1273. ಮಕ್ಕಳ ಸೈನ್ಯ (೧೯೮೦)

ಮಕ್ಕಳ ಸೈನ್ಯ ಚಿತ್ರದ ಹಾಡುಗಳು 
  1. ಮುತ್ತಿನಂಥ ಮಕ್ಕಳಮ್ಮಾ 
  2. ಗೌರಿ ಮನೋಹರಿಯ ಕಂಡೆ 
  3. ತಳ್ಳೋ ಮಾಡಲ್ ಗಾಡಿ ಇದು ಬಿಡ್ರಪ್ಪ 
  4. ಇದಕ್ ಮೂಳೆಯು ಮೈಲಿಲ್ಲ 
  5. ಧಿಮ್ಮ ತಕ್ಕ ಧಿಮ್ಮಿ ನಾ ಯಾರಿಗಿಂತ ನಾ 
ಮಕ್ಕಳ ಸೈನ್ಯ (೧೯೮೦) - ಮುತ್ತಿನಂಥ ಮಕ್ಕಳಮ್ಮಾ
ಸಂಗೀತ : ಎಂ.ಎಸ್.ವಿಶ್ವನಾಥನ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ., ವಾಣಿಜಯರಾಂ

ಮುತ್ತಿನಂಥ ಮಕ್ಕಳಮ್ಮಾ ಹೆತ್ತವರ ಕಂಗಳಮ್ಮ ದೈವ ತಂದ ಆಸ್ತಿ ಇವರೂ
ಪ್ರೀತಿ ಅನ್ನೋ ತೋಟದಲ್ಲಿ ಮುದ್ದು ಮಾತ ಜೇನ ಚಲ್ಲಿ ನಗುವಂತ ಹೂಗಳಿವರೂ
ಅರೇ .. ಹನುಮಂತ .. ಎಲೇ ಜಾಬೂ೦ತ ಇತಿ ಮಿತಿ ಇಲ್ಲ ಕಾಟ
ಬಲು ತುಂಟಾಟ ಬರಿ ಚೆಲ್ಲಾಟ ತಲೆಗೇರೋಲ್ಲ ಪಾಠ

ಹಾಡುವ ರೇಡಿಯೋ ಕೈಗೆ ಸಿಕ್ಕರೇ ಕಿತ್ತ ವೈರೆಲ್ಲೊ ವಾಲ್ವೆಲ್ಲೋ ನೋಡು
ಸ್ನಾನದ ಮನೆಯಲ್ಲಿ ನೀರು ಬಿಟ್ಟರೇ ಆಗ ಬಲು ಜೋರು ಆಗ ಸಿನಿಮಾದ ಹಾಡು
ಸ್ಕೂಲಿಗೇ ಹೋಗಲೂ ವೇಳೆ ಆದಾಗ ಬ್ಯಾಗೆಲ್ಲೋ ಹುಕುಕಪ್ಪ ಜೋಡು
ಹಬ್ಬದ ದಿನದಲ್ಲಿ ತಿಂಡಿಮಾಡಲು ಛೂ ಮಾಯಾ ಮಾಡಿಟ್ಟ ಲಾಡೂ
ಮಕ್ಕಳ ಸೈನ್ಯವಿದೂ ಧಾಳಿ ಇಟ್ಟರೇ ಆ ಲಂಕೆ ಬೆಂಕಿಗೇ ಪಾಲೂ
ಶಿಸ್ತನೂ ಮಕ್ಕಳಿಗೇ ಹೇಳಿಕೊಟ್ಟರೆ ನಮ್ಮ ನಾಡೆಲ್ಲ ವೀರರ ಸಾಲು
ದೇಶಕ್ಕೆ ಆವರನ್ನು ಕೊಟ್ಟೆ ಎನ್ನುವ ಹೆಮ್ಮೆ ಅಲ್ಲಿಗೆ ನಿಲ್ಲಿಸಲು ಮೇಲೂ
ಮನದಲ್ಲಿ ನಿರ್ಧಾರ ಮಾಡಿಕೊಂಡರೇ ಮದನಂಗೆ ನಿಜವಾದ ಸೋಲು

