1117. ಮನೆಗೇ ಬಂದ ಮಹಾಲಕ್ಷ್ಮಿ (೧೯೮೩)

ಮನೆಗೇ ಬಂದ ಮಹಾಲಕ್ಷ್ಮಿ ಚಿತ್ರದ ಹಾಡುಗಳು
  1. ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
  2. ರಾತ್ರಿಯ ಹೊತ್ತು ನೂರಾಸೆಯ ಹೊತ್ತು ಕಣ್ಣಲ್ಲಿ ಮತ್ತು ಕುಣಿತದ ಗತ್ತು
  3. ಮಲ್ಲಿಗೆ ಮೊಗ್ಗೆ ಮುತ್ತಿನ ಚೆಂಡೆ ಹೇಳೇ ಬಂಗಾರಿ
  4. ಯುಗ ಯುಗ ಅಳಿದರೂ ಮುಗಿಯದೆ ಎಂದೂ
  5. ಮುಂಜಾನೆ ಲಕುಮಿ ಮನದಲ್ಲಿ ನೆನೆವೇ
ಮನೆಗೇ ಬಂದ ಮಹಾಲಕ್ಷ್ಮಿ (೧೯೮೩) - ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಪಿ.ಬಿ.

ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
ಕದ್ದು ಕದ್ದು ತನ್ನೊಂನೋಡ್ಯಾಳೆ ಯವ್ವೀ ನಾ ಕೆಟ್ಟೇನೇ
ಏನೋ ನೆನೆದು ಮತ್ತೇ ನಾಚ್ಯಾಳೇ ಆದ್ರೂ ಹಿಗ್ಗಿ ಸುಗ್ಗಿ ಅಂದಾಳೇ
ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
ಕದ್ದು ಕದ್ದು ತನ್ನೊಂನೋಡ್ಯಾಳೆ ಯವ್ವೀ ನಾ ಕೆಟ್ಟೇನೇ
ಏನೋ ನೆನೆದು ಮತ್ತೇ ನಾಚ್ಯಾಳೇ ಆದ್ರೂ ಹಿಗ್ಗಿ ಸುಗ್ಗಿ ಅಂದಾಳೇ

ಲೋಕನೆಲ್ಲಾ ಮರತೇ ಏನೇ ಗಲ್ಲದ ಮೇಲೆ ಗುರುತು ಏನೇ ಮೆಲ್ಲಗೇ ಹಿಂಗೇ ಕೇಳಿದ ಕೂಡ್ಲೆನೇ
ಅಯ್ಯವಿಯವ್ವಿ ಗಲ್ಲ ನಲ್ಲನ ಬೆಲ್ಲ ಅಂದಾಳೇ
ನನಗಾಗಿ ನೀನು ಹಾಲಲ್ಲಿ ಜೇನು ಲೋಕಾದಾಗೆ ಹೆಚ್ಚಗೇ ಬೇಕು ಇನ್ನೇನೂ ವಾರೆಯಗಣ್ಣನ ನೇರಾ ಮಾಡಿ
ಮಿಡಿತಾ ನೋಡು ಹಿಡಿದು ನಾಡಿ ಅಂತ ಹತ್ರ ಹತ್ರ ಹೋದೇಟಿಗೆ
ಅಯ್ಯೋ ನಾ ಒಲ್ಲೇ ಅಂತ ಯಾಕೋ ಬೆಚ್ಚಿ ಬಿದ್ದಾಳೇ
ಒಳಗುಟ್ಟು ಎಲ್ಲಾ ರಟ್ಟಾದ ಮೇಲೆ ಗುಟ್ಟೇಲ್ಲಿ ಐತೇ ಒಗಟಾದ ಮೇಲೆ ಇಬ್ಬರು ಇನ್ನೂ ಒಂದೇ
ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
ಕದ್ದು ಕದ್ದು ತನ್ನೊಂನೋಡ್ಯಾಳೆ ಯವ್ವೀ ನಾ ಕೆಟ್ಟೇನೇ
ಏನೋ ನೆನೆದು ಮತ್ತೇ ನಾಚ್ಯಾಳೇ ಆದ್ರೂ ಹಿಗ್ಗಿ ಸುಗ್ಗಿ ಅಂದಾಳೇ
--------------------------------------------------------------------------------------------------------------------------

