1292. ಮೇಘ ಮಂದಾರ (೧೯೯೨)

ಮೇಘ ಮಂದಾರ ಚಲನಚಿತ್ರದ ಹಾಡುಗಳು 
  1. ನನ್ನ ಮಂದಾರ ಪ್ರೀತಿಯ ಮಂದಾರ 
  2. ಪ್ರೀತಿ ಮಳೆಯ ತಂದ ಡ್ಯಾಡಿ ನೀವು 
  3. ಪ್ರೀತಿ ಮಳೆಯ ತಂದ ಮೇಘ ನೀನು 
  4. ತಾಯಿ ಕಾಣದ ತಂದೆ ಒಲವಿರದ 
  5. ಮಂದಾರ ಮಂದಾರ ಹಾ ಮಂದಾರ 
  6. ಆಶಾ ಗೋಪುರ ಉರುಳಿ ಬೇಸರ ಪ್ರೀತಿ ಮಂದಿರ 
ಮೇಘ ಮಂದಾರ (೧೯೯೨) - ನನ್ನ ಮಂದಾರ ಪ್ರೀತಿಯ ಮಂದಾರ
ಸಂಗೀತ : ಎಸ್.ಪಿ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಚಿತ್ರಾ

ಗಂಡು : ನನ್ನ ಮಂದಾರ ...          ಹೆಣ್ಣು : ಹೂಂ ..
ಗಂಡು : ಪ್ರೀತಿಯ ಮಂದಾರ        ಹೆಣ್ಣು : ಆಂ ..
ಗಂಡು : ನನ್ನ ಮಂದಾರ ಪ್ರೀತಿಯ ಮಂದಾರ ಕೀರ್ತಿ ತರುವ ಗಂಡೊಂದು ಬೇಡವೇ ಹೇಯ್ ..
ಹೆಣ್ಣು : ನನ್ನ ಸರದಾರ ಪ್ರೀತಿಯ ಹಮ್ಮಿರ ಮನೆಯ ಬೆಳಗುವ ಹೆಣ್ಣೊಂದು ಬೇಡವೇ..
ಗಂಡು : ಹೂಂ.. ಹೂಂ 

ಗಂಡು : ಹುಟ್ಟಿದ ಮನೆಯಲ್ಲೆ ಇರುವ ಹೆಮ್ಮೆಯ ಗಂಡಿರಲಿ ದಿಕ್ಕಾಗಿ
ಹೆಣ್ಣು : ಅಕ್ಕರೆ ತಾಯಿತಂದೆ ಕಣ್ಣಾಗಿ ಮಮತೆಯ ಹೆಣ್ಣಿರಲಿ ತೆಳುವಾಗಿ
ಗಂಡು : ಯಾವತ್ತೂ ಮನೆ ದೀಪ ಗಂಡೇನೇ .. ಹೇಯ್
ಹೆಣ್ಣು : ಯಾವತ್ತೂ ಶ್ರೀ ಲಕ್ಷ್ಮಿ ಹೇಣ್ಣೆನೇ ..
ಗಂಡು : ಹೆಣ್ಣನ್ನೂ ಕೊಟ್ಟಮೇಲೆ ತವರಿಗೆಂದು ಹೋಗೋರ
            ನನ್ನ ಮಂದಾರ ಪ್ರೀತಿಯ ಮಂದಾರ ಕೀರ್ತಿ ತರುವ ಗಂಡೊಂದು ಬೇಡವೇ ಹೇಯ್ ..
ಹೆಣ್ಣು : ನನ್ನ ಸರದಾರ ಪ್ರೀತಿಯ ಹಮ್ಮಿರ ಮನೆಯ ಬೆಳಗುವ ಹೆಣ್ಣೊಂದು ಬೇಡವೇ..
ಗಂಡು : ಹೂಂ.. ಹೂಂ 

