1107. ಮತ್ಸರ (೧೯೯೦)

-
ಮತ್ಸರ ಚಿತ್ರದ ಹಾಡುಗಳು 
  1. ಕಲಿಯಾಗಿ ನಡೆದರೇ ಜಯಭೇರಿ ಕೈಸೆರೆ 
  2. ಕೊಳಲು ನೀನಿರೇ ದನಿಯು ನಾನಿರೇ 
  3. ಹಠಮಾಡಿ ಗೆದ್ದರೇ ಸುಖ ಸ್ವರ್ಗ ಈ ಧರೆ 
  4. ಈ ಸಿರಿ ಸುಖ ಶಾಶ್ವತವೇ 
  5. ಮುನ್ನುಗ್ಗಿ ನಡೆದರೇ ಜಯಭೇರಿ ಕೈಸೆರೆ 
  6. ವೇಷ ಹಾಕಿ ಮೀಸೆ ತೀಡಿ ತಿನ್ನೋ ಹಾಗೇ ನನ್ನಾ ನೋಡಿ 
ಮತ್ಸರ (೧೯೯೦) - ಕಲಿಯಾಗಿ ನಡೆದರೇ ಜಯಭೇರಿ ಕೈಸೆರೆ 
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. 

ಕಲಿಯಾಗಿ ನಡೆದರೇ ಜಯಭೇರಿ ಕೈಸೆರೆ ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ

ಸಾಗರದಲೆಗಳು ನಿಲುವೂ ನಮ್ಮಯ ಶೌರ್ಯವೂ ಕರಗದು
ಮೋಡವು ಸೂರ್ಯನ ಮುಚ್ಚದು ನನ್ನಯ ಕಾಂತಿಯ ಕುಂದದು
ಒಡೆದ ದೋಣಿಯ ತೇಲುತ ಸಾಗದು ನೀಡಿದ ವಚನವು ಎಂದಿಗೂ ತಪ್ಪದು
ನನ್ನ ಸಂಕಲ್ಪ ಶಕ್ತಿ ಸಾಧಿಸೆ ಮತ್ಸರ

ಭೂಮಿಯ ತೇಜವು ಅಳಿಯದು ಸಾಹಸಿ ಧೈರ್ಯವು ನಶಿಸದು
ಚಂದ್ರನ ಕಾಂತಿಯ ಸವೆಯದು ನೋಡಿದೆ ಸಾಹಸ ಮತ್ತನು ಕೊಡುವುದು
ಜಿದ್ದಿಗೆ ಪೌರಷ ಕಿಚ್ಚನು ಇಡುವುದು ನನ್ನ ಸಂಕಲ್ಪ ಶಕ್ತಿ ಸಾಧಿಸೆ ಮತ್ಸರ
ಕಲಿಯಾಗಿ ನಡೆದರೇ ಜಯಭೇರಿ ಕೈಸೆರೆ ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ
ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ
--------------------------------------------------------------------------------------------------------------------------

ಮತ್ಸರ (೧೯೯೦) - ಕೊಳಲು ನೀನಿರೇ ದನಿಯು ನಾನಿರೇ 
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಚಿತ್ರಾ

ಇಬ್ಬರು : ಕೊಳಲು ನೀನಿರೇ ದನಿಯು ನಾನೀರೇ ನಮ್ಮೊಲುಮೆ ಆಲಾಪ ರಾಗ ತಾನವೂ
             ಸ್ವರ ಸ್ವರವು ಬೆರೆತಿರಲು ಮಧುರಾ ಗಾನವು
             ಸ್ವರ ಸ್ವರವು ಬೆರೆತಿರಲು ಮಧು ಮಧುರಾ ಗಾನವು