ಮನೆಗೇ ಬಂದ ಮಹಾಲಕ್ಷ್ಮಿ (೧೯೮೩) - ರಾತ್ರಿಯ ಹೊತ್ತು ನೂರಾಸೆಯ ಹೊತ್ತು ಕಣ್ಣಲ್ಲಿ ಮತ್ತು ಕುಣಿತದ ಗತ್ತು
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್,.ಜಯಗೋಪಾಲ ಗಾಯನ : ಎಸ್.ಜಾನಕೀ

ರಾತ್ರಿಯ ಹೊತ್ತು ನೂರಾಸೆಯ ಹೊತ್ತು ಕಣ್ಣಲ್ಲಿ ಮತ್ತು ಕುಣಿತದ ಗತ್ತು ಹೆಣ್ಣಿನ ಜೊತೆ ಗಮ್ಮತ್ತೂ
ರಾತ್ರಿಯ ಹೊತ್ತು ನೂರಾಸೆಯ ಹೊತ್ತು ಕಣ್ಣಲ್ಲಿ ಮತ್ತು ಕುಣಿತದ ಗತ್ತು ಹೆಣ್ಣಿನ ಜೊತೆ ಗಮ್ಮತ್ತೂ
ಧೀಮ್ ತನಕಧೀ ತನಕಧೀಮ ಧೀಮ್ ತನಕಾಧೀಮ್

ಸೊಂಟದ ವಯ್ಯಾರ ಕುಲುಕಿ ಬಳುಕಿ ಕರೆದಾಗ... ಆಆಆ..
ಮೂಗಿನ ಮೂಗುತಿ ಥಳಕ್ಕೂ ಥಳಕ್ಕೂ ಹೊಳೆದಾಗ ...
ಸೊಂಟದ ವಯ್ಯಾರ ಕುಲುಕಿ ಬಳುಕಿ ಕರೆದಾಗ ಮೂಗಿನ ಮೂಗುತಿ ಥಳಕ್ಕೂ ಥಳಕ್ಕೂ ಹೊಳೆದಾಗ
ತುಟಿ ಕೆಂಪಗಾಯ್ತು ಈ ಕಿರು ಗಾಯವಾಯ್ತು
ತುಟಿ ಕೆಂಪಗಾಯ್ತು ಈ ಕಿರು ಗಾಯವಾಯ್ತು ಇದು ಹೇಗಾಯ್ತೋ ಎಂತಾಯ್ತೋ ನಂಗೇನೂ ಗೊತ್ತು
ಧೀಮ್ ತನಕಧೀ ತನಕಧೀಮ ಧೀಮ್ ತನಕಾಧೀಮ್
ರಾತ್ರಿಯ ಹೊತ್ತು ನೂರಾಸೆಯ ಹೊತ್ತು ಕಣ್ಣಲ್ಲಿ ಮತ್ತು ಕುಣಿತದ ಗತ್ತು ಹೆಣ್ಣಿನ ಜೊತೆ ಗಮ್ಮತ್ತೂ

ಯೌವ್ವನ ಹೊರೆಯಾಗಿ ಅಬ್ಬಬ್ಬಾ ಅಬ್ಬಬ್ಬಾ ಎಂದಾಗ ಅಬ್ಬಬ್ಬಾ 
ಆಯಾಸ ನೀಗೋಕೆ ಹತ್ತಿರ ಬಂದಾಗ 
ಯೌವ್ವನ ಹೊರೆಯಾಗಿ ಆಯಾಸ ನೀಗೋಕೆ ಹತ್ತಿರ ಬಂದಾಗ 
ಏನಾಯ್ತು ಎಂದು ನಾ ತಿಳಿಯೋಕೆ ಮುಂದು 
ಏನಾಯ್ತು ಎಂದು ನಾ ತಿಳಿಯೋಕೆ ಮುಂದು ಮಿಂಚಿನಂತೇ ನೀ ಇಂದು ಬಿಗಿದಪ್ಪು ಬಂದು 
ಧೀಮ್ ತನಕಧೀ ತನಕಧೀಮ ಧೀಮ್ ತನಕಾಧೀಮ್ 
ರಾತ್ರಿಯ ಹೊತ್ತು ನೂರಾಸೆಯ ಹೊತ್ತು ಕಣ್ಣಲ್ಲಿ ಮತ್ತು ಕುಣಿತದ ಗತ್ತು ಹೆಣ್ಣಿನ ಜೊತೆ ಗಮ್ಮತ್ತೂ
ರಾತ್ರಿಯ ಹೊತ್ತು ನೂರಾಸೆಯ ಹೊತ್ತು ಕಣ್ಣಲ್ಲಿ ಮತ್ತು ಕುಣಿತದ ಗತ್ತು ಹೆಣ್ಣಿನ ಜೊತೆ ಗಮ್ಮತ್ತೂ
ಧೀಮ್ ತನಕಧೀ ತನಕಧೀಮ ಧೀಮ್ ತನಕಾಧೀಮ್
--------------------------------------------------------------------------------------------------------------------------

