ಮನಶ್ಯಾಂತಿ ಚಲನಚಿತ್ರದ ಹಾಡುಗಳು
- ನೀಲ ಗಗನಕೆ ಹಾರುವ ಹಾರಾಡುವಾ ಓ ಗಾಳಿಪಟ
- ಮನಸು ಮನಸು ಕಂದ ವಿಧಿ ವಿಲಾಸ ಕಂದಾ
- ಎಲ್ಲರೂ ಸೇರಿ ಒಂದಾಗಿ ಅಹ್ ಜೀವನ ಗೀತೆಯ ಹಾಡೋಣ
- ಪುಟ್ನರಸಿ ಬಾರೇ ಪಟ್ಟಣಕ್ಕೇ ... ದುಡ್ಡಿನ ಮೂಟೆ ಕಟ್ಟೋಕೇ ...
- ಹಳ್ಳಿಯಿಂದ ಎಳೆ ತಂದು ಪಟ್ಟಣದಿ ಕೆಡವಿಹ
- ಹೆಣ್ಣಿನಗೇ ಉನ್ಮನಸು ಕಾಣುತಿದೆ ನಿನ್ನ ಕನಸು
- ಮಂದಹಾಸದಲ್ಲಿ ಮೋಹನ
ಸಂಗೀತ : ಎ .ಎ.ರಾಜ, ಸಾಹಿತ್ಯ : ಗೀತಪ್ರಿಯ ಗಾಯನ : ಚಂದ್ರಕಲಾ, ಜ್ಯೋತಿ, ಪಿ.ಬಿ.ಶ್ರೀನಿವಾಸ
ಗಂಡು : ನೀಲ ಗಗನಕೆ ಹಾರುವ ಹಾರಾಡುವ ಓ ಗಾಳಿಪಟ
ಬೆಳ್ಳಿಯ ಅಂಚಿನ ಮೋಡವ ದಾಟಿ ಹಾರು ಪಟ ಮೇಲೆ.. ಹಾರು ಪಟ
ಎಲ್ಲರು : ನೀಲ ಗಗನಕೆ ಹಾರುವ ಹಾರಾಡುವ ಓ ಗಾಳಿಪಟ
ಬೆಳ್ಳಿಯ ಅಂಚಿನ ಮೋಡವ ದಾಟಿ ಹಾರು ಪಟ ಮೇಲೆ.. ಹಾರು ಪಟ
ಗಂಡು : ಬಾನಿಗೆ ಎಗರುವ ಆಸೆಯೂ ಮೂಡಲು ಹಾರೆಯೇ ನಮ್ಮಿ ಗಾಳಿಪಟ
ಚಂದ್ರಲೋಕಕೆ ಪಥವ ತೋರಿಸಿ ಬಣ್ಣ ಬಣ್ಣದ ಗಾಳಿಪಟ
ಎಲ್ಲರೂ : ಆಆಆ... ಆಆಆ...
ಗಂಡು : ಬಾನಿಗೆ ಎಗರುವ ಆಸೆಯೂ ಮೂಡಲು ಹಾರೆಯೇ ನಮ್ಮಿ ಗಾಳಿಪಟ
ಚಂದ್ರಲೋಕಕೆ ಪಥವ ತೋರಿಸಿ ಬಣ್ಣ ಬಣ್ಣದ ಗಾಳಿಪಟ
ಪಿಬಿಎಸ್ : ಸೂತ್ರದ ದಾರವೂ ಕೈಯೋಳಗಿರಲೂ ಅತಿ ಸೊಗಸಾಗಿರೀ ಆಡುವದೂ
ದಾರ ಕಿತ್ತರೇ ಹಿಡಿತವಿಲ್ಲದ ಮನಸನು ಎಲ್ಲೋ ಓಡುವುದೂ ..
ಎಲ್ಲರು : ಓಡುವುದೂ ..
