ಮಹಾ ಪುರುಷ ಚಲನಚಿತ್ರದ ಹಾಡುಗಳು
- ಗಲ್ಲಿ ಗಲ್ಲಿ ಸುತ್ತೋ
- ಕಂಡೇ ನನ್ನ ಒಲವಿನ ಹುಡ್ಗಿಯ
- ಇದೇ ಪ್ರೇಮ ಸಂಕೇತ
- ಏಕೇ ಈ ಮೌನ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಹೆಣ್ಣು : ಗಲ್ಲಿ ಸುತ್ತಿ ಸುತ್ತೋ ಗಾಂಪರ ಗುಂಪಂತೆ ಹಲ್ಲು ಹಲ್ಲುಂ ಕಿರಿವ ಹೀರೋಗಳಿವರಂತೆ
ನಾಚಿಕೆ ಇಂತಿಲ್ಲ ಸಭ್ಯತೇ ಗೊತ್ತಿಲ್ಲ ಜಂಭವೋ ಠೀವಿಯೋ ಮಾಡಂಗಮ್ಮಿಯೋ
ದಿನ ಸಿನಿಮಾ ಪಾರ್ಕು ಹೋಟೆಲ ಬೀದಿ ಅಲೆಯುವರಂತೇ
ತಂದೆ ಗಳಿಸಿ ತಂದ ಹಣವ ಸೇರಿಸುವುದೇ ಚಿಂತೆ ಸೀರೆ ಕಂಡರೆ ಇವರು ಹಾಜರ್
ಇವರೂ ಹೀರೋ ಅಲ್ಲ ಜೀರೋ
ಗಂಡು : ಹೇ..ಹೇ.. ಚೆಲ್ಲು ಚೆಲ್ಲಾಗಾಡೋ ಬಣ್ಣದ ಚಿಟ್ಟೆಗಳು ಬೀದಿ ಬಿಡಿ ಸುತ್ತೋ ಗಂಡು ಬೀರಿಗಳು
ಲಜ್ಜೆಯು ಇಂತಿಲ್ಲ ಸಂಸ್ಕೃತಿ ತಿಳಿದಿಲ್ಲ ಜಂಭದಾ ಕೋಳಿಯೋ ಬಿಂಕದ ಬ್ಯುಟಿಯೋ
ಗಂಡು : ದಿನ ಮಿನಿಯೋ ಮಿಡಿಯೋ ಮ್ಯಾಕ್ಸಿ ಜಿನ್ಸೋ ಇದರದೇ ಚಿಂತೇ
ಬರಿ ಪೌಡರ್ ಸೆಂಟು ಲಿಪ್ ಸ್ಟಿಕ್ ತುಟಿಗೆ ಬಳಿಯುವರಂತೆ
ಬಟ್ಟೆಗೆ ರೇಷನ್ನು ಇವರ ಫ್ಯಾಷನ್ ಕೆಣಕೆ ಗಂಡನ್ನು ಕಾಡುವ ಸೈರನ್
ಇವರ ವರಿಸುವರಾರೋ ಸೀತೆ ಹುಟ್ಟಿದ ಭೂಮಿ ಭಾರತ ನಾಡಂತೇ
ತಾಯಿ ಕುಲದ ಹಿರಿಮೆ ಸಾರುವ ಮಣ್ಣಂತೆ ಗರತಿ ಗುಣ ಬೇಕು
ನಯ ಭಯ ಇರಬೇಕು ಗಂಡನು ಗೌರವಿಸೋ ನಮ್ರತೇ ಇರಬೇಕು
ಆಗಲೇ ಜೀವನ ಹರುಷದಾನಂದಾ
-------------------------------------------------------------------------------------------------------
ಮಹಾ ಪುರುಷ (೧೯೮೫) - ಕಂಡೇ ನನ್ನ ಒಲವಿನ ಹುಡ್ಗಿಯ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ವಿಷ್ಣುವರ್ಧನ
ಕಂಡೇ ನನ್ನ ಒಲವಿನ ಹುಡುಗಿಯ ಬರದೇ ಅವಳ ಸಿಹಿ ಸಿಹಿ ಪ್ರೀತಿಯ
ಹೃದಯ ಹಾಡಿತು ಒಡಲು ತೇಲಿತು ಹೊಸದು ಸಂತೋಷವೇ..
ಕಂಡೇ ನನ್ನ ಒಲವಿನ ಹುಡುಗಿಯ ಬರದೇ ಅವಳ ಸಿಹಿ ಸಿಹಿ ಪ್ರೀತಿಯ
ಹೃದಯ ಹಾಡಿತು ಒಡಲು ತೇಲಿತು ಹೊಸದು ಸಂತೋಷವೇ..