ಮನೆಗೇ ಬಂದ ಮಹಾಲಕ್ಷ್ಮಿ (೧೯೮೩) - ಮಲ್ಲಿಗೆ ಮೊಗ್ಗೆ ಮುತ್ತಿನ ಚೆಂಡೆ ಹೇಳೇ ಬಂಗಾರಿ
ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ, ಕೋರಸ್
.

ಮೊಗ್ಗೆ ಮುತ್ತಿನ ಚೆಂಡೇ ಹೇಳೇ ಬಂಗಾರಿ ಈ ಮುದ್ದು ಮುಖ ನಾಚಿತೆ ಲಜ್ಜೇ ತೋರಿ
ಮೊದಲನೇ ರಾತ್ರಿಯ ಆಸೆ ಕಣ್ಣಲ್ಲಿ ಮಾತೇ ಇಲ್ಲ ಮೌನ ಎಲ್ಲ ಏಕೋ ಹೆಣ್ಣಲ್ಲಿ
ಮಾತೇ ಇಲ್ಲ ಮೌನ ಎಲ್ಲ ಏಕೋ ಹೆಣ್ಣಲ್ಲಿ

ಕುಂಕುಮ ಹಣೆಗಿರಿಸಿ ಮುಡಿಯಲ್ಲಿ ಹೂ ಮೂಡಿಸಿ ಕೈಗಳಿಗೆ ಬಳೆ ತೊಡಿಸಿ
ಕೊರಳಲ್ಲಿ ಸರ ಧರಿಸಿ ವಧು ನಿಂತಾಗ ದೃಷ್ಟಿಯೂ ತಗಲಿತು ಬೊಟ್ಟಿಟ್ಟು ಕರೇತಾರೇ
ಹೂಮಂಚದ  ಸೊಂಪಿರಲೂ ಮಧುಚಂದ್ರನ ತಂಪಿರಲು ತಂಗಾಳಿಯ ಸುಖವಿರಲೂ
ಕೆನೆಹಾಲಿನ ಘಮವಿರಲೂ ಸಖಿ ಬಂದಾಗ ಒಡಲೆಲ್ಲಾ ನವಿರೆದ್ದು   ನೂರಾಸೆ ತಂದಾಗ
--------------------------------------------------------------------------------------------------------------------------

ಮನೆಗೇ ಬಂದ ಮಹಾಲಕ್ಷ್ಮಿ (೧೯೮೩) - ಯುಗ ಯುಗ ಅಳಿದರೂ ಮುಗಿಯದೆ ಎಂದೂ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಪಿ.ಬಿ. ಕೋರಸ್

ಯುಗ ಯುಗ ಅಳಿದರೂ ಮುಗಿಯದೇ ಎಂದೂ ಲೋಕದಿ ಸೀತೆಯ ಶೋಕ ಕಥೆ
ಪ್ರತಿ ಯುಗದಲ್ಲೂ ಪ್ರತಿ ಜನ್ಮದಲ್ಲೂ ಇದುವೇ ಅವಳ ಆಹ್ಹ್.. ಕರ್ಮ ಕಥೆ
ಹೆಣ್ಣಿನ ಬಾಳೇ ಘೋರ ವ್ಯಥೇ