ಗಂಡು : ಕೆಚ್ಚದೆ ಗಂಡಿರಲು ಘನತೆ          ಹೆಣ್ಣು : ಅಯ್ಯೋ ..
ಗಂಡು : ಮೆಚ್ಚಿದ ಸೊಸೆ ಬಂದು ಸ್ಥಿರತೆ     ಹೆಣ್ಣು : ಆಹಾ ಆಹಾ
ಹೆಣ್ಣು : ಮುದ್ದಿನ ಮಗಳು ಉಲ್ಲಾಸ           ಗಂಡು : ಆಹಾ ಆಹಾ
ಹೆಣ್ಣು : ಅಪ್ಪಗೆ ನೆರವಾಗಿ ಸಂತೋಷ       
ಗಂಡು : ಹೂಂ ಹೂಂ    ಎಂದೆಂದೂ ಮಗನಿಂದ ಬೆಳಕೇನೇ
ಹೆಣ್ಣು : ಹಾಗಲ್ಲಾ ಮಗಳಿಂದ ಸುಖವೇನೆ
ಗಂಡು : ಮಗಳಾದ್ರೆ ಎಡೆಬಿಡದೇ ನೂರು ಚಿಂತೆ ಭಾರ ಹೊಯ್
ಹೆಣ್ಣು : ನನ್ನ ಸರದಾರ ಹೊಯ್ ಪ್ರೀತಿಯ ಹಮ್ಮಿರ ಮನೆಯ ಬೆಳಗುವ ಹೆಣ್ಣೊಂದು ನಾ ಕೊಡುವೇ..
ಗಂಡು : ನೋ..ನೋ... ನಾಟ್ ಎಟ್ ಆಲ್ 

ಗಂಡು : ಹೆಮ್ಮೆಯ ಗಂಡಿರಲು ಅಂತಸ್ತು        ಹೆಣ್ಣು : ದಕ್ಷಿಣೆ ಪಡೆಯೋಕೆ ಹುಮ್ಮಸ್ಸೂ 
ಗಂಡು : ಛೇ ಛೇ ಅಷ್ಟೇನೋ ಇಲ್ಲ ಮೆಚ್ಚಿನ ಮಗ ಬೆಳೆಯೋ ಗೌರವ 
ಹೆಣ್ಣು : ಪಕ್ಕಕೆ ಮಡದಿರೆ ಮರೆವ         ಗಂಡು : ಹೂಂ .. ಹೂಂ .. ಹೂಂ .. 
ಗಂಡು : ಹಾಗಲ್ಲ ಮಗ ವಂಶದ ಹರಿಕಾರ 
ಹೆಣ್ಣು : ಮಗಳಿದ್ರೇ ತಾಯಿತಂದೆಗೇ ಸತ್ಕಾರ 
ಗಂಡು : ಗಂಡಿಂದ್ರೆ ತಂದೆ ತಾಯಿ ಯೋಗಕ್ಷೇಮದೇನಾ 
            ಹೇಯ್ ನನ್ನ ಮಂದಾರ ಪ್ರೀತಿಯ ಮಂದಾರ ಕೀರ್ತಿ ತರುವ ಗಂಡೊಂದು ನೀಡು ಬಾ 
ಹೆಣ್ಣು : ನನ್ನ ಸರದಾರ            ಗಂಡು : ಆಹಾ.. 
ಹೆಣ್ಣು : ಪ್ರೀತಿಯ ಹಮ್ಮಿರ         ಗಂಡು : ಹೂಂ .. 
ಹೆಣ್ಣು : ಜಗಳ ತರವಲ್ಲಾ ಅವಳಿ ಜವಳಿ ನಾ ಕೊಡುವೆ 
ಗಂಡು : ಥ್ಯಾಂಕ್ ಯೂ ವೇರಿ ಮಚ್ ಆಹಾ ಆಹಾ ಥ್ಯಾಂಕ್  ಥ್ಯಾಂಕ್ ಥ್ಯಾಂಕ್  ಯೂ 
            ಸಾವಿರ ಸರಿ ಟು ಬರ್ಡ್ಸ್ ಅದೇ ಸ್ಟ್ರಾಂಗ್ ಥ್ಯಾಂಕ್ ಯೂ ಅಹ್ ಅಹ್ ಅಹ್ 
-----------------------------------------------------------------------------------------------