ನೀಲ ಗಗನಕೆ ಹಾರುವ ಹಾರಾಡುವ ಓ ಗಾಳಿಪಟ
ಬೆಳ್ಳಿಯ ಅಂಚಿನ ಮೋಡವ ದಾಟಿ ಹಾರು ಪಟ ಮೇಲೆ.. ಹಾರು ಪಟ
ಗಂಡು : ಪಟಪಟ ಕುಕ್ಕುತ ಜಯಿಸಲೂ ಬರುತಿದೆ ಪಟಪಟ ಎನ್ನುತ ನನ್ನ ಪಟ
ಸರ್ರನೇ ನುಗ್ಗಿ ಸರ್ರನೇ ಜಾರೀ ಪರ್ರನೇ ಹರಿವುದೂ ನಿನ್ನ ಪಟ
ಹರಿದರೇ ನನ್ನ ಪಟ ಕೆಣಕಲು ಲಟಲಟ
ವಟವಟ ಗುದ್ದಿದರೇ ಸೆಳೆಯಲು ಪಟಪಟ
ಹ್ಹಾಂ .. ಹೂಂ ..
ಪಿಬಿಎಸ್ : ಬೇಡದ ಪೋತಿಯು ಆಟದಲಿರುವ ಉಲ್ಲಾಸವನೂ ಕೆಡುಸುವುದೂ
ಒಗ್ಗಟ್ಟಿಂದಲಿ ಬಾಳಲು ಕಲಿತರೇ ದೇಶದಿ ಶಾಂತಿಯು ನೆಲೆಸುವುದೂ
ನಮ್ಮ ದೇಶದಿ ಶಾಂತಿಯು ನೆಲೆಸುವುದೂ
ಎಲ್ಲರು : ನೀಲ ಗಗನಕೆ ಹಾರುವ ಹಾರಾಡುವ ಓ ಗಾಳಿಪಟ
ಬೆಳ್ಳಿಯ ಅಂಚಿನ ಮೋಡವ ದಾಟಿ ಹಾರು ಪಟ ಮೇಲೆ.. ಹಾರು ಪಟ
ಮೇಲೆ.. ಹಾರು ಪಟ... ಮೇಲೆ.. ಹಾರು ಪಟ... ಮೇಲೆ.. ಹಾರು ಪಟ.. ಮೇಲೆ.. ಹಾರು ಪಟ
-------------------------------------------------------------------------------------------------------------------------
ಮನಶ್ಯಾಂತಿ (೧೯೬೯) - ಮನಸು ಮನಸು ಕಂದ ವಿಧಿ ವಿಲಾಸ ಕಂದಾ
ಸಂಗೀತ : ಎ .ಎ.ರಾಜ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ
ಹೂಂಹೂಂಹೂಂ... ಜೋ... ಜೋ.. ಜೋ..
ಮನಸು ಮನಸು ಕಂದ ವಿಧಿ ವಿಲಾಸ ಕಂದಾ
ನೀನೂ ಹೊಂದುವೇ ಶಾಂತಿ ಪಡೆವೆನು ನೋವು ಎಲ್ಲಾ ಮರೆವಿಗೆ
ಜೋ... ಜೋ.. ಜೋ.. ಜೋ... ಜೋ.. ಜೋ..
ಇರುಳಿಗೆ ಕೊನೆ ಎಂದೂ ಅದನು ಬಂದೇ ಬರುವುದೂ
ಇರುಳಿಗೆ ಕೊನೆ ಎಂದೂ ಅದನು ಬಂದೇ ಬರುವುದೂ
ಮನದಾ ಯಾತನೇ ನೀನೂ ಆಗೀ ..
ಮನದಾ ಯಾತನೇ ನೀನೂ ಆಗೀ .. ಆಆಆ... ದಿನವ ಚೆಲುವೂ ನೋವೂ ... ಆಆಆ ..
ಜೋ... ಜೋ.. ಜೋ.. ಜೋ... ಜೋ.. ಜೋ..
ಮನಸು ಮನಸು ಕಂದ ವಿಧಿ ವಿಲಾಸ ಕಂದಾ
ನೀನೂ ಹೊಂದುವೇ ಶಾಂತಿ ಪಡೆವೆನು ನೋವು ಎಲ್ಲಾ ಮರೆವಿಗೆ
ಮುದ್ದಿನಿಂದಲೇ ನಿನ್ನನ್ನೂ ಸಾಕಿದ ಆ ಜನ್ಮನೂ ..
