83. ಮಮತೆಯ ಮಡಿಲು (೧೯೮೫)

ಮಮತೆಯ ಮಡಿಲು ಚಲನಚಿತ್ರದ ಹಾಡುಗಳು 
  1. ಎದೆ ಬಡಿತ ನಾಡಿ ನುಡಿತ ತಾಣವ 
  2. ಪ್ರೇಮ ಸಂಗಮ ಲೋಕ ಸಂಭ್ರಮ 
  3. ಚಿನ್ನ ನನ್ನ ನಿನ್ನ ಮಧ್ಯೇ ಎಂಥ ಒಂದೂ 
  4. ಮಮತೆಯ ಮಡಿಲು 
ಮಮತೆಯ ಮಡಿಲು (೧೯೮೫) - ಎದೆ ಬಡಿತ ನಾಡಿ ಮಿಡಿತ ತಾಣವ 
ಸಂಗೀತ : ಎಂ.ಎಸ್.ವಿಶ್ವನಾಥನ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ 

ಎದೆ ಬಡಿತ ನಾಡಿ ಮಿಡಿತ ಕಾಣಲಾ ತಬ್ಬಿದೇ ಇನಿಯನ ಸನಿಹಕೇ 
ಹೊಸ ಲಜ್ಜೆಯೂ ಮೈ ತೋರಿದೇ ಏನೆಂದೂ ನಾ ಹೇಳಲೀ .. ನಾ ಹೇಗಿನ್ನೂ ನಾ ತಾಳಲೀ .. 
ಎದೆ ಬಡಿತ ನಾಡಿ ಮಿಡಿತ ಕಾಣಲಾ ತಬ್ಬಿದೇ ಇನಿಯನ (ಓಓ ) ಸನಿಹಕೇ (ಆಆ )
ಹೊಸ ಲಜ್ಜೆಯೂ ಮೈ ತೋರಿದೇ ಏನೆಂದೂ ನಾ ಹೇಳಲೀ .. ನಾ ಹೇಗಿನ್ನೂ ನಾ ತಾಳಲೀ .. 

ಇಂದೂ ಈ ಕೈಗಳೂ ಸೋಕಿದ ಆ ಕ್ಷಣಾ .. ಎಂದೂ ನಾ ಕಾಣದ ಯಾವುದೋ ಕಂಪನಾ .. 
ಮಿಂಚಿನ ಬಳ್ಳಿ ಸುಳಿಯಿತೋ ಮೈಯ್ಯಲೀ ನಿಮ್ಮಲೇ ಸೇರುವಾ ಆತುರ ನನ್ನಲ್ಲೀ .. 
ಎದೆ ಬಡಿತ ನಾಡಿ ಮಿಡಿತ ಕಾಣಲಾ ತಬ್ಬಿದೇ ಇನಿಯನ (ಓಓ ) ಸನಿಹಕೇ (ಓಓ  )
ಹೊಸ ಲಜ್ಜೆಯೂ ಮೈ ತೋರಿದೇ ಏನೆಂದೂ ನಾ ಹೇಳಲೀ .. ನಾ ಹೇಗಿನ್ನೂ ನಾ ತಾಳಲೀ .. 

ಭೂಮಿಯೋ ಬಳಲಿದೆ ಮಂಜಿನ ಹೆಸರಿನ.. ಬಾನಿನ ಪ್ರೀತಿಸಿಲ್ಲಾ ಕೋಳಿಯೂ ಓಡಿತೂ 
ನಿನ್ನಯ ತೋಳಲಿ ನನ್ನನೇ ಮರೆಯುವೇ... ಅಲೆದರೂ ಒಡಲಿತು ನಿನ್ನಯ ಈ ತಿಳಿಯುವೇ 
ಎದೆ ಬಡಿತ ನಾಡಿ ಮಿಡಿತ ಕಾಣಲಾ ತಬ್ಬಿದೇ ಇನಿಯನ (ಓಓ ) ಸನಿಹಕೇ (ಆಆ  )
ಹೊಸ ಲಜ್ಜೆಯೂ ಮೈ ತೋರಿದೇ ಏನೆಂದೂ ನಾ ಹೇಳಲೀ .. ನಾ ಹೇಗಿನ್ನೂ ನಾ ತಾಳಲೀ .. 