ಅವಳಾ ನಯನಾ ಚೆಲುವಾ ಕವನ ಸವಿಗಾನದ ಕಲ್ಪನೆಯೋ
ಅವಳಾ ನುಡಿಯು ಕೊಳಲಾ ಸವಿಯು ನವಚೈತ್ರದ ಕೋಗಿಲೆಯೋ..
ಅವಳಾ ನಗೆಯು ಸುಧೆಯಾ ಹೊಳೆಯು ಹೊಸ ಪ್ರೇಮದ ಪಲ್ಲವಿಯೋ
ಆ ನೋಟದಲಿ ಆ ಮಿಂಚಿನಲಿ ಅದು ಮುಂಜಾನೇ ಹೊಂಬೆಳಕೋ
ಆ ಶಿಲ್ಪಿ ಕನಸೋ ಬೆರೆಯೋ ಸೊಗಸೋ ಅರಳಿ ನಗುವ ಹೂವ ವಯಸ್ಸೋ..
ಹೊಳೆಯುವ ಕಾರ್ತಿಕ ದೀಪವಿದೋ
ಕಂಡೇ ನನ್ನ ಒಲವಿನ ಹುಡುಗಿಯ ಬರದೇ ಅವಳ ಸಿಹಿ ಸಿಹಿ ಪ್ರೀತಿಯ
ಹೃದಯ ಹಾಡಿತು ಒಡಲು ತೇಲಿತು ಹೊಸದು ಸಂತೋಷವೇ..
ಬರೆದೇ ನಿನ್ನಾ ಸಿಹಿಯಾ ಹೆಸರಾ ಈ ಬಾಳಿನ ಕಾವ್ಯದಲ್ಲಿ
ಎದೆಯಾ ಒಳಗೇ ಮನೆಯು ನಿನಗೆ ಸುಖಜೀವನ ನಡೆಸಲ್ಲಿ
ನೀನೇ ಜೊತೆಯೂ ನೀನೇ ನೆರವು ಈ ಪ್ರೇಮದ ದೋಣಿಯಲೀ
ನೀನೇ ಮೂರ್ತಿ ನೀನೇ ಜ್ಯೋತಿ ಈ ಪ್ರೀತಿಯ ಗುಡಿಯಲ್ಲಿ
ಹ್ಹಾಂ .. ಪ್ರಣಯ ಬೆರೆಸಿ ಸೊಬಗಿ ಸರಸಿ
ಸೆಳೆದೆ ನನ್ನಾ ನಗೆಯಾ ಹರಿಸಿ ಒಲವಿನ ನೀನೇ ಮುನ್ನಡಿಯೂ ..
ಕಂಡೇ ನನ್ನ ಒಲವಿನ ಹುಡುಗಿಯ ಬರದೇ ಅವಳ ಸಿಹಿ ಸಿಹಿ ಪ್ರೀತಿಯ
ಹೃದಯ ಹಾಡಿತು ಒಡಲು ತೇಲಿತು ಹೊಸದು ಸಂತೋಷವೇ..
------------------------------------------------------------------------------------------------------
ಮಹಾ ಪುರುಷ (೧೯೮೫) - ಇದೇ ಪ್ರೇಮ ಸಂಕೇತ
ಸಂಗೀತ : ಸತ್ಯಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಹೆಣ್ಣು : ಇದೇ ಪ್ರೇಮ ಸಂಕೇತ ಇದೇ ಮಾತ ಸಂಗೀತ
ಜೀವ ಜೀವ ಸಂಬಂಧ ಅಮರ ಪ್ರೇಮ ಅನುಬಂಧ
ಗಂಡು : ಇದೇ ಪ್ರೇಮ ಸಂಕೇತ ಇದೇ ಮಾತ ಸಂಗೀತ
ಜೀವ ಜೀವ ಸಂಬಂಧ ಅಮರ ಪ್ರೇಮ ಅನುಬಂಧ
ಇದೇ ಪ್ರೇಮ ಸಂಕೇತ
ಹೆಣ್ಣು : ಸಂಕೇತ.. ಸಂಕೇತ
ಗಂಡು : ಕಡಲಾ ಅಲೆ ಹೊಮ್ಮಿ ಬಂದಂತೇ ಮುಗಿಲು ಮಿಂಚಾಗಿ ಸುಳಿದಂತೆ
ಭಾವ ಎದೆ ತುಂಬಿ ಬಂದಾಗ ಮೈ ಮರೆಸೋ ಕಾವ್ಯ ಅನುರಾಗ
ಹೆಣ್ಣು : ವರುಷ ವರುಷಗಳು ಕಳೆದಂತೆ ನೆನಪು ಹಸಿರಾಗಿ ಉಳಿದಂತೆ
ಆಸೆ ತಂದ ರಾಗಕೆ ಭಾಷೆ ಇಲ್ಲ ಪ್ರೇಮಕೆ
ಇದೇ ಪ್ರೇಮ ಸಂಕೇತ