ಮುದ್ದಿನಿಂದಲೇ ನಿನ್ನನ್ನೂ ಸಾಕಿದ ಆ ಜನ್ಮನೂ ನಿನ್ನ ಎಂದಿಗೂ ಮರೆಯನೂ
ನಿನ್ನ ಎಂದಿಗೂ ಮರೆಯನೂ ಬೆಳಕೂ ಮೂಡಲು ಬರುವನೂ
ಜೋ... ಜೋ.. ಜೋ.. ಜೋ... ಜೋ.. ಜೋ..
ಮನಸು ಮನಸು ಕಂದ ವಿಧಿ ವಿಲಾಸ ಕಂದಾ
ನೀನೂ ಹೊಂದುವೇ ಶಾಂತಿ ಪಡೆವೆನು ನೋವು ಎಲ್ಲಾ ಮರೆವಿಗೆ
ಜೋ... ಜೋ.. ಜೋ.. ಜೋ... ಜೋ.. ಜೋ..
ಹೂ .. ಹೂ .. ಹೂ .. ಹೂ .. ಹೂ .. ಹೂ ..
-------------------------------------------------------------------------------------------------------------------------
ಮನಶ್ಯಾಂತಿ (೧೯೬೯) - ಎಲ್ಲರೂ ಸೇರಿ ಒಂದಾಗಿ ಅಹ್ ಜೀವನ ಗೀತೆಯ ಹಾಡೋಣ
ಸಂಗೀತ : ಎ .ಎ.ರಾಜ, ಸಾಹಿತ್ಯ : ಗೀತಪ್ರಿಯ ಗಾಯನ : ಕೋರಸ್, ಪಿ.ಬಿ.ಶ್ರೀನಿವಾಸ
ಗಂಡು : ಓಓಓಓಓಓಓ... ಎಲ್ಲರೂ ಸೇರಿ ಒಂದಾಗಿ...
ಎಲ್ಲರೂ ಸೇರಿ ಒಂದಾಗಿ ಅಹ್ ಜೀವನ ಗೀತೆಯ ಹಾಡೋಣ ಸ್ವರ್ಗಕೇ ಏಣಿಯ ಹಾಕೋಣ
ಕೋರಸ್ : ಸ್ವರ್ಗಕೇ ಏಣಿಯ ಹಾಕೋಣ
ಎಲ್ಲರೂ ಸೇರಿ ಒಂದಾಗಿ ಅಹ್ ಜೀವನ ಗೀತೆಯ ಹಾಡೋಣ ಸ್ವರ್ಗಕೇ ಏಣಿಯ ಹಾಕೋಣ
ಅಹ್ ಸ್ವರ್ಗಕೇ ಏಣಿಯ ಹಾಕೋಣ... ಎಲ್ಲರೂ ಸೇರಿ ಒಂದಾಗಿ..
ಗಂಡು : ಪ್ರೀತಿಯಿಂದಲೇ ನಾವೆಲ್ಲಾ ಹೊಸ ಬಾಳಿನ ರೇಖೆಯ ಪಡೆಯೋಣ
ಅನ್ನದ ಕೂಗನು ಅಳಿಸೋಣ.. ಆಆಆ... ಅನ್ಯರ ಹಂಗನು ತಡೆಯೋಣ...
ಎಲ್ಲರು : ಅನ್ಯರ ಹಂಗನು ತಡೆಯೋಣ...
ಎಲ್ಲರೂ ಸೇರಿ ಒಂದಾಗಿ ಅಹ್ ಜೀವನ ಗೀತೆಯ ಹಾಡೋಣ ಸ್ವರ್ಗಕೇ ಏಣಿಯ ಹಾಕೋಣ
ಅಹ್ ಸ್ವರ್ಗಕೇ ಏಣಿಯ ಹಾಕೋಣ... ಎಲ್ಲರೂ ಸೇರಿ ಒಂದಾಗಿ..
ಗಂಡು : ಚಿಂತೆಯಲ್ಲಿದ್ದರೇ ಅನನ್ಯ ಭಕ್ತಿ... ದುಡಿಯುವ ಜನಕೆ ದೇಶದ ಆಸ್ತಿ
ಧೃಡ ನಿರ್ಧಾರವೇ ನಮ್ಮಯ ಶಕ್ತಿ.. ಅದರಿಂದಲೇ ಬದುಕುವ ನಿತ್ಯ ಮುಕ್ತಿ
ಒಬ್ಬನು ಇಲ್ಲಿ ಎಲ್ಲರಿಗಾಗಿ ಎಲ್ಲರೂ ಎಂದೂ ಒಬ್ಬನಿಗಾಗಿ
ಎನ್ನುತ ನಾವೂ ಒಮ್ಮತದಿಂದ ಒಂದೇ ಗುರಿಯನು ಸೇರೋಣ...
