1318. ಮಾಯಾ ಮನುಷ್ಯ (೧೯೭೬)


ಮಾಯಾ ಮನುಷ್ಯ ಚಲನಚಿತ್ರದ ಹಾಡುಗಳು
  1. ರಾತ್ರಿ ಬಂದಿದ್ದೆ...ನೀ ನನ್ನ ಕನಸಿನೊಳಗೆ
  2. ವಯಸ್ಸಿದೇ..ಸೊಗಸಿದೆ..ಒಲಿಸುವಾ
  3. ಜೋಕಾಗೀ ಕಣ್ಣ ಬಾಣ ಬಿಟ್ಟೇ ಲಲನನಾ
ಮಾಯಾ ಮನುಷ್ಯ (೧೯೭೬) - ರಾತ್ರಿ ಬಂದಿದ್ದೆ...ನೀ ನನ್ನ
ಸಂಗೀತ: ವಿಜಯ ಭಾಸ್ಕರ್, ಸಾಹಿತ್ಯ: ಗೀತಪ್ರಿಯ, ಗಾಯನ: ವಾಣಿಜಯರಾಮ

ರಾತ್ರಿ ಬಂದಿದ್ದೇ..ರಾತ್ರಿ ಬಂದಿದ್ದೇ...
ರಾತ್ರಿ ಬಂದಿದ್ದೇ ನೀ ನನ್ನ ಕನಸಿನೊಳಗೆ ನೆಟ್ಟ ಹೋಯ್ತೂ...
ಆಹಾ..ನೆಟ್ಟ ಹೋಯ್ತೂ...ನೆಟ್ಟ ಹೋಯ್ತೂ...ಮನಸ್ಸು ನಿನ್ನ
ಮನಸಿನೊಳಗೆ..
ರಾತ್ರಿ ಬಂದಿದ್ದೇ ನೀ ನನ್ನ ಕನಸಿನೊಳಗೆ ನೆಟ್ಟ ಹೋಯ್ತೂ...
ಮನಸ್ಸು ನಿನ್ನ ಮನಸಿನೊಳಗೆ..

ಮುಸ್ಸಂಜೇ ಆದ ಮ್ಯಾಗೇ ಕತ್ತಲಾಗಿದೆ
ಮೈಯಾಗೆ ಬೆಚ್ಚಾಗಿ ಮತ್ತೇರಿದೆ.
ಮುಸ್ಸಂಜೇ ಆದ ಮ್ಯಾಗೇ ಕತ್ತಲಾಗಿದೆ
ಮೈಯಾಗೆ ಬೆಚ್ಚಾಗಿ ಮತ್ತೇರಿದೆ..
ನಮಗಾಗಿಯೇ ರಾತ್ರಿ ಹಗಲಾಗಿದೆ
ನನಗೇತಕೋ ಬಲು ದಿಗಿಲಾದಗಿದೆ
ಎದ್ದೇಳಲೀ..ಹೇಯ್ ನಾ ಬೆಚ್ಚಿ ಬಿದ್ದೆ.. ಓ..
ಎದ್ದೇಳಲೀ..ಹೇಯ್ ನಾ ಬೆಚ್ಚಿ ಬಿದ್ದೆ.. ಓ..
ಎದ್ದೆಟಿಗೇ..ತುಟಿ ಕಚ್ಚಿದೆ..
ರಾತ್ರಿ ಬಂದಿದ್ದೇ ನೀ ನನ್ನ ಕನಸಿನೊಳಗೆ ನೆಟ್ಟ ಹೋಯ್ತೂ...
ಮನಸ್ಸು ನಿನ್ನ ಮನಸಿನೊಳಗೆ..

ಮಾಗಿದ ಹಣ್ಣಿ ನಂಗೆ ಮೈ ತುಂಬಿದ
ಕಾಮನನ ಬಿಲ್ಲಿನಂಗೇ ನಡುಕಾಗಿದೆ ಹೋಯ್ ಹೋಯ್
ಹೋಯ್ ಹೋಯ್
ಮಾಗಿದ ಹಣ್ಣಿ ನಂಗೆ ಮೈ ತುಂಬಿದ
ಕಾಮನನ ಬಿಲ್ಲಿನಂಗೇ ನಡುಕಾಗಿದೆ
ಹದಿನೇಳಕೇ ಈಗ ವಯಸ್ಸೇರಿದೆ ಅದರಿಂದಲೇ ಕೆನ್ನೇ ಕೆಂಪೇರಿದೆ
ಕಡಿವಾಣವೂ...ಓ..‌ ಕಡಿ ಭೋಜಿಗೆ..ಹೂಂ..
ಕಡಿವಾಣವೂ...ಆ..‌ ಕಡಿ ಭೋಜಿಗೆ..ಹೂ..ಕುಡಿನೋಟವು
ಕುಣಿದಾಡಿದೆ ..
ರಾತ್ರಿ ಬಂದಿದ್ದೇ ನೀ ನನ್ನ ಕನಸಿನೊಳಗೆ ನೆಟ್ಟ ಹೋಯ್ತೂ...
ಮನಸ್ಸು ನಿನ್ನ ಮನಸಿನೊಳಗೆ..