ಮೇಘ ಮಂದಾರ (೧೯೯೨) - ಪ್ರೀತಿ ಮಳೆಯ ತಂದ ಡ್ಯಾಡಿ ನೀವು
ಸಂಗೀತ : ಎಸ್.ಪಿ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಚಿತ್ರಾ

ಹೆಣ್ಣು : ಡ್ಯಾಡಿ ಡ್ಯಾಡಿ ಡ್ಯಾಡಿ ಡ್ಯಾಡಿ
          ಪ್ರೀತಿಯ ಮಳೆ ತಂದ ಡ್ಯಾಡಿ ನೀವು ನಲ್ಮೆ ಸಿರಿಯ ತ್ಯಾಗ ಮೂರ್ತಿ ನೀವು
          ದಾರಿದೀಪ ನೀವಾಗಿ ಮನೆಯ ಬಾಳ ಬೆಳಕಾಗಿ ನನ್ನ ಸೂರ್ಯ ಚಂದ್ರ ನೀವಾಗಿ ಮೇಘ ಮಂದಾರ
          ಪ್ರೀತಿಯ ಮಳೆ ತಂದ ಡ್ಯಾಡಿ ನೀವು ಡ್ಯಾಡಿ ಡ್ಯಾಡಿ ನನ್ನ ಡ್ಯಾಡಿ ಡ್ಯಾಡಿ
          ನಲ್ಮೆ ಸಿರಿಯ ತ್ಯಾಗ ಮೂರ್ತಿ ನೀವು ಡ್ಯಾಡಿ ಡ್ಯಾಡಿ ನನ್ನ ಡ್ಯಾಡಿ ಡ್ಯಾಡಿ
          ಡ್ಯಾಡಿ ಡ್ಯಾಡಿ ಡಿಯರ್ ಡ್ಯಾಡಿ ಡ್ಯಾಡಿ 
ಗಂಡು : ಪ್ರೇಮದ ಪುತ್ರಿಯು ನೀನು ನಿನ್ನ ಅಕ್ಕರೆ ಡ್ಯಾಡಿಯು ನಾನು
            ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ ಪ್ರೀತಿಯ ಪುತ್ರೀ ನೀನೂ .. ನಿನ್ನ ಬಾಳಿನ ಶಿಲ್ಪಿಯು ನಾನು
            ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ ಹಣತೆ ನೀನು ಜ್ಯೋತಿ ನಾನು
            ನಿನ್ನ ತಂದೆ ತಾಯಿ ನಾನಾಗಿ ಮೇಘ ಮಂದಾರ
ಹೆಣ್ಣು : ಡ್ಯಾಡಿ ಡ್ಯಾಡಿ ಡ್ಯಾಡಿ ಡ್ಯಾಡಿ

ಗಂಡು : ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿಪ್ರೀತಿಯ ಹೊಳೆಯ ತಂದ ಮಗಳು ನೀನು 
            ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ ಆಶಾ ಕಿರಣ ನೀನು ನಿನ್ನ ಹಿರಿಯ ನಾನು 
            ನಿನ್ನ ಅಪ್ಪ ಅಮ್ಮ ಒಂದಾಗಿ ಮೇಘ ಮಂದಾರ 
             ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ.. ಪುಟ್ಟಿ ಪುಟ್ಟಿ ನನ್ನ ಪುಟ್ಟಿ ಪುಟ್ಟಿ 
-----------------------------------------------------------------------------------------------

ಮೇಘ ಮಂದಾರ (೧೯೯೨) - ಪ್ರೀತಿ ಮಳೆಯ ತಂದ ಮೇಘ ನೀನು
ಸಂಗೀತ : ಎಸ್.ಪಿ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ :  ಚಿತ್ರಾ