ಹರಿದು ಹಂಚದೇ ಭೂಮಿಯನು ಒಂದಾಗಿ ನಾವೂ ದುಡಿಯೋಣ
ಎಲ್ಲರು : ಎಲ್ಲರೂ ಸೇರಿ ಒಂದಾಗಿ ಅಹ್ ಜೀವನ ಗೀತೆಯ ಹಾಡೋಣ ಸ್ವರ್ಗಕೇ ಏಣಿಯ ಹಾಕೋಣ
ಅಹ್ ಸ್ವರ್ಗಕೇ ಏಣಿಯ ಹಾಕೋಣ... ಎಲ್ಲರೂ ಸೇರಿ ಒಂದಾಗಿ..
ಗಂಡು : ಭೂಮಿಗೇ ಯಾರೂ ಸ್ವಾಮಿಗಳಲ್ಲಾ.... ಎಲ್ಲರೂ ಭೂಮಿಯ ಸೇವಕರೂ ..
ದೊರೆಗಳು ಆಳುವ ಕಾಲವಿದಲ್ಲಾ .... ಪ್ರಜೆಗಳೇ ರಾಜ್ಯದ ಚಾಲಕರೂ ...
ಕೋರಸ್ : ಪ್ರಜೆಗಳೇ ರಾಜ್ಯದ ಚಾಲಕರೂ ...
ಗಂಡು : ಗಾಳಿ .. ನೀರೂ .. ಭೂಮಿ.. ಗಗನ ಒಂದೇ ವ್ಯಕ್ತಿಯ ಸ್ವತ್ತಲ್ಲಾ...
ಒಂದೇ ವ್ಯಕ್ತಿಯ ಸಮಸ್ತ ಶಕ್ತಿ.. ಸಮಸ್ತ ದೇಶಕೂ ಎನ್ನೋಣ..
ಸಂಘ ಶಕ್ತಿಯಲೀ ನಂಬಿಕೆ ಇಟ್ಟೂ ಸುಖ ಸಮೃಧಿಯ ಕಾಣೋಣ
ಕೋರಸ್ : ಸುಖ ಸಮೃಧಿಯ ಕಾಣೋಣ
ಎಲ್ಲರು : ಎಲ್ಲರೂ ಸೇರಿ ಒಂದಾಗಿ ಅಹ್ ಜೀವನ ಗೀತೆಯ ಹಾಡೋಣ ಸ್ವರ್ಗಕೇ ಏಣಿಯ ಹಾಕೋಣ
ಅಹ್ ಸ್ವರ್ಗಕೇ ಏಣಿಯ ಹಾಕೋಣ... ಎಲ್ಲರೂ ಸೇರಿ ಒಂದಾಗಿ..
ಎಲ್ಲರೂ ಸೇರಿ ಒಂದಾಗಿ ಅಹ್ ಜೀವನ ಗೀತೆಯ ಹಾಡೋಣ ಸ್ವರ್ಗಕೇ ಏಣಿಯ ಹಾಕೋಣ
ಅಹ್ ಸ್ವರ್ಗಕೇ ಏಣಿಯ ಹಾಕೋಣ... ಎಲ್ಲರೂ ಸೇರಿ ಒಂದಾಗಿ..
-------------------------------------------------------------------------------------------------------------------------
ಮನಶ್ಯಾಂತಿ (೧೯೬೯) - ಪುಟ್ನರಸಿ ಬಾರೇ ಪಟ್ಟಣಕ್ಕೇ ... ದುಡ್ಡಿನ ಮೂಟೆ ಕಟ್ಟೋಕೇ ...
ಸಂಗೀತ : ಎ .ಎ.ರಾಜ, ಸಾಹಿತ್ಯ : ಗೀತಪ್ರಿಯ ಗಾಯನ : ಎಲ್.ಆರ್.ಈಶ್ವರಿ, ಪಿ.ಬಿ.ಶ್ರೀನಿವಾಸ
ಗಂಡು : ಪುಟ್ಟನರಸಿ ಬಾರೇ ... ಪಟ್ಟಣಕ್ಕೆ ದುಡ್ಡಿನ ಮೂಟೆ ಕಟ್ಟೋಕೇ ..