ಕಬ್ಬಿನ ತೋಟದೊಳಗೆ ನೀ ಕಾಡಿದೆ
ಕಣ್ಣಿನ ಕೋಟೆಯೊಳಗೆ ನಾ ಕೂಡಿದೆ
ಕಬ್ಬಿನ ತೋಟದೊಳಗೆ ನೀ ಕಾಡಿದೆ
ಕಣ್ಣಿನ ಕೋಟೆಯೊಳಗೆ ನಾ ಕೂಡಿದೆ
ಗುಟ್ಟೆಲ್ಲವೂ ನಿಂಗೆ ಗೊತ್ತಾಗಿದೆ ಮುತ್ತೆಲ್ಲವೂ ನಿನ್ನ ಸ್ವತ್ತಾಗಿದೆ
ಒಲವೆಲ್ಲವೂ..ಆ.. ಗೊತ್ತಾಗಿದೆ... ಆ..
ಒಲವೆಲ್ಲವೂ..ಹೂ.. ಗೊತ್ತಾಗಿದೆ... ಆ..
ನೆಲವೆಲ್ಲವೂ ಹೂಂ.. ಬಿಟ್ಟೋಡಿದೆ...
ರಾತ್ರಿ ಬಂದಿದ್ದೇ..ರಾತ್ರಿ ಬಂದಿದ್ದೇ...
ರಾತ್ರಿ ಬಂದಿದ್ದೇ ನೀ ನನ್ನ ಕನಸಿನೊಳಗೆ ನೆಟ್ಟ ಹೋಯ್ತೂ...
ಆಹಾ..ನೆಟ್ಟ ಹೋಯ್ತೂ...ನೆಟ್ಟ ಹೋಯ್ತೂ...ಮನಸ್ಸು ನಿನ್ನ
ಮನಸಿನೊಳಗೆ..
ರಾತ್ರಿ ಬಂದಿದ್ದೇ ನೀ ನನ್ನ ಕನಸಿನೊಳಗೆ ನೆಟ್ಟ ಹೋಯ್ತೂ...
ಮನಸ್ಸು ನಿನ್ನ ಮನಸಿನೊಳಗೆ..
----------------------------------------------------------------------

ಮಾಯಾ ಮನುಷ್ಯ (೧೯೭೬) -   ವಯಸ್ಸಿದೇ..ಸೊಗಸಿದೆ.. ಸಂಗೀತ: ವಿಜಯ ಭಾಸ್ಕರ್, ಸಾಹಿತ್ಯ: ಗೀತಪ್ರಿಯ, ಗಾಯನ: ಎಲ್.ಆರ್. ಈಶ್ವರಿ

ವಯಸ್ಸಿದೇ...ಸೊಗಸಿದೇ...ಒಲಿಸುವಾ ಮನಸ್ಸಿದೇ...
ಇಂಪಿದೇ..ಕಂಪಿದೇ...ಮೋಹದಾ..ತಂಪಿದೇ..
ವಯಸ್ಸಿದೇ...ಸೊಗಸಿದೇ...ಒಲಿಸುವಾ ಮನಸ್ಸಿದೇ...
ಇಂಪಿದೇ..ಕಂಪಿದೇ...ಮೋಹದಾ..ತಂಪಿದೇ..