ಹೆಣ್ಣು : ಚೈತ್ರವು ನೀನು ವಸುಧೆಯು ನಾನು ಚೈತ್ರವು ಬರಲು ವಸುಧೆಗೆ ಬೆಡಗು 
ಗಂಡು : ಕಲ್ಪನೆ ನೀನು ವಾತ್ಸವ ನಾನು ಕಲ್ಪನೆ ಇರಲು ಶೃಜನೆಗೆ ಸೊಬಗು 
ಹೆಣ್ಣು : ಹೂವಲ್ಲು ನೀನೇ ನಾರಲ್ಲೂ ನೀನೇ ಹಣ್ಣಲ್ಲೂ ನೀನೇ ಕಣ್ಣಲ್ಲೂ ನೀನೇ 
             ಸ್ವರ ಸ್ವರವು ಬೆರೆತಿರಲು ಮಧು ಮಧುರಾ ಗಾನವು 
             ಕೊಳಲು ನೀನಿರೇ ದನಿಯು ನಾನೀರೇ ನಮ್ಮೊಲುಮೆ ಆಲಾಪ ರಾಗ ತಾನವೂ 

ಗಂಡು : ನೈದಿಲೆ ನೀನೇ ಚಂದ್ರನು ನಾನು  ಚಂದ್ರವು ಮೂಡಲು ಸಂಗಮಕ್ಕಿನ್ನೂ 
ಹೆಣ್ಣು : ಕುಂಚವು ನೀನು ಬಣ್ಣವು ನಾನು ಚೈತ್ರವು ಮೂಡಲು ಸಂಗಮಕ್ಕಿನ್ನೂ 
ಗಂಡು : ಜೀವಕ್ಕೇ ಜೀವ ಭಾವಕ್ಕೆ ಭಾವ ರಾಗಕ್ಕೆ ತಾನಕ್ಕೆ ತಾನ 
             ಸ್ವರ ಸ್ವರವು ಬೆರೆತಿರಲು ಮಧು ಮಧುರಾ ಗಾನವು 
             ಕೊಳಲು ನೀನಿರೇ ದನಿಯು ನಾನೀರೇ ನಮ್ಮೊಲುಮೆ ಆಲಾಪ ರಾಗ ತಾನವೂ 
--------------------------------------------------------------------------------------------------------------------------

ಮತ್ಸರ (೧೯೯೦) - ಹಠ ಮಾಡಿ ಗೆದ್ದರೇ
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ.

ಹಠಮಾರಿ ಗೆದ್ದರೆ ಸುಖ ಸ್ವರ್ಗ ಈ ಧರೆ ವಾದಕ್ಕೆ ವಾದ ಭೇಧಕ್ಕೆ ಬೇಧ
ಪಟ್ಟಿಗೆ ಪಟ್ಟು ಪೆಟ್ಟಿಗೆ ಪೆಟ್ಟು ಬಾಳಿಗೆ ಭಾಗ್ಯ ಬಂದು ಏಳಿಗೆ

ರಾಮನ ಬಾಣಕೆ ರಾವಣ ಗೆಲ್ಲದೇ ಸೋತನು ದಾರುಣ
ಕೃಷ್ಣನ ತಂತ್ರಕೆ ಕೌರವ ಕಂಡನು ರವರವ ನರಕ
ದುಷ್ಟರ ನಾಶಕ್ಕೆ ಖಡ್ಗವ ಝಳಪಿಸಿ ಪಾಪಿಯ ಕೊರಳಿಗೆ ಪಾಶವ ಹಾಕಿಸಿ
ಹೆತ್ತ ತಾಯಿಯ ಆಸೆ ತಿರಿಸೇ ಮತ್ಸರ
ಹಠಮಾರಿ ಗೆದ್ದರೆ ಸುಖ ಸ್ವರ್ಗ ಈ ಧರೆ ವಾದಕ್ಕೆ ವಾದ ಭೇಧಕ್ಕೆ ಬೇಧ
ಪಟ್ಟಿಗೆ ಪಟ್ಟು ಪೆಟ್ಟಿಗೆ ಪೆಟ್ಟು ಬಾಳಿಗೆ ಭಾಗ್ಯ ಬಂದು ಏಳಿಗೆ
--------------------------------------------------------------------------------------------------------------------------

ಮತ್ಸರ (೧೯೯೦) - ಈ ಸಿರಿ ಸುಖ ಶಾಶ್ವತವೇ 
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಚಿತ್ರಾ