 ಹೆತ್ತೋರ ಕನಸಲ್ಲಿ ತಮ್ಮ ಮಕ್ಕಳೂ ಬಾಳಲ್ಲಿ ಮುಂದಾಗಬೇಕು
ಡಾಕ್ಟರ್ ಒಬ್ಬಾತ ಒಬ್ಬ ವಕೀಲ ಒಬ್ಬ ಹೆಸರಾಂತ ಕವಿಯಾಗಬೇಕೂ
ಎಂ.ಎಲ್.ಎನೋ  ಎಂಪಿನೋ  ಒಬ್ಬನಾದರೇ ಒಬ್ಬ ಸೈನ್ಯಕ್ಕೇ ತಾ ಸೇರಬೇಕು
ವಿವಾಹ ಮಾಡಿಕೊಂಡು ಹೆಣ್ಣು ಮಗಳು ಹೊಕ್ಕ ಮನೆಗೆ ದೀಪ ತಾನಾಗ ಬೇಕು
ಮುತ್ತಿನಂಥ ಮಕ್ಕಳಮ್ಮಾ ಹೆತ್ತವರ ಕಂಗಳಮ್ಮ ದೈವ ತಂದ ಆಸ್ತಿ ಇವರೂ
ಪ್ರೀತಿ ಅನ್ನೋ ತೋಟದಲ್ಲಿ ಮುದ್ದು ಮಾತ ಜೇನ ಚಲ್ಲಿ ನಗುವಂತ ಹೂಗಳಿವರೂ
ಅರೇ .. ಹನುಮಂತ .. ಎಲೇ ಜಾಬೂ೦ತ ಇತಿ ಮಿತಿ ಇಲ್ಲ ಕಾಟ
ಬಲು ತುಂಟಾಟ ಬರಿ ಚೆಲ್ಲಾಟ ತಲೆಗೇರೋಲ್ಲ ಪಾಠ
-----------------------------------------------------------------------------------------------------------------

ಮಕ್ಕಳ ಸೈನ್ಯ (೧೯೮೦) - ಗೌರಿ ಮನೋಹರಿಯ ಕಂಡೆ
ಸಂಗೀತ : ಎಂ.ಎಸ್.ವಿಶ್ವನಾಥನ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ., ವಾಣಿಜಯರಾಂ

ಹೆಣ್ಣು : ಗೌರಿ ಮನೋಹರಿಯ ಕಂಡೇ ನಾ ಪುರುಷನ ನಿಜ ರೂಪವೇ
          ಯೌವ್ವನದ ಮರೆಯಲ್ಲೂ ಶ್ಯಾಮ ಆವ ಕವಿರಾಜ ಸಂಗೀತ ಬ್ರಹ್ಮ
ಗಂಡು : ಹೆಸರೇನೋ ಇನಿದಾದ ರಾಗ ಫಲ (ನನ್ ) ಶ್ರೀದೇವಿ ನಿಜಮೈತ್ರಿ ಯೋಗ ನೀ
            ಮಳೆತಂದು ನಲಿದಾಡೋ ಮೇಘ ತನ್ನ ವಯಸ್ಸನ್ನೂ ಲೆಕ್ಕಿಸದ ವೇಗ
            ಗೌರಿ ಮನೋಹರಿಯ ಕಂಡೇ ನಾ ಹೆಣ್ಣಿನ ನಿಜರೂಪವೇ
            ಯೌವ್ವನದ ಮರೆಯಲ್ಲೂ ರಾಧೇ ನೀ ಕವಿ ಕಂಡ ಸಂಗೀತವಾದೇ