ಪ್ರೀತಿಯ ಹೂವಿದು ಸೌರಭ ಚೆಲ್ಲಿದೇ .. ದೇವನ ಕೋಪದೆ ಮೌನದೇ ಕಾದಿದೇ 
ಬಾಂಧವ್ಯ ಕೂಗಿತೂ ಎಂದಿತೋ ನಿನ್ನದೇ ನನ್ನನ್ನೇ ಅರ್ಪಣೆ ಮಾಡಿಕೋ ಎಂದಿತೇ.. 
ಎದೆ ಬಡಿತ ನಾಡಿ ಮಿಡಿತ ಕಾಣಲಾ ತಬ್ಬಿದೇ ಇನಿಯನ  ಕನಸದೇ (ಓಓ )
ಹೊಸ ಲಜ್ಜೆಯೂ ಮೈ ತೋರಿದೇ ಏನೆಂದೂ ನಾ ಹೇಳಲೀ .. ನಾ ಹೇಗಿನ್ನೂ ನಾ ತಾಳಲೀ .. 
----------------------------------------------------------------------------------------------------
 
ಮಮತೆಯ ಮಡಿಲು (೧೯೮೫) - ಪ್ರೇಮ ಸಂಗಮ ಲೋಕ ಸಂಭ್ರಮ 
ಸಂಗೀತ : ಎಂ.ಎಸ್.ವಿಶ್ವನಾಥನ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಕೆ.ಜೆ.ಏಸುದಾಸ, ವಾಣಿಜಯರಾಂ 

ಕೋರಸ್ : ಏಏಏಏಏ.. ರಲಲಲಲಲಲಲಾ .. ಜೂಜೂಜು  ಏಏಏಏಏ.. ರಲಲಲಲಲಲಲಾ .. ಜೂಜೂಜು 
               ಆಆಆಆ .. ಆಆಆಆ .. ಆಆಆಆ .. ಆಆಆಆ .. ಆಆಆಆ .. 
ಗಂಡು : ಪ್ರೇಮ ಸಂಗಮ ಲೋಕ ನವ್ಯ ಜೀವ ಜೀವವೂ ಸೇರಿ ಮೀಟಿದ ಭಾವ 
            ಸಂಗೀತ ರಸಕಾವ್ಯ ಸಂಕೇತ ಅನುರಾಗ ಸಂದೇಶ 
ಹೆಣ್ಣು : ಪ್ರೇಮ ಸಂಗಮ ನವ್ಯ ಸಂಭ್ರಮ ಜೀವ ಜೀವವೂ ಸೇರಿ ಮೀಟಿದ ಭಾವ ಸಂಗೀತ 
           ರಸಕಾವ್ಯ ಸಂಕೇತ ಅನುರಾಗ ಸಂದೇಶ 

ಕೋರಸ್ : ಆಆಆಆ .. ಆಆಆಆ .. ಆಆಆಆ .. ಆಆಆಆ .. ಆಆಆಆ .. ಆಆಆಆ .. 
ಗಂಡು : ಅಪ್ಸರೆಯೋ ದೇವತೆಯೋ ಹೂವಿನ ತೇರಲಿ ಮೆರವಣಿಗೆ ಹೊರಟಿಹ ಸೌಂದರ್ಯ ಯುವರಾಣಿಯೋ...  
            ಶಾಂತಲೆಯೋ ಚಂಚಲೆಯೋ ಜಕ್ಕನ ಶಿಲ್ಪಿಯ ಮೂರ್ತಿಯ ನೀಡಿದ ನಟರಾಜ ಯುವಯೋಗಿಯೋ 
ಹೆಣ್ಣು : ಮನ್ಮಥನೋ ಸುಮಶರಣೋ ಹೆಣ್ಣಿನ ಮನದಲೀ ತಾಯಿಯ ಆಸೆಯ ತಂದಂಥ ಸುಕುಮಾರನೋ..     
          ಸುಂದರನೋ ಚಂದಿರನೋ ನನ್ನದೇ ರಾಜ್ಯವ ಪ್ರೇಮದಿ ಆಳಲೂ ಬಂದಂಥ ಮಹಾರಾಜನೂ 
ಗಂಡು : ಪಲ್ಲವೀ .. ನಿನ್ನ ಈ ಪಲ್ಲವಿ (ಆಆಆಅ ) 
ಹೆಣ್ಣು : ಜ್ಯೋತಿ ನೀ ನನ್ನ ಭಾಗ್ಯ ಜ್ಯೋತಿ ನೀ (ಆಆಆಅ ) 
ಗಂಡು : ಪಲ್ಲವೀ .. ನಿನ್ನ ಈ ಪಲ್ಲವಿ (ಆಆಆಅ ) 
ಹೆಣ್ಣು : ಜ್ಯೋತಿ ನೀ ನನ್ನ ಭಾಗ್ಯ ಜ್ಯೋತಿ ನೀ (ಆಆಆಅ ) 
          ಪ್ರೇಮ ಸಂಗಮ ನವ್ಯ ಸಂಭ್ರಮ ಜೀವ ಜೀವವೂ ಸೇರಿ ಮೀಟಿದ ಭಾವ ಸಂಗೀತ
ಗಂಡು :  ರಸಕಾವ್ಯ ಸಂಕೇತ 
ಹೆಣ್ಣು : ಅನುರಾಗ ಸಂದೇಶ 