ಹೆಣ್ಣು : ಈ ಸಿರಿ ಸುಖ ಶಾಶ್ವತವೇ ಈ ಬಲ ಛಲ ಶಾಶ್ವತವೇ
          ಎಲ್ಲ ಗೆದ್ದೇ ಎಂಬ ಮಾತೇ ಗುಳ್ಳೆ ಗೆದ್ದೇ ಸುಳ್ಳಿನ ಕಂತೆ
          ಅರ್ಧ ರಾತ್ರಿ ಕೊಡೆಯಾ ಹಿಡಿವ ಡೌಲು ನಿನಗೇಕೇ
ಗಂಡು : ಈ ಸಿರಿ ಸುಖ ಹೆಮ್ಮೆಗೇ ಈ ಬಲ ಛಲ ನನ್ನಯದೇ
            ಕಷ್ಟ ಪಟ್ಟು ಬೆವರ ಸುರಿಸಿ ನನ್ನ ಬಾಳ ರೂಪಿಸಿ ತಾನೇ
            ಹಂತ ಹಂತ ಏರಿ ಬಂದ ಹಾದಿ ನನ್ನಯದೇ

ಹೆಣ್ಣು : ನಿನ್ನಂಥ ಬಡಾಯಿ ಇಷ್ಟೆಷ್ಟಾದರಾ
ಗಂಡು : ಆಡಿದ್ದಾ ಮಾಡೋದು ನನ್ನದೇ ಗುಣ
ಹೆಣ್ಣು : ಹಮ್ಮಿಸಿ ಮರೆವರು ಕೊಬ್ಬಿ ಮರೆವರು ಕೆಳಗೆ ಇಳಿಯದೆ ಇವರೇನು
ಗಂಡು : ಈ ನಗೆ ಹಗೆ  ನಾಕನದೇ ಈ ತನುಮನ ನಂಜಿನದೇ
ಹೆಣ್ಣು : ಹಣಬೆ ಹಾಗೆ ಬೆಳೆದವರೇ ಅಷ್ಟೇ ಬೇಗ ಅಳಿದಿಹರಲ್ಲ
          ನಿನ್ನ ಬಾಳು ಹಣಬೆ ಹಾಗೆ ನಾಲ್ಕ ದಿನವೇನೇ
ಗಂಡು : ಈ ಸಿರಿ ಸುಖ ಹೆಮ್ಮೆಗೇ ಈ ಬಲ ಛಲ ನನ್ನಯದೇ
            ಕಷ್ಟ ಪಟ್ಟು ಬೆವರ ಸುರಿಸಿ ನನ್ನ ಬಾಳ ರೂಪಿಸಿ ತಾನೇ
            ಹಂತ ಹಂತ ಏರಿ ಬಂದ ಹಾದಿ ನನ್ನಯದೇ

ಗಂಡು : ಎಳ್ಳಷ್ಟೂ ನೀ ಅರಿಯೇ ನನ್ನೆಲ್ಲಾ ತರಾ 
ಹೆಣ್ಣು : ಮಾತಲ್ಲಿ ಮನೆ ಕಟ್ಟಿ ಸಿಕ್ಕೆತೆ ಭಲಾ 
ಗಂಡು : ಮತ್ತೆ ಮತ್ತೆ ನಾ ಜಯಸಿ ಬಂದೆನು ಬೇರೆ ಮಾಹಿತಿ ಬೇಕೇನು 
            ನಾ ನುಡಿ ಹಿಡಿ ಸಿಡಿಸುವೇ  ನಾ ಖಣ ಕಣ ಮಿಡಿಸುವೆ 
            ನನ್ನ ಗುಟ್ಟು ಅರಿತವರಿಲ್ಲ ನನ್ನ ಛಲಕ್ಕೆ ಕೊನೆಯೇ ಇಲ್ಲ 
            ಎದುರಾಳಿಗಳ ಮೆಟ್ಟುವೆ ನಾನು ಮಲ್ಲರಿಗೆ ಮಲ್ಲ 
--------------------------------------------------------------------------------------------------------------------------

ಮತ್ಸರ (೧೯೯೦) - ಏ ಬಂದನೋ ಸ್ವಾಮಿ ಬಂದನೋ 
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಚಿತ್ರಾ, ಕೋರಸ್ 