ಅಹ್ ದುಡ್ಡಿನ ಮೂಟೆ ಕಟ್ಟೋಕೇ ಬಾರೇ ಒಟ್ಟಾಗಿ ಆಗಿ ನೆಲೆಸೋಕೇ ..
ಪುಟ್ಟನರಸಿ ಬಾರೇ ... ಪಟ್ಟಣಕ್ಕೆ.... ಏಏಏಏಏ.. ಹೇ
ಹೆಣ್ಣು : ಹಿಂಗೆಲ್ಲಾ ಆಡಬ್ಯಾಡ ಸರಿ ಯೆಂಕಾ.. ಹಳ್ಳಿಯ ಬಿಟ್ಟಹೋದ್ರೇ ಬರೀ ಸಂಕಟ
ಹಳ್ಳಿಯ ಬಿಟ್ಟಹೋದ್ರೇ ಬರೀ ಸಂಕಟವಂತೇ ನೀವಾಗಿ ಇರಲೀ ಹೂವಂಗೆ ..
ಹಿಂಗೆಲ್ಲಾ ಆಡಬ್ಯಾಡ ಸರಿ ಯೆಂಕಾ.. ಆಆಆ... ಆಆಆ...
ಗಂಡು : ಪಟ್ಟಣ್ಣಕ್ಕೇ ಹೋಗಿ ನನ್ನ ಚಿನ್ನಾ... ಒಟ್ಟಾಗಿ ಶೋಕಿ ಮಾಡೋಣ
ನೈಸಾಗೀ ... ಆಹ್ ನೈಸಾಗೀ ಡ್ರೆಸ್ ಮಾಡ್ಕೊಂಡು ಅಲ್ಲಿನ ಗಮ್ಮತ್ತೂ ನೋಡೋಣ
ಹೆಣ್ಣು : ಒಣಕಿನ ಬಾಳು ಹಳಸಂತೇ ಅಲ್ಲೀ .. ಒಣಕಿನ ಬಾಳೂ ಪೋಳ್ಳಂತೆ
ನಿಜವಾದ ಬಣ್ಣ ಕಾಣೋಲ್ಲ ಅಲ್ಲೀ .. ಬಳಕೊಂಡ ಬಣ್ಣ ಕಾಣೋದು
ಗಂಡು : ಪುಟ್ಟನರಸಿ ಬಾರೇ ... ಪಟ್ಟಣಕ್ಕೆ ..... ಹೇಹೇಹೇಹೇ ...
ಗಂಡು : ಪಟ್ಟಂದ ಆನಂದ ಕೇಳ್ವೆ ನೀ ಹೋಟೆಲ್ ಸಿನಿಮಾ ಅಲೈತೆ ...
ಎಲ್ಲಾದ್ರೂ ಕೆಲಸಾ ಗಿಟ್ಟತೈತೆ .. ವಾರ್ ವಾರ್ ಸಂಬಳ ಸಿಗತೈತೇ ...
ಹೆಣ್ಣು : ನಮ್ಮ ಮಾನ ನಿಮ್ಮತ್ ಪಡಿವಾರ ಮಲಗೋಕೆ ಫುಟಪಾತ್ ಗತಿಯಂತೇ
ಎಲ್ಲೆಲ್ಲೋ ಬೀಳ್ತಾ ನೀರಿಗೂ ಗೂತಾ ಒಳ್ಳೆಯ ಗಾಳಿ ಸಿಗದಂತೇ ..
ಹಿಂಗೆಲ್ಲಾ ಆಡಬ್ಯಾಡ ಸರಿ ಯೆಂಕಾ.. ಆಆಆ... ಆಆಆ...