ಹೆಣ್ಣು : ತಾಯ್ತನದೇ ನಾ ಕಂಡೇ ಗಾನ ನನ್ನ ಮನದಲ್ಲಿ ಇನ್ನೇಕೋ ಮೌನ
          ನಿನ್ನಂದ ಕಂಡಾಗ ಕಣ್ಣು ನಾ ಕಲ್ಲಲ್ಲ ಹಣ್ಣಾದ ಹೆಣ್ಣು
          ತಪ್ಪೆಂದು ತೆಗಳೋರು ನೂರು ಹೆಣ್ಣ ಮನಸ್ಸನ್ನು ಅರಿತೊರು ಯಾರೂ
          ಇಂದೂ ನನ್ ಪಾಡು ನಾ ತಾನೇ ತಿಳಿಸಿ ನನ್ನ ಒಲವಲ್ಲಿ ಮನಸಾರೇ ಬೆರೆವೆ
ಗಂಡು : ಗೌರಿ ಮನೋಹರಿಯ ಕಂಡೇ ನಾ ಹೆಣ್ಣಿನ ನಿಜರೂಪವೇ
            ಯೌವ್ವನದ ಮರೆಯಲ್ಲೂ ರಾಧೇ ನೀ ಕವಿ ಕಂಡ ಸಂಗೀತವಾದೇ

ಗಂಡು : ಗಿರಿಮೇಲೆ ತಾಕಿದರೂ ಗಾಳಿ ಅದು ನದಿ ಮೇಲೆ ಆಡಿದರು ಗಾಳಿ
            ವಯಸ್ಸಲ್ಲಿ ಬಂದಾಗ್ಲೂ ಪ್ರೀತಿ ಇದೆಕೆಲ್ಲ ಕೆಲನೂರು ಬರಹ
            ನಿಜ ಬಂಧಕ್ಕೆ ಮುಖ ಕೋಟಿ ತರಹ ನನ್ನ ಮನಃಸಾಕ್ಷಿ ನುಡಿದಂತೆ ಕೇಳು
            ನೀ ಜನ ನುಡಿಗೆ ಅಂಜದೇ ಬಾಳು
ಹೆಣ್ಣು : ಗೌರಿ ಮನೋಹರಿಯ ಕಂಡೇ ನಾ ಪುರುಷನ ನಿಜ ರೂಪವೇ
          ಯೌವ್ವನದ ಮರೆಯಲ್ಲೂ ಶ್ಯಾಮ ಆವ ಕವಿರಾಜ ಸಂಗೀತ ಬ್ರಹ್ಮ
ಗಂಡು : ಹೆಸರೇನೋ ಇನಿದಾದ ರಾಗ ಫಲ (ನನ್ ) ಶ್ರೀದೇವಿ ನಿಜಮೈತ್ರಿ ಯೋಗ ನೀ
            ಮಳೆತಂದು ನಲಿದಾಡೋ ಮೇಘ ತನ್ನ ವಯಸ್ಸನ್ನೂ ಲೆಕ್ಕಿಸದ ವೇಗ
            ಗೌರಿ ಮನೋಹರಿಯ ಕಂಡೇ ನಾ ಹೆಣ್ಣಿನ ನಿಜರೂಪವೇ
            ಯೌವ್ವನದ ಮರೆಯಲ್ಲೂ ರಾಧೇ ನೀ ಕವಿ ಕಂಡ ಸಂಗೀತವಾದೇ
-----------------------------------------------------------------------------------------------------------------

ಮಕ್ಕಳ ಸೈನ್ಯ (೧೯೮೦) - ತಳ್ಳೋ ಮಾಡಲ್ ಗಾಡಿ ಇದು ಬಿಡ್ರಪ್ಪ
ಸಂಗೀತ : ಎಂ.ಎಸ್.ವಿಶ್ವನಾಥನ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.,

ತಳ್ಳೋ ಮಾಡಲ್ ಗಾಡಿ ಇದು ಬಿಡ್ರಪ್ಪ ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪಾ
ರಾಮಣ್ಣ..  ಭೀಮಣ್ಣ... ಈರಯ್ಯ.. ಬಾರಯ್ಯ..
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ

ತಲೆಗೇ ಲೆಕ್ಕ ಹೇಳಪ್ಪ ಆರು ಮಕ್ಕಳೂ ತಾನಪ್ಪ ನಾವೂ ತಿಂದದ್ದು ಆರಗೋಕೆ ಒಳ್ಳೆ ಅವಕಾಶ
ಕೈ ಹಾಕಿ ತಳ್ಳಿರಯ್ಯ .. ಕೈ ಹಾಕಿ ತಳ್ಳಿರಯ್ಯ ..
ಇದೂ ಸಂತೇಲಿ ಮಾರಿದ್ರೂ ಕಳ್ಳೇಕಾಯಾದ್ರೂ ಸಿಕ್ಕೊಲ್ವೇ ..
ಪೈಪೋಟಿ ಮಾಡಿದ್ರೇ ಹುಲ್ಲಿನ ಗಾಡೀನ ಗೆಲ್ಲೋಲ್ವೇ
ಎಂಥ ಸೈನ್ಯವೇ ಬಂದ್ರೂ ನಮ್ಮ ವಾನರ ಸೈನ್ಯಕ್ಕೇ ಎದುರಾಗಿ ನಿಲ್ಲೋದುಂಟೇ ..
ತಳ್ಳೋ ಮಾಡಲ್ ಗಾಡಿ ಇದು ಬಿಡ್ರಪ್ಪ ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪಾ
ರಾಮಣ್ಣ..  ಭೀಮಣ್ಣ... ಈರಯ್ಯ.. ಬಾರಯ್ಯ..
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ

ನಾವು ಆರು ಹುಟ್ಟಿದಾಯ್ತು ನಮ್ಮ ಊರು ದೊಡ್ಡದಾಯ್ತು
ನಮ್ಮ ಅಮ್ಮ ಇಲ್ಲದೇನೆ ಇನ್ನು ಆರು ಕಮ್ಮಿ ಆಯ್ತು
ಅಹ್ ನನ್ನಂಥ ಅಪ್ಪ ಉಂಟೇ .. ಅಹ್ ನಿಮ್ಮಂಥ ಮಕ್ಕಳ್ಳು ಉಂಟೇ ಇನ್ ಇದಕ್ಕಿಂತ ತಪ್ಪು ಉಂಟೇ
ಪುಂಗನೂರು ಮಹಾರಾಜ ಸಿಂಗನೂರು ಜಾತ್ರೆಗೇ ಹೋಗಿದ್ದೂ ಇದರಲ್ಲೇನೇ
ತಳ್ಳೋ ಮಾಡಲ್ ಗಾಡಿ ಇದು ಬಿಡ್ರಪ್ಪ ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪಾ
ರಾಮಣ್ಣ..  ಭೀಮಣ್ಣ... ಈರಯ್ಯ.. ಬಾರಯ್ಯ..
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ

ಇದಕ್ ಮೂಳೆಯು ಮೈಲಿಲ್ಲ ಮಾಸವು ಉಳಿದಿಲ್ಲ.. ಬರೀ ..
ನರವೊಂದೇ ನೋಡಪ್ಪ ಸ್ವಲ್ಪ ಜೋರಾಗಿ ತಳ್ಳಪ್ಪ
ಇದರ ಪೂರ್ವಿಕ ಮಾಲೀಕರೆಲ್ಲರೂ ಹೀಗೇನೇ ತಳ್ಳಕೊಂಡೇ ಹೋಗಿದ್ರಂತೇ
ಇದನ್ ಮಾರೋಕೇ ನೋಡಿದ್ರೂ ಕಬ್ಬಿಣದ ಬೆಲೆನೂ ಗಿಟ್ಟೋಲ್ಲ
ಸುಮ್ನೆ ನಿಲ್ಲಸೋಕ್ಕೆ ನೋಡಿದ್ರೂ ಕಾರ್ ಷೆಡ್ಡುನೂ ಸಿಕ್ಕೊಲ್ಲ
ಇದು ಮದುವೆಯ ಮರೆವಣಿಗೆಯೂ ಇಲ್ಲ ಚಾಮುಂಡಿ ತೇರೋಟವೋ
ಕಾರ ಜೊತೆಯಲ್ಲಿ ಹೋರಾಟವೋ
ತಳ್ಳೋ ಮಾಡಲ್ ಗಾಡಿ ಇದು ಬಿಡ್ರಪ್ಪ ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪಾ
ರಾಮಣ್ಣ..  ಭೀಮಣ್ಣ... ಈರಯ್ಯ.. ಬಾರಯ್ಯ..
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ
----------------------------------------------------------------------------------------------------------------