ಮೇಘ.. ಮೇಘ..ಮೇಘ.. ಮೇಘ.. ಮೇಘ..ಮೇಘ..
ಪ್ರೀತಿ ಮಳೆಯ ತಂದ ಮೇಘ ನೀನು ನಲ್ಮೆ ಇಳಯ ಮಧುರ ರಾಗ ನಾನು
ನನ್ನ ಸೂರ್ಯ ನೀನಾಗಿ ನಿನ್ನ ತೇಜ ನಾನಾಗಿ ರಮ್ಯ ಪ್ರೇಮ ಕಾವ್ಯ ನಾನಾಗಿ
ಮೇಘ ಮಂದಾರ ...
ಪ್ರೀತಿ ಮಳೆಯ ತಂದ ಮೇಘ ನೀನು ನಲ್ಮೆ ಇಳಯ ಮಧುರ ರಾಗ ನಾನು
ನನ್ನ ಸೂರ್ಯ ನೀನಾಗಿ ನಿನ್ನ ತೇಜ ನಾನಾಗಿ ರಮ್ಯ ಪ್ರೇಮ ಕಾವ್ಯ ನಾನಾಗಿ
ಮೇಘ ಮಂದಾರ ...

ಕಂಗಳ ಕಾಂತಿಯು ನೀನು ನಿನ್ನ ಹೃದಯದ ಮಿಡಿತವು ನಾನು ಮೇಘ ಮೇಘ ನನ್ನ ಮೇಘ ಮೇಘ
ಸ್ನೇಹದ ಸ್ಪಂದನ ನೀನು ನಿನ್ನ ಕಾವ್ಯದ ಕಲ್ಪನೆ ನಾನು ಮೇಘ ಮೇಘ ನನ್ನ ಮೇಘ ಮೇಘ
ಭಾವ ನೀನುಂ ಪಂದ ನಾನು ಹಗಲು ಇರುಳು ಅರಿತು ಬೆರೆತು
ಮೇಘ ಮೇಘ ಮಂದಾರ ...
ಪ್ರೀತಿ ಮಳೆಯ ತಂದ ಮೇಘ ನೀನು ನಲ್ಮೆ ಇಳಯ ಮಧುರ ರಾಗ ನಾನು
ನನ್ನ ಸೂರ್ಯ ನೀನಾಗಿ ನಿನ್ನ ತೇಜ ನಾನಾಗಿ ರಮ್ಯ ಪ್ರೇಮ ಕಾವ್ಯ ನಾನಾಗಿ
ಮೇಘ ಮಂದಾರ ...

ಪ್ರೇಮದ ತಂತಿಯು ನೀನು ನಿನ್ನ ಬಾಳಿನ ವೀಣೆಯು ನಾನು  ಮೇಘ ಮೇಘ ನನ್ನ ಮೇಘ ಮೇಘ
ಮೋಹಕ ಮಲ್ಲಿಗೆ ನಾನು ನನ್ನ ಬಯಸುವ ದುಂಬಿಯು ನೀನು ಮೇಘ ಮೇಘ ನನ್ನ ಮೇಘ ಮೇಘ
ಲಾಸ್ಯ ನಾನು ಬಾಷ್ಯ ನೀನು ನೆಲವು ಮುಗಿಲು ಮಿಲನ ಕಂಡು ಮೇಘ ಮಂದಾರ
ಪ್ರೀತಿ ಮಳೆಯ ತಂದ ಮೇಘ ನೀನು ನಲ್ಮೆ ಇಳಯ ಮಧುರ ರಾಗ ನಾನು
ನನ್ನ ಸೂರ್ಯ ನೀನಾಗಿ ನಿನ್ನ ತೇಜ ನಾನಾಗಿ ರಮ್ಯ ಪ್ರೇಮ ಕಾವ್ಯ ನಾನಾಗಿ
ಮೇಘ ಮಂದಾರ ...
----------------------------------------------------------------------------------------------

ಮೇಘ ಮಂದಾರ (೧೯೯೨) - ತಾಯಿ ಕಾಣದ ತಂದೆ ಒಲವಿರದ
ಸಂಗೀತ : ಎಸ್.ಪಿ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಮಂಜುಳಾಗುರುರಾಜ 