ಮಾಟವಾದ ಮೈಯಲ್ಲಿ ಸೆಳೆಯುವಂತ ಸುಳಿಯಿದೇ..
ಕುಣಿಸುವಂತ ಆಟದಲ್ಲೇ ರಸಿಕ ಮನವ ಬೆಳೆಕಿದೇ..
ಮೈಯಲ್ಲಿ.. ಮಿಂಚಿದೇ..ಕಣ್ಣಲೀ.. ಸಂಚಿದೇ...
ಕೆನ್ನೆಯಲ್ಲಿ ಕನ್ಯೆಯಾ ಚಿಮ್ಮುವಾ ಕಂಪಿದೇ..
ವಯಸ್ಸಿದೇ...ಸೊಗಸಿದೇ...ಒಲಿಸುವಾ ಮನಸ್ಸಿದೇ...ಆಹಾಹ

ಆ..ಹೊರಗಿನಾಸೆ ಒಳಗಿನಾ ಕದವಾ ಮೆಲ್ಲನೇ ತಟ್ಟಿದೆ..
ಯಾವುದೋ.. ಈ ಯೋಚನೆ ಎಲ್ಲಿಗೋ ಮುಟ್ಟಿದೇ...
ದಾಹ ಹೆಚ್ಚಿದೆ.. ದೇಹ ಬೆಚ್ಚಿದೆ..
ಏರುತಿರುವಾ ಕಾವಿಗೇ ಮೈಮನ ಮೆಚ್ಚಿದೆ..
ವಯಸ್ಸಿದೇ...ಸೊಗಸಿದೇ...ಒಲಿಸುವಾ ಮನಸ್ಸಿದೇ...ಆಹಾ

ಜಾರುತಿರುವಾ ಮೀನಿಗೆ ಗಾಳ ಒಂದು ಕಾದಿದೆ
ಓಡಿ ಬಂದ ಹಕ್ಕಿಯಾ ಹಾಗೆ ಬಲೆಗೆ ಬಿದ್ದಿದೆ
ಒಂದು ಸೊಕ್ಕಿದೆ..ಒಂದು ಸಿಕ್ಕಿದೆ..
ಇಲ್ಲಿ ಬಿಟ್ಟ ಬಾಣವೂ ಎಲ್ಲಿಯೋ ನೆಟ್ವಿದೇ...
ಆ.. ವಯಸ್ಸಿದೇ...ಸೊಗಸಿದೇ...ಒಲಿಸುವಾ ಮನಸ್ಸಿದೇ...
ಆ..ಇಂಪಿದೇ..ಕಂಪಿದೇ...ಮೋಹದಾ..ತಂಪಿದೇ..
ವಯಸ್ಸಿದೇ...ಸೊಗಸಿದೇ...ಒಲಿಸುವಾ ಮನಸ್ಸಿದೇ...
ಇಂಪಿದೇ..ಕಂಪಿದೇ...ಮೋಹದಾ..ತಂಪಿದೇ..
----------------------------------------------------------------------

ಮಾಯಾ ಮನುಷ್ಯ (೧೯೭೬) -  ಜೋಕಾಗೀ ಕಣ್ಣ ಬಾಣ 
ಸಂಗೀತ: ವಿಜಯ ಭಾಸ್ಕರ್, ಸಾಹಿತ್ಯ: ಗೀತಪ್ರಿಯ, ಗಾಯನ: ಪಿ. ಬಿ.ಎಸ್, ಮಹೇಶ್

ಗಂಡು: ಜೋಕಾಗೀ ಕಣ್ಣ ಬಾಣ ಬಿಟ್ಟೇ..ಲಲನನನಾ
            ನಾ ಬಲ್ಲೆ ನೀನು ಬಣ್ಣದ ಚಿಟ್ಟೆ...ಲಲನನನಾ
ಮಹೇಶ್: ಜೋಕಾಗೀ ಆಗಿಹೋಯ್ತು ನಮ್ಮ ‌ಮಿಲನ
               ನೀ ಹೊಟ್ಟೆ ನಾ‌ನಿನ್ನ ಚಡ್ಡಿ ..‌ಲಲನನನಾ
ಗಂಡು: ಏತಕೀ..               ಮಹೇಶ್: ಯೋಚನೇ
ಗಂಡು: ಕೊಟ್ಟೇ ಲಲನನನಾ
ಮಹೇಶ್: ಏಯ್.. ಏತಕೀ...     ಗಂಡು: ಯೋಚನೇ..
ಇಬ್ಬರು: ಕೋಟ್ಟೇ..ಲಲನನನಾ
ಗಂಡು: ಜೋಕಾಗೀ ಕಣ್ಣ ಬಾಣ ಬಿಟ್ಟೇ..ಲಲನನನಾ