ಕೋರಸ್ : ಏ ಬಂದನೋ ಸ್ವಾಮಿ ಬಂದನೋ ತಂದನೋ ಬೆಳಕ ತಂದನೋ
                ಈ ತಾಯಿಯ ಮೈ ತುಂಬಿ ಹೊಸ ಬೆಳೆಯನ್ನು ತಂದಾಳೋ
                ಸುಗ್ಗಿಯ ಚೆಂದಾಗಿ ತಂತಾನ ತುಂಬೈತೋ
ಹೆಣ್ಣು : ವೇಷ ಹಾಕಿ ಮೀಸೆ ತೀಡಿ ತಿನ್ನೋ ಹಾಗೆ ನನ್ನ ನೋಡಿ
          ನನ್ನ ಸೆರಗು ಹಿಡಿದು ನೆರಳಿನಂಗೆ ಬಂದೆ ಯಾಕೋ
         ನನ್ನ ಎದೆಯ ಕಲಕಿ ಗಾಳ ಹಾಕಿ ನಿಂತೇ ಯಾಕೋ
ಗಂಡು : ರಾಣಿಯಂತೆ ಕೊಂಕು ಮಾಡಿ ಅರೇ .. ಅಂಕೆ ಮೀರಿ ಬಿಂಕ ತೋರಿ
            ನನ್ನ ಮರಳು ಮಾಡಿ ಆಸೆ ಕೆಣಕಿ ಬಂದೆ ಯಾಕೇ
            ನನ್ನ ಕಾಡಿ ಕಾಡಿ ಹುಚ್ಚು ಹಿಡಿಸಿ ನಿಂತೇ ಯಾಕೆ

ಕೋರಸ್ : ಮುಂಗಾರು ಮಳೆ ಬಂತೋ ಸಿಂಗಾರ ಸಿರಿ ತಂತೋ
               ರೈತಾಪಿ ಜನರೆಲ್ಲಾ ಹಿಗ್ಗಿನ ಹೊಳೆಯಾತೋ ಹೊಯ್..
ಗಂಡು : ಮೀನ ಕಣ್ಣ ಸಿಂಗಾರಿ ಹುಡುಗಿ ತೊಂಡೆ ತುಟಿಯಾ ಬಂಗಾರಿ ಬೆಡಗಿ
            ಅರೇ ಕೀಟ್ಲೆ ಮಾಡೋ ತುಡುಗಿ ನಿನ್ನಾ ರೂಪಾ ಬೆಡಗಿ .. ಹ್ಹಾಂ ..
            ನನ್ನ ಪ್ರಾಯ ಮಿಂಚೈತೇ ನಿನ್ನಾ ಚೆಲುವು ಕರೆದೈತೆ
            ತಂದಾನ ತಂದಾನ ತಂದಾನಾನೋ ತಂದಾನ ತಂದಾನ ತಂದಾನಾನೋ
ಹೆಣ್ಣು : ವೇಷ ಹಾಕಿ ಮೀಸೆ ತೀಡಿ ತಿನ್ನೋ ಹಾಗೆ ನನ್ನ ನೋಡಿ
          ನನ್ನ ಸೆರಗು ಹಿಡಿದು ನೆರಳಿನಂಗೆ ಬಂದೆ ಯಾಕೋ
         ನನ್ನ ಎದೆಯ ಕಲಕಿ ಗಾಳ ಹಾಕಿ ನಿಂತೇ ಯಾಕೋ