ತಾಯಿ ಕಾಣದ ತಂದೆ ಒಲವಿರದ ಹಿರಿಯರು
ಪ್ರೀತಿಸದ ಕಿರಿಯರು ಎಡವಿದರೇ ಬದುಕು ಒಡೆದ ಹಡುಗು

ನಂಜು ನುಂಗಿ ನಾವು ಎಂದು ನಗದ ಹೂವು
ಪ್ರೀತಿ ಎಂಬ ಮಾವು ಸಿಗದೇ ಬಾಳು ಬೇವು
ನೆಮ್ಮದಿ ಎಲ್ಲಿದೇ ನಮ್ಮ ನೆಲೆ ಅಲ್ಲಿದೇ .. ಹೇಯ್ ..
ತಾಯಿ ಕಾಣದ ತಂದೆ ಒಲವಿರದ ಹಿರಿಯರು
ಪ್ರೀತಿಸದ ಕಿರಿಯರು ಎಡವಿದರೇ ಬದುಕು ಒಡೆದ ಹಡುಗು

ಮನೆಯು ನಮಗೆ ದೂರ ನಲಿವಿಲ್ಲದ ಜೀವ
ಮುಖದಿ ನೋವ ಭಾವ ನೆಲೆಯಲು ಕಾಣದೇ
ಹೃದಯವು ನೊಂದಿದೆ ಹೂಂ ..
ತಾಯಿ ಕಾಣದ ತಂದೆ ಒಲವಿರದ ಹಿರಿಯರು
ಪ್ರೀತಿಸದ ಕಿರಿಯರು ಎಡವಿದರೇ ಬದುಕು ಒಡೆದ ಹಡುಗು
-----------------------------------------------------------------------------------------------

ಮೇಘ ಮಂದಾರ (೧೯೯೨) - ಮಂದಾರ ಮಂದಾರ ಹಾ ಮಂದಾರ
ಸಂಗೀತ : ಎಸ್.ಪಿ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, 

ಮಂದಾರ ಮಂದಾರ ಹಾ ಮಂದಾರ
ಮಂದಾರ ಮಂದಾರ ಮೇಘ ಬಯಸಿದ ಮಂದಾರ ನೀ ದುಂಬಿ ಕಾಣದ ಮಂದಾರ
ಮಂದಾರ ಮಂದಾರ ಹಾ ಮಂದಾರ
ಮಂದಾರ ಮಂದಾರ ಮೇಘ ಬಯಸಿದ ಮಂದಾರ ನೀ ದುಂಬಿ ಕಾಣದ ಮಂದಾರ

ಅಕ್ಕರೆಯಲ್ಲೇ ಮೀರದೆಯಲ್ಲೇ ನೊಂದೆನು ಬೆಂಡೇನು ಮುಳ್ಳಿನ ಪಥದಲಿ
ಹಿರಿಯರ ನುಡಿಯ ಪಾಲಿಸಿ ನಡೆದು ನಡೆದೇನೂ ಸವೆದೆನು ಮೊಂಬತ್ತಿ ತೆರದಲಿ
ಮಾತಿಗೂ ಸಿಗದೇ ಮೈತ್ರಿಗೂ ಬರದೇ ಕಾಣದೆ ಎಲ್ಲೂ ಬಾಳುವೆ ಎಲ್ಲೋ
ಮಂದಾರ ಮಂದಾರ ಮೋಹದ ಮುಗ್ದದೆಯ ಕರೆದೆಯ ಬೆಡಗಿಯ ಈಗೇನಾದೆ
ಈ ಮೇಘ ಬಯಸಿದ ಮಂದಾರ ನೀ ದುಂಬಿ ಕಾಣದ ಮಂದಾರ ಮಂದಾರ ಮಂದಾರ