ಹೆಣ್ಣು : ಮೊದಲನೇ ಯೋಚನೇ ಮಾಡೋದೂ ಸೇದು ಕುಡಿತ ಕಲ್ತಿಯಾ
ಅವರಿವರ ಸಹವಾಸ ಮಾಡಿ ಸಾಲ ಸೋಲ ಮಾಡ್ತಿಯಾ
ಕೆಟ್ಟಚಾಳಿ ಕಲಿತು ನೀ ಅಲ್ಲಿ ಪೊಲೀಸು ಕೈಗೇ ಸಿಕ್ತಿಯಾ
ಗಂಡು : ನಿನ್ನ ಮಾತು ನಿಜವೇ ಪುಟ್ನಂಜಿ ಮೊದಲನೇ ಕಲಿತೇ ಕಿರುಬುದ್ದಿ
ಕಂಡೋರ್ನ ಪಟ್ಟಣ ಸೇರಿ ಬಿಟ್ರೇ ಹೊಟ್ಟೆ ಮೇಲೆಲ್ಲಾ ತಣ್ಣೀರು ಬಟ್ಟೇ
ಹಳ್ಳಿಲೇ ಸಂತೋಷ ಯಾವತ್ತೂ ಇಲ್ಲದಿದ್ರೇ ಗಂಜಿ ಒಪ್ಪತ್ತೂ ..
ಇಬ್ಬರು : ಪಟ್ಟಣದ ಬಾಳು ತಿಳಿದಿಲ್ಲಾ .. ಹಳ್ಳಿಯೇ ನಮಗೇ ಸೂರಪ್ಪಾ ..
ಹಳ್ಳಿಯೇ ನಮಗೇ ಸಂತೋಷವಂತೇ ನೀ ಹೊತ್ತಗಾಗಿ ಕುಣಿಯೋಣ
-------------------------------------------------------------------------------------------------------------------------
ಮನಶ್ಯಾಂತಿ (೧೯೬೯) - ಹಳ್ಳಿಯಿಂದ ಎಳೆ ತಂದು ಪಟ್ಟಣದಿ ಕೆಡವಿಹ
ಸಂಗೀತ : ಎ .ಎ.ರಾಜ, ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಶ್ರೀನಿವಾಸ
ಹಳ್ಳಿಯಿಂದ ಎಳೆತಂದೂ ಪಟ್ಟಣವಿ ಕೆಡವಿದ ಘನಕಾರ್ಯ ಮೆಚ್ಚಿ ನಾ ಕೊಡುವೆನೊಂದು ಒಂದು ಕೊಡುವೇ ...
(ಆ.. ಅಹ್ಹಹ್ಹಹ್ಹಾ.. ಆಆಆ.. )
ಹಾಲಂಥ ಸಂಸಾರದಲೀ ಹುಳಿಯ ಹಿಂಡಿದ ಪುಣ್ಯ ಕಾರ್ಯಕೆ ನಿನಗೇ ಇನ್ನೊಂದೂ .. (ಅಯ್ಯೋ ..)
ಕಬ್ಬಿಣ ಪೆಟ್ಟಿಗೆಯ ಹಣವನ್ನು ದೋಚಿದ ಜಾಣತನದಿಗ ತಂದು (ಅಯ್ಯೋ) ಮತ್ತೇ ಒಂದೂ .. ತಗೋ.. ತಗೋ
(ಅಯ್ಯೋ .. ಅಪ್ಪ )
ವ್ಯಾಪಾರ ಗೀಪಾರವೆಂದೂ ಹುಚ್ಚೆಬ್ಬಿಸಿ ಹಣ ಕೊಟ್ಟು ಕೆಡಿಸಿದಕ್ಕೇ.... ಜೊತೆಗೆ ಒಂದೂ... (ಅಯ್ಯೋ... ಓ.. ಅಹ್ಹಹ್ಹ )
ರಮಣಿ ನಾರೀಮಣಿ ನಾಗವೇಣಿ ಚಿರವಾಣಿ ಘಟವಾಣಿ ನಿನ್ನ ಪತಿಯಾದ ಪಾಪಕೇ... ಏಏಏಏಏ
ಒಂದೂ .. (ಅಯ್ಯೋ..) ಎರಡೂ .. (ಆಆಆ) ಮೂರೂ (ಅಯ್ಯಯ್ಯೋ ) ಹ್ಹಹ್ಹಹ್ಹಹ್ಹಹ್ಹ...