ಮಕ್ಕಳ ಸೈನ್ಯ (೧೯೮೦) - ಧಿಮ್ಮ ತಕ್ಕ ಧಿಮ್ಮಿ ನಾ ಯಾರಿಗಿಂತ ನಾ
ಸಂಗೀತ : ಎಂ.ಎಸ್.ವಿಶ್ವನಾಥನ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಲ್.ಆರ್.ಅಂಜಲಿ, ಟಿ.ಕೆ.ಕಲಾ, ಶಶಿರೇಖಾ, ಎಸ್.ಆರ್.ಶೈಲಜಾ 

ಧೀಮ್ಮ್ ತಕ್ಕ ಧೀಮ್ಮಿ ನಾ ಯಾರಿಗಿಂತ ಕಮ್ಮಿ
ನಿಮ್ಮ ಕೋಟೆಯನ್ನೂ ಹಿಡಿಯುವೆವು ನೋಡುತೀರಿ ತಾತಾ
ನಮ್ಮ ದಾರಿಗಡ್ಡ ಬಂದವನೇ ಕೊಡುವೇ ಒಂದು ಲಾತ
ತಿಂದು ನೀವು ಎದ್ದು ಬಿದ್ದು ಓಡುವಿರವಿಯ್ಯಾ

ಈ ವರುಷ ನಮ್ಮ ವರುಷ ನಮಗೆ ಕಾಲ ನಿಮಗೇ ದಂಡು ಬಿಚ್ಚಿದೆ ಬಾಲ
ತಾಟಕಿಯ ಕೊಂದವನೂ ಬಾಲಕ ತಾನೇ ಆ ಪೂತನಿಯ ಕೊಂದವನೂ ಬಾಲಕ ತಾನೇ
ಧೀಮ್ಮ್ ತಕ್ಕ ಧೀಮ್ಮಿ ನಾ ಯಾರಿಗಿಂತ ಕಮ್ಮಿ
ನಿಮ್ಮ ಕೋಟೆಯನ್ನೂ ಹಿಡಿಯುವೆವು ನೋಡುತೀರಿ ತಾತಾ
ನಮ್ಮ ದಾರಿಗಡ್ಡ ಬಂದವನೇ ಕೊಡುವೇ ಒಂದು ಲಾತ
ತಿಂದು ನೀವು ಎದ್ದು ಬಿದ್ದು ಓಡುವಿರವಿಯ್ಯಾ

ಮದುಮಗನ ಕರೆದಯ್ಯೋ ಶಕ್ತಿ ನಮಗಿದೇ
ನಮ್ಮಮ್ಮ ಹತ್ತರ ಮೇಲೆ ಹೆತ್ತದ್ದಕ್ಕೇ ಫಲವು ನೋಡಿದೆ
ಎಳೇ ಮನಸೂ ಎರಡು ಸೇರು ಆಸೇ ಮೊಳೆತಿದೆ
ಅವ್ ಕೆಡಿಸಲೆಂದೇ ಈ ನಿಮ್ಮ ಮೀಸೆ ಕುಣಿದಿದೆ
ಆಸೇ ಇಲ್ಲದ ಮದುವೆಯಿಂದ ಬಾಳು ಅನರ್ಥ
ನಮ್ಮ ಅಕ್ಕನಿಗೇ ಈ ಹೊತ್ತೇ ನಿಶ್ಚಿತಾರ್ಥ
ಧೀಮ್ಮ್ ತಕ್ಕ ಧೀಮ್ಮಿ ನಾ ಯಾರಿಗಿಂತ ಕಮ್ಮಿ
ನಿಮ್ಮ ಕೋಟೆಯನ್ನೂ ಹಿಡಿಯುವೆವು ನೋಡುತೀರಿ ತಾತಾ
ನಮ್ಮ ದಾರಿಗಡ್ಡ ಬಂದವನೇ ಕೊಡುವೇ ಒಂದು ಲಾತ
ತಿಂದು ನೀವು ಎದ್ದು ಬಿದ್ದು ಓಡುವಿರವಿಯ್ಯಾ
----------------------------------------------------------------------------------------------------------------

No comments:

Post a Comment