ಕೋರಸ್ : ಒಲಿದಾಳ ನಮ್ಮಮ್ಮ ನಮ್ಮೂರ ಮಾರಮ್ಮ
                ಕರೆಸ್ಯಾಳ ನಮ್ಮಮ್ಮ ಬಾ ತಾಯಿಯ ನಮ್ಮಮ್ಮ ಹೊಯ್..
ಹೆಣ್ಣು : ನಿಟ್ಟು ತೋರ ಹಮ್ಮಿರ ಶೂರ ಮನಸಾ ಕದ್ದ ನಮ್ಮೂರ ಧೀರ
          ನಿನ್ನಾ ನಿಲುವು ಸೆಳೆದು ಪ್ರೀತಿ ಪೂರ ಬೆಳೆದು
          ನಿನ್ನ ಸಂಗಾ ಬೇಡೈತೆ ನನ್ನಾ ಆಸೆ ಚಿಗುರೈತೆ
            ತಂದಾನ ತಂದಾನ ತಂದಾನಾನೋ ತಂದಾನ ತಂದಾನ ತಂದಾನಾನೋ
ಗಂಡು : ರಾಣಿಯಂತೆ ಕೊಂಕು ಮಾಡಿ ಅರೇ .. ಅಂಕೆ ಮೀರಿ ಬಿಂಕ ತೋರಿ
            ನನ್ನ ಮರಳು ಮಾಡಿ ಆಸೆ ಕೆಣಕಿ ಬಂದೆ ಯಾಕೇ
            ನನ್ನ ಕಾಡಿ ಕಾಡಿ ಹುಚ್ಚು ಹಿಡಿಸಿ ನಿಂತೇ ಯಾಕೆ
ಹೆಣ್ಣು : ವೇಷ ಹಾಕಿ ಮೀಸೆ ತೀಡಿ ತಿನ್ನೋ ಹಾಗೆ ನನ್ನ ನೋಡಿ
          ನನ್ನ ಸೆರಗು ಹಿಡಿದು ನೆರಳಿನಂಗೆ ಬಂದೆ ಯಾಕೋ
         ನನ್ನ ಎದೆಯ ಕಲಕಿ ಗಾಳ ಹಾಕಿ ನಿಂತೇ ಯಾಕೋ
--------------------------------------------------------------------------------------------------------------------------

ಮತ್ಸರ (೧೯೯೦) - ಮುನ್ನುಗಿ ನಡೆದರೇ
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಚಿತ್ರಾ

ಮುನ್ನುಗ್ಗಿ ನಡೆದರೆ ಜಯಭೇರಿ ಕೈಸೆರೆ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ

ಆನೆಯ ಗಾತ್ರವು ದೊಡ್ಡದು ಆಂಕುಶ ನೋಡಲು ಚಿಕ್ಕದು
ಬಂಡೆಯ ಗಾತ್ರವು ದೊಡ್ಡದು ಚಾಣವು ನೋಡಲು ಚಿಕ್ಕದು
ಅಂಕುಶ ಕಂಡರೇ ಆನೆಯು ಅಂಜದೇ
ಬಂಡೆಯ ಸೀಳಲು ಚಾಣವು ಸಾಲದೇ
ನನ್ನ ಅರಿವಾಣ ಕಣ್ಣು ತೆರೆದು ಎಚ್ಚರ
ಮುನ್ನುಗ್ಗಿ ನಡೆದರೆ ಜಯಭೇರಿ ಕೈಸೆರೆ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ

ರಾಕ್ಷಸ ಕಂಸನು ದೊಡ್ಡವ ಮೋಹಕ ಕೃಷ್ಣನು ಚಿಕ್ಕವ
ಬಲಿ ಚಕ್ರವರ್ತಿ ದೊಡ್ಡವ ವಾಮನ ತಾನು ಚಿಕ್ಕವ
ಕೃಷ್ಣನ ಕಾಣಲು ಕಂಸನು ಹೆದರಿದ
ವಾಮನ ಪಾದಕೆ ಬಲಿಯು ಬಾಗಿದ
ಅಂಥ ಕರ್ಣನ ಶೌರ್ಯಕ್ಕೆ ಆಂಕುರ
ಮುನ್ನುಗ್ಗಿ ನಡೆದರೆ ಜಯಭೇರಿ ಕೈಸೆರೆ
ಮೋಸಕ್ಕೆ ಮೋಸ ದ್ವೇಷಕ್ಕೆ ದ್ವೇಷ ಹೊಟ್ಟೆಯ ಕಿಚ್ಚು ಹೆಚ್ಚಿ ಮತ್ಸರ
--------------------------------------------------------------------------------------------------------------------------

No comments:

Post a Comment