-------------------------------------------------------------------------------------------------------------------------
ಮನಶ್ಯಾಂತಿ (೧೯೬೯) - ಹೆಣ್ಣನದೂ ಹೂ ಮನಸು ಕಾಣುತಿದೆ ನಿನ್ನ ಕನಸು
ಸಂಗೀತ : ಎ .ಎ.ರಾಜ, ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ
ಹೆಣ್ಣು : ಹೆಣ್ಣಿನದೂ ಹೂ ಮನಸೂ ಕಾಣುತಿದೆ ನಿನ್ನ ಕನಸೂ ಕೊಡುವೇ ಬಾ ಇಲ್ಲಿಗೆ ಆಹಾ.. ಅಹ್ಹಹ್ಹಹ್ಹ ...ಆಆಆ
ಹೆಣ್ಣಿನದೂ ಹೂ ಮನಸೂ.. ಹೂಂ ಕಾಣುತಿದೆ ನಿನ್ನ ಕನಸೂ ಹೂಂ ಹೂಂ .. ಕೊಡುವೇ ಬಾ ಇಲ್ಲಿಗೆ ಆಹಾಹ್ಹಹ್ಹ ...
ಗಂಡು : ಗಂಡಿನದೂ ಹೂ ಮನಸೂ ಕಾಣುತಿದೆ ನಿನ್ನ ಕನಸೂ ಕೊಡುವೇ ಬಾ ಸೊಗಸು
ಗಂಡಿನದೂ ಹೂ ಮನಸೂ ಕಾಣುತಿದೆ ನಿನ್ನ ಕನಸೂ ಕೊಡುವೇ ಬಾ ಸೊಗಸು
ಹೆಣ್ಣು : ಛೀ..ಛೀ..ಛೀ.. ಹೆಣ್ಣಿನದೂ ಹೂ ಮನಸೂ ಕಾಣುತಿದೆ ನಿನ್ನ ಕನಸೂ ಕೊಡುವೇ ಬಾ ಇಲ್ಲಿಗೆ ಆಹಾಹ್ಹಹ್ಹ ...ಹೆಣ್ಣು : ಕಮಲವ ಮುದ್ದಿಸು ಹೂವನು ಅರಳಿಸು ಜೇನೂ ಸೇರಿಸೂ ಆಸೆಯ ತೀರಿಸೂ
ಕಮಲವ ಮುದ್ದಿಸು (ಆಹ್ ) ಹೂವನು ಅರಳಿಸು (ಆಹ್ ) ಜೇನೂ ಸೇರಿಸೂ (ಓಹೋ) ಆಸೆಯ ತೀರಿಸೂ
ಗಂಡು : ಅಹ್ಹಹ್ಹಹ.. ಬಲ್ಲೆ ನಾನು ಓ ನಲ್ಲೆ ಅದಕ್ಕಾಗಿ ಬಂದೆ ನಿಂದೇ ಬಿಟ್ಟು ನಿನ್ನ ಹೋಗದಂತೇ ಬಾ ಚಂಚಲೇ
ಹೊಯ್ ಬಲ್ಲೆ ನಾನು ಓ ನಲ್ಲೆ ಅದಕ್ಕಾಗಿ ಬಂದೆ ನಿಂದೇ ಬಿಟ್ಟು ನಿನ್ನ ಹೋಗದಂತೇ ಬಾ ಚಂಚಲೇ
ಹೆಣ್ಣು : ಛೀ..ಛೀ..ಛೀ.. ಹೆಣ್ಣಿನದೂ ಹೂ ಮನಸೂ ಕಾಣುತಿದೆ ನಿನ್ನ ಕನಸೂ ಕೊಡುವೇ ಬಾ ಇಲ್ಲಿಗೆ ಆಹಾಹ್ಹಹ್ಹ ...
ಹೆಣ್ಣು : ಮಾದೆನಾ ಹೂವಿನ(ಆ ) ಕಾಣದ ನೋವಿನ ತಲ್ಲಣ ತಾಳೆನಾ ನಿನ್ನದೇ ಕಲ್ಪನಾ
ಮಾದೆನಾ ಹೂವಿನ(ಆಹಾ) ಕಾಣದ ನೋವಿನ ತಲ್ಲಣ ತಾಳೆನಾ ನಿನ್ನದೇ ಕಲ್ಪನಾ
ಗಂಡು : ಅಹ್ಹಹ್ಹಹ್ಹಹ್ಹ.. ನಿಲ್ಲಾಲಾರೆ ಓ ನಲ್ಲೇ ನಿನ್ನ ಕಂಡ ಮೇಲಿಲ್ಲೇ ಹತ್ತಿರಕೇ ಬಾ ಇಲ್ಲೇ ಓ ಚಂಚಲೇ ..