ಕೋರಸ್ : ಆಆಆಆ .. ಆಆಆಆ .. ಆಆಆಆ .. ಆಆಆಆ .. ಆಆಆಆ .. ಆಆಆಆ .. 
ಗಂಡು : ನನ್ನೆದೆಯ ವೀಣೆಯಲಿ ಪ್ರೀತಿಯ ಹಂಸ ನಂದಿನಿ ಮೀಟಿದ ವಾಗ್ದೇವಿ ನಿಜರೂಪವೋ.. 
            ಚೈತ್ರದಲೀ.. ಭೂಮಿಯಲಿ ಹಸಿರಿನ ತಳಿರನು ಬೆಳೆಸುತ ನಗುತಿಹ ಆ ದೇವಿಶಕ್ತಿಯೋ.. 
ಹೆಣ್ಣು : ಮೂಡಣದಿ ಓ ಸಿಡಿಲ ಚೆಲ್ಲುತ ಬಾಳಿನ ಬಾನನು ಬೆಳಗುತ ಬಂದಂಥ ರವಿ ನೀನೆಯೋ .. 
          ಈ ಮನದ ಮಂದಿರದೇ ಪ್ರೇಮದ ಪೂಜೆಯ ಕಿರುನಗೆ ಆರತಿ ಕೈಗೋಳ್ಳ ಆ ದೇವನೋ 
ಗಂಡು : ಯಾವುದೋ ನಮ್ಮ ಬಂಧ ಯಾವುದೋ (ಆಆಆಅ )
ಹೆಣ್ಣು : ಏನಿದೋ ದಿವ್ಯ ಶಕ್ತಿ ಏನಿದೋ  (ಆಆಆಅ )
ಗಂಡು : ಯಾವುದೋ ನಮ್ಮ ಬಂಧ ಯಾವುದೋ  (ಆಆಆಅ )
ಹೆಣ್ಣು : ಏನಿದೋ ದಿವ್ಯ ಶಕ್ತಿ ಏನಿದೋ  (ಆಆಆಅ )
ಗಂಡು : ಪ್ರೇಮ ಸಂಗಮ ನವ್ಯ ಸಂಭ್ರಮ ಜೀವ ಜೀವವೂ ಸೇರಿ ಮೀಟಿದ ಭಾವ ಸಂಗೀತ
ಹೆಣ್ಣು :  ರಸಕಾವ್ಯ ಸಂಕೇತ 
ಇಬ್ಬರು : ಅನುರಾಗ ಸಂದೇಶ   
----------------------------------------------------------------------------------------------------
 
ಮಮತೆಯ ಮಡಿಲು (೧೯೮೫) - ಚಿನ್ನ ನನ್ನ ನಿನ್ನ ಮಧ್ಯೇ ಎಂಥ ಒಂದೂ 
ಸಂಗೀತ : ಎಂ.ಎಸ್.ವಿಶ್ವನಾಥನ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಕೆ.ಜೆ.ಏಸುದಾಸ,

