೋಣ ಬನ್ನೀ ಒಂದಾಗೀ..
ಕೋರಸ್ : ಸುರಿಯೋಣ ಬನ್ನೀ ಒಂದಾಗೀ.. ನಮ್ಮ ತಾಯೀ ಮಾದೇವಿ..ನಮ್ಮ ತಾಯೀ ಮಾದೇವಿ...
ಹೆಣ್ಣು : ನಮ್ಮ ತಾಯೀ ಮಾದೇವಿ ಮಂಗಳ ಮಾದೇವಿ
ಮೈತುಂಬಿ ಬಂದೋಳೇ ದಿನದಿನವೂ ನಲಿದವಳೇ .. ದಿನದಿನವೂ ನಲಿದವಳೇ
ಕೋರಸ್ : ನಮ್ಮ ತಾಯೀ ಮಾದೇವಿ... ನಮ್ಮ ತಾಯೀ ಮಾದೇವಿ...
ನಮ್ಮ ತಾಯೀ ಮಾದೇವಿ... ನಮ್ಮ ತಾಯೀ ಮಾದೇವಿ...
ನಮ್ಮ ತಾಯೀ ಮಾದೇವಿ... ನಮ್ಮ ತಾಯೀ ಮಾದೇವಿ...
ನಮ್ಮ ತಾಯೀ ಮಾದೇವಿ... ನಮ್ಮ ತಾಯೀ ಮಾದೇವಿ...
-----------------------------------------------------------------------------------
No comments:
Post a Comment