ಹೊಯ್ ನಿಲ್ಲಾಲಾರೆ ಓ ನಲ್ಲೇ ನಿನ್ನ ಕಂಡ ಮೇಲಿಲ್ಲೇ ಹತ್ತಿರಕೇ ಬಾ ಇಲ್ಲೇ ಓ ಚಂಚಲೇ ..
ಹೆಣ್ಣು : ಛೀ..ಛೀ..ಛೀ.. ಹೆಣ್ಣಿನದೂ ಹೂ ಮನಸೂ (ಹೂ ಮನಸೂ ) ಕಾಣುತಿದೆ ನಿನ್ನ ಕನಸೂ (ಕನಸು)
ಕೊಡುವೇ ಬಾ ಈ ಸೊಬಗೂ ಆಹಾಹ್ಹಹ್ಹ ... (ಆಹಾಹ್ಹಹ್ಹ )
------------------------------------------------------------------------------------------------------------
ಮನಶ್ಯಾಂತಿ (೧೯೬೯) - ಮಂದಹಾಸದಲ್ಲಿ ಮೋಹನ ನನ್ನ ನೀ ಅಪಹರಿಸಿದೆಯಾ.
ಸಂಗೀತ : ಎ .ಎ.ರಾಜ, ಸಾಹಿತ್ಯ : ಚಿ.ಉದಯಶಂಕರ್, ಗಾಯನ : ಎಸ್.ಜಾನಕಿ
ಮಂದಹಾಸದಲ್ಲಿ ಮೋಹನ ನನ್ನ ನೀ ಅಪಹರಿಸಿದೆಯಾ.. ಪ್ರಿಯಾ.. ತಲ್ಲಣಗೊಳಿಸಿದೆಯಾ..
ಚೆಲುವೆಯ ಸ್ನೇಹ ಬಯಸಿದೆಯಾ..
ಒಲವಿನ ಕಾಣಿಕೆ ನೀಡುವೆಯಾ..ಅ.
ಮೋಹವ ಬರಿಸಿದೆ ಆಸೆಯ ಕರಿಸಿದೆ
ಮೋಹವ ಬರಿಸಿದೆ ಆಸೆಯ ಕರಿಸಿದೆ
ಬಲು ರಸಿಕನು ಇನಿಯಾ..ಅ..
ಭಲೆ ರಸಿಕನು ಇನಿಯ..
ನೀನು ನನ್ನ ಮನ ಅಪಹರಿಸಿದೆಯಾ.. ಪ್ರಿಯಾ.. ತಲ್ಲಣಗೊಳಿಸಿದೆಯಾ..
ಮಂದಹಾಸದಲ್ಲಿ ಮೋಹನ ನನ್ನ ನೀ ಅಪಹರಿಸಿದೆಯಾ.. ಪ್ರಿಯಾ..ಅ.. ತಲ್ಲಣಗೊಳಿಸಿದೆಯಾ..
ತೋಳಲ್ಲಿ ನನ್ನ ಬಳಸುವೆಯಾ...
ಕಾಣದ ಸುಖವ ತೋರುವೆಯಾ...ಅ..
ಥಾಮಸ ತಾಳೆನು ಸನಿಹಕ್ಕೆ ಬಾ ಇನ್ನೂ
ಥಾಮಸ ತಾಳೆನು ಸನಿಹಕ್ಕೆ ಬಾ ಇನ್ನು
ಬಲು ರಸಿಕನು ಇನಿಯಾ..ಅ..
ಭಲೆ ರಸಿಕನು ಇನಿಯ..
ನೀನು ನನ್ನ ಮನ ಅಪಹರಿಸಿದೆಯಾ.. ಪ್ರಿಯಾ.. ತಲ್ಲಣಗೊಳಿಸಿದೆಯಾ..
ಮಂದಹಾಸದಲ್ಲಿ ಮೋಹನ ನನ್ನ ನೀ ಅಪಹರಿಸಿದೆಯಾ.. ಪ್ರಿಯಾ..ಅ.. ತಲ್ಲಣಗೊಳಿಸಿದೆಯಾ..ಅ.. ಅ..
--------------------------------------------------------------------

---------
No comments:
Post a Comment