ಕೋಮಲೆಯೇ ನಿನಗೀ ಜಗದಲ್ಲಿ ನೀಡುವರಿಲ್ಲವೇ ರಕ್ಷೆ
ಪ್ರತಿ ಕ್ಷಣವೂ ನಿನ್ನಾ ಬದುಕಲ್ಲಿ ಭೀಕರ ಆಗ್ನಿ ಪರ್ವತ
ಹೇ.. ದೇವ ಈ ನ್ಯಾಯ ಬಯಲಾಗದೇ ಈ ರೀತಿ ಅನ್ಯಾಯ ಕೊನೆಯಾಗದೇ
ಸುಖ ದುಃಖದಲ್ಲೂ ಸಹಚಾರಿಯಾದ ಸತಿಗೆ ಎಂತ  ಧಾರುಣತೇ

ತ್ಯಾಗದಲೀ ನಿನಗೆ ಸಮರಿಲ್ಲ ಎಂದಿದೇ ಆ ಇತಿಹಾಸ
ನೀನಿರದ ಜಗವು ಜಗವಲ್ಲ ಆದರೂ ಈ ವನವಾಸ
ಅಮೃತ ನೀ ಹಂಚಿ ವಿಷ ಕುಡಿಯುವೇ ಮಾನವ ಕಾಯಲು ನೀ ಮಡಿಯುವೇ
ದೋಷವ ಹೊರೆಯ ನಿರ್ದೋಷಿ ಮೇಲೆ ಬದುಕಿರುವಾಗಲೇ ಬಾಳು ಚಿತೆ
ಯುಗ ಯುಗ ಅಳಿದರೂ ಮುಗಿಯದೇ ಎಂದೂ ಲೋಕದಿ ಸೀತೆಯ ಶೋಕ ಕಥೆ
ಪ್ರತಿ ಯುಗದಲ್ಲೂ ಪ್ರತಿ ಜನ್ಮದಲ್ಲೂ ಇದುವೇ ಅವಳ ಆಹ್ಹ್.. ಕರ್ಮ ಕಥೆ
ಹೆಣ್ಣಿನ ಬಾಳೇ ಘೋರ ವ್ಯಥೇ 
--------------------------------------------------------------------------------------------------------------------------

ಮನೆಗೇ ಬಂದ ಮಹಾಲಕ್ಷ್ಮಿ (೧೯೮೩) - ಮುಂಜಾನೆ ಲಕುಮಿ ಮನದಲ್ಲಿ ನೆನೆವೇ  (ಶ್ಲೋಕ)
ಸಂಗೀತ : ಸತ್ಯಂ ಸಾಹಿತ್ಯ :ಸಂಪ್ರದಾಯ ಗಾಯನ : ಪಿ.ಸುಶೀಲಾ

ಆಆಆ... ಮುಂಜಾನೆ ಲಕುಮಿ ಮನದಲ್ಲಿ ನೆನೆವೇ
ರಂಗನಾಯಕಿ ಸ್ಮರಸಿ ರಂಗೋಲಿ ಹಾಕುವೇ
ಅಂಗಳದ ಮಲ್ಲಿಗೆಯ ಅಂಬಿಕೆಗೇ ಕೊಡುವೇ
ಶ್ರೀ ತುಳುಸಿಗೇ ಆರತಿಯ ಬೆಳಗಿ ಪೂಜಿಸುವೇ ಆಆಆ...
ತಾಯ ಕರುಣೆಯ ನಮ್ಮ ಮನೆ ಬೆಳಗಬೇಕು
ಈ ಮನೆಯು ಇರಲಮ್ಮಾ ನಿನ್ನ ಗುಡಿಯಾಗಿ
ಮನೆ ಮಂದಿ ನಗೆ ತುಂಬಿ ನಲಿವ ಬನವಾಗಿ
ನಲಿವ ಬನವಾಗಿ ... ನಲಿವ ಬನವಾಗಿ
ಆಆಆ... ಮುಂಜಾನೆ ಲಕುಮಿ ಮನದಲ್ಲಿ ನೆನೆವೇ
ರಂಗನಾಯಕಿ ಸ್ಮರಸಿ ರಂಗೋಲಿ ಹಾಕುವೇ
--------------------------------------------------------------------------------------------------------------------------

No comments:

Post a Comment