ಚಿನ್ನ ನನ್ನ ನಿನ್ನ ಮಧ್ಯೇ ಎಂಥ ಒಂದೂ ಬಂಧನವೂ ಕಾಣೇ ನಾನಮ್ಮಾ.. 
ನಿನ್ನ ಪುಟ್ಟ ಕಣ್ಣ ಮಿಂಚಿ ನನ್ನ ಬಾಳ ಜ್ಯೋತಿಯಂತೇ ಎಂದೂ ಹೇಳಮ್ಮಾ.. 
ನಗುತಾ.. ನಲೀ ನೀ.. ಸುಖದೇ.. ಇರೂ ನೀ.. ಇದೇ ಹಾರೈಕೆ ಆ ದೇವಗೇ .. 
ಚಿನ್ನ ನನ್ನ ನಿನ್ನ ಮಧ್ಯೇ ಎಂಥ ಒಂದೂ ಬಂಧನವೂ ಕಾಣೇ ನಾನಮ್ಮಾ.. 
ನಿನ್ನ ಪುಟ್ಟ ಕಣ್ಣ ಮಿಂಚಿ ನನ್ನ ಬಾಳ ಜ್ಯೋತಿಯಂತೇ ಎಂದೂ ಹೇಳಮ್ಮಾ.. 
ನಗುತಾ.. ನಲೀ ನೀ.. ಸುಖದೇ.. ಇರೂ ನೀ.. ಇದೇ ಹಾರೈಕೆ ಆ ದೇವಗೇ .. 

ತಾಯೀ ಎಂಬ ಮಮತೆ ಮಡಿಲೂ.. ಕಂಡ ಕನಸಿನ ಮೂರ್ತಿಯೇ ನೀನೂ .. 
ಪ್ರೀತಿ ಮಳೆಯ ಕರೆವ ಜೀವದ ಬಾಳನು ಬೆಳಗೋ ಸ್ಫೂರ್ತಿಯೂ ನೀನೂ 
ಉಸಿರಿನ ಉಸಿರೇ ಆಶ್ರಯ ತಳಿರೇ ಶಾಂತಿ ನೀಡುವ ತಂಬೆಲರೇ .. 
ನಗುತಾ.. ನಲೀ ನೀ.. ಸುಖದೇ.. ಇರೂ ನೀ.. ಇದೇ ಹಾರೈಕೆ ಆ ದೇವಗೇ .. 
ಚಿನ್ನ ನನ್ನ ನಿನ್ನ ಮಧ್ಯೇ ಎಂಥ ಒಂದೂ ಬಂಧನವೂ ಕಾಣೇ ನಾನಮ್ಮಾ.. 
ನಿನ್ನ ಪುಟ್ಟ ಕಣ್ಣ ಮಿಂಚಿ ನನ್ನ ಬಾಳ ಜ್ಯೋತಿಯಂತೇ ಎಂದೂ ಹೇಳಮ್ಮಾ.. 
ನಗುತಾ.. ನಲೀ ನೀ.. ಸುಖದೇ.. ಇರೂ ನೀ.. ಇದೇ ಹಾರೈಕೆ ಆ ದೇವಗೇ .. 

ಮೋಡ ಕವಿದ ಜೀವನದಲ್ಲಿ ಆಶಾಕಿರಣ ಆಗಿಹೇ ನೀನೂ .. 
ನಿನ್ನ ನಗೆಯ ಅಲೆಗಳ ಮೇಲೆ ತೇಲಿ ಜಗವ ಮರೆವೇನು ನಾನೂ   
ಪ್ರೀತಿಯ ಸಂದ ಮನದಾನಂದ ನುಲಿದಿದೆ ಜೀವ ನಿನ್ನಿಂದ.. 
ಪ್ರೀತಿಯ ಸಂದ ಮನದಾನಂದ ನುಲಿದಿದೆ ಜೀವ ನಿನ್ನಿಂದ.. 
ನಗುತಾ.. ನಲೀ ನೀ.. ಸುಖದೇ.. ಇರೂ ನೀ.. ಇದೇ ಹಾರೈಕೆ ಆ ದೇವಗೇ .. 
ಚಿನ್ನ ನನ್ನ ನಿನ್ನ ಮಧ್ಯೇ ಎಂಥ ಒಂದೂ ಬಂಧನವೂ ಕಾಣೇ ನಾನಮ್ಮಾ.. 
ನಿನ್ನ ಪುಟ್ಟ ಕಣ್ಣ ಮಿಂಚಿ ನನ್ನ ಬಾಳ ಜ್ಯೋತಿಯಂತೇ ಎಂದೂ ಹೇಳಮ್ಮಾ.. 
ನಗುತಾ.. ನಲೀ ನೀ.. ಸುಖದೇ.. ಇರೂ ನೀ.. ಇದೇ ಹಾರೈಕೆ ಆ ದೇವಗೇ .. 
---------------------------------------------------------------------------------------------------
 