ಗಂಡು: ಜಗವೆಲ್ಲ ಹೆಣ್ಣಿನ ಮಾಯೇ..ಅಲ್ಲವೇ..
ಮಹೇಶ್: ಹೆಣ್ಣೇನ ಗಂಡಿನ ಗಾಯ ಅಲ್ಲವೇ..
ಗಂಡು: ಬೆಡಗಿಗೆ ಎಲ್ಲೆಲ್ಲೂ ಸೋಲೇ ಇಲ್ಲವೇ
ಮಹೇಶ್: ಹೆಣ್ಣಿಲ್ಲದ ಗಂಡು ಗುಂಡು ಸೊನ್ನೆ ಅಲ್ಲವೇ
ಗಂಡು: ಕನಸಲ್ಲಿ ಕುಣಿದಾಡಿ 
ಮಹೇಶ್: ಮನದಲ್ಲಿ ಮನೆ ಮಾಡಿ
ಗಂಡು: ಹೇಹೇಹೇ.. ಕನಸಲ್ಲಿ ಕುಣಿದಾಡಿ 
ಮಹೇಶ್: ಮನದಲ್ಲಿ ಮನೆ ಮಾಡಿ
ಗಂಡು: ಅದರಲ್ಲಿ ನನ್ನಾ ಕೂಡಿ ಇಟ್ಟೇ..ಲಲನನನಾ
ಮಹೇಶ್: ಸಾಕು ಮಾಡು ಇನ್ನೂ ನಿನ್ನ ಕಟ್ಲೇ ಲಲನನನಾ
ಗಂಡು: ಜೋಕಾಗೀ ಕಣ್ಣ ಬಾಣ ಬಿಟ್ಟೇ..ಲಲನನನಾ

ಗಂಡು: ಹಾವಂಥ ಜಡೆಯಲ್ಲಿ ಹೂವೇತಕೇ..
ಮಹೇಶ್: ಉಳುಕೇಕೆ ನಿನ್ನ ಸೊಂಟ ಥಳುಕಾಟಕೆ
ಗಂಡು: ಹೋಯ್ ಹೋಯ್ ಹೋಯ್ ಹೋಯ್ ಹೋಯ್
           ಮುದ್ದಾದ ಮುಖದಲ್ಲಿ ಮುನಿಸೇತಕೆ....
ಮಹೇಶ್: ಮುದ್ದಾಡೋ ಆಗಿದ್ರೇ ತಡವೇತಕೆ..
ಗಂಡು: ಇನ್ನೂ ಏಕೆ ಬಿಗುಮಾನ
ಮಹೇಶ್: ಬೇಕೇ ಬಹುಮಾನ
ಗಂಡು: ಹೇ..ಇನ್ನೂ ಏಕೆ ಬಿಗುಮಾನ
ಮಹೇಶ್: ಬೇಕೇ ಬಹುಮಾನ
ಗಂಡು: ನನ್ನಾಸೇ ನಿನ್ನಲ್ಲೇ ನೆಟ್ಟೆ ಲಲನನನಾ
ಮಹೇಶ್: ನಿನ್ನ ಕೈಯಲ್ಲಿ ನಾವೂ ಗೇರಿಗೆಟ್ಟೆ ಲಲನನನಾ
ಗಂಡು: ಹೀಹೀಹೀ...ಜೋಕಾಗೀ ಕಣ್ಣ ಬಾಣ ಬಿಟ್ಟೇ..ಲಲನನನಾ
            ನಾ ಬಲ್ಲೆ ನೀನು ಬಣ್ಣದ ಚಿಟ್ಟೆ...ಲಲನನನಾ
ಮಹೇಶ್: ಜೋಕಾಗೀ ಆಗಿಹೋಯ್ತು ನಮ್ಮ ‌ಮಿಲನ
               ನೀ ಹೊಟ್ಟೆ ನಾ‌ನಿನ್ನ ಚಡ್ಡಿ ..‌ಲಲನನನಾ
ಗಂಡು: ಏತಕೀ..               ಮಹೇಶ್: ಯೋಚನೇ
ಗಂಡು: ಕೊಟ್ಟೇ ಲಲನನನಾ
ಮಹೇಶ್: ಏಯ್.. ಏತಕೀ...     ಗಂಡು: ಯೋಚನೇ..
ಇಬ್ಬರು: ಕೋಟ್ಟೇ..ಲಲನನನಾ
ಗಂಡು: ಜೋಕಾಗೀ ಕಣ್ಣ ಬಾಣ ಬಿಟ್ಟೇ..ಲಲನನನಾ
----------------------------------------------------------------------

No comments:

Post a Comment