ಗಂಡು : ಸಂಕೇತ.. ಸಂಕೇತ
ಹೆಣ್ಣು : ಒಲವು ಶ್ರುತಿಯಲ್ಲಿ ಬೆರೆತಂತೆ ಗಾಳಿ ಸೌಗಂಧ ಕಲೆತಂತೆ
ಮನಸು ಮನಸ್ಸನ್ನು ಅರಿತಾಗ ಆತ್ಮ ಆತ್ಮಕೆ ಕಲೆತಾಗ
ಗಂಡು : ಸಾವು ಬದುಕೆಂಬ ಮಿತಿಯಿಲ್ಲ ನೋವು ನಲಿವೆಂಬ ತಡೆಯಿಲ್ಲ
ಏಳು ಜನ್ಮ ಬಂಧನ ಪ್ರೇಮ ತಂದ ಸ್ಪಂದನ
ಹೆಣ್ಣು : ಇದೇ ಪ್ರೇಮ ಸಂಕೇತ ಇದೇ ಮಾತ ಸಂಗೀತ
ಜೀವ ಜೀವ ಸಂಬಂಧ ಅಮರ ಪ್ರೇಮ ಅನುಬಂಧ
ಗಂಡು : ಇದೇ ಪ್ರೇಮ ಸಂಕೇತ ಇದೇ ಮಾತ ಸಂಗೀತ
ಜೀವ ಜೀವ ಸಂಬಂಧ ಅಮರ ಪ್ರೇಮ ಅನುಬಂಧ
ಇದೇ ಪ್ರೇಮ ಸಂಕೇತ
-------------------------------------------------------------------------------------------------------
ಮಹಾ ಪುರುಷ (೧೯೮೫) - ಏಕೇ ಈ ಮೌನ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಹೆಣ್ಣು : ಏಕೆ ಈ ಮೌನ ಮನ್ನಿಸೂ ನನ್ನಾ ನಾ ನಿನ್ನ ಅರಿತಾಯಿತು
ಮನಸ್ಸಿಗ ತಿಳಿಯಾಯಿತು
ಹೆಣ್ಣು : ಪ್ರೇಮದಿ ನನ್ನಾ ವರಿಸಲು ಬಂದಾ ನಿನ್ನಾ ನೂಕಿದೆ
ಚಾಡಿನ ನುಡಿಗೇ ಕಿವಿಯನು ಕೊಟ್ಟು ತಪ್ಪು ಮಾಡಿದೇ
ಉರಿಬಿಸಿಲಿನಲಿ ಬರಿ ಮುಳ್ಳಿನಲಿ ದಿನವೆಲ್ಲ ಓಡಾಡಿದೆ
ವೇದನೇ ಉಸಿರಾಯ್ತು ದಾರಿಯೇ ಕಾಣದೇ ..
ಗಂಡು : ಸಾಕು ಈ ಮೌನ ಪ್ರೀತಿಸು ನನ್ನಾ ಹೊಸಬಾಳು ಬಂದಾಯಿತು
ಆನಂದ ತಂದಾಯಿತು
ಸಾಕು ಈ ಮೌನ ಪ್ರೀತಿಸು ನನ್ನಾ ಹೊಸಬಾಳು ಬಂದಾಯಿತು
ಆನಂದ ತಂದಾಯಿತು
ಗಂಡು : ಕಂಬನಿ ಏಕೆ ಬಿಸಿ ಉಸಿರೇಕೆ ಶೋಕ ಏತಕೆ
ಪ್ರೀತಿಯ ನಮ್ಮಾ ಉಸಿರಾಗಿರಲೂ ನೋವು ಏತಕೆ
ನಮ್ಮ ಬಾಳಿನಲ್ಲಿ ರವಿ ಮೂಡಿ ಬರಲು ಹೊಸ ಹಾಡ ನೀ ಹಾಡಿದೇ
ಸೊರಗಿರುವೇ .. ಬಳಲಿರುವೇ .. ಕೊರಗುತಾ ಏತಕೆ.. ಹಾಂ..
ಸಾಕು ಈ ಮೌನ ಪ್ರೀತಿಸು ನನ್ನಾ ಹೊಸಬಾಳು ಬಂದಾಯಿತು
ಆನಂದ ತಂದಾಯಿತು
-------------------------------------------------------------------------------------------------------
No comments:
Post a Comment