ಮಮತೆಯ ಮಡಿಲು (೧೯೮೫) - ಮಮತೆಯ ಮಡಿಲು 
ಸಂಗೀತ : ಎಂ.ಎಸ್.ವಿಶ್ವನಾಥನ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ರಮೇಶ, ಬಿ.ಶಶಿರೇಖಾ 

ಇಬ್ಬರು : ಮಮತೆಯ ಮಡಿಲೂ .. 
             ಮಮತೆಯ ಮಡಿಲೂ ಇದು ಎಂದೆಂದೂ ಪ್ರೇಮದ ಕಡಲು 
              ಕರುಳಿನ ಕುಡಿಗೇ..  ಪ್ರೀತಿಯ ಏರೆದೂ...  ಲಾಲಿಸಿ ಪಾಲಿಸೋ ಒಲವಿನ ಹೊನಲೂ .. 
             ಒಲವಿನ ಹೊನಲೂ .. 
             ಮಮತೆಯ ಮಡಿಲೂ ಇದು ಎಂದೆಂದೂ ಪ್ರೇಮದ ಕಡಲು 

ಇಬ್ಬರು : ಮಾನವ ಸೇರೋ ಅಕ್ಷರವೇ ಹನುಮನ ಪ್ರೇಮದ ಪ್ರತಿರೂಪ 
             ಮಾನವ ಸೇರೋ ಅಕ್ಷರವೇ ಹನುಮನ ಪ್ರೇಮದ ಪ್ರತಿರೂಪ 
             ಹಾಲ ಕಣ್ಣಲ್ಲಿ ಆನಂದ ಬೆಳೆದೂ ಔಷಧ ಕುಡಿಸಿತ್ತ 
             ಆ ಕಂದನಿಗಾಗಿ.. ಹಾಡೂ ಬಾಳುವಳೆಂತೆಂದೂ  
             ಲಾಲೀಸಿ ಪಾಲೀಸೋ ಒಲವಿನ ಹೊನಲೂ  
             ಒಲವಿನ ಹೊನಲೂ .. 
             ಮಮತೆಯ ಮಡಿಲೂ ಇದು ಎಂದೆಂದೂ ಪ್ರೇಮದ ಕಡಲು 

ಇಬ್ಬರು : ಕತ್ತಲಾಗಿರಿಸುವ ಕಲೆಗಾಗಿ ಅಜ್ಞಾನ ಹೃದಯ ಕೂಗಿದರೂ
              ಕತ್ತಲಾಗಿರಿಸುವ ಕಲೆಗಾಗಿ ಅಜ್ಞಾನ ಹೃದಯ ಕೂಗಿದರೂ
              ಹಾಲೂ ಜೇನಂತೇ ಆ ಸ್ವರ್ಗ ಕೈಯಲ್ಲಿ ಬಂಡೆದ್ದು ಹರುಸುವರೂ .. 
              ಆ ತಾಯಿಯ ಸಾಕ್ಷೀ .. ಒಲವ ಬಾಳ ಸಿಗಲಿಲ್ಲಾ.. 
              ಲಾಲೀಸಿ ಪಾಲೀಸೋ ಒಲವಿನ ಹೊನಲೂ  
              ಒಲವಿನ ಹೊನಲೂ .. 
              ಮಮತೆಯ ಮಡಿಲೂ ಇದು ಎಂದೆಂದೂ ಪ್ರೇಮದ ಕಡಲು 
              ಕರುಳಿನ ಕುಡಿಗೇ..  ಪ್ರೀತಿಯ ಏರೆದೂ...  ಲಾಲಿಸಿ ಪಾಲಿಸೋ ಒಲವಿನ ಹೊನಲೂ .. 
              ಒಲವಿನ ಹೊನಲೂ .. 
              ಮಮತೆಯ ಮಡಿಲೂ ಇದು ಎಂದೆಂದೂ ಪ್ರೇಮದ ಕಡಲು 

----------------------------------------------------------------------------------------------------

No comments:

Post a Comment