ಆ ತುದಿಲಿ ನೀನು ಈ ತುದಿ ನಾನು ಸೇರದೆ ನಾವು ಕಂಡೆವು ನೋವು
ಇಲ್ಲಿಹೆ ನಾನು ಅಲ್ಲಿಹೆ ನೀನು ನಮ್ಮಯ ನಡುವೆ ಸಾವಿರ ಸೆಳೆವು
ನೋವಲಿ ನರಳಿ ಬಳಲುತ ತೊಳಲಿ ಅಡಗಿದೆ ನೀನು ಸೆರೆಮರೆ ಸರಿದು
ಮಂದಾರ ಮಂದಾರ ಸಾಹಸ ಚತುರೆಯ ಅರಗಿಣಿ ಸೊಬಗಿಯೇ ನೀ ಏನಾದೇ ..
ಈ ಮೇಘ ಬಯಸಿದ ಮಂದಾರ ನೀ ದುಂಬಿ ಕಾಣದ ಮಂದಾರ ಮಂದಾರ ಮಂದಾರ
ಮಂದಾರ ಮಂದಾರ ಹಾ ಮಂದಾರ
ಮಂದಾರ ಮಂದಾರ ಮೇಘ ಬಯಸಿದ ಮಂದಾರ ನೀ ದುಂಬಿ ಕಾಣದ ಮಂದಾರ
----------------------------------------------------------------------------------------------

ಮೇಘ ಮಂದಾರ (೧೯೯೨) - ಆಶಾ ಗೋಪುರ ಉರುಳಿ ಬೇಸರ ಪ್ರೀತಿ ಮಂದಿರ
ಸಂಗೀತ : ಎಸ್.ಪಿ.ವೆಂಕಟೇಶ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, 

ಆಶಾ ಗೋಪುರ ಉರುಳಿ ಬೇಸರ ಪ್ರೀತಿ ಮಂದಿರ ಬಿರಿದು ಕಂದರ ಹೂಂಹೂಂಹೂಂಹೂಂ
ಆಶಾ ಗೋಪುರ ಉರುಳಿ ಬೇಸರ ಪ್ರೀತಿ ಮಂದಿರ ಬಿರಿದು ಕಂದರ ಹೂಂಹೂಂಹೂಂಹೂಂ

ಪ್ರೀತಿ ಕಂದ ಕೂಗಲು ಉತ್ತರ ಕೊಡದೆ ಜನ್ಮ ಕೊಟ್ಟ ತಾಯಿಗೇ ಅಳಲು ಸಾವಿರ
ಯಾರ ಕೂಡ ಹೇಳಲಿ ನೋವಿನ ಈ ಕವನ ಹೇಗೆ ದಿನವ ದೂಡಲಿ
ಎಲ್ಲವೂ ನಿಸ್ಸಾರ ಬಾಳ ವೀಣೆ ಒಡೆದಿರಲು ಭವಣೆ  ಸಂಸಾರ.. ಹೂಂಹೂಂಹೂಂಹೂಂ
ಆಶಾ ಗೋಪುರ ಉರುಳಿ ಬೇಸರ ಪ್ರೀತಿ ಮಂದಿರ ಬಿರಿದು ಕಂದರ ಹೂಂಹೂಂಹೂಂಹೂಂ

ತಂಪು ತಂಡ ಚಂದಿರ ಸುರಿದು ಬೇಸರ ಶಾಂತಿ ನೀಡೋ ನೇಸರ ನಗದೇ ಮಂಪರ
ಸಾವು ನೋವು ತುಂಬಿದಾ ಬದುಕೇ ಬಲು ಭಾರ ಸುಖದ ತೀರ ಕಾಣದೆ ನೆಮ್ಮದಿ ಅತಿ ದೂರ
ಬಾಳ ವೀಣೆ ಒಡೆದಿರಲು ಭವಣೆ  ಸಂಸಾರ.. ಹೂಂಹೂಂಹೂಂಹೂಂ
ಆಶಾ ಗೋಪುರ ಉರುಳಿ ಬೇಸರ ಪ್ರೀತಿ ಮಂದಿರ ಬಿರಿದು ಕಂದರ ಹೂಂಹೂಂಹೂಂಹೂಂ
-----------------------------------------------------------------------------------------------

No comments